Author: UllalaVani

Kannada News From Coastal Karnataka

ಉಳ್ಳಾಲ : ಉಳ್ಳಾಲದ ಸಮುದಾಯ ಆರೋಗ್ಯ ಕೇಂದ್ರವನ್ನು ತುರ್ತು ಸ್ಥಿತಿಯಲ್ಲಿ 50 ಆಕ್ಸಿಜನ್ ಬೆಡ್ ಗಳೊಂದಿಗೆ ಸಿದ್ಧ ಪಡಿಸಲಾಗಿದೆ. ಜಿಲ್ಲಾಡಳಿತ ಯೇನೆಪೋಯ ವೈದ್ಯಕೀಯ ಆಸ್ಪತ್ರೆಯೊಂದಿಗೆ ಕೋವಿಡ್ ಕೇರ್ ನಿರ್ವಹಣೆ ನಿಟ್ಟಿನಲ್ಲಿ ಮಾತುಕತೆ ನಡೆಸಿದೆ. ಇದರೊಂದಿಗೆ ಆಕ್ಸಿಜನ್ ನಿರ್ವಹಣೆ ( ಕನ್ಸರ್‍ವೇಟರ್)ಘಟಕವನ್ನು ಸಮುದಾಯ ಆರೋಗ್ಯ ಕೇಂದ್ರದಲ್ಲಿಯೇ ಸ್ಥಾಪಿಸಲು ಜಿಲ್ಲಾಡಳಿತ ಒಪ್ಪಿಗೆ ನೀಡಿ ರೂ.30 ಲಕ್ಷ ರೂ ಬಿಡುಗಡೆಗೊಳಿಸಿದೆ ಎಂದು ಶಾಸಕ ಯು.ಟಿ. ಖಾದರ್ ತಿಳಿಸಿದರು.ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಸೋಂಕಿತರಿಗೆ ತುರ್ತು ಚಿಕಿತ್ಸೆ ಆರಂಬಿಸುವ ನಿಟ್ಟಿನಲ್ಲಿ ಸಮುದಾಯ ಆರೋಗ್ಯ ಕೇಂದ್ರದಲ್ಲಿರುವ ಆಕ್ಸಿಜನ್ ಬೆಡ್ ಗಳ ಸಿದ್ಧತೆಯ ಕುರಿತು ಜಿಲ್ಲಾ ಆರೋಗ್ಯ ಅಧಿಕಾರಿ ಮತ್ತು ಯೆನೆಪೆÇೀಯ ವೈದ್ಯಕೀಯ ಆಸ್ಪತ್ರೆಯ ಮುಖ್ಯಸ್ಥರ ಜೊತೆ ಚರ್ಚೆ ನಡೆಸಿ ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ಕೊರೊನ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕೊರೊನ ಸೋಂಕಿತರಿಗೆ ವೈದ್ಯಕೀಯ ಚಿಕಿತ್ಸೆಗೆ ಸರ್ವ ಸಿದ್ದತೆಯನ್ನು ನಡೆಸುತ್ತಿದೆ. ಈಗಾಗಲೇ ಮಂಗಳೂರಿನ ಜಿಲ್ಲಾ ಸರಕಾರಿ ಆಸ್ಪತ್ರೆ ಸೇರಿದಂತೆ ಜಿಲ್ಲೆಯ ವೈದ್ಯಕೀಯ ಕಾಲೇಜು ಆಸ್ಪತ್ರೆ, ಖಾಸಗಿ…

Read More

ಉಳ್ಳಾಲ: ಚೆಂಬುಗುಡ್ಡೆ ಹಿಂದೂ ರುದ್ರಭೂಮಿಯಲ್ಲಿ ಇನ್ಫೋಸಿಸ್ ಸಂಸ್ಥೆ ಸಹಕಾರದೊಂದಿಗೆ ನಿರ್ಮಾಣವಾಗಲಿರುವ ವಿದ್ಯುತ್ ಚಿತಾಗಾರದ ನೀಲಿನಕ್ಷೆ ತಯಾರಾಗಿದೆ. ಸ್ಥಳೀಯರ ಆದ್ಯತೆ ಮೇರೆಗೆ ಅವರಿಗೆ ಸಹಕಾರ ಆಗುವಂತ ಸ್ಥಳದಲ್ಲಿ ಚಿತಾಗಾರ ನಿರ್ಮಾಣವಾಗಲಿದೆ ಎಂದು ಶಾಸಕ ಯು.ಟಿ ಖಾದರ್ ಹೇಳಿದರು.ಚೆಂಬುಗುಡ್ಡೆ ಹಿಂದೂ ರುದ್ರಭೂಮಿಗೆ ಜಿಲ್ಲಾಡಳಿತ ಅನುಮತಿ ನೀಡಿರುವ ವಿದ್ಯುತ್ ಚಿತಾಗಾರ ನಿರ್ಮಿಸುವ ಸ್ಥಳದ ಪರಿಶೀಲನೆಯನ್ನು ನಡೆಸಿ ಮಾತನಾಡಿದರು.ಚೆಂಬುಗುಡ್ಡೆಯ ಹಿಂದೂ ರುದ್ರಭೂಮಿ ಸಮಿತಿ ಕುಡಿಯುವ ನೀರಿನ ಯೋಜನೆಯ ಟ್ಯಾಂಕ್ ನಿರ್ಮಾಣಕ್ಕಾಗಿ ಹೆಚ್ಚಿನ ಸಹಕಾರ ನೀಡಿದೆ. ಅಲ್ಲಿನ ಅಧ್ಯಕ್ಷರು ಹಾಗೂ ಸರ್ವಸದಸ್ಯರು ವಿದ್ಯುತ್ ಚಿತಾಗಾರ ನಿರ್ಮಾಣಕ್ಕೆ ಸಲ್ಲಿಸಿದ್ದ ಮನವಿಯಂತೆ ಸ್ಥಳಕ್ಕೆ ಜಿಲ್ಲಾಧಿಕಾರಿಯನ್ನು ಕರೆಸಿ ಮಾತುಕತೆ ನಡೆಸಲಾಗಿತ್ತು. ಇದೀಗ ಕೋವಿಡ್ ಸ್ಥಿತಿ ಉಲ್ಬಣಗೊಳ್ಳುತ್ತಿದ್ದಂತೆ ಜಿಲ್ಲಾಧಿಕಾರಿ ಇನ್ಫೋಸಿಸ್ ಸಂಸ್ಥೆಯವರ ಸಹಕಾರದ ಜೊತೆಗೆ ವಿದ್ಯುತ್ ಚಿತಾಗಾರ ನಿರ್ಮಿಸಲು ಅನುಮತಿ ನೀಡಿದ್ದಾರೆ. ಸ್ಥಳೀಯರ ಬೇಕಾದ ಸ್ಥಳದಲ್ಲಿ ಚಿತಾಗಾರ ನಿರ್ಮಿಸಲು ಅಧಿಕಾರಿಯೊಂದಿಗೆ ಮಾತುಕತೆ ನಡೆಸುವುದಾಗಿ ತಿಳಿಸಿದರು.ಸ್ಥಳ ಬದಲಾವಣೆಗೆ ಒತ್ತು : ಚಿತಾಗಾರ ನಿರ್ಮಿಸುವ ನಿಗದಿತ ಸ್ಥಳದಲ್ಲಿ ದೈವಸ್ಥಾನ, ನಾಗಬನ ಹಾಗೂ ಶಾಲೆ ಇರುವುದರಿಂದ ಸ್ಮಶಾನದ ಸಮೀಪದ…

Read More

ಉಳ್ಳಾಲ: ಇಲ್ಲಿನ ನಗರಸಭೆ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕಿನಿಂದ ಯಾವುದೇ ತೊಂದರೆಯಾದಲ್ಲಿ, ಸಂಶಯಗಳಿದ್ದಲ್ಲಿ ಉಳ್ಳಾಲ ನಗರಸಭೆ ಸಹಾಯವಾಣಿ 8024487311 ಸಂಪರ್ಕಿಸುವಂತೆ ಉಳ್ಳಾಲ ನಗರಸಭೆ ಉಪಾಧ್ಯಕ್ಷ ಐಯೂಬ್ ಮಂಚಿಲ ಹೇಳಿದ್ದಾರೆ. ಉಳ್ಳಾಲ ನಗರಸಭೆ ವ್ಯಾಪ್ತಿಯಲ್ಲಿ ಕೊರೊನಾ ಸಮಗ್ರ ಮಾಹಿತಿ ಕುರಿತು ಬುಧವಾರ ನಡೆಸಿದ ಸುದ್ಧಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.ಉಳ್ಳಾಲ ನಗರಸಭೆ ವ್ಯಾಪ್ತಿಯಲ್ಲಿ ಹೋಂ ಐಸೊಲೇಷನ್ನಿನಲ್ಲಿ ಇರುವವರ ಕುರಿತು ನಗರಸಭೆ ಸದಸ್ಯರು, ಆಶಾ ಕಾರ್ಯಕರ್ತೆಯರು ಪ್ರತಿನಿತ್ಯ ನಿಗಾ ವಹಿಸಿ ಯೋಗಕ್ಷೇಮ ವಿಚಾರಿಸಲಾಗುತ್ತಿದೆ. ಕೊರೊನಾ ಸೋಂಕಿತರಿಗಾಗಿ ಹೆಲ್ಪ್ ಲೈನ್ ಅನ್ನು ಆರಂಭಿಸಲಾಗಿದೆ. ಅವಶ್ಯಕತೆ ಬಂದಲ್ಲಿ ನಗರಸಭೆ ವತಿಯಿಂದ ಆಂಬ್ಯುಲೆನ್ಸ್ ಸೇವೆ ನೀಡಲು ಕೂಡ ಸಿದ್ಧರಿದ್ದೇವೆ ಎಂದ ಅವರು ಎಲ್ಲಾ ಧಾರ್ಮಿಕ ಕೇಂದ್ರಗಳು ಎಲ್ಲಾ ರೀತಿಯಲ್ಲೂ ಸಹಕಾರ ನೀಡುತ್ತಿರುವುದರಿಂದ ಜನರಲ್ಲಿ ಜಾಗೃತಿ ಮೂಡಿಸಲು ಸಾಧ್ಯವಾಗಿದೆ .ಮಸೀದಿ ಧ್ವನಿವರ್ಧಕಗಳ ಮೂಲಕವೂ ಪರಿಸರದ ಜನತೆಗೆ ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವಂತೆ ಸೂಚಿಸಲಾಗುತ್ತಿದೆ. ಪೌರಾಯುಕ್ತರು ಮತ್ತು ತಂಡ ಕೋವಿಡ್ ನಿಗ್ರಹ ಮಾಡುವಲ್ಲಿ ಬಹಳಷ್ಟು ಶ್ರಮಿಸುತ್ತಿದ್ದು, ಜನರು ಅವರೊಂದಿಗೆ ಸಹಕರಿಸಬೇಕು ಎಂದರು.ನಗರಸಭೆ ಅಧ್ಯಕ್ಷೆ ಚಿತ್ರಾ ಚಂದ್ರಕಾಂತ್…

Read More

UN networks ಉಳ್ಳಾಲ: ಕೋಟೆಕಾರು ಮಂಡಲದಲ್ಲಿ  ಕೋವಿಡ್ -19 ತುರ್ತು ನಿರ್ವಹಣಾ ತಂಡ ಕಾರ್ಯಾಚರಣೆ ಆರಂಭಿಸಿದೆ. ಆಸ್ಪತ್ರೆಗಳ ಮಾಹಿತಿಗಾಗಿ:ಅತುಲ್ ಬಗಂಬಿಲ +91 80500 05299ಪ್ರೀತಮ್ ಬಗಂಬಿಲ 98441 86077 ಆಕ್ಸಿಜನ್ ಮತ್ತು ವೆಂಟಿಲೇಟರ್ ಮಾಹಿತಿಗಾಗಿಚಿದಾನಂದ ಮಡ್ಯಾರ್+91 70191 57052ಮೋಹನ್ ರಾಜ್ ಕನೀರ್ ತೋಟ 99802 19655 ವ್ಯಾಕ್ಸಿನೇಶನ್ ಮಾಹಿತಿಗಾಗಿ :ದಿವ್ಯಾ ಮಡ್ಯಾರ್ +91 88618 30474ಸತೀಶ್ ಮಾಡೂರು +91 76194 31649ನವೀನ್ ಮಾಡೂರು 97425 02798 ಅಯುಷ್ಮಾನ್ ಭಾರತದೀನಾಮಣಿ 82173 69132ಪ್ರಮೀಳಾ ಕೊಂಡಾಣ +91 70221 34450 ಔಷಧಿ ಮಾಹಿತಿಗಾಗಿ :ಉದಯಕುಮಾರ್ ಸುಳ್ಳೆಂಜೀರ್ 9901519874ಶೇಖರ್ ಕನೀರ್ ತೋಟ 98456 85915 ರಕ್ತದಾನಆಶಿಕ್ ಮಾಡೂರು +91 7019 020 492ವಿನೂತನ್ ಮಾಡೂರು +91 73533 85390ವಿಜ್ಞೇಶ್ ಕಾಳಿಕಾಂಬ +91 89048 16235

Read More

UN networks ಉಳ್ಳಾಲ: ಇಲ್ಲಿನ ಪೆÇಲೀಸರು ಕೇರಳ ಗಡಿಭಾಗ ತಲಪಾಡಿಯಲ್ಲಿರುವ ನಿಸರ್ಗ ಬಾರ್ ಅಂಡ್ ರೆಸ್ಟೋರೆಂಟ್ ಗೆ ದಾಳಿ ನಡೆಸಿದ್ದು ಭಾರೀ ಪ್ರಮಾಣದಲ್ಲಿ ಅಕ್ರಮವಾಗಿ ಶೇಖರಿಸಿಟ್ಟಿದ್ದ ಮದ್ಯದ ಸಂಗ್ರಹವನ್ನು ಪತ್ತೆ ಮಾಡಿದ್ದಾರೆ. ಮಂಗಳೂರು, ಉಳ್ಳಾಲ ಪೆÇಲೀಸರು ಕೇರಳ ಗಡಿಭಾಗ ತಲಪಾಡಿಯಲ್ಲಿರುವ ನಿಸರ್ಗ ಬಾರ್ ಆಂಡ್ ರೆಸ್ಟೋರೆಂಟ್ ಗೆ ದಾಳಿ ನಡೆಸಿದ್ದು ಭಾರೀ ಪ್ರಮಾಣದಲ್ಲಿ ಅಕ್ರಮವಾಗಿ ಶೇಖರಿಸಿಟ್ಟಿದ್ದ ಮದ್ಯದ ಸಂಗ್ರಹವನ್ನು ಪತ್ತೆ ಮಾಡಿದ್ದಾರೆ.ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಪೆÇಲೀಸರು ದಾಳಿ ನಡೆಸಿದ್ದು 50 ಬಾಕ್ಸ್ ನಲ್ಲಿ ಅಡಗಿಸಿಟ್ಟಿದ್ದ 1.53 ಲಕ್ಷ ಮೌಲ್ಯದ ಮದ್ಯದ ಸಂಗ್ರಹವನ್ನು ಪತ್ತೆ ಮಾಡಿದ್ದಾರೆ. ಈ ವೇಳೆ, ಬಾರ್ ನಲ್ಲಿದ್ದ ಚರಣ್ ಎಂಬಾತನನ್ನು ಪೆÇಲೀಸರು ಬಂಧಿಸಿದ್ದಾರೆ. ಆತ ನೀಡಿದ ಮಾಹಿತಿಯಂತೆ ಮದ್ಯವನ್ನು ತೊಕ್ಕೊಟ್ಟಿನ ಹೈ ಸ್ಪಿರಿಟ್ ನಿಂದ ತರಲಾಗಿತ್ತು. ಕಳೆದ ಮೂರು ತಿಂಗಳಿಂದ ಮದ್ಯವನ್ನು ಇಲ್ಲಿ ಸಂಗ್ರಹ ಮಾಡುತ್ತಿದ್ದು ಇಲ್ಲಿಂದ ಕೇರಳಕ್ಕೆ ಸಾಗಣೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾಗಿ ಪೆÇಲೀಸರು ತಿಳಿಸಿದ್ದಾರೆ.ನಿಸರ್ಗ ಬಾರ್ ದಿವ್ಯರಾಜ್ ಶೆಟ್ಟಿ ಹೆಸರಲ್ಲಿ ಲೈಸನ್ಸ್ ಹೊಂದಿದ್ದು…

Read More

UN networks ಉಳ್ಳಾಲ:  ಇಲ್ಲಿನ  ನಗರಸಭಾ ವ್ಯಾಪ್ತಿಯಲ್ಲಿರುವ ಚೆಂಬುಗುಡ್ಡೆ ಹಿಂದೂ ರುದ್ರಭೂಮಿಗೆ ವಿದ್ಯುತ್ ಚಿತಾಗಾರ ನಿರ್ಮಿಸಲು ಜಿಲ್ಲಾಡಳಿತ ಒಪ್ಪಿಗೆ ನೀಡಿದ್ದು, ಸುಮಾರು 80 ಲಕ್ಷ ರೂ ವೆಚ್ಚದ ವಿದ್ಯುತ್ ಚಿತಾಗಾರ ಸದ್ಯದಲ್ಲೇ ನಿರ್ಮಾಣವಾಗಲಿದೆ.ಸುಮಾರು ಐವತ್ತು ವರ್ಷಕ್ಕಿಂತಲೂ ಹೆಳೆಯ ರುದ್ರಭೂಮಿ. ಸುಮಾರು ಎರಡು ಎಕರೆ ಪ್ರದೇಶದಲ್ಲಿರುವ ಈ ರುದ್ರಭೂಮಿಯಲ್ಲಿ ವಿದ್ಯುತ್ ಚಿತಾಗಾರದ ಬೇಡಿಕೆ ಹಲವು ವರ್ಷಗಳಿಂದ ಇತ್ತು.ಉಳ್ಳಾಲ ನಗರಸಭಾ ವ್ಯಾಪ್ತಿಯ ಉಳ್ಳಾಲ ಪೆರ್ಮನ್ನೂರು ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮಗಳಿಗೆ ಚೆಂಬುಗುಡ್ಡೆ ರುದ್ರಭೂಮಿ ಶವ ಸಂಸ್ಕಾರಕ್ಕೆ ಹೆಚ್ಚು ಬಳಕೆಯಾಗುತ್ತಿರುವ ರುದ್ರಭೂಮಿ ವರ್ಷಕ್ಕೆ ಸುಮಾರು 400ಕ್ಕೂ ಹೆಚ್ಚು ಶವಸಂಸ್ಕಾರ ಈ ರುದ್ರಭೂಮಿಯಲ್ಲಿ ಆಗುತ್ತಿದೆ. ಈ ನಡುವೆ ಕಳೆದ 10 ವರ್ಷಗಳಿಂದ ಈಚೆಗೆ ಈ ಪ್ರದೇಶದಲ್ಲಿ ಜನಸಂಖ್ಯೆ ಹೆಚ್ಚುತ್ತಿದ್ದು, ರುದ್ರಭೂಮಿಯ ಸುತ್ತಮುತ್ತ ಮನೆಗಳ ಶಾಲಾ ಕಾಲೇಜುಗಳು ತಲೆ ಎತ್ತಿದ್ದು, ವಾಯುಮಾಲಿನ್ಯವೂ ಇಲ್ಲಿನ  ಜನರಿಗೆ ಸಮಸ್ಯೆಯಾಗುತ್ತಿದೆ. ಇನ್ನೊಂದೆಡೆ ಈ ರುದ್ರಭೂಮಿಯಲ್ಲಿ ಸಾವಿರಗಟ್ಟಲೆ ಕ್ವಿಂಟಾಲ್ ಲೆಕ್ಕದಲ್ಲಿ ಕಟ್ಟಿಗೆಯೂ ಅವಶ್ಯಕತೆಯಿದ್ದು, ಈ ನಿಟ್ಟಿನಲ್ಲಿ ವಿದ್ಯುತ್ ಚಿತಾಗಾರದ ಬೇಡಿಕೆಯಿಡಲಾಗಿತ್ತು. ಸ್ಮಶಾನ ನಿರ್ವಹಣಾ ಸಮಿತಿಯ…

Read More

UN networks ಉಳ್ಳಾಲ: ಕುಂಪಲ ಶ್ರೀ ಬಾಲಕೃಷ್ಣ ಮಂದಿರದಲ್ಲಿ 19 ವರ್ಷಗಳಿಂದ ಪ್ರಧಾನ ಅರ್ಚಕರಾಗಿ  ಸೇವೆ ಸಲ್ಲಿಸುತ್ತಿದ್ದ ಉಗ್ಗಪ್ಪ ಟೈಲರ್ (80)  ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ವೃತ್ತಿಯಲ್ಲಿ ಟೈಲರ್ ಆಗಿದ್ದವರು, ಆಧ್ಯಾತ್ಮ ಕ್ಷೇತ್ರದಲ್ಲಿ ತಮ್ಮನ್ನು ಹೆಚ್ಚು ತೊಡಗಿಸಿಕೊಂಡಿದ್ದರು. ಮೃತರು ಅಪಾರ ಬಂಧುಮಿತ್ರರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ .

Read More

UN networks ಉಳ್ಳಾಲ:  ಲಾಕ್ ಡೌನ್ ಹಿನ್ನೆಲೆಯಲ್ಲಿ ತೊಕ್ಕೊಟ್ಟು ಪರಿಸರದ ಅಶಕ್ತರು, ವಲಸೆ ಕಾರ್ಮಿಕರು  ಹಾಗೂ ಭಿಕ್ಷುಕರಿಗೆ   ಶ್ರೀ ಸಾಯಿ  ಪರಿವಾರ್ ವತಿಯಿಂದ ಮಧ್ಯಾಹ್ನದ ಊಟ ವಿತರಿಸಲಾಯಿತು.ಶೃಂಗಾರ್ ಕ್ಯಾಟರರ್ಸ್  ಮಾಲೀಕ ಶ್ರೀನಿವಾಸ್ ಕಾಪಿಕಾಡ್ ಇವರ ಸಹಕಾರದೊಂದಿಗೆ ಬಿಜೆಪಿ ಮಂಗಳೂರು ಕ್ಷೇತ್ರ ಅಧ್ಯಕ್ಷ ಚಂದ್ರಹಾಸ್ ಪಂಡಿತ್‍ಹೌಸ್ ಇವರು ಭಾನುವಾರದ ಮಧ್ಯಾಹ್ನ ಊಟದ ವ್ಯವಸ್ಥೆ ಕಲ್ಪಿಸಿ ವಿತರಿಸಿದರು. ಈ ಸಂದರ್ಭ ಸಾಯಿ ಪರಿವಾರ್‍ನ ಪುರುಷೋತ್ತಮ ಕಲ್ಲಾಪು, ಪ್ರವೀಣ್ ಎಸ್ ಕುಂಪಲ, ದೀಕ್ಷಿತ್ ಪೂಜಾರಿ ತೊಕ್ಕೊಟ್ಟು, ಸತೀಶ್ ಭಟ್ನಗರ, ಸೂರ್ಯ ಕುಂಪಲ, ಶವಿತ್ ಉಚ್ಚಿಲ್, ಹಿತೇಶ್ ಉಳ್ಳಾಲಬೈಲ್, ಅರುಣ್ ಪೂಜಾರಿ , ಗಣೇಶ್ ಪಂಡಿತ್ ಉಪಸ್ಥಿತರಿದ್ದರು.ಕಳೆದ ಬಾರಿಯ ಲಾಕ್ ಡೌನಿನಲ್ಲೂ ಶ್ರೀ ಸಾಯಿ ಪರಿವಾರ್ ವತಿಯಿಂದ 35 ದಿನಗಳ ಕಾಲ ಅನ್ನದಾನ ನೆರವೇರಿಸಲಾಗಿತ್ತು.

Read More

UN networks ಉಳ್ಳಾಲ: ಜನಪದ ವಿದ್ವಾಂಸ ಡಾ.  ಅರುಣ್ ಉಳ್ಳಾಲ್ ಎಂಬವರ ಹುಟ್ಟು ಹಬ್ಬದ ದಿನದಂದು ತೊಕ್ಕೊಟ್ಟು ಪರಿಸರದ 150 ಅಶಕ್ತರಿಗೆ ಅನ್ನದಾನ ನೆರವೇರಿಸಿದರು. ಸಾಯಿ ಪರಿವಾರ್ ತೊಕ್ಕೊಟ್ಟು ಆಶ್ರಯದಲ್ಲಿ ಅನ್ನದಾನ ನೆರವೇರಿಸಲಾಯಿತು.ಈ ಸಂದರ್ಭ  ಸಾಯಿ ಪರಿವಾರ್ ಟ್ರಸ್ಟ್ ನ ಮಾರ್ಗದರ್ಶಕ ಡಾ. ಅರುಣ್ ಉಳ್ಳಾಲ್, ಟ್ರಸ್ಟಿಗಳಾದ ಪ್ರವೀಣ್ ಎಸ್ ಕುಂಪಲ, ಪುರುಷೋತ್ತಮ ಕಲ್ಲಾಪು, ಸತೀಶ್ ಭಟ್ನಗರ, ಸೂರಿ ಕುಂಪಲ, ದೀಕ್ಷಿತ್ ಪೂಜಾರಿ, ಅರುಣ್ ಪೂಜಾರಿ, ನಾಗೇಶ್,  ದೀಪಕ್ ಕುಂಪಲ ಮುಂತಾದವರು ಉಪಸ್ಥಿತರಿದ್ದರು.

Read More

UN netowotks ಉಳ್ಳಾಲ: ಕೊರೊನಾ ಸೋಂಕಿನಿಂದ ಜಿಲ್ಲೆಯ ಆಸ್ಪತ್ರೆಗಳಲ್ಲಿ ತುರ್ತು ರಕ್ತದ ಅವಶ್ಯಕತೆ ಇದ್ದು, ಆರೋಗ್ಯಪೂರ್ಣ ಸಮಾಜದ ನಿರ್ಮಾಣದ ಕಳಕಳಿಯಿಂದ  ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸುವ ಸಲುವಾಗಿ ಸಭೆಯನ್ನು  ನಡೆಸಲಾಗಿದೆ ಎಂದು ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ಅಧ್ಯಕ್ಷ ಸತೀಶ್ ಕುಂಪಲ ಹೇಳಿದರು.ಅವರು ಬಾಲಕೃಷ್ಣ ಮಂದಿರದ ರಜತ ಮಹೋತ್ಸವ ಅಂಗವಾಗಿ ಇತ್ತೀಚೆಗೆ ಮಂದಿರದ ಸಭಾಂಗಣದಲ್ಲಿ ನಡೆಸಿದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಬೃಹತ್ ರಕ್ತದಾನ  ಶಿಬಿರಕ್ಕೆ ವಿವಿಧ ಸಂಸ್ಥೆಗಳ ಸಹಕಾರ ಹಾಗೆಯೇ ರಜತ ವರ್ಷದ ಬೇರೆ ಬೇರೆ ಸೇವಾ ಯೋಜನೆಗಳಿಗೆ ಇನ್ನಷ್ಟು ಮಂದಿರದ ಆತ್ಮೀಯ ಸಂಸ್ಥೆಗಳನ್ನು ಸೇರಿಸಿ ಕಾರ್ಯಕ್ರಮಗಳು ವರ್ಷಪೂರ್ತಿ ನಡೆಸಲಾಗುವುದು ಎಂದರು.ಬೆಳ್ಳಿಹಬ್ಬ ಸಮಿತಿಯ ಗೌರವಾಧ್ಯಕ್ಷ ಮೋಹನ್ ಶೆಟ್ಟಿ ಸಭೆಯ ನೇತೃತ್ವ ವಹಿಸಿದ್ದರು.ಶ್ರೀ ಸತ್ಯನಾರಾಯಣ ಮಂದಿರ ಬಗಂಬಿಲ, ಹಿಂದೂ ಜಾಗರಣ ವೇದಿಕೆ ಓಂಕಾರ ಘಟಕ ಕುಂಪಲ, ಓಂ ಪ್ರೆಂಡ್ಸ್ ಆಶ್ರಯಕಾಲನಿ, ಛತ್ರಪತಿ ಶಿವಾಜಿ ಪ್ರೆಂಡ್ಸ್ ಲಕ್ಷ್ಮಿಗುಡ್ಡೆ, ಯುವ ಮರಾಠ ಕುಂಪಲ, ಟೀಮ್ ರ್ಯಾಪ್ಟರ್ಸ್, ಕುಂಪಲ ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದು ಇವರ ಸಹಯೋಗದಲ್ಲಿ ಸ್ವಯಂ…

Read More