Author: UllalaVani

Kannada News From Coastal Karnataka

ಮಂಗಳೂರು: ವಾಣಿಜ್ಯ ಬಳಕೆಯ ಎಲ್‌ಪಿಜಿ (LPG) ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ ₹993 ಏರಿಕೆ ಮಾಡಿರುವುದನ್ನು ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ. ಕೇಂದ್ರ ಸರ್ಕಾರದ ಈ ನಿರ್ಧಾರವು ಸಣ್ಣ ಉದ್ಯಮಿಗಳು ಮತ್ತು ಹೋಟೆಲ್ ಮಾಲೀಕರ ಬದುಕನ್ನು ಬೀದಿಗೆ ತಳ್ಳುವಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಝ್, ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. “ಸಾಮಾನ್ಯ ಜನರ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವ ಈ ಸಮಯದಲ್ಲಿ, ಒಂದೇ ಬಾರಿ ಸಾವಿರ ರೂಪಾಯಿಯಷ್ಟು ಬೆಲೆ ಏರಿಸುವುದು ಜನಸಾಮಾನ್ಯರ ಮೇಲೆ ನಡೆಸುತ್ತಿರುವ ದೌರ್ಜನ್ಯ. ಇದು ಪ್ರಧಾನಿ ಮೋದಿ ಅವರು ಭರವಸೆ ನೀಡಿದ್ದ ‘ಅಚ್ಛೇ ದಿನ’ (ಒಳ್ಳೆಯ ದಿನಗಳು) ಹೀಗಿರುತ್ತದೆಯೇ?” ಎಂದು ಅವರು ಪ್ರಶ್ನಿಸಿದ್ದಾರೆ. ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಯಿಂದಾಗಿ ಹೋಟೆಲ್‌ಗಳಲ್ಲಿ ತಿಂಡಿ, ಕಾಫಿ ಮತ್ತು ಊಟದ ದರಗಳು ಏರಿಕೆಯಾಗುವುದು ಅನಿವಾರ್ಯವಾಗಿದೆ. ಇದರಿಂದಾಗಿ ಗ್ರಾಹಕರ ಸಂಖ್ಯೆ ಕಡಿಮೆಯಾಗಿ, ಹೋಟೆಲ್…

Read More

ಕರ್ನಾಟಕದಲ್ಲಿ 2 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ದಾವಣಗೆರೆ ದಕ್ಷಿಣದಲ್ಲಿ ಬಿಜೆಪಿ ಹಾಗೂ ಬಾಗಲಕೋಟೆಯಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್‌ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಉಪಚುನಾವಣೆ ನಡೆದಿತ್ತು. ದಾವಣಗೆರೆ ದಕ್ಷಿಣದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಮೂರನೇ ಸುತ್ತಿನಲ್ಲಿ 4800 ಮತಗಳ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಮಲ್ಲಿಕಾರ್ಜುನ್ ಹಿನ್ನಡೆ ಅನುಭವಿಸಿದ್ದಾರೆ.ಬಾಲಕೋಟೆಯಲ್ಲಿ 6ನೇ ಸುತ್ತಿನ ಮತ ಎಣಿಕೆ ಪೂರ್ಣಗೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿಗೆ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್ – 32,363 ಹಾಗೂ ಬಿಜೆಪಿ – 16,906 ಮತ ಪಡೆದಿದ್ದು, 15,457 ಮತಗಳಿಂದ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿದೆ.

Read More

ನವದೆಹಲಿ, ಮೇ. 04 : ಕೇರಳ, ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಪುದುಚೇರಿ ವಿಧಾನಸಭಾ ಚುನಾವಣೆಗಳ ಹಾಗೂ ಕರ್ನಾಟಕದ ಬಾಗಲಕೋಟೆ, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗುತ್ತಿದೆ. ಬೆಳಗ್ಗೆ 8 ಗಂಟೆಯಿಂದಲೇ ಮತ ಎಣಿಕೆ ಪ್ರಾರಂಭವಾಗಿದೆ. ತಮಿಳುನಾಡಿನಲ್ಲಿ ಒಟ್ಟು 234 ವಿಧಾನಸಭಾ ಸ್ಥಾನಗಳಿದ್ದು, ಅವುಗಳಲ್ಲಿ 62 ಕೇಂದ್ರಗಳಲ್ಲಿ ಮತ ಎಣಿಕೆ ನಡೆಯುತ್ತಿದೆ. ಪಶ್ಚಿಮ ಬಂಗಾಳದಲ್ಲಿ 294 ವಿಧಾನಸಭಾ ಸ್ಥಾನಗಳಿದ್ದು, 77 ಕೇಂದ್ರಗಳಲ್ಲಿ ಮತ ಎಣಿಕೆ ನಡೆಯುತ್ತಿದೆ. ಕೇರಳದಲ್ಲಿ ಒಟ್ಟು 140 ವಿಧಾನಸಭಾ ಸ್ಥಾನಗಳಿದ್ದು, 140 ಕೇಂದ್ರಗಳಲ್ಲಿ ಮತ ಎಣಿಕೆ ನಡೆಯುತ್ತಿದೆ. ಅಸ್ಸಾಂನಲ್ಲಿ 126 ವಿಧಾನಸಭಾ ಸ್ಥಾನಗಳಿದ್ದು, 40 ಕೇಂದ್ರಗಳಲ್ಲಿ ಮತ ಎಣಿಕೆ ನಡೆಯುತ್ತಿದೆ. ಪುದುಚೇರಿಯಲ್ಲಿ 30 ವಿಧಾನಸಭಾ ಸ್ಥಾನಗಳಿದ್ದು, ಅವುಗಳಲ್ಲಿ 6 ಕೇಂದ್ರಗಳಲ್ಲಿ ಮತ ಎಣಿಕೆ ನಡೆಯುತ್ತಿದೆ.ಕರ್ನಾಟಕದ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಯಲ್ಲಿಯೂ ಮತ ಎಣಿಕೆ ನಡೆಯುತ್ತಿದ್ದು, ಇದೀಗ ಕಾಂಗ್ರೆಸ್ ಆರಂಭಿಕ ಮುನ್ನಡೆ ಸಾಧಿಸಿದೆ. ತಮಿಳುನಾಡಿನಲ್ಲಿ ಡಿಎಂಕೆ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ, ಕೇರಳದಲ್ಲಿ…

Read More

ಮಂಗಳೂರು ಸಮೀಪದ ಬಗಂಬಿಲ ಅಮೃತನಗರದಲ್ಲಿ ನೂತನವಾಗಿ ನಿರ್ಮಿಸಲಾದ “ವೀರಮ್ಮ ನಿಲಯ” ಮನೆಯ ಗೃಹಪ್ರವೇಶ ಕಾರ್ಯಕ್ರಮವು ಮೇ 3, 2026ರ ಆದಿತ್ಯವಾರ ಬೆಳಿಗ್ಗೆ 11.05ಕ್ಕೆ ನೆರವೇರಲಿದೆ. ರಾಷ್ಟ್ರೀಯ ಸೇವಾ ಭಾರತಿ ಕೇಸರಿ ಶಾಖಾ, ಕೇಸರಿ ಮಿತ್ರವೃಂದ ಸೇವಾ ಟ್ರಸ್ಟ್ (ರಿ.), ಕೇಸರಿ ಮಿತ್ರವೃಂದ (ರಿ.) ಹಾಗೂ ಕೇಸರಿ ಮಾತೃಮಂಡಳಿ ವ್ಯಾಸನಗರ, ಕುಂಪಲ ಇವರ ಆಶ್ರಯದಲ್ಲಿ ಈ ಸಮಾರಂಭ ಆಯೋಜಿಸಲಾಗಿದೆ. ಶ್ರೀ ಕಲಿಯುಗಾಬ್ದ 5128ರ ಪರಾಭವ ನಾಮ ಸಂವತ್ಸರದ ಉತ್ತರಾಯಣ ಮೇಷ ಮಾಸದ ಶುಭ ಸಂದರ್ಭದಲ್ಲಿ ಕರ್ಕಾಟಕ ಲಗ್ನ ಸುಮೂಹೂರ್ತದಲ್ಲಿ ಗೃಹಪ್ರವೇಶ ನಡೆಯಲಿದ್ದು, ಇದರ ಅಂಗವಾಗಿ ಗಣಹೋಮ ಹಾಗೂ ಸತ್ಯನಾರಾಯಣ ಪೂಜೆ ವಿಧಿವಿಧಾನಗಳೊಂದಿಗೆ ನೆರವೇರಿಸಲಾಗುತ್ತದೆ. ಕಾರ್ಯಕ್ರಮದಲ್ಲಿ ಶ್ರೀಮತಿ ವೀರಮ್ಮ, ಶ್ರೀಮತಿ ಮಲ್ಲಿಕಾ (ಸೊಸೆ) ಹಾಗೂ ಮೊಮ್ಮಕ್ಕಳು ಉಪಸ್ಥಿತರಿರಲಿದ್ದು, ಅತಿಥಿಗಳ ಸ್ವಾಗತಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.

Read More

ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಮೇ 1 ವಿಶ್ವ ಕಾರ್ಮಿಕರ ದಿನದ ಪ್ರಯುಕ್ತ ಮಂಗಳೂರಿನ ಪೌರ ಕಾರ್ಮಿಕರಿಗೆ ಕಾಯಕ ಗೌರವ ಕಾರ್ಯಕ್ರಮ ಪಂಪ್ವೆಲ್ ನಡೆಯಿತು. ಕಾರ್ಮಿಕರ ಪರಿಶ್ರಮದ ಕುರಿತು ಜಿಲ್ಲಾಧ್ಯಕ್ಷ ಇಬ್ರಾಹೀಂ ನವಾಝ್ ನವರು ಮಾತನಾಡಿ ಕಾರ್ಮಿಕ ದಿನಾಚರಣೆ ಪ್ರಾರಂಭ ದಿನದಿಂದ ನಡೆದು ಬಂದ ಇತಿಹಾಸ, ಸ್ವಾತಂತ್ರ್ಯ ಹೋರಾಟದಲ್ಲಿ ಪೌರ ಕಾರ್ಮಿಕರು ಭಾಗವಹಿಸಿದ ನೆನಪುಗಳನ್ನ ಮೆಲುಕು ಹಾಕಿ ಅವರ ಕೆಲಸಕ್ಕೆ ಯಾವ ಗೌರವವೂ ಕಡಿಮೆಯಲ್ಲ ಎಂದು ಮಾರ್ಮಿಕವಾಗಿ ನುಡಿದರು. ಕಾರ್ಮಿಕರ ದಿನ ಹಬ್ಬವಾಗಿ ಜನ್ಮ ಪಡೆದದ್ದಲ್ಲ ಅದು ಒಂದು ಹೋರಾಟದ ಸಂಕೇತ. ದೇಶದ ಹೋರಾಟದ ಬಹುಪಾಲು ಕಾರ್ಮಿಕರೇ ಇದ್ದರು. ಕಾಂಗ್ರೆಸ್ ಅಂದೂ ಕಾರ್ಮಿಕರ ಪರ, ಎಂದೆಂದಿಗೂ ಕಾರ್ಮಿಕರ ಪರ ಎಂದು ಒತ್ತಿ ಹೇಳಿದರು. ವೇದಿಕೆಯಲ್ಲಿ ಯುವ ಕಾಂಗ್ರೆಸ್ ಮುಖಂಡರಾದ ರಮಾನಂದ ಪೂಜಾರಿ, ಸಮರ್ಥ್ ಭಟ್, ಆಸಿಫ್ ಬಜಾಲ್, ಸಾಗರ್ ಕಟೀಲ್, ಮಿತೇಶ್ ಡಿಸೋಜಾ, ಉಮ್ಮರ್ ಸಾಲೆತ್ತೂರು, ಅನ್ಸಾರ್ ಸಾಲ್ಮರ, ಲುಕ್ಮನ್ ಅಡ್ಯಾರ್, ಅಬ್ದುಲ್ ಅಕ್ಮಲ್, ನಜೀಬ್ ಕಾರ್ಮಿಕ…

Read More

ಕೇರಳದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಡಬಲ್ ಡಿಜಿಟ್ ಸಂಖ್ಯೆಯಲ್ಲಿ ಸ್ಥಾನಗಳನ್ನು ಗೆಲ್ಲಲಿದೆ ಎಂದು ಮಂಜೇಶ್ವರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪುತ್ತೂರಿನಲ್ಲಿ ಮಾತನಾಡಿದ ಅವರು, ಕಳೆದ ಲೋಕಸಭಾ ಚುನಾವಣೆಯಲ್ಲಿ ಕೇರಳದಲ್ಲಿ ಬಿಜೆಪಿ ಸುಮಾರು 20% ಮತಗಳನ್ನು ಪಡೆದಿದ್ದು, ತ್ರಿಶೂರಿನಲ್ಲಿ ಬಿಜೆಪಿ ಅಭ್ಯರ್ಥಿ ಜಯಗಳಿಸಿರುವುದು ಮಹತ್ವದ ಬೆಳವಣಿಗೆಯಾಗಿದೆ ಎಂದರು. ಕೇರಳದಿಂದ ಲೋಕಸಭೆಗೆ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ ಕಳುಹಿಸಿದ್ದೇವೆ, ಇದೇ ರೀತಿಯಾಗಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲೂ ಉತ್ತಮ ಸಾಧನೆ ಮಾಡುವ ನಿರೀಕ್ಷೆಯಿದೆ ಎಂದು ಹೇಳಿದರು. ಬಿಜೆಪಿ ಹಿಂದುತ್ವ ಆಧಾರಿತ ಪಕ್ಷವಾಗಿದ್ದು, ಕರ್ನಾಟಕ, ಕರಾವಳಿ ಅಥವಾ ಕೇರಳ ಎಂಬ ಭೇದವಿಲ್ಲದೆ ಒಂದೇ ತತ್ವದ ಮೇಲೆ ಕಾರ್ಯನಿರ್ವಹಿಸುತ್ತದೆ ಎಂದು ಅವರು ಸ್ಪಷ್ಟಪಡಿಸಿದರು. ಬಿಜೆಪಿ ಸಂಸದ ಸುರೇಶ್ ಗೋಪಿ ಅವರು “ಬೀಫ್ ಸೇವಿಸುವುದರಲ್ಲಿ ತಪ್ಪಿಲ್ಲ” ಎಂದು ನೀಡಿದ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸುರೇಂದ್ರನ್, ಅದು ಅವರ ವೈಯಕ್ತಿಕ ಅಭಿಪ್ರಾಯವಾಗಿದ್ದು, ಪಕ್ಷದ ಸಾಮೂಹಿಕ ನಿಲುವು ಅಲ್ಲ ಎಂದು ಹೇಳಿದರು.

Read More

ಉಳ್ಳಾಲ, ಸನದು ಸ್ವೀಕರಿಸಿ ಹೋಗುವ ವಿದ್ಯಾರ್ಥಿಗಳು ಪಡೆದ ವಿದ್ಯೆಯನ್ನು ಸದುಪಯೋಗ ಮಾಡಿಕೊಳ್ಳುವುದನ್ನು ಮರೆಯಬಾರದು. ಉಳ್ಳಾಲ ದರ್ಗಾ ದಲ್ಲಿ ನೀಡಲಾದ ಸನದು ಧಾರ್ಮಿಕ, ಲೌಕಿಕ ಶಿಕ್ಷಣ ಬೆಳೆಸುವ ಉದ್ದೇಶದಿಂದ ಆಗಿದೆ ಎಂದು ಇಂಡಿಯನ್ ಸುಲ್ತಾನುಲ್ ಉಲಮಾ ಉಳ್ಳಾಲ ಖಾಝಿ ಎ.ಪಿ.ಅಬೂಬಕರ್ ಮುಸ್ಲಿಯಾರ್ ಹೇಳಿದರು . ಅವರು ಸಯ್ಯಿದ್ ಮದನಿ ಶರೀಅತ್ ಕಾಲೇಜು ಉದ್ಘಾಟನೆ ಹಾಗೂ ಸನದುದಾನ ಮಹಾ ಸಮ್ಮೇಳನದಲ್ಲಿ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಜನರಿಗೆ ರೋಗ ಬಂದರೆ ಗುಣಪಡಿಸುವುದು ಅಲ್ಲಾಹನು ಆಗಿದ್ದಾನೆ. ನಾನು ಅಸೌಖ್ಯದಿಂದ ಇದ್ದ ಸಂದರ್ಭದಲ್ಲಿ ಬಹಳಷ್ಟು ಚಿಕಿತ್ಸೆ, ಪ್ರಾರ್ಥನೆ ನಡೆದಿದೆ. ಈಗ ನನ್ನ ರೋಗವನ್ನು ಅಲ್ಲಾಹು ಗುಣಪಡಿಸಿದ್ಜು, ಈಗ ಕಾಲೇಜಿನಲ್ಲಿ ಪ್ರತಿದಿನ ದರ್ಸ್ ಕ್ಲಾಸ್ ಮಾಡುತ್ತಿದ್ದೇನೆ ಎಂದರುಉಳ್ಳಾಲ ದಲ್ಲಿ ಶಿಕ್ಷಣ ಬೆಳೆಸಲು ತಾಜುಲ್ ಉಲಮಾ ತಂಙಳ್ ಬಹಳಷ್ಟು ಕೆಲಸ ಮಾಡಿದ್ದರು.ಉಳ್ಳಾಲ ದರ್ಗಾ ದಲ್ಲಿ ಸ್ಥಾಪಿಸಲಾದ ನೂತನ ಕಟ್ಟಡ ಧಾರ್ಮಿಕ, ಲೌಕಿಕ ಶಿಕ್ಷಣ ಬೆಳೆಸುವ ಉದ್ದೇಶದಿಂದ ಆಗಿದೆ . ಆ ಕೆಲಸ ವನ್ನು ಮಾಡಬೇಕು. ನಮ್ಮ ಏನು ಕಾರ್ಯ ಮಾಡಿದರೂ ಅದು…

Read More

ಹರೇಕಳ: ದೊಡ್ಡ ಗಾತ್ರದ ಕಾಡುಕೋಣವೊಂದು ಹರೇಕಳ ಶಾಲೆ ಬಳಿ ತಡರಾತ್ರಿ ವೇಳೆ ಪತ್ತೆಯಾಗಿದ್ದು , ಸ್ಥಳೀಯರಲ್ಲಿ ಆತಂಕವನ್ನುಂಟು ಮಾಡಿದೆ .  ಈ ಕುರಿತು ಅರಣ್ಯ ಇಲಾಖೆಗೆ ದೂರು ನೀಡಲಾಗಿದೆ. 7.5  ಅಡಿ ಎತ್ತರದ ಕಾಡುಕೋಣ ಅದಾಗಿದ್ದು, ಹರೇಕಳ ಶಾಲಾ ಸಮೀಪ ಐದು ಮಂದಿ ಸ್ಥಳೀಯರು ನಿಂತಿದ್ದಾಗ ಏಕಾಏಕಿ  ಬೃಹತ್ ಗಾತ್ರದ ಕಾಡುಕೋಣ ಪ್ರತ್ಯಕ್ಷವಾಗಿದೆ. ತಕ್ಷಣವೇ ಕೋಣವನ್ನು ಕಂಡ ಸಾರ್ವಜನಿಕರು ಸ್ಥಳದಿಂದ ಪರಾರಿಯಾಗಿದ್ದಾರೆ . ಕಾಡುಕೋಣ ಇರುವುದನ್ನು ಕಾರಿನಲ್ಲಿ ತೆರಳುತ್ತಿದ್ದ ತಂಡವೊಂದು ಮೊಬೈಲ್ ಮುಖೇನ ದೃಶ್ಯ ಸೆರೆ ಹಿಡಿದಿದೆ. ಈ ಬಗ್ಗೆ ಅರಣ್ಯ ಇಲಾಖೆ ಯ ಆರ್ ಎಫ್ ಓ ಅವರಿಗೆ ಮಾಹಿತಿ ನೀಡಲಾಗಿದೆ. ಅದರಂತೆ ಅರಣ್ಯ ಇಲಾಖೆ ಅಧಿಕಾರಿ ಮೆಹಬೂಬ್ ನೇತೃತ್ವದ ಮೂವರ ತಂಡ ಕಾರ್ಯಾಚರಣೆಗೆ ತಡರಾತ್ರಿ ವೇಳೆ ಇಳಿದಿದ್ದಾರೆ. ಸ್ಥಳೀಯವಾಗಿ ಕಾಡುಪ್ರಾಣಿಗಳಾದ ಜಿಂಕೆಯು ಇದೆ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದು , ನವಿಲುಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡಿದೆ . ಭೂಮಿಯನ್ನು ಅವೈಜ್ಞಾನಿಕವಾಗಿ ಅಗೆಯುವ ಕಾಯಕದಿಂದ ಕಾಡುಪ್ರಾಣಿಗಳು ಕಾಡುಗಳಿಲ್ಲದೆ ನಾಡು ಸೇರುವಂತಾಗಿದೆ . ತತಕ್ಷಣದಿಂದ…

Read More

ಉಡುಪಿ, ಮೇ. 01 : ಕೆಲಸದ ವಿಷಯದಲ್ಲಿ ಉಂಟಾದ ಸಣ್ಣ ಜಗಳದಿಂದಾಗಿ ತನ್ನ ಮಾಲೀಕನ ಮೇಲೆ ಆ್ಯಸಿಡ್ ಸುರಿದು ಕೊಲೆಗೆ ಯತ್ನಿಸಿದ ಕೇರಳ ಮೂಲದ ವ್ಯಕ್ತಿಗೆ ಉಡುಪಿಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 30,000 ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ. ಕೇರಳ ಮೂಲದ ರತೀಶ್ ಕೆ.ಟಿ. (42) ಶಿಕ್ಷೆಗೊಳಗಾದ ಆರೋಪಿ.ಘಟನೆಯ ವಿವರ:2022ರ ಫೆಬ್ರವರಿ 28ರಂದು, ಕೇರಳದ ತ್ರಿಶೂರ್ ಜಿಲ್ಲೆಯ ಸುಧೀರ್ ಪಿ.ಎ. ಅವರು ಹೆಬ್ರಿ ತಾಲೂಕಿನ ಚಾರ ಗ್ರಾಮದ ಮಂಡಾಡಿಜಡ್ಡುವಿನಲ್ಲಿರುವ ಅಜಿತ್ ಅಗಸ್ಟೀನ್ ಅವರ ತೋಟಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ಸುಧೀರ್ ಅವರು ರತೀಶ್‌ಗೆ, “ನೀನು ರಬ್ಬರ್ ಟ್ಯಾಪಿಂಗ್ ಕೆಲಸವನ್ನು ಸರಿಯಾಗಿ ಮಾಡುತ್ತಿಲ್ಲ. ಇಲ್ಲಿನ ಕೆಲಸಗಾರರನ್ನು ಗಮನಿಸಿ ಕಲಿ” ಎಂದು ಸಲಹೆ ನೀಡಿದ್ದರು. ಇದು ಇಬ್ಬರ ನಡುವೆ ಮಾತಿನ ಚಕಮಕಿಗೆ ಕಾರಣವಾಗಿತ್ತು.ಈ ಘಟನೆಯಿಂದ ರತೀಶ್ ಮನಸ್ಸಿನಲ್ಲಿ ದ್ವೇಷ ಬೆಳೆಸಿಕೊಂಡಿದ್ದ. ಮಾರ್ಚ್ 2ರಂದು ರಾತ್ರಿ ಸುಮಾರು 1 ಗಂಟೆಗೆ ಸುಧೀರ್ ಮಲಗಿದ್ದಾಗ,…

Read More

ಕೋಟೆಕಾರ್: ಎಸ್‌ವೈಎಸ್ ಹಿದಾಯತ್ ನಗರ ಶಾಖೆಯ ವಾರ್ಷಿಕ ಮಹಾಸಭೆ ಹಿದಾಯತ್ ನಗರ ಮದರಸ ಹಾಲ್‌ನಲ್ಲಿ ನಡೆಯಿತು. ಕಾರ್ಯಕ್ರಮದ ವೀಕ್ಷಕರಾಗಿ ಬಶೀರ್ ಆಹ್ಸನಿ ಉಸ್ತಾದ್ ಆಗಮಿಸಿ ಸಭೆಯನ್ನು ಉದ್ಘಾಟಿಸಿದರು. ಸಭೆಯಲ್ಲಿ 2025-26ನೇ ಸಾಲಿನ ಸಮಿತಿಯನ್ನು ಬರ್ಕಸ್‌ಗೊಳಿಸಿ, ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು. ನೂತನ ಸಮಿತಿಯ ಅಧ್ಯಕ್ಷರಾಗಿ ಬಶೀರ್ ಅಹ್ಸನಿ ತೋಡಾರ್, ಉಪಾಧ್ಯಕ್ಷರಾಗಿ ಸಿದ್ದೀಕ್ ಟಿ.ಎಚ್. ಹಾಗೂ ಅಝೀಝ್ ಪಂಜಲ, ಪ್ರಧಾನ ಕಾರ್ಯದರ್ಶಿಯಾಗಿ ಜಿ.ಎ. ಅಜ್ಜಿನಡ್ಕ, ಕೋಶಾಧಿಕಾರಿಯಾಗಿ ಶಬೀರ್ ಆಶ್ಅರಿ, ದಅ್ವಾ ಕಾರ್ಯದರ್ಶಿಯಾಗಿ ಝುಬೈರ್ ಝುಹ್ರಿ ಆಯ್ಕೆಯಾಗಿದ್ದಾರೆ. ಇದಲ್ಲದೆ, ಸಾಂತ್ವನ ವಿಭಾಗಕ್ಕೆ ಇಸಾಬ್ ಮುನೀರ್ ಉಳ್ಳಾಲ, ಅಬ್ದುಲ್ ಫಲೂಲ್ ಮತ್ತು ಸಮದ್ ಅವರನ್ನು ಆಯ್ಕೆ ಮಾಡಲಾಗಿದ್ದು, ಸದಸ್ಯರಾಗಿ ಅಬ್ದುಲ್ ಬಶೀರ್, ಫಾರೂಕ್ ಉಳ್ಳಾಲ್, ಮೊಹಮ್ಮದ್ ಬಶೀರ್ ಮತ್ತು ಸಿರಾಜ್ ಆಯ್ಕೆಯಾಗಿದ್ದಾರೆ. ಸಭೆಯನ್ನು ಪ್ರಧಾನ ಕಾರ್ಯದರ್ಶಿ ಮುನೀರ್ ಸ್ವಾಗತಿಸಿ, ಜಿ.ಎ. ವಂದಿಸಿದರು. ಸ್ವಲಾತ್‌ನೊಂದಿಗೆ ಕಾರ್ಯಕ್ರಮವನ್ನು ಸಮಾಪಿಸಲಾಯಿತು.

Read More