UN networks
ಉಳ್ಳಾಲ: ಸಾಂಪ್ರದಾಯಿಕ ಉಡುಗೆ ತೊಟ್ಟಲ್ಲಿ ಮಾತ್ರ ದೇವಸ್ಥಾನಕ್ಕೆ ಇನ್ಮುಂದೆ ಪ್ರವೇಶ. ಇದು
ಉಳ್ಳಾಲದಾದ್ಯಂತ ದೇವಸ್ಥಾನಗಳಲ್ಲಿ ಬಜರಂಗದಳ- ವಿ.ಹಿಂ.ಪ ದೇವಸ್ಥಾನ ಆವರಣದಲ್ಲಿ ಹಾಕಿರುವ ಪೋಸ್ಟರ್ ಗಳಲ್ಲಿ ಎಚ್ಚರಿಕೆಯ ಸಂದೇಶ.


ಉಳ್ಳಾಲದ ಶ್ರೀ ವ್ಯಾಘ್ರ ಚಾಮುಂಡೇಶ್ವರಿ ದೇವಸ್ಥಾನ, ದೇರಳಕಟ್ಟೆ ಅಯ್ಯಪ್ಪ ಸ್ವಾಮಿ ದೇವಸ್ಥಾನ ಹೀಗೆ ಸೇರಿದಂತೆ ಹಲವು ದೇವಸ್ಥಾನಗಳಲ್ಲಿ ಪೋಸ್ಟರ್ ಅನ್ನು ಅಳವಡಿಸಲಾಗಿದೆ. ಬೇಕಾಬಿಟ್ಟಿ ಬಟ್ಟೆ ತೊಟ್ಟು ದೇವಸ್ಥಾನಕ್ಕೆ ಬರುವ ಮೂಲಕ ದೇವಸ್ಥಾನ ದ ಪಾವಿತ್ರ್ಯತೆಗೆ ಧಕ್ಕೆಯಾಗುತ್ತಿದ್ದು . ಇದರಿಂದ ದೇವಸ್ಥಾನದೊಳಗೆ ಶ್ರದ್ಧೆ ಭಕ್ತಿಯ ವಾತಾವರಣವೂ ಇರುವುದಿಲ್ಲ. ಅದಕ್ಕಾಗಿ ಎಚ್ಚರಿಕೆಯ ಬ್ಯಾನರನ್ನು ಅಳವಡಿಸಲಾಗಿದೆ.


