Author: UllalaVani

Kannada News From Coastal Karnataka

ಉಡುಪಿ, ಮೇ. 01 : ಕೆಲಸದ ವಿಷಯದಲ್ಲಿ ಉಂಟಾದ ಸಣ್ಣ ಜಗಳದಿಂದಾಗಿ ತನ್ನ ಮಾಲೀಕನ ಮೇಲೆ ಆ್ಯಸಿಡ್ ಸುರಿದು ಕೊಲೆಗೆ ಯತ್ನಿಸಿದ ಕೇರಳ ಮೂಲದ ವ್ಯಕ್ತಿಗೆ ಉಡುಪಿಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 30,000 ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ. ಕೇರಳ ಮೂಲದ ರತೀಶ್ ಕೆ.ಟಿ. (42) ಶಿಕ್ಷೆಗೊಳಗಾದ ಆರೋಪಿ.ಘಟನೆಯ ವಿವರ:2022ರ ಫೆಬ್ರವರಿ 28ರಂದು, ಕೇರಳದ ತ್ರಿಶೂರ್ ಜಿಲ್ಲೆಯ ಸುಧೀರ್ ಪಿ.ಎ. ಅವರು ಹೆಬ್ರಿ ತಾಲೂಕಿನ ಚಾರ ಗ್ರಾಮದ ಮಂಡಾಡಿಜಡ್ಡುವಿನಲ್ಲಿರುವ ಅಜಿತ್ ಅಗಸ್ಟೀನ್ ಅವರ ತೋಟಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ಸುಧೀರ್ ಅವರು ರತೀಶ್‌ಗೆ, “ನೀನು ರಬ್ಬರ್ ಟ್ಯಾಪಿಂಗ್ ಕೆಲಸವನ್ನು ಸರಿಯಾಗಿ ಮಾಡುತ್ತಿಲ್ಲ. ಇಲ್ಲಿನ ಕೆಲಸಗಾರರನ್ನು ಗಮನಿಸಿ ಕಲಿ” ಎಂದು ಸಲಹೆ ನೀಡಿದ್ದರು. ಇದು ಇಬ್ಬರ ನಡುವೆ ಮಾತಿನ ಚಕಮಕಿಗೆ ಕಾರಣವಾಗಿತ್ತು.ಈ ಘಟನೆಯಿಂದ ರತೀಶ್ ಮನಸ್ಸಿನಲ್ಲಿ ದ್ವೇಷ ಬೆಳೆಸಿಕೊಂಡಿದ್ದ. ಮಾರ್ಚ್ 2ರಂದು ರಾತ್ರಿ ಸುಮಾರು 1 ಗಂಟೆಗೆ ಸುಧೀರ್ ಮಲಗಿದ್ದಾಗ,…

Read More

ಕೋಟೆಕಾರ್: ಎಸ್‌ವೈಎಸ್ ಹಿದಾಯತ್ ನಗರ ಶಾಖೆಯ ವಾರ್ಷಿಕ ಮಹಾಸಭೆ ಹಿದಾಯತ್ ನಗರ ಮದರಸ ಹಾಲ್‌ನಲ್ಲಿ ನಡೆಯಿತು. ಕಾರ್ಯಕ್ರಮದ ವೀಕ್ಷಕರಾಗಿ ಬಶೀರ್ ಆಹ್ಸನಿ ಉಸ್ತಾದ್ ಆಗಮಿಸಿ ಸಭೆಯನ್ನು ಉದ್ಘಾಟಿಸಿದರು. ಸಭೆಯಲ್ಲಿ 2025-26ನೇ ಸಾಲಿನ ಸಮಿತಿಯನ್ನು ಬರ್ಕಸ್‌ಗೊಳಿಸಿ, ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು. ನೂತನ ಸಮಿತಿಯ ಅಧ್ಯಕ್ಷರಾಗಿ ಬಶೀರ್ ಅಹ್ಸನಿ ತೋಡಾರ್, ಉಪಾಧ್ಯಕ್ಷರಾಗಿ ಸಿದ್ದೀಕ್ ಟಿ.ಎಚ್. ಹಾಗೂ ಅಝೀಝ್ ಪಂಜಲ, ಪ್ರಧಾನ ಕಾರ್ಯದರ್ಶಿಯಾಗಿ ಜಿ.ಎ. ಅಜ್ಜಿನಡ್ಕ, ಕೋಶಾಧಿಕಾರಿಯಾಗಿ ಶಬೀರ್ ಆಶ್ಅರಿ, ದಅ್ವಾ ಕಾರ್ಯದರ್ಶಿಯಾಗಿ ಝುಬೈರ್ ಝುಹ್ರಿ ಆಯ್ಕೆಯಾಗಿದ್ದಾರೆ. ಇದಲ್ಲದೆ, ಸಾಂತ್ವನ ವಿಭಾಗಕ್ಕೆ ಇಸಾಬ್ ಮುನೀರ್ ಉಳ್ಳಾಲ, ಅಬ್ದುಲ್ ಫಲೂಲ್ ಮತ್ತು ಸಮದ್ ಅವರನ್ನು ಆಯ್ಕೆ ಮಾಡಲಾಗಿದ್ದು, ಸದಸ್ಯರಾಗಿ ಅಬ್ದುಲ್ ಬಶೀರ್, ಫಾರೂಕ್ ಉಳ್ಳಾಲ್, ಮೊಹಮ್ಮದ್ ಬಶೀರ್ ಮತ್ತು ಸಿರಾಜ್ ಆಯ್ಕೆಯಾಗಿದ್ದಾರೆ. ಸಭೆಯನ್ನು ಪ್ರಧಾನ ಕಾರ್ಯದರ್ಶಿ ಮುನೀರ್ ಸ್ವಾಗತಿಸಿ, ಜಿ.ಎ. ವಂದಿಸಿದರು. ಸ್ವಲಾತ್‌ನೊಂದಿಗೆ ಕಾರ್ಯಕ್ರಮವನ್ನು ಸಮಾಪಿಸಲಾಯಿತು.

Read More

ನವದೆಹಲಿ, ಏ. 30;  ಯಾವುದೇ ಕಾರಣಕ್ಕೂ ಅತ್ಯಾಚಾರಕ್ಕೊಳಗಾದ ಅಪ್ರಾಪ್ತ ಬಾಲಕಿಯನ್ನು ಗರ್ಭಧಾರಣೆಯನ್ನು ಹೊರುವಂತೆ ಒತ್ತಾಯಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಅತ್ಯಾಚಾರಕ್ಕೊಳಗಾದ 15 ವರ್ಷದ ಮಗುವಿನ 31 ವಾರಗಳ ಗರ್ಭಧಾರಣೆಯನ್ನು ಅಂತ್ಯಗೊಳಿಸುವ ಹಿಂದಿನ ಆದೇಶದ ವಿರುದ್ಧ ಕೇಂದ್ರ ಸರ್ಕಾರ ಕ್ಯುರೇಟಿವ್ ಅರ್ಜಿಯನ್ನು ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾ.ಜೋಯ್ಮಲ್ಯ ಬಾಗ್ಚಿ ಅವರ ಪೀಠವು, ಅತ್ಯಾಚಾರ ಸಂತ್ರಸ್ತೆ 20 ವಾರಗಳನ್ನು ಮೀರಿದ ಅನಗತ್ಯ ಗರ್ಭಧಾರಣೆಯನ್ನು ಅಂತ್ಯಗೊಳಿಸಲು ಅನುಮತಿಸಲು ಕಾನೂನನ್ನು ತಿದ್ದುಪಡಿ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.ಅಪ್ರಾಪ್ತ ಬಾಲಕಿ ಸೇರಿದಂತೆ ಅತ್ಯಾಚಾರದಿಂದ ಗರ್ಭಿಣಿಯಾದವರಿಗೆ ಅವರ ದೇಹದ ಮೇಲೆ ಸಂಪೂರ್ಣ ಹಕ್ಕಿರುತ್ತದೆ. ಅತ್ಯಾಚಾರ ಇತ್ಯಾದಿಗಳಿಂದಾಗಿ ಗರ್ಭಧಾರಣೆ ಸಂಭವಿಸಿದಾಗ ಗರ್ಭಪಾತಕ್ಕೆ ಸಮಯದ ಮಿತಿ ಇರುವುದಿಲ್ಲ ಎಂದು ದಯವಿಟ್ಟು ನಿಮ್ಮ ಕಾನೂನನ್ನು ತಿದ್ದುಪಡಿ ಮಾಡಿ. ಅಂತಹ ಪ್ರಕರಣದ ವಿಚಾರಣೆಗಳು ಒಂದು ವಾರದೊಳಗೆ ಪೂರ್ಣಗೊಳ್ಳುವಂತೆ ಕಾನೂನನ್ನು ತಿದ್ದುಪಡಿ ಮಾಡಿ. ವಿಚಾರಣೆಯ ಬಾಕಿ ಇರುವ ಆಘಾತವನ್ನು ಆ ಮಗು…

Read More

ಮಂಗಳೂರು : ಉಳ್ಳಾಲದ ಮುಕ್ಕಚ್ಚೇರಿಯಲ್ಲಿ 2017ರ ಅಕ್ಟೋಬರ್ 4ರಂದು ನಡೆದಿದ್ದ ಝಬೇರ್ ಎಂಬುವವರ ಕೊಲೆ ಮತ್ತು ಇಲ್ಯಾಸ್ ಎಂಬುವವರ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿ ಅಬ್ದುಲ್ ರಹ್ಮಾನ್ ಸುಹೇಲ್‌ಗೆ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. 2017ರ ಅಕ್ಟೋಬರ್ 4ರಂದು ರಾತ್ರಿ ಜುಬೇರ್ ಮತ್ತು ಇಲ್ಯಾಸ್ ಮಾತನಾಡುತ್ತಿದ್ದಾಗ ಮಾರಕಾಸ್ತ್ರಗಳೊಂದಿಗೆ ಬಂದ ತಂಡವೊಂದು ಅವರ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಜುಬೇರ್ ಕೊಲೆಯಾಗಿದ್ದರು. ಮಧ್ಯಪ್ರವೇಶಿಸಲು ಯತ್ನಿಸಿದ ಇಲ್ಯಾಸ್ ಅವರ ಮೇಲೆಯೂ ತಲ್ವಾರಿನಿಂದ ಹಲ್ಲೆ ನಡೆಸಲಾಗಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದರು.ಅಂದಿನ ಇನ್ಸ್‌ಪೆಕ್ಟರ್ ಗೋಪಿಕೃಷ್ಣ ಕೆ.ಆರ್. ಅವರು ಆರೋಪಿಗಳಾದ ಅಬ್ದುಲ್ ರಹ್ಮಾನ್ ಸುಹೇಲ್, ನಿಝಾಮ್ ಅಲಿಯಾಸ್ ನಿಝಾಮುದ್ದೀನ್, ತಾಜುದ್ದೀನ್, ಮುಸ್ತಫಾ ಅಲಿಯಾಸ್ ಮುಹಮ್ಮದ್ ಮುಸ್ತಫಾ, ಅಲ್ತಾಫ್, ಆಸಿಫ್ ಅಲಿಯಾಸ್ ಮಂದ ಆಸೀಫ್ ಮತ್ತು ನಾಸಿರ್ ಅಲಿಯಾಸ್ ಕಡಪ್ಪರ ನಾಸಿರ್ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2022ರ ಏಪ್ರಿಲ್ 20ರಂದು ನ್ಯಾಯಾಲಯವು ನಿಝಾಮ್, ತಾಜುದ್ದೀನ್ ಮತ್ತು…

Read More

ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಬೆಲ್ಮಾ ಗ್ರಾಮದಲ್ಲಿನ Survey No. 54ರಲ್ಲಿ ಅಕ್ರಮವಾಗಿ ಮಣ್ಣು ತೆಗೆಯುವಿಕೆ ನಡೆಯುತ್ತಿದ್ದು, ಈ ವೇಳೆ ಸ್ಥಳದಲ್ಲಿದ್ದ ದೈವದ ಕಲ್ಲುಗಳನ್ನು ಕೂಡ ತೆರವುಗೊಳಿಸಿರುವ ಆರೋಪ ಕೇಳಿಬಂದಿದೆ. ಈ ಘಟನೆ ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಸಾರ್ವಜನಿಕ ಸಂಪನ್ಮೂಲಗಳ ದುರ್ಬಳಕೆ ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆಸ್ಥಳೀಯರ ಪ್ರಕಾರ, ಯಾವುದೇ ಮಾನ್ಯ ಪರವಾನಗಿ ಇಲ್ಲದೆ JCB ಯಂತ್ರಗಳ ಮೂಲಕ ಭಾರೀ ಪ್ರಮಾಣದಲ್ಲಿ ಮಣ್ಣು ತೆಗೆಯಲಾಗುತ್ತಿದ್ದು, ಆ ಮಣ್ಣನ್ನು ಖಾಸಗಿ ಜಾಗಗಳಿಗೆ ಸಾಗಿಸಿ ಮಾರಾಟ ಮಾಡಲಾಗುತ್ತಿದೆ. ವಿಶೇಷವಾಗಿ, ಸರ್ವೇ ಪೂರ್ಣಗೊಳ್ಳುವ ಮುನ್ನವೇ ಈ ಕಾರ್ಯಗಳನ್ನು ಮುಂದುವರಿಸಲಾಗುತ್ತಿದೆ ಎಂಬುದು ಗಂಭೀರ ಅಂಶವಾಗಿ ಹೊರಹೊಮ್ಮಿದೆ. ಇದಲ್ಲದೆ, ಈ ಅಕ್ರಮ ಚಟುವಟಿಕೆಯಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO), ತಹಶೀಲ್ದಾರ್ ಹಾಗೂ ಜಿಯಾಲಜಿಸ್ಟ್ ಅಧಿಕಾರಿಗಳ ಶಾಮೀಲು ಇರುವ ಸಾಧ್ಯತೆ ಕುರಿತು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಬಹುಕಾಲದಿಂದ ಈ ಕಾರ್ಯ ನಡೆಯುತ್ತಿದ್ದರೂ ಯಾವುದೇ ತಡೆ ಕ್ರಮ ಕೈಗೊಳ್ಳದಿರುವುದು ಈ ಅನುಮಾನಕ್ಕೆ ಬಲ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ, ವಿಷಯದ ಗಂಭೀರತೆಯನ್ನು ಮನಗಂಡು,…

Read More

ಅಡ್ಕರೆ ಪಡ್ಪು, ಏಪ್ರಿಲ್ 30: ಅಡ್ಕರೆ ಪಡ್ಪಿನಲ್ಲಿ ಸುಖನ್ಯಾ ಸಮೃದ್ಧಿ ಯೋಜನೆ ಹಾಗೂ ಆಧಾರ್ ಸೇವೆಗಳಿಗಾಗಿ ವಿಶೇಷ ಶಿಬಿರವನ್ನು ಆಯೋಜಿಸಲಾಗಿದೆ. ಅಲ್ ಇನ್ಸಾನ್ ಯೂತ್ ಅಸೋಸಿಯೇಶನ್ (ರಿ), ಅಡ್ಕರೆ ಪಡ್ಪು ಮತ್ತು ಭಾರತೀಯ ಅಂಚೆ ಇಲಾಖೆ ಮಂಗಳೂರು ವಿಭಾಗದ ಸಹಯೋಗದಲ್ಲಿ ಈ ಶಿಬಿರ ಮೇ 3, 2026ರಂದು ನಡೆಯಲಿದೆ. ಅಡ್ಕರೆ ಪಡ್ಪಿನ ಅಲ್ ಇಹ್ಲಾನ್ ಸಭಾಂಗಣದಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಶಿಬಿರ ನಡೆಯಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯುವಂತೆ ಸಂಘಟನೆ ಮನವಿ ಮಾಡಿದೆ. ಶಿಬಿರದಲ್ಲಿ ಸುಖನ್ಯಾ ಸಮೃದ್ಧಿ ಯೋಜನೆಯಡಿ ಹೆಣ್ಣುಮಕ್ಕಳ ಭವಿಷ್ಯಕ್ಕಾಗಿ ಉಳಿತಾಯ ಖಾತೆ ತೆರೆಯುವ ವ್ಯವಸ್ಥೆ ಇರಲಿದೆ. ವರ್ಷಕ್ಕೆ ಕನಿಷ್ಠ ರೂ.250 ಠೇವಣಿ ಮಾಡಬಹುದಾಗಿದ್ದು, ಗರಿಷ್ಠ ರೂ.1.50 ಲಕ್ಷವರೆಗೆ ಹಣ ಜಮಾ ಮಾಡಲು ಅವಕಾಶವಿದೆ. ಈ ಯೋಜನೆಗೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿ ದೊರೆಯುತ್ತದೆ. ಇದಲ್ಲದೆ, 18 ವರ್ಷ ಅಥವಾ 10ನೇ ತರಗತಿ ನಂತರ ಖಾತೆಯ 50% ವರೆಗೆ ಹಣ…

Read More

ದೈಗೋಳಿಯ ಶ್ರೀ ಸಾಯಿ ನಿಕೇತನ ಸೇವಾಶ್ರಮದಲ್ಲಿ ವೀರಕೇಸರಿ ಫ್ರೆಂಡ್ಸ್ (ರಿ) ಮಜಿ ಬೋಳಿಯರ್ ತಂಡವು ಸಮಾಜಮುಖಿ ಕಾರ್ಯದ ಮೂಲಕ ಗಮನ ಸೆಳೆದಿದೆ. ಆಶ್ರಮದ ನಿವಾಸಿಗಳ ಉಪಯೋಗಕ್ಕಾಗಿ ವೀಲ್ ಚೇರ್, ವಾಟರ್ ಬೆಡ್, ಅಕ್ಕಿ ಹಾಗೂ ಬಾಳೆಗೊನೆಗಳನ್ನು ತಂಡದ ವತಿಯಿಂದ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಆಶ್ರಮದ ನಿವಾಸಿಗಳು ಮತ್ತು ನಿರ್ವಹಣಾ ಸಮಿತಿ ಸದಸ್ಯರು ತಂಡದ ಸೇವಾಭಾವವನ್ನು ಪ್ರಶಂಸಿಸಿದರು. ಅಗತ್ಯ ವಸ್ತುಗಳ ನೆರವಿನಿಂದ ಆಶ್ರಮದಲ್ಲಿರುವವರ ದಿನನಿತ್ಯದ ಜೀವನಕ್ಕೆ ಸಹಾಯವಾಗಲಿದೆ ಎಂದು ತಿಳಿಸಿದರು. ಕಾರ್ಯಕ್ರಮದ ಅಂಗವಾಗಿ ಆಶ್ರಮವಾಸಿಗಳು ಹಾಗೂ ಉಪಸ್ಥಿತರಿದ್ದವರು ವೀರಕೇಸರಿ ಫ್ರೆಂಡ್ಸ್ ತಂಡದ ಸದಸ್ಯರು ಮತ್ತು ಅವರ ಕುಟುಂಬಸ್ಥರಿಗೆ ಆಯುರಾರೋಗ್ಯ ಭಾಗ್ಯ ಲಭಿಸಲಿ ಹಾಗೂ ಇಂತಹ ಇನ್ನಷ್ಟು ಸೇವಾ ಕಾರ್ಯಗಳನ್ನು ನಡೆಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಹಾರೈಸಿದರು.

Read More

ಹಾಸನ: ಕೆಲವೇ ದಿನಗಳಲ್ಲಿ ವಿವಾಹವಾಗಬೇಕಿದ್ದ ಯುವಕನೊಬ್ಬ ಪ್ರೀ ವೆಡ್ಡಿಂಗ್ ಶೂಟ್‌ಗೆ ತೆರಳುವಾಗ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ದುರ್ಘಟನೆ ಇಂದು ಬೆಳಗ್ಗೆ ನಡೆದಿದೆ. ಸಕಲೇಶಪುರ ತಾಲೂಕಿನ ಮೂಗಲಿ ಗ್ರಾಮದ ಮನು ಎಲ್.ಎನ್ (29) ಮೃತರು. ಮೇ 10ರಂದು ಆಲೂರು ತಾಲೂಕಿನ ತೊಗರನಹಳ್ಳಿ ಗ್ರಾಮದ ಕಾಂಚನ ಅವರೊಂದಿಗೆ ಮದುವೆ ನಿಶ್ಚಯವಾಗಿದ್ದು, ಎರಡು ಕುಟುಂಬಗಳಲ್ಲೂ ಮದುವೆ ಸಿದ್ಧತೆಗಳು ಜೋರಾಗಿ ನಡೆಯುತ್ತಿತ್ತು.ಇಂದು ಬೆಳಗ್ಗೆ ಪ್ರೀ ವೆಡ್ಡಿಂಗ್ ಶೂಟ್‌ಗಾಗಿ ವಧುವನ್ನು ಕರೆತರಲು ಮನು ಅವರು ತಮ್ಮ ವಿರಾಟ್ ಬ್ರೆಝಾ ಕಾರಿನಲ್ಲಿ ಒಬ್ಬರೇ ತೆರಳುತ್ತಿದ್ದ ವೇಳೆ ಮಧ್ಯೆ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಜೋರಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ಪರಿಣಾಮ ಕಾರು ಸಂಪೂರ್ಣವಾಗಿ ನಾಶವಾಗಿದ್ದು, ಮನು ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

Read More

ಕಾಸರಗೋಡು : ಸೀತಾಂಗೋಳಿಯಲ್ಲಿ ಯುವಕನೊಬ್ಬನ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂಬಳೆ ಪೊಲೀಸರು 39 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಕುಂಬಳೆಯ ಕೋಟೆಕ್ಕಾರ್ ನಿವಾಸಿ ಶ್ರೀನಿವಾಸ್ ಎಂದು ಗುರುತಿಸಲಾಗಿದೆ.ಬಪಲಿಪೋಣ ನಿವಾಸಿ ಮತ್ತು ಕೋಳಿ ಸಾಗಣೆ ವಾಹನದ ಚಾಲಕ ಸಫಾಯತ್ (30) ಮಂಗಳವಾರ ಮಧ್ಯಾಹ್ನ ಸೀತಾಂಗೋಲಿ ಪಟ್ಟಣದ ಬಳಿಯ ನಿರ್ಜನ ಪ್ರದೇಶದಲ್ಲಿ ರಕ್ತದ ಮಡುವಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ಈ ಕೃತ್ಯಕ್ಕೆ ಹಳೆಯ ದ್ವೇಷವೇ ಕಾರಣ ಎಂದು ತಿಳಿದುಬಂದಿದೆ.ಪೊಲೀಸರ ಪ್ರಕಾರ, ಸೋಮವಾರ ಸಫಾಯತ್ ಮತ್ತು ಆತನ ಸ್ನೇಹಿತರು ಒಟ್ಟಿಗೆ ಮದ್ಯ ಸೇವಿಸಿದ್ದರು, ಇದು ಸಣ್ಣ ಜಗಳಕ್ಕೆ ಕಾರಣವಾಯಿತು. ಮಂಗಳವಾರ ಮಧ್ಯಾಹ್ನ, ಸಫಾಯತ್ ಮತ್ತು ಶ್ರೀನಿವಾಸ್ ಸೀತಾಂಗೋಲಿಯ ಪಾನೀಯಗಳ ಅಂಗಡಿಯಿಂದ ಮದ್ಯ ಖರೀದಿಸಿ ಹತ್ತಿರದ ಕಟ್ಟಡದ ಹಿಂದಿನ ಏಕಾಂತ ಸ್ಥಳಕ್ಕೆ ಹೋಗಿ ಮದ್ಯ ಸೇವಿಸಿದ್ದಾರೆ ಎಂದು ವರದಿಯಾಗಿದೆ. ಅವರು ಮದ್ಯಪಾನ ಮಾಡುತ್ತಿದ್ದಾಗ, ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ. ಮೊದಲೇ ಅಲ್ಲಿದ್ದ ಇತರ ಇಬ್ಬರು ಸಹಚರರು ಸ್ಥಳದಿಂದ ಹೊರಟು ಹೋಗಿದ್ದಾಗ, ಸಫಾಯತ್…

Read More

ಉಳ್ಳಾಲ ನಗರಸಭೆಯ ನಿಕಟಪೂರ್ವ ಉಪಾಧ್ಯಕ್ಷೆ ಸ್ವಪ್ನ ಹರೀಶ್ ಅವರ ತಾಯಿ ದೇವಕಿ ಕೇಪು ಅವರು ಇತ್ತೀಚೆಗೆ ನಿಧನರಾದ ಹಿನ್ನೆಲೆಯಲ್ಲಿ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಅವರು ಸ್ವಪ್ನ ಅವರ ವಿಟ್ಲ ಸಮೀಪದ ಕೇಪು ನಿವಾಸಕ್ಕೆ ಭೇಟಿ ಸಂತಾಪ ಸೂಚಿಸಿ, ಕುಟುಂಬದವರಿಗೆ ಸಾಂತ್ವಾನ ಹೇಳಿದ್ದಾರೆ. ಈ ಸಂದರ್ಭದಲ್ಲಿ ಸ್ವಪ್ನ ಅವರ ಸಹೋದರರು ಹಾಗೂ ಸಹೋದರಿಯರು, ಕೇಪು ಗ್ರಾಮ ಪಂಚಾಯತ್ ಸದಸ್ಯ ಕೆರೀಂ ಕುದ್ದುಪದವು, ವಿಟ್ಲ ಪಟ್ಟಣ ಪಂಚಾಯತ್‌ನ ನಾಮ ನಿರ್ದೇಶಿತ ಸದಸ್ಯ ಮುಹಮ್ಮದ್ ಇಕ್ಬಾಲ್ ಹಾನೆಸ್ಟ್, ಉದ್ಯಮಿ ಮನ್ಸೂರ್ ಖಾದರ್ ಹಾನೆಸ್ಟ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಅಬೂಬಕ್ಕರ್ ಅನಿಲಕಟ್ಟೆ ಉಪಸ್ಥಿತರಿದ್ದರು.

Read More