ವಿಟ್ಲ, ಮೇ. 12:34 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ವಿಟ್ಲ ಠಾಣಾ ಪೊಲೀಸರು ಬಂಧಿಸಿದ್ದಾರೆ. ಅಕ್ಟೋಬರ್ 14, 1992 ರಂದು ಕಾರೊಂದರಲ್ಲಿ ಅಕ್ರಮವಾಗಿ ಪೆಟ್ರೋಲ್ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿತರಾದ ಕಾಸರಗೋಡು ಮಂಜೇಶ್ವರ ನಿವಾಸಿ ಇಬ್ರಾಹಿಂ (28) ಹಾಗೂ ಸಿದ್ದೀಕ್ ಎಂಬವರುಗಳ ವಿರುದ್ದ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಕ್ರ: 124/1992 ಕಲಂ:3 ಮತ್ತು ಕಲಂ: 23 ಪೆಟ್ರೋಲಿಯಂ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ಆದರೆ ಆರೋಪಿಗಳ ಪೈಕಿ ಸಿದ್ದೀಕ್ ಎಂಬಾತನು ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ.ಆರೋಪಿ ಸಿದ್ದೀಕ್‌ನನ್ನು ಮೇ.11 2026 ರಂದು ರಾತ್ರಿ, ವಿಟ್ಲ ಠಾಣಾ ಪ್ರೊಬೇಶನರ್ ಪಿಎಸ್ಐ ಸಿದ್ದಪ್ಪ , ಎಎಸ್ಐ ಜಯರಾಮ್ , ಪಿಸಿ ಗೋಪಾಲ್ , ಪಿಸಿ ಯಂಕಪ್ಪ , ಪಿಸಿ ಶ್ರೀಶೈಲ್ ಜೋರಾಪುರ ರವರುಗಳ ತಂಡ ಕನ್ಯಾನ ಗ್ರಾಮದ ಕಬ್ಬಿನ ಮೂಲೆ ಎಂಬಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಮುಂದಿನ ಕಾನೂನು ಕ್ರಮಕ್ಕಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.
Author: UllalaVani
ಮಂಗಳೂರು: ಬಂಟರ ಯಾನೆ ನಾಡವರ ಮಾತೃ ಸಂಘದ 2026 -29 ಸಾಲಿನ ಅಧ್ಯಕ್ಷರಾಗಿ ಮಾಲಾಡಿ ಅಜಿತ್ ಕುಮಾರ್ ರೈ ಕೊಡಿಯಾಲ್ ಗುತ್ತು, ಉಪಾಧ್ಯಕ್ಷರಾಗಿ ಕಾವು ಹೇಮನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಎಮ್ ಕರುಣಾಕರ ಶೆಟ್ಟಿ, ಕೋಶಾಧಿಕಾರಿಯಾಗಿ ಸಿಎ ರಾಮ್ ಮೋಹನ್ ರೈ ಹಾಗೂ ಜೊತೆ ಕಾರ್ಯದರ್ಶಿಯಾಗಿ ಪುಂಚಮೆ ಪದ್ಮನಾಭ ಶೆಟ್ಟಿಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷರು ಸೇರಿ 83 ಸದಸ್ಯರ ಕಾರ್ಯಕಾರಿ ಸಮಿತಿಯನ್ನು ಚುನಾವಣಾ ಆಯೋಗ ಅಧಿಕೃತವಾಗಿ ಘೋಷಿಸಿದೆ. ಮುಖ್ಯ ಚುನಾವಣಾಧಿಕಾರಿಯಾಗಿದ್ದ ವಕೀಲರಾದ ಉಮೇಶ್ ಶೆಟ್ಟಿ ಶೆಡ್ಡೆ ಹೊಸಲಕ್ಕೆ ಅವರು ಅಧ್ಯಕ್ಷ ಹಾಗೂ ಇತರ ಪದಾಧಿಕಾರಿಗಳ ಅವಿರೋಧ ಆಯ್ಕೆಯನ್ನು ಘೋಷಿಸಿದರು. ಉಪ ಚುನಾವಣಾಧಿಕಾರಿಯಾದ ವಕೀಲ ನವೀನ್ ಕುಮಾರ್ ಶೆಟ್ಟಿ ಹಾಗೂ ಚುನಾವಣಾಧಿಕಾರಿ ಪಿ ಸದಾಶಿವ ಶೆಟ್ಟಿಯವರು ಉಪಸ್ಥಿತರಿದ್ದರು.
ಬೆಂಗಳೂರು, ಮೇ. 12 ; ಬಹುಕಾಲದಿಂದ ಚರ್ಚೆಯಲ್ಲಿದ್ದ ಕರ್ನಾಟಕ ಸರ್ಕಾರದ ಹೊಸ ಅಬಕಾರಿ ನೀತಿ ಇದೀಗ ಅಧಿಕೃತವಾಗಿ ಜಾರಿಗೆ ಬಂದಿದೆ. ಮೇ 11ರಿಂದ ಅನುಷ್ಠಾನಗೊಂಡಿರುವ ಈ ನೀತಿಯ ಮೂಲಕ ರಾಜ್ಯ ಸರ್ಕಾರ ದಶಕಗಳಷ್ಟು ಹಳೆಯ ತೆರಿಗೆ ವ್ಯವಸ್ಥೆಯನ್ನು ಬದಲಿಸಿ, ಮದ್ಯದಲ್ಲಿನ ಆಲ್ಕೋಹಾಲ್ ಪ್ರಮಾಣದ ಆಧಾರದಲ್ಲಿ ತೆರಿಗೆ ವಿಧಿಸುವ ಹೊಸ ಮಾದರಿಯನ್ನು ಅಳವಡಿಸಿಕೊಂಡಿದೆ. ಈ ರೀತಿಯ ನೀತಿಯನ್ನು ಜಾರಿಗೆ ತಂದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ. ಹಿಂದಿನ ಅಬಕಾರಿ ವ್ಯವಸ್ಥೆಯಲ್ಲಿ ಇದ್ದ 16 ತೆರಿಗೆ ಸ್ಲ್ಯಾಬ್‌ಗಳನ್ನು ಸರ್ಕಾರ ಈಗ 8ಕ್ಕೆ ಇಳಿಸಿದೆ. ಹೊಸ ನೀತಿಯ ಪ್ರಕಾರ ಕಡಿಮೆ ಬೆಲೆಯ ಮತ್ತು ಸಾಮಾನ್ಯ ಜನರು ಹೆಚ್ಚು ಬಳಸುವ ಮದ್ಯಗಳ ಮೇಲೆ ತೆರಿಗೆ ಹೆಚ್ಚಳವಾಗಿದ್ದು, ಪ್ರೀಮಿಯಂ ಮತ್ತು ವಿದೇಶಿ ಬ್ರಾಂಡ್‌ಗಳ ಮದ್ಯಗಳಿಗೆ ತೆರಿಗೆ ಕಡಿತ ಮಾಡಲಾಗಿದೆ.ಹೊಸ ಅಬಕಾರಿ ನೀತಿಯ ಪರಿಣಾಮವಾಗಿ ಸಾಮಾನ್ಯ ಜನರು ಬಳಸುವ ವಿಸ್ಕಿ, ರಮ್, ಬ್ರಾಂಡಿ ಹಾಗೂ ವೋಡ್ಕಾ ಮದ್ಯಗಳ ಬೆಲೆ ಏರಿಕೆಯಾಗಲಿದೆ. ವಿಶೇಷವಾಗಿ 180 ಮಿ.ಲೀ ಕ್ವಾರ್ಟರ್ ಬಾಟಲಿ…
ಉಳ್ಳಾಲ:ಅಲ್ ಅಮೀನ್ ಚಾರಿಟೇಬಲ್ ಟ್ರಸ್ಟ್ ಕಿನ್ಯ ಇದರ ಆಶ್ರಯದಲ್ಲಿ ಎಸ್ಸೆಸ್ಸೆಲ್ಸಿ ನಂತರ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಾರ್ಯಾಗಾರ, ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆ, ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಸಾಧನೆ ಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಕಿನ್ಯ ಗ್ರಾಮದ ಉಕ್ಕುಡ ಎಂಬಲ್ಲಿ ನಡೆಯಿತು. ಕುನಿಲ್ ಇಲ್ಡ್ ಅಕಾಡೆಮಿ ಉಪಾಧ್ಯಕ್ಷ ಪಿ.ಎಸ್. ಮೊಯ್ದಿನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಶಿಕ್ಷಣದ ಮೌಲ್ಯಗಳ ಬಗ್ಗೆ ವಿವರಿಸಿದರು.ಅಳೇಕಲ ಮದನಿ ಪಿ.ಯು ಕಾಲೇಜು ಪ್ರಾಂಶುಪಾಲ ಅಬ್ದುಲ್ ಅಝೀಝ್ ಮಾತನಾಡಿ ಶೈಕ್ಷಣಿಕ ರಂಗದಲ್ಲಿ ಯಶಸ್ವಿಯಾಗಲು ಇರುವ ವಿವಿಧ ದಾರಿಗಳ ಬಗೆ ಮಾಹಿತಿ ನೀಡಿದರು.ಕಿನ್ಯ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ಶುಭಾ ಕುಮಾರಿ ಶಾಲೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಮಾತನಾಡಿದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ ಅವರು,ಶಿಕ್ಷಣ ವ್ಯವಸ್ಥೆ ನಿರ್ಮಾಣವಾಗಬೇಕು ಎಂಬ ಗುರಿ ನನಗೆ ಇತ್ತು. ಇದಕ್ಕೆ 1970 ರಲ್ಲಿ ಶಾಸಕ ರಾಗಿದ್ದ ಯುಟಿ ಫರೀದ್ , ಸ್ಪೀಕರ್ ಯುಟಿ ಖಾದರ್ ಬೆಂಬಲ ನೀಡಿದ್ದಾರೆ. ಕಷ್ಟದ ಬದುಕಿನಲ್ಲಿ ಬೆಳೆದು…
ಬೈಂದೂರು,ಮೇ. 12; ಕಿರಿಮಂಜೇಶ್ವರ ಗ್ರಾಮದ ನೈರಿಕೇರಿ ಬಳಿಯ ಕ್ಲಿನಿಕ್ ಎದುರಿನ ರಾಷ್ಟ್ರೀಯ ಹೆದ್ದಾರಿ 66 ರ ಪೂರ್ವ ಭಾಗದ ಚರಂಡಿ ಬಳಿ ಸುಮಾರು 35 ರಿಂದ 40 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಸ್ಥಳೀಯರ ಪ್ರಕಾರ, ಮೃತ ವ್ಯಕ್ತಿ ಕಳೆದ ಕೆಲವು ದಿನಗಳಿಂದ ಸುತ್ತಮುತ್ತಲ ಪ್ರದೇಶಗಳಲ್ಲಿ ಅಲೆದಾಡುತ್ತಿರುವುದು ಕಂಡು ಬಂದಿದೆ. ಆ ವ್ಯಕ್ತಿ ಮೇ 6 ರಿಂದ ಮೇ 7 ರ ನಡುವೆ ಸಾವನ್ನಪ್ಪಿರಬಹುದು, ಬಹುಶಃ ಅನಾರೋಗ್ಯ ಅಥವಾ ಇತರ ಅಪರಿಚಿತ ಕಾರಣಗಳಿಂದಾಗಿರಬಹುದು ಎಂದು ಶಂಕಿಸಲಾಗಿದೆ.ಮೃತ ವ್ಯಕ್ತಿ ಸುಮಾರು 5 ಅಡಿ 5 ಇಂಚು ಎತ್ತರವಿದ್ದು, ತೆಲುಗು ಮಾತನಾಡುತ್ತಿದ್ದರು ಎಂದು ವರದಿಯಾಗಿದೆ. ಈ ಸಂಬಂಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತನ ಗುರುತು ಮತ್ತು ಸಾವಿಗೆ ನಿಖರವಾದ ಕಾರಣವನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ.
ಉಳ್ಳಾಲ ತಾಲೂಕಿನ ಬೆಳ್ಮ ಗ್ರಾಮ ಸೇರಿದಂತೆ, ಹಲವು ಗ್ರಾಮಗಳಲ್ಲಿ ವಿವಿಧ ರೀತಿಯಲ್ಲಿ ಸರಕಾರಿ ಜಮೀನು ಕಬಳಿಕೆ ನಡೆಯುತ್ತಿದೆ ಎಂಬ ಆರೋಪಗಳು ಹಾಗೂ ವರದಿಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ವಿಶೇಷವಾಗಿ ಪಾವೂರು, ಹರೇಕಳ, ಅಂಬ್ಲಮೊಗರು ಸೇರಿದಂತೆ ಕೆಲವು ಗ್ರಾಮಗಳಲ್ಲಿ ಕುಮ್ಕಿ ಹಕ್ಕು, ಗೇರು ಜಮೀನು,ಗೋಮಾಳ ಸರ್ಕಾರಿ ಜಾಗ ಖಾಸಗಿಯವರ ಪಾಲಗುತ್ತಿದೆ. ಜೊತೆಗೆ ಮಣ್ಣು ಅಕ್ರಮ ಮಾರಾಟದ ಬಗ್ಗೆ ಜನರಲ್ಲಿ ಅನುಮಾನಗಳು ಮೂಡಿವೆ. ಈ ಬಗ್ಗೆ ಅಧಿಕಾರಿಗಳು ಶಾಮೀಲಾಗಿರುವ ವರದಿಗಳು ಬರುತ್ತಿದೆ. ಈ ಹಿಂದೆ ಅಂದಿನ ಜಿಲ್ಲಾಧಿಕಾರಿಗಳಾದ ಪೋನ್ನುರಾಜ್ ಅವರು ಮಂಜನಾಡಿ ಪ್ರಕರಣಗಳಲ್ಲಿ 5 ಮಂದಿ ಕಂದಾಯ ಅಧಿಕಾರಿಗಳನ್ನು ಸೇವೆಯಿಂದಲೇ ವಜಾ ಮಾಡಿದ ಉದಾಹರಣೆ ಇದೆ. ಗ್ರಾಮಗಳಲ್ಲಿ ಕೆಲವರು ನಕಲಿ ದಾಖಲೆಗಳು, ಪ್ರಭಾವ ಅಥವಾ ರಾಜಕೀಯ ಬೆಂಬಲದ ಮೂಲಕ ಸರಕಾರಿ ಜಾಗವನ್ನು ಖಾಸಗಿ ಆಸ್ತಿಯಂತೆ ಮಾರಾಟ ಮಾಡುವ ಪ್ರಯತ್ನ ನಡೆಸುತ್ತಿದ್ದಾರೆ ಎಂಬ ಆರೋಪಗಳೂ ಕೇಳಿಬರುತ್ತಿವೆ. ಈ ಕುರಿತು ಸಾರ್ವಜನಿಕರು ಜಾಗೃತರಾಗಬೇಕು. ನಿಮ್ಮ ಊರಿನಲ್ಲಿ ಯಾರಾದರೂ ಕುಮ್ಕಿ ಹಕ್ಕಿನ ಜಮೀನು, ಸರ್ಕಾರಿ ಜಾಗ ಅಥವಾ ಮಣ್ಣು…
ಉಳ್ಳಾಲ: ಮೇ-11;ದೀಪ ಬೆಳಗಿಸಲು ಗಾಣದ ಎಣ್ಣೆ ತೆಗೆಯುವ ಮೂಲಕ ಸಮಾಜಕ್ಕೆ ಬೆಳಕು ಕೊಟ್ಟ ಸಮಾಜ ನಮ್ಮದಾಗಿದೆ.ಉಳ್ಳಾಲದಲ್ಲಿ ಗಾಣಿಗ ಸಮಾಜ ಭವನ ನಿರ್ಮಾಣಕ್ಕೆ ಬಹಳಷ್ಟು ಜನ ಶ್ರಮಿಸಿದ್ದು ಅವರೆಲ್ಲರನ್ನು ನಾವಿಂದು ಸ್ಮರಿಸಬೇಕಿದೆ.ಸಮುದಾಯ ಭವನ ನಿರ್ಮಾಣದಿಂದ ಸಮಾಜವು ಏಳಿಗೆಯಾಗುವುದಲ್ಲದೆ,ಅದರಿಂದ ಬರುವ ಆದಾಯವನ್ನ ಸಮಾಜದ ಅಶಕ್ತ ವರ್ಗದ ಮಕ್ಕಳ ವಿದ್ಯಾಭ್ಯಾಸ ಇನ್ನಿತರ ಅಭಿವೃದ್ಧಿ ಚಟುವಟಿಕೆಗಳಿಗೆ ವಿನಿಯೋಗಿಸಬಹುದಾಗಿದೆಯೆಂದು ಉಳ್ಳಾಲ,ಉಳಿಯ ಶ್ರೀ ಉಳ್ಳಾಲ್ತಿ ಧರ್ಮಅರಸರ ಕ್ಷೇತ್ರದ ಧರ್ಮದರ್ಶಿಗಳಾದ ದೇವು ಮೂಲ್ಯಣ್ಣ ಅವರು ಅಭಿಪ್ರಾಯಪಟ್ಟರು. ಗಾಣಿಗರ ಸಮುದಾಯ ಸೇವಾ ಟ್ರಸ್ಟ್ ಉಳ್ಳಾಲ ಪ್ರಖಂಡ ತೊಕ್ಕೊಟ್ಟು ಇದರ ಆಶ್ರಯದಲ್ಲಿ ಉಳ್ಳಾಲ ಬೈಲಿನಲ್ಲಿ ನಿರ್ಮಾಣಗೊಂಡ ನೂತನ”ಗಾಣಿಗ ಭವನ”ವನ್ನು ಭಾನುವಾರದಂದು ಉದ್ಘಾಟಿಸಿದ ಅವರು ಆಶೀರ್ವಚನದ ಮಾತುಗಳನ್ನಾಡಿದರು.ಗಾಣಿಗ ಭವನ ಉದ್ಘಾಟನಾ ಸಮಾರಂಭದಲ್ಲಿ ಎಲ್ಲಾ ಜಾತಿ ಸಮುದಾಯದ ಮುಖಂಡರು ಸೇರಿರುವುದು ಸಮಾಜದ ಒಗ್ಗಟ್ಟನ್ನು ಪ್ರದರ್ಶಿಸುತ್ತಿದೆ.ಸಮಾಜದಲ್ಲಿ ನಾವು ಒಬ್ಬರನ್ನೊಬ್ಬರು ಬಿಟ್ಟು ಇರಲಿಕ್ಕೆ ಸಾಧ್ಯವಿಲ್ಲ.ಪ್ರತೀ ತಾಲೂಕಲ್ಲಿ ಇಂತಹ ಭವನಗಳು ತಲೆ ಎತ್ತುವುದರ ಮೂಲಕ ಗಾಣಿಗ ಸಮುದಾಯವು ಮುಂಚೂಣಿಗೆ ಬರಲಿ.ಶೈಕ್ಷಣಿಕ,ಧಾರ್ಮಿಕ ಹಾಗೂ ಕ್ರೀಡಾ ಕ್ಷೇತ್ರಕ್ಕೆ ನೂತನ ಭವನವು ಮಹತ್ತರವಾದ ಕೊಡುಗೆ ನೀಡುವಂತಾಗಲಿ…
ಉಳ್ಳಾಲ: ಇನ್ನೇನು ಕೆಲವೇ ದಿನಗಳಲ್ಲಿ ಇಸ್ರೇಲ್ ಗೆ ತೆರಳಬೇಕಿದ್ದ ಯುವಕ ಮನೆಯೊಳಗೆ ನೇಣುಬಿಗಿದು ಸಾವನ್ನಪ್ಪಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಉಳ್ಳಾಲ ಹೊಯ್ಗೆ ಎಂಬಲ್ಲಿ ಇಂದು ನಸುಕಿನ ಜಾವ ಬೆಳಕಿಗೆ ಬಂದಿದೆ. ದಿ| ಜೆರ್ರಿ ಡಿಸೋಜ ಮತ್ತು ಇಸಾಬೆಲ್ಲ ಎಂಬವರ ಪುತ್ರ ಸೂರ್ಯಪ್ರಕಾಶ್ ಡಿಸೋಜ (೪೨) ಮೃತರು. ಒಂದು ವರ್ಷದಿಂದ ಇಸ್ರೇಲ್ ದೇಶದಲ್ಲಿ ಉದ್ಯೋಗದಲ್ಲಿದ್ದ ಸೂರ್ಯಪ್ರಕಾಶ್, ಅದೇ ದೇಶದಲ್ಲಿ ಉದ್ಯೋಗದಲ್ಲಿರುವ ಸಹೋದರಿ ಜೊತೆ ಕೆಲ ದಿನಗಳ ಹಿಂದೆ ಮನೆಗೆ ಆಗಮಿಸಿದ್ದರು. ಸಹೋದರ ರೇಷ್ಮಾ ಕ್ಯಾಟರಿಂಗ್ ಮಾಲಕರ ವಿವಾಹ ಸಮಾರಂಭಕ್ಕೆಂದು ಬಂದಿದ್ದ ಸೂರ್ಯಪ್ರಕಾಶ್, ಮೇ.೧೭ ರಂದು ವಾಪಸ್ಸು ತೆರಳುವವರಿದ್ದರು. ಇಂದು ನಸುಕಿನ ಜಾವ ಸಹೋದರಿ ಹಾಗೂ ಭಾವ ನಸುಕಿನ ಜಾವ ಕೆಲಸಕ್ಕೆ ತೆರಳಿದ್ದು, ತದನಂತರ ಸೂರ್ಯಪ್ರಕಾಶ್ ತಾನು ಮಲಗಿರುವ ಕೋಣೆಯಲ್ಲಿ ನೇಣುಬಿಗಿದು ದೇಹಹತ್ಯೆ ಮಾಡಿಕೊಂಡಿದ್ದಾರೆ. ತಾಯಿ ಇಸಾಬೆಲ್ಲ ಅವರು ಕೋಣೆಯೊಳಗೆ ತೆರಳಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಭಾನುವಾರ ಸ್ಥಳೀಯ ಸಂಘದ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಸೂರ್ಯಪ್ರಕಾಶ್, ಸಹೋದರನ ವಿವಾಹದಲ್ಲಿಯೂ ಉತ್ಸಾಹಿತರಾಗಿ ಭಾಗವಹಿಸಿದ್ದರು.…
ಮಂಗಳೂರು: ತುಳು ನಮ್ಮ ಪ್ರಾದೇಶಿಕ ಭಾಷೆಯಾದರೂ ಅದರ ಅಭಿಮಾನದಿಂದ ತುಳು ಸಿನಿಮಾಗಳನ್ನು ನಿರ್ಮಿಸುವ ನಿರ್ಮಾಪಕರು ಕಲಾವಿದರಿಗೆ ಆಸರೆಯಾಗಿದ್ದಾರೆ. ಜೈ ತುಳು ಸಿನಿಮಾ ತುಳು ಚಿತ್ರರಂಗಕ್ಕೆ ಹೊಸ ಚೈತನ್ಯ ನೀಡಿದೆ. ವಿಶ್ವದ ತುಳುವರು ಈ ಸಿನಿಮಾವನ್ನು ಗೆಲ್ಲಿಸಿದ್ದಾರೆ ಎಂದು ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ಎಂ. ರೈ ಹೇಳಿದರು. ಅವರು ಬಜಪೆ ಬಳಿಯ ಮರವೂರಿನ ಸ ಶೂಲಿನ್ ಪ್ಯಾಲೇಸ್ ನಲ್ಲಿ “ಜೈ” ತುಳು ಸಿನಿಮಾದ ನೂರನೇ ದಿನದ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿದರು.ನಟ ನಿರ್ದೇಶಕ ರೂಪೇಶ್ ಶೆಟ್ಟಿ ಮಾತನಾಡಿ, “ಜೈ” ಸಹಿತ ತನ್ನ ಎಲ್ಲಾ ಚಿತ್ರಗಳು ಜನರ ಆಶೀರ್ವಾದದಿಂದ ಯಶಸ್ವಿಯಾಗಿದೆ. ಸಣ್ಣ ಆಲ್ಬಂ ಸಾಂಗ್‌ನಿಂದ ನಿರೂಪಕನಾಗಿ ಬಿಗ್ ಬಾಸ್ ವಿಜೇತನಾಗಿರುವ ತನಗೆ ವಿಶ್ವ ಮಟ್ಟದಲ್ಲಿನ ತುಳುವರು ಅಭಿಮಾನದಿಂದ ಪ್ರೋತ್ಸಾಹ ನೀಡಿದ್ದಾರೆ ತುಳು ಸಿನಿಮಾ ಕ್ಷೇತ್ರ ಇನ್ನಷ್ಟು ಎತ್ತರಕ್ಕೆ ಏರಬೇಕೆಂಬ ಕನಸಿಗೆ ಎಲ್ಲರ ಸಹಕಾರ ಅಗತ್ಯ ಎಂದರು.ಈ ಸಂದರ್ಭದಲ್ಲಿ ಸಿನಿಮಾ ಕ್ಷೇತ್ರದ ವಿವಿಧ ಸಾಧಕರನ್ನು ಹಾಗೂ ಜೈ ಸಿನಿಮಾಕ್ಕೆ ಸಹಕರಿಸಿದ ಗಣ್ಯರನ್ನು, ಭಾರತ್ ಸಿನಿಮಾದ ಮಾಲಕ ಬಾಲಕೃಷ್ಣ…
ಕಾಸರಗೋಡು, ಮೇ. 11 ‘ವಿವಾಹ ನಿಶ್ಚಯವಾಗಿದ್ದ ಯುವಕ ಅಪಘಾತದಲ್ಲಿ ಸಾವನ್ನಪ್ಪಿದ್ದರಿಂದ ನೊಂದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂಬಳೆ ಬಳಿಯ ಕುಂಟಗೇರಡ್ಕದಲ್ಲಿ ನಡೆದಿದೆ. ಮೃತಳನ್ನು ಕುಂಟಗೇರಡ್ಕದ ಜನಾರ್ದನ್ ಅವರ ಪುತ್ರಿ ಪ್ರಫುಲ್ಲಾ (26) ಎಂದು ಗುರುತಿಸಲಾಗಿದೆ.ಪ್ರಫುಲ್ಲ ನಾಲ್ಕು ತಿಂಗಳ ಹಿಂದೆ ತಮಿಳುನಾಡು ಮೂಲದ ಮಣಿ ಎಂಬ ಯುವಕನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಸುಮಾರು ಒಂದು ತಿಂಗಳ ಹಿಂದೆ, ಮಣಿ ಅವರು ಮೋಟಾರ್ ಸೈಕಲ್‌ಗೆ ಮತ್ತೊಂದು ಬೈಕ್ ಡಿಕ್ಕಿ ಹೊಡೆದ ಪರಿಣಾಮ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದರು. ಅವರು ಹಲವಾರು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು ಆದರೆ ನಂತರ ಚಿಕಿತ್ಸೆಗೆ ಸ್ಪಂದಿಸದ ಕಾರಣ ಸಾವನ್ನಪ್ಪಿದರು.ಮಣಿಯವರ ಮರಣದ ನಂತರ, ಪ್ರಫುಲ್ಲ ಖಿನ್ನತೆಗೆ ಒಳಗಾಗಿದ್ದರು ಎಂದು ವರದಿಯಾಗಿದೆ. ಭಾನುವಾರ ಕುಟುಂಬ ಸದಸ್ಯರು ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದಾಗ ಪ್ರಫುಲ್ಲಾ ತಮ್ಮ ನಿವಾಸದಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಕುಟುಂಬವು ಮನೆಗೆ ಹಿಂದಿರುಗಿದಾಗ ಈ ಘಟನೆ ಬೆಳಕಿಗೆ ಬಂದಿದೆ.ಆಕೆ ಬರೆದಿರಬಹುದೆಂದು ನಂಬಲಾದ ಒಂದು ಟಿಪ್ಪಣಿಯನ್ನು ಪೊಲೀಸರು…

