ಕರ್ನಾಟಕದ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಘೋಷಿಸಿರುವ 5 ಗ್ಯಾರಂಟಿಗಳಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಿರುವುದು ಸ್ವಾಗತಾರ್ಹ ಕ್ರಮ.
ಆದರೆ ಕೇವಲ ಉಚಿತ ಬಸ್ ಪಾಸ್ ನೀಡುವುದರಿಂದ ಮಾತ್ರ ಸಮಾಜದ ಅಭಿವೃದ್ಧಿ ಸಂಪೂರ್ಣವಾಗುವುದಿಲ್ಲ.
ವಿದ್ಯಾರ್ಥಿಗಳಿಗೆ ಗುಣಮಟ್ಟದ ಉಚಿತ ಶಿಕ್ಷಣ, ಕರ್ನಾಟಕದ ಪ್ರತಿಯೊಬ್ಬ ನಾಗರಿಕರಿಗೆ ಉಚಿತ ಮತ್ತು ಉತ್ತಮ ಆರೋಗ್ಯ ಸೇವೆ, ಹಾಗೂ ವಿದ್ಯಾವಂತರಿಗೆ ಉದ್ಯೋಗಾವಕಾಶಗಳ ಭರವಸೆ ನೀಡಿದಾಗ ಮಾತ್ರ ನಿಜವಾದ ಅಭಿವೃದ್ಧಿ ಸಾಧ್ಯವಾಗುತ್ತದೆ.
ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗ ಎಂಬ ಮೂರು ಮೂಲಭೂತ ಹಕ್ಕುಗಳನ್ನು ಸರ್ಕಾರ ಪರಿಣಾಮಕಾರಿಯಾಗಿ ಒದಗಿಸಿದರೆ, ಗ್ಯಾರಂಟಿ ಯೋಜನೆಗಳ ಉದ್ದೇಶ ಮತ್ತಷ್ಟು ಸಾರ್ಥಕವಾಗಲಿದೆ.
“ಉಚಿತ ಬಸ್ ಪಾಸ್ ವಿದ್ಯಾರ್ಥಿಯನ್ನು ಶಾಲೆಗೆ ತಲುಪಿಸುತ್ತದೆ; ಉಚಿತ ಶಿಕ್ಷಣ ಅವನ ಭವಿಷ್ಯವನ್ನು ರೂಪಿಸುತ್ತದೆ. ಉದ್ಯೋಗ ಅವನ ಜೀವನವನ್ನು ಕಟ್ಟಿಕೊಡುತ್ತದೆ.”
ಉಸ್ಮಾನ್ ಅಲ್ತಾಫ್

