UN networks
ಮಂಗಳೂರು: ಯುವ ಉದ್ಯಮಿಯೊಬ್ಬರು ನಾಪತ್ತೆಯಾಗಿರುವ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾರ್ನಮಿಕಟ್ಟೆ ನಿವಾಸಿ ಸಲೀಂ ಅಹ್ಮದ್ (35) ನಾಪತ್ತೆಯಾದವರು.
ಸಲೀಂ ಅಹ್ಮದ್ ಸೆಂಟ್ರಲ್ ಮಾರ್ಕೆಟ್ನಲ್ಲಿರುವ ಬಟ್ಟೆ ಅಂಗಡಿಯೊಂದರ ಪಾಲುದಾರರಾಗಿದ್ದಾರೆ.
ಸಲೀಂ ಮಾರ್ನಮಿಕಟ್ಟೆಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಡಿ.21ರ ಬೆಳಗ್ಗೆ 8:30ಕ್ಕೆ ಮನೆಯಿಂದ ತೆರಳಿದವರು ಮತ್ತೆ ವಾಪಾಸ್ಸಾಗಿಲ್ಲ. ಮೊಬೈಲ್ ಕೂಡ ಸಂಪರ್ಕಕ್ಕೆ ಸಿಕ್ಕಿಲ್ಲ. ಕುಟುಂಬಸ್ಥರಲ್ಲಿ ಕೂಡ ವಿಚಾರಿಸಿದ್ದು ಎಲ್ಲಿಗೂ ತೆರಳದೆ ನಾಪತ್ತೆಯಾಗಿದ್ದಾರೆ. ಸಲೀಂ ನಾಪತ್ತೆ ಬಗ್ಗೆ ಮಂಗಳೂರು ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

