Author: UllalaVani

Kannada News From Coastal Karnataka

UN network ಮಂಗಳೂರು: ಉಜಿರೆಯ ಬಾಲಕನ ಅಪಹರಣದ ಆರೋಪಿಗಳನ್ನು ಕೋಲಾರದಲ್ಲಿ ಬಂಧಿಸುವ ಮೂಲಕ ಪ್ರಕರಣ ಸುಖಾಂತ್ಯ ಕಂಡಿದೆ. ಆರೋಪಿಗಳನ್ನು ಮಂಡ್ಯದ ಗಂಗಾಧರ್, ಬೆಂಗಳೂರಿನ ಮಹೇಶ್, ಕೋಮಲ್ ಮತ್ತು ಸ್ಥಳೀಯ ನಿವಾಸಿ ಮಂಜುನಾಥ್ ಎಂದು ಗುರುತಿಸಲಾಗಿದೆ. ಬಾಲಕನ‌ ಪತ್ತೆಗೆ 5 ತಂಡಗಳನ್ನು ರಚಿಸಿದ್ದು,ಕೋಲಾರ ಎಸ್ ಪಿ ಕಾರ್ತಿಕ್ ರೆಡ್ಡಿ ನೇತೃತ್ವದ ವಿಶೇಷ ತಂಡ ಮಗುವನ್ನು ರಕ್ಷಿಸಿದೆ. ಡಿಸೆಂಬರ್ 17ರಂದು ಮನೆ ಮುಂದೆ ಆಟವಾಡುತ್ತಿದ್ದ ವೇಳೆ ಮಗುವನ್ನು ಅಪಹರಿಸಲಾಗಿತ್ತು.

Read More

UN networks ತೊಕ್ಕೊಟ್ಟು: ವೀರ ರಾಣಿ ಅಬ್ಬಕ್ಕ ಭವನ ನಿರ್ಮಾಣಕ್ಕೆ ತೊಕ್ಕೊಟ್ಟಿನಲ್ಲಿ ಜಾಗ ನೀಡಬೇಕೆಂಬ ಆಗ್ರಹದ ಮಧ್ಯೆ ಇದೀಗ ಬ್ಯಾರಿ ಭವನ ನಿರ್ಮಾಣಕ್ಕೆ ತೊಕ್ಕೊಟ್ಟಿನಲ್ಲಿ ಜಾಗ ನಿಗದಿಪಡಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಅಸಮಾಧಾನ ಭುಗಿಲೆದ್ದಿದೆ. ಸರಕಾರದ ಈ ನಡೆಗೆ ಅಖಿಲ ಭಾರತ ಹಿಂದೂ ಮಹಾಸಭಾ ಅಸಮಾಧಾನ ವ್ಯಕ್ತಪಡಿಸಿದ್ದು ದ.ಕ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರಕಾರಕ್ಕೆ ಮನವಿಯನ್ನು ಸಲ್ಲಿಸಿದೆ. ದೇಶದಲ್ಲಿ ಪೋರ್ಚುಗೀಸರ ಜತೆ ಹೋರಾಟಕ್ಕೆ ಕಿಚ್ಚು ಹತ್ತಿಸಿದ ದೇಶದ ಪ್ರಥಮ ಮಹಿಳೆ ವೀರರಾಣಿ ಅಬ್ಬಕ್ಕ ಹೆಸರಿನಲ್ಲಿ ರಾಣಿ ಅಬ್ಬಕ್ಕ ಭವನ ನಿಮಾ೯ಣಮಾಡಲು ಸರಕಾರಕ್ಕೆ ಮನವಿಯನ್ನು ಈ ಹಿಂದೆಯೇ ಅನೇಕ ಭಾರಿ ಮನವಿಯನ್ನು ‘ಸಲ್ಲಿಸಿತ್ತು ಹಾಗೂ ಉಳ್ಳಾಲ ಮತ್ತು ರಾಣಿ ಅಬ್ಬಕ್ಕ ಅಭಿಮಾನಿಗಳು ತೊಕ್ಕೊಟು ಬಸ್ಸು ನಿಲ್ದಾಣದ ಹಿಂಭಾಗದ ಜಾಗವನ್ನು ಗುರುತಿಸಿ ಅಲ್ಲಿ ಅಬ್ಬಕ್ಕ ಭವನ ನಿರ್ಮಾಣಕ್ಕೆ ಸ್ಥಳ ನಿಗದಿಗೊಳಿಸಲಾಗಿತ್ತು.ಆದರೆ ಆ ಜಮೀನನ್ನು ರಾಣಿ ಅಬ್ಬಕ್ಕ ಭವನ ನಿಮಾ೯ಣಕ್ಕೆ ನೀಡದೆ, ಬ್ಯಾರಿ ಭವನಕ್ಕೆ ನೀಡಬೇಕೆಂದು ರಾಜಕೀಯ ಲಾಭಕ್ಕಾಗಿ ಒಂದು ಸಮುದಾಯವನ್ನು ಓಲೈಕೆ ಮಾಡಿರುವುದು ಖಂಡನೀಯ…

Read More

UN networks ಬೆಳ್ತಂಗಡಿ:ಸಿನಿಮೀಯ ಮಾದರಿಯಲ್ಲಿ ಬಾಲಕನೊಬ್ಬನನ್ನು ಅಪಹರಣಕಾರರು ಕಾರಿನಲ್ಲಿ ಅಪಹರಿಸಿಕೊಂಡು ಪರಾರಿಯಾಗಿರುವ ಆತಂಕಕಾರಿ ಘಟನೆಯೊಂದು ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ನಡೆದಿದ್ದು 17 ಕೋಟಿ‌ ರೂ. ನೀಡುವಂತೆ ಬೇಡಿಕೆಯನ್ನು ಪೋಷಕರ ಮುಂದೆ ಇಟ್ಟಿದ್ದಾರೆ. ಉಜಿರೆ ಜನಾರ್ಧನ ಸ್ವಾಮಿ ದೇವಸ್ಥಾನದ ರಥಬೀದಿಯ ನಿವಾಸಿ ಉದ್ಯಮಿ ಬಿಜೋಯ್ ಇವರ ಪುತ್ರ ಅನುಭವ್ (8) ಅಪಹರಣಗೊಂಡ ಬಾಲಕ. ಗುರುವಾರ ಸಂಜೆ ಬಿಳಿ ಇಂಡಿಕಾ ಕಾರಿನಲ್ಲಿ ಬಂದ 3 ರಿಂದ 4 ಮಂದಿ ಅಪರಿಚಿತರ ತಂಡವೊಂದು ಮನೆಯ ಗೇಟ್ ಬಳಿಯಿಂದಲೇ ಬಾಲಕನನ್ನು ಅಪಹರಿಸಲಾಗಿದ್ದು ಚಾರ್ಮಾಡಿ ಮೂಲಕ ಪರಾರಿಯಾಗಿದ್ದಾರೆಎನ್ನಲಾಗಿದ್ದು ಈ ಬಗ್ಗೆ ಬಾಲಕನ ಅಜ್ಜ ಎ.ಕೆ. ಶಿವನ್ ಬೆಳ್ತಂಗಡಿ ಪೊಲೀಸ್ ಠಾಣೆಗೆ ನೀಡಿರುವ ದೂರಿನ ಆಧಾರದಲ್ಲಿ ಪೊಲೋಸರು ತನಿಖೆ ಪ್ರಾರಂಭಿಸಿದ್ದಾರೆ. ಶಿವನ್ ಅವರು ಸಂಜೆ ಹೊತ್ತಿಗೆ ಮನೆ ಬಳಿಯಲ್ಲಿ ವಾಕಿಂಗ್ ಹೋಗಿದ್ದರು. ಈ ವೇಳೆ, ಮೊಮ್ಮಗ ಹೊರಗೆ ಆಟವಾಡಿ ಅಜ್ಜನ ಎದುರಿನಿಂದ ಮನೆ ಕಡೆಗೆ ಹೋಗುತ್ತಿದ್ದ. ಮನೆಯ ಗೇಟು ಬಳಿ ತಲುಪುತ್ತಿದ್ದಂತೆ ಅಲ್ಲಿಯೆ ನಿಂತಿದ್ದ ಬಿಳಿ ಬಣ್ಣದ ಇಂಡಿಕಾ ಕಾರಿನಿಂದ…

Read More

UN networks ಉಳ್ಳಾಲ:  ಯೆನೆಪೆÇೀಯಾ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ) ಸಹಯೋಗದೊಂದಿಗೆ ಯೆನೆಪೆÇೀಯಾ ಫೌಂಡೇಶನ್ (ಯೆನೆಪೆÇೀಯಾ ಮೊಯ್ದೀನ್ ಕುಂಞÂ ಸ್ಮರಣಾರ್ಥ ಶೈಕ್ಷಣಿಕ ಮತ್ತು ಚಾರಿಟಬಲ್ ಟ್ರಸ್ಟ್ (ನಿ.)ನ ಒಂದು ಘಟಕ] ವತಿಯಿಂದ  ಪ್ರತಿ ವರ್ಷ  ನೀಡಲ್ಪಡುವ ಎಎಸ್‍ಎಸ್‍ಎಲ್‍ಸಿ , ಪಿಯುಸಿ ಮತ್ತು ಪದವಿ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳ ಪುರಸ್ಕಾರಕ್ಕಾಗಿ ಅರ್ಜಿಯನ್ನು ಆಹ್ವಾನಿಸಿದೆ.  2019-20ನೇ ಶೈಕ್ಷಣಿಕ ವರ್ಷದಲ್ಲಿ ಎಸ್‍ಎಸ್‍ಎಲ್‍ಸಿ / ಪಿಯುಸಿ ಮತ್ತು ಪದವಿ ಕೋರ್ಸುಗಳಲ್ಲಿ ಉತ್ತಮ ಸಾಧನೆ ಮಾಡಿದ ಅಭ್ಯರ್ಥಿಗಳಿಂದ ಶೈಕ್ಷಣಿಕ ಶ್ರೇಷ್ಠತೆಯ ಪ್ರಶಸ್ತಿ (ಅಕಾಡೆಮಿಕ್‍ಎಕ್ಸಲೆನ್ಸ್ ಅವಾಡ್ರ್ಸ್) – 2020 ಗೆ ಅರ್ಜಿ ಆಹ್ವಾನಿಸಲಾಗಿದೆ. ದ.ಕ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಯ ಯಾವುದೇ ಮಾನ್ಯತೆ ಪಡೆದ ಸಂಸ್ಥೆಯಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ಈ ಪ್ರಶಸ್ತಿ ಪಡೆಯಬಹುದು. ಎಸ್‍ಎಸ್‍ಎಲ್‍ಸಿ/ ಪಿಯುಸಿಯಲ್ಲಿ ಶೇ.90 (ಸಿಜಿಪಿಎ 9.5) ಹಾಗೂ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದವರು, ಪದವಿ ಕೋರ್ಸುಳಾದ ಬಿ.ಕಾಂ, ಬಿ.ಎಸ್ಸಿ, ಬಿಸಿಎ, ಬಿಬಿಎಂ ಮತ್ತು ಬಿಎಗಳಲ್ಲಿ ಶೇ.75 (ಸಿಜಿಪಿಎ 7.9) ಹಾಗೂ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿದವರು…

Read More

UN networks ಕೊಣಾಜೆ: ಕೊಣಾಜೆ ಬೊಳ್ಳೆಕುಮೇರು ನಿವಾಸಿ ಲಕ್ಷ್ಮಣ ಪೂಜಾರಿ ಅವರ ಪುತ್ರ ಧರಣೇಶ್ ಕೊಣಾಜೆ (39) ಅವರು ಅಲ್ಪಕಾಲದ ಅಸೌಖ್ಯದಿಂದ ಬುಧವಾರ ರಾತ್ರಿ ನಿಧನರಾಗಿದ್ದಾರೆ. ಹುಟ್ಟಿನಿಂದಲೇ ಹೃದಯ ಸಂಬಂಧಿ ಕಾಯಿಲೆಯಿಂದ ಇದ್ದರೂ ಛಲವಾದಿಯಾಗಿ ಯಶಸ್ವಿ ಛಾಯಾಗ್ರಾಹಕರಾಗಿ ಗುರುತಿಸಿಕೊಂಡಿದ್ದರು. ಅಸೌಖ್ಯವಿದ್ದರೂ ದುಡಿಯಲು ಅಸಾಧ್ಯ ಎಂದು ಭಾವಿಸದ ಧರಣೇಶ್, ಗಂಜಿಮಠ ಸ್ನೇಹಿತನ ಸ್ಟುಡಿಯೋದಲ್ಲಿ ಕ್ಯಾಮರಾ ತರಬೇತಿ ಪಡೆದುಕೊಂಡರು. ಬಳಿಕ ತಾನೋರ್ವ ಛಾಯಗ್ರಾಹಕನಾಗಬೇಕೆಂಬ ಹಂಬಲದಿಂದ ಕ್ಯಾಮರಾ ಖರೀದಿಸಿ ಛಾಯಗ್ರಾಹಕ ವೃತ್ತಿ ಯನ್ನು ಆರಂಭಿಸಿದವರು. 15 ವರ್ಷಗಳಿಂದ ಛಾಯಗ್ರಾಹಕನಾಗಿ ಹಲವು ಮದುವೆ, ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳ ಫೋಟೋಗಳನ್ನು ಕ್ಲಿಕ್ಕಿಸಿದವರು. ಪ್ರತಿ ದಿನವೂ ಉತ್ಸಾಹದಿಂದಲೇ ಇರುತ್ತಿದ್ದ ವ್ಯಕ್ತಿ ಎಲ್ಲರಿಗೂ ಪರಿಚಿತರು. ಕೊಣಾಜೆ – ಸ್ಟೇಟ್ ಬ್ಯಾಂಕ್ ನಡುವೆ ಚಲಿಸುವ ಸುಷ್ಮಿತಾ ಬಸ್ಸಿನಲ್ಲಿ ಬೆಳಿಗ್ಗೆ ತೆರಳುವ ದಿನಚರಿ ಹೊಂದಿದ್ದ ಇವರು ಬಸ್ ನಿರ್ವಾಹಕ ನಾರಾಯಣ ಅವರ ಜತೆಗೆ ಸೇರಿಕೊಂಡು ಸದ್ದಿಲ್ಲದೆ ಅಶಕ್ತರಿಗೂ ಧನ ಸಂಗ್ರಹಿಸಿ ಸಹಾಯ ಮಾಡಿದವರು.

Read More

UN Networks ಕೋಟೆಕಾರು : ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಸಂಘವು 2019-2020 ನೇ ಸಾಲಿನಲ್ಲಿ   439.23 ಕೋಟಿರೂ. ಗಳ ವ್ಯವಹಾರವನ್ನು ನಡೆಸಿ  1.45ಕೋಟಿ ನಿವ್ವಳ ಲಾಭಾಂಶ ಗಳಿಸಿ ಪ್ರಗತಿ ಪ್ರಥದಲ್ಲಿ ಸಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರುಗುತ್ತು  ಹೇಳಿದರು.   ಕೋಟೆಕಾರುಸಂಘದ ಪ್ರಧಾನ ಕಛೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ 2019-20 ನೇ ಸಾಲಿನ ಅಂತ್ಯಕ್ಕೆ ಸಂಘವು “ಎ” ತರಗತಿಯ 7157 ಸದಸ್ಯರನ್ನು ಹೊಂದಿದ್ದು 2.09 ಕೋಟಿ ರೂಗಳ ಪಾಲು ಬಂಡವಾಳವನ್ನು ಹೊಂದಿರುತ್ತದೆ. ವರದಿ ವರ್ಷದಲ್ಲಿರೂ 211.04 ಕೋಟಿ ಠೇವಣಿ ಸಂಗ್ರಹಿಸಿ 202.08 ಕೋಟಿ ಠೇವಣಿಯನ್ನು ಪಾವತಿಸಿ, ವರ್ಷಾಂತ್ಯಕ್ಕೆ ರೂ 101.85 ಕೋಟಿ ಠೇವಣಿ ಹೊಂದಿರುತ್ತದೆ. ಠೇವಣಿ ಸಂಗ್ರಹದಲ್ಲಿಗುರಿ  ವಿೂೀರಿದ ಸಾಧನೆಯನ್ನು ಮಾಡಿದೆ. ಕಳೆದ ವರ್ಷಾಂತ್ಯಕ್ಕೆ ಹೋಲಿಸಿದರೆ ಠೇವಣಿ ಸಂಗ್ರಹದಲ್ಲಿ 8.95 ಕೋಟಿ ರೂಗಳ ಪ್ರಗತಿಯನ್ನು ಸಾಧಿಸಲಾಗಿದೆ.ವರದಿ ಸಾಲಿನಲ್ಲಿ 110.74 ಕೋಟಿ ಸಾಲ ವಿತರಿಸಲಾಗಿದ್ದು, 103.57 ಕೋಟಿ ಸಾಲ ವಸೂಲಿಯಾಗಿದೆ. ವರ್ಷಾಂತ್ಯಕ್ಕೆ 72.72 ಕೋಟಿ ಹೊರ…

Read More

UN Networks ಉಳ್ಳಾಲ‌ ನಗರದ ಸಭೆಯಿಂದ ದಿಢೀರ್ ರೈಡ್, ಹಲವು ಅಂಗಡಿಗಳಿಗೆ ಬೀಗಹಲವು ವರ್ಷಗಳಿಂದ ಲಕ್ಷಾಂತರ ರೂಪಾಯಿ ಬಾಡಿಗೆ ಕಟ್ಟದೆ ವ್ಯವಹಾರ ನಡೆಸುತ್ತಿದ್ದ ಅಂಗಡಿಗಳಿಗೆ ಗುರುವಾರ ನಗರಸಭೆ ಅಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿ ಅತ್ಯಧಿಕ ಬಾಡಿಗೆ ಬಾಕಿಯಿದ್ದ ಅಂಗಡಿಗಳಿಗೆ ಬೀಗ ಜಡಿದಿದೆ. ಉಳ್ಳಾಲ‌ ನಗರಸಭೆಯ ತೊಕ್ಕೊಟ್ಟಿನಲ್ಲಿರುವ ಕಟ್ಟಡದಲ್ಲಿ ಹೋಟೆಲ್, ಬಟ್ಟೆಯಂಗಡಿ, ಬೇಕರಿ, ಜೆರಾಕ್ಸ್, ಫಾಸ್ಟ್ ಫುಡ್ ಸಹಿತ 50 ಮಳಿಗೆಗಳಿದ್ದು, ಹಲವು ಮಳಿಗೆಗಳಿಂದ ಬಾಡಿಗೆ ಪಾವತಿಯಾಗದೆ ಹಲವು ತಿಂಗಳುಗಳೇ ಕಳೆದಿವೆ. ಐದು ಲಕ್ಷ ಬಾಡಿಗೆ ಬಾಕಿಯಿರುವ ಅಂಗಡಿಗಳೂ ಇವೆ. ಈ ಹಿನ್ನೆಲೆಯಲ್ಲಿ ಗುರುವಾರ ಪೌರಾಯುಕ್ತ ರಾಯಪ್ಪ ನೇತೃತ್ವದ ತಂಡ ದಾಳಿ ನಡೆಸಿ ಅಧಕ ಬಾಡಿಗೆ ಬಾಕಿಯಿದ್ದ ಅಂಗಡಿಗಳಿಗೆ ಬೀಗ‌ ಜಡಿದರೆ, ಕೆಲವು ಅಂಗಡಿದಾರರಿಗೆ ಎರಡು ದಿನಗಳ‌ ಸಮಯ ನಿಗದಿಪಡಿಸಿದ್ದಾರೆ. ಇದೇ ವೇಳೆ ನಗರಸಭೆಯ ಅಡಿಭಾಗದಲ್ಲಿರುವ ಮೂರು ಅಂಗಡಿಗಳಿಗೂ ಬೀಗ ಜಡಿದಿದ್ದಾರೆ.ಕೌನ್ಸಿಲರ್ ನಿಂದಲೂ ಬಾಕಿ!ದಾಳಿ ಸಂದರ್ಭ ಕೌನ್ಸಿಲರ್ ಭಾರತಿ ಅವರ ಅಂಗಡಿಯಿಂದಲೂ 30 ಸಾವಿರ ರೂಪಾಯಿ ಬಾಡಿಗೆ ಬಾಕಿಯಿರುವುದು ಕಂಡು ಬಂದಿದೆ‌‌.…

Read More

UN networks ಕೊಣಾಜೆ: ಖ್ಯಾತ ಜ್ಯೋತಿಷಿ ಬಂಟ್ವಾಳ ತಾಲೂಕಿನ ನರಿಂಗಾನ ಗ್ರಾಮದ ಸುಟ್ಟ ದಿ. ರಾಮ ಪಂಡಿತ ಅವರ ಪುತ್ರ, ಖ್ಯಾತ ಆಯುರ್ವೇದ ತಜ್ಞ ಡಾ. ಎಸ್. ಎಸ್. ರಾಮ್ ಅಲ್ಪಕಾಲದ ಅಸೌಖ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ನಿಧನರಾದರು. ಕೈರಂಗಳ ದುಗ್ಗಜ್ಜರಕಟ್ಟೆಯಲ್ಲಿ ನಾಲ್ಕು ದಶಕಗಳಿಂದ ಕ್ಲಿನಿಕ್ ತೆರೆದು ತನ್ನ ಕೈಗುಣದಿಂದಲೇ ಅತ್ಯುತ್ತಮ ವೈದ್ಯರೆಂದು ಜನಾನುರಾಗಿಯಾಗಿದ್ದರು. ಕೈರಂಗಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಂಘದ ಅಧ್ಯಕ್ಷರಾಗಿ, ಗೋಪಾಲಕೃಷ್ಣ ದೇವಸ್ಥಾನ ಹಾಗೂ ಭಜನ ಮಂದಿರದ ಗೌರವ ಸಲಹೆಗಾರರಾಗಿ ಕೈರಂಗಳ ಶ್ರೀ ಕೃಷ್ಣ ಗೇಮ್ಸ್ ಕ್ಲಬ್‌ನಲ್ಲೂ ಸಕ್ರಿಯರಾಗಿದ್ದರು. ನಡಿನ ಬಹಳಷ್ಟು ದೈವ ದೇವಸ್ಥಾನಗಳ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವಗಳಲ್ಲಿ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಕೊಡುಗೈ ದಾನಿಯಾಗಿದ್ದರು. ನರಿಂಗಾನ ಮರಕಟ್ಟ ಶ್ರೀ ಮಲರಾಯ ದೈವಸ್ಥಾನದಲ್ಲಿ ಕುಟುಂಬದಿAದ ಬಂದಿದ್ದ ದೈವೀ ಸೇವೆಯನ್ನು ನಿರಂತರ ಮಾಡುತ್ತಾ ಬಂದಿದ್ದರು. ನಾಟಕ ಕಲಾವಿದರಾಗಿ ಬಯ್ಯಮಲ್ಲಿಗೆ, ಜೇನಿನಗೂಡು, ಕರ‍್ದಬ್ಬ ತನ್ನಿಮಾನಿಗ, ಸೂರ್ಯಕಾಂತಿ, ಗಂಗಾರಾಮ್ ಮೊದಲಾದ ನಾಟಕದಲ್ಲಿ ಅತ್ಯುತ್ತಮ ಅಭಿನಯ ನೀಡಿದ್ದರು. ಯಕ್ಷಗಾನಗಳಲ್ಲೂ ಸಣ್ಣಪುಟ್ಟ ವೇಷ ಧರಿಸಿದ್ದರು.…

Read More

UN networks ಉಳ್ಳಾಲ: ಮನೆ ಆವರಣದಲ್ಲಿ ನಿಲ್ಲಿಸಲಾದ ಬೈಕ್ ನ್ನು ಕಳ್ಳರು ಕಳವು ನಡೆಸಿರುವ ಘಟನೆ ನಿನ್ನೆ ತಡರಾತ್ರಿ ವೇಳೆ ಉಳ್ಳಾಲ ಠಾಣಾ ವ್ಯಾಪ್ತಿಯ ನಡಾರು ಬಳಿ ನಡೆದಿದ್ದು, ಕೆಲ ದಿನಗಳ ಅಂತರದಲ್ಲಿ ಮನೆ ಎದುರುಗಡೆ ನಿಲ್ಲಿಸಲಾದ ಬೈಕನ್ನು ಕಳವು ನಡೆಸಿರುವ ಎರಡನೇ ಪ್ರಕರಣವಾದರೂ ಉಳ್ಳಾಲ ಠಾಣಾ ಪೊಲೀಸರಿಗೆ ಈವರೆಗೆ ಕಳ್ಳರ ಪತ್ತೆ ಅಸಾಧ್ಯವಾಗಿದೆ. ದೇರಳಕಟ್ಟೆ ನಡಾರು ಬಳಿಯ ನಿಶಾಂತ್ ಎಂಬವರಿಗೆ ಸೇರಿದ ಸಿಲ್ವರ್ ಬಣ್ಣದ ರಾಯಲ್ ಎನ್ಫೀಲ್ಡ್ ಬುಲೆಟ್ ವಾಹನ ಕಳವು ನಡೆದಿದೆ‌. ಮನೆ ಎದುರುಗಡೆ ಡಿ.16 ರ ಬುಧವಾರ ರಾತ್ರಿ ಬೈಕ್ ನಿಲ್ಲಿಸಲಾಗಿತ್ತು. ಇಂದು ಬೆಳಿಗ್ಗೆ ಬುಲೆಟ್ ಕಳವಾಗಿದೆ.‌ ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಗೆ ನಿಶಾಂತ್ ಅವರು ದೂರು ಸಲ್ಲಿಸಿದ್ದಾರೆ. ಎರಡು ದಿನಗಳಲ್ಲಿ ಪ್ರಕರಣ ದಾಖಲಿಸುವ ಕುರಿತು ಪೊಲೀಸರು ತಿಳಿಸಿದ್ದಾರೆ.ಕೆಲ ದಿನಗಳ ಅಂತರದಲ್ಲಿ ಇದು ಎರಡನೇ ಕಳವು ಪ್ರಕರಣವಾಗಿದೆ. ಕೊಲ್ಯ ಮನೆ ಎದುರುಗಡೆ ನಿಲ್ಲಿಸಲಾಗಿದ್ದ ಬೈಕನ್ನು ಕಳ್ಳರಿಬ್ಬರು ಕಳವು ನಡೆಸಿ ದಿನಗಳೇ ಕಳೆದಿವೆ. ಈ ಕುರಿತು ಕಳ್ಳರಿಬ್ಬರ…

Read More

UN networks ಉಳ್ಳಾಲ : ಉಳ್ಳಾಲ ಪೊಲೀಸ್ ಠಾಣೆಯಲ್ಲಿರುವ ಹಳೇಯ ವಾಹನಗಳನ್ನು ನ್ಯಾಯಾಲಯದ ಆದೇಶದಂತೆ ಹರಾಜು ಪ್ರಕ್ರಿಯೆ ನಡೆಯಲಿದೆ. ಪೊಲೀಸ್ ಠಾಣಾ ಪ್ರಕರಣಗಳಿಗೆ ಸಂಬಂಧಪಟ್ಟ 16 ಹಳೇಯ‌ ದ್ವಿಚಕ್ರ ,3 ಹಳೇಯ ಕಾರುಗಳು ಮತ್ತು‌ 2 ಹಳೆಯ ಆಟೋ ರಿಕ್ಷಾ ವಾಹನಗಳನ್ನು ನ್ಯಾಯಾಲಯದ ಆದೇಶದಂತೆ ಡಿ.24 ರಂದು ಬೆಳಿಗ್ಗೆ 11 ಕ್ಕೆ ಉಳ್ಳಾಲ ಪೊಲೀಸ್ ಠಾಣೆಯ ಆವರಣದಲ್ಲಿ ಬಹಿರಂಗ ಹರಾಜು ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More