UN NETWORKS
ತಲಪಾಡಿ : ಪ್ರಾಚೀನ ಭಾರತದಿಂದ ಋಷಿ ಮುನಿಗಳು, ತಪಸ್ವಿಗಳು ಮಾಡಿದ ಸಾಧನೆಯನ್ನು ಪತಂಜಲಿ ಮಹರ್ಷಿ ಯೋಗ ವಿಜ್ಞಾನದ ರೂಪದಲ್ಲಿ ಜನಮಾನಸಕ್ಕೆ ತಲುಪಿಸುವ ಕಾರ್ಯ ಮಾಡಿದ್ದು ಇಂದು ಯೋಗ ವಿದ್ಯೆಯ ಮೂಲಕ ಜಗತಿನಾದ್ಯಂತ ಭಾರತದ ಆಧ್ಯಾತ್ಮಿಕ ಶಕ್ತಿ ಪ್ರದರ್ಶನಗೊಳ್ಳುತ್ತಿದ್ದು, ಇದರ ಉಪಯೋಗ ಪ್ರತಿಯೊಬ್ಬರು ಪಡೆಯುವಂತಾಗಬೇಕು ಎಂದು ಮಂಗಳೂರು ಶಾರದಾ ವಿದ್ಯಾಸಂಸ್ಥೆಗಳ ಅಧ್ಯಕ್ಷ ಪ್ರೊ| ಎಂ.ಬಿ. ಪುರಾಣಿಕ್ ಅಭಿಪ್ರಾಯಪಟ್ಟರು.

ಅವರು ತಲಪಾಡಿಯ ಶಾರದಾ ಆಯುರ್ವೇದ ಆಸ್ಪತ್ರೆಯ ಸಭಾಂಗಣದಲ್ಲಿ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಮುಂದಿನ 15 ದಿನಗಳ ಕಾಲ ರೋಗಕ್ಕೆ ಅನುಸಾರವಾಗಿ ಯೋಗ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಯೋಗ ವಿಜ್ಞಾನ ಒಂದು ಧಾರ್ಮಿಕ ನಂಬಿಕೆಯಲ್ಲ ಅದು ತಪ್ಪಸ್ವಿಗಳ ಸಾಧನೆ ಇದನ್ನು ವಿಶ್ವದಾದ್ಯಂತ ಪಸರಿಸುವ ನಿಟ್ಟಿನ್ಲಲಿ ವಿಶ್ವಸಂಸ್ತೆಯಲ್ಲಿ ನಡೆದ ಸಭೆಯಲ್ಲಿ ಯೋಗ ದಿನಾಚರಣೆಯ ಠರಾವು ಮಂಡಿಸಿದ್ದರು. ಪಾಶ್ಚಿಮಾತ್ಯ ರಾಷ್ಟ್ಗ್ರಗಳು,ಗಲ್ಪ್ ರಾಷ್ಟ್ರಗಳು ಸೇರಿದಂತೆ ವಿಶ್ವದ 175 ರಾಷ್ಟ್ರಗಳು ಯೋಗ ದಿನಾಚರಣೆಯನ್ನು ಆಚರಿಸುತ್ತಿದ್ದು ಬಾರತದಲ್ಲಿಯೂ ಯೋಗಕ್ಕೆ ಹೆಚ್ಚಿನ ಮಹತ್ವ ಬಂದಿದೆ ಎಂದರು.
ಕಾರ್ಯಕ್ರಮದಲ್ಲಿ ಶಾರದಾ ಆಯುರ್ವೇದ ಆಸ್ಪತ್ರೆಯ ಮುಖ್ಯ ಅಧೀಕ್ಷಕ ಡಾ|ರವಿ ಗಣೇಶ್ ಮೊಗ್ರ ಮಾತನಾಡಿ ಯೋಗ ದಿನಾಚರಣೆ ಒಂದು ದಿನಕ್ಕೆ ಸಿಇಮಿತವಾಗದೆ ಮುಂದಿನ 15 ದಿನಗಳ ಕಾಲ ಈ ಯೋಗ ಶಿಬಿರ ನಡೆಯಲಿದ್ದು ಇದರ ಸದುಪಯೋಗ ಎಲ್ಲರೂ ಪಡೆಯುವಂತಾಗಬೇಕು. ಯೋಗದಿಂದ ಮನಸ್ಸನ್ನು ಸ್ಥೀಮಿತದಲ್ಲಿರಿಸುವ ಶಕ್ತಿ ಯೋಗಕ್ಕಿದೆ. ಯೋಗ ಅಭ್ಯಾಸದಿಂದ ನಮ್ಮಲ್ಲಿರುವ ಕಾಮ ಕ್ರೋಧದಂತಹ ವಿಚಾರಗಳನ್ನು ಹತೋಟಿಗೆ ತರಲು ಸಾಧ್ಯವಿದ್ದು ಮಾನಸಿಕ ಆರೋಗ್ಯ ಕಾಪಾಡುವಲ್ಲಿ ಸಹಕಾರಿಯಾಗಿದೆ ಎಂದರು. ತಲಪಾಡಿ ಶಾರದಾ ವಿದ್ಯಾನಿಕೇತನದ ಆಡಳಿತ ಅಧಿಕಾರಿ ವಿವೇಕ್ ತಂತ್ರಿ ಉಪಸ್ಥಿತರಿದ್ದರು.
ಆಸ್ಪತ್ರೆಯ ಸ್ವಸ್ಥ ವೃತ್ತ ಮತ್ತು ಯೋಗ ವಿಭಾಗದ ಮುಖ್ಯಸ್ಥೆ ಡಾ| ಸೌಮ್ಯಾ ಕೊಟ್ಯಾನ್, ಪ್ರಕೃತಿ ಚಿಕಿತ್ಸಾ ಸಒತ್ರೆಯ ಡಾ| ವಿದ್ಯಾ ಶೆಟ್ಟಿ ಮತ್ತು ಡಾ| ಸುಷ್ಮಿತಾ ಲಯಬದ್ಧ ಯೋಗದ ಪ್ರಾತ್ಯಾಕ್ಷತೆ ನೀಡಿದರು.
ಶಾಲಕ್ಯಾ ತಂತ್ರ ವಿಭಾಗದ ಡಾ| ವಿದ್ಯಾಲಕ್ಷ್ಮಿ ಪ್ರಾರ್ಥನೆ ನೆರವೇರಿಸಿದರು. ಶಾರದಾ ವಿದ್ಯಾನಿಕೇತನ ವಿದ್ಯಾರ್ಥಿಗಳು ಯೋಗ ಪ್ರಾತ್ಯಾಕ್ಷಿತೆ ನಡೆಸಿಕೊಟ್ಟರು. ತಲಪಾಡಿ ಶಾರದಾ ಆಯುರ್ಧಾಮದ ಯೋಜನಾ ಅಧಿಕಾರಿ ವಿಕ್ರಂ ಕುಂಟಾರು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.


