UN networks ಉಳ್ಳಾಲ: ಸಾಮಾಜಿಕ ಅಂತರ ಕಾಪಾಡದೆ ಸುಮಾರು ನೂರಕ್ಕೂ ಅಧಿಕ ಜನ ಉಳ್ಳಾಲ ಸಮುದಾಯ ಆಸ್ಪತ್ರೆ ಎದುರು ಸರತಿ ಸಾಲಿನಲ್ಲಿ ನಿಂತಿರುವ ಬಗ್ಗೆ ವರದಿಯಾಗಿದೆ. ಆನ್ ಲೈನ್ ನಲ್ಲಿ ಫಾರಂ ಭರ್ತಿ ಮಾಡಲು ಸಾಧ್ಯವಾಗದೇ ಕೋವಿಡ್ ವ್ಯಾಕ್ಸಿನೇಷನ್ ನೋಂದಣಿಗಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಜನ ಸೇರಿದ್ದಾರೆ. ನೋಂದಣಿ ಕುರಿತು ಸಮುದಾಯ ಆಸ್ಪತ್ರೆ ಸಿಬ್ಬಂದಿಗೂ ಮಾಹಿತಿ ಇರದ ಕಾರಣಸಾರ್ವಜನಿಕರಿಂದ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ವೈದ್ಯರಿಂದ ಮನವೊಲಿಸಲು ಯತ್ನ ನಡೆಯುತ್ತಿದೆ.
Author: UllalaVani
ಉಳ್ಳಾಲ : ಸ್ನೇಹಿತರ ಜೊತೆಗೆ ತಡರಾತ್ರಿ ನೇತ್ರಾವತಿ ರೈಲ್ವೇ ಸೇತುವೆಗೆ ವಿಹಾರಕ್ಕೆ ತೆರಳಿದ್ದ ಉಳ್ಳಾಲಬೈಲ್ ನಿವಾಸಿ ನಿತಿನ್ (32) ಮೃತದೇಹ ಮಂಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಆಡಂಕುದ್ರು ನೇತ್ರಾವತಿ ನದಿಯಲ್ಲಿ ಬುಧವಾರ ಸಂಜೆ ವೇಳೆ ಪತ್ತೆಯಾಗಿದೆ. ನಿತಿನ್ ಸೋಮವಾರ ಮಧ್ಯಾಹ್ನ ಇಬ್ಬರು ಸ್ನೇಹಿತರ ಜೊತೆಗೆ ಸೋಮೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಭಾಗವಹಿಸಿದ್ದ ಎನ್ನಲಾಗಿದ್ದು ತದನಂತರ ಸಂಜೆ ಮೂವರು ಸೇರಿ ನೇತ್ರಾವತಿ ರೈಲ್ವೇ ಸೇತುವೆ ಬಳಿ ತೆರಳಿದ್ದರು. ಅಲ್ಲಿಂದ ನಿತಿನ್ ನಾಪತ್ತೆಯಾಗಿದ್ದಾರೆ. ಆ ಬಗ್ಗೆ ನಿತಿನ್ ಸಹೋದರ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದು ಪೊಲೀಸರು ನಿತಿನ್ ಜೊತೆಗಿದ್ದ ಇಬ್ಬರು ಸ್ನೇಹಿತರ ವಿಚಾರಣೆ ನಡೆಸಿದ್ದರು. ಇಂದು ಸಂಜೆ ವೇಳೆ ನಿತಿನ್ ಮೃತದೇಹ ಪತ್ತೆಯಾಗಿದೆ. ಸ್ನೇಹಿತರ ಜೊತೆಗೆ ವಿಹರಿಸುತ್ತಿದ್ದ ಸಂದರ್ಭ ರೈಲು ಬಂದಿತ್ತು. ಇದರಿಂದ ಗಾಬರಿಗೊಂಡು ನಿತಿನ್ ನದಿಗೆ ಹಾರಿದ್ದನೆನ್ನಲಾಗಿದೆ.ನಿತಿನ್ ಅವಿವಾಹಿತರಾಗಿದ್ದು ಈ ಹಿಂದೆ ಗಲ್ಫ್ ರಾಷ್ಟ್ರದಲ್ಲಿ ಉದ್ಯೋಗದಲ್ಲಿದ್ದು ಕೊರೊನಾ ಲಾಕ್ ಡೌನ್ ನಂತರ ಊರಿಗೆ ಮರಳಿದ್ದು ವೆಲ್ಡರ್ ವೃತ್ತಿ ನಡೆಸುತ್ತಿದ್ದರು.
Un networks ಉಳ್ಳಾಲ: ರಾಜ್ಯ ಮುಖ್ಯ ಕಾರ್ಯದರ್ಶಿಗಳ ಕೋವಿಡ್ ಆದೇಶ ಉಲ್ಲಂಘಿಸಿ ಮತ್ತೆ ಸಾರ್ವಜನಿಕರನ್ನು ಸೇರಿಸಿ ರಥೋತ್ಸವ ನಡೆಸಿದ ಸೋಮೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಅಧ್ಯಕ್ಷರ ವಿರುದ್ಧ ಮತ್ತೊಂದು ಎಫ್ ಐಆರ್ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಸೆಕ್ಷನ್ 188, 269 ಹಾಗೂಸಾಂಕ್ರಾಮಿಕ ರೋಗ ಹರಡುವಿಕೆ ಕಾಯ್ದೆಯ ಸೆಕ್ಷನ್ 5 ರಡಿ ಸೋಮನಾಥೇಶ್ವರ ದೇವಸ್ಥಾನದ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎ.26 ರಂದು ಸೋಮೇಶ್ವರ ದೇವಸ್ಥಾನದಲ್ಲಿ ಬ್ರಹ್ಮರಥೋತ್ಸವ ನಡೆದಿತ್ತು. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಫೋಟೊ, ವೀಡಿಯೋ ವೈರಲ್ ಆಗುತ್ತಿದ್ದಂತೆ ಜಿಲ್ಲಾಧಿಕಾರಿ ಕ್ರಮಕ್ಕೆ ಆಗ್ರಹಿಸಿದ್ದರು. ಜಿಲ್ಲಾಧಿಕಾರಿ ಆದೇಶದಂತೆ ಸೋಮೇಶ್ವರ ಪುರಸಭೆ ಪ್ರಬಂಧಕ ಕೃಷ್ಣ ಎಂಬವರು ನೀಡಿರುವ ದೂರಿನಂತೆ ಪ್ರಕರಣ ದಾಖಲಾಗಿದೆ.
UN networks ಉಳ್ಳಾಲ: ಪತಿ ಮೃತಪಟ್ಟ ಎರಡು ಗಂಟೆಗಳ ಅವಧಿಯಲ್ಲಿ ಪತ್ನಿಯೂ ಕೊನೆಯುಸಿರೆಳೆದ ಘಟನೆ ಉಳ್ಳಾಲದ ಮಾಸ್ತಿಕಟ್ಟೆಯಲ್ಲಿ ಬುಧವಾರ ತಡರಾತ್ರಿ ನಡೆದಿದೆ. ಕಾಂಗ್ರೆಸ್ ಮುಖಂಡ ನಝೀರ್ ಅಹ್ಮದ್(62) ಮತ್ತು ಅವರ ಪತ್ನಿ ಜಮೀಲಾ(54) ಮೃತಪಟ್ಟ ದಂಪತಿಯಾಗಿದ್ದಾರೆ.ನ್ಯುಮೋನಿಯಾದಿಂದ ಬಳಲುತ್ತಿದ್ದ ನಝೀರ್ ಅಹ್ಮದ್ ಅವರಿಗೆ ಬುಧವಾರ ತಡರಾತ್ರಿ ತೀವ್ರ ರಕ್ತದೊತ್ತಡ ಸಮಸ್ಯೆ ಕಾಣಿಸಿಕೊಂಡಿತ್ತು. ಆ ಕಾರಣದಿಂದ ಅವರನ್ನು ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ದಾರಿಮಧ್ಯೆ 12:30ರ ಕೊನೆಯುಸಿರೆಳೆದರು. ಮೃತದೇಹವನ್ನು ಮನೆಗೆ ತರಲಾಗಿದ್ದು, ಅಂತಿಮ ದರ್ಶನ ಪಡೆದ ನಝೀರ್ ಅಹ್ಮದ್ ಅವರ ಪತ್ನಿ ಜಮೀಲಾ ಅವರು ಪತಿಯ ಅಗಲುವಿಕೆಯಿಂದ ಖಿನ್ನರಾಗಿದ್ದು ಸುಮಾರು 2:30ರ ಸುಮಾರಿಗೆ ಹೃದಯಾಘಾತದಿಂದ ಅವರೂ ಕೊನೆಯುಸಿರೆಳೆದಿದ್ದಾರೆ.ಮುಸ್ಲಿಂ ಲೀಗ್ ಉಳ್ಳಾಲ ವಲಯ ಪ್ರಧಾನ ಕಾರ್ಯದರ್ಶಿಯಾಗಿದ್ದ ನಝೀರ್ ಅಹ್ಮದ್ ಬಳಿಕ ಕಾಂಗ್ರೆಸ್ ಪಕ್ಷಕ್ಕೆ ಎರಡು ಬಾರಿ ನಗರ ಪಂಚಾಯಿತಿಗೆ ಸ್ಪರ್ಧಿಸಿದ್ದರು. ಉಳ್ಳಾಲ ಬ್ಲಾಕ್ ಕಾಂಗ್ರೆಸ್ ನ ಜಂಟಿ ಕಾರ್ಯದರ್ಶಿಯಾಗಿ, 15 ವರ್ಷಗಳ ಕಾಲ ಮೇಲಂಗಡಿ ಉರ್ದು ಶಾಲೆಯ ಮೇಲ್ವಿಚಾರಣಾ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಸದ್ಯ…
ಉಳ್ಳಾಲ: ಸೋಮೇಶ್ವರ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಒಂಭತ್ತು ಮಾಗಣೆ ಸೋಮೇಶ್ವರ ಶ್ರೀ ಸೋಮನಾಥ ಕ್ಷೇತ್ರದಲ್ಲಿ ಸೋಮವಾರ ಶತಮಾನದ ನಂತರ ಶ್ರೀ ಸೋಮನಾಥ ದೇವರ ` ಬ್ರಹ್ಮರಥಾರೋಹಣ-ರಥೋತ್ಸವ , ಸುಡುಮದ್ದು ಪ್ರದರ್ಶನ ವಿಜೃಂಭಣೆಯಿಂದ ನಡೆಯಿತು.
ಉಳ್ಳಾಲ:ವಿಕೇಂಡ್ ಲಾಕ್‍ಡೌನ್‍ಗೆ ಉಳ್ಳಾಲ ಸುತ್ತುಮುತ್ತಲಿನ ಪ್ರದೇಶಗಳು ಸಂಪೂರ್ಣ ಸ್ಥಬ್ದಗೊಂಡಿದ್ದು, ಅಗತ್ಯ ಸಾಮಾಗ್ರಿಗಳ ಖರೀದಿಗೂ ಯಾವುದೇ ನೂಕು ನುಗ್ಗಲು ಇಲ್ಲದೆ ಸಾರ್ವಜನಿಕರು ಸಹಕರಿಸಿದ್ದು, ಉಳ್ಳಾಲವ್ಯಾಪ್ತಿಯಲ್ಲಿ ಪೊಲೀಸರು ವಿವಿದೆಡೆ ರಸ್ತೆಯಲ್ಲಿ ಸಂಚರಿಸುವ ವಾಹನಗಳ ತಪಾಸಣೆ ನಡೆಸಿದರು. ವಾರದ ಹಿಂದೆಯೇ ಲಾಕ್‍ಡೌನ್‍ಘೋಷಣೆ ಆಡಿದ್ದರಿಂದ ಜನರು ಅಗತ್ಯ ವಸ್ತುಗಳನ್ನು ಮೊದಲೇ ಖರೀದಿಸಿಕೊಂಡು ಹೋಗಿದ್ದಾರೆ. ಮುಖ್ಯವಾಗಿ ತೊಕ್ಕೊಟ್ಟು ಒಳಪೇಟೆ, ಉಳ್ಳಾಲ, ತೊಕ್ಕೊಟ್ಟು ಜಂಕ್ಷನ್, ಕುತ್ತರಾ, ದೇರಳಕಟ್ಟೆ,ಜಂಕ್ಷನ್‍ಗಳಲ್ಲಿ ಜನನಿಬಿಡತೆ ಹೆಚ್ಚು ಕಂಡು ಬಂದಿಲ್ಲ.:ರಾಷ್ಟ್ರೀಯ ಹೆದ್ದಾರಿ66 ಸೇರಿದಂತೆ ತೊಕ್ಕೊಟ್ಟಿನಿಂದ ಉಳ್ಳಾಲ ಸಂಪರ್ಕಿಸುವ ರಸ್ತೆ, ತೊಕ್ಕೊಟ್ಟು ಜಂಕ್ಷನ್ , ಗಡಿಪ್ರದೇಶವಾದ ತಲಪಾಡಿಯಲ್ಲಿ ವಾಹನಗಳ ತಪಾಸಣೆ ನಡೆಯಿತು. ಉಳ್ಳಾಲ ಮತ್ತು ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯ ಪೊಲೀಸರು ತಪಾಸಣೆ ನಡೆಸಿದರು. : ಕೇರಳ ಕರ್ನಾಟಕ ಗಡಿ ಪ್ರದೇಶವಾದ ತಲಪಾಡಿಯಲ್ಲಿ ದ.ಕ.ಜಿಲ್ಲಾಡಳಿತದಿಂದ ಕಳೆದ ಕೆಲವು ತಿಂಗಳಿನಿಂದ ಕೇರಳದಿಂದ ಜಿಲ್ಲೆಗೆ ಪ್ರವೇಶಿಸುವವರ ಕೋವಿಡ್ ಟೆಸ್ಟ್ ಸೇರಿದಂತೆ ಆರ್‍ಟಿಪಿಸಿಆರ್ ತಪಾಸಣೆಯ ಮಾಹಿತಿ ಪಡೆದುಕೊಳ್ಳಲು ಕೋವಿಡ್ ಚೆಕ್‍ಪೋಸ್ಟ್ ಆರಂಬಿಸಿದ್ದು, ಪೊಲೀಸರು ಮತ್ತು ಹೋಮ್‍ಗಾಡ್ರ್ಸ್ ಕೇರಳದಿಂದ ಮಂಗಳೂರಿಗೆ ಆಗಮಿಸುವವರ ಕೋವಿಡ್ ಟೆಸ್ಟ್…
ಉಳ್ಳಾಲ: ತೀಯಾ ಸೇವಾ ಸಹಕಾರ ಸಂಘ (ನಿ) ಇದರ 2021ರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ತೊಕ್ಕೊಟ್ಟು ಒಳಪೇಟೆಯ ಶಿವಾನಿ ಕಾಂಪ್ಲೆಕ್ಸ್ ನ ಸಂಘದ ಕಚೇರಿಯಲ್ಲಿ ನಡೆಯಿತು.ನೂತನ ಅಧ್ಯಕ್ಷರಾಗಿ ಚುನಾಯಿತರಾದ ದಿನೇಶ್ ಎಂ.ಕುಂಪಲ ಹಾಗೂ ಉಪಾಧ್ಯಕ್ಷರಾಗಿ ಸುನಿಲ್ .ಜೆ.ಉಚ್ಚಿಲ ಅಧಿಕಾರ ವಹಿಸಿಕೊಂಡರು. ಪ್ರಕಾಶ್ ಎಂ.ಉಳ್ಳಾಲ್, ನಾಗಪ್ಪ ಬಿ.ಅಡ್ಯಾರ್, ಅಭಿಜಿತ್ ಬೆಳ್ಚಾಡ, ಮಾಧವ, ಸೂರಜ್, ಸತೀಶ್ ಕುಮಾರ್ ಪುಂಡಿಕಾಯ್, ಉಮೇಶ್ ಕೆ., ರಜನಿ ಕುಮಾರಿ, ಹರಿಣಾಕ್ಷಿ ಹಾಗೂ ಲತಾ ವಿ. ಸಂಘದ ನಿರ್ದೇಶಕರುಗಳಾಗಿ ಅಧಿಕಾರ ಸ್ವೀಕರಿಸಿದರು.ಉಳ್ಳಾಲ ಶ್ರೀ ಚೀರುಂಭ ಭಗವತಿ ಕ್ಷೇತ್ರದ ಅರ್ಚಕರಾದ ಮಂಜಪ್ಪ ಕಾರ್ನವರ್, ಅಪ್ಪು ಆತಾರ್ ಪದಗ್ರಹಣ ಸಮಾರಂಭ ನೆರವೇರಿಸಿಕೊಟ್ಟರು. ಭಗವತೀ ಬ್ಯಾಂಕ್ ಮಾಜಿ ಅಧ್ಯಕ್ಷ ಸದಾಶಿವ ಉಳ್ಳಾಲ್, ಭಗವತಿ ಕೋ ಆಪರೇಟಿವ್ ಬ್ಯಾಂಕಿನ ನಿರ್ದೇಶಕ ದೇವದಾಸ್ ಕೊಲ್ಯ, ಕಾಂಗ್ರೆಸ್ ಮುಖಂಡ ಫಾರುಕ್ ಉಳ್ಳಾಲ್, ಉದ್ಯಮಿ ರವಿಶೆಂಕರ್ ಶೆಟ್ಟಿ, ಲಕ್ಷ್ಮಣ್ ವಿ.ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಪ್ರ.ಕಾ ನೀರಜ್ ಪಾಲ್ , ಜಿಲ್ಲಾ ಕಾಂಗ್ರೆಸ್ ಮುಖಂಡ ಟಿ.ಕೆ ಸುಧೀರ್, ಗಣೇಶ್…
ಉಳ್ಳಾಲ: ಇತಿಹಾಸ ಪ್ರಸಿದ್ಧ ಒಂಭತ್ತು ಮಾಗಣೆ ಸೋಮೇಶ್ವರ ಶ್ರೀ ಸೋಮನಾಥ ಕ್ಷೇತ್ರದಲ್ಲಿ ನೂತನ ಬ್ರಹ್ಮರಥ ಸಮರ್ಪಣೆಯೊಂದಿಗೆ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ತೊಕ್ಕೊಟ್ಟು ಜೈ ವೀರಮಾರುತಿ ವ್ಯಾಯಾಮ ಶಾಲೆಯಿಂದ ಹೊರೆ ಕಾಣಿಕೆ ಹಾಗೂ ನೂತನ ಬ್ರಹ್ಮರಥದ ಭವ್ಯ ಮೆರವಣಿಗೆ ಶ್ರೀ ಕ್ಷೇತ್ರ ಸೋಮೇಶ್ವರದವರೆಗೆ ನಡೆಯಿತು.ಜೈ ವೀರಮಾರುತಿ ವ್ಯಾಯಾಮ ಶಾಲೆಯಲ್ಲಿ ಮೆರವಣಿಗೆಗೆ ಶ್ರೀ ಕ್ಷೇತ್ರ ಉಳಿಯದ ಧರ್ಮದರ್ಶಿ ದೇವುಮೂಲ್ಯಣ್ಣ, ಶ್ರೀ ಕ್ಷೇತ್ರ ಮಾಣಿಲದಾಮದ ಶ್ರೀ ಮೋಹನ್‍ದಾಸ್ ಸ್ವಾಮೀಜಿ, ಸೋಮೇಶ್ವರ ಶ್ರೀ ಸೋಮನಾಥ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಬಿ. ರವೀಂದ್ರನಾಥ ರೈ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮತಿ ಪದಾ„ಕಾರಿಗಳು, ಹೊರೆ ಕಾಣಿಕೆ ಸಮಿತಿ ಪದಾ„ಕಾರಿಗಳು, ವ್ಯವಸ್ಥಾಪನಾ ಸಮಿತಿ ಸದಸ್ಯರು, ವಿವಿಧ ಸಂಘಟಟನೆಗಳ ಮುಖಂಡರು, ಧಾರ್ಮಿಕ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಉಳ್ಳಾಲ: ನಿನ್ನೆ ಸಂಜೆ ವೇಳೆ ಸುರಿದ ಭಾರೀ ಗಾಳಿ ಮಳೆಗೆ ಕೆ.ಜಿಗಟ್ಟಲೆ ತೂಕವಿದ್ದ ಸ್ವಾಗತ ಕಮಾನೊಂದು ರಸ್ತೆಗೆ ಉರುಳಿದರೆ, ದಶಕಗಳಿಂದ ಬೀರಿ ಜಂಕ್ಷನ್ ನ ರಾಷ್ಟ್ರೀಯ ಹೆದ್ದಾರಿ 66ರ ಬದಿಯಲ್ಲಿ ಹಾಕಲಾದ ಒಂದು ಕೋಲು , ಕೋಲಿನ ಅಳತೆಗೆ ಸಮಾನಾಗಿ ತಟ್ಟಿ , ಅದಕ್ಕೊಂದು ಕೆಎಸ್‍ಆರ್‍ಟಿಸಿ ಬಸ್ಸು ನಿಲುಗಡೆಯ ಸೂಚನೆಯ ನಾಮಫಲಕ ಕನಿಷ್ಟ ಅಂದರೂ 5 ರಿಂದ 6 ಕೆಜಿಯ ಬಸ್ಸು ನಿಲ್ದಾಣ ಮಾತ್ರ ಬೀಳದೆ ತನ್ನ ಬಲಪ್ರದರ್ಶಿಸಿದೆ. ಈ ಕುರಿತು ಬೀರಿ ನಿವಾಸಿ ಯುವಕರು ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.`ವೀಕ್ಷಕರೇ, ಭಾರೀ ಮಳೆಗೆ, ಭಾರೀ ಗಾಳಿ ಬರ್ಸಕೆ ಇಡೀ ದ್ವಾರ ಮಗುಚಿಬಿದ್ದಿದೆ. ಆದರೆ ಕೆಎಸ್ ಆರ್ ಟಿಸಿ ಬಸ್ ಸ್ಟ್ಯಾಂಡ್ ಇಲ್ಲಿವರೆಗೂ ಏನೂ ಆಗಿಲ್ಲ. ಎಂತ ಗಾಳಿ ಬಂದರೂ ಉರುಳದೇ ನಿಂತಿದೆ. ಯಾವ ಬಿರುಗಾಳಿಗೂ ಬಗ್ಗದ ನಮ್ಮ ಕೆಎಸ್ ಆರ್ ಟಿಸಿ ಬಸ್ ಸ್ಟ್ಯಾಂಡ್. ಕ್ಯಾಮರಾಮೆನ್ ಶಿವಪ್ರಸಾದ್ ಜತೆಗೆ ಸೂರಜ್ ಟಿವಿ 9 ‘ .…
ಉಳ್ಳಾಲ: ಇತಿಹಾಸ ಪ್ರಸಿದ್ಧ ಒಂಭತ್ತು ಮಾಗಣೆ ಸೋಮೇಶ್ವರ ಶ್ರೀ ಸೋಮನಾಥ ಕ್ಷೇತ್ರದಲ್ಲಿ ನೂತನ ಬ್ರಹ್ಮರಥ ಸಮರ್ಪಣೆಯೊಂದಿಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಎ. 18ರ ಭಾನುವಾರದಿಂದ ಎಪ್ರಿಲ್ 26ರ ಸೋಮವಾರದವರೆಗೆ ನಡೆಯಲಿದೆ.ಸೋಮೇಶ್ವರ ದೇವಸ್ಥಾನದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಸೋಮೇಶ್ವರ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಹಾಗೂ ದೇವಸ್ಥಾನದ ವ್ಯವಸ್ತಾಪನಾ ಸಮಿತಿ ಅಧ್ಯಕ್ಷ ಬಿ. ರವೀಂದ್ರನಾಥ ರೈ ಮಾತನಾಡಿ ಶ್ರೀ ಕ್ಷೇತ್ರದಲ್ಲಿ ನವೀಕರಣಗೊಂಡಿರುವ ಶ್ರೀ ಮಹಾಗಣಪತಿ, ಶ್ರೀ ವಿಷ್ಣಮೂರ್ತಿ, ಪಾರ್ಥಸಾರಥಿ,ಶ್ರೀ ಗೋಪಾಲಕೃಷ್ಣ ಮತ್ತು ಶ್ರೀ ಪಂಚದುರ್ಗಿ , ಕಲ್ಲುರ್ಟಿ -ಕಲ್ಕುಡ, ನಾಗ, ರಕ್ತೇಶ್ವರೀ ಸಾನಿಧ್ಯಗಳ ಪುನರ್‍ಪ್ರತಿಷ್ಠ, ಅಷ್ಟಬಂಧ ಕಲಶಾದಿಗಳು ಕ್ಷೇತ್ರ ತಂತ್ರಿವರ್ಯರರಾದ ವೇದಮೂರ್ತಿ ಬ್ರಹ್ಮಶ್ರೀ ನಿಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕøತಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು ಈ ಸಂದರ್ಭದಲ್ಲಿ ಬ್ರಹ್ಮರಥದ ಸಮರ್ಪಣೆಯೂ ನಡೆಯಲಿದೆ ಎಂದರು.ಶ್ರೀ ಕ್ಷೇತ್ರದಲ್ಲಿ ಎ. 18ರಂದು ಭಾನುವಾರ ಗಣಪತಿ ಪ್ರಾರ್ಥನೆ, ಉಗ್ರಾಣ ಮುಹೂರ್ತ ಹಾಗೂ ಚಪ್ಪರ ಮುಹೂರ್ತದೊಂದಿಗೆ ವೈದಿಕ ಕಾರ್ಯಕ್ರಮಗಳು ಆರಂಬಗೊಳ್ಳಲಿದ್ದು, ಎ. 19ರಂದು ಸೋಮವಾರ ಮಧ್ಯಾಹ್ನ 2.30ಕ್ಕ…

