Author: UllalaVani

Kannada News From Coastal Karnataka

UN networks ಉಳ್ಳಾಲ: ಬೈಕ್ ನಲ್ಲಿ ತೆರಳುತ್ತಿದ್ದ ಯುವಕರಿಬ್ಬರಿಗೆ ಇನ್ನೊಂದು ಬೈಕಿನಲ್ಲಿ ಬಂದ ತಂಡವೊಂದು ಅಪಘಾತ ನಡೆಸಿ ಇಬ್ಬರಿಗೆ ಚೂರಿಯಿಂದ ಇರಿದಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕುತ್ತಾರು ಕೃಷ್ಣಕೋಡಿ ಎಂಬಲ್ಲಿ ನಿನ್ನೆ ತಡರಾತ್ರಿ ವೇಳೆ ಸಂಭವಿಸಿದೆ. ಸೇವಂತಿಗುಡ್ಡೆ ನಿವಾಸಿ ಆದಿತ್ಯ (23) ಮತ್ತು ಪಂಡಿತ್ ಹೌಸ್ ನಿವಾಸಿ ಪವನ್(27) ಇರಿತಕ್ಕೊಳಗಾದವರು. ಚರ್ಚೊಂದರಲ್ಲಿ ಕ್ಯಾಟರಿಂಗ್ ನಲ್ಲಿ ಕೆಲಸಕ್ಕಿದ್ದ ಸಹೋದರನನ್ನು ಕರೆ ತರಲು ತೆರಳುವಾಗ ಘಟನೆ ನಡೆದಿದೆ. ಹಿಂಬದಿಯಿಂದ ಬಂದ ಅಪರಿಚಿತ ಬೈಕ್ , ಇವರಿದ್ದ ಬೈಕ್ ಗೆ ಗುದ್ದಿದೆ. ಈ ವೇಳೆ ಇಬ್ಬರು ರಸ್ತೆಗೆಸೆಯಲ್ಪಟ್ಟಿದ್ದಾರೆ. ಆ ಬಳಿಕ ಇಬ್ಬರಿಗೂ ಚೂರಿಯಿಂದ ಇರಿದ ಆಗಂತುಕರು ಸ್ಥಳದಿಂದ ಪರಾರಿಯಾಗಿದ್ದಾರೆ. ಓರ್ವನಿಗೆ ಎರಡು ಕಡೆಯಲ್ಲಿ ಗಾಯಗಳಾದರೆ, ಇನ್ನೋರ್ವನಿಗೆ ಒಂದು ಗಾಯವಾಗಿದೆ. ಇಬ್ಬರನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದೇ ಸ್ಥಳದಲ್ಲಿ ಈ ಹಿಂದೆಯೂ ಆರ್ ಎಸ್ ಎಸ್ ಮುಖಂಡನ ಹತ್ಯೆ ಯತ್ನ ನಡೆದಿತ್ತು.

Read More

UN networks ಉಳ್ಳಾಲ : ಎಸ್ ಡಿಪಿಐ ಕಾಂಗ್ರೆಸ್ ಮಾರಾಮಾರಿ ನಡೆದು ಎರಡು ದಿನಗಳಾಗುತ್ತಿದ್ದಂತೆ ಮತ್ತೆ ರಾಜಕೀಯ ಗುದ್ದಾಟ ಮುಂದುವರಿದಿದ್ದು, ಡಿವೈಎಫ್ ಐ ಬೆಂಬಲಿತ ಅಭ್ಯರ್ಥಿಗೆ ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿ ಮರದ ಸೋಂಟೆಯಿಂದ ಹಲ್ಲೆ ನಡೆಸಿರುವ ಘಟನೆ ಮತ್ತೆ ಹರೇಕಳದಲ್ಲಿ ನಡೆದಿದೆ ಡಿವೈಎಫ್ ಐ ಬೆಂಬಲಿತ ಅಭ್ಯರ್ಥಿ ಇಕ್ಬಾಲ್ ಗೆ ಹಲ್ಲೆ ನಡೆದಿದೆ. ಕಾಂಗ್ರೆಸ್ ಕಾರ್ಯಕರ್ತನೆನ್ನಲಾದ ಬದ್ರುದ್ದೀನ್ ಎಂಬವರಿಂದ ಹಲ್ಲೆ ನಡೆದಿದೆ. ಬದ್ರುದ್ದೀನ್ ಸೇರಿದ ಮರದ ಅಂಗಡಿಯಲ್ಲಿ ಮಾತಿನ ಚಕಮಕಿ ನಡೆದು, ಇಕ್ಬಾಲ್ ಮರ ಹಿಡಿದು ಹಲ್ಲೆಗೆ ಮುಂದಾದಾಗ ತಡೆದ ಬದ್ರುದ್ದೀನ್ ಖುದ್ದು ಮರದ ಸೋಂಟೆಯಿಂದ ಇಕ್ಬಾಲ್ ತಲೆಗೆ ಬಡಿದಿದ್ದಾರೆ. ಎಸ್ ಡಿಪಿಐ- ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದು ಇತ್ತಂಡಗಳ ದೂರು ಠಾಣೆಯಲ್ಲಿದ್ದು, ಇದೀಗ ಕಾಂಗ್ರೆಸ್ – ಡಿವೈಎಫ್ ಐ ನಡುವೆ ಗಲಾಟೆ ನಡೆದು ಈ ಕುರಿತ ಪ್ರಕರಣಗಳು ಕೊಣಾಜೆ ಠಾಣೆಯ ಮೆಟ್ಟಿಲೇರಿದೆ. ಇತ್ತಂಡದವರು ದೇರಳಕಟ್ಟೆ ಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

Read More

UN networks ಮಂಗಳೂರು: ಯುವ ಉದ್ಯಮಿಯೊಬ್ಬರು ನಾಪತ್ತೆಯಾಗಿರುವ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌‌. ಮಾರ್ನಮಿಕಟ್ಟೆ ನಿವಾಸಿ ಸಲೀಂ ಅಹ್ಮದ್ (35) ನಾಪತ್ತೆಯಾದವರು. ಸಲೀಂ ಅಹ್ಮದ್ ಸೆಂಟ್ರಲ್ ಮಾರ್ಕೆಟ್‌ನಲ್ಲಿರುವ ಬಟ್ಟೆ ಅಂಗಡಿಯೊಂದರ ಪಾಲುದಾರರಾಗಿದ್ದಾರೆ. ಸಲೀಂ ಮಾರ್ನಮಿಕಟ್ಟೆಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಡಿ.21ರ ಬೆಳಗ್ಗೆ 8:30ಕ್ಕೆ ಮನೆಯಿಂದ ತೆರಳಿದವರು ಮತ್ತೆ ವಾಪಾಸ್ಸಾಗಿಲ್ಲ. ಮೊಬೈಲ್ ಕೂಡ ಸಂಪರ್ಕಕ್ಕೆ ಸಿಕ್ಕಿಲ್ಲ. ಕುಟುಂಬಸ್ಥರಲ್ಲಿ ಕೂಡ ವಿಚಾರಿಸಿದ್ದು ಎಲ್ಲಿಗೂ ತೆರಳದೆ ನಾಪತ್ತೆಯಾಗಿದ್ದಾರೆ. ಸಲೀಂ ನಾಪತ್ತೆ ಬಗ್ಗೆ ಮಂಗಳೂರು ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

Read More

UN networks ಮಂಗಳೂರು: ಬೆಂಗಳೂರಿಗೆ ತೆರಳಲು ದೇರಳಕಟ್ಟೆಯಿಂದ ಏರ್ ಪೋರ್ಟ್ ಗೆ ಹೋಗುತ್ತಿದ್ದ ಮಾಜಿ ಸಚಿವ ಯು.ಟಿ.ಖಾದರ್ ಕಾರನ್ನು ಅಪರಿಚಿತರು ಫಾಲೋ ಮಾಡಿಕೊಂಡು ಬಂದ ಘಟನೆ ನಡೆದಿದೆ. ಮಂಗಳೂರಿನ ದೇರಳಕಟ್ಟೆಯಿಂದ ನಂತೂರು ಸರ್ಕಲ್ ವರೆಗೂ ಬೈಕ್‌ ನಲ್ಲಿ ಅಪರಿಚಿತರು ಸುಮಾರು ಹತ್ತು ಕಿ.ಮೀ ವರೆಗೂ ಖಾದರ್ ಕಾರಿನ ಹಿಂದೆ ಬಂದಿದ್ದುಅನುಮಾನ ಬಂದು ಖಾದರ್ ಎಸ್ಕಾರ್ಟ್ ವಾಹನದ ಪೊಲೀಸರು ನಂತೂರು ಬಳಿ ಎಸ್ಕಾರ್ಟ್ ವಾಹನ ನಿಲ್ಲಿಸಿದ್ದಾರೆ.ತಕ್ಷಣ ಎಚ್ಚೆತ್ತ ಬೈಕ್ ಸವಾರರು ಬೈಕ್ ತಿರುಗಿಸಿ ಪರಾರಿಯಾಗಿದ್ದಾರೆ. ಇದೀಗ ಖಾದರ್ ಎಸ್ಕಾರ್ಟ್ ವಾಹನದ ಎಎಸ್ಸೈ ಸುಧೀರ್ ಮಾಹಿತಿಯಂತೆ ಪೊಲೀಸರಿಂದ ಅಪರಿಚಿತರಿಗಾಗಿ ಹುಡುಕಾಟ ನಡೆಯುತ್ತಿದ್ದುಬೈಕ್ ನಂಬರ್ ನೋಟ್ ಮಾಡಿಕೊಂಡು ಪೊಲೀಸರು ವಿಳಾಸ ಪತ್ತೆಗಾಗಿ ಹುಡುಕಾಟು ನಡೆಸುತ್ತಿದ್ದಾರೆ.ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಪೊಲೀಸರಿಂದ ತನಿಖೆ ನಡೆಸಲಾಗುತ್ತಿದೆ.

Read More

UN networks ಕೊಣಾಜೆ: ಹರೇಕಳ ಚುನಾವಣೆ ವೇಳೆ ಎಸ್ ಡಿಪಿಐ – ಕಾಂಗ್ರೆಸ್ ಮಾರಾಮಾರಿ ಪ್ರಕರಣದ ಹಿನ್ನಲೆಯಲ್ಲಿ ಕಾಂಗ್ರೆಸ್ ವಿರುದ್ಧ ಎಸ್ ಡಿಪಿಐ ನಿಂದ ಕೊಣಾಜೆ ಠಾಣೆಯಲ್ಲಿ ಪ್ರತಿದೂರು ದಾಖಲಾಗಿದೆ. ಕಾಂಗ್ರೆಸ್ ಕಾರ್ಯಕರ್ತರೆನ್ನಲಾದ ಝಕರಿಯಾ, ಬದ್ರುದ್ದೀನ್, ಇಮ್ತಿಯಾಝ್, ಇಸ್ಮಾಯಿಲ್ ಎಂಬವರ ವಿರುದ್ಧ ಎಸ್ ಡಿಪಿ ಐ ದೂರು ದಾಖಲಿಸಿದೆ. ಎಸ್ ಡಿಪಿಐನ ನೌಮಾನ್, ಉಬೇದ್ ಮುಬಾರಕ್ ಹಾಗೂ ಇತರರ ವಿರುದ್ಧ ಕಾಂಗ್ರೆಸ್ ವತಿಯಿಂದ ನಿನ್ನೆಯೇ ದೂರು ಕೊಣಜೆ ಠಾಣೆಗೆ ದೂರು ದಾಖಲಿಸಲಾಗಿತ್ತು ಪ್ರಕರಣ ಸಂಬಂಧ ಈವರೆಗೂ ಯಾರ ಬಂಧನವೂ ಆಗಿಲ್ಲ ಇದೀಗ ಮತ್ತೆ ಎಸ್ ಡಿಪಿ ಐ ನಿಂದ ದೂರು ದಾಖಲಾಗಿದೆ.

Read More

ಕೊಣಾಜೆ: ಹರೇಕಳ ಚುನಾವಣೆ ಸಂದರ್ಭ ಮಾರಾಮಾರಿ ಪ್ರಕರಣದ ಹಿನ್ನಲೆಯಲ್ಲಿ ಕೊಣಾಜೆ ಠಾಣೆಗೆ ಕಾಂಗ್ರೆಸ್ ಕಾರ್ಯಕರ್ತರ ಮುತ್ತಿಗೆ ಹಾಕಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಬಿಜೆಪಿ ಬೆಂಬಲಿತ ಎಸ್ ಡಿಪಿಐ ಗೂಂಡಾಗಳಿಂದ ಈ ಕೃತ್ಯ ನಡೆದಿದ್ದು ನಾಳೆ ಸಂಜೆಯೊಳಗೆ ಅವರನ್ನು ಬಂಧಿಸದೇ ಇದ್ದಲ್ಲಿ ಉಗ್ರ ಪ್ರತಿಭಟನೆಯ ನಡೆಸುವ ಬಗ್ಗೆ ಕ್ಷೇತ್ರ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ‌ ಅಸೈಗೋಳಿ ಎಚ್ಚರಿಕೆ ನೀಡಿದ್ದಾರೆ. ಆರೋಪಿತ ಎಸ್ ಡಿಪಿಐ. ಕಾರ್ಯಕರ್ತರ ಬಂಧಿಸುವಂತೆ ಆಗ್ರಹಿಸಿ ಶಾಸಕ ಯು.ಟಿ ಖಾದರ್ ನೇತೃತ್ವದ ದಲ್ಲಿ ಕೊಣಾಜೆ ಠಾಣೆಗೆ ಮುತ್ತಿಗೆ ಹಾಕಿದ್ದಾರೆ. ಮತಗಟ್ಟೆ ಎದುರು ಎಸ್ ಡಿಪಿಐ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದ ಘಟನೆ ಹರೇಕಳ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಮತಗಟ್ಟೆ ಎದುರುಗಡೆ ಇಂದು ನಡೆದಿತ್ತು. ಕಾಂಗ್ರೆಸ್ ಕಾರ್ಯಕರ್ತರು ಬೂತ್ ಬಳಿ ಜಮಾಯಿಸಿ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆಂದು ಆರೋಪಿಸಿ ಎಸ್ ಡಿಪಿಐ ಕಾರ್ಯಕರ್ತರು ಮಾತಿಗೆ ಇಳಿದಿದ್ದರು. ಈ ವೇಳೆ ಇತ್ತಂಡಗಳ ನಡುವೆ ವಾಗ್ವಾದ ನಡೆದು ಹೊಐಕೈಗೆ ತಲುಪಿದೆ. ಈ…

Read More

ಅಲೆಮಾರಿ-ಅರೆ ಅಲೆಮಾರಿ ಜನಾಂಗದ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಇವರು ಹರೇಕಳ ರಾಜಗುಡ್ಡೆ ಶಾಲೆಯಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದರು. ಹುಟ್ಟೂರಿನ ಬೂತ್ ಗಳಲ್ಲಿ ಪಕ್ಷದ ಕಾರ್ಯಕರ್ತರ ಜತೆಗಿದ್ದು, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಹುರಿದುಂಬಿಸಿದರು. ಈ ವೇಳೆ ಮಾತನಾಡಿದ ಅವರು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಪಂಚಾಯಿತಿವರೆಗಿನ ಅಭಿವೃದ್ಧಿ ಕಾರ್ಯಗಳನ್ನು ನೋಡಿರುವ ಜನತೆ ತಮ್ಮ ಉತ್ತಮ ಭವಿಷ್ಯಕ್ಕಾಗಿ ಉತ್ತಮ ಅಭ್ಯರ್ಥಿಯನ್ನು ಬೆಂಬಲಿಸಲಿದ್ದಾರೆ ಎಂದರು. ದಿ ಮೈಸೂರ್ ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿ. ಅಧ್ಯಕ್ಷ  ಸಂತೋಷ್ ರೈ ಬೋಳಿಯಾರ್ ತಮ್ಮ ಮತದಾನದ ಹಕ್ಕನ್ನು  ಪಾನೇಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಲಾಯಿಸಿದರು. ಬಳಿಕ ಬೋಳಿಯಾರು ಬೂತ್ ನಲ್ಲಿ ಕುಳಿತು  ಪಕ್ಷದ ಬೆಂಬಲಿತ ಸದಸ್ಯರಿಗೆ ಉತ್ಸಾಹ ತುಂಬಿದರು.  ಬಳಿಕ ಮಾತನಾಡಿದ ಅವರು  ಮಂಗಳೂರು ಕ್ಷೇತ್ರದ 12 ಗ್ರಾ.ಪಂಗಳು ಈ ಬಾರಿ ಪಕ್ಷದ ಬೆಂಬಲಿತ ಸದಸ್ಯರೇ ಆಯ್ಕೆಯಾಗಲಿದ್ದು, ಆಡಳಿತವನ್ನು ನಡೆಸಲಿದ್ದಾರೆ.   ಕಾಂಗ್ರೆಸ್ ಪಕ್ಷದ ದುರಾಡಳಿತ ಹಾಗೂ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಲ್ಲಿ ಶಾಸಕರ ತಾರತಮ್ಯವನ್ನು ಗಮನಿಸಿರುವ…

Read More

UN networks ಮುನ್ನೂರು : ಅಭಿವೃದ್ಧಿ ಕಾರ್ಯ ಶೂನ್ಯಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ ಉಳ್ಳಾಲ:  ಮುನ್ನೂರು ಗ್ರಾಮದ ಏಳನೇ ವಾರ್ಡಿನಲ್ಲಿ ಹಲವು ಬಾರಿ  ಒಂದೇ ಪಕ್ಷದ ಬೆಂಬಲಿತರು ಪಂಚಾಯಿತಿ ಸದಸ್ಯರಾಗಿ ಆಯ್ಕೆಗೊಂಡರೂ ಅಭಿವೃದ್ಧಿ ಕಾರ್ಯಗಳೇ ನಡೆದಿಲ್ಲ.  ಗ್ರಾಮಸ್ಥರ ಬೇಡಿಕೆಗಳು ಹಲವು ಇದ್ದರೂ ಇದಕ್ಕೆ  ಶಾಸಕರು, ಸಂಸದರು ಸ್ಪಂಧಿಸುತ್ತಿಲ್ಲ. ಈ ನಿಟ್ಟಿನಲ್ಲಿ ಮುನ್ನೂರು ಗ್ರಾಮದ ಏಳನೇ  ವಾರ್ಡಿನ ಸದಸ್ಯರು ಚುನಾವಣೆ ಬಹಿಷ್ಕರಿಸುವ ಕುರಿತು ಬ್ಯಾನರ್ ಹಾಕಿ  ಎಚ್ಚರಿಕೆಯನ್ನು ನೀಡಿದ್ದಾರೆ.  ಈ ಹಿಂದೆ  ಮುನ್ನೂರು ಗ್ರಾ.ಪಂ 7ನೇ ವಾರ್ಡಿನಲ್ಲಿ  ಕಾಂಗ್ರೆಸ್ ಬೆಂಬಲಿತ ಹಸೈನಾರ್, ವಿಲ್ಫ್ರೆಡ್ , ಭಾಸ್ಕರ್ , ಪುಷ್ಪಾ ಅವರು ಪಂಚಾಯಿತಿ ಸದಸ್ಯರುಗಳಾಗಿ ಆಯ್ಕೆಯಾಗಿದ್ದರು.  ಅದಕ್ಕೂ ಮುನ್ನ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳೇ  ಸದಸ್ಯರಾಗಿದ್ದರು. ಆದರೂ ಈವರೆಗೆ ವಾರ್ಡಿನ ಅಭಿವೃದ್ಧಿಗೆ ಯಾವುದೇ  ರೀತಿಯ ಸ್ಪಂಧನೆ ಮಾಡಿಲ್ಲ.  ಪಂಜಿಗುರಿ ನಿವಾಸಿಗಳಿಗೆ  ಅಭಿವೃದ್ಧಿ ಕಾರ್ಯಗಳ ವ್ಯವಸ್ಥೆಯೇ ಸಿಗುತ್ತಿಲ್ಲ. ಚರಂಡಿ ಹಾಗೂ ರಸ್ತೆ ನಿರ್ಮಾಣದ  ಬಗ್ಗೆ ಹಲವು ವರ್ಷಗಳಿಂದ  ಮನವಿ ನೀಡಿದರೂ ಸ್ಪಂಧನೆ ಸಿಕ್ಕಿಲ್ಲ. ಅದಕ್ಕಾಗಿ ಚುನಾವಣೆಯನ್ನು ಬಹಿಷ್ಕರಿಸುತ್ತಿದ್ದೇವೆ ಎಂದು…

Read More

UN networks ಉಳ್ಳಾಲ: ದೇರಳಕಟ್ಟೆಯ ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ಕ್ಯಾನ್ಸರ್‌ ಶಸ್ತ್ರಚಿಕಿತ್ಸಾ ವಿಭಾಗದ ತಜ್ಞ ವೈದ್ಯರುಗಳ ತಂಡದಿಂದ ನಾಲ್ಕು ವರ್ಷದ ಬಾಲಕನ ಕಾಲಿನ ತೊಡೆಯಲ್ಲಿ ಕ್ಯಾನ್ಸರ್ ಬಾದಿತ ಎಲುಬಿನ ಅಸ್ಥಿಮಜ್ಜೆಯ ಕ್ಯಾನ್ಸರಿನ , ಅಪರೂಪದ ಯಶಸ್ವಿ ಶಸ್ತ್ರಕ್ರಿಯೆಯನ್ನು ನಡೆಸಲಾಗಿದೆ. ಈ ಬಗ್ಗೆ ಆಸ್ಪತ್ರೆಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಕ್ತಾನ್ಸರ್ ತಜ್ಞ ಡಾ. ಜಲಾಲುದ್ದೀನ್ ಮಾತನಾಡಿ ಇದೊಂದು ಅಪರೂಪದ ಹಾಗೂ ಸಣ್ಣ ಮಕ್ಕಳಿಗೆ ಈ ರೀತಿಯ ಶಸ್ತ್ರಕ್ರಿಯೆಯನ್ನು ನಡೆಸಿರುವುದು ಅಂಕಿಅಂಶಗಳ ಆಧಾರದಲ್ಲಿ ಭಾರತದಲ್ಲಿಯೇ ಪ್ರಥಮವಾಗಿದೆ. ಶಸ್ತ್ರಚಿಕಿತ್ಸೆಗೆ ಒಳಪಟ್ಟ ಮಗುವಿನ ಕುಟುಂಬದವರು ಭಾರತದಾದ್ಯಂತ ಹಲವು ಪರಿಣಿತ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ತಜ್ಞರನ್ನು ಸಂದರ್ಶಿಸಿದಾಗ ಕ್ಯಾನ್ಸರ್ ಭಾದಿತ ಕಾಲಿನ ಭಾಗವನ್ನು ತುಂಡರಿಸುವುದು ಒಂದೇ ಪರಿಹಾರ ಎಂದು ತಿಳಿಸಿದಾಗ ಗಲಿಬಿಲಿಗೊಳಗಾದ ಕುಟುಂಬ ಸದಸ್ಯರು ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ಕ್ಯಾನ್ಸರ್‌ ಶಸ್ತ್ರಚಿಕಿತ್ಯ ವಿಭಾಗದ ಮುಖ್ಯಸ್ಥ ಜಲಾಲುದ್ದೀನ್ ಅವರನ್ನು ಭೇಟಿ ಮಾಡಿದಾಗ ಅವರು ಇಂತಹ ಅನೇಕ ಸಂಕೀರ್ಣ ಶಸ್ತ್ರಚಿಕಿತ್ಸೆಗಳನ್ನು ನಡೆಸಿರುವಂತಹ ಪ್ರಸ್ತುತ ಯೆನೆಪೋಯ ಪರಿಗಣಿತ ವಿಶ್ವವಿದ್ಯಾಲಯದ ಉಪವಕುಲಪತಿ ಡಾ.…

Read More

UN networks ಉಳ್ಳಾಲ: ಮಂಗಳೂರು ವಿಧಾನ ಸಭಾ ಕ್ಷೇತ್ರದ ಹಲವು ಗ್ರಾಮಗಳಲ್ಲಿ ಹಾಗೂ ಬಾಳೆಪುಣಿ ಪಂಚಾಯತ್ ವ್ಯಾಪ್ತಿಯ ನಾಲ್ಕನೇ ವಾರ್ಡಿನಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಶಾಸಕ ಯು.ಟಿ.ಖಾದರ್ ಸಾಧನೆಗಳ ಕುರಿತ ಕರಪತ್ರಗಳನ್ನು ಹಂಚುತ್ತಿದ್ದು ಈ ಬಗ್ಗೆ ಬಿಜೆಪಿ ಕ್ಷೇತ್ರಾಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ಅವರು ಮಂಗಳೂರು ಸಹಾಯಕ ಆಯುಕ್ತ ಮದನ್ ಮೋಹನ್ ಅವರಿಗೆ ದೂರು ನೀಡಿದ್ದಾರೆ. ಯು.ಟಿ.ಖಾದರ್ ಅವರ ಭಾವಚಿತ್ರವುಳ್ಳ ಮತ್ತು ಅವರ ಸಾಧನೆ, ಅಭಿವೃದ್ಧಿಯ ಬಗ್ಗೆ ಉಲ್ಲೇಖದ ಕರಪತ್ರಗಳನ್ನು ಮತದಾರರಿಗೆ ಹಂಚಿರುವುದಾಗಿ ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದು, ಕರಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಬಿಜೆಪಿ ಕ್ಷೇತ್ರಾಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ಚುನಾವಣಾಧಿಕಾರಿ ಮಂಗಳೂರು ಸಹಾಯಕ ಆಯುಕ್ತರಾದ ಮದನ್ ಮೋಹನ್ ಅವರಿಗೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ. ಖಾದರ್ ಅವರನ್ನು ಪ್ರತಿನಿಧಿಸುವ ಮಂಗಳೂರು ಕ್ಷೇತ್ರದಲ್ಲಿ ಈ ರೀತಿಯ ಕರಪತ್ರಗಳು ಮತದಾರರ ಮನೆ ಮನೆ ಹರಿದಾಡುತ್ತಿರುವುದು ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ.

Read More