UN NETWORKS
ಉಳ್ಳಾಲ : ನಾಡದೋಣಿ ಮೀನುಗಾರಿಕೆ ನಡೆಸುತ್ತಿದ್ದ ವ್ಯಕ್ತಿಯ ಶವ ಉಳ್ಳಾಲ ಕೋಡಿ ಸಮುದ್ರ ತೀರದಲ್ಲಿ ಇಂದು ಪತ್ತೆಯಾಗಿದೆ.



ಉಳ್ಳಾಲ ಹೊಯ್ಗೆ ನಿವಾಸಿ ಜೋಸೆಫ್ ಮೈಕ್ (56) ಎಂಬವರ ಮೃತದೇಹ ಪತ್ತೆಯಾಗಿದೆ. ಗುರುವಾರ ಬೆಳಗ್ಗಿನಿಂದ ನಾಪತ್ತೆ ಯಾ ಗಿದ್ದರು. ಮೀನುಗಾರಿಕೆ ನಡೆಸುತ್ತಿದ್ದ ದೋಣಿಯೂ ಮನೆ ಸಮೀಪವೇ ಇದೆ. ಆಕಸ್ಮಿಕವಾಗಿ ಕಾಲು ಜಾರಿ ಮೃತಪಟ್ಟಿರುವ ಶಂಕೆ ಇದೆ . ಅವಿವಾಹಿತರಾಗಿರುವ ಇವರು ಸಹೋದರರ ಜತೆಗೆ ವಾಸವಿದ್ದರು. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


