ಉಳ್ಳಾಲ: ಶಿಕ್ಷಕರಾಗಿದ್ದವರು ಮಕ್ಕಳನ್ನು ಗೌರವಿಸುವ ಮನೋಭಾವ, ಪರಿಸರ ಪ್ರಜ್ಞೆ ಮೂಡಿಸುವ ಜವಾಬ್ದಾರಿ ಹೆಚ್ಚಾಗಬೇಕಿದೆ. ಭಾಷೆಯ ಸ್ಪರ್ಶ, ಮಾನವೀಯತೆ ಸ್ಪರ್ಶ ಎಂದಿಗೂ ಮಕ್ಕಳಲ್ಲಿ ಜಾಗೃತಿಯಾದಾಗ ಮಕ್ಕಳು ಜೀವನದಲ್ಲಿ ಬೆಳೆಯಲು ಸಾಧ್ಯ. ನಾವು ಯಾವ ದಾರಿಯಲ್ಲಿ ಹೋಗುತ್ತೇವೆಯೋ ಅದೇ ದಾರಿಯಲ್ಲಿ ಮಕ್ಕಳು ಹೋಗುತ್ತಾರೆ ಎಂದು ನಿಟ್ಟೆ ವಿವಿ ಮಾನವಿಕ ವಿಭಾಗದ ಮುಖ್ಯಸ್ಥ ಡಾ. ಸಾಯಿಗೀತ ಹೇಳಿದರುಅವರು ಉಳ್ಳಾಲ ವೀರ ರಾಣಿ ಅಬ್ಬಕ್ಕ ಉತ್ಸವ ಸಮಿತಿ ಇದರ ಆಶ್ರಯದಲ್ಲಿ ಕುತ್ತಾರ್ ನಲ್ಲಿ ನಡೆದ ಶಿಕ್ಷಕರ ದಿನಾಚರಣೆ ಹಾಗೂ ಗೌರವ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಮಾಜಿ ಶಾಸಕ ಜಯರಾಮ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಮತಾ ಗಟ್ಟಿ, ನಿವೃತ್ತ ಮುಖ್ಯ ಶಿಕ್ಷಕಿ ಜಾನಕಿ ಪುತ್ರನ್, ನಿವೃತ್ತ ಮುಖ್ಯ ಶಿಕ್ಷಕರಾದ ಎಂ.ಎಚ್.ಮಲಾರ್,ಎಡಲಿನ್ ಸೆರಾಲಿನ್ ಅವರನ್ನು ಸನ್ಮಾನಿಸಲಾಯಿತು.ಸನ್ಮಾನ ಸ್ವೀಕರಿಸಿ ಮಮತಾ ಗಟ್ಟಿ ಮಾತನಾಡಿ, ನಮ್ಮ ಗುರು ತಾಯಿ, ನಮ್ಮನ್ನು ತಿದ್ದುವವರು ಶಿಕ್ಷಕರು. ಶಿಕ್ಷಕರ ಪ್ರೇರಣೆ ಯಿಂದ…
Author: UllalaVani
ಕೊಣಾಜೆ: ರಾಜ್ಯ ಸರಕಾರದ ತೀರ್ಮಾನದಂತೆ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಸೌಹಾರ್ಧತೆಯ, ಏಕತೆಯ ದಿನವಾಗಿ ರಾಜ್ಯದಾದ್ಯಂತ ಮಾನವ ಸರಪಳಿಯನ್ಬು ಆಯೋಜಿಸಲು ತೀರ್ಮಾನಿಸಿದ್ದು, ಮಂಗಳೂರು ಪಡೀಲ್‌ನಿಂದ ಫರಂಗಿಪೇಟೆಯವರೆಗೆ ನಡೆಯುವ ಮಾನವ ಸರಪಳಿ ಕಾರ್ಯಕ್ರಮದ ಯಶಸ್ಸಿಗೆ ಮಂಗಳೂರು ವಿಧಾನಸಭಾ ಕ್ಷೇತ್ರದ ಜನರ ಸಹಕಾರ ಅಗತ್ಯ ಎಂದು ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ತಿಳಿಸಿದರು. ಮಂಗಳೂರು ವಿವಿ ಎಂಬಿಎ ವಿಭಾಗದ ಸಭಾಂಗಣದಲ್ಲಿ ರಾಜ್ಯ ಸರಕಾರದ ವತಿಯಿಂದ ನಡೆಯುವ ಅಂತರಾಷ್ಟೀಯ ಪ್ರಜಾಪ್ರಭುತ್ವ ದಿನದ ಮಾನವ ಸರಪಳಿ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿ ರಾಜ್ಯದಲ್ಲಿ ಬೀದರ್ ನಿಂದ ಚಾಮರಾಜ ನಗರದವರೆಗೆ ಮಾನವ ಸತೊಳಿ ನಡೆಯಲಿದ್ದು ಉಳ್ಳಾಲ ತಾಲೂಕು ಮತ್ತು ಮಂಗಳೂರು ವಿಧಾನಸಭೆ ವ್ಯಾಪ್ತಿಯಲ್ಲಿ ಕಾರ್ಯಕ್ರಮವನ್ಬು ಯಶಸ್ವಿಗೊಳಿಸಲು ತಾಲೂಕು ಆಡಳಿತದೊಂದಿಗೆ ಎಲ್ಲಾ ಇಲಾಖೆಗಳು, ಶಿಕ್ಷಣ ಸಂಸ್ಥೆಗಳು, ಜನಪ್ರತಿನಿಽಗಳ ಸಹಕಾರ ಅಗತ್ಯ ಎಂದು ಉಳ್ಳಾಲ ತಾಲೂಕಿನ ಎಲ್ಲಾ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳ ಭಾಗವಹಿಸುವಿಕೆ ಅಗತ್ಯ ಎಂದರು.ಈ ಸಂದರ್ಭದಲ್ಲಿ ಉಳ್ಳಾಲ ತಾಲೂಕು ತಹಶೀಲ್ದಾರ್ ಬಿ.ಎ ಪುಟ್ಟರಾಜು, ಉಳ್ಳಾಲ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಽಕಾರಿ ಗುರುದತ್ತ್,…
ತೊಕ್ಕೊಟ್ಟು: ಕರ್ನಾಟಕ ರಾಜ್ಯ ಸರಕಾರಿ ನೌಕರರ ಹಾಗೂ ಸೇವಾ ನಿವೃತ್ತಿ ಹೊಂದಿರುವ ಸರಕಾರಿ ನೌಕರರ ಸಂಘಟನೆಯ ಅಭಿವೃದ್ಧಿ ಮತ್ತು ಪ್ರಮುಖ ಬೇಡಿಕೆಗಳ ಬಗ್ಗೆ ಚರ್ಚಿಸಲು ತೊಕ್ಕೊಟ್ಟು ಒಳಪೇಟೆಯ ಸೈಂಟ್ ಸೆಬಾಸ್ಟಿಯನ್ ಚರ್ಚ್ ವಾಣಿಜ್ಯ ಕಟ್ಟಡದಲ್ಲಿರುವ ರಿಚಲ್ ಸರ್ವಿಸಸ್ ಕಚೇರಿಯಲ್ಲಿ ಸ.14ರ ಶನಿವಾರದದಂದು ಬೆಳಿಗ್ಗೆ 10ಗಂಟೆಗೆ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಉಳ್ಳಾಲ ತಾಲೂಕು ವ್ಯಾಪ್ತಿಯಲ್ಲಿರುವ ಕರ್ತವ್ಯ ನಿರತ ಹಾಗೂ ನಿವೃತ್ತಿ ಹೊಂದಿದ ಸರಕಾರಿ ನೌಕರರು ಮಾತ್ರ ಭಾಗವಹಿಸಲು ಆಹ್ವಾನಿಸಲಾಗಿದೆ. ಹಾಗೂ ನೌಕರರ ಸಂಘಟನೆಯ ಅಭಿವೃದ್ಧಿ ಮತ್ತು ಪ್ರಮುಖ ಬೇಡಿಕೆಗಳ ಬಗ್ಗೆ ಚರ್ಚಿಸಲು ಈ ಸಭೆ ಮುಖ್ಯವಾಗಿದ್ದು, ದಕ್ಷಿಣ ಕನ್ನಡ ಜಿಲ್ಲಾ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಹಾಗೂ ದಕ್ಷಿಣ ಕನ್ನಡ ನಿವೃತ್ತ ಪಿಂಚಣಿದಾರರ ಸಂಘದ ಜಿಲ್ಲಾ ಅಧ್ಯಕ್ಷರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು ಉಳ್ಳಾಲ ತಾಲೂಕಿನ ಎಲ್ಲಾ ಸರಕಾರಿ ನೌಕರರು ಹಾಗೂ ನಿವೃತ್ತ ನೌಕರರು ಈ ಸಭೆಗೆ ತಪ್ಪದೆ ಹಾಜರಾಗಬೇಕಾಗಿದ್ದು ಹೆಚ್ಚಿನ ವಿವರಿಗಳಿಗಾಗಿ ನಿವೃತ್ತ ತೋಟಗಾರಿಕೆ ಇಲಾಖೆ ನೌಕರರಾದ ಸಿರಿಲ್ ರಾಬರ್ಟ್…
ಉಳ್ಳಾಲ: ಮಲಯಾಳಂ , ತಮಿಳು , ಕನ್ನಡ , ಪಂಜಾಬ್, ಚಲನಚಿತ್ರಗಳ ತಂಡದಿAದ ಹಾಡು ಹಾಡಲು ಸಾಲು ಸಾಲಾಗಿ ಆಫರ್‌ಗಳು ಬಂದಿದ್ದು, ಪ್ರಮುಖವಾಗಿ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಜೊತೆಗೆ ಮತ್ತೊಂದು ಹಾಡು ರೆಕಾರ್ಡಿಂಗ್ ಪೂರ್ಣಗೊಂಡಿದ್ದು ಎಲ್ಲರ ಆಶೀರ್ವಾದವಿದ್ದಲ್ಲಿ ಮತ್ತೊಮ್ಮೆ ಜನಮನ ಗೆಲ್ಲುವ ವಿಶ್ವಾಸ ನನ್ನಲ್ಲಿದೆ ಎಂದು ದ್ವಾಪರ ದಾಟುತ ನನ್ನನೆ ನೋಡಲು ನನ್ನನೆ ಸೇರಲು ಬಂದ ರಾಧಿಕೆ…”ಹಾಡಿನ ಮೂಲಕ ಖ್ಯಾತಿ ಪಡೆದ ಝೀ ಕನ್ನಡ ವಾಹಿನಿಯ ಸರಿಗಮಪ ಖ್ಯಾತಿಯ ಗಾಯಕ ಜಸ್ಕರನ್ ಸಿಂಗ್ ಹೇಳಿದ್ದಾರೆ. ತೊಕ್ಕೊಟ್ಟು ಕಲ್ಲಾಪುವಿನ ಬುರ್ದುಗೋಳಿಯ ಗುಳಿಗ-ಕೊರಗಜ್ಜ ಉದ್ಭವ ಶಿಲೆಯ ಆದಿಸ್ಥಳಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಮಂಗಳೂರಿನ ಕದ್ರಿ ಮತ್ತು ಬುರ್ದುಗೋಳಿಯ ಗುಳಿಗ-ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿದ ಬಳಿಕ ವಿಭಿನ್ನವಾದ ದೈವಿಕ ಭಾವನೆ ಜಾಗೃತಗೊಂಡಿದ್ದು, ಮಂಗಳೂರಿನ ಪ್ರದರ್ಶನದ ಯಶಸ್ಸಿಗೂ ದೈವ,ದೇವರಲ್ಲಿ ಪ್ರಾರ್ಥಿಸಿರುವುದಾಗಿ ಹೇಳಿದರು. ಜೊತೆಗೆ ಸೋಲೊ ಆಲ್ಬಂ ಹಾಡುಗಳನ್ನು ತಯಾರಿಸುತ್ತಿದ್ದು, ಸಿಂಗಲ್ ಪ್ರಾಜೆಕ್ಟ್ ಗಳಿಗೆ ಜಾಸ್ತಿ ಒತ್ತು ಕೊಡುತ್ತಿದ್ದೇನೆ . ಎಲ್ಲರ ಪ್ರೀತಿ ವಿಶ್ವಾಸ…
ತೊಕ್ಕೊಟ್ಟು : ಉಳ್ಳಾಲ ನಗರಕ್ಕೆ ನೀರು ಸರಬರಾಜು ಮಾಡುವ ಪ್ರಥಮ ಹಂತದ ಪ್ರಾಯೋಗಿಕ ಟ್ರಯಲ್ ರೌಂಡ್ ಇಂದು ಆರಂಭಿಸಲಾಗಿದೆ. ಗುಣಮಟ್ಟ ಪರಿಶೀಲಿಸಿದ ನಂತರ ಮೊದಲ ಹಂತದ ಯೋಜನೆಗೆ ಮುಖ್ಯಮಂತ್ರಿಗಳು ಕ್ಷೇತ್ರಕ್ಕೆ ಭೇಟಿ ನೀಡಿ ಚಾಲನೆ ನೀಡಲಿದ್ದಾರೆ ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಹೇಳಿದ್ದಾರೆ.ತೊಕ್ಕೊಟ್ಟು ಚೆಂಬುಗುಡ್ಡೆಯಲ್ಲಿ ಉಳ್ಳಾಲ ನಗರಕ್ಕೆ ಬೇಕಾದಂತಹ ೭೦ ಲಕ್ಷ ಲೀ. ಟ್ಯಾಂಕಿಗೆ ಪಜೀರು ಟ್ರೀಟ್ ಮೆಂಟ್ ಪ್ಲಾö್ಯಂಟ್ ನಿಂದ ಬಿಡುಗಡೆಗೊಳಿಸಿದ ಪ್ರಾಯೋಗಿಕ ಹಂತದ ನೀರು ಬರುವುದನ್ನು ಪರಿಶೀಲಿಸಿದ ಬಳಿಕ ಮಾತನಾಡಿದರು.ಗ್ರಾಮೀಣ ಮತ್ತು ನಗರ ಮಟ್ಟಿಗೆ ೨೪ ಗಂಟೆಗಳ ಕಾಲ ನೀರು ಕೊಡಬೇಕೆಂಬುದು ದೊಡ್ಡ ಕನಸ್ಸು. ಕಳೆದ ಚುನಾವಣೆ ಸಂದರ್ಭ ಮಾತು ಕೊಟ್ಟಂತೆ ಮುಂದಿನ ಕೆಲ ತಿಂಗಳುಗಳಲ್ಲಿ ನಗರ ಹಾಗೂ ಗ್ರಾಮೀಣ ಭಾಗಗಳಿಗೆ ನೀರು ಸರಬರಾಜು ಆಗಲಿದೆ. ೧೯೮ ಕೋಟಿ ರೂ. ಯೋಜನೆಯಡಿ ಸಜಿಪದಲ್ಲಿ ವಾಟರ್ ಜ್ಯಾಕ್ಯುವೆಲ್ ನಿರ್ಮಾಣ ಮಾಡಲಾಗಿದೆ. ಅಲ್ಲಿಂದ ನೀರನ್ನು ಲಿಫ್ಟ್ ಮಾಡಿ ಕೊಣಾಜೆ-ಪಜೀರು ಮಧ್ಯಭಾಗದಲ್ಲಿರುವ ಆಧುನಿಕ ತಾಂತ್ರೀಕೃತ ಟ್ರೀಟ್ ಮೆಂಟ್‌ಗೆ ನೀರು ಬರುತ್ತದೆ . ಅಲ್ಲಿಂದ…
ಮುಡಿಪು: ನಂಬಿಕೆಯಿಂದ ಕೆಲಸ ಮಾಡಿದ್ರೆ ದೈವ ದೇವರ ಅನುಗ್ರಹ ಖಂಡಿತಾ ಇರುತ್ತದೆ. ಕಾರಣಿಕ ಕ್ಷೇತ್ರವಾದ ಅಸೈಗೋಳಿಯ ಶ್ರೀ ಗುಳಿಗ ಕೊರಗಜ್ಜ ಕ್ಷೇತ್ರದ ಜೀರ್ಣೋದ್ಧಾರದ ಕಾರ್ಯ ನಡೆಯಲಿದ್ದು ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವದ ಕಾರ್ಯವು ಎಲ್ಲರ ಸಹಕಾರದೊಂದಿಗೆ ನಿರ್ವಿಘ್ನವಾಗಿ ನಡೆಯುವಂತಾಗಲಿ ಎಂದು ನಿವೃತ್ತ ಮುಖ್ಯೋಪಾಧ್ಯಾಯರಾದ ರವೀಂದ್ರ ರೈ ಕಲ್ಲಿಮಾರ್ ಅವರು ಹೇಳಿದರು. ಅವರು ಅಸೈಗೋಳಿಯ ಶ್ರೀ ಗುಳಿಗ ಹಾಗೂ ಕೊರಗಜ್ಜ ಕ್ಷೇತ್ರದ ಜೀರ್ಣೋದ್ಧಾರ, ಪುನರ್ ಪ್ರತಿಷ್ಞೆ ಮತ್ತು ಶ್ರೀ ಗುಳಿಗ ದೈವಕ್ಕೆ ಚಿನ್ನದ ಆಭರಣ ಹಾಗೂ ಶ್ರೀ ಕೊರಗಜ್ಜ ದೈವಕ್ಕೆ ಚಿನ್ನದ ಮುಟ್ಟಾಲೆ ಸಮರ್ಪಿಸುವ ಪ್ರಯುಕ್ತ ಶ್ರೀ ಗುಳಿಗ ಹಾಗೂ ಕೊರಗಜ್ಜ ಸೇವಾ ಸಮಿತಿ ಆಶ್ರಯದಲ್ಲಿ ಅಸೈಗೋಳಿಯ ಬಂಟರಭವನದಲ್ಲಿ ಭಾನುವಾರ ನಡೆದ ವಿಜ್ಞಾಪನಾ ಪತ್ರ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ದೇವಿ ಶಕ್ತಿ ಜೊತೆಗೆ ಮಾನವ ಶಕ್ತಿ ಜೊತೆ ಸೇರಿದಾಗ ಕ್ಷೇತ್ರ ಅಭಿವೃದ್ಧಿಯಾಗುತ್ತದೆ. ಈ ನಿಟ್ಟಿನಲ್ಲಿ ನಾವೆಲ್ಕರೂ ಒಟ್ಟು ಸೇರಿ ಪುಣ್ಯ ಕಾರ್ಯದಲ್ಲಿ ತೊಡಗಿಸಿಕೊಳ್ಳೋಣ ಎಂದರು.ಶಾಂತಿಪಳಿಕೆ ವರ್ಕಾಡಿ ಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಜಯಪ್ರಕಾಶ್ ಶೆಟ್ಟಿ…
ಬಂಟ್ವಾಳ: ಹಿಂದೂ ಹಬ್ಬ ಹರಿದಿನಗಳು, ಬ್ರಹ್ಮಕಲಶೋತ್ಸವ ಪ್ರಯುಕ್ತ ನಡೆಯುವ ಮೆರವಣಿಗೆಯ ಸಂದರ್ಭ ಮುಸ್ಲಿಂ ಬಾಂಧವರು ಸೌಹಾರ್ದತೆಯ ದೃಷ್ಟಿ ಯಿಂದ ಹಿಂದೂಗಳಿಗೆ ಪಾನೀಯ ಅಥವಾ ಸಿಹಿತಿಂಡಿಗಳನ್ನು ಅಲ್ಲಲ್ಲಿ ಹಂಚುವ ಸಾಂಪ್ರದಾಯ ಒಂದು ಕಡೆ ನಡೆದರೆ ಬಂಟ್ವಾಳದಲ್ಲಿ ಗಣೇಶೋತ್ಸವ ಮೆರವಣಿಗೆಯಲ್ಲಿ ಇಂತಹ ಸೌಹಾರ್ಧತೆಗೆ ಬ್ರೇಕ್ ಹಾಕುವ ಮೂಲಕ ಚರ್ಚೆಗೆ ಗ್ರಾಸವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬೋಳಂತೂರು ಗಣೇಶೋತ್ಸವ ಮೆರವಣಿಗೆಯಲ್ಲಿ ಪಾನೀಯ ತಿಂಡಿ-ತಿನಸು ಹಂಚದಂತೆ ಮಸೀದಿಯೊಂದಕ್ಕೆ ಗಣೇಶೋತ್ಸಸಮಿತಿ ಆಯೋಜಕರು ಪತ್ರದ ಮೂಲಕ ಮನವಿಯೊಂದನ್ನು ನೀಡಿದ್ದಾರೆ. ಗಣೇಶೋತ್ಸವ ಮೆರವಣಿಗೆಯಲ್ಲಿ ಸಿಹಿ ತಿಂಡಿ, ತಂಪು ಪಾನೀಯ ಹಂಚಬೇಡಿ .ಕಳೆದ ವರ್ಷ ಮುಸಲ್ಮಾನ್ ಸಮಾಜ ಭಾಂದವರು ಹಂಚಿದ ಸಿಹಿ ತಿಂಡಿ ತಿಂದು ನಮ್ಮ ಕೆಲವು ಮಕ್ಕಳು ಅಸ್ವಸ್ಥರಾಗಿದ್ದಾರೆ ಎಂದು ಶ್ರೀ ಸಿದ್ಧಿವಿನಾಯಕ ವಿಶ್ವಸ್ಥ ಮಂಡಳಿಯಿಂದ ಬೋಳಂತೂರು ಮಸೀದಿಗೆ ಪತ್ರ ಬರೆಯಲಾಗಿದೆ.ಕಳೆದ ವರ್ಷ ಗಣೇಶೋತ್ಸವ ಮೆರವಣಿಗೆ ವೇಳೆ ತಂಪು -ಪಾನೀಯ ಸಿಹಿ ತಿಂಡಿ ಹಂಚಿದ್ದ ಮುಸ್ಲಿಂ ಯುವಕರುಆದರೆ ತಂಪು ಪಾನೀಯ ಸಿಹಿ ತಿಂಡಿ ಸೇವಿಸಿದ ಹಿಂದೂ ಮಕ್ಕಳು ಅಸ್ವಸ್ಥ…
ಬಂಟ್ವಾಳ: ಭೀಕರ ರಸ್ತೆ ಅಪಘಾತದಲ್ಲಿ ನವ ವಿವಾಹಿತೆ ಮೃತಪಟ್ಡು ಪತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಂಟ್ವಾಳ ತಾಲೂಕಿನ ತಲಪಾಡಿ ಎಂಬಲ್ಲಿ ಶನಿವಾರ ನಡೆದಿದೆ.ನವವಿವಾಹಿತೆ ಮಾನಸ ಮೃತಪಟ್ಟಿದ್ದು ಪತಿ ಅನಿಶ್ ಕೃಷ್ಣ ಗಂಭೀರ ಗಾಯಗೊಂಡು ಆಸ್ಪತ್ರೆ ಗೆ ದಾಖಲಿಸಲಾಗಿದೆ. ಪೆರ್ನೆ ಸಮೀಪದ ಒಡ್ಯದಗಯ ನಿವಾಸಿ ಅನಿಶ್ ಕೃಷ್ಣ ಹಾಗೂ ಪತ್ನಿ ಬಿ.ಸಿ.ರೋಡ್ ಕಡೆಯಿಂದ ಮಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ ಆಲ್ಟೋ ಕಾರು ನಿಯಂತ್ರಣ ಕಳೆದುಕೊಂಡು ಡಿವೈಡರ್ ಹಾರಿ ಕೆ.ಎಸ್.ಆರ್‌ಟಿ.ಸಿ ಬಸ್ ಗೆ ಡಿಕ್ಕಿಹೊಡೆದಿದೆ. ಮದುವೆ ಕಾರ್ಯಕ್ರಮದ ವಿಚಾರವಾಗಿ ಕೆಲವೊಂದು ಲೆಕ್ಕಾಚಾರ ಮಾಡಲು ದೇಂತಡ್ಕ ದೇವಸ್ಥಾನಕ್ಕೆ ನವದಂಪತಿಗಳಿಬ್ಬರು ಬಂದಿದ್ದು ವಾಪಸು ಮನೆಗೆ ಹೋಗುವ ವೇಳೆ ಘಟನೆ ನಡೆದಿದೆ.ಘಟನೆಯಿಂದ ಗಂಭೀರವಾಗಿ ಗಾಯಗೊಂಡ ಅನಿಶ್ ಕೃಷ್ಣ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆಯಿಂದ ಹೆದ್ದಾರಿಯಲ್ಲಿ ಕೆಲ ಹೊತ್ತು ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಸೆ.5 ರಂದು ದೇಂತಡ್ಕ ದೇವಸ್ಥಾನದಲ್ಲಿ ಮದುವೆ ನಡೆದಿತ್ತು. ಇಬ್ಬರು ಮಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು .ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಪೋಲೀಸರು ಭೇಟಿ ನೀಡಿ ಪ್ರಕರಣ…
ತೊಕ್ಕೊಟ್ಟು: ಜೇನ ದನಿಯೋಳೆ ಮೀನ ಕಣ್ಣೋಳೆ, ಸೊಬಗೆ ಮೈತುಂಬಿದೆ…ಸದ್ಯ ಕನ್ನಡ ಸಿನಿಮಾದ ಈ ಹಾಡು ಭಾರೀ ಸುದ್ದಿಯಲ್ಲಿದೆ. ದ್ವಾಪರ ದಾಟುತ ನನ್ನನೇ ನೋಡಲು ನನ್ನನ್ನೇ ಸೇರಲು ಎಂಬ ಈ ಹಾಡನ್ನು ಕೇಳದವರೇ ಇಲ್ಲ ಎಂದರೂ ತಪ್ಪಾಗಲ್ಲ. ಈ ಹಾಡಿಗೆ ಧ್ವನಿಯಾಗಿ ಸಾಹಿತ್ಯಕ್ಕೆ ಜೀವ ತುಂಬಿದ ಗಾಯಕ ಜಸ್ಕರ್ ಸಿಂಗ್ ನಾಳೆ ಕಲ್ಲಾಪು ಕೊರಗಜ್ಜ ಸಾನಿಧ್ಯಕ್ಕೆ ಭೇಟಿ ನೀಡಲಿದ್ದಾರೆ. ಹೌದು..ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ಆಗಿ ವೈರಲ್ ಆಗುತ್ತಿರುವ ಹಾಡಿನಲ್ಲಿ ಸಖಿ ಸಖಿ ಅನ್ನೋ ಹಾಡು ಕೂಡ ಒಂದು.ಗೊಲ್ಡನ್ ಸ್ಟಾರ್ ಗಣೇಶ್ ಅಭಿನಯದ ಕೃಷ್ಣಂ ಪ್ರಣಯ ಸಖಿ ಚಿತ್ರದ ಈ ಹಾಡಿಗೆ ಸ್ಟೆಪ್ ನ ಹಾಕದವರೇ ಇಲ್ಲ. ರೀಲ್ಸ್ ಮಾಡದವರೇ ಇಲ್ಲ ಅನ್ನುವಷ್ಟರ ಮಟ್ಟಿಗೆ ಈ ಹಾಡು ಪಾಪ್ಯುಲರಿಟಿಯನ್ನು ಪಡೆದಿದೆ. ಹಾಡು ಬಿಡುಗಡೆಯಾದ ದಿನವೇ ಲಕ್ಷಾಂತರ ಜನರ ಬಾಯಲ್ಲಿ ಹಾಗೂ ಮೊಬೈಲ್ ರಿಂಗ್ ಟೋನ್, ಕಾಲರ್ ಟೋನ್ ಆಗಿ ಈ ಹಾಡು ಸದ್ದು ಮಾಡಿದೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನದ, ಡಾ. ವಿ. ನಾಗೇಂದ್ರ…
ತಲಪಾಡಿ: ಶಿಕ್ಷಣ ಹೇಗೆ ಮುಖ್ಯವೋ, ಹಾಗೆಯೇ ಶಿಕ್ಷಣ ನೀಡುವ ಗುರು ಅಷ್ಟೇ ಮುಖ್ಯ. ಗುರುವಿಲ್ಲದೆ ಗುರಿಯನ್ನು ತಲುಪುವುದು ಬಹಳ ಕಷ್ಟ ಎಂದು ತುಳುನಾಡು ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷ ಡಾ. ಎಂ. ಬಿ. ಪುರಾಣಿಕ್ ಹೇಳಿದರು.ಅವರು ತಲಪಾಡಿಯ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‌ನ, ಭೂವರಾಹ ಸಭಾಂಗಣದಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಶಾರದಾ ಸಮೂಹ ಸಂಸ್ಥೆಗಳ ಶಿಕ್ಷಕ- ಶಿಕ್ಷಕೇತರ ಬಂಧುಗಳಿಗೆ ಹಮ್ಮಿಕೊಳ್ಳಲಾದ ಗೌರವಾರ್ಪಣೆಯ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿ ಮಾತನಾಡಿದರು.ಪ್ರತಿ ವ್ಯಕ್ತಿಯೂ ತಮ್ಮ ಜೀವನದಲ್ಲಿ ತಂದೆ ತಾಯಿಯ ನಂತರದ ಸ್ಥಾನವನ್ನು ಒಬ್ಬ ಗುರುವಿಗೆ ನೀಡುತ್ತಾರೆ. ಉತ್ತಮ ಶಿಕ್ಷಣ ನೀಡುವುದರ ಜೊತೆಗೆ, ಶಿಕ್ಷಣದ ಮೂಲಾರ್ಥವವನ್ನು ತಿಳಿಸಿ ಪ್ರತಿ ವ್ಯಕ್ತಿಯ ಬದಕನ್ನು ಬೆಳಗುವವರು ಶಿಕ್ಷಕರಾಗಿರುವುದರಿಂದ, ಇಡೀ ಪ್ರಪಂಚವೇ ಅವರನ್ನು ಅಗ್ರಸ್ಥಾನದಲ್ಲಿಟ್ಟು ಪೂಜಿಸುತ್ತದೆ. ಪ್ರತಿಯೊಬ್ಬ ವ್ಯಕ್ತಿಯು ಜೀವನದಲ್ಲಿ ಏನನ್ನಾದರೂ ಸಾಧನೆ ಮಾಡಬೇಕು ಎಂದರೆ ಅವನ ಹಿಂದೆ ಪ್ರಮುಖ ಪಾತ್ರ ವಹಿಸುವುದು ಒಬ್ಬ ಗುರು ಎಂದರು.ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಸಾಧನೆಗೈದ ಡೊಂಗರಕೇರಿ ಕೆನರಾ ಹೆಣ್ಣು ಮಕ್ಕಳ ಶಾಲೆಯ ನಿವೃತ್ತ ಮುಖ್ಯೋಪಧ್ಯಾಯಿನಿ…

