Author: UllalaVani

Kannada News From Coastal Karnataka

UN networks ಉಳ್ಳಾಲ: ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಮುಲಾರ ಗೋಪಾಲಕೃಷ್ಣ ಭಜನಾ ಮಂದಿರದಲ್ಲಿ ವಿಕೃತಿ ಮೆರೆದಿರುವ ದುಷ್ಕರ್ಮಿಗಳು ಭಗವಾಧ್ವಜದ ಮೇಲೆ ಮಲ ಮೂತ್ರ ವಿಸರ್ಜಿಸಿ ಕಳವಿಗೆ ವಿಫಲ ಯತ್ನ ನಡೆಸಿದ್ದಾರೆ. ಈ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳವಾರ ಸಂಜೆ ಉಳ್ಳಾಲ ಜಂಕ್ಷನ್ನಿನಲ್ಲಿರುವ ಕೊರಗಜ್ಜನ ಕಟ್ಟೆಯ ಕಾಣಿಕೆ ಹುಂಡಿಯಲ್ಲಿ ಕಾಂಡೋಂ ಮತ್ತು ಬಿಜೆಪಿ ಮುಖಂಡರ ಪತ್ರಿಕೆ ಜಾಹೀರಾತಿನಲ್ಲಿ ಅವಾಚ್ಯ ಶಬ್ದಗಳನ್ನು ಬರೆದಿರುವ ಪತ್ರ ಇರುವುದು ಬೆಳಕಿಗೆ ಬರುತ್ತಿದ್ದಂತೆ, ಇದೀಗ ಕೊಣಾಜೆ ಮಂದಿರದಲ್ಲಿ ದುಷ್ಕøತ್ಯ ಎಸಗಲಾಗಿದೆ. ಮಂದಿರದ ಬಾಗಿಲು ಒಡೆಯಲು ಯತ್ನಿಸಿದ ದುಷ್ಕರ್ಮಿಗಳು ಸ್ಥಳದಲ್ಲಿದ್ದಂತಹ ಭಗವಾಧ್ವಜಕ್ಕೆ ಮಲಮೂತ್ರ ವಿಸರ್ಜಿಸಿ ತೆರಳಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸ್ ಕಮೀಷನರ್ ಭೇಟಿ ನೀಡಿದ್ದಾರೆ. ಕಳವಿಗೆ ಯತ್ನಿಸಿರುವವರು ದುಷ್ಕøತ್ಯ ಎಸಗಿರುವ ಸಾಧ್ಯತೆ ಇದೆ ಎಂದು ತಿಳಿಸಿದರು.

Read More

ಉಳ್ಳಾಲ: ಕಾಣಿಕೆ ಹುಂಡಿಯಲ್ಲಿ ಕಾಂಡಾಮ್ ಮತ್ತು ಬಿಜೆಪಿ ನಾಯಕರ ಹಿಯ್ಯಾಳಿಸಿ ಬೈದ ಪತ್ರ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ ಸಾರ್ವಜನಿಕ ಶ್ರೀ ಕೊರಗಜ್ಜ , ಗುಳಿಗಜ್ಜ ಸೇವಾ ಸಮಿತಿ ಗೆ ಪೊಲೀಸ್ ಕಮೀಷನರ್ ಭೇಟಿ ನೀಡಿದ್ದಾರೆ. ಬುಧವಾರ ಸ್ಥಳಕ್ಕೆ ಭೇಟಿ ನೀಡಿದ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರುಆರೋಪಿಗಳನ್ನು ಶೀಘ್ರದಲ್ಲಿ ಪತ್ತೆ ಮಾಡುವ‌ ಭರವಸೆ ನೀಡಿದ್ದಾರೆ. ಆರೋಪಿಗಳ ಪತ್ತೆಗೆ ಸಾಮೂಹಿಕ ಪ್ರಾರ್ಥನೆ ನಡೆಸಿದ ಸಾರ್ವಜನಿಕರು ಈ ಸಂದರ್ಭದಲ್ಲಿ ನಡೆಸಿದ್ದಾರೆ.

Read More

UN networks ಉಳ್ಳಾಲ: ಕೊರಗಜ್ಜನ ಕಟ್ಟೆಯ ಕಾಣಿಕೆ ಹುಂಡಿಗೆ ದುಷ್ಕರ್ಮಿಗಳು ಕಾಂಡೋಮ್ ಹಾಕಿರುವ ಘಟನೆ ನಡೆದಿದೆ. ಉಳ್ಳಾಲ ಪ್ಯಾರೀಸ್ ಜಂಕ್ಷ‌ನ್ ನಲ್ಲಿರುವ ಕೊರಗಜ್ಜನ ಕಟ್ಟೆಯಲ್ಲಿ ಕಾಣಿಕೆ ಹುಂಡಿಯಲ್ಲಿ ಕಾಂಡೋಮ್ ಹಾಕಿದ್ದಾರೆ.ಉಳ್ಳಾಲ ಠಾಣಾ ಪೊಲೀಸರಿಂದ ಪರಿಶೀಲನೆ ನಡೆಸಲಾಗಿದೆ.

Read More

UN networks ಉಳ್ಳಾಲ: ನೇತ್ರಾವತಿ ಸೇತುವೆಯಲ್ಲಿ ಕಸ ಬಿಸಾಡುವವರ ವಿರುದ್ಧ ವೃಕ್ಷ ಎನ್ ಜಿ ಒ ನ ಬಾಸ್ಕಿಯಾಬ್ಸ್ ೯ ಯುವ ತಂಡದ ವತಿಯಿಂದ ಜಾಗೃತಿ ಜಾಥಾ ಎರಡನೇ ದಿನ ನಡೆಯಿತು. ಸುಮಾರು 100 ರಷ್ಟು ಕಾರ್ಯಕರ್ತರು ನೇತ್ರಾವತಿ ಸೇತುವೆಯುದ್ದಕ್ಕೂ ಸಾಲಾಗಿ ನಿಂತು ಮೊಬೈಲ್ ಟಾಚ್೯ ಹಿಡಿದು ಕಸ ಬಿಸಾಡದಂತೆ ಎಚ್ಚರಿಕೆಯ ಜಾಗೃತಿ ಮೂಡಿಸಿದರು. ಪರಿಸರ ಮಾಲಿನ್ಯದ ವಿರುದ್ಧ ಸಂಸ್ಥೆ ಪರಿಣಾಮಕಾರಿಯಾಗಿ ಜಾಗೃತಿ ಜಾಥಾಗಳನ್ನು ನಡೆಸುತ್ತಾ ಬಂದಿದೆ. ಇತ್ತೀಚೆಗೆ ಬೆಂಗ್ರೆ ಸಮುದ್ರ ತೀರದಲ್ಲಿ ತ್ಯಾಜ್ಯದ ರಾಶಿ ವಿರುದ್ಧ ಜಾಗೃತಿಗೆ ಮುಂದಾದಾಗ, ಅಲ್ಲಿ ಶೇಖರಣೆಯಾಗುವ ತ್ಯಾಜ್ಯವೆಲ್ಲ ನೇತ್ರಾವತಿ ಸೇತುವೆಯಿಂದ ಎಸೆದದ್ದಾಗಿದೆ ಎಂಬುದು ಗೊತ್ತಾದ ಹಿನ್ನೆಲೆಯಲ್ಲಿ ನೇತ್ರಾವತಿ ಸೇತುವೆಯಲ್ಲೇ ಜಾಥಾ ಕೈಗೊಳ್ಳಲು ತೀರ್ಮಾನಿಸಿ, ಇಂದು ಎರಡನೇ ದಿನ ನಸುಕಿನಿಂದ ಕಾರ್ಯಕ್ರಮ ನಡೆಸಿದೆ.ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಶೀನ ಶೆಟ್ಟಿ, ಬಿಗ್ ಬ್ಯಾಂಗ್ ಸಕ್ರಿಯ ಸದಸ್ಯ ಮಹಮ್ಮದ್ ಫೌಝಾನ್ ಶೇಖ್, ಹಸಿರುದಳ ನಾಗರಾಜ್ ರಾಘವ್ ಅಂಚನ್, ಎಪಿಡಿ ಫೌಂಡೇಶನ್ ನ ವಾಣಿಶ್ರೀ ಬಿ.ಆರ್ , ಮನಪಾ ಸದಸ್ಯೆ…

Read More

UN networks ಮಂಗಳೂರು: ತೊಕ್ಕೊಟ್ಟು ಒಳಪೇಟೆಯ ಬೀಫ್ ಸ್ಟಾಲ್ ಗೆ ಬೆಂಕಿ ಹಚ್ಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ನಾಗರಾಜ್ (32)ಬಂಧಿತ ಆರೋಪಿಯಾಗಿದ್ದಾನೆ. ತೊಕ್ಕೊಟ್ಟು ಒಳಪೇಟೆಯಲ್ಲಿ 4 ಬೀಪ್ ಸ್ಟಾಲ್ ಗಳಿಗೆ ಬೆಂಕಿ‌ ಹಚ್ಚಲಾಗಿತ್ತು. ಮೊಹಮ್ಮದ್ ಹನೀಫ್ ಎಂಬವರ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು. ಪ್ರಕರಣ ಸಂಬಂಧಿಸಿ ಪೊಲೀಸರು ಸಿಸಿಟಿವಿ ಆಧರಿಸಿ ತನಿಖೆ ಕೈಗೊಂಡಿದ್ದರು. ಜ.8ರಂದು ರಾತ್ರಿ ಕೃತ್ಯ ನಡೆದಿದ್ದ ದಿನ ನಾಗರಾಜ್ ಆ ಭಾಗದಲ್ಲಿ ಸುತ್ತಾಡುವುದು ಕಂಡುಬಂದಿದ್ದರಿಂದ ಆತನನ್ನು ವಶಕ್ಕೆ ಪಡೆದು ವಿಚಾರಿಸಿದ್ದಾರೆ. ಈ ವೇಳೆ, ತಾನೇ ಕೃತ್ಯ ಮಾಡಿದ್ದಾಗಿ ಒಪ್ಪಿದ್ದಾಗಿ ಹೇಳಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

Read More

UN networks ಉಳ್ಳಾಲ :ಪಾದಾಚಾರಿ‌ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ ಆರೋಪಿಯನ್ನು ಸ್ಥಳೀಯರು ಹಿಡಿದು ಉಳ್ಳಾಲ ಪೊಲೀಸರಿಗೆ ಒಪ್ಪಿಸಿದ್ದು ಆರೋಪಿಯ ವಿರುದ್ದ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಸ್ಥಳೀಯ ಮಹಿಳೆಯರು ಪೊಲೀಸ್ ಠಾಣೆಯಲ್ಲಿ ಧರಣಿ ನಡೆಸಿದ ಘಟನೆ ನಡೆದಿದೆ. ಉಳ್ಳಾಲ ಉಳಿಯಕ್ಕೆ ಸಂಪರ್ಕಿಸುವ ಉಳ್ಳಾಲ ಬಂಡಿಕೊಟ್ಯ , ಗೊಳಿಯಡಿ ರಸ್ತೆಯಾಗಿ ಮಹಿಳೆಯರು ನಡೆದುಕೊಂಡು ಹೋಗುತ್ತಿದ್ದಾಗ ರಸ್ತೆ ಬದಿಯ ಓಣಿ ಮತ್ತು ಬೈಕ್ ನಲ್ಲಿ ಬರುವ ಆಗಂತುಕರು ಮಹಿಳೆಯ ಮೈ ಸವರಿಕಂಡು ಹೋಗುತ್ತಿದಗದು ಕಳೆದ 15 ದಿನಗಳಿಂದ ಮೂರಿ ನಾಲ್ಕು ಬಾರಿ ಇಂತಹ ಘಟನೆಗಳು ನಡೆದಿತ್ತು. ಶುಕ್ರವಾರವೂ ಇಂತಹ ಘಟನೆ ನಡೆದಾಗ .ಸ್ಥಳೀಯರು ಹಿಡಿದಿದ್ದು ಅಲೇಕಳ ನಿವಾಸಿ 16 ರ ಬಾಲಕನನ್ನು ಉಳ್ಳಾಲ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.

Read More

ಮುಡಿಪು: ಅಕ್ರಮ ಜಾನುವಾರು ಸಾಗಾಟ ನಡೆಸುತ್ತಿದ್ದ ಆರೋಪದ ಹಿನ್ನಲೆಯಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರು ಟೆಂಪೋ ಅಡ್ಡಹಾಕಿದ ಘಟನೆ ಮುಡಿಪು ಸಮೀಪ‌ ನಡೆದಿದೆ. ಕೋಟೆಕಾರು ಡೈರಿಯಿಂದ, ಬಾಕ್ರಬೈಲು ಡೈರಿಗೆ ಆರು ಹಸುಗಳು, ಒಂದು ಕರುಕೊಂಡೊಯ್ಯಲಾಗುತ್ತಿದ್ದ ಲಾರಿಯನ್ನು ಸಂಘಟನೆಯ ಕಾರ್ಯಕರ್ತರು ಅಡ್ಡ ಹಾಕಿದ್ದಾರೆ. ಸ್ಥಳಕ್ಕೆ ಕೊಣಾಜೆ ಪೊಲೀಸರು ಆಗಮಿಸಿ ಟೆಂಪೋ ವಶಪಡಿಸಿಕೊಂಡಿದ್ದಾರೆ‌ ವೈದ್ಯರ ಅನುಮತಿ ಪತ್ರ ಪಡೆದು ಸಾಗಾಟವನ್ನು ನಡೆಲಾಗಿದೆ ಎಂದು ತಿಳಿದು ಬಂದಿದ್ದು ಕೊಣಾಜೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Read More

UN networks ಉಳ್ಳಾಲ: ವೈಡ್ ಬಾಲ್ ರೈಟ್ ಎಂದು ಹೇಳಿದ ವಿಚಾರಕ್ಕೆ ಸಂಬಂಧಿಸಿ ಕೆ.ಸಿ ರೋಡ್ ಮತ್ತು ಅಳೇಕಲ ದ ಎರಡು ತಂಡಗಳ ನಡುವೆ ಗಲಾಟೆ ಆರಂಭವಾಗಿ ಮಾರಾಮಾರಿ ನಡೆದು ಪೊಲೀಸರು ಲಾಠಿಯೇಟು ನೀಡಿದ ಘಟನೆ ಉಳ್ಳಾಲದ ಅಳೇಕಲ ಮದನಿ ಶಾಲೆಯಲ್ಲಿ ಶನಿವಾರ ನಡೆದಿದ್ದು, ಇದೀಗ ವೀಡಿಯೋ ವೈರಲ್ ಆಗುವ ಮೂಲಕ ಬೆಳಕಿಗೆ ಬಂದಿದೆ. ಉಳ್ಳಾಲ್ ಕ್ರಿಕೇಟ್ ಅಸೋಸಿಯೇಷನ್ ವತಿಯಿಂದ ಅಳೇಕಲದ ಮದನಿ ಶಾಲಾ ಮೈದಾನದಲ್ಲಿ ಅಂಡರ್ ಆಮ್೯ ಟೂರ್ನಮೆಂಟ್ ಆಯೋಜಿಸಲಾಗಿತ್ತು. ಆಟದ ನಡುವೆ ವೈಡ್ ಬಾಲ್ ಕುರಿತು ವಿವಾದ ಏರ್ಪಟ್ಟಿತ್ತು. ಅದು ತಾರಕಕ್ಕೇರಿ ಹೊಯ್ಕೈ ನಡೆದಿತ್ತು. ಬಳಿಕ ಮಾರಾಮಾರಿ ನಡೆದಿದ್ದು, ಇದನ್ನು ಕಂಡ ಉಳ್ಳಾಲ ಪೊಲೀಸರು ಕ್ರೀಡಾಂಗಣಕ್ಕೆ ತೆರಳಿ ಮಾರಾಮಾರಿಯಲ್ಲಿ ಭಾಗವಹಿಸಿದ್ದ ಮಂದಿಗೆ ಲಾಠಿಯೇಟು ನೀಡಿ ಓಡಿಸಿದ್ದಾರೆ. ಘಟನೆ ಕುರಿತು ಯಾವುದೇ ಪ್ರಕರಣಗಳು ದಾಖಲಾಗಿಲ್ಲ.

Read More

UN networksಉಳ್ಳಾಲ: ಟೈಲರ್ ಮಹಿಳೆ ಗಂಭೀರ ಗಾಯ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಕ್ಷಾ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮದಕ ತಾರಿಗುಡ್ಡೆ ನಿವಾಸಿ ಶೋಭಾ ಗಂಭೀರ ಗಾಯಗೊಂಡು ನಿಗೂಢವಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಕ್ಷಾ ಚಾಲಕ ಚೆಂಬುಗುಡ್ಡೆ ನಿವಾಸಿ ಸಾದಿಕ್‌(25) ಎಂಬಾತನನ್ನು ಸಂಚಾರಿ ಪೊಲೀಸರ ವಶಕ್ಕೆ ಪಡೆದುಕೊಂಡಿದ್ದಾರೆ. ಸಂಚಾರಿ ಎಸಿಪಿ ಠಾಣೆಯಲ್ಲಿ‌ ವಿಚಾರಣೆ ನಡೆಸಲಾಗುತ್ತಿದೆ‌.

Read More

UN networks ಉಳ್ಳಾಲ: ಬೀಚ್ ಬಸ್ಸು ನಿಲ್ದಾಣ ಬಳಿ ರಾತ್ರಿ ಹೊತ್ತು ವಿನಾ ಕಾರಣ ತಿರುಗುತ್ತಿದ್ದವರನ್ನು ಠಾಣೆ ಮಟ್ಟಿಲೇರಿಸಿದ ಕಮಿಷನರ್ ಶಶಿಕುಮಾರ್ ಇದೀಗ ಎರಡನೇ ಬಾರಿಗೆ ಉಳ್ಳಾಲಕ್ಕೆ ಆಗಮಿಸಿ ಉಳ್ಳಾಲ ದರ್ಗಾ ಸೇರಿದಂತೆ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಿದ್ದು, ಉಳ್ಳಾಲದಾದ್ಯಂತ ಪಾದಯಾತ್ರೆ ನಡೆಸಿ ಕೋಡಿಯಲ್ಲಿ ಯುವಕರೊಂದಿಗೆ ಕ್ರಿಕೆಟ್ ಆಟವಾಡಿ ಪೆÇಲೀಸರು ಜನರೊಂದಿಗಿದ್ದಾರೆ ಎನಉವ ಸಂದೇಶವನ್ನು ನೀಡಿದ್ದಾರೆ. ಕಳೆದ ವಾರ ಉಳ್ಳಾಲ, ಸೋಮೇಶ್ವರ ಉಚ್ಚಿಲ ಬೀಚ್ ಸೇರಿದಂತೆ ಬಸ್ಸು ನಿಲ್ದಾಣಗಳಲ್ಲಿ ರಾತ್ರಿ ಪಾರ್ಟಿ ಮಾಡುತ್ತಿದ್ದ ಯುವಕರಿಗೆ ಠಾಣೆಯ ರುಚಿ ತೋರಿಸಿದ್ದರು. ಶನಿವಾರ ಬೀಫ್ ಸ್ಟಾಲ್‍ಗೆ ಬೆಂಕಿ ಬಿದ್ದ ಘಟನೆಯ ನಿಮಿತ್ತ ಆಗಮಿಸಿದ್ದ ಕಮಿಷನರ್ ಶಶಿಕುಮಾರ್ ಉಳ್ಳಾಲದಲ್ಲಿ ಕೋಮು ಸೌಹಾರ್ಧತೆ ಕದಡದಿರಲಿ ಎನ್ನುವ ನಿಟ್ಟಿನಲ್ಲಿ ಉಳ್ಳಾಲ ದರ್ಗಾ ಮತ್ತು ಮೊಗವೀರಪಟ್ಣದ ವ್ಯಾಘ್ರ ಚಾಮುಂಡೇಶ್ವರೀ ದೇವಸ್ಥಾನಕ್ಕೆ ಭೆಟಿ ನೀಡಿ ಧಾರ್ಮಿಕ ಮುಖಂಡರೊಂದಿಗೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಡಿಸಿಪಿ ಹರಿರಾಂ, ಉಳ್ಳಾಲ ಠಾಣಾ„ಕಾರಿ ಸಂದೀಪ್ ಎಂ.ಜಿ., ಸಿಸಿಬಿ ಇನ್ಸ್‍ಪೆಕ್ಟರ್ ಮಹೇಶ್ ಕುಮಾರ್, ಪ್ರಕಾಶ್ ಮತ್ತು ಪೆÇಲೀಸ್…

Read More