Author: UllalaVani

Kannada News From Coastal Karnataka

ಉಳ್ಳಾಲ: ಬೇರೆಯವರು ಪಾಠ ಹೇಳಿದರೂ ಅದರ ಅರಿವು ಜ್ಞಾನ ಪಡೆಯುವುದು ವ್ಯಕ್ತಿಯ ಮನೋಭಾವ ಆಗಿದೆ. ಈ ನಿಟ್ಟಿನಲ್ಲಿ ಅರಿವೇ ತಿಳುವಳಿಕೆ, ಜ್ಞಾನವೇ ಗುರು ಆಗಿರುತ್ತದೆ. ಇಂತಹ ಗುರು ಪರಂಪರೆಯನ್ನು ಗೌರವಿಸುವ ಕಾರ್ಯ ಭಗತ್ ಸಿಂಗ್ ಪ್ರತಿಷ್ಠಾನದಿಂದ ಆಗಿದೆ ಎಂದು ನಿವೃತ್ತ ಶಿಕ್ಷಕ ವಾಸುದೇವ ರಾವ್ ಅಭಿಪ್ರಾಯಪಟ್ಟರು ತೊಕ್ಕೊಟ್ಟು ಭಗತ್ ಸಿಂಗ್ ಸೇವಾ ಪ್ರತಿಷ್ಠಾನ ಆಶ್ರಯದಲ್ಲಿ ಗುರು ಪೂರ್ಣಿಮೆ ಪ್ರಯುಕ್ತ ಉಳ್ಳಾಲದ ಸುಂದರಿಭಾಗ್ ಶ್ರೀ ವೀರಾಂಜನೇಯ ಸೇವಾ ಟ್ರಸ್ಟ್ ನ ವ್ಯಾಯಾಮ ಶಾಲೆ ಸಭಾಂಗಣದಲ್ಲಿ ಹಮ್ಮಿಕೊಂಡ  ಗುರುವಂದನೆಯನ್ನು ಸ್ವೀಕರಿಸಿ ಮಾತನಾಡಿದರು.ವ್ಯಾಸರು ಬರೆದ ನಾಲ್ಕು ವೇದಗಳನ್ನು ಬರೆದು ಕೊನೆಯಾಗಿಸಿದ ದಿನವೇ  ಗುರುಪೂರ್ಣಿಮೆ ದಿನ. ಸಾವಿರಾರು ವರ್ಷಗಳಿಂದ ಗುರುಗಳ ದಿನಾಚರಣೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ವ್ಯಕ್ತಿಯೋರ್ವನಿಗೆ ಸಂಪರ್ಕದಲ್ಲಿರುವವರು ಎಲ್ಲರೂ ಗುರುಗಳೇ. ವಿವಿಧ ಅನಿಭವಗಳನ್ನು ಕೊಡುವವರು ಗುರುಗಳೇ ಆಗಿರುತ್ತಾರೆ.  ಪ್ರಕೃತಿಯೂ ಗುರು ಸಮಾನ,  ನಿಸರ್ಗದಿಂದ ಹಲವು ವಿಚಾರಗಳನ್ನು ಕಲಿಯುತ್ತೇವೆ ಎಂದರು .ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಗತ್ ಸಿಂಗ್ ಸೇವಾ ಪ್ರತಿಷ್ಠಾನ ದ ಅಧ್ಯಕ್ಷ ಜೀವನ್ ಕುಮಾರ್ ಕೆರೆಬೈಲು ಮಾತನಾಡಿಶಿಕ್ಷಕ…

Read More

ಉಳ್ಳಾಲ: ಆಂಬ್ಯುಲೆನ್ಸ್ ವಾಹನಕ್ಕೆ ಅಡ್ಡಿಪಡಿಸಿದ ವಾಹನದ ವೀಡಿಯೋ ವೈರಲ್ ಆಗಿದ್ದು, ಅದರಂತೆ ನಾಗುರಿ ಸಂಚಾರಿ ಠಾಣಾ ಪೊಲೀಸರು ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿ, ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕೋಟೆಕಾರು ನಿವಾಸಿ ಚರಣ್ ರಾಜ್ (28) ಬಂಧಿತ.ಜು. 19 ರ ಸಂಜೆ ಕಣಚೂರು ಆಸ್ಪತ್ರೆಯಿಂದ ಮಂಗಳೂರು ಆಸ್ಪತ್ರೆಗೆ ಎಮರ್ಜೆನ್ಸಿ ಇದ್ದ ರೋಗಿಯನ್ನು ಅಂಬುಲೆನ್ಸ್ ಮುಖಾಂತರ ಕೊಂಡೊಯ್ಯಲಾಗುತಿತ್ತು. ಈ ಸಂದರ್ಭಇರ್ಟಿಗಾ KA19 MJ8924 ಕಾರಿನ ಚಾಲಕನು ಬೇಜವಾಬ್ದಾರಿಯಾಗಿ ವರ್ತಿಸಿ ಆಂಬ್ಯುಲೆನ್ಸ್ ಹಾದಿಗೆ ಅಡ್ಡವಾಗಿ ಚಲಿಸುತ್ತಾ ರೋಗಿ ಕೊಂಡೊಯ್ಯಲು ಮತ್ತು ಸಮಯಕ್ಕೆ ಸರಿಯಾಗಿ ತಲುಪಿಸಲು ಅಡ್ಡಿಪಡಿಸಿದ್ದನು. ಈ ಕುರಿತು ಆಂಬ್ಯುಲೆನ್ಸ್ ಸಿಬ್ಬಂದಿ ಕಾರಿನ ವೀಡಿಯೋ ತೆಗೆದು ವೈರಲ್ ಮಾಡಿದ್ದ. ಅದರಂತೆ ನಾಗುರಿ ಸಂಚಾರಿ ಠಾಣಾ ಪೊಲೀಸರು ಕಾರನ್ನು ಇಂದು ವಶಕ್ಕೆ ಪಡೆದು ಕೊಂಡಿದ್ದಾರೆ. ಆರೋಪಿ ಕಿವಿಯಲ್ಲಿ ಇಯರ್ ಫೋನ್ ಇಟ್ಟು ಕಾರು ಚಲಾವಣೆ ನಡೆಸುತ್ತಿದ್ದ ಎಂದು ಪೊಲೀಸ್ ತನಿಖೆ ವೇಳೆ ತಿಳಿಸಿದ್ದಾನೆ.

Read More

ವರದಿ : ಪ್ರವೀಣ್ ಕುರ್ನಾಡು (ಉಮಾ ಸ್ಟುಡಿಯೋ) ಉಳ್ಳಾಲ: ಕೇಂದ್ರದ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ(ಎನ್ ಆರ್ ಎಲ್ ಎಂ) ಯೋಜನೆಯಡಿಯಲ್ಲಿ ಕುರ್ನಾಡು ಗ್ರಾಮಪಂಚಾಯತ್ ವ್ಯಾಪ್ತಿಯ ಮಜಲು ನಿವಾಸಿಗಳು ಸಕ್ರಿಯವಾಗಿ ತೊಡಗಿಸಿಕೊಂಡು ಹಡಿಲು ಬಿದ್ದ ಗದ್ದೆಯಲ್ಲಿ ಕೃಷಿ ಚಟುವಟಿಕೆಗಳನ್ನು ನಡೆಸಿ ಯಶಸ್ಸು ಕಂಡಿದ್ದಾರೆ.ಗ್ರಾಮದ ವನಸುಮ ಸಂಜೀವಿನಿ ಅನ್ನುವ ಮಹಿಳಾ ಒಕ್ಕೂಟ ಸಮುದಾಯ ಬಂಡವಾಳದ ನಿಧಿಯನ್ನು ಪಡೆದು ಸುಮಾರು ಏಳು ವರ್ಷಗಳಿಂದ ಹಡಿಲು ಬಿದ್ದ ದಿ| ನಾರಯಣ ದೇವಸ್ಯ ಹಾಗೂ ಮಕ್ಕಳಿಗೆ ಸೇರಿದ ಗದ್ದೆಯಲ್ಲಿ ಭತ್ತದ ಬೇಸಾಯವನ್ನು ನಡೆಸಿದ್ದಾರೆ. ಲಾಕ್ಡೌನ್ ಅವಧಿಯನ್ನು ಸದುಪಯೋಗಪಡಿಸಿಕೊಂಡು ಕಾರ್ಯದಲ್ಲಿ ಪಾಲ್ಗೊಂಡರು.ಒಂದು ತಿಂಗಳ ಕಾಲ ಹಡಿಲು ಬಿದ್ದ ಗದ್ದೆಯಲ್ಲಿ ಬೆಳೆದ ಹುಲ್ಲು, ಗಿಡ ಗಂಟೆಗಳನ್ನು ಕಡಿದು ಬಳಿಕ ಟ್ರ್ಯಾಕ್ಟರ್ ಉಪಯೋಗಿಸಿ ಉಳುಮೆ ನಡೆಸಲಾಗಿದೆ. ಕೆಲಸವಿಲ್ಲದವರಿಗೆ ಕೆಲಸ ಕೊಡುವ ಮೂಲಕ ಕೃಷಿ ಕಾರ್ಯವನ್ನು ನಡೆಸಲಾಯಿತು. ಒಕ್ಕೂಟದಲ್ಲಿ 23 ಸ್ವಸಹಾಯ ಗುಂಪುಗಳು ಸೇರ್ಪಡೆಯಾಗಿ ಈ ಒಂದು ಯೋಜನೆಯನ್ನು ಕೈಗೆತ್ತಿಕೊಂಡಿತ್ತು. ಮಹಿಳಾ ಸಬಲೀಕರಣಗೊಳಿಸುವ ಉದ್ದೇಶದಿಂದ ಆರಂಭವಾದ ಕೇಂದ್ರದ ಯೋಜನೆ ಇಲ್ಲಿ ಸಾಕಾರಗೊಂಡಿದೆ.ತಾಲೂಕು ಪಂಚಾಯಿತಿ…

Read More

ಉಳ್ಳಾಲ: ಎಸೆಸೆಲ್ಸಿ ಪರೀಕ್ಷೆ ನಡೆಯುತ್ತಿದ್ದ ಕೊಠಡಿಯ ಸಮೀಪವೆ ಇದ್ದ ಲ್ಯಾಬ್‍ನಲ್ಲಿ ಬೆಂಕಿ ಅವಘಡ ಸಂಭವಿಸಿ ಇಡೀ ಲ್ಯಾಬ್ ಹೊತ್ತಿ ಉರಿದ ಘಟನೆ ಬಬ್ಬುಕಟ್ಟೆಯ ಹಿರಾ ಮಹಿಳಾ ಕಾಲೇಜಿನಲ್ಲಿ ಸೋಮವಾರ ನಡೆದಿದೆ.ಬೆಂಕಿ ಅವಘಡ ಸಂಭವಿಸಿದ ಲ್ಯಾಬ್ ಇದ್ದ ಕಟ್ಟಡದಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಎಸೆಸೆಲ್ಸಿ ಪರೀಕ್ಷೆ ಬರೆಯುತ್ತಿದ್ದು, ಅವರನ್ನೆಲ್ಲಾ ಕರ್ತವ್ಯದಲ್ಲಿದ್ದ ಶಿಕ್ಷಕರು ಮತ್ತು ಸಿಬ್ಬಂದಿಗಳು ಸುರಕ್ಷಿತವಾಗಿ ಮತ್ತೊಂದು ಕಟ್ಟಡಕ್ಕೆ ಸ್ಥಳಾಂತರಿಸಿದ್ದಾರೆ.ಸರ್ವಿಸ್ ಲೈನ್‍ನಲ್ಲಿನ ವಿದ್ಯುತ್ ಏರಿಳಿತವೇ ಈ ಅವಘಡಕ್ಕೆ ಕಾರಣ ಎಂದು ಎಂದು ಕಾಲೇಜಿನ ಆಡಳಿತ ಮಂಡಳಿ ತಿಳಿಸಿದೆ.ಸ್ಥಳಕ್ಕೆ ನಗರ ಪೆÇಲೀಸ್ ಕಮಿಷನರ್ ಶಶಿಕುಮಾರ್ ಭೇಟಿ ನೀಡಿದರು.200 ಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದರು. 10.30 ಗೆ ಪರೀಕ್ಷೆ ಆರಂಭವಾದರೆ 10.45ರ ಸಮೀಪ ಬಯೋಲಾಜಿ ಲ್ಯಾಬ್ ನಲ್ಲಿ ಹೊಗೆ ಆವರಿಸಿತು. ಸ್ವಲ್ಪ ಹೊತ್ತಿನಲ್ಲಿ ಬೆಂಕಿಯೂ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸ್ಥಳ ಸೂಕ್ತವಲ್ಲ ಎಂದು ಇನ್ನೊಂದು ಕಟ್ಟಡಕ್ಕೆ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಿದ್ದಾರೆ. ಆದರೆ ವಿದ್ಯಾರ್ಥಿಗಳಿಗೆ ಇದರಿಂದ ಯಾವುದೇ ತೊಂದರೆಯಾಗಿಲ್ಲ. ಸೆಂಟರ್ ಇನ್ಚಾರ್ಜ್, ಎಸ್‍ಎಸ್‍ಎಲ್‍ಸಿ ಬೋರ್ಡಿನವರು…

Read More

ಉಳ್ಳಾಲ: ಉಳ್ಳಾಲ ನಗರಸಭೆ ವ್ಯಾಪ್ತಿಯ ರಿಕ್ಷಾ ಚಾಲಕರ ಮನವಿಗೆ ಸ್ಪಂಧಿಸಿರುವ ಶಾಸಕರು ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರದ ಸಹಕಾರದೊಂದಿಗೆ 300 ಕ್ಕೂ ಅಧಿಕ ರಿಕ್ಷಾ ಚಾಲಕರುಗಳಿಗೆ ಉಚಿತ ವ್ಯಾಕ್ಸಿನ್ ಒದಗಿಸಿಕೊಟ್ಟಿದ್ದಾರೆ ಎಂದು ಉಳ್ಳಾಲ ನಗರಸಭೆ ಉಪಾಧ್ಯಕ್ಷ ಅಯೂಬ್ ಮಂಚಿಲ ಹೇಳಿದರು.ಅವರು ತೊಕ್ಕೊಟ್ಟು ಸಮೀಪದ ಕಲ್ಲಾಪು ಖಾಸಗಿ ಸಭಾಂಗಣದಲ್ಲಿ ಉಳ್ಳಾಲ ನಗರಸಭೆ ವ್ಯಾಪ್ತಿಯ ರಿಕ್ಷಾ ಚಾಲಕರಿಗೆ ಹಮ್ಮಿಕೊಂಡ ಉಚಿತ ವ್ಯಾಕ್ಸಿನ್ ನೀಡುವ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.ಉಳ್ಳಾಲ ನಗರಸಭೆ ಅಧ್ಯಕ್ಷೆ ಚಿತ್ರಾ ಚಂದ್ರಕಾಂತ್ ಮಾತನಾಡಿ, ಸಂಧಿಗ್ಧ ಸ್ಥಿತಿಯಲ್ಲಿ ರಿಕ್ಷಾ ಚಾಲಕರು ಹಣ ಕೊಟ್ಟು ವ್ಯಾಕ್ಸಿನ್ ಪಡೆಯಲು ಅಸಾಧ್ಯ. ಅವರ ಕಷ್ಟಕ್ಕೆ ಶಾಸಕರು ಸ್ಪಂಧಿನೆ ಕೃತಜ್ಞಕಾಪೂರ್ವ ಎಂದರು.ಈ ವೇಳೆ ಉಳ್ಳಾಲ ನಗರಸಭೆ ಅಧ್ಯಕ್ಷೆ ಚಿತ್ರಾ ಚಂದ್ರಕಾಂತ್, ಉಳ್ಳಾಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ವಿದ್ಯಾಸಾಗರ್, ಉಳ್ಳಾಲ ನಗರಸಭೆ ಸದಸ್ಯರಾದ ಜಬ್ಬಾರ್, ರವಿಚಂದ್ರ ಗಟ್ಟಿ, ಅಝೀಝ್, ವೀಣಾ ಡಿಸೋಜ, ಭಾರತಿ, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರುಗಳಾದ ಮುಸ್ತಾಫ ಅಬ್ದುಲ್ಲಾ, ಉಸ್ಮಾನ್ ಕಲ್ಲಾಪು, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಮಹಿಳಾ…

Read More

ಉಳ್ಳಾಲ: ದೇಶದ ಸೈನಿಕರು, ಪಾರ್ಲಿಮೆಂಟ್ ವ್ಯವಸ್ಥೆ, ವಿಜ್ಞಾನಿಗಳ ಮೇಲೆ ನಂಬಿಕೆಯಿಲ್ಲದ ಕಾಂಗ್ರೆಸ್ ಪಕ್ಷದಿಂದ ಜನತೆ ಯಾವುದನ್ನೂ ನಿರೀಕ್ಷಿಸುವುದಿಲ್ಲ, ಸದೃಢವಾಗಿ ನಿಶ್ಚಿತ ಧಿಕ್ಕಿನೆಡೆಗೆ ಕೊಂಡೊಯ್ಯುತ್ತಿರುವ ಬಿಜೆಪಿ ಸರಕಾರದ ಮೇಲೆ ಅಪಾರ ನಂಬಿಕೆ ಉಳಿದಿದದೆ. ಅದಕ್ಕಾಗಿ ಕಾರ್ಯಕರ್ತರು ಸಮಾಜದ ನಿರೀಕ್ಷೆಗೆ , ಪರೀಕ್ಷೆಗೆ ಸರಿಯಾಗಿ ಉತ್ತರದ ಉತ್ತರದಾಯಿತ್ವದ ಸ್ಥಾನದಲ್ಲಿ ನಿಲ್ಲಬೇಕು ವಿಧಾನಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಅಭಿಪ್ರಾಯಪಟ್ಟರು.ಅವರು ತೊಕ್ಕೊಟ್ಟು ಕಾಪಿಕಾಡಿನ ಗಟ್ಟಿ ಸಮಾಜ ಭವನದಲ್ಲಿ ಸೋಮವಾರ ಆಯೋಜಿಸಲಾದ ಬಿಜೆಪಿ ಮಂಗಳೂರು ಮಂಡಲ ವಿಶೇಷ ಕಾರ್ಯಕಾರಿಣಿ ಸಮಿತಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.ವ್ಯಕ್ತಿಪೂಜೆಗೆ ಸೀಮಿತಗೊಂಡ ಪಕ್ಷವಲ್ಲ, ಘೋಷಣೆಗಳು ಬಲಯುತವಾಗಿರಬೇಕು, ಭಾವಯುತವಾಗಿರಬೇಕು ಇದರಿಂದ ದೇಶ ಶಕ್ತಿಯುತವಾಗಿ ಬೆಳಗಲು ಸಾಧ್ಯ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಎರಡು ಅವಧಿಗಳ ಕಾಲ, ಕಾಂಗ್ರೆಸ್ಸೇತರ ಸರಕಾರ ರಾಷ್ಟ್ರವನ್ನು ಆಳುತ್ತಿದೆ. ಕರ್ನಾಟಕದಲ್ಲಿಯೂ ಉತ್ತಮ ಆಡಳಿತವನ್ನು ನೀಡಿದೆ. ಆದರೆ ಕಾಂಗ್ರೆಸ್ಸಿನ ಸುಳ್ಳು ಅಪಪ್ರಚಾರಗಳಿಂದ ಗೊಂದಲಗಳಾಗುತ್ತಿವೆ.ಕಾರ್ಯಕರ್ತರಲ್ಲಿಯೂ ಹೇಳಿಕೆಗಳು, ಬೆಳವಣಿಗೆಗಳು, ಗೊಂದಲಗಳು ಮನಸ್ಸಿನಲ್ಲಿ ಮೂಡಿದರೆ , ಉದ್ದೇಶದ ಪುನರುಚ್ಛಾರ ಮಾಡಬೇಕಿದೆ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದರೆ ಅಪಾಯಕಾರಿ,…

Read More

ಉಳ್ಳಾಲ : ತೊಕ್ಕೊಟ್ಟು ಕಾಪಿಕಾಡು ಬಳಿ ಮುಸ್ಲಿಂ ಮನೆಗೆ ಹಿಂದೂ ಯುವತಿಯನ್ನು ಯುವಕನೋರ್ವ ಕರೆ ತಂದಿರುವ ಕುರಿತು ಮಾಹಿತಿ ಪಡೆದ ಉಳ್ಳಾಲ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದುಕೊಂಡಿರುವ ಘಟನೆ ನಿನ್ನೆ ತಡರಾತ್ರಿ ವೇಳೆ ನಡೆದಿದೆ. ಗುಲ್ಬರ್ಗಾ ಮೂಲದ 30 ರ ಹರೆಯದ ಮಹಿಳೆಯನ್ನು ಮುಸ್ಲಿಂ ಯುವಕನೋರ್ವ ಮಂಗಳೂರು ರೈಲ್ವೇ ನಿಲ್ದಾಣದಿಂದ ಕರೆತಂದಿದ್ದ. ಈ ಬಗ್ಗೆ ಸ್ಥಳೀಯರು ಗಮನಿಸಿ, ಹಿಂದೂ ಯುವತಿ ಇರುವುದನ್ನು ಖಚಿತಪಡಿಸಿ ಉಳ್ಳಾಲದ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ರಾತ್ರೋರಾತ್ರಿ ಇಬ್ಬರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಮಹಿಳೆ ಪತಿ ತೀರಿಕೊಂಡಿದ್ದು, ಗುಲ್ಬರ್ಗಾ ಮೂಲದವಳಾಗಿದ್ದು, ಕೇರಳದ ಮನೆಯಲ್ಲಿ ಕೆಲಸಕ್ಕಿರುವುದಾಗಿ ತಿಳಿಸಿದ್ದಳು. ಕೇರಳ ನಿವಾಸಿ ಆಗಿರುವ ಯುವಕನ ಮನೆಯಲ್ಲಿ ಮಹಿಳೆ ಕೆಲಸಕ್ಕಿದ್ದರು. ಯುವಕ ಬೆಂಗಳೂರಿಗೆ ಹೋಗುವವನಾಗಿದ್ದು, ಕಾಪಿಕಾಡಿನ ಸಂಬಂಧಿಕರ ಮನೆಯಲ್ಲಿ ಬಂದು ಮೊದಲೇ ನಿಂತಿದ್ದನು. ಕೇರಳದಿಂದ ಗುಲ್ಬರ್ಗಾಕ್ಕೆ ಹೋಗುವ ಮಹಿಳೆ ಶನಿವಾರ ಸಂಜೆ ಮಂಗಳೂರು ರೈಲ್ವೇ ನಿಲ್ದಾಣದಲ್ಲಿ ಬಂದಿಳಿದು, ಇಂದು ಯುವಕನ ಜೊತೆಗೆ ಬೆಂಗಳೂರಿಗೆ ತೆರಳಿ ಅಲ್ಲಿಂದ ಗುಲ್ಬರ್ಗಾ…

Read More

ಉಳ್ಳಾಲ : ಯುವತಿಯೋರ್ವಳು ಸ್ನಾನ ಮಾಡುವಾಗ ಮೊಬೈಲಿನಲ್ಲಿ ಕದ್ದು ಚಿತ್ರೀಕರಿಸುತ್ತಿದ್ದ ಯುವಕನ ಕೃತ್ಯ ಬೆಳಕಿಗೆ ಬರುತ್ತಿದ್ದಂತೆ, ಯುವಕ ಸ್ಥಳದಿಂದ ಕಾಲ್ಕಿತ್ತಿರುವ ಘಟನೆ ಕೋಟೆಕಾರು ಸಮೀಪದ ಮಾಡೂರು ಎಂಬಲ್ಲಿ ನಿನ್ನೆ ತಡರಾತ್ರಿ ವೇಳೆ ನಡೆದಿದೆ. ಕೆಲಸ ಮುಗಿಸಿ ಮನೆಗೆ ವಾಪಸ್ಸಾದ ಯುವತಿ ಮನೆ ಅಂಗಳದಲ್ಲಿರುವ ಬಾತ್ ರೂಮಿನಲ್ಲಿ ಸ್ನಾನಕ್ಕೆ ಇಳಿದಿದ್ದರು. ಇದೇ ಸಂದರ್ಭವನ್ನು ಉಪಯೋಗಿಸಿದ ಯುವಕ ಮನೆಯಂಗಳದಲ್ಲಿ ಇರಿಸಲಾಗಿದ್ದ ಮರದ ಸ್ಟೂಲನ್ನು ತೆಗೆದು ಬಾತ್ ರೂಮಿನ ಕಿಟಕಿ ಬಳಿ ಇರಿಸಿ ಮೇಲಕ್ಕೆ ಹತ್ತಿ ಮೊಬೈಲ್ ಮೂಳ ವೀಡಿಯೋ ತೆಗೆದಿದ್ದಾನೆ. ಸ್ನಾನದ ಬಳಿಕ ಟವಲನ್ನು ತೆಗೆಯಲು ಯುವತಿ ಮುಂದಾಗುತ್ತಿದ್ದಂತೆ ಮೊಬೈಲಿನ ಬೆಳಕು ಕಾಣಿಸಿಕೊಂಡಿದ್ದು, ಯುವತಿ ಬೊಬ್ಬಿಟ್ಟಿದ್ದಾರೆ. ಆದರೆ ಅಷ್ಟರಲ್ಲಾಗಲೇ ಕಿರಾತಕ ಯುವಕ ಪರಾರಿಯಾಗಿದ್ದಾನೆ. ಈ ಕುರಿತ ನೊಂದ ಯುವತಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

Read More

ಉಳ್ಳಾಲ: ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯಲು ಬಸ್ಸಿನಲ್ಲಿ ಸಂಚರಿಸುವ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ಸು ಪ್ರಯಾಣಕ್ಕೆ ಪೂರ್ವ ವಲಯ ಬಸ್ಸು ಮಾಲಕರ ಒಕ್ಕೂಟ ಮತ್ತು ಕರಾವಳಿ ವಲಯ ಬಸ್ಸು ಮಾಲಕರ ಒಕ್ಕೂಟ ವ್ಯವಸ್ಥೆ ಮಾಡಿದ್ದು, ವಿದ್ಯಾರ್ತಿಗಳು ಪ್ರವೇಶಪತ್ರ ತೋರಿಸಿ ಈ ವ್ಯಾಪ್ತಿಯ ಬಸ್ಸುಗಳಲ್ಲಿ ಟಿಕೆಟ್ ರಹಿತವಾಗಿ ಪ್ರಯಾಣಿಸಬಹುದು ಎಂದು ಪೂರ್ವ ವಲಯ ಬಸ್ಸು ಮಾಲಕರ ಒಕ್ಕೂಟದ ಅಧ್ಯಕ್ಷ ಶೇಷಪ್ಪ ಶೆಟ್ಟಿ ತಿಳಿಸಿದರು.ದೇರಳಕಟ್ಟೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಜು. 19 ಮತ್ತು ಜು. 22ರಂದು ನಡೆಯುವ ಎಸ್‍ಎಸ್‍ಎಲ್‍ಸಿ ಪರೀಕ್ಷಗೆ ವಿಟ್ಲ, ಕನ್ಯಾನ, ಮಂಜನಾಡಿ ಮುಡಿಪು, ಹರೇಕಳ. ಪಾವೂರು ಕೊಣಾಜೆ ವ್ಯಾಪ್ತಿಯಿಂದ ಮಂಗಳೂರು ವಿಶ್ವವಿದ್ಯಾನಿಲಯ ರಸ್ತೆಯಾಗಿ ತೊಕ್ಕೊಟ್ಟುವಿಂದ ಮಂಗಳೂರಿಗೆ ಸಂಚರಿಸುವ ಪೂರ್ವ ವಲಯ ಮತ್ತು ಸ್ಟೇಟ್‍ಬ್ಯಾಂಕ್ ಮತ್ತು ಮಂಗಳಾದೇವಿಯಿಂದ ಹೊರಟು ಲಾಭಾಗ್, ಕೂಳೂರು, ಬೈಕಂಪಾಡಿ, ಸುರತ್ಕಲ್, ಕಾಟಿಪಳ್ಳ ಕಡೆಗೆ ಸಂಚರಿಸುವ ಕರಾವಳಿ ವಲಯದ ಬಸ್ಸುಗಳಲ್ಲಿ ಈ ಆವಕಾಶ ಕಲ್ಪಿಸಲಾಗಿದೆ. ಕೋವಿಡ್ -19ರ ಸಾಂಕ್ರಾಮಿಕ ರೋಗದ ಹಾವಳಿಯಿಂದ ತತ್ತರಿಸುತ್ತಿರುವ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಪೆÇ್ರೀತ್ಸಾಹ ನೀಡುವ…

Read More

ಉಳ್ಳಾಲ: ಬಾಡಿಗೆ ಮನೆಯಲ್ಲಿ ವಾಸವಿದ್ದ ಮಹಿಳೆಯೊಬ್ಬರು ನಾಪತ್ತೆಯಾಗಿರುವ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಉಳ್ಳಾಲದ ಅಬ್ಬಕ್ಕ ವೃತ್ತ ಬಳಿಯಿರುವ ಪದ್ಮಶಾಲಿ ಕಂಪೌಂಡ್ ಎಂಬಲ್ಲಿನ ಬಾಡಿಗೆ ಮನೆಯಲ್ಲಿ ವಾಸವಿದ್ದ ನಾಗೇಂದ್ರ ಎಂಬವರ ಪತ್ನಿ ಪ್ರೇಮ(30) ನಾಪತ್ತೆಯಾದವರು. ಜು.10 ರಂದು ಮನೆಯಿಂದ ಹೊರಹೋದವರು ವಾಪಸ್ಸಾಗದೆ ನಾಪತ್ತೆಯಾಗಿದ್ದಾರೆ. ಇವರನ್ನು ಸ್ವಂತ ಊರು ದಾವಣಗೆರೆಯಲ್ಲಿ ಮತ್ತು ಸಂಬಂಧಿಕರ ಮನೆಗಳಲ್ಲಿ ಹುಡುಕಾಡಿದರೂ ಪತ್ತೆಯಾಗಿಲ್ಲ. ಎಲ್ಲಿಯಾದರೂ ಪತ್ತೆಯಾದಲ್ಲಿ ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Read More