UN networks ಉಳ್ಳಾಲ: ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಉಳ್ಳಾಲದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ರವಿರಾಜ ಶೆಟ್ಟಿ ಜಿ. ಯವರಿಗೆ ಕರ್ನಾಟಕ ಜೀವ ವೈವಿಧ್ಯ ಮಂಡಳಿ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಾಗೂ ಸಾಮಾಜಿಕ ಅರಣ್ಯ ವಿಭಾಗ ಮಂಗಳೂರು ಇವರ ವತಿಯಿಂದ “ ಜೀವ ವೈವಿಧ್ಯ ಕ್ಷೇತ್ರದ ವಿಶೇಷ ಸಾಧಕ ಪ್ರಶಸ್ತಿ ” ನೀಡಿ ಗೌರವಿಸಲಾಗಿದೆ. ಸೆ. 3 ರಂದು ಮಂಗಳೂರು ಜಿಲ್ಲಾ ಪರಿಷತ್ನ ನೇತ್ರಾವತಿ ಸಭಾಂಗಣದಲ್ಲಿ ನಡೆದ ಅಂತರಾಷ್ಟ್ರೀಯ ಜೀವ ವೈವಿಧ್ಯ ದಿನಾಚರಣೆ ಅಭಿಯಾನ-2021 ರ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.ಡಾ. ರವಿರಾಜ ಶೆಟ್ಟಿ ಜಿ ಇವರು ಅಳಿವಿನಂಚಿನಲ್ಲಿರುವ ಪಶ್ಚಿಮ ಘಟ್ಟದ ಔಷಧೀಯ ಗಿಡಗಳ ಸಂರಕ್ಷಣೆ ಕುರಿತ ಸಂಶೋಧನೆ, ವಿಸ್ತರಣೆ, ಬೋಧನೆ ಹಾಗೂ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಟಿಸಿರುವ ವೈಜ್ಞಾನಿಕ ಸಂಶೋಧನಾ ಲೇಖನಗಳು, ಸ್ನಾತಕೋತ್ತರ ಮತ್ತು ಪಿಎಚ್.ಡಿ ವಿದ್ಯಾರ್ಥಿಗಳ ಸಂಶೋಧನೆಗೆ ನೀಡಿದ ಮಾರ್ಗದರ್ಶನ, ವಿದೇಶಗಳಿಗೆ ನೀಡಿದ ವೃತ್ತಿಪರ ಭೇಟಿ ಹಾಗೂ ಅಂತರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸಿ ಮಂಡಿಸಿರುವ ಸಂಶೋಧನಾ…
Author: UllalaVani
ಮಂಗಳೂರು: ನಗರದ ಹೃದಯಭಾಗ ಫಳ್ನೀರ್ನಲ್ಲಿ ಎಂ ಎಫ್ ಸಿ ಬ್ಯಾನರ್ ನಡಿ ರಾಯಲ್ ಬೇಕ್ಸ್ ದ ರಿಯಲ್ ಟೇಸ್ಟ್ ಆಫ್ ಇಂಡಿಂiÀi ಬೇಕರಿ ಹಾಗೂ ರೆಸ್ಟೋರೆಂಟ್ ಅನ್ನು ವಿಧಾನಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಸೋಮವಾರ ಉದ್ಘಾಟಿಸಿದರು. ಪ್ಲಾಟಿನಂ ಥಿಯೇಟರ್ ಇದ್ದ ಸ್ಥಳದಲ್ಲಿ ಸಂಸ್ಥೆ ಕಾರ್ಯಾರಂಭಗೊಂಡಿದ್ದು, ಉತ್ತಮ ಜನಾರ್ಕಷಣೆಯನ್ನು ಹೊಂದಿದೆ. 2012 ರಲ್ಲಿ ಅಥೆನಾ ಆಸ್ಪತ್ರೆ ಎದುರುಗಡೆ ಎಂಎಫ್‌ಸಿ ಮೊದಲ ಘಟಕವನ್ನು ಆರಂಭಿಸಿತ್ತು. 2020 ರ ಆ.13 ರಂದು ಫಳ್ನೀರ್ ನಲ್ಲಿಫುಡ್ ಮಾರ್ಟ್ ರೆಸ್ಟೋರೆಂಟ್ ಆಗಿ ಎರಡನೇ ಘಟಕ ಆರಂಭಗೊಂಡಿತು. . ಇದೀಗ ಗ್ರಾಹಕರ ಬೇಡಿಕೆಯ ಮೇರೆಗೆ ರಾಯಲ್ ಬೇಕ್ಸ್ ಅನ್ನು ಬೇಕರಿ ಆರಂಭಿಸಲಾಗಿದೆ. ಇಲ್ಲಿ ಡ್ರೈಫ್ರೂಟ್ಸ್, ಬೇಕರಿ ಐಟಂ, ಇಂಪೋರ್ಟೆಡ್ ಸ್ವೀಟ್ಸ್ ಹಾಗೂ ಚಾಕಲೇಟುಗಳು, ಅತ್ಯುತ್ತಮ ಗುಣಮಟ್ಟದ ಕ್ಯಾಷಿವ್ ಸ್ವೀಟ್ಸ್, ಬೆಂಗಾಳಿ ಸ್ವೀಟ್ಸ್, ರಸಗುಲ್ಲಾ, ಮಲಾಯಿಗುಲ್ಲ, ಇಂಪೋರ್ಟೆಡ್ ಫ್ರೂಟ್ಸ್, ಎನರ್ಜಿ ಡ್ರಿಂಕ್ಸ್ ಮುಂಬೈನಲ್ಲಿ ಖ್ಯಾತಿ ಗಳಿಸಿರುವ ಅಫ್ಲಾತುಲ್, ಮಾಂಗುಲಾಯಿ ನಂತಹ ತಿಂಡಿ ತಿನಿಸುಗಳು ಒಂದೇ ಸೂರಿನಡಿ ಲಭ್ಯವಿದೆ. ಸ್ನ್ಯಾಕ್ಸ್ ಹಾಗೂ…
ಮಂಗಳೂರು : ಸಾಮಾಜಿಕ ,ಆಧ್ಯಾತ್ಮಿಕ, ಧನಾತ್ಮಕ ಹಿತಚಿಂತನೆಗಳ ಮುಖೇನ ಓರ್ವ ಆದರ್ಶ ವ್ಯಕ್ತಿಯಾಗಿ, ಉತ್ಸಾಹಿ ಸೇವಾ ಕಾರ್ಯಕರ್ತರಾಗಿ, ಮನೋಜಾಗೃತರಾಗಿ, ಧಾರ್ಮಿಕ ಮಾರ್ಗದರ್ಶಕರಾಗಿ, ಶಕ್ತಿ_ಯುಕ್ತಿ-ಪ್ರೇರಕರಾಗಿ ಜನಮಾನಸದ ಹೃದಯದಿ ಶೋಭಿಸುತ್ತಿರುವ ನಿಸ್ವಾರ್ಥ ಸೇವಾ ಮಾಣಿಕ್ಯ. ಧೀಮಂತ ನಾಯಕನಾಗಿ ಪ್ರಾಮಾಣಿಕತೆ, ದಕ್ಷತೆ,ಶಿಸ್ತುಗಾರವಾಗಿ ನೇರನುಡಿಪಾಲಕನಾಗಿ, ನಿಷ್ಟುರವಾದಿಯಾಗಿ, ಮಿತಭಾಷಿಯಾಗಿ, ರಾಜ ಗಾಂಭೀರ್ಯ ಕಳೆಯ ಸುಂದರ ಅಜಾನುಬಾಹು ಆಕರ್ಷಕ ಮೈಕಟ್ಟು, ಚುರುಕುತನದ ಬುದ್ಧಿವಂತಿಕೆಯಿಂದ ಕೂಡಿದ್ದು ಸಭೆ ಸಮಾರಂಭಗಳಲ್ಲಿ ಓರ್ವ ಸಂಪನ್ಮೂಲ ವ್ಯಕ್ತಿಯಾಗಿ ಪಾದರಸದಂತೆ ಕ್ರಿಯಾಶೀಲರಾಗಿ ಸರ್ವರ ಕಣ್ಮನ ಸೆಳೆದು ಮಿಂಚುತ್ತಿರುವ ಹಿರಿಯ ನಿಷ್ಠಾವಂತ ನಿವೃತ್ತ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ನಿರ್ಮಲ್ ಪದ್ಮನಾಭ ಮಾಣಿಂಜರವರ ಯಶಸ್ವಿ ಸಾಧನೆಯ ಯಶೋಗಾಥೆ.ತುಳುನಾಡಿನ ಅಳಿಯ ಕಟ್ಟಿನ ಪ್ರತಿಷ್ಠಿತ ಮುಗ್ಗಗುತ್ತು ಮನೆತನದ ಕೇಶವ ಪೂಜಾರಿ ಮತ್ತು ಕುಕ್ಕಿನಡ್ಡ ಮನೆತನದ ಮೋಹಿನಿ ದಂಪತಿ ಪ್ರಥಮ ಪುತ್ರನಾಗಿ 1937 ನೇ ಸಪ್ಟೆಂಬರ್ 5 ರಂದು ಜನಿಸಿದರು. ಪಾಣೆಮಂಗಳೂರು ಎಸ್.ವಿ.ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪೆÇರೈಸಿ ತದನಂತರ ಮಂಗಳೂರು ಸರ್ಕಾರಿ ಪದವಿ ಶಿಕ್ಷಣ ವ್ಯಾಸಂಗ ಮಾಡಿದವರು. ಅಜ್ಞಾನದಿಂದ…
UN network ಮಂಗಳೂರು : ಕಾವೂರು ವಲಯ ಲಯನ್ಸ್ ಕ್ಲಬ್ ಆಶ್ರಯದಲ್ಲಿ ವಾಮಂಜೂರು ವಿದ್ಯಾ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕರಿಗೆ ಪ್ರಥಮ ಚಿಕಿತ್ಸಾ ಜಾಗೃತಿ ಶಿಬಿರ ಹಾಗೂ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಕಾವೂರು ವಲಯ ಲಯನ್ಸ್ ಕ್ಲಬ್ ಕ್ಲಬ್ಬಿನ ಸದಸ್ಯರಾದ ನಿಕಟ ಪೂರ್ವ ಅಧ್ಯಕ್ಷೆ ಸುಜಾತ, ಕಾರ್ಯದರ್ಶಿ ವಿಕ್ಟರ್ ಮೋರಸ್, ಖಾಜಾಂಚಿ ಶ್ರೀಧರ್ ನಾಯಕ್, ಪ್ರಾಂತೀಯ ಅಧ್ಯಕ್ಷೆ ಸ್ವರೂಪ ಶೆಟ್ಟಿ, ದಯಾನಂದ ಶೆಟ್ಟಿ, ಮೋಹನ್ ದಾಸ್ ಶೆಟ್ಟಿ, ಮೋಹನ್ ದಾಸ್ ಕಿಲ್ಲೆ, ನಿತ್ಯಾನಂದ ಶೆಟ್ಟಿ, ಸತೀಶ್ ಶೆಟ್ಟಿ, ಸುನಿಲ್ ಶೆಟ್ಟಿ ರೇಷ್ಮಾ, ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಅಶ್ವಿನ್ ಮತ್ತು ರೋಹನ್ ಭಾಗವಹಿಸಿದ್ದರು. ಶಿಬಿರದಲ್ಲಿ ಒಟ್ಟು 60 ಮಂದಿ ಉಪಸ್ಥಿತರಿದ್ದರು.
UN networks ಉಳ್ಳಾಲ: ಹೆತ್ತವರು ಮಕ್ಕಳಿಗೆ ನೀಡುವ ಶಿಕ್ಷಣದಿಂದ ಮಕ್ಕಳ ಭವಿಷ್ಯ ನೆಲೆಯೂರುವುದು. ಹಾಡಲು ಗುಣಮಟ್ಟದ ಸ್ವರ ಇರುವಂತಹ ಪ್ರತಿಭೆ ಶ್ರೀ ರಕ್ಷಾ, ಸಂಗೀತ ಕ್ಷೇತ್ರದಲ್ಲಿ ಇರುವಂತಹ ಆಕೆಯ ಪ್ರತಿಭೆಗೆ ಹೆತ್ತವರು ಪ್ರೋತ್ಸಾಹಿಸಿದ ಹಿನ್ನೆಲೆಯಲ್ಲಿ ಆಕೆ ಬೆಳೆಯಲು ಸಾಧ್ಯವಾಗಿದೆ ಎಂದು ರಾಜ್ಯ ಹಿಂದುಳಿದ ವರ್ಗದ ಆಯೋಗದ ನಿರ್ದೇಶಕ ಕೆ.ಟಿ ಸುವರ್ಣ ಅಭಿಪ್ರಾಯಪಟ್ಟರು. ಅವರು ಗ್ರಾಮಚಾವಡಿಯ ಬ್ರಹ್ಮಶ್ರೀ ನಾರಾಯಣಗುರು ಸಭಾಂಗಣದಲ್ಲಿ ಭಾನುವಾರ ನಡೆದ ಶ್ರೀರಕ್ಷಾ ಹೆಚ್.ಎಸ್ ಪೂಜಾರಿ ಕೊಣಾಜೆ ಇವರು ಹಾಡಿರುವ ‘ರಘುವೀರ ಗದ್ಯಂ ವೀಡಿಯೋ ಆಲ್ಬಂ ಬಿಡುಗಡೆ ಸಮಾರಂಭ ಹಾಗೂ ಶಿಕ್ಷಕರ ದಿನಾಚರಣೆ ಯಲ್ಲಿ ಭಾಗವಹಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಶಿಕ್ಷಕ ಗಂಗಾಧರ್ ಪೂಜಾರಿ ಮಾತನಾಡಿಬಾಲಕಿ ರಕ್ಷಾ ರಾಗದ ಮೂಲಕ ವಿಶ್ವಮನ್ನಣೆಯನ್ನು ಪಡೆಯಬೇಕಿದೆ. ಎಲ್ಲರ ಹಾರೈಕೆ ಆಕೆಗೆ ಶ್ರೀರಕ್ಷೆಯಾಗಲಿ, ಹಲವಾರು ಧ್ವನಿಸುರುಳಿ ಬಿಡುಗಡೆಯಾಗುವ ಮೂಲಕ ಖ್ಯಾತಿಯನ್ನು ಪಡೆಯಬೇಕು ಎಂದರು ಈ ಸಂದರ್ಭ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ, ಕೊಣಾಜೆ ಗ್ರಾಮಚಾವಡಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ…
UN networks ತೊಕ್ಕೊಟ್ಟು: ಖಾಸಗಿ ಬಸ್ ಪ್ರಯಾಣ ದರದ ವಿಪರೀತ ಏರಿಕೆ ವಿರೋಧಿಸಿ ಹಾಗೂ ಜಿಲ್ಲಾಡಳಿತದ ಏಕಪಕ್ಷೀಯ ನಿರ್ಧಾರವನ್ನು ಖಂಡಿಸಿ ಸಿ.ಪಿ.ಐ.ಎಂ ಉಳ್ಳಾಲ ವಲಯ ಸಮಿತಿ ವತಿಯಿಂದ ಪ್ರತಿಭಟನೆ ತೊಕ್ಕೊಟ್ಟು ಬಸ್ ನಿಲ್ದಾಣದಲ್ಲಿ ಗುರುವಾರ ನಡೆಯಿತು. ಸಿ.ಪಿ.ಐ.ಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುನಿಲ್ ಕುಮಾರ್ ಬಜಾಲ್ ಮಾತನಾಡಿ ಕಳೆದ ಕೆಲವು ದಿನಗಳ ಹಿಂದೆ ಈ ಜಿಲ್ಲೆಯಲ್ಲಿ ವಿವಿಧ ಜಾತ್ಯಾತೀತ ಪಕ್ಷ ಹಾಗೂ ಸಂಘಟನೆಗಳು ಒಟ್ಟಾಗಿ ಬಸ್ ದರ ಏರಿಕೆಯ ವಿರುದ್ದ ಜಿಲ್ಲಾಧಿಕಾರಿಗಳಿಗೆ ಮನವಿಯ ಜೊತೆಗೆ ಏರಿಸಿದ ಬಸ್ ಪ್ರಯಾಣ ದರವನ್ನು ತಡೆ ಹಿಡಿಯಬೇಕು, ಸಾರಿಗೆ ಪ್ರಾಧಿಕಾರದ ಸಭೆ ಕರೆದು ಸಾರ್ವಜನಿಕರ ಅಹವಾಲುಗಳನ್ನು ಕೇಳಬೇಕು ಎಂದು ಬೇಡಿಕೆ ಇಟ್ಟಿದ್ದೇವು. ಆದರೆ ಇದುವರೆಗೂ ಜಿಲ್ಲಾಡಳಿತದಿಂದ ಯಾವುದೇ ರೀತಿಯ ಸ್ಪಂದನೆ ಸಿಕ್ಕಿಲ್ಲ.ಬಸ್ಸು ದರ ಏರಿಕೆಯಿಂದ ಬಹು ಸಂಖ್ಯಾತ ಪ್ರಯಾಣಿಕರು ಇಂದು ಆಕ್ರೋಶಿತರಾಗಿದ್ದಾರೆ. ಇದರ ಹಿಂದೆ ದೊಡ್ಡ ಪಿತೂರಿ ಇದೆ ಎಂದು ಹೇಳಿದ ಅವರು ಬಸ್ಸು ಮಾಲಕರು 25 % ದರ ಜಾಸ್ತಿ ಮಾಡಲು ಹೇಳಿದ್ದರು,…
UN networks ದೇರಳಕಟ್ಟೆ : ಮಾಹಿತಿಯಿಲ್ಲದೆ ನಡೆದ 20-21ನೇ ಸಾಲಿನ ಜಮಾಬಂದಿಗೆ ಗ್ರಾಮಸ್ಥರು ಹಾಗೂ ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಿ, ಜಮಾಬಂದಿಯನ್ನು ರದ್ದುಪಡಿಸಿದ ಪ್ರಸಂಗ ದೇರಳಕಟ್ಟೆಯ ಬೆಳ್ಮ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಮಂಗಳವಾರ ನಡೆದಿದೆ. ಆ.31 ರಂದು ಬೆಳ್ಮ ಗ್ರಾಮದ ಜಮಾಬಂದಿಯನ್ನು ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಬೆಳ್ಮ ಗ್ರಾ.ಪಂ ಅಧ್ಯಕ್ಷ ಅಬ್ದುಲ್ ಸತ್ತಾರ್ ಅವರ ಅನುಪಸ್ಥಿತಿಯಲ್ಲಿ ಉಪಾಧ್ಯಕ್ಷೆ ಝುಲೈಕಾ ಜಮಾಬಂದಿಯ ಅಧ್ಯಕ್ಷತೆ ವಹಿಸಿದ್ದರು. ಆದರೆ ಮಾಧ್ಯಮಗಳಲ್ಲಿ ಪ್ರಚಾರವಿಲ್ಲದೆ, ಬ್ಯಾನರ್ ಅಳವಡಿಸದೆ, ಗ್ರಾಮಸ್ಥರ ಅರಿವಿಗೆ ಬಾರದಂತೆ, ಹಲವು ಗ್ರಾ.ಪಂ ಸದಸ್ಯರ ಗಮನಕ್ಕೆ ಬಾರದಂತೆ ತಮಗೆ ಬೇಕಾದವರಿಗೆ ಮಾತ್ರ ಆಹ್ವಾನಿಸಿ ಜಮಾಬಂದಿಯನ್ನು ಆಯೋಜಿಸಲಾಗಿತ್ತು. ವಿಚಾರ ತಿಳಿದು ಸಭಾಂಗಣಕ್ಕೆ ಆಗಮಿಸಿದ ಪಂ. ಸದಸ್ಯರು ಹಾಗೂ ಗ್ರಾಮಸ್ಥರು ಆಡಳಿತ ವರ್ಗಕ್ಕೆ ಧಿಕ್ಕಾರ ಕೂಗಿ, ಜಮಾಬಂದಿ ನಡೆಸದಂತೆ ವಿರೋಧ ವ್ಯಕ್ತಪಡಿಸಿದರು. ಪ್ರಚಾರವಿಲ್ಲದೆ ಕದ್ದುಮುಚ್ಚಿ ನಡೆಸುವ ಜಮಾಬಂದಿಯ ಅವಶ್ಯಕತೆಯಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಜಮಾಬಂದಿ ನಡೆಯದಂತೆ ತಡೆಯೊಡ್ಡಿದ್ದಾರೆ. ಬಳಿಕ ಉಪಾಧ್ಯಕ್ಷೆ ಜಮಾಬಂದಿಯನ್ನು ರದ್ದುಗೊಳಿಸುವ ಮೂಲಕ ಪಂಚಾಯಿತಿ ಸಭಾಂಗಣದಲ್ಲಿ ಶಾಂತಿ ವಾತಾವರಣ ನಿರ್ಮಾಣವಾಯಿತು.
UN networks ಮಾಡೂರು : ಉಚಿತ ಲಸಿಕಾ ಅಭಿಯಾನಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಇದರ ಸಹಭಾಗಿತ್ವದಲ್ಲಿ ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಇವರ ಸಹಕಾರದೊಂದಿಗೆ ವಿಶ್ವ ಭಾರತಿ ಮಾಡೂರು ಇದರ ವತಿಯಿಂದ ಉಚಿತ ಕೋವಿಡ್ ಲಸಿಕೆ ಅಭಿಯಾನ ಇಂದು ಭಾರತೀಯ ಸತ್ಯನಾರಾಯಣ ಮಾಡೂರು ಸಭಾಂಗಣದಲ್ಲಿ ನಡೆಯಿತು. ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಬಿಜೆಪಿ ಮಂಡಲ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು
UN networks ಕೊಣಾಜೆ: ಬಿಜೆಪಿ ಕೊಣಾಜೆ ಮಹಾಶಕ್ತಿ ಕೇಂದ್ರದ ಬೂತ್ ಪ್ರಮುಖರ ಸಮಾವೇಶ ಹಾಗೂ ಬೂತ್ ಅಧ್ಯಕ್ಷರಿಗೆ ನಾಮಫಲಕ ವಿತರಣಾ ಕಾರ್ಯಕ್ರಮವು ಕೊಣಾಜೆ ಸಪ್ತಸ್ವರ ಕಲಾತಂಡದ ಸರಸ್ವತಿ ಕಲಾ ವೇದಿಕೆಯಲ್ಲಿ ಬುಧವಾರ ನಡೆಯಿತು. ಈ ಸಂದರ್ಭ ಬಿಜೆಪಿ ಮಂಡಲ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ದಿ. ಮೈಸೂರ್ ಇಲೆಕ್ಟ್ರಿಕಲ್ ಇಂಡಸ್ಟ್ರಿಯಲ್ ಲಿಮಿಟೆಡಿನ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಬಿಜೆಪಿ ಮುಖಂಡರುಗಳಾದ ಈಶ್ವರ್ ಕಟೀಲ್, ಕಸ್ತೂರಿ ಪಂಜ , ತಾ.ಪಂ ಮಾಜಿ ಸದಸ್ಯ ರವಿಶಂಕರ್ ಸೋಮೇಶ್ವರ, ಗುತ್ತಿಗೆದಾರ ನವೀನ್ ಶೆಟ್ಟಿ ಕುರ್ನಾಡು ಉಪಸ್ಥಿತರಿದ್ದರು.
UN network ಉಳ್ಳಾಲ : ಕಾರಿನ ನಂಬರ್ ಪ್ಲೇಟ್ ನಲ್ಲಿ ಅಂಟಿಸಿರುವ ಸ್ಟಿಕ್ಕರ್ ಕಂಡು ಸಂಚಾರಿ ಠಾಣೆ ಪೊಲೀಸ್ ಸಿಬ್ಬಂದಿ ವಾಹನವನ್ನು ತಡೆದು ನಿಲ್ಲಿಸಿದ ಘಟನೆ ತೊಕ್ಕೊಟ್ಟು ಬಳಿ ನಡೆದಿದ್ದು, ನಂಬರ್ ಪ್ಲೇಟಿನಲ್ಲಿ ‘ ಟೀಂ ಪರಶುರಾಮ ಹಾಗೂ ಧರ್ಮೋ ರಕ್ಷತಿ ರಕ್ಷಿತಾ: ಅನ್ನುವ ಸ್ಟಿಕ್ಕರ್ ಹಾಗೂ ಗಾಜಿನಲ್ಲಿ ಅಳವಡಿಸಿದ ಓಂಸಾಯಿ ಮತ್ತು ಸ್ವಾಮಿ ಕೊರಗಜ್ಜ ಸ್ಟಿಕ್ಕರ್ ಇರುವುದನ್ನು ತೆಗೆಯಲು ಒತ್ತಾಯಿಸಿದ್ದಾರೆ ಎಂದು ಆರೋಪಿಸಿ ಎಎಸ್ಐ ವಿರುದ್ಧ ಹಿಂದೂ ಸಂಘಟನೆ ಕಾರ್ಯಕರ್ತರು ಹಾಗೂ ಬಿಜೆಪಿ ಮಂಗಳೂರು ಮಂಡಲ ಅಧ್ಯಕ್ಷರು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ತೊಕ್ಕೊಟ್ಟು ಫ್ಲೈಓವರ್ ಕೆಳಗಡೆ ಕೆಲಕಾಲ ಗೊಂದಲದ ವಾತಾವರಣ ಇಂದು ನಿರ್ಮಾಣವಾಯಿತು. ಬಬೀಶ್ ಪೂಜಾರಿ ಎಂಬವರು ಮಾರುತಿ ಕಾರಿನಲ್ಲಿ ತೊಕ್ಕೊಟ್ಟು ಫ್ಲೈಓವರ್ ಕೆಳಗಿನಿಂದ ಹೋಗುತ್ತಿದ್ದ ಸಂದರ್ಭ ತೊಕ್ಕೊಟ್ಟಿನಲ್ಲಿ ಫ್ಲೈ ಓವರ್ ಕೆಳಗಡೆ ಕರ್ತವ್ಯದಲ್ಲಿದ್ದ ನಾಗುರಿ ಸಂಚಾರಿ ಠಾಣಾ ಎಎಸ್ಸೈ ಆಲ್ಬರ್ಟ್ ಲಸ್ರಾದೊ ಅವರು ಪರಿಶೀಲನೆಗಾಗಿ ನಿಲ್ಲಿಸಿದ್ದಾರೆ. ದಾಖಲೆಗಳನ್ನು ಪರಿಶೀಲಿಸಿ ನಂತರ ಕಾರಿನ ನಂಬರ್ ಪ್ಲೇಟಿನಲ್ಲಿ ಸ್ಟಿಕ್ಕರ್ ಅಂಟಿಸಿರುವುದು ಕಾನೂನು…

