UN networks ಮಂಜನಾಡಿ: ಮಂಜನಾಡಿ ಗ್ರಾಮದ ಅರಂತಾಡಿ ಬಳಿ ಸುಮಾರು 6 ಕ್ಕೂ ಅಧಿಕ ಕಾಗೆಗಳ ನಿಗೂಢವಾಗಿ ಸತ್ತುಬಿದ್ದಿರುವ ಬಗ್ಗೆ ವರದಿಯಾಗಿದೆ. ಹಕ್ಕಿಜ್ವರ ಸಾಧ್ಯತೆ ಹಿನ್ನೆಲೆಯಲ್ಲಿ ಕಾಗೆಗಳು ಸತ್ತು ಬಿದ್ದಿರುವ ಸಾಧ್ಯತೆ ಗಳು ಇದೆ ಎಂದು ಸಹಾಯಕ ಆಯುಕ್ತರು, ಪಶುವೈದ್ಯರಿಗೆ ವರದಿ ನೀಡಲಾಗಿದೆ.ಸ್ಥಳಕ್ಕೆ ಭೇಟಿ ನೀಡಿದ ಪರಿಶೀಲನೆ ನಡೆಸಿದ ಪಂಚಾಯಿತಿ ಪಿಡಿಓ ಮಂಜಪ್ಪ ಹಾಗೂ ಗ್ರಾಮಕರಣಿರಿಂದ ವರದಿ ಸಲ್ಲಿಕೆಯಾಗಿದೆ
Author: UllalaVani
UN networks ಉಳ್ಳಾಲ: ಸಾಂಪ್ರದಾಯಿಕ ಉಡುಗೆ ತೊಟ್ಟಲ್ಲಿ ಮಾತ್ರ ದೇವಸ್ಥಾನಕ್ಕೆ ಇನ್ಮುಂದೆ ಪ್ರವೇಶ. ಇದುಉಳ್ಳಾಲದಾದ್ಯಂತ ದೇವಸ್ಥಾನಗಳಲ್ಲಿ ಬಜರಂಗದಳ- ವಿ.ಹಿಂ.ಪ ದೇವಸ್ಥಾನ ಆವರಣದಲ್ಲಿ ಹಾಕಿರುವ ಪೋಸ್ಟರ್ ಗಳಲ್ಲಿ ಎಚ್ಚರಿಕೆಯ ಸಂದೇಶ. ಉಳ್ಳಾಲದ ಶ್ರೀ ವ್ಯಾಘ್ರ ಚಾಮುಂಡೇಶ್ವರಿ ದೇವಸ್ಥಾನ, ದೇರಳಕಟ್ಟೆ ಅಯ್ಯಪ್ಪ ಸ್ವಾಮಿ ದೇವಸ್ಥಾನ ಹೀಗೆ ಸೇರಿದಂತೆ ಹಲವು ದೇವಸ್ಥಾನಗಳಲ್ಲಿ ಪೋಸ್ಟರ್ ಅನ್ನು ಅಳವಡಿಸಲಾಗಿದೆ. ಬೇಕಾಬಿಟ್ಟಿ ಬಟ್ಟೆ ತೊಟ್ಟು ದೇವಸ್ಥಾನಕ್ಕೆ ಬರುವ ಮೂಲಕ ದೇವಸ್ಥಾನ ದ ಪಾವಿತ್ರ್ಯತೆಗೆ ಧಕ್ಕೆಯಾಗುತ್ತಿದ್ದು . ಇದರಿಂದ ದೇವಸ್ಥಾನದೊಳಗೆ ಶ್ರದ್ಧೆ ಭಕ್ತಿಯ ವಾತಾವರಣವೂ ಇರುವುದಿಲ್ಲ. ಅದಕ್ಕಾಗಿ ಎಚ್ಚರಿಕೆಯ ಬ್ಯಾನರನ್ನು ಅಳವಡಿಸಲಾಗಿದೆ.
UN networks ಉಳ್ಳಾಲ: ಅಬ್ಬಕ್ಕ ಭವನಕ್ಕೆ ತಾಗಿಕೊಂಡು ಬ್ಯಾರಿ ಭವನ ಖಂಡಿತಾ ಬೇಡ. ಉಳ್ಳಾಲ ಅನ್ನುವುದು ಅತಿಸೂಕ್ಷ್ಮ ಪ್ರದೇಶ. ಸಣ್ಣ ಹುಡುಗ ಕಲ್ಲು ಬಿಸಾಡಿದರೂ ಗಲಭೆ ನಡೆಯುವಂತಹ ಸ್ಥಳ. ಇಂತಹ ವಾತಾವರಣ ಇರುವ ಸಂದರ್ಭ ವಿಭಿನ್ನ ವ್ಯವಸ್ಥೆಗಳ ಭವನ ಒಟ್ಟೊಟ್ಟಿಗೆ ಆದಲ್ಲಿ ಮುಂದಿನ ದಿನದಲ್ಲಿ ಬಹಳಷ್ಟು ತೊಂದರೆಯಾಗಲಿದೆ ಎಂದು ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಗೌರವಾಧ್ಯಕ್ಷ ಹಾಗೂ ಮಾಜಿ ಶಾಸಕ ಜಯರಾಮ ಶೆಟ್ಟಿ ಹೇಳಿದರು. ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ವತಿಯಿಂದ ಶಿಲನ್ಯಾಸ ನೆರವೇರಿ 9 ವರ್ಷಗಳಾದರೂ ಇನ್ನೂ ನಿರ್ಮಾಣವಾಗದ ಅಬ್ಬಕ್ಕ ಭವನದ ಕಾಮಗಾರಿ ಶೀಘ್ರವೇ ಆರಂಭಿಸುವಂತೆ ಹಾಗೂ ಸಮೀಪದಲ್ಲೇ ಬ್ಯಾರಿ ಭವನ ನಿರ್ಮಾಣಕ್ಕೆ ಮುಂದಾಗಿರುವುದನ್ನು ವಿರೋಧಿಸಿ ತೊಕ್ಕೊಟ್ಟು ಹೊಸ ಬಸ್ಸು ನಿಲ್ದಾಣ ಬಳಿ ಅಬ್ಬಕ್ಕ ಭವನಕ್ಕೆ ಮೀಸಲಿಟ್ಟ ಪ್ರದೇಶದಲ್ಲಿ ಶುಕ್ರವಾರ ಹಮ್ಮಿಕೊಂಡ ಮೌನ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಬ್ಯಾರಿ ಭವನಕ್ಕೆ ವಿರೋಧವಿಲ್ಲ. ಅರ್ಧ ಕಿ.ಮೀ ದೂರದಲ್ಲಾದರೂ ನಿರ್ಮಿಸಲಿ. ಕಲ್ಲಾಪು, ಉಳ್ಳಾಲ, ಕೋಡಿ ಭಾಗಗಳಲ್ಲಿ ನಿರ್ಮಿಸಲಿ. ಆಧರೆ 9 ವರ್ಷದ…
UN networks ಪಾವೂರು :ಡೇರೆಯಲ್ಲಿ ಬದುಕು ನಡೆಸಿ ತಾಯಿ ಶ್ರಮದಿಂದ ಬಿಎಸ್ಸಿ ಪದವೀಧರೆಯಾಗಿ ವಿದ್ಯಾಭ್ಯಾಸ ಪೂರೈಸಿದ ಯುವತಿ ಇದೀಗ ಗ್ರಾಮದ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ. ಪಾವೂರು ಪಂಚಾಯತಿಯ ಎರಡನೇ ವಾರ್ಡಿನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಮಮತ ಅವರು ಆಯ್ಕೆಯಾಗಿದ್ದಾರೆ. ಬಿಎಸ್ಸಿ ಪದವೀಧರೆಯಾಗಿರುವ ಮಮತ ಅವರ ಕುಟುಂಬ ಡೇರೆಯಲ್ಲಿ ಕಡು ಬಡತನದಿಂದ ಜೀವನ ಸಾಗಿಸುತ್ತಿದ್ದರು. ದಾನಿಗಳ ಸಹಕಾರದಿಂದ ಬೆಂಗಳೂರು ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪಡೆದು, 2020ರಲ್ಲಿ ಮೆಡಿಕಲ್ ವಿಭಾಗದಲ್ಲಿಮೆಡಿಕಲ್ ಲಾಬೋರೆಟರಿ ಟೆಕ್ನಾಲೋಜಿ(ಬಿಎಸ್ಸಿ) ಪದವಿಧರೆಯಾಗಿ ಅತ್ಯುನ್ನತ ಶ್ರೇಣಿಯಲ್ಲಿ ಪಾಸಾಗಿದ್ದರು. ಕಷ್ಟ ಎಂದು ಬರುವವರಿಗೆ ನನ್ನಿಂದಾಗುವ ಸಹಾಯವನ್ನು ಮಾಡಬೇಕು. ಜನರ ಕಷ್ಟಗಳಿಗೆ ಮೊದಲಿನ ಆದ್ಯತೆಯನ್ನು ನೀಡುತ್ತೇನೆ.ಕಷ್ಟದ ದಾರಿ ನನಗೆ ನೆನಪಿದೆ, ಅಂತಹ ಕಷ್ಟ ಮುಂದೆ ಯಾರಿಗೂ ಬರಬಾರದು ಎಂಬ ಆಶಯದೊಂದಿಗೆ ರಾಜಕೀಯ ಪ್ರವೇಶಿಸಿದ್ದೇನೆ. ಕಲಿತ ವಿಷಯದಲ್ಲಿಯೇ ಕೆಲಸ ಮಾಡುವ ಯೋಚನೆಯೂ ಇದೇ ಮುಂದೆ ಹೇಗೆ ನಡೆಯುತ್ತದೆ ಎಂದು ಕಾದುನೋಡಬೇಕಿದೆ ಎಂದು ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಆಯ್ಕೆಯಾದ ಮಮತ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.
UN networks ಉಳ್ಳಾಲ: ಮಂಗಳೂರು ವಿಧಾನಸಬಾ ಕ್ಷೇತ್ರದ 19 ಗ್ರಾಮ ಪಂಚಾಯತ್‍ಗಳ ಮತದಾನದ ಮತ ಎಣಿಕೆ ಕಾರ್ಯ ಆರಂಭವಾಗಿದೆ. ಹರೇಕಳ1 ನೇ ವಾಡ್೯ನ ಕಾಂಗ್ರೆಸ್ ಬೆಂಬಲಿತ ಮಹಮ್ಮದ್ ಹನೀಫ್ ಗೆ ಗೆಲುವು ಕೊಣಾಜೆ 4 ನೇ ಬಿಜೆಪಿ ಬೆಂಬಲಿತ ಗೀತಾ ಗೆಲುವು ಹರೇಕಳ 1 ನೇ ವಾಡ್೯ ಎಸ್ ಡಿಪಿಐ ಬೆಂಬಲಿತ ಮಹಿಳಾ ಅಭ್ಯರ್ಥಿ ರೆಹನಾ ಮಹಮ್ಮದ್ ಗೆಲುವು ಸಾಧಿಸಿದ್ದಾರೆ. ಪಾವೂರು- 2 ಕಾಂಗ್ರೆಸ್ ಗೆಲುವುತಲಪಾಡಿ- 2 ಎಸ್‌ಡಿಪಿಐ ಗೆಲುವು ಕೊಣಾಜೆ 4 ನೇ ವಾರ್ಡು ಕಾಂಗ್ರೆಸ್ ಬೆಂಬಲಿತ ಮಹಮ್ಮದ್ ಇಕ್ಬಾಲ್ ಗೆಲುವು ಹರೇಕಳ ಪ್ರಥಮ ಬಾರಿಗೆ ಖಾತೆ ತೆರೆದ ಎಸ್ ಡಿಪಿಐ ತಲಪಾಡಿ ಗ್ರಾ.ಪಂನಲ್ಲಿ ಮೊದಲ ಬಾರಿಗೆ ಖಾತೆ ತೆರೆದ ಎಸ್ ಡಿಪಿಐ 2 ವಾರ್ಡುಝಾಹಿರ್ ಎಸ್ ಡಿಪಿಐ 3 ನೇ ವಾರ್ಡುಮಹಮ್ಮದ್ ಎಸ್ ಡಿಪಿಐ ಪಾವೂರು ಗ್ರಾ.ಪಂ 1 ನೇ ವಾರ್ಡು ಕಾಂಗ್ರೆಸ್ ಬೆಂಬಲಿತ ರತಿಕಲಾಮತ್ತು ರಿಯಾಝ ಗೆಲುವು ಅಂಬ್ಲಮೊಗರು 1 ನೇ ವಾರ್ಡು ರವೀಂದ್ರ ಕುಕ್ಯಾನ್ ಕಾಂಗ್ರೆಸ್…
UN networksಮಂಗಳಗಂಗೋತ್ರಿ: ಮಂಗಳೂರು ವಿಶ್ವವಿದ್ಯಾನಿಲಯದ ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆ ಮತ್ತು ಕವಿ ಪ್ರಕಾಶನ ಕವಲಕ್ಕಿ ಇವರ ಸಹಯೋಗದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ನಿಕಟಪೂರ್ವ ಕುಲಪತಿಗಳಾದ ಪ್ರೊ.ಸಬಿಹಾ ಭೂಮಿಗೌಡ ಅವರ ಎರಡು ಕೃತಿಗಳ ಅನಾವರಣ ಡಿ.31 ರಂದು ಬೆಳಗ್ಗೆ 11.30 ಕ್ಕೆ ವಿಶ್ವವಿದ್ಯಾನಿಲಯದ ಯು ಆರ್ ರಾವ್ ಸಭಾಂಗಣದಲ್ಲಿ ನಡೆಯಲಿದೆ. ‘ನಾರೀ ನೋಟ’ ವಿಮರ್ಶಾ ಸಂಕಲನ ಮತ್ತು ‘ ಈವರೆಗಿನ ಕವಿತೆಗಳು’ ಕವಿತಾ ಸಂಕಲನವನ್ನು ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕುಲಸಚಿವರಾದ ಪ್ರೊ.ಆರ್ ಸುನಂದಮ್ಮ ಬಿಡುಗಡೆಗೊಳಿಸಲಿದ್ದಾರೆ. ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಪ್ರೊ. ಅಭಯಕುಮಾರ್ ಕೌಕ್ರಾಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ. ರೇಖಾ ಬನ್ನಾಡಿ, ಕುಂದಾಪುರ ಹಾಗೂ ಡಾ. ಜಯಪ್ರಕಾಶ್ ಶೆಟ್ಟಿ, ತೆಂಕನಿಡಿಯೂರು ಕೃತಿ ಅವಲೋಕನ ನಡೆಸಲಿದ್ದಾರೆ. ಲೇಖಕಿ ಪ್ರೊ ಸಬಿಹಾ ಭೂಮಿಗೌಡ ಉಪಸ್ಥಿತರಿರುವರು ಎಂದು ಕನ್ನಡ ವಿಭಾಗದ ಪ್ರಕಟಣೆ ತಿಳಿಸಿದೆ
ಸೋಮೇಶ್ವರ:ಸೋಮೇಶ್ವರ ಸಮುದ್ರಕ್ಕೆ ಜಾರಿಬಿದ್ದ ಮಹಿಳೆಯನ್ನು ಸೋಮೇಶ್ವರ ಅಶೋಕ್ ಎಂಬವರು ಏಕಾಂಗಿಯಾಗಿ ರಕ್ಷಣೆ ಮಾಡಿದ ಘಟನೆ ಸೋಮೇಶ್ವರ ಸಮುದ್ರ ತೀರದಲ್ಲಿಮಂಗಳವಾರ ನಡೆದಿದೆ. ಸಮುದ್ರ ವಿಹಾರಕ್ಕೆಂದು ಬಂದಿದ್ದ ಮಹಿಳೆಯುಸಮುದ್ರ ಕ್ಕೆ ಜಾರಿ ಬಿದ್ದಿದ್ದು ಈ ಸಂದರ್ಭದಲ್ಲಿ ಮುಸ್ಲಿಂ ಮಹಿಳೆಯನ್ನು ಹಿಂದೂ ಯುವಕರು ರಕ್ಷಿಸಿದ್ದಾರೆ. ಕಿಶೋರ್ ಸೋಮೇಶ್ವರ, ವಿಶ್ವನಾಥ್ ಮಡ್ಯಾರ್ ಸಹಕಾರದೊಂದಿಗೆ ರಕ್ಷಣೆ ಮಾಡಲಾಗಿದೆ.
UN networks ತೊಕ್ಕೊಟ್ಟು: ವೀರ ರಾಣಿ ಅಬ್ಬಕ್ಕಳ ಹೆಸರಿನಲ್ಲಿ ತೊಕ್ಕೊಟ್ಟಿನಲ್ಲಿ ಅಬ್ಬಕ್ಕ ಭವನ ನಿರ್ಮಾಣ ಕೈತಪ್ಪಿ ಹೋಗುವ ಸಾಧ್ಯತೆಯಿದ್ದು ಈ ಹಿನ್ನಲೆಯಲ್ಲಿ ಹೊಸ ವರ್ಷಕ್ಕೆ ತೊಕ್ಕೊಟ್ಟುವಿನಲ್ಲಿ ಮೌನ ಪ್ರತಿಭಟನೆ ಗೆ ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಮುಂದಾಗಿದೆಈ ನಿಮಿತ್ತಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯಿಂದ ತುರ್ತು ಸಭೆ ಕರೆದು ಪ್ರತಿಭಟನೆಗೆ ನಿರ್ಧಾರ ನಡೆಸಲಾಗಿದೆ. 2021ರ ಜ.1ರಂದು 9 ಗಂಟೆಗೆ ಅಬ್ಬಕ್ಕ ಭವನಕ್ಕೆ ಮೀಸಲಿಟ್ಟ ಜಾಗದಲ್ಲಿ ಪ್ರತಿಭಟನೆ ನಡೆಸಲಿ ಸಮಿತಿ ನಿರ್ಧರಿಸಿದ್ದು ಅಬ್ಬಕ್ಕ ಅಭಿಮಾನಿಗಳು ಮೌನ ಪ್ರತಿಭಟನೆಯಲ್ಲಿ ಭಾಗಿಯಾಗುವಂತೆ ಮನವಿ ಮಾಡಲಾಗಿದೆ ತೊಕ್ಕೊಟ್ಟು ಹೊಸ ಬಸ್ ನಿಲ್ದಾಣದ ಹತ್ತಿರವಿರುವ 41 ಸೆಂಟ್ಸ್ ಜಾಗದಲ್ಲಿ 9 ವರ್ಷವಾದರೂ ಅಬ್ಬಕ್ಕ ಭವನ ನಿರ್ಮಾಣಗೊಂಡಿಲ್ಲ. ತೊಕ್ಕೊಟ್ಟುವಿನ 41 ಸೆಂಟ್ಸ್ ಜಾಗವನ್ನು ಅಬ್ಬಕ್ಕ ಉತ್ಸವ ಸಮಿತಿ ಪ್ರಯತ್ನದಿಂದ ಅಬ್ಬಕ್ಕ ಭವನಕ್ಕೆ ಮೀಸಲು ಇರಿಸಲಾಗಿತ್ತು. ಕೂಡಲೇ ಭವನದ ಕಾಮಗಾರಿ ಆರಂಭಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಯಲಿದೆ.
ಉಳ್ಳಾಲ: ದ್ವಿಚಕ್ರ ವಾಹನಗಳೆರಡರ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚೆಂಬುಗುಡ್ಡೆ ಬಳಿ ಇಂದು ನಸುಕಿನ ಜಾವ ಸಂಭವಿಸಿದೆ. ಸಂತೋಷನಗರ ನಿವಾಸಿ ಸಂದೇಶ್ ಕೆರೆಬೈಲ್ (38) ಸಾವನ್ನಪ್ಪಿದವರು. ಕೊಲ್ಯ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಮನೆಗೆ ವಾಪಸ್ಸಾಗುವ ಸಂದರ್ಭ ನಸುಕು 3 ರ ಜಾವಕ್ಕೆ ಅಪಘಾತ ಸಂಭವಿಸಿದೆ. ತಲೆಗೆ ಗಂಭೀರ ಗಾಯಗೊಂಡ ಸಂದೇಶ್, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರು ಅವಿವಾಹಿತರಾಗಿದ್ದು ಸಹೋದರಿ ಹಾಗೂ ತಾಯಿಯನ್ನು ಅಗಲಿದ್ದಾರೆ.ಪೈಂಟರ್ ಆಗಿ ದುಡಿಯುತ್ತಿದ್ದ ಸಂದೇಶ್, ಕೊರೊನಾ ಲಾಕ್ ಡೌನ್ ನಂತರ ಕೊಲ್ಯ ಸಮೀಪ ಮೀನು ಮಾರಾಟ ನಡೆಸುತ್ತಿದ್ದರು. ಮಂಗಳೂರಿನ ನಾಗುರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

