Author: UllalaVani

Kannada News From Coastal Karnataka

ಮಂಗಳೂರು : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಆಯೋಜಿಸಲಾಗುವ 16ನೆ ಆವೃತ್ತಿಯ ಈ ವರ್ಷದ ಉದ್ಯೋಗ ಮೇಳ ಆ.7 ಮತ್ತು 8ರಂದು ಮೂಡುಬಿದಿರೆಯ ವಿದ್ಯಾಗಿರಿ ಆವರಣದಲ್ಲಿ ನಡೆಯಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ತಿಳಿಸಿದರು. ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರತಿಭೆಗಳಿಗೆ ಗುಣಮಟ್ಟದ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಆರಂಭಗೊಂಡ ಆಳ್ವಾಸ್ ಪ್ರಗತಿ ಉದ್ಯೋಗ ಮೇಳವು ಕರ್ನಾಟಕ ಸೇರಿದಂತೆ ನಾಲ್ಕು ರಾಜ್ಯಗಳ ಅಭ್ಯರ್ಥಿಗಳಿಗೆ ಸ್ಥಳೀಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಉದ್ಯೋಗಾವಕಾಶಗಳನ್ನು ಒದಗಿಸುವ ವೇದಿಕೆಯಾಗಿದೆ ಎಂದರು.ಇದುವರೆಗೆ ಪ್ರತಿಷ್ಠಾನದಿಂದ ನಡೆದಿರುವ ಉದ್ಯೋಗ ಮೇಳಗಳಲ್ಲಿ 250ಕ್ಕೂ ಅಧಿಕ ಪ್ರತಿಷ್ಟಿತ ಕಂಪನಿಗಳು ಭಾಗವಹಿಸಿದ್ದು ಇಲ್ಲಿಯವರೆಗೆ 66,432 ಅಭ್ಯರ್ಥಿಗಳು ಶಾರ್ಟ್‌ಲಿಸ್ಟ್ಗೊಂಡು 40848 ಅಭ್ಯರ್ಥಿಗಳಿಗೆ ಸ್ಥಳದಲ್ಲಿಯೇ ಉದ್ಯೋಗದ ಅವಕಾಶ ದೊರಕಿದೆ. ಪ್ರಸಕ್ತ ಸಾಲಿನ ಉದ್ಯೋಗ ಮೇಳದಲ್ಲಿ 300ಕ್ಕೂ ಅಧಿಕ ಕಂಪನಿಗಳು ಭಾಗವಹಿಸುವ ನಿರೀಕ್ಷೆ ಇದೆ. ಬ್ಯಾಂಕಿಂಗ್ ಹಾಗೂ ಹಣಕಾಸು, ಮಾಹಿತಿ ತಂತ್ರಜ್ಞಾನ, ಉತ್ಪಾದನೆ, ಔಷಧೋದ್ಯಮ, ಮಾರಾಟ ಮತ್ತು ಚಿಲ್ಲರೆ ವ್ಯಾಪಾರ, ಅತಿಥ್ಯ ದೂರಸಂಪರ್ಕ,…

Read More

ಪಜೀರು, ಜೂನ್ 23: ಶ್ರೀ ಕೃಷ್ಣ ಭಜನಾ ಮಂಡಳಿ (ರಿ.) ಸುದರ್ಶನ ನಗರ ಪಜೀರು ಇದರ 63ನೇ ವರ್ಷದ ವಾರ್ಷಿಕ ಮಹಾಸಭೆಯು ಮಂದಿರದ ಅಧ್ಯಕ್ಷ ವಿಜೇತ್ ಪಜೀರು ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ 2026-27ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಯಶೋಧರ ಜೆ. ಜೋಗಿಬೆಟ್ಟು, ಉಪಾಧ್ಯಕ್ಷರಾಗಿ ಸದಾಶಿವ ಶೆಟ್ಟಿ (ದತ್ತ ನಿಕೇತನ), ಪ್ರಧಾನ ಕಾರ್ಯದರ್ಶಿಯಾಗಿ ಮಿಥುನ್ ಪಜೀರು, ಜೊತೆ ಕಾರ್ಯದರ್ಶಿಯಾಗಿ ಸುದರ್ಶನ್ ದುರ್ಗಾ, ಕೋಶಾಧಿಕಾರಿಯಾಗಿ ನವೀನ್ ಪ್ರಕಾಶ್ ಹಾಗೂ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ನಿರ್ಮಲ್ ಭಟ್ ವೈ. ಆಯ್ಕೆಯಾದರು. ಲೆಕ್ಕ ಪರಿಶೋಧಕರಾಗಿ ತಾರನಾಥ ವರ್ಮ ಪಜೀರು ಅವರನ್ನು ನೇಮಕ ಮಾಡಲಾಯಿತು. ಗೌರವ ಸಲಹೆಗಾರರಾಗಿ ಸೇಸಪ್ಪ ಪೂಜಾರಿ, ಸೀತಾರಾಮ ಶೆಟ್ಟಿ ಮುಗುಳಿ, ವಿಜೇತ್ ಪಜೀರು, ಆಂಡಿ ಸುದರ್ಶನ ನಗರ, ಜಯರಾಮ ಶೆಟ್ಟಿ ಕಂಬಳಪದವು, ಕೆ.ಎಂ. ಬಾಲಕೃಷ್ಣ, ತುಕ್ಕೋಜಿ ರಾವ್ ಪೆರ್ಣಪಾಡಿ ಹಾಗೂ ಜಯರಾಮ ಶೆಟ್ಟಿ ಕೆಳಗಿನ ಮನೆ ಅವರನ್ನು ಆಯ್ಕೆ ಮಾಡಲಾಯಿತು. ಭಜನಾ ಸಂಚಾಲಕರಾಗಿ ವಸಂತ್ ಜಿ. ಸುದರ್ಶನ ನಗರ,…

Read More

ಮಂಗಳೂರು: 2014 ರಲ್ಲಿ ಪ್ರಾರಂಭ ಗೊಂಡ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯು ಭಾರತದ ಸಾಂಸ್ಕೃತಿಕ ಪರಂಪರೆ ಮತ್ತು ಪ್ರಾಚೀನ ಜೀವನ ಶೈಲಿಗೆ ಜಾಗತಿಕ ಮಟ್ಟದಲ್ಲಿ ಸಿಕ್ಕ ಗೌರವವಾಗಿದೆ ಎಂದು ಲೋಕಸಭಾ ಸದಸ್ಯ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ. ಅವರು ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ನಗರದ ಪುರಭವನದಲ್ಲಿ ಉದ್ಘಾಟಿಸಿ ಮಾತನಾಡಿದರು. ಆರೋಗ್ಯಯುತ ಜೀವನವನ್ನು ಹೇಗೆ ಪಡೆಯಬೇಕು ಎಂಬುದನ್ನು ಭಾರತವು ಜಗತ್ತಿಗೆ ಕಲಿಸಿದೆ. ಇಂದಿನ ಜಾಗತಿಕ ಪರಿಸ್ಥಿತಿಯನ್ನು ಅವಲೋಕಿಸಿದಾಗ ಯೋಗದ ಮಹತ್ವವು ಎಷ್ಟು ಅಗತ್ಯವಾಗಿದೆ ಎಂದು ತಿಳಿದು ಬರುತ್ತದೆ ಎಂದು ಅವರು ತಿಳಿಸಿದರು.ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ದರ್ಶನ್ ಹೆಚ್ ವಿ , ಜಿಲ್ಲಾ ಸರ್ಜನ್ ಡಾ ಶಿವಪ್ರಕಾಶ್, ಉಪವಿಭಾಗಾಧಿಕಾರಿ ಮೀನಾಕ್ಷಿ ಆರ್ಯ, ಡಿಸಿಪಿ ರವಿಶಂಕರ್, ಎ ಎಸ್ ಪಿ ಅನಿಲ್ ಕುಮಾರ್, ಬ್ರಹ್ಮಕುಮಾರಿ ಅಂಬಿಕಾ ಉಪಸ್ಥಿತರಿದ್ದರು.ಯೋಗದಲ್ಲಿ ವಿಶ್ವ ದಾಖಲೆ ಮಾಡಿದ ಕಡಬ ತಾಲೂಕಿನ ಏನಕಲ್ಲು ನಿವಾಸಿ, 6 ನೇ ತರಗತಿ ವಿದ್ಯಾರ್ಥಿ…

Read More

ಮಂಗಳೂರು: ಕಳೆದ ಮೂರು ದಿನಗಳ ಅವಧಿಯಲ್ಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆದ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಮೂವರು ಯುವ ದ್ವಿಚಕ್ರ ವಾಹನ ಸವಾರರು ಮೃತಪಟ್ಟಿರುವ ಘಟನೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಶುಕ್ರವಾರ ಸಜಿಪ ನಿವಾಸಿಯೊಬ್ಬರು ರಸ್ತೆ ಅಪಘಾತದಲ್ಲಿ ಮೃತಪಟ್ಟರೆ, ಶನಿವಾರ ತ್ವಾಕೆ ನಿವಾಸಿ ಯುವಕನೊಬ್ಬ ಮಲಪುರಂ ಪ್ರದೇಶದಲ್ಲಿ ಸಂಭವಿಸಿದ ಅಪಘಾತದಲ್ಲಿ ಜೀವ ಕಳೆದುಕೊಂಡಿದ್ದಾರೆ. ಭಾನುವಾರ ಪಾತುರು ನಿವಾಸಿ ಯುವಕ ಎಕ್ಕೂರು ಪ್ರದೇಶದಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ.ಮನೆಯ ಆಧಾರಸ್ತಂಭರಾಗಿದ್ದ ಈ ಮೂವರು ಯುವಕರ ಅಕಾಲಿಕ ನಿಧನದಿಂದ ಕುಟುಂಬಸ್ಥರು ಹಾಗೂ ಬಂಧು-ಬಳಗ ದುಃಖದಲ್ಲಿ ಮುಳುಗಿದ್ದಾರೆ. ಒಂದೇ ಪ್ರದೇಶದ ಮೂವರು ಯುವಕರು ಕೇವಲ ಮೂರು ದಿನಗಳ ಅಂತರದಲ್ಲಿ ಅಪಘಾತಗಳಿಗೆ ಬಲಿಯಾಗಿರುವುದು ರಸ್ತೆ ಸುರಕ್ಷತೆ ಕುರಿತು ಗಂಭೀರ ಚಿಂತನೆಗೆ ಕಾರಣವಾಗಿದೆ.ಈ ಹಿನ್ನೆಲೆಯಲ್ಲಿ ವಾಹನ ಸವಾರರು, ವಿಶೇಷವಾಗಿ ಯುವಕರು, ದ್ವಿಚಕ್ರ ವಾಹನ ಚಲಾಯಿಸುವ ವೇಳೆ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ಅತಿವೇಗ ಹಾಗೂ ನಿರ್ಲಕ್ಷ್ಯ ಚಾಲನೆಯನ್ನು ತಪ್ಪಿಸಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.ಕೆಲವೇ ನಿಮಿಷಗಳ ಆತುರ ಅಥವಾ ಅಜಾಗರೂಕತೆಯಿಂದ ಅಮೂಲ್ಯ…

Read More

ಮಂಗಳೂರು: ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಹದಿನೆಂಟನೆಯ ವಾರ್ಷಿಕೋತ್ಸವದ ಪರವಾಗಿ ರಂಗಭಾಸ್ಕರ-2026 ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ, ನಾಟಕಕಾರ, ಸಾಹಿತಿ ಮತ್ತು ಸಂಘಟಕ ಪರಮಾನಂದ ಸಾಲ್ಯಾನ್‌ರವರಿಗೆ ಸಸಿಹಿತ್ಲುವಿನ ಶ್ರೀಯುತರ ಸ್ವಗೃಹದಲ್ಲಿ ನಡೆದ ಸರಳ ಮತ್ತು ಆಪ್ತ ಕಾರ್ಯಕ್ರಮದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಡಾ.ನಾ.ದಾಮೋದರ ಶೆಟ್ಟಿಯವರು ಮಾತನಾಡಿ, ರಂಗಭಾಸ್ಕರ ಪ್ರಶಸ್ತಿಗೆ ಅತ್ಯಂತ ಸೂಕ್ತ ವ್ಯಕ್ತಿಯನ್ನು ಆರಿಸಿದ್ದಕ್ಕೆ ಸಂತೋಷವಾಗಿದೆ ಎಂದರು. ಹಿರಿಯ ಜನಪದ ತಜ್ಞ ಕೆ.ಕೆ.ಪೇಜಾವರರವರು ತಮ್ಮ ಮತ್ತು ಪರಮಾನಂದರ ದೀರ್ಘ ಕಾಲದ ಗೆಳೆತನದ ದಿನಗಳನ್ನು ಮೆಲುಕು ಹಾಕಿದರು. ಜನಪ್ರಿಯ ಸಿನೆಮಾ ರಂಗಭೂಮಿ ನಟ ನವೀನ್ ಡಿ ಪಡೀಲ್ ಮಾತನಾಡಿ ಪರಮಾನಂದ ಸಾಲ್ಯಾನ್‌ರವರ ಸಹೃದತೆ ಮತ್ತು ಕಲೆಯ ಬಗೆಗಿನ ಅಭಿಮಾನವನ್ನು ನೆನಪಿಸಿ ಶುಭಹಾರೈಸಿದರು. ಸಂಘಟಕ, ನಟ ಯತೀಶ್ ಬೈಕಂಪಾಡಿಯವರು ಪರಮಾನಂದರು ಲವಲವಿಕೆಯಿಂದ ಇದ್ದಾರೆ ಆದರೆ ಇನ್ನಷ್ಟು ಆತ್ಮಸ್ಥೈರ್ಯದಿಂದ ಇದ್ದು ಆರೋಗ್ಯ ವೃದ್ಧಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ರಂಗ ಭಾಸ್ಕರ ಪ್ರಶಸ್ತಿ- ವರ್ಷಂಪ್ರತಿ ಹಿರಿಯ ರಂಗಭೂಮಿ…

Read More

ಸೋಮೇಶ್ವರ: ಸೋಮೇಶ್ವರ ದೇವಸ್ಥಾನದ ವಠಾರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯ ಆಚರಣೆ ಪ್ರಯುಕ್ತ ಸಮಿತಿ ರಚಿಸಿದ್ದು ಇದರ ಗೌರವ ಪ್ರಧಾನ ಮಾರ್ಗದರ್ಶಿಯಾಗಿ ಸೂರ್ಯನಾರಾಯಣ ಹೊಳ್ಳ, ಗೌರವಾಧ್ಯಕ್ಷರು ದಿನೇಶ್ ಕಾಜವ, ಜನಾರ್ಧನ್ ಹೊಳ್ಳ, ರವೀಂದ್ರನಾಥ್ ರೈ, ಅಧ್ಯಕ್ಷರಾಗಿ ರಾಘವ ಆರ್ ಉಚ್ಚಿಲ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಅಜಿತ್ ಶೆಟ್ಟಿ ಸೋಮೇಶ್ವರ, ಹರಿಪ್ರಸಾದ್ ಅಡ್ಕ, ನಾಗೇಶ್ ಪಂಡಿತ್ ಹೌಸ್ ಹಾಗೂ ಗೌರವ ಸಲಹೆಗಾರರಾಗಿ ರಾಮಚಂದ್ರ ಉಚ್ಚಿಲ್ ವಾಸುಗೋಪಾಲ್ ಕೆ. ಸಿ ನಾರಾಯಣ್, ಪದ್ಮನಾಭ ವರ್ಕಾಡಿ ಸುಧಾಕರ್ ಭಂಡಾರಿ ಶರತ್ ಚಂದ್ರ ಗಟ್ಟಿ, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಸೋಮೇಶ್ವರ್, ಜೊತೆ ಕಾರ್ಯದರ್ಶಿ ಜಯಂತ್ ಮನೋಜ್, ದೀಪಕ್ ದಾಸ್, ಖಜಾಂಜಿಯಾಗಿ ಜಯರಾಂ ಸೋಮೇಶ್ವರ ಆಯ್ಕೆಗೊಂಡಿದ್ದು, ಮುದ್ದು ಕೃಷ್ಣ ವೇಷ ಸ್ಪರ್ಧೆಯ ಸಂಚಾಲಕರಾಗಿ ಪ್ರೇಮಲತಾ ಸೋಮೇಶ್ವರ, ಲಕ್ಷ್ಮೀತಾ ಸೋಮೇಶ್ವರ, ದಾಕ್ಷಾಯಿಣಿ ಸೋಮೇಶ್ವರ ಆಯ್ಕೆಯಾಗಿದ್ದಾರೆ.

Read More

ಮಂಗಳೂರು ಮಹಾನಗರ ಪಾಲಿಕೆ (ಎಂಸಿಸಿ) ಕೆಲವು ಪ್ರದೇಶಗಳಿಗೆ ಪೂರೈಸುತ್ತಿರುವ ಕುಡಿಯುವ ನೀರು ಬಳಕೆಗೆ ಯೋಗ್ಯವಾಗಿಲ್ಲ ಎಂಬ ಆತಂಕವನ್ನು ಈ ಹಿಂದೆ ಉಳ್ಳಾಲವಾಣಿ ವರದಿಯ ಮೂಲಕ ಜನರ ಗಮನಕ್ಕೆ ತಂದಿತ್ತು. ಇದೀಗ ಮಂಗಳೂರಿನ ವಿವಿಧ ಪ್ರದೇಶಗಳಲ್ಲಿ 100ಕ್ಕೂ ಹೆಚ್ಚು ಜನರು ವಾಂತಿ, ಬೇಧಿ ಸೇರಿದಂತೆ ಆರೋಗ್ಯ ಸಮಸ್ಯೆಗಳಿಂದ ಅಸ್ವಸ್ಥರಾಗಿರುವ ಘಟನೆಗಳು ಸಾರ್ವಜನಿಕ ವಲಯಗಳಲ್ಲಿ ಇದ್ದು ಇದು ಆತಂಕಕ್ಕೆ ಕಾರಣವಾಗಿದೆ. ಸ್ವಾರ್ಟ್ ಸಿಟಿ ಮಂಗಳೂರಿನಲ್ಲಿ ಮಳೆಗಾಲದ ಸಂದರ್ಭದಲ್ಲಿ ಸಮರ್ಪಕವಾದ ಒಳಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ, ಚರಂಡಿ ನೀರು ಕುಡಿಯುವ ನೀರಿನ ಪೈಪ್‌ಗಳಿಗೆ ಬೆರೆತು ಸಾರ್ವಜನಿಕ ಆರೋಗ್ಯಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇದೆ ಎಂದು ಈ ಹಿಂದೆಯೇ ಎಚ್ಚರಿಸಲಾಗಿತ್ತು. ಇದೀಗ ನಡೆದಿರುವ ಬೆಳವಣಿಗೆಗಳು ಆ ಆತಂಕವನ್ನು ಮತ್ತೊಮ್ಮೆ ದೃಢಪಡಿಸುತ್ತಿವೆ. ಈ ಹಿನ್ನೆಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರು, ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿಗಳು, ಆರೋಗ್ಯ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ, ಸಮಸ್ಯೆಯ ಮೂಲವನ್ನು ಪತ್ತೆಹಚ್ಚಿ, ನೀರಿನ ಗುಣಮಟ್ಟದ ಸಮಗ್ರ ಪರಿಶೀಲನೆ ನಡೆಸಿ, ಸಾರ್ವಜನಿಕರಿಗೆ ಸುರಕ್ಷಿತ ಕುಡಿಯುವ…

Read More

ಪುತ್ತೂರು : ಬದ್ರಿಯಾ ಗಲ್ಫ್ ಫ್ರೆಂಡ್ಸ್ ಸಂಟ್ಯಾರ್ ಇದರ ವತಿಯಿಂದ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ “ಆರೋಗ್ಯಕರ ಜಮಾಅತ್” ಶೀರ್ಷಿಕೆಯಡಿ ಸಸಿ ವಿತರಣಾ ಕಾರ್ಯಕ್ರಮವು ಸಂಟ್ಯಾರ್ ಜುಮಾ ಮಸೀದಿ ವಠಾರದಲ್ಲಿ ನಡೆಯಿತು. ಮಸೀದಿ ಖತೀಬರಾದ ಅಬ್ದುಲ್ ಲತೀಫ್ ಹನೀಫಿಯವರು ದುಆ ನೆರವೇರಿಸಿ ಜಮಾಅತ್ ಕಮಿಟಿ ಉಪಾಧ್ಯಕ್ಷರಾದ ಮಹಮ್ಮದ್ ಮಲಾರ್ ರವರಿಗೆ ಸಸಿ ವಿತರಿಸಿ, ಮಾತನಾಡಿದ ಅವರು ಸಸಿ ನೆಡುವುದು ಆ ಮೂಲಕ ಪರಿಸರ ಸಂರಕ್ಷಣೆಯು ನಮ್ಮ ಜವಾಬ್ದಾರಿಯಾಗಿದ್ದು, ಮಹಾ ಪ್ರತಿಫಲ ಲಭಿಸುವ ಪುಣ್ಯ ಕಾರ್ಯವಾಗಿದೆ, ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿರುವ ಬದ್ರಿಯಾ ಗಲ್ಫ್ ಫ್ರೆಂಡ್ಸ್ ಗೆ ಧನ್ಯವಾದ ತಿಳಿಸಿದರು. ಈ ಸಂದರ್ಭದಲ್ಲಿ ಜಮಾಅತ್ ಕಮಿಟಿ ಕಾರ್ಯದರ್ಶಿಗಳಾದ ಹಮೀದ್ ಕಲ್ಲರ್ಪೆ, ಜಮಾಅತ್ ಕಮಿಟಿ ಸದಸ್ಯರಾದ ರಝಾಕ್ ಸಂಟ್ಯಾರ್, ಫಾರೂಕ್ ಸಂಟ್ಯಾರ್, ಹಾರಿಸ್ ಸಂಟ್ಯಾರ್, ಅಬ್ಬಾಸ್ ಆರ್ಯಾಪು, ಅಬ್ದುಲ್ಲಾ ಮರಿಕೆ, ಶಂಸುದ್ದೀನ್ ಕಲ್ಲರ್ಪೆ, ಮಸೀದಿ ಸದರ್ ಮುಅಲ್ಲಿಮ್ ಅಬ್ದುಲ್ ರಹ್ಮಾನ್ ಮುಸ್ಲಿಯಾರ್ , ಅನ್ಸಾರಿಯಾ ಯಂಗ್ಮೆನ್ಸ್ ಸಂಟ್ಯಾರ್ ಅಧ್ಯಕ್ಷರಾದ ಪವಾಝ್ ಮರಿಕೆ ಹಾಗೂ ಬದ್ರಿಯಾ ಗಲ್ಫ್…

Read More

ಉರ್ವಾ; ದೀನದಲಿತರ ನೋವಿಗೆ ಧನಿಯಾಗಿ, ಸಮಾಜಕ್ಕೆ ತನ್ನನ್ನು ತಾನೇ ಅರ್ಪಿಸಿಕೊಂಡ ದೈವತ್ವಕ್ಕೇರಿದ ಸಂತ ಅಲೋಶಿಯಸ್ ಗೊನ್ನಾಗ ಇವರ ಹುಟ್ಟುಹಬ್ಬವನ್ನು ಶಾಲಾ ಪಾಲಕರ ದಿನಾಚರಣೆಯಾಗಿ ಸಂತ ಅಲೋಶಿಯಸ್ ಆಂಗ್ಲ ಮಾಧ್ಯಮ ಶಾಲೆ ಉರ್ವಾದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಗೊಂಝಾಗ ಜೀವನ,ಆದರ್ಶಗಳು ಎಂದಿಗೂ ನಮಗೆ ಅನುಕರಣೆಯ ಎಂಬುದಾಗಿ ಮುಖ್ಯ ಶಿಕ್ಷಕರಾದ ಶ್ರೀಯುತ ಅಲೋಶಿಯಸ್ ಡಿಸೋಜರವರು ವಿದ್ಯಾರ್ಥಿಗಳಿಗೆ ತಿಳಿಸಿದರು . 10ನೇ ತರಗತಿಯ ವಿದ್ಯಾರ್ಥಿಗಳು ಅಸೆಂಬ್ಲಿಯನ್ನು ನೆರವೇರಿಸಿದರು. ತರಗತಿ ಶಿಕ್ಷಕರು ಕಾರ್ಯಕ್ರಮ ಸಂಯೋಜಿಸಿದರು. ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ವಿತರಿಸಲಾಯಿತು.

Read More

ಶಿಕ್ಷಣವು ಕೇವಲ ಶಾಲೆಯಲ್ಲಿ ಮಾತ್ರ ಕಲಿಯುವುದಲ್ಲ ಮಗು ಹುಟ್ಟಿನಲ್ಲಿಂದ ಸಾಯುವವರೆಗೆ ಮಗು ಕಲಿಯುತಿರಬೇಕು. ಮತ್ತು ಕಲಿಯುತ್ತಾ ಇರುತ್ತದೆ. ಮಗುವಿಗೆ ಎಳೆಯದರಲ್ಲೇ ಸ್ನೇಹ ಮೈ ಜೀವನ, ಶಿಸ್ತುಮಯ ಜೀವನ, ಪ್ರಾಮಾಣಿಕ ಜೀವನ, ಸದಾ ಸತ್ಯವನ್ನೇ ನುಡಿಯುವುದು ಮೊದಲಾದ ಮಾನವೀಯ ಮೌಲ್ಯಗಳು ಬೆಳೆಯಬೇಕು. ಇದು ಶಾಲೆ ಮತ್ತು ಮನೆಯಲ್ಲಿ ಮಗುವಿಗೆ ಅಭ್ಯಾಸವಾಗಿದೆ. ಮಗುವಿನ ಮೊದಲನೆಯ ಗುರು ತಾಯಿ ಮನೆಯಲ್ಲಿ ಅಭ್ಯಾಸಗಳನ್ನ ಮಾಡಿಸಬೇಕು ಎಂದು ಉಳ್ಳಾಲ ಠಾಣಾ ಅಧಿಕಾರಿ ಮೊಮ್ಮದ್ ಮನ್ಸೂರ್ ರವರು ಹೇಳಿದರು. ಅವರ ಇತ್ತೀಚೆಗೆ ಹಳೆಕೋಟೆ ಸಯ್ಯದ್ ಮದನಿ ವಿದ್ಯಾ ಸಂಸ್ಥೆಗಳಲ್ಲಿ ವಿದ್ಯಾರ್ಥಿ ರಕ್ಷಕರ ಸಭೆಯಲ್ಲಿ ಮಾತನಾಡುತ್ತಾ ತಾಯಿಯ ಪ್ರೀತಿಯು ಮಗುವಿಗೆ ಶ್ರೇಷ್ಠವಾದದ್ದು. ಆ ಪ್ರೀತಿಯಿಂದಲೇ ಮಗುವನ್ನ ತಿದ್ದಿ ಸುಂದರ ರೂಪ ಕೊಡಲು ಸಾಧ್ಯವಿದೆ. ಎಂದರು. ವಿದ್ಯಾರ್ಥಿ ರಕ್ಷಕರ ಸಭೆಯಲ್ಲಿ ಮುಖ್ಯ ಉಪಾಧ್ಯಾಯರಾದ ಶ್ರೀಯುತ ಕೆ ಎಂ ಕೆ ಮಂಜನಾಡಿ ಅವರು ಶಾಲೆಯಲ್ಲಿ ದೊರೆಯುವ ಸೌಲತ್ತುಗಳು, ಸರಕಾರದಿಂದ ಸಿಗುವ ಸೌಲತ್ತುಗಳು, ಸಾಲ ಆಡಳಿತ ಮಂಡಳಿಯೂ ನೀಡುವ ಉಚಿತ ಸೌಲಭ್ಯಗಳು ಇಂದು ಕನ್ನಡ ಮಾಧ್ಯಮ…

Read More