Author: UllalaVani

Kannada News From Coastal Karnataka

UN Networks ಬೆಳ್ತಂಗಡಿ : ಬೆಳ್ತಂಗಡಿಯಲ್ಲಿ ತುಲುವೆರೆ ಪಕ್ಷ ಅಸ್ತಿತ್ವಕ್ಕೆ ಬಂದಿದ್ದು, ಇತ್ತೀಚೆಗೆ ಬೆಳ್ತಂಗಡಿ ತಾಲೂಕು ಮಟ್ಟದ ಕಾರ್ಯಕರ್ತರ ಸಭೆ ಅಂಬೇಡ್ಕರ್ ಭವನದಲ್ಲಿ ನಡೆಯಿತು. ತುಲುವೆರೆ ಪಕ್ಷದ ಅಧ್ಯಕ್ಷ ಶೈಲೇಶ್ ಆರ್.ಜೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನ್ಯಾಯವಾದಿ ಪ್ರಶಾಂತ್ ಎಂ. ಅವರನ್ನು ಆಯ್ಕೆ ಮಾಡಲಾಯಿತು. ತುಳು ಭಾಷೆಗೆ ಸ್ಥಾನಮಾನ, ತುಳುನಾಡಿನ ಸಮಗ್ರ ಅಭಿವೃದ್ದಿ ಮತ್ತು ತುಳುನಾಡ್ ರಾಜ್ಯ ರಚನೆಗೆ ಪಕ್ಷವನ್ನು ಬಲಿಷ್ಠವಾಗಿ ಕಟ್ಟುವ ನಿರ್ಣಯದೊಂದಿಗೆ ಬೆಳ್ತಂಗಡಿ ತಾಲೂಕು ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ನ್ಯಾಯವಾದಿ ಪ್ರಶಾಂತ್. ಎಂ, ಉಪಾಧ್ಯಕ್ಷರಾಗಿ ಮುಖಿಂ ಖಾನ್, ಪ್ರಧಾನ ಕಾರ್ಯದರ್ಶಿಯಾಗಿ ನ್ಯಾಯವಾದಿ ಸತೀಶ್ ಪೂಜಾರಿ .ಎನ್, ಜೊತೆ ಕಾರ್ಯದರ್ಶಿಯಾಗಿ ದಿನೇಶ್ ಆರ್. ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಗೋಪಾಲ್ ಸಂಜಯನಗರ, ಸುರೇಂದ್ರ ಬಂಗಾಡಿ, ಧನಂಜಯ ಕುಮಾರ್ ಡಿ., ಉಮೇಶ್ ಕುಲಾಲ್, ಮಹಮ್ಮದ್ ಶರೀಫ್, ಮನೋಹರ್ ಕುಮಾರ್, ಗಿರೀಶ್ ನಿಸರ್ಗ ಆಯ್ಕೆಯಾದರು. ತುಲುವೆರೆ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳಾದ ನವೀನ್ ಪೂಜಾರಿ, ರೇಖಾ ಲೋಬೋ, ರಾಜೇಶ್ ಕುಲಾಲ್, ಪ್ರವೀಣ್ ಕುಮಾರ್…

Read More

UN networks ಉಳ್ಳಾಲ: ಕಳೆದ ಐದು ವರ್ಷಗಳಿಂದ  ಕಾಬೂಲಿನಲ್ಲಿ  ನ್ಯಾಟೋ ಪಡೆಯ ಮಿಲಿಟರಿ ಬೇಸ್ ನಲ್ಲಿ  ಇಕೊಲಾಗ್  ಇಂಟರ್ ನ್ಯಾಷನಲ್  ಕಂಪೆನಿಯಲ್ಲಿ ಎ.ಸಿ ಮೆಕ್ಯಾನಿಕ್  ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ  ಡೆಮ್ಸಿ ಮೊಂತೇರೊ (29) ಇಂದು ಉಳ್ಳಾಲ ಉಳಿಯದಲ್ಲಿರುವ ತನ್ನ ಮನೆಗೆ ತಲುಪಿದ್ದಾರೆ. ಆ.18 ರಂದು ಇವರ ಸಹೋದರ ಮೆಲ್ವಿನ್ ಮೊಂತೇರೋ ತಾಯ್ನಾಡಿಗೆ ಮರಳಿದ್ದರು.  ಸಹೋದರ ಡೆಮ್ಸಿ ಅಪಘಾನಿಸ್ತಾನದಲ್ಲಿ ಸಿಲುಕಿರುವುದರಿಂದ ಚಿಂತೆಯಲ್ಲಿದ್ದ ಕುಟುಂಬ ಇದೀಗ ನಿರಾಳವಾಗಿದೆ. ಕುಟುಂಬದ ಸದಸ್ಯರು ಹಾಗೂ ನಗರಸಭೆ ಸದಸ್ಯೆ ಜೊತೆಗೆ  ಅಪಘಾನಿನಿಂದ್ ವಾಪಸ್ಸಾದ ಸಹೋದರರು  ಅಪಘಾನಿಸ್ತಾನದಿಂದ ವಾಪಸ್ಸಾದ ಡೆಮ್ಸಿ ಮೊಂತೇರೊ ವಾಪಸ್ಸಾದ ಡೆಮ್ಸಿ ಮೊಂತೇರೋ ಅವರನ್ನು ಸ್ವಾಗತಿಸಿದ ಸಹೋದರ ಮೆಲ್ವಿನ್ ಮೊಂತೇರೊ ಕಾಬುಲ್ ನಲ್ಲಿ ನಡೆದ ಗುಂಡಿನ ದಾಳಿಯ ವೀಡಿಯೋ ಸೆರೆಹಿಡಿದ ಡೆಮ್ಸಿ ಮೊಂತೇರೊ ಆ.17 ರಂದು ನ್ಯಾಟೋ ಪಡೆಯ ಕ್ಯಾಂಪ್ ನಲ್ಲಿದ್ದ  ಮೆಲ್ವಿನ್ ಮೊಂತೇರೋ ಅವರನ್ನು ಭಾರತೀಯ ವಾಯುಪಡೆ  ಕಾಬೂಲ್ ನಿಂದ    ಏರ್ ಲಿಫ್ಟ್ ನಡೆಸಿ ಗುಜರಾತ್ ಗೆ ಕರೆತಂದಿದ್ದರು. ಆದರೆ ಸಹೋದರ  ಡೆಮ್ಸಿ ಮೊಂತೇರೋ…

Read More

UN networks ಉಳ್ಳಾಲ: ಹೊರಗೆ ಹೋಗುತ್ತಿದ್ದಲ್ಲಿ ತಾಲಿಬಾನಿಗರು ಗುಂಡು ದಾಳಿ ನಡೆಸುತ್ತಿದ್ದರು. ಆದರೆ ನ್ಯಾಟೋ ಏರ್‍ಬೇಸ್ ಕ್ಯಾಂಪಿನ ಒಳಗೆಯೇ ಕೆಲಸವಿರುವುದರಿಂದ ಹೊರಹೋಗುವ ಅವಕಾಶವೂ ಇರಲಿಲ್ಲ. ಮನೆಗೆ ಯಾವಾಗ ತಲುಪುತ್ತೇನೋ ಅನ್ನುವ ಪ್ರಶ್ನೆ ಇತ್ತು. ಭಾರತೀಯ ರಾಯಭಾರಿ ಕಚೇರಿ ಮತ್ತು ಅಮೆರಿಕಾ ವಾಯುಸೇನೆ ಸಹಕಾರದಿಂದ ಆ.17 ರಂದು ಏರ್ ಲಿಫ್ಟ್  ಆಗಿ ಕತಾರ್ ನಲ್ಲಿ ಮೂರು ದಿನಗಳ ಕಾಲ ಉಳಿದು, ಇಂದು ದೆಹಲಿಗೆ ತಲುಪಿ ಅಲ್ಲಿಂದ ಮನೆಗೆ ಮರಳಿದ್ದೇನೆ. ಇದು ಅಫ್ಘಾನಿಸ್ಥಾನದ ನ್ಯಾಟೋ ಪಡೆಯ ಅಧೀನದ ಲಂಡನ್ ಮೂಲದ ಓವರ್ ಸೀಸ್ ಸಪ್ಲೈ ಸರ್ವೀಸಸ್ ಸಂಸ್ಥೆಯಲ್ಲಿ ಅಕೌಂಟೆಂಟ್ ಆಗಿದ್ದ ಕೊಲ್ಯ ಕನೀರುತೋಟ ನಿವಾಸಿ ಪ್ರಸಾದ್ ಅವರ ಮಾತು.   ಬಿಜೆಪಿ ಮಂಡಲ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ಭೇಟಿ ಶಾಸಕ ಯು.ಟಿ ಖಾದರ್ ಭೇಟಿ ಕಳೆದ ಎಂಟು ವರ್ಷಗಳಿಂದ ನ್ಯಾಟೋ ಪಡೆಯ ಕಂಪೆನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. 2021ರ ಫೆಬ್ರವರಿಗೆ ಆಗಮಿಸಿದ್ದ ಪ್ರಸಾದ್ ಎಪ್ರಿಲ್ 3ರಂದು ಅಫ್ಘಾನಿಸ್ಥಾನಕ್ಕೆ ತೆರಳಿದ್ದರು. ಅಪಘಾನಿಸ್ತಾನ ತಾಲಿಬಾನಿಗರ ವಶವಾಗುತ್ತಿದ್ದಂತೆ ,…

Read More

ಉಳ್ಳಾಲ: ಭಯೋತ್ಪಾದನೆಯಂತಹ ಕೃತ್ಯಗಳು ದೇಶದ ಯಾವುದೇ ಮೂಲೆಯಲ್ಲಾದರೂ ಕೂಡ ಬಿಜೆಪಿ ಹಾಗೂ ಸಂಘಟನೆಗಳು ಸಹಿಸುವುದಿಲ್ಲ. ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತು ಹಾಕಲು ಎಲ್ಲಿಗೆ ಬೇಕಾದರೂ ಹೋಗಲು ತಯಾರಿದ್ದೇವೆ ಎಂದು ಬಿಜೆಪಿ ಮಂಗಳೂರು ಕ್ಷೇತ್ರ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ತಿಳಿಸಿದ್ದಾರೆ.ಸಂಘಪರಿವಾರದ ಕಾರ್ಯಕರ್ತರು ಉಳ್ಳಾಲದ ಎನ್‍ಐಎ ದಾಳಿ ನಡೆದಿರುವ ಮನೆಗೆ ಮುತ್ತಿಗೆ ಹಾಕಿರುವುದರ ವಿರುದ್ಧ ಶಾಸಕ ಯು.ಟಿ ಖಾದರ್ ನೀಡಿರುವ ಹೇಳಿಕೆ ವಿರುದ್ಧ ಮಾತನಾಡಿರುವ ಅವರು ಪತ್ರಿಕಾಗೋಷ್ಟಿಯಲ್ಲಿ ಯು.ಟಿ ಖಾದರ್ ಸಂಘಪರಿವಾರಕ್ಕೆ ಉಳ್ಳಾಲಕ್ಕೆ ಬರಲು ತಾವು ಯಾರು ಎಂದು ಕೇಳಿದ್ದಾರೆ. ಆದರೆ ರಾಷ್ಟ್ರದ ಮೂಲೆ ಮೂಲೆಯ ವಿಷಯದಲ್ಲಿ ಏನೇ ಆದರೂ ಕೈ ಹಾಕುವ ಖಾದರ್ ರವರಿಗೆ ತಮ್ಮ ಕ್ಷೇತ್ರದ ವಿಷಯವು ಮುಖ್ಯವಾಗದೇ ಇರಬಹುದು. ಆದರೆ ಉಳ್ಳಾಲದಲ್ಲಿ ನಡೆಯುವ ದೇಶವಿರೋಧಿ ಕೃತ್ಯಗಳನ್ನು ಸಂಘಪರಿವಾರ ಹಾಗೂ ಬಿಜೆಪಿಗೆ ಸಹಿಸಲು ಸಾಧ್ಯವಿಲ್ಲ . ಅಷ್ಟು ಮಾತ್ರವಲ್ಲದೇ ಉಳ್ಳಾಲ ಭವ್ಯ ಭಾರತದಲ್ಲಿಯೇ ಇದ್ದು ಅಲ್ಲಿಗೆ ಹೋಗಲು ಯಾರು ಕೂಡ ಅನುಮತಿ ನೀಡಬೇಕಾದ ಅನಿವಾರ್ಯತೆ ಒದಗಿ ಬಂದಿಲ್ಲ.ಲವ್ ಜಿಹಾದ್ ನಿಷೇಧದ…

Read More

ಉಳ್ಳಾಲ : ಪ್ರಯಾಣಿಕರಿಗೆ  ಮೂಲಭೂತ ಸೌಕರ್ಯ ಕಲ್ಪಿಸುವ ಕಾರ್ಯವನ್ನು  ಊರಿನ ಹಿರಿಯರು  ಹಾಗೂ ಮಂದಿರದ ಆಡಳಿತ ಮಂಡಳಿ ಸೇರಿಕೊಂಡು ಮಾಡುತ್ತಿರುವ  ಕಾರ್ಯ ಶ್ಲಾಘನೀಯ ಎಂದು  ಹೆಚ್ ಬಿಎಫ್ ಪ್ರೈ. ಲಿ ನ  ಆಡಳಿತ ನಿರ್ದೇಶಕ ಬಾಬ್ ಸಿಂಗ್ ಹೇಳಿದರು.ಅವರು ಕುಂಪಲ ಶ್ರೀ ಬಾಲಕೃಷ್ಣ ಮಂದಿರದ  ರಜತ ವರ್ಷಾಚರಣೆ 1997-2022 ಸೇವಾ ಕಾರ್ಯದ ಅಂಗವಾಗಿ ನೂತನ ಬಸ್ಸು ತಂಗುದಾಣ ನೆರಳು ಇದರ ಶಿಲಾನ್ಯಾಸ   ನೆರವೇರಿಸಿ ಮಾತನಾಡಿದರು.ಬಸ್ಸು ತಂಗುದಾಣವನ್ನು ಕೊಡುಗೆಯಾಗಿ ನೀಡಿದ ದಿ| ರಾಮ ಸಾಲಿಯಾನ್ ಕುಂಪಲ ಇವರ  ಸೊಸೆ ಶಾಲಿನಿ ಶೇಖರ್ ಬಂಗೇರ, ದಿ. ಮುರಳಿ (ಐಓಸಿ) ಇವರ ಪುತ್ರಿ ಬಿಂದು, ದಿ| ರಾಮ ಭಂಜನ್ ಹನುಮಾನ್‍ನಗರ ಇವರ ಪತ್ನಿ ಅಂಭಾ ಬಂಗೇರ ಮುಖ್ಯ ಅತಿಥಿಗಳಾಗಿದ್ದರು. ಈ ಸಂದರ್ಭ ಮಂದಿರದ ಗೌರವಾಧ್ಯಕ್ಷ ಕೇಶವದಾಸ್ ಬಗಂಬಿಲ,   ಗುತ್ತಿಗೆದಾರ ಪ್ರಸಾದ್ ಕಡಬ ಸುಳ್ಯ, ಪ್ರಧಾನ ಕಾರ್ಯದರ್ಶಿ ರವೀಂದ್ರ ಕುಂಪಲ, ಮಹಿಳಾ ಸಮಿತಿ ಅಧ್ಯಕ್ಷೆ ಸುಶೀಲ ಕೆ,  ರಜತ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಮೋಹನ್…

Read More

ಉಳ್ಳಾಲ : ರೈಲು ಢಿಕ್ಕಿ ಹೊಡೆದು ನವಿಲೊಂದು ಸಾವನ್ನಪ್ಪಿರುವ ಘಟನೆ ಸೋಮೇಶ್ವರ ಪುರಸಭಾ ವ್ಯಾಪ್ತಿಯ ಕೋಟೆಕಾರು ಸ್ಟೆಲ್ಲಾ ಮೇರಿ ಶಾಲಾ ಹಿಂಭಾಗದಲ್ಲಿ ನಡೆದಿದೆ.ಶುಕ್ರವಾರ ಮಧ್ಯಾಹ್ನ ವೇಳೆ ರೈಲು ಹಳಿ ಬಳಿ ನವಿಲು ಸಾವನ್ನಪ್ಪಿರುವ ಸ್ಥಿತಿಯಲ್ಲಿ ಕಂಡುಬಂದಿತ್ತು. ಸ್ಥಳೀಯರು ಪುರಸಭೆ ಮುಖ್ಯಾಧಿಕಾರಿ ಅವರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿತ್ತು. ಸ್ಥಳಕ್ಕಾಗಮಿಸಿದ ಅರಣ್ಯ ಅಧಿಕಾರಿಗಳು , ಸೋಮೇಶ್ವರದ ಹಿಂದು ರುದ್ರಭೂಮಿಯಲ್ಲಿ ಸರಕಾರಿ ಗೌರವದೊಂದಿಗೆ ಅಂತಿಮ ಸಂಸ್ಕಾರ ನಡೆಸಿದರು.ಈ ವೇಳೆ ಸೋಮೇಶ್ವರ ಪುರಸಭೆ ಮುಖ್ಯಾಧಿಕಾರಿ ವಾಣಿ ಆಳ್ವ, ಅರಣ್ಯ ಸಂರಕ್ಷಣಾಧಿಕಾರಿ ಸೌಮ್ಯ, ತಾ.ಪಂ ಮಾಜಿ ಸದಸ್ಯ ರವಿಶಂಕರ್ , ಪುರಸಭೆ ಪ್ರಬಂಧಕ ಕೃಷ್ಣ ಹಾಗೂ ಸಿಬ್ಬಂದಿ ಶ್ರೀನಾಥ್ ಉಪಸ್ಥಿತರಿದ್ದರು.

Read More

ಉಳ್ಳಾಲ: ಕೇರಳದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಗಡಿಭಾಗವಾದ ದಕ್ಷಿಣ ಕನ್ಬಡದಲ್ಲೂ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ಬಲೆಯಲ್ಲಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ರಾಜ್ಯ ಗಡಿ ಭಾಗದ ತಲಪಾಡಿ ಚೆಕ್ ಪೋಸ್ಟ್ ನಲ್ಲಿ ಕೋವಿಡ್ ತಪಾಸಣೆ ಕುರಿತು ಪರಿಶೀಲಿಸಲು ಶುಕ್ರವಾರ ಭೇಟಿ ನೀಡಿದರು.ಈ ಸಂದರ್ಭದಲ್ಲಿ ಗಡಿಯಲ್ಲಿ ಕೈಗೊಳ್ಳಲಾಗಿರುವ ಕೋವಿಡ್ ತಪಾಸಣಾ ಕಾರ್ಯಗಳ ಪ್ರಕ್ರಿಯೆಗಳನ್ನು ಪರಿಶೀಲಿಸಿದ ಅವರು ಗಡಿಭಾಗದಲ್ಲಿ ಕೇರಳದಿಂದ ಜಿಲ್ಲೆಗೆ ಆಗಮಿಸುತ್ತಿರುವವರ ಸಂಖ್ಯೆ ಹೆಚ್ಚಳವಾಗಿದ್ದು ಈಗಾಗಲೇ ಲಸಿಕೆ ಹಾಕಿದವರಿಗೆ ಮತ್ತು ನೆಗೆಟಿವ್ ವರದಿ ಇರುವವರಿಗೆ ಜಿಲ್ಲೆಗೆ ಪ್ರವೇಶಕ್ಕೆ ಅವಕಾಶವಿದ್ದು, ಈ ಮಾರ್ಗಸೂಚಿಯನ್ಬು ಇನ್ಬಷ್ಟು ಕಟ್ಟು ನಿಟ್ಡು ಮಾಡುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ಕರೆದು , ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಕೆಲವೊಂದು ನಿಯಮಗಳನ್ನು ಪಾಲಿಸುವ ನಿಟ್ಟಿನಲ್ಲಿ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು ಸರಕಾರದ ಮಾರ್ಗದರ್ಶನದಂತೆ ಇನ್ನೆರಡು ದಿನಗಳಲ್ಲಿ ಕೋವಿಡ್ ಗೆ ಸಂಬಂಧಿಸಿದ ಹೊಸ ಮಾರ್ಗಸೂಚಿಯನ್ಬು ಜಿಲ್ಲಾಡಳಿತ ರೂಪಿಸಲಿದೆ ಎಂದರುಈಗಾಗಲೆರ ಜಿಲ್ಲೆಯಲ್ಲಿ ದಿನವೊಂದಕ್ಕೆ 9000 ಜನರ ಪರೀಕ್ಷೆಗೆ ಟಾರ್ಗೆಟ್ ಇಟ್ಟುಕೊಂಡಿದ್ದು ಪ್ರತೀ ದಿನ ಏಳು…

Read More

ಉಳ್ಳಾಲ: ಕೇರಳದ ಕಾಸರಗೋಡಿನ ಮಂಜೇಶ್ವರದ ಹೊಸಂಗಡಿಯ ರಾಜಧಾನಿ ಜುವೆಲ್ಲರಿ ಮಳಿಗೆಯ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ ಪೆÇಲೀಸರು ಪ್ರಮುಖ ಆರೋಪಿ ಫರಂಗಿಪೇಟೆಯ ಮೊಹಮ್ಮದ್ ಗೌಸ್ ತಂಡದ ಪತ್ತೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಇನ್ನೊಂದೆಡೆ ಮಂಜೇಶ್ವರ ಪೆÇಲೀಸರು ಕರ್ನಾಟಕ ಪೆÇಲೀಸರ ಸಹಕಾರ ದೊಂದಿಗೆ ಆರೋಪಿಗಳ ಬೆನ್ನತ್ತಿದ್ದಾರೆ. ಜು. 26 ರಂದು ತಡ ರಾತ್ರಿ ಹೊಸಂಗಡಿಯ ರಾಜಧಾನಿ ಜುವೆಲ್ಲರಿಯ ವಾಚ್‍ಮೆನ್‍ಗೆ ಹಲ್ಲೆ ನಡೆಸಿ ಕಟ್ಟಿ ಹಾಕಿ ದರೋಡೆ ನಡೆಸಿ ಬರುತ್ತಿದ್ದ ವೇಳೆ ಆರೋಪಿಗಳ ಕಾರನ್ನು ತಲಪಾಡಿ ಸಮೀಪದ ಕೆ.ಸಿ. ರೋಡ್ ಜಂಕ್ಷನ್‍ನಲ್ಲಿ ಅಡ್ಡಗಟ್ಟಿದ ಉಳ್ಳಾಲ ಪೆÇಲೀಸರು 7.75 ಕೆಜಿ ಬೆಳ್ಳಿ ಸೇರಿದಂತೆ ಸುಮಾರು 14,35,500 ರೂ. ಮೌಲ್ಯದ ಸೊತ್ತನ್ನು ವಶಪಡಿಸಿಕೊಂಡಿದ್ದರು.ಕಾಟಿಪಳ್ಳ ಮೂಲದ ವ್ಯಕ್ತಿಯಿಂದ ಉಳ್ಳಾಲದಿಂದ ಬಾಬಾಬುಡಾನ್‍ಗಿರಿಗೆ ತೆರಳಲು ಇನ್ನೋವಾ ಕಾರನ್ನು ಬಾಡಿಗೆ ಪಡೆದುಕೊಂಡಿದ್ದ ಆರೋಪಿಗಳು ಕೇರಳಕ್ಕೆ ತೆರಳಿದ್ದು ನಡುರಾತ್ರಿ ಕಾರು ಮಂಜೇಶ್ವರದಿಂದ ತಲಪಾಡಿ ಕಡೆ ಬರುತ್ತಿರುವ ಮಾಹಿತಿ ಜಿಪಿಎಸ್ ಆಧಾರದಲ್ಲಿ ಕಾರಿನ ಮಾಲಿಕನಿಗೆ ಸಂಶಯ ಬಂದು ಉಳ್ಳಾಲ ಪೆÇಲೀಸರಿಗೆ ಮಾಹಿತಿ ನೀಡಿದ್ದರಿಂದ ಪ್ರಕರಣ ಬೆಳಕಿಗೆ ಬಂದಿತ್ತು.…

Read More

ಅಂಬ್ಲಮೊಗರು: ಇಲ್ಲಿನ ಗ್ರಾಮ ಪಂಚಾಯತ್ ನ ಗ್ರಾಮ ಸಹಾಯಕ ತನ್ನ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಇಂದು ಬೆಳಗ್ಗೆ ನಡೆದಿದೆ. ಅಂಬ್ಲಮೊಗರು ಪಡ್ಯಾರ ಮನೆ ಗುತ್ತಿನ ನಿತಿನ್ ಶೆಟ್ಟಿ (34) ಆತ್ಮಹತ್ಯೆಗೈದವರು. ಮನೆ ಕೋಣೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.ಇಂದು ಬೆಳಗ್ಗೆ ಪತ್ನಿಯನ್ನು  ವಾಹನದಲ್ಲಿ ಕುತ್ತಾರಿನ ವರೆಗೆ ಕೆಲಸಕ್ಕೆ ಬಿಟ್ಟು ಬಂದಿದ್ದರು. ಬಳಿಕ ಮನೆಯಲ್ಲಿ ಕೃತ್ಯವೆಸಗಿದ್ದಾರೆ.  ಮನೆಯಲ್ಲಿದ್ದ ತಾಯಿ ರೂಮಿನೊಳಗೆ ತೆರಳಿದಾಗ  . ಮೃತ ನಿತಿನ್ ಅವರು ತಾಯಿ, ಪತ್ನಿ, ಮೂರು ಸಹೋದರರನ್ನ ಅಗಲಿದ್ದಾರೆ. ಕೊಣಾಜೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ‌. ಅಂಬ್ಲಮೊಗರು ಪಂಚಾಯಿತಿನಲ್ಲಿ ನಿತಿನ್ ಅವರ ಚಿಕ್ಕಪ್ಪ ಗ್ರಾಮಸಹಾಯಕರಾಗಿದ್ದು, ಅವರ ಅಗಲುವಿಕೆಯ ಬಳಿಕ ಅವರ ನಿತಿನ್ ಅವರಿಗೆ ಕೆಲಸ ದೊರೆತಿತ್ತು. ಎರಡು ವರ್ಷಗಳ ಹಿಂದೆ ನಿತಿನ್ ಅವರ ತಂದೆ ದಯಾನಂದ ಶೆಟ್ಟಿ ಅವರು ತೆಂಗಿನ ಮರದಿಂದ ಬಿದ್ದು ಸಾವನ್ನಪ್ಪಿದ್ದರು.

Read More

ಉಳ್ಳಾಲ: ಯೇನೆಪೊಯ ಮೊಯ್ದಿನ್ ಕುಂಞ ಮೆಮೋರಿಯಲ್ ಎಜುಕೇಶನಲ್ ಮತ್ತು ಚಾರಿಟೇಬಲ್  ಟ್ರಸ್ಟ್ನ ಘಟಕವಾಗಿರುವ ಯೇನೆಪೊಯ ಫೌಂಡೇಶನ್  ಹಾಗೂ ಯೇನೆಪೋಯ ಪರಿಗಣಿಸಲ್ಪಟ್ಟ  ವಿಶ್ವವಿದ್ಯಾನಿಲಯ ಅಡಿಯಲ್ಲಿ 2021-22 ರ  ಶೈಕ್ಷಣಿಕ ವರ್ಷಕ್ಕೆ   ಆರ್ಥಿಕವಾಗಿ  ಹಿಂದುಳಿದ ಪ್ರತಿಭಾವಂತ  ವಿದ್ಯಾರ್ಥಿಗಳಿಂದ ಮೆರಿಟ್ ಆಧಾರಿತ ವಿದ್ಯಾರ್ಥಿವೇತನಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಬಿಡಿಎಸ್, ಬಿಎಸ್ಸಿ ನರ್ಸಿಂಗ್, ಬಿಪಿಟಿ, ಬಿಫಾರ್ಮ, ಡಿ.ಫಾರ್ಮ, ಬಿಎಎಂಎಸ್, ಬಿಹೆಚ್ ಎಂ ಎಸ್, ಬಿಎನ್‍ವೈಎಸ್, ಬಿಹೆಚ್ ಎಂ ಎಸ್, ಬಿಎನ್ ವೈಎಸ್, ಬಿ.ಕಾಂ/ಬಿಬಿಎ/ಬಿಸಿಎ, ಬಿಹೆಚ್‍ಎ, ಬಿಪಿಹೆಚ್, ಬಿಎಸ್ಸಿ ಪ್ಯಾರ ಮೆಡಿಕಲ್ ಕೋರ್ಸುಗಳು, ಬಿಎಸ್ಸಿ ಹಾಸ್ಪಿಟಾಲಿಟಿ ಸೈನ್ಸ್, ಬಿಎಸ್ಸಿ ಕ್ಲಿನಿಕಲ್ ಸೈಕಾಲಜಿ, ಬಿಎಸ್ಸಿ ಫಾರೆನ್ಸಿಕ್ ಸೈನ್ಸ್, ಬಿಎಸ್ಸಿ ಮೈಕ್ರೋಬಯಾಲಜಿ,  ಸ್ನಾತಕೋತ್ತರ ಪದವಿ ಕೋರ್ಸುಗಳ ಅರ್ಹತಾ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಪರಿಗಣಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು, ದ.ಕ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ವ್ಯಾಸಾಂಗ ಮಾಡಿದ ಗ್ರೇಡ್ 10, 11,12 ರಲ್ಲಿ ಶೇ.80 ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಮುಸ್ಲಿಂ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.…

Read More