UN NETWORKS
ಉಳ್ಳಾಲ : ನಿರಂತರ ಗಾಳಿ-ಮಳೆಗೆ ಉಳ್ಳಾಲ ಮತ್ತು ಸೋಮೇಶ್ವರ ಉಚ್ಚಿಲದಲ್ಲಿ 10ಕ್ಕೂ ಹೆಚ್ಚು ಮನೆಗಳಿಗೆ ಭಾಗಶಃ ಹಾನಿ ಯಾಗಿದೆ. 40ಕ್ಕೂ ಹೆಚ್ಚು ಮನೆಗಳು ಅಪಾಯದಲ್ಲಿವೆ. 50ಕ್ಕೂ ಮರಗಳು ಸಮುದ್ರ ಪಾಲಾಗಿವೆ.





ಸೋಮೇಶ್ವರ ಉಚ್ಚಿಲದ ಬೀಚ್
ರೋಡ್ನ ಫೆರಿಬೈಲು ಮತ್ತು ಬಟ್ಟಪ್ಪಾಡಿ ಬಳಿ ಹೆಚ್ಚು ಹಾನಿಗೀಡಾಗಿದ್ದು ವಿಶ್ವನಾಥ್, ನಾಗೇಶ್ ಅವರ ಮನೆಗಳು ಹೆಚ್ಚು ಹಾನಿಯಾಗಿದ್ದು, 6ಕ್ಕೂ ಹೆಚ್ಚು ಮನೆಗಳಿಗೆ ಭಾಗಶಃ ಹಾನಿಯಾಗಿದೆ.
ಕಿಲೇರಿಯಾ ನಗರದಲ್ಲಿ ಮೈಮುನಾ ಇಕ್ಬಾಲ್ ಮತ್ತು ಝೊಹರಾ ಅವರ ಮನೆಗೆ ಹಾನಿಯಾಗಿದೆ. ಉಳ್ಳಾಲ ಬೀಚ್ ಸಮೀಪದ ಸಮ್ಮರ್ ಸ್ಯಾಂಡ್ ರೆಸಾರ್ಟ್ನ ಶೌಚಾಲಯ ಕಟ್ಟಡ, ಭಾಗಶಃ ಹಾನಿಯಾಗಿದೆ.
ಕಿಲೇರಿಯಾ ಮಸೀದಿ, ಕೈಕೊದಲ್ಲಿ ರುವ ರಿಫಾಯಿಯ ಮಸೀದಿ ಕಟ್ಟಡಕ್ಕೂ ಅಲೆಗಳು ಬಡಿಯುತ್ತಿವೆ.
ಕಡಲ್ಕೊರೆತ ಪ್ರದೇಶಗಳಿಗೆ ಸಹಾಯಕ ಆಯುಕ್ತ ರವಿಚಂದ್ರ ನಾಯಕ್, ಉಳ್ಳಾಲ ನಗರಸಭೆ ಪೌರಾಯುಕ್ತ ಶ್ರೀನಿವಾಸ ಮೂರ್ತಿ ತಹಶೀಲ್ದಾರ್ ಗುರುಪ್ರಸಾದ್ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಚಿವ-ಸಂಸದರ ಭೇಟಿ
ಉಳ್ಳಾಲ ಮತ್ತು ಉಚ್ಚಿಲ ಕಡಲ್ಕೊರೆತ ಪ್ರದೇಶಕ್ಕೆ ಸಚಿವ ಯು.ಟಿ. ಖಾದರ್ ಮತ್ತು ಸಂಸದ ನಳಿನ್ ಕುಮಾರ್ ಕಟೀಲು ಇಂದು ಭೇಟಿ ನೀಡಲಿದ್ದಾರೆ.


