ಕುಂಪಲ : ಇಲ್ಲಿನ ಶಿವಪುರದ ಶ್ರೀ ದುರ್ಗಾಪರಮೇಶ್ವರ ಕ್ಷೇತ್ರದಲ್ಲಿ ಜೂ.16ರಿಂದ ಜೂ.17ರ ವರೆಗೆ ಶ್ರೀ ದುರ್ಗಾದೇವಿ, ಶ್ರೀ ಅನಂತ ಪದ್ಮನಾಭ ಮತ್ತು ನವಗ್ರಹ ದೇವರ ಬಿಂಬ ಪ್ರತಿಷ್ಠೆ ಅಷ್ಠಬಂಧ ಬ್ರಹ್ಮ ಕಲಶಾಭಿಷೇಕ ನಡೆಯಲಿದೆ.ಜೂ.16ರಂದು ಸಂಜೆ 7ಗಂಟೆಗೆ ವಾಸ್ತು ಹೋಮ,ಶಯನ ಪೂಜೆ,ಜೂ.17ರಂದು ಬೆಳಿಗ್ಗೆ 6.00ಗಂಟೆಯಿಂದ 208 ತೆಂಗಿನಕಾಯಿ ಗಣಪತಿ ಹೋಮ,ವಿಷ್ಣು ಸಹಸ್ರನಾಮ ಹೋಮ,ಪ್ರಾತಿಷ್ಠಾ ಹೋಮ ಬೆಳಿಗ್ಗೆ 7.52ರ ಮಿಥುನ ಲಘ್ನ ದಲ್ಲಿ ಅನಂತಪದ್ಮನಾಭ ದೇವರ ಬಿಂಬ ಪ್ರತಿಷ್ಠೆ ಸಂಜೆ 7.00ಗಂಟೆಗೆ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ. ಜೂ.18ರಂದು ಬೆಳಿಗ್ಗೆ 10.00ಗಂಟೆಗೆ ಶ್ರೀ ದುರ್ಗಾಪರಮೇಶ್ವರ ದೇವರಿಗೆ ಶತರದ್ರಾಭಿಷೇಕ ವಿಶೇಷ ಪೂಜೆ. ಸಂಜೆ7.00ಗಂಟೆಗೆ ಶ್ರೀ ದುರ್ಗಾ ನಮಸ್ಕಾರ ಪೂಜೆ,ಲಲಿತ ಸಹಸ್ರನಾಮ ಪಾರಾಯಣ ನಡೆಯಲಿದೆ.ಜೂ.19ರಂದು ಬೆಳಿಗ್ಗೆ 6.00ರಿಂದ ಗಣಹೋಮ,ಕಲಶಹೋಮ ಬೆಳಿಗ್ಗೆ ಗಂಟೆ 8.02ರ ಮಿಥುನ ಲಘ್ನದ ಶುಭ ಮುಹೂರ್ತದಲ್ಲಿ ಶ್ರೀ ದುರ್ಗಾದೇವಿಯ ಅಷ್ಠಬಂಧ ಬಿಂಬ ಪ್ರತಿಷ್ಠೆ ಬೆಳಿಗ್ಗೆ ಗಂಟೆ 10.12ಕ್ಕೆ ಕರ್ಕಾಟಕ ಲಘ್ನದಲ್ಲಿ ನವಗ್ರಹ ಪ್ರತಿಷ್ಠೆ ಬ್ರಹ್ಮಕಲಶಾಭಿಷೇಕ ಮಹಾ ಚಂಡಿಕಾ ಯಾಗ ಮಹಾಪೂಜೆ ಮಂತ್ರಾಕ್ಷತೆ ನಡೆಯಲಿದೆ.
Author: UllalaVani
ಉಳ್ಳಾಲ, ಜೂನ್ 13: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ವಿದ್ಯಾನಿಧಿ ಟ್ರಸ್ಟ್, ಉಳ್ಳಾಲ ತಾಲೂಕು ಹಾಗೂ ಇರಾ ಗ್ರಾಮ ಪಂಚಾಯತ್ ಇವರ ಜಂಟಿ ಆಶ್ರಯದಲ್ಲಿ ಇರಾ ತಾಲಿತ್ತಬೆಟ್ಟು ದ.ಕ. ಜಿ.ಪಂ. ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗಾಗಿ ಸಂವಿಧಾನ ಮತ್ತು ಶಿಕ್ಷಣ ಕುರಿತ ತರಬೇತಿ ಕಾರ್ಯಗಾರವನ್ನು ಶನಿವಾರ ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಇರಾ ಗ್ರಾಮ ಪಂಚಾಯತ್ ಕಾರ್ಯದರ್ಶಿ ದಿನೇಶ್ ಕುಮಾರ್ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಇಸ್ಮಾಯಿಲ್ ಅವರು ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಆದಿ ದ್ರಾವಿಡ ಸಮಾಜ ಸೇವಾ ಸಂಘದ ಜಿಲ್ಲಾ ಅಧ್ಯಕ್ಷ ಶ್ರೀನಿವಾಸ್ ಅರ್ಬಿಗುಡ್ಡೆ ಅವರು ಪ್ರಸಕ್ತ ಸಮಾಜದಲ್ಲಿ ಸಂವಿಧಾನದ ಮಹತ್ವ ಹಾಗೂ ಶಿಕ್ಷಣದ ಅಗತ್ಯತೆಯ ಕುರಿತು ಮಾತನಾಡಿದರು. ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಯಾದವ ಅಸ್ಸೈಗೋಳಿ ಅಧ್ಯಕ್ಷತೆ ವಹಿಸಿ, ಟ್ರಸ್ಟ್‌ನ ವಿವಿಧ ಸಾಮಾಜಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ತದನಂತರ ಉಪನ್ಯಾಸಕ ರಘು ಧರ್ಮಸೇನಾ ಅವರು ವಿದ್ಯಾರ್ಥಿಗಳಿಗೆ…
ಉಳ್ಳಾಲ:ಕುಂಪಲ ಶಿವಪುರದ ಶ್ರೀ ದುರ್ಗಾಪರಮೇಶ್ವರ ಕ್ಷೇತ್ರದಲ್ಲಿ ಜೂ.16ರಿಂದ ಜೂ.17ರ ವರೆಗೆ ಶ್ರೀ ದುರ್ಗಾದೇವಿ, ಶ್ರೀ ಅನಂತ ಪದ್ಮನಾಭ ಮತ್ತು ನವಗ್ರಹ ದೇವರ ಬಿಂಬ ಪ್ರತಿಷ್ಠೆ ಅಷ್ಠಬಂಧ ಬ್ರಹ್ಮ ಕಲಶಾಭಿಷೇಕ ನಡೆಯಲಿದೆ. ಜೂ.16ರಂದು ಸಂಜೆ 7ಗಂಟೆಗೆ ವಾಸ್ತು ಹೋಮ,ಶಯನ ಪೂಜೆ,ಜೂ.17ರಂದು ಬೆಳಿಗ್ಗೆ 6.00ಗಂಟೆಯಿಂದ 208 ತೆಂಗಿನಕಾಯಿ ಗಣಪತಿ ಹೋಮ,ವಿಷ್ಣು ಸಹಸ್ರನಾಮ ಹೋಮ,ಪ್ರಾತಿಷ್ಠಾ ಹೋಮ ಬೆಳಿಗ್ಗೆ 7.52ರ ಮಿಥುನ ಲಘ್ನ ದಲ್ಲಿ ಅನಂತಪದ್ಮನಾಭ ದೇವರ ಬಿಂಬ ಪ್ರತಿಷ್ಠೆ ಸಂಜೆ 7.00ಗಂಟೆಗೆ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ. ಜೂ.18ರಂದು ಬೆಳಿಗ್ಗೆ 10.00ಗಂಟೆಗೆ ಶ್ರೀ ದುರ್ಗಾಪರಮೇಶ್ವರ ದೇವರಿಗೆ ಶತರದ್ರಾಭಿಷೇಕ ವಿಶೇಷ ಪೂಜೆ. ಸಂಜೆ7.00ಗಂಟೆಗೆ ಶ್ರೀ ದುರ್ಗಾ ನಮಸ್ಕಾರ ಪೂಜೆ,ಲಲಿತ ಸಹಸ್ರನಾಮ ಪಾರಾಯಣ ನಡೆಯಲಿದೆ.ಜೂ.19ರಂದು ಬೆಳಿಗ್ಗೆ 6.00ರಿಂದ ಗಣಹೋಮ,ಕಲಶಹೋಮ ಬೆಳಿಗ್ಗೆ ಗಂಟೆ 8.02ರ ಮಿಥುನ ಲಘ್ನದ ಶುಭ ಮುಹೂರ್ತದಲ್ಲಿ ಶ್ರೀ ದುರ್ಗಾದೇವಿಯ ಅಷ್ಠಬಂಧ ಬಿಂಬ ಪ್ರತಿಷ್ಠೆ ಬೆಳಿಗ್ಗೆ ಗಂಟೆ 10.12ಕ್ಕೆ ಕರ್ಕಾಟಕ ಲಘ್ನದಲ್ಲಿ ನವಗ್ರಹ ಪ್ರತಿಷ್ಠೆ ಬ್ರಹ್ಮಕಲಶಾಭಿಷೇಕ ಮಹಾ ಚಂಡಿಕಾ ಯಾಗ ಮಹಾಪೂಜೆ ಮಂತ್ರಾಕ್ಷತೆ ನಡೆಯಲಿದೆ.
“ಪೋಷಕರು, ಮಗುವಿನ ಸಮಗ್ರ ಬೆಳವಣಿಗೆಗೆ ಪ್ರೋತ್ಸಾಹ ನೀಡಿದಾಗ ವ್ಯಕ್ತಿತ್ವದ ವಿಕಾಸವಾಗುತ್ತದೆ, ಮಕ್ಕಳನ್ನು ಮಾಧ್ಯಮದಿಂದ ದೂರವಿರಿಸಿ ಎಂದು ಶಾಲಾ ಸಂಚಾಲಕರು ಮತ್ತು ಉರ್ವ ಇಮ್ಯಾನಿಕ್ ಚರ್ಚ್ ಧರ್ಮ ಗುರುಗಳಾದ ವಂ ಗುರು ಬೆಂಜಮೀನ್ ಪಿಂಟೊರವರು ಉರ್ವ ಚರ್ಚ್ ಸಭಾಂಗಣದಲ್ಲಿ ನಡೆದ ಸಂತ ಅಲೋಶಿಯಸ್ ಆಂಗ್ಲ ಮಾಧ್ಯಮ ಶಾಲೆ ಶಿಕ್ಷಕ ರಕ್ಷಕ ಸಂಘದ ಸಭೆಯನ್ನು ಉದ್ದೇಶಿಸಿ ದೀಪ ಬೆಳಗಿಸಿ ಉದ್ಘಾಟಿಸುತ್ತಾ ಸಂದೇಶ ನೀಡಿದರು. ಶಿಕ್ಷಕರಾದ ರಾಜ್ ಕಿರಣ್ ಡಿಕುನ್ಹಾ 2025 – 26ನೇ ಶೈಕ್ಷಣಿಕ ಸಾಲಿನ ಶಾಲಾ ವರದಿಯನ್ನು ವಾಚಿಸಿದರು. ಶಿಕ್ಷಕ ರಕ್ಷಕ ಸಂಘದ ಖರ್ಚು ವೆಚ್ಚಗಳನ್ನು ಖಜಾಂಜಿ ಡಾರ್ವಿನ್ ಕರ್ಕಡ ಮಂಡಿಸಿದರು. ಈ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ವಂ ಗುರು ಅರುಣ್ ವಿಲ್ಸನ್ ಲೋಬೊ ಅವರು ಚಿತ್ರ ಬಿಡಿಸುವಲ್ಲಿ ಕಲಾಕಾರ ಹೃದಯ ಮತ್ತು ಮನಸ್ಸು ಇದ್ದಾಗ ಒಳ್ಳೆಯ ಬೆಳವಣಿಗೆ ಆಗುತ್ತದೆ ಎಂದು ಹೇಳಿದರು. ಶಿಕ್ಷಕಿಯರಾದ ಪ್ರಮೀಳ ತಾವ್ರೊ ಮತ್ತು ತ್ರಿವೇಣಿ ಶಾಲಾ ನಿಯಮಾವಳಿಗಳನ್ನು ತಿಳಿಸಿದರು.ಶಾಲಾ ಮುಖ್ಯ ಶಿಕ್ಷಕರಾದ ಅಲೋಶಿಯಸ್ ಡಿಸೋಜ ರವರು ಶಾಲೆಯ…
ಮಂಗಳೂರು ವಿಧಾನ ಸಭಾ ಕ್ಷೇತ್ರದ ಹರೇಕಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅರ್ಹ ನಿವೇಶನ ರಹಿತರಿಗೆ ನಿವೇಶನ ನೀಡಬೇಕೆಂದು ಸಿಪಿಐಮ್ ಹರೇಕಳ ಗ್ರಾಮ ಪಂಚಾಯತ್ ಮುಂಭಾಗ ಧರಣಿ ನಡೆಸಿ ಪಂಚಾಯತ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಶೀಘ್ರವೇ ನಿವೇಶನ ರಹಿತರಿಗೆ ನಿವೇಶನ ನೀಡಬೇಕೆಂದು ಆಗ್ರಹಿಸಿತು.. ಪ್ರತಿಭಟನೆಯಿಂದ ಎಚ್ಚೆತ್ತ ಅಧಿಕಾರಿಗಳು ನಿವೇಶನರಹಿತರಿಗೆ ನಿವೇಶನ ನೀಡುವ ಭರವಸೆ ನೀಡಿದರು. ನಂತರ ಮಲಾರ್ ಕೋಡಿ ಎಂಬಲ್ಲಿ ಗುಡ್ಡ ಇಳಿಜಾರು ಪ್ರದೇಶದಲ್ಲಿ ಜಾಗವನ್ನು ಗುರುತಿಸಲಾಯಿತು.. ತರಾತುರಿಯಲ್ಲಿ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮೀಸಲಿಟ್ಟ ಜಾಗವನ್ನು ಅವೈಜ್ಞಾನಿಕವಾಗಿ ಸಮತಟ್ಟುಗೊಳಿಸಿದರು. ಸದ್ಯ ಒಂದೇ ಮಳೆಗೆ ಸಮತಟ್ಟು ಗೊಳಿಸಿದ ಜಾಗವು ಕೊಚ್ಚಿ ಹೋಗಿದ್ದು ಲಕ್ಷಾಂತರ ರೂಪಾಯಿ ನೀರಿನಲ್ಲಿ ಬಿಟ್ಟಂತಾಗಿದೆ. ನೆಲೆಸಲು ಯೋಗ್ಯವೇ ಇಲ್ಲದ, ಸಂಬಂಧಪಟ್ಟ ಇಲಾಖೆಗಳಿಂದ NOC ಯನ್ನೂ ಪಡೆಯದೇ ಅವೈಜ್ಞಾನಿಕವಾಗಿ ಸಮತಟ್ಟುಗೊಳಿಸಿ ಲಕ್ಷಾಂತರ ರೂಪಾಯಿಯನ್ನು ಪೋಲು ಮಾಡಲಾಗಿದೆ… ಸದ್ಯ ಮೀಸಲಿಟ್ಟ ಜಾಗವು ಇನ್ನೂ ಸರಿಯಾಗಿ ಪ್ರಾರಂಭವಾಗದ ಮಳೆಗೆ ಕೊಚ್ಚಿ ಹೋಗಿ ಹೊಂಡ ನಿರ್ಮಾಣವಾಗಿದ್ದು ಬಿರುಸಾಗಿ ಮಳೆ ಬಂದರೆ ವಯನಾಡ್…
ಹಳೆಕೋಟೆ, ಜೂನ್ 13: ಭಾರತದ ಸಂವಿಧಾನದ ಆಶಯದಂತೆ ಸಾರ್ವತ್ರಿಕ ಚುನಾವಣೆಯ ಮಾದರಿಯಲ್ಲಿ ಇವಿಎಂ (ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್) ಮೂಲಕ ಹಳೆಕೋಟೆಯ ಸಯ್ಯದ್ ಮದನಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸಯ್ಯದ್ ಮದನಿ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ತಿನ ಚುನಾವಣೆ ಯಶಸ್ವಿಯಾಗಿ ನಡೆಯಿತು. ಚುನಾವಣೆಯಲ್ಲಿ ರಂಸೀನಾ ಮುಖ್ಯಮಂತ್ರಿಯಾಗಿ ಹಾಗೂ ಆಯಿಷಾ ಶೈಮಾ ಉಪಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಚುನಾವಣೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ತಮ್ಮ ಆಧಾರ್ ಕಾರ್ಡ್ ಹಾಗೂ ಶಾಲೆಯ ಗುರುತಿನ ಚೀಟಿಯನ್ನು ತೋರಿಸಿ ಮತದಾನದ ಅರ್ಹತೆ ಪಡೆದು, ತಮ್ಮ ಇಷ್ಟದ ಅಭ್ಯರ್ಥಿಗಳಿಗೆ ಮತ ಚಲಾಯಿಸಿದರು. ಈ ಚುನಾವಣೆಯಲ್ಲಿ ಒಟ್ಟು ಎಂಟು ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಚುನಾವಣೆಗೆ ಎರಡು ದಿನಗಳ ಮುಂಚೆಯೇ ಅಭ್ಯರ್ಥಿಗಳು ತಮ್ಮ ಪರವಾಗಿ ಸಹಪಾಠಿಗಳಲ್ಲಿ ಮತಯಾಚನೆ ನಡೆಸಿ ಚುನಾವಣಾ ವಾತಾವರಣವನ್ನು ಸೃಷ್ಟಿಸಿದ್ದರು. ವಿದ್ಯಾರ್ಥಿಗಳಿಗೆ ಸಾರ್ವತ್ರಿಕ ಚುನಾವಣೆಯ ಪರಿಕಲ್ಪನೆ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪರಿಚಯಿಸುವ ಉದ್ದೇಶದಿಂದ ಈ ಚುನಾವಣೆ ಆಯೋಜಿಸಲಾಗಿತ್ತು. ಶಾಲಾ ಮುಖ್ಯೋಪಾಧ್ಯಾಯರಾದ ಕೆ.ಎಂ.ಕೆ. ಮಂಜನಾಡಿ ಅವರು ಮುಖ್ಯ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಶ್ರೀಮತಿ ಸಪ್ನ ಅವರು…
ಪ್ರತಿ ಬಾರಿ ಸೇತುವೆ ಕುಸಿದಾಗ, ಕಳಪೆ ಕಾಮಗಾರಿಯಿಂದ ರಸ್ತೆ ಅಪಘಾತ ಸಂಭವಿಸಿದಾಗ, ಆಸ್ಪತ್ರೆಯ ನಿರ್ಲಕ್ಷ್ಯದಿಂದ ರೋಗಿಯೊಬ್ಬರು ಮೃತಪಟ್ಟಾಗ ಒಂದೇ ಪ್ರಶ್ನೆ ಮೂಡುತ್ತದೆ — ಸಾಮಾನ್ಯ ನಾಗರಿಕನ ಜೀವಕ್ಕೆ ಈ ದೇಶದಲ್ಲಿ ನಿಜವಾಗಿಯೂ ಬೆಲೆ ಇದೆಯೇ? ಒಬ್ಬ ಬಡ ವ್ಯಕ್ತಿ ಸಣ್ಣ ತಪ್ಪು ಮಾಡಿದರೂ ಕಾನೂನಿನ ಮುಂದೆ ನಿಲ್ಲಬೇಕಾಗುತ್ತದೆ. ಆದರೆ ಭ್ರಷ್ಟಾಚಾರ, ಕರ್ತವ್ಯಲೋಪ ಅಥವಾ ನಿರ್ಲಕ್ಷ್ಯದಿಂದ ಜನರ ಜೀವಹಾನಿ ಸಂಭವಿಸಿದಾಗ, ಹೊಣೆಗಾರ ಅಧಿಕಾರಿಗಳು ಮತ್ತು ವೃತ್ತಿಪರರ ವಿರುದ್ಧ ಕಠಿಣ ಕ್ರಮಗಳು ಅಪರೂಪವಾಗಿ ಕಾಣಿಸುತ್ತವೆ ಎಂಬ ಭಾವನೆ ಜನರಲ್ಲಿ ಮೂಡುತ್ತಿದೆ. ದೇಶ ಎಂದರೆ ಕೇವಲ ಕಟ್ಟಡಗಳು, ರಸ್ತೆಗಳು, ಪ್ರತಿಮೆಗಳು, ಯೋಜನೆಗಳು ಅಥವಾ ರಾಜಕೀಯ ಘೋಷಣೆಗಳಲ್ಲ. ದೇಶ ಅಂದರೆ ಜನರು. ಜನರ ಜೀವ, ಆರೋಗ್ಯ, ಸುರಕ್ಷತೆ ಮತ್ತು ಗೌರವವನ್ನು ಕಾಪಾಡುವ ವ್ಯವಸ್ಥೆಯೇ ನಿಜವಾದ ರಾಷ್ಟ್ರ ನಿರ್ಮಾಣ. ಜನರ ಜೀವಕ್ಕೆ ಬೆಲೆ ಇಲ್ಲದಿದ್ದರೆ ಅಭಿವೃದ್ಧಿಯ ಎಲ್ಲ ಘೋಷಣೆಗಳೂ ಅರ್ಥ ಕಳೆದುಕೊಳ್ಳುತ್ತವೆ. ಕಳಪೆ ಕಾಮಗಾರಿಗೆ ಅನುಮೋದನೆ ನೀಡಿದ ಇಂಜಿನಿಯರ್, ಸುರಕ್ಷತಾ ನಿಯಮಗಳನ್ನು ಕಡೆಗಣಿಸಿದ ಅಧಿಕಾರಿಗಳು, ಗಂಭೀರ ನಿರ್ಲಕ್ಷ್ಯ ತೋರಿದ…
ಬೆಳ್ತಂಗಡಿ :- ವಿಧಾನಸಭಾ ಕ್ಷೇತ್ರ ಸೇರಿದಂತೆ ರಾಜ್ಯದ ವಿವಿಧ ಅರಣ್ಯ ಹಾಗೂ ಅರಣ್ಯದಂಚಿನ ಪ್ರದೇಶಗಳಲ್ಲಿ ವಾಸಿಸುವ ಬುಡಕಟ್ಟು ಸಮುದಾಯಗಳ ಕಾಲೋನಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ವಿಚಾರ ಇಂದು ಅತ್ಯಂತ ಮಹತ್ವದ ವಿಷಯವಾಗಿದೆ. ರಸ್ತೆ, ಕುಡಿಯುವ ನೀರು, ವಿದ್ಯುತ್, ಶಾಲೆ, ಆರೋಗ್ಯ ಕೇಂದ್ರ ಸೇರಿದಂತೆ ಅಗತ್ಯ ಸೌಲಭ್ಯಗಳ ಕೊರತೆಯಿಂದ ಸಾವಿರಾರು ಕುಟುಂಬಗಳು ಇನ್ನೂ ಸಂಕಷ್ಟದ ಜೀವನ ನಡೆಸುತ್ತಿವೆ. ಈ ಹಿನ್ನೆಲೆಯಲ್ಲಿ, ಅರಣ್ಯ ಹಕ್ಕು ಕಾಯ್ದೆ (Forest Rights Act)ಯ ಸೆಕ್ಷನ್ 3(2) ಅಡಿಯಲ್ಲಿ ಭೂ ಪರಿವರ್ತನೆ ಮಾಡಿ, ಫಾರೆಸ್ಟ್ ಕ್ಲಿಯರೆನ್ಸ್ ಹಾಗೂ ವನ್ಯಜೀವಿ ಮಂಡಳಿಯ ಪ್ರತ್ಯೇಕ ಅನುಮತಿ ಇಲ್ಲದೇ ಜಿಲ್ಲಾ ಅರಣ್ಯಾಧಿಕಾರಿ (DFO) ಹಂತದಲ್ಲೇ ಅನುಮತಿ ನೀಡುವ ಕುರಿತು ಕೇಂದ್ರ ಸರ್ಕಾರದ ಆದೇಶದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಕನಗವಲ್ಲಿ ಅವರನ್ನು ಭೇಟಿ ಮಾಡಿ ಸೂಚನೆ ಪತ್ರ ಸಲ್ಲಿಸಲಾಗಿದೆ. ಈ ಸೂಚನೆ ಪತ್ರ ಕೇವಲ ಬೆಳ್ತಂಗಡಿ ಕ್ಷೇತ್ರಕ್ಕೆ ಸೀಮಿತವಾಗಿರುವುದಿಲ್ಲ. ಸರ್ಕಾರದ ಹಂತದಿಂದ ಈ ಕುರಿತು ಸ್ಪಷ್ಟ ಆದೇಶಗಳು…
ಶಿಕ್ಷಣವು ಕೇವಲ ಒಂದು ಸೌಲಭ್ಯವಲ್ಲ, ಅದು ಪ್ರತಿಯೊಬ್ಬ ಮಗುವಿನ ಮೂಲಭೂತ ಹಕ್ಕು. ಸಮಾಜದ ದುರ್ಬಲ ವರ್ಗಗಳಾದ ಎಸ್‌ಸಿ ಮತ್ತು ಎಸ್‌ಟಿ ಸಮುದಾಯದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಇತ್ತೀಚೆಗೆ ಶಿಕ್ಷಣ ಹಕ್ಕು ಕಾಯ್ದೆ (RTE) ಅಡಿಯಲ್ಲಿ 8ನೇ ತರಗತಿ ಪೂರ್ಣಗೊಳಿಸಿರುವ ಎಸ್‌ಸಿ ಮತ್ತು ಎಸ್‌ಟಿ ವಿದ್ಯಾರ್ಥಿಗಳಿಗೆ ಅದೇ ಖಾಸಗಿ ಶಾಲೆಯಲ್ಲಿ 9 ಮತ್ತು 10ನೇ ತರಗತಿಯನ್ನು ಮುಂದುವರಿಸಲು ಅವಕಾಶ ನೀಡುವ ಸರ್ಕಾರದ ಸುತ್ತೋಲೆಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ನ್ಯಾಯಾಲಯದ ತಡೆಯಾಜ್ಞೆ ಸಂವಿಧಾನದ ಆಶಯಗಳಿಗೆ ವಿರುದ್ಧವಲ್ಲ; ಅದು ಪ್ರಸ್ತುತ ಇರುವ ಕಾನೂನಿನ ವ್ಯಾಖ್ಯಾನದ ಆಧಾರದ ಮೇಲೆ ನೀಡಿರುವ ಆದೇಶವಾಗಿದೆ. RTE ಕಾಯ್ದೆಯ ಪ್ರಕಾರ 6 ರಿಂದ 14 ವರ್ಷದ ಮಕ್ಕಳಿಗೆ, ಅಂದರೆ 8ನೇ ತರಗತಿಯವರೆಗೆ ಮಾತ್ರ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕು ಕಲ್ಪಿಸಲಾಗಿದೆ. ಆದ್ದರಿಂದ 9 ಮತ್ತು 10ನೇ ತರಗತಿಗೆ ಈ ಸೌಲಭ್ಯವನ್ನು ವಿಸ್ತರಿಸಲು ಕಾನೂನಾತ್ಮಕ ಅಡಿಪಾಯ ಅಗತ್ಯವಿದೆ ಎಂಬುದು ನ್ಯಾಯಾಲಯದ ಅಭಿಪ್ರಾಯವಾಗಿದೆ. ಆದರೆ ಇಲ್ಲಿ…
ದಕ್ಷಿಣ ಕನ್ನಡ ಜಿಲ್ಲೆಯ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಪ್ರಮುಖ ಆಶ್ರಯವಾಗಿರುವ ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಇಂದು ಕೇವಲ ದಕ್ಷಿಣ ಕನ್ನಡ ಜಿಲ್ಲೆಗೆ ಮಾತ್ರ ಸೀಮಿತವಾಗಿಲ್ಲ. ಉಡುಪಿ, ಉತ್ತರ ಕನ್ನಡ, ಕೊಡಗು, ಚಿಕ್ಕಮಗಳೂರು ಸೇರಿದಂತೆ ಹಲವು ಜಿಲ್ಲೆಗಳಿಂದ ಪ್ರತಿದಿನ ಸಾವಿರಾರು ರೋಗಿಗಳು ಚಿಕಿತ್ಸೆಗಾಗಿ ಇಲ್ಲಿಗೆ ಆಗಮಿಸುತ್ತಿದ್ದಾರೆ. ಸಾಮಾನ್ಯವಾಗಿ ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಮಾತನಾಡುವಾಗ ವೈದ್ಯರ ಕೊರತೆ, ಹಾಸಿಗೆಗಳ ಕೊರತೆ ಅಥವಾ ಮೂಲಸೌಕರ್ಯದ ಸಮಸ್ಯೆಗಳ ಕುರಿತು ಚರ್ಚೆ ನಡೆಯುತ್ತದೆ. ಆದರೆ ವೆನ್ಲಾಕ್ ಆಸ್ಪತ್ರೆಯ ಇಂದಿನ ಪರಿಸ್ಥಿತಿ ಆರೋಗ್ಯ ಸೇವೆಯ ಮತ್ತೊಂದು ಗಂಭೀರ ಸಮಸ್ಯೆಯನ್ನು ಬೆಳಕಿಗೆ ತರುತ್ತಿದೆ — ರೋಗಿಗಳ ಸಂಖ್ಯೆಗೆ ಅನುಗುಣವಾಗಿ ವೈದ್ಯಕೀಯ ಸಿಬ್ಬಂದಿ ಮತ್ತು ತಾಂತ್ರಿಕ ಸೌಲಭ್ಯಗಳ ಕೊರತೆ. ದ.ಕ ಜಿಲ್ಲೆಯ ಬಡ ರೋಗಿಗಳಿಗೆ ಐಸಿಓ ಇಲ್ಲದೆ ಮೃತ ಪಡುವ ಘಟನೆಗಳು ಸಂಭವಿಸಬಹುದು ಸಾರ್ವಜನಿಕ ಅಭಿಪ್ರಾಯವಾಗಿದೆ ಆಸ್ಪತ್ರೆಗಳಲ್ಲಿ ಸೇವಾ ಗುಣಮಟ್ಟವನ್ನು ಖಚಿತಪಡಿಸಲು ಭಾರತೀಯ ಸಾರ್ವಜನಿಕ ಆರೋಗ್ಯ ಮಾನದಂಡಗಳು (IPHS) ನಿರ್ದಿಷ್ಟ ಮಾರ್ಗಸೂಚಿಗಳನ್ನು ಹೊಂದಿವೆ. ತೀವ್ರ ನಿಗಾ ಘಟಕ (ICU) ಮತ್ತು…

