Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
UllalavaniUllalavani
ಅಪರಾಧ ಸುದ್ದಿಗಳು

ಸೋಮೇಶ್ವರ ಮೂಡಸೈಟ್‌ ನಲ್ಲಿ ತ್ಯಾಜ್ಯ ವಿಲೇವಾರಿ ಘಟಕ -ಸಿಡಿದೆದ್ದ ಗ್ರಾಮಸ್ಥರಿಂದ ವಿಲೇವಾರಿಗೆ ಬಂದ 20 ತ್ಯಾಜ್ಯ ಲಾರಿಗಳು ವಾಪಸ್‌

UllalaVaniBy UllalaVaniSeptember 4, 2019No Comments4 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

UN NETWORKS

ಉಳ್ಳಾಲ : ಉಳ್ಳಾಲ ನಗರಸಭೆ ಯ ತ್ಯಾಜ್ಯ ವಿಲೇವಾರಿ ಘಟಕವನ್ನು ಸೋಮೇಶ್ವರದ ಮೂಡ ಸೈಟಿನಲ್ಲಿ ಸ್ಥಾಪಿಸಿರುವುದರ ವಿರುದ್ಧ ಗ್ರಾಮದ ಜನ ಮಂಗಳವಾರ ವಿಲೇವಾರಿಗೆ ಬಂದ 20 ತ್ಯಾಜ್ಯದ ವಾಹನಗಳನ್ನು ವಾಪಸ್ಸು ಕಳುಹಿಸುವ ಮೂಲಕ ಪ್ರತಿಭಟನೆ ನಡೆಸಿದರು.

ಸೋಮೇಶ್ವರ ಸಮುದ್ರ ತೀರದ ಕೆಲವು ಮೀ. ದೂರದಲ್ಲಿ ಉಳ್ಳಾಲ ನಗರಸಭೆ ತ್ಯಾಜ್ಯ ವಿಲೇವಾರಿ ಘಟಕ ಎಂದು ಬೃಹತ್‌ ಗಾತ್ರದ ಶೀಟ್‌ ಹಾಕಿರುವ ಗೋಡೌನ್‌ ರಚಿಸಿದೆ. ಆರಂಭದಲ್ಲಿ ಗ್ರೀನ್‌ ಲ್ಯಾಂಡ್‌ ನ ಎಂದು ಗಿಡಗಳ ಮಾರಾಟಕ್ಕೆ ನಸ9ರಿ ರಚಿಸುತ್ತಿರುವುದಾಗಿ ಸುಳ್ಳು ಹೇಳಿತ್ತು. ಬಳಿಕ ಅಬ್ಬಕ್ಕ ಉತ್ಸವದ ಸಂದಭ9 ಮೊಗವೀರಪಟ್ನ ಸಮೀಪ ಅಬ್ಬಕ್ಕ ಉತ್ಸವ ಇರುವ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ತ್ಯಾಜ್ಯವವನ್ನು ಮೂಡ ಸೈಟಿನಲ್ಲಿ ವಿಲೇವಾರಿ ಮಾಡಲಾಗುವುದು ಎಂದು ಸ್ಥಳೀಯರನ್ನು ನಗರಸಭೆ ಅಧಿಕಾರಿಗಳು ನಂಬಿಸುವಲ್ಲಿ ಸಫಲರಾಗಿದ್ದರು. ಆದರೆ ಇದೀಗ ಒಂದು ತಿಂಗಳಿನಿಂದ ಸತತವಾಗಿ ತ್ಯಾಜ್ಯದ ಲಾರಿಗಳನ್ನು ಸ್ಥಳಕ್ಕೆ ತಂದು ತ್ಯಾಜ್ಯ ವಿಲೇವಾರಿ ನಡೆಸುವ ಕೆಲಸವಾಗುತ್ತಿದೆ. ಸ್ಥಳೀಯವಾಗಿ 100ಕ್ಕೂ ಅಧಿಕ ಮನೆಗಳು, ಧಾಮಿ9ಕ ಕೇಂದ್ರ, ಕೆರೆಗಳಿವೆ. ಪ್ರಮುಖವಾಗಿ ಸಮುದ್ರ ತೀರದ ಪ್ರದೇಶವಾಗಿರುವುದರಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಈ ಭಾಗಕ್ಕೆ ಭೇಟಿ ನೀಡುತ್ತಲೇ ಇರುತ್ತಾರೆ. ಆದರೆ ತಿಂಗಳಿನಿಂದ ಆರಂಭವಾದ ವಿಲೇವಾರಿ ಘಟಕದ ತ್ಯಾಜ್ಯಗಳು ಸ್ಥಳದಲ್ಲಿ ಬಿದ್ದು ದುವಾ9ಸನೆ ಬೀರಲು ಆರಂಭವಾಗಿದೆ. ಸ್ಥಳೀಯರು ನಗರಸಭೆ ಅಧಿಕಾರಿಗಳಿಗೆ ಹಲವು ಮನವಿ ಸಲ್ಲಿಸಿದರೂ ಯಾವುದೇ ರೀತಿಯ ಸ್ಪಂಧನೆ ನೀಡಿಲ್ಲ. ತ್ಯಾಜ್ಯ ವಿಲೇವಾರಿಯನ್ನು ಮುಂದುವರಿಸುತ್ತಲೇ ಬಂದಿದ್ದಾರೆ. ಇದರಿಂದ ಆಕ್ರೋಶಗೊಂಡ ಜನ ಇಂದು ಉಳ್ಳಾಲ ನಗರಸಭೆ ಪ್ರದೇಶದಿಂದ ಸಂಗ್ರಹಿಸಿ ತಂದ 20 ಲಾರಿಗಳನ್ನು ವಿಲೇವಾರಿ ನಡೆಸಲು ಬಿಡದೆ ವಾಪಸ್ಸು ಕಳುಹಿಸುವ ಮೂಲಕ ಉಗ್ರವಾಗಿ ಪ್ರತಿಭಟಿಸಿದರು.

ಎರಡನೇ ಪಚ್ಚನಾಡಿ : ಸೋಮೇಶ್ವರದ ಮೂಡ ಸೈಟ್‌ ಜನವಸತಿ ಇರುವ ಪ್ರದೇಶವಾಗಿದೆ. ಧಾಮಿ9ಕ ಇತಿಹಾಸವುಳ್ಳ ಪ್ರದೇಶದಲ್ಲಿ ಸೋಮನಾಥೇಶ್ವರ ದೇವರ ಜಳಕದ ಕೆರೆಯೂ ಇದೆ. ಇಲ್ಲಿ ಹಂದಿ, ದನ, ಕೋಳಿ ತ್ಯಾಜ್ಯವನ್ನು ವಿಲೇವಾರಿ ಮಾಡುವ ಕೆಲಸವಾಗುತ್ತಿದೆ. ಪ್ರಥಮವಾಗಿ ತ್ಯಾಜ್ಯ ವಿಲೇವಾರಿಗೆ ಸ್ಥಳ ಅನ್ನುತ್ತಾ ತ್ಯಾಜ್ಯ ಸಂಗ್ರಹವನ್ನು ಮಾಡುವ ಹುನ್ನಾರವನ್ನು ನಗರಸಭೆ ಮಾಡುತ್ತಿದೆ. ಸಮುದ್ರ ತೀರದಲ್ಲಿ ತ್ಯಾಜ್ಯ ರಾಶಿ ಹಾಕದಂತೆ ಹಿಂದೊಮ್ಮೆ ಜಿಲ್ಲಾಧಿಕಾರಿಗಳೇ ಆದೇಶಿಸಿದ್ದರು. ಅದನ್ನು ಪರಿಗಣನೆಗೆ ತೆಗೆದುಕೊಳ್ಳದೆ ಉಳ್ಳಾಲ ನಗರಸಭೆ ಆಡಳಿತ ಪವಿತ್ರವಾದ ಸೋಮೇಶ್ವರ ಪ್ರದೇಶವನ್ನು ಎರಡನೇ ಪಚ್ಚನಾಡಿ ಮಾಡಲು ಹೊರಟಿದೆ. ಮಳೆ ಸಂದಭ9 ಸಮುದ್ರದ ಅಲೆಗಳು ಹೊಡೆದರೆ, ತ್ಯಾಜ್ಯವಿಡೀ ಸ್ಥಳೀಯ ಮನೆಗಳ ಮೇಲೆ ಹಾಗೂ ಬಾವಿಯೊಳಗೆ ಬೀಳುವುದರಲ್ಲಿ ಸಂಶಯವಿಲ್ಲ. ನಗರಸಭೆ ಸಂದಭೋ9ಚಿತವಾಗಿ ಸ್ಪಂಧಿಸದೇ ಇದ್ದಲ್ಲಿ ಉಗ್ರ ರೀತಿಯ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು.

ಸಿಆರ್‌ ಝೆಡ್‌ ವ್ಯಾಪ್ತಿಯಲ್ಲೇ ಯೋಜನೆ : ಮೂಡ ಸೈಟ್‌ ನಿವಾಸಿ ಜಯ ಕುಮಾರ್‌ ಮಾತನಾಡಿ ಸಿಆರ್‌ ಝೆಡ್‌ ವ್ಯಾಪ್ತಿಯಲ್ಲಿ 500 ಮೀ ದೂರದಲ್ಲಿ ಯಾವುದೇ ಯೋಜನೆ, ನಿಮಾ9ಣ ಕೈಗೊಳ್ಳುವಂತಿಲ್ಲ. ಆದರೆ ಉಳ್ಳಾಲ ನಗರಸಭೆ ಆಡಳಿತ ಡಂಪಿಂಗ್‌ ನಡೆಸಲು ಗೋಡೌನ್‌ ರಚಿಸಿರುವುದು ಕಾನೂನು ಬಾಹಿರ. ಅವೈಜ್ಞಾನಿಕವಾಗಿ ಜನವಸತಿ ಇರುವ ಜಾಗದಲ್ಲೇ ಕಸವಿಲೇವಾರಿ ನಡೆಸುವ ಮೂಲಕ ಜನರ ಆರೋಗ್ಯ ಕಾಪಾಡಬೇಕಾದ ಸ್ಥಳೀಯಾಡಳಿತ ಜನರನ್ನು ಕೊಲ್ಲುವ ಹಂತಕ್ಕೆ ಬಂದಿರುವುದು ದುರಾದೃಷ್ಟಕರ ಎಂದರು.

ಇಡೀ ಸೋಮೇಶ್ವರ ಗ್ರಾಮಕ್ಕೆ ತೊಂದರೆ : ನೆಹರುನಗರ ಪಶ್ಚಿಮ್‌ ರಿಹ್ಯಾಬ್‌ ನಿರಾಶ್ರಿತರ ಆಶ್ರಮದ ರೂವಾರಿ ರೋಹಿತ್‌ ಸಾಂತೂಕ್ಸ್‌ ಮಾತನಾಡಿ ಕೊಳೆತ ವಸ್ತುಗಳನ್ನು , ತ್ಯಾಜ್ಯವನ್ನು ತಂದು ಪವಿತ್ರವಾದ, ಪ್ರವಾಸನೀಯ ಸ್ಥಳದಲ್ಲಿ ವಿಲೇವಾರಿ ಮಾಡುವುದು ಸರಿಯಲ್ಲ. ಇದು ಮೂಡ ಸೈಟಿಗೆ ಮಾತ್ರವಲ್ಲ, ಇಡೀ ಗ್ರಾಮಕ್ಕೆ ತೊಂದರೆಯಾಗುವಂತಹ ಕೆಲಸ. ಸರಿಯಾದ ಸಮಯದಲ್ಲಿ ನಿಲ್ಲಿಸದೇ ಇದ್ದಲ್ಲಿ ಮುಂದೆ ಜನರು ಅನಾರೋಗ್ಯದಿಂದ ಬಳಲುವುದು ಖಚಿತ. ಮೊದಲ ಹಂತದಲ್ಲಿ ನಿಲ್ಲಿಸದೇ ಇದ್ದಲ್ಲ ಗ್ರಾಮಸ್ಥರೆಲ್ಲರೂ ಸೇರಿಉಗ್ರ ಹೋರಾಟವನ್ನು ನಡೆಸುತ್ತೇವೆ ಎಂದರು.

ಧಾರ್ಮಿಕ ಸ್ಥಳಕ್ಕೆ ಧಕ್ಕೆ ಮಾಡದಿರಿ : ಸಿಸ್ಟರ್‌ ಬೆನ್ನೀ ಮಾತನಾಡಿ, ಹಲವು ಮನೆಗಳಿವೆ, ಅಲೋಷಿಯನ್‌ ಬಾಯ್ಸ್‌ ಹೋಂ ನಿವಾಸ, ದೇವಸ್ಥಾನಗಳಿವೆ. ಆದರೂ ಇದೇ ಪ್ರದೇಶದಲ್ಲಿ ಯೋಜನೆ ಜಾರಿಗೊಳಿಸಿರುವುದು ಇಡೀ ಗ್ರಾಮದ ಜನರಿಗೆ ಬೇಸರ ತಂದಿದೆ. ಆರೋಗ್ಯ ಕಾಪಾಡುವುದು ನಗರಸಭೆಯ ಹೊಣೆಯಾಗಿದೆ. ಅದನ್ನು ಮಾಡುವುದರ ಬದಲು ಜನರಿಗೆ ತೊಂದರೆಯಾಗದ ರೀತಿಯಲ್ಲಿ ನಡೆದುಕೊಳ್ಳಿ ಎಂದರು.

ನಗರಸಭೆ ಜನರ ಅನಾರೋಗ್ಯಕ್ಕೀಡಾಗುವಂತೆ ಮಾಡಿದೆ: ಸ್ಥಳೀಯ ನಿವಾಸಿ ಜಲಜಾಕ್ಷಿ ಮಾತನಾಡಿ ಆರೋಗ್ಯವಂತ ಜೀವನ ನಡೆಸುವ ಉದ್ದೇಶದಿಂದ ಸೈಟ್‌ ಪಡೆದುಕೊಂಡೆವು. ಆದರೆ ಪ್ರದೇಶದಲ್ಲಿ ಯಾವುದೇ ಒಳಚರಂಡಿ ಯೋಜನೆಯನ್ನು ಮಾಡದ ನಗರಸಭೆ , ಇದೀಗ ತ್ಯಾಜ್ಯ ಘಟಕವನ್ನು ಸ್ಥಾಪಿಸಿ ಜನರನ್ನು ಅನಾರೋಗ್ಯಕ್ಕೀಡಾಗುವಂತೆ ಮಾಡುತ್ತಿದೆ. ಒಳಚರಂಡಿ ಕುರಿತು ಮನವಿ ಮಾಡುತ್ತಾ ಬಂದರೂ ಯಾವುದೇ ರೀತಿಯ ಸ್ಪಂಧನೆ ದೊರೆತಿಲ್ಲ. ನಗರಸಭೆಯನ್ನು ಸಂಪಕಿ9ಸಿದಾಗ ಘಟಕವಲ್ಲ ಸಪರೇಷನ್‌ ಮಾತ್ರ ಅನ್ನುತ್ತಾ ಸುಳ್ಳು ಹೇಳುತ್ತಿದ್ದಾರೆ. ಯೋಜನೆಯನ್ನು ಕೂಡಲೇ ಕೈಬಿಡಬೇಕು. ಲೇಔಟನ್ನು ಆರೋಗ್ಯವಂತ ಲೇಔಟಾಗಿ ರೂಪಿಸಬೇಕಿದೆ.

ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಬೇಡಿ :
ಸೋಮೇಶ್ವರ ಪುರಸಭೆ ಸದಸ್ಯ ರವಿರಾಜ್‌ ಮಾತನಾಡಿ, ವಷ9ಕ್ಕೊಮ್ಮೆ ಶ್ರೀ ಸೋಮನಾಥ ದೇವರ ಹಾಗೂ ಅಡ್ಕ ಭಗವತಿ ದೈವಂಗಳು ಜಳಕದ ಕೆರೆಗೆ ಸ್ನಾನಗೈಯ್ಯಲು ಹೋಗುವ ಸ್ಥಳವಾಗಿದೆ. ದಾರಿಯಲ್ಲಿ ತ್ಯಾಜ್ಯ ಸಂಸ್ಕರಣೆಯನ್ನು ಮಾಡಿದಲ್ಲಿ, ಹಿಂದೂಗಳ ಧಾಮಿ9ಕ ಭಾವನೆಗಳಿಗೆ ಧಕ್ಕೆಯಾಗುವುದು ಖಂಡಿತ. ಮೂಡ ಸೈಟ್‌ ನ ಮುಕ್ಕಾಲು ಭಾಗ ಸೋಮೇಶ್ವರ ಪುರಸಭೆಗೆ ಸಂಬಂಧಿಸಿದ್ದ ಸ್ಥಳವಾಗಿದೆ. ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯೋಜನೆ ರೂಪಿಸಬೇಕಿದೆ. ಅಧಿಕಾರ ದುರುಪಯೋಗಪಡಿಸಿಕೊಂಡು ಉದ್ದಟತನದಿಂದ ಕಸವನ್ನು ಹಾಕುವ ಕೆಲಸಕ್ಕೆ ನಗರಸಭೆ ಮುಂದಾಗಿದೆ. ಯಾವುದೇ ಯೋಜನೆ ಜಾರಿಗೊಳಿಸಬೇಕಾದರೆ ಸ್ಥಳೀಯರೊಂದಿಗೆ ಪೂವ9ಭಾವಿ ಸಭೆ ನಡೆಸಿ ಬಳಿಕ ಜಾರಿಗೊಳಿಸಬೇಕಿದೆ. ಆದರೆ ಜನವಸತಿ ಪ್ರದೇಶದಲ್ಲಿ ಯಾರ ಅನುಮತಿಯೂ ಪಡೆಯದೆ ಏಕಾಏಕಿ ಸಮುದ್ರ ತೀರದಲ್ಲಿ ಕಸ ವಿಲೇವಾರಿ ನಡೆಸುತ್ತಿರುವುದು ಅವೈಜ್ಞಾನಿಕವಾಗಿದೆ. ಈ ಬಗ್ಗೆ ನಗರಸಭೆಯನ್ನು ಪ್ರಶ್ನಿಸಿದಾಗ ಉದ್ಧಟತನದಿಂದ ನಗರಸಭೆಯ ಆರೋಗ್ಯ ಅಧಿಕಾರಿ ವತಿ9ಸುತ್ತಿದ್ದಾರೆ. ʻ ಎಲ್ಲಿ ಬೇಕಾದರೂ ಕಸ ಹಾಕುತ್ತೇವೆ, ತಡೆಯಲು ನೀವ್ಯಾರು ಅನ್ನುವ ʼ ಬೇಜವಬ್ದಾರಿಯಿಂದ ಮಾತನಾಡುತ್ತಿದ್ದಾರೆ. ತ್ಯಾಜ್ಯ ವಿಲೇವಾರಿಗೆ ಬಂದ ಲಾರಿಗಳನ್ನು ವಾಪಸ್ಸು ಕಳುಹಿಸಿ ಪ್ರತಿಭಟನೆಯನ್ನು ನಡೆಸುತ್ತಿದ್ದೇವೆ. ಕೂಡಲೇ ಯೋಜನೆಯನ್ನು ಕೈಬಿಡಿ ಎಂದು ಆಗ್ರಹಿಸಿದರು.

ಈ ಸಂದರ್ಭ ತಾ.ಪಂ ಸದಸ್ಯ ರವಿಶಂಕರ್‌ ಸೋಮೇಶ್ವರ, ವಸಂತ್‌ ಸೋಮೇಶ್ವರ, ಪ್ರಮೀಳಾ, ಫ್ಲೇವಿ, ವಿಜಯಲಕ್ಷ್ಮೀ, ಯೋಗೀಶ್‌, ಪ್ರಕಾಶ್‌, ಚಂದ್ರಶೇಖರ್‌, ಸಂದೀಪ್‌, ಶ್ರೀರಾಜ್‌, ವನಜ, ಸಂಗೀತಾ, ಸೋನಾ, ಸುಜಾತ ಮುಂತಾದವರು ಉಪಸ್ಥಿತರಿದ್ದರು.

ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು !
ಪ್ರತಿಭಟನೆ ವಿಚಾರ ತಿಳಿದು ಸ್ಥಳಕ್ಕಾಗಮಿಸಿದ ಉಳ್ಳಾಲ ನಗರಸಭೆಯ ಆರೋಗ್ಯ ಅಧಿಕಾರಿಗಳಾದ ಜೈಶಂಕರ್‌ ಮತ್ತು ಸಂತೋಷ್ ಇಬ್ಬರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. ಎಲ್ಲಿಯೂ ಕಸ ಹಾಕಲು ಬಿಡದೇ ಇದ್ದಲ್ಲಿ ನಾವು ಏನು ಮಾಡಬೇಕು. ಎಲ್ಲರಿಗೂ ತೊಂದರೆಯಲ್ಲವೇ ಎಂದು ಅಧಿಕಾರಿಗಳು ಪ್ರತಿಕ್ರಿಯಿಸಿದಾಗ ಗ್ರಾಮಸ್ಥರು ನಿಮ್ಮ ಮನೆ ಮುಂದೆ ಹಾಕಿದರೆ ನೀವು ಬಿಡುತ್ತೀರಾ ಎಂದು ಪ್ರಶ್ನಿಸಿದರಲ್ಲದೆ, ಜೀವ ಹೋಗುವವರೆಗೂ ಪವಿತ್ರ ಧಾಮಿ9ಕ ಹಾಗೂ ಜನವಸತಿ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿ ಮಾಡಲು ಬಿಡುವುದಿಲ್ಲ. ಎಲ್ಲಿಂದಲೋ ತಂದ ತ್ಯಾಜ್ಯವನ್ನು ಈ ಭಾಗದಲ್ಲಿ ಸುರಿಯುವುದರಲ್ಲಿ ನ್ಯಾಯವಿಲ್ಲ. ಬೇಕಾದಲ್ಲಿ ಅವರವರ ಮನೆಗಳಲ್ಲಿ ತ್ಯಾಜ್ಯ ಘಟಕ ನಿರ್ಮಿಸುವಂತೆ ಮಾಡಿ ಎಂದು ಆಗ್ರಹಿಸಿದರು.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಕೋಟೆಕಾರ್ ಅಲ್ ಹಿದಾಯ ಜುಮಾ ಮಸ್ಜಿದ್‌ನಲ್ಲಿ ಇಫ್ತಾರ್ ಕೂಟ

March 19, 2026

ಉಳ್ಳಾಲ ಸೆಂಟ್ರಲ್ ಕಮಿಟಿಯಿಂದ ಬೃಹತ್ ಸೌಹಾರ್ದ ಇಫ್ತಾರ್ ಕೂಟ

March 19, 2026

ಉಳ್ಳಾಲದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಕಬಡ್ಡಿ ತರಬೇತಿ ಶಿಬಿರ

March 17, 2026
Leave A Reply

Advertise
ಸಂಪರ್ಕಿಸಿ

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025

ನೂತನ ಅತ್ಯಾಧುನಿಕ ಫಿಸಿಯೋಥೆರಪಿ ಚಿಕಿತ್ಸಾ ಕ್ಲಿನಿಕ್ ಉದ್ಘಾಟನೆ

November 12, 2025
suddi

ಕೋಟೆಕಾರ್ ಅಲ್ ಹಿದಾಯ ಜುಮಾ ಮಸ್ಜಿದ್‌ನಲ್ಲಿ ಇಫ್ತಾರ್ ಕೂಟ

By UllalaVaniMarch 19, 20260

ಕೋಟೆಕಾರ್: ಅಲ್ ಹಿದಾಯ ಜುಮಾ ಮಸ್ಜಿದ್, ಕರ್ನಾಟಕ ಮುಸ್ಲಿಂ ಜಮಾತ್, ಎಸ್ ವೈ ಎಸ್ ಹಾಗೂ ಎಸ್ಸೆಸ್ಸಫ್ ಸಂಘಟನೆಗಳ ವತಿಯಿಂದ…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

ಮಾ.22ರಂದು ತೊಕ್ಕೊಟ್ಟುವಿನಲ್ಲಿ ಉಚಿತ ಕೈತೋಟ-ತಾರಸಿ ತೋಟ ತರಬೇತಿ

March 19, 2026

ಉಳ್ಳಾಲ ಸೆಂಟ್ರಲ್ ಕಮಿಟಿಯಿಂದ ಬೃಹತ್ ಸೌಹಾರ್ದ ಇಫ್ತಾರ್ ಕೂಟ

March 19, 2026

ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯೋತ್ಸವ, ಚುಟುಕು ಕವಿಗೋಷ್ಠಿ, ಮಕ್ಕಳ ಕವಿಗೋಷ್ಠಿಗೆ ಆಹ್ವಾನ

March 19, 2026
1 2 3 … 1,838 Next
Automatic YouTube Gallery

ಕಾಡು ಬೆಂಕಿಯಿoದ ನಾಶವಾದ ಸಸ್ಯ-ಜೀವಿಗಳಿಗೆ ಶ್ರದ್ಧಾಂಜಲಿ

ಪ್ಲಾಸ್ಟಿಕ್‌ಗೆ ತಗುಲಿದ ಬೆಂಕಿಯಿoದ ಕಾಡಿಗೆ ಹಾನಿ ; ಕೊಣಾಜೆಯಲ್ಲಿ ಜೀವಸಂಕುಲಕ್ಕೆ ಶ್ರದ್ಧಾಂಜಲಿ

ಅಪ್ನಾ ದೇಶ್ ಮಾದರಿ ಗ್ರಾಮ ಅಭಿಯಾನದಿಂದ ಕಾರ್ಯಕ್ರಮ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ ...
Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಕಾಡು ಬೆಂಕಿಯಿoದ ನಾಶವಾದ ಸಸ್ಯ-ಜೀವಿಗಳಿಗೆ ಶ್ರದ್ಧಾಂಜಲಿ
Now Playing
ಕಾಡು ಬೆಂಕಿಯಿoದ ನಾಶವಾದ ಸಸ್ಯ-ಜೀವಿಗಳಿಗೆ ಶ್ರದ್ಧಾಂಜಲಿ
ಪ್ಲಾಸ್ಟಿಕ್‌ಗೆ ತಗುಲಿದ ಬೆಂಕಿಯಿoದ ಕಾಡಿಗೆ ಹಾನಿ ; ಕೊಣಾಜೆಯಲ್ಲಿ ಜೀವಸಂಕುಲಕ್ಕೆ ...
ಪ್ಲಾಸ್ಟಿಕ್‌ಗೆ ತಗುಲಿದ ಬೆಂಕಿಯಿoದ ಕಾಡಿಗೆ ಹಾನಿ ; ಕೊಣಾಜೆಯಲ್ಲಿ ಜೀವಸಂಕುಲಕ್ಕೆ ಶ್ರದ್ಧಾಂಜಲಿ

ಅಪ್ನಾ ದೇಶ್ ಮಾದರಿ ಗ್ರಾಮ ಅಭಿಯಾನದಿಂದ ಕಾರ್ಯಕ್ರಮ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ ...
Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಕಾಂಗ್ರೆಸ್ ಕೋಮುವಾದಕ್ಕೆ ಪರಿಹಾರ..??- ಪತ್ರಕರ್ತ ನವೀನ್ ಸೂರಿಂಜೆ
Now Playing
ಕಾಂಗ್ರೆಸ್ ಕೋಮುವಾದಕ್ಕೆ ಪರಿಹಾರ..??- ಪತ್ರಕರ್ತ ನವೀನ್ ಸೂರಿಂಜೆ
ದ್ವೇಷಭಾಷಣಕಾರರನ್ನು ಮಟ್ಟಹಾಕುವಲ್ಲಿ ಇವರುಗಳು ವಿಫಲ; ಕೋಮುವಾದಿಗಳನ್ನು ...
ದ್ವೇಷಭಾಷಣಕಾರರನ್ನು ಮಟ್ಟಹಾಕುವಲ್ಲಿ ಇವರುಗಳು ವಿಫಲ; ಕೋಮುವಾದಿಗಳನ್ನು ಜೈಲಿಗಟ್ಟಬೇಕು

ಕುತ್ತಾರಿನಲ್ಲಿ ಡಿವೈಎಫ್‌ಐ ಬಹಿರಂಗ ಸಭೆಯಲ್ಲಿ ಪತ್ರಕರ್ತ ನವೀನ್ ಸೂರಿಂಜೆ ಕಿಡಿ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ...
ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version
%d