ಉಳ್ಳಾಲ: ಪಂಚಾಯತ್ ನಿಂದ ಪೂರೈಕೆಯಾಗುವ ನೀರು ಸರಬರಾಜು ಒಂದು ವಾರದಿಂದ ಸ್ಥಗಿತಗೊಂಡ ಕಾರಣ ಉಳ್ಳಾಲ ತಾಲೂಕಿನ ಬೋಳಿಯಾರ್ ನ ಅಮೆಮಾರ್ ಗ್ರಾಮಸ್ಥರು ಸಂಕಷ್ಟಕ್ಕೆ ಸಿಲುಕಿದ್ದು, ಸದ್ಯ ಕೊಳಕು ನೀರನ್ನೇ ಬಳಕೆ ಮಾಡುವ ಅನಿವಾರ್ಯತೆ ಎದುರಾಗಿದೆ. ಬೋಳಿಯಾರ್ ಗ್ರಾ.ಪಂ ವ್ಯಾಪ್ತಿಯ ಅಮೆಮಾರ್ ಭಾಗದ ಹಲವು ಮನೆಗಳು ಪಂಚಾಯತ್ ನೀರನ್ನೇ ನಂಬಿದ್ದು, ಬಾವಿ ಕೂಡ ಇಲ್ಲದ ಕಾರಣ ನೀರಿಗೆ ಸಮಸ್ಯೆ ಎದುರಾಗಿದೆ. ಸದ್ಯ ಒಂದು ವಾರದಿಂದ ನಳ್ಳಿ ನೀರು ಪೂರೈಕೆ ಸ್ಥಗಿತಗೊಂಡ ಕಾರಣ ಕುಡಿಯಲು ಹಾಗೂ ಜೀವನೋಪಾಯಕ್ಕಾಗಿ ನೀರಿಗೆ ಬರಗಾಲ ಎದುರಾಗಿದೆ. ಹೀಗಾಗಿ ಸ್ಥಳೀಯರಾದ ಯಶೋಧರ ಶೆಟ್ಟಿ ಎಂಬವರು ಪಂಚಾಯತ್ ಪಿಡಿಓಗೆ ದೂರು ನೀಡಿದ್ದು, ನೀರಿನ ಸಮಸ್ಯೆ ಬಗೆಹರಿಸುವಂತೆ ವಿನಂತಿಸಿಕೊಂಡಿದ್ದಾರೆ. ಸುತ್ತಮುತ್ತಲಿನ ಹಲವು ಮನೆಗಳಿಗೆ ನೀರು ಪೂರೈಕೆ ಆಗದೇ ಸಂಕಷ್ಟ ಎದುರಾಗಿದೆ. ಸದ್ಯ ಕೊಳಕು ನೀರು ಒಮ್ಮೊಮ್ಮೆ ಪೂರೈಕೆಯಾಗ್ತಿದ್ದು, ಕುಡಿಯಲು ಕೂಡ ಯೋಗ್ಯವಾಗಿಲ್ಲ. ಸ್ಥಳೀಯವಾಗಿ ಇರೋ ರಾಜಕೀಯದ ಕಾರಣದಿಂದಲೇ ನೀರು ಪೂರೈಕೆ ಸಮಸ್ಯೆ ಎದುರಾಗಿದೆ ಎಂಬ ಆರೋಪವಿದೆ. ಒಂದು ರಾಜಕೀಯ ಪಕ್ಷಕ್ಕೆ ಸೇರಿದ ಜನರೇ…
Author: UllalaVani
ತೊಕ್ಕೊಟ್ಟು : ಪಜೀರು ಅಕ್ರಮ ಕಲ್ಲು ಕ್ವಾರೆಯಿಂದಾಗಿ ಸ್ಥಳೀಯ ಮನೆಗಳ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ನೀರಿನ ಒರತೆ ಕಡಿಮೆಯಾಗಿ, ಕೃಷಿಕರು ವಲಸೆ ಹೋಗುವ ಸ್ಥಿತಿ ನಿರ್ಮಾಣಗೊಂಡಿದ್ದು, ಸಾರ್ವಜನಿಕರು ನಡೆದಾಡದಂತಹ ಸ್ಥಿತಿಯನ್ನು ನಿರ್ಮಿಸಿದ ಕ್ವಾರೆ ಎಲ್ಲಾ ಅನುಮತಿಗಳನ್ನು ಸ್ಥಳ ಪರಿಶೀಲನೆ ನಡೆಸಿ ರದ್ದುಗೊಳಿಸಬೇಕು ಹಾಗೂ ಈವರೆಗೆ ಸಾಗಾಟ ನಡೆಸಿದ ರಾಜಸ್ವವನ್ನು ಇಲಾಖೆ ವಸೂಲಿ ಮಾಡಬೇಕು ಎಂದು ಕ್ವಾರೆ ಸಂತ್ರಸ್ತರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕರ ಕಚೇರಿಗೆ ದೂರು ಸಲ್ಲಿಸಿದೆ.ಉಳ್ಳಾಲ ತಾಲೂಕು ಪಜೀರು ಗ್ರಾಮದ ನಾಗಬನ ಎಂಬಲ್ಲಿ ಸರ್ವೆ ನಂಬರ್ 139/C ರಲ್ಲಿ ಪಜೀರು ಗ್ರಾಮ ಪಂಚಾಯಿತಿ ಹಾಲಿ ಸದಸ್ಯ ಭರತ್ ಶೆಟ್ಟಿ ಯಾನೆ ಬಂಟಪ್ಪ ಶೆಟ್ಟಿ ಎಂಬವರು ಕಾನೂನು ಬಾಹಿರವಾಗಿ ಪರಿಸರ, ಸಾರ್ವಜನಿಕರ, ಜಾನುವಾರುಗಳ ಪ್ರಾಣಕ್ಕೆ ಮತ್ತು ಸ್ಥಳೀಯ ಮನೆಗಳ, ಹಟ್ಟಿ, ಕೊಟ್ಟಿಗೆ ಕೃಷಿ ಚಟುವಟಿಕೆಗಳಿಗೆ ಅಪಾಯಕಾರಿಯಾಗಿ ಕಲ್ಲು ಕ್ವಾರಿ ಗಣಿಗಾರಿಕೆಯನ್ನು ಹಲವು ವರ್ಷಗಳಿಂದ ನಡೆಸಿಕೊಂಡು ಬಂದಿದ್ದಾರೆ.ನಿಯಮ ಮೀರಿ ಬಹಳಷ್ಟು ಆಳವಾಗಿ ಮತ್ತು ನಿಗದಿತ ವ್ಯಾಪ್ತಿ ಮೀರಿ ಗಣಿಗಾರಿಕೆ ನಡೆಸಿ…
ತೊಕ್ಕೊಟ್ಟು: ಅಪ್ಪಟ ತುಳುವನಾಗಿ, ಅಜ್ಜನ ಭಕ್ತನಾಗಿ ತುಳು ಭಾಷೆ ಮಣ್ಣಿಗಾಗಿ ದುಡಿದವನು ಎಂದಿಗೂ ಅಜ್ಜನ ಕಾರಣಿಕವನ್ನಷ್ಟೇ ತೋರಿಸುವ ಪ್ರಯತ್ನ ಮಾಡಿದ್ದೇವೆ. ಮನಸ್ಸಿಗೆ ಹಗುರವಾಗುವ ಭಾವನೆಯನ್ನು ಕಲ್ಲಾಪು ಬುರ್ದುಗೋಳಿ ಗುಳಿಗ ಕೊರಗಜ್ಜ ಉದ್ಭವ ಶಿಲೆಯ ಆದಿಸ್ಥಳ ನೀಡುತ್ತದೆ. ಒಮ್ಮೆ ಬಂದಲ್ಲಿ ಇಲ್ಲಿಂದ ಹೋಗುವ ಮನಸ್ಸಾಗುವುದಿಲ್ಲ. ಮನಸ್ಸಲ್ಲಿ ಏನು ಬೇಸರವಿದ್ದರೂ ಇಲ್ಲಿಗೆ ಬಂದಾಗ ಅದನ್ನು ಕಳೆಯುತ್ತೇವೆ ಎಂದು ಇಂದು ರಾಜ್ಯಾದ್ಯಂತ ತೆರೆಕಾಣಲಿರುವ ಕನ್ನಡ ಚಲನಚಿತ್ರ ಕಲ್ಜಿಗ ಚಿತ್ರದ ನಾಯಕ ನಟ ಅರ್ಜುನ್ ಕಾಪಿಕಾಡ್ ಹೇಳಿದರು.ಅವರು ಕಲ್ಲಾಪು ಬುರ್ದುಗೋಳಿ ಗುಳಿಗ ಕೊರಗಜ್ಜ ಉದ್ಭವ ಶಿಲೆಯ ಆದಿಸ್ಥಳಕ್ಕೆ ಭೇಟಿ ನೀಡಿ ಪ್ರಾರ್ಥನೆ ನಡೆಸಿ ಮಾತನಾಡಿದರು.ಚಿತ್ರದ ಪ್ರೀಮಿಯರ್ ಷೋ ವೀಕ್ಷಿಸಿರುವ ಪ್ರೇಕ್ಷಕರು ವಿಶಿಷ್ಟವಾದ ಪ್ರೀತಿಯನ್ನು ನೀಡುತ್ತಿದ್ದಾರೆ. ಚಲನಚಿತ್ರ ತಂಡದ ಮೇಲೆ ಅಜ್ಜನ ಆಶಿರ್ವಾದ ಇದೆ ಅನ್ನುವುದು ಚಿತ್ರದ ಶೂಟಿಂಗ್ ನಿಂದ ಹಿಡಿದು ಈವರೆಗೆ ನಡೆದ ಸನ್ನಿವೇಶಗಳೆಲ್ಲವೂ ತೋರಿಸಿಕೊಟ್ಟಿದೆ.ಅಪ್ಪಟ ತುಳುವನಾಗಿ, ಅಜ್ಜನ ಭಕ್ತನಾಗಿ ತುಳು ಭಾಷೆ ಮಣ್ಣಿಗಾಗಿ ದುಡಿದವನು ಎಂದಿಗೂ ಅಜ್ಜನ ಕಾರಣಿಕವನ್ನಷ್ಟೇ ತೋರಿಸುವ ಪ್ರಯತ್ನ ಮಾಡಿದ್ದೇವೆ ಹೊರತಾಗಿ ಅಜ್ಜನ…
ಉಳ್ಳಾಲ: ಸ್ಪೀಕರ್ ಹುದ್ದೆಯನ್ನು ತುಳುನಾಡಿನ ಯುವಕ ಸಾಧಿಸಲು ಸಾಧ್ಯವೇ ಅನ್ನುವ ಪ್ರಶ್ನೆಗೆ ಕರಾವಳಿಯ, ತುಳು ಭಾಷಿಗನಾಗಿ ಉತ್ತರವನ್ನು ಕೊಟ್ಟಿದ್ದೇನೆ. ಇಂತಹ ಸ್ಪೀಕರ್ ಹುದ್ದೆಯನ್ನು ಅಲಂಕರಿಸಲು ಅವಕಾಶ ಕಲ್ಪಿಸಿಕೊಟ್ಟ ಎಲ್ಲಾ ಕ್ಷೇತ್ರದ ಬಾಂಧವರಿಗೆ ಅಭಿನಂದನೆಗಳು ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಹೇಳಿದರು.ಬೀರಿ ಕೋಟೆಕಾರು ಸಾರ್ವಜನಿಕ ಶ್ರೀ ಗಣೇಶೋತ್ಸವದ ಭವ್ಯ ಶೋಭಾಯಾತ್ರೆ ಸಂದರ್ಭ ಕರ್ನಾಟಕ ಮತ್ತು ಕೇರಳದ ಪ್ರಸಿದ್ಧ ಕಲಾವಿದರು ಬೀರಿ ಜಂಕ್ಷನ್ನಿನಲ್ಲಿ ನಡೆಸಿಕೊಟ್ಟ ಸಂಗೀತ ರಸಮಂಜರಿ ಕಾರ್ಯಕ್ರಮ ಬೀರಿ ಮ್ಯೂಸಿಕ್ ಫೆಸ್ಟಿವಲ್ 2024 ರಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.ಸಹಕಾರಿ ಮಿತ್ರರು ಬೀರಿ , ಮಿತ್ರತ್ವದ ಸಂದೇಶದೊಂದಿಗೆ ಪ್ರಥಮ ಬಾರಿಗೆ ಕಾರ್ಯಕ್ರಮ ಆಯೋಜಿಸಿದ್ದಾರೆ. ಪ್ರತಿ ವರ್ಷವೂ ಭಗವಂತ ಅವರಿಗೆ ಶಕ್ತಿಯನ್ನು ನೀಡಿ ಯಶಸ್ವಿಯಾಗಿ ಕಾರ್ಯಕ್ರಮ ನಡೆಸುವ ಶಕ್ತಿಯನ್ನು ನೀಡುವುದರ ಜೊತೆಗೆ ಸಮಾಜದಲ್ಲಿ ಹಿಂದೆ ಉಳಿದವರನ್ನು ಕೈಹಿಡಿದು ಮುಂದೆ ಕೊಂಡುಹೋಗುವ ಜವಾಬ್ದಾರಿ ನಿಮ್ಮದಾಗಲಿ ಎಂದು ಹಾರೈಸಿ, ತಾನು ಎಷ್ಟೇ ದೊಡ್ಡ ಹುದ್ದೆಯನ್ನು ಅಲಂಕರಿಸಿದರೂ ಯು.ಟಿ.ಖಾದರ್ ಕ್ಷೇತ್ರಕ್ಕೆ ಶಾಸಕನಾಗಿಯೇ ಉಳಿಯುತ್ತಾನೆ. ಕ್ಷೇತ್ರದ ಜನರಿಗೆ ಕೊಟ್ಟ ವಿಶ್ವಾಸಗಳನ್ನು 100ಕ್ಕೆ…
ಕುತ್ತಾರು: ಮುನ್ನೂರು ಗ್ರಾಮ ಪಂಚಾಯತ್ ಇದರ ವಾರ್ಷಿಕ ಜಮಾಬಂದಿ ಕಾರ್ಯಕ್ರಮ ಸೆ.12(ಇಂದು) ಪಂಚಾಯತ್ ಸಭಾಭವನದಲ್ಲಿ ಜರಗಲಿದ್ದು, ಗ್ರಾಮಸ್ಥರು ಹಾಜರಾಗಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಕರ್ನಾಟಕ ಸರಕಾರ ಗ್ರಾ.ಪಂ ಆಡಳಿತ ಪಾರದರ್ಶಕವಾಗಿರಬೇಕು ಎಂಬ ಉದ್ದೇಶದಿಂದ ಕಂದಾಯ ಇಲಾಖೆಯಲ್ಲಿದ್ದಂತೆ ವಾರ್ಷಿಕ ಜಮಾಬಂದಿ ಕಾರ್ಯಕ್ರಮ ಜಾರಿಗೊಳಿಸಿದೆ. ಕಾರ್ಯಕ್ರಮದಲ್ಲಿ ಆಡಳಿತ ನಿರ್ವಹಣೆ, ದರ ಮತ್ತು ತೆರಿಗೆ ವಸೂಲಿ, ಪಂಚಾಯತ್ ಆಸ್ತಿಗಳ ನಿರ್ವಹಣೆ, ಅನುದಾನ ಬಳಕೆ, ಸಾರ್ವಜನಿಕ ಸುರಕ್ಷತೆ ಗ್ರಾಮ ಪಂಚಾಯಿತಿನಿಂದ ಕಾರ್ಯಗತಗೊಳಿಸುವ ಸಾರ್ವಜನಿಕ ಕಾಮಗಾರಿ, ನಾಗರಿಕ ಸೌಕರ್ಯಗಳು ಮತ್ತು ಋಣ ಶೀರ್ಷಿಕೆಗಳ ಪಾವತಿ ಪರಿಶೀಲಿಸುವ ಕಾರ್ಯಕ್ರಮ ಒಳಗೊಂಡಿರುತ್ತದೆ. ಜಮಾ ಬಂದಿ ಅಧಿಕಾರಿಗಳಾಗಿ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಪ್ರವೀಣ್ ಉಪಸ್ಥಿತರಿರುವರು ಎಂದು ಪಂ.ಅಭಿವೃದ್ಧಿ ಅಧಿಕಾರಿ ಶ್ರೀಕಾಂತ್ ಸಿಂಪಿಗೇರ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಸರ್ವರನ್ನು ಅಧ್ಯಕ್ಷರು ವಿಶಾಲಾಕ್ಷಿ, ಉಪಾಧ್ಯಕ್ಷರಾದ ಮಹಾಬಲ ಟಿ. ದೆಪ್ಪೆಲಿಮಾರ್ ಗ್ರಾಮಸ್ಥರು ಹಾಜರಿರುವಂತೆ ಕೋರಿದ್ದಾರೆ.
ಉಳ್ಳಾಲ: ಅನಾರೋಗ್ಯದಿಂದ ಸಾರ್ವಜನಿಕ ವಲಯದಲ್ಲಿ ದಾಂಧಲೆ ನಡೆಸುತ್ತಿದ್ದ ಹಸುವನ್ನು ಸ್ಥಳೀಯರು ಹಗ್ಗದ ಮೂಲಕ ಕಟ್ಟಿ ಹಾಕಿ ನಿಯಂತ್ರಣಕ್ಕೆ ತಂದಿದ್ದು, ಪಶುವೈದ್ಯಾಧಿಕಾರಿಗಳು ಅರಿವಳಿಕೆ ಔಷಧ ನೀಡುತ್ತಿದ್ದಂತೆ ಹಸು ಸಾವನ್ನಪ್ಪಿದೆ.ಸೋಮೇಶ್ವರ ಪುರಸಭೆ ವ್ಯಾಪ್ತಿಯ ಕೊಲ್ಯದ ಅಡ್ಕ ಸಮೀಪ ಹಸುವೊಂದು ಮನೆಯೊಂದರ ಆವರಣದೊಳಕ್ಕೆ ನುಗ್ಗಿ ದಾಂಧಲೆ ನಡೆಸುವುದರ ಜೊತೆಗೆ ಸ್ಕೂಟರ್, ಮಹಿಳೆ ಸೇರಿದಂತೆ ಅನೇಕರ ಮೇಲೆ ದಾಳಿ ನಡೆಸಿತ್ತು. ಸ್ಥಳೀಯರು ಸೇರಿ ಹಗ್ಗದ ಸಹಾಯದಿಂದ ಹಸುವನ್ನು ಕಟ್ಟುವ ಮೂಲಕ ನಿಯಂತ್ರಣಕ್ಕೆ ತಂದಿದ್ದಾರೆ. ಈ ಕುರಿತು ಪುರಸಭೆ ಉಪಾಧ್ಯಕ್ಷ ರವಿಶಂಕರ್ ಅವರಿಗೆ ಮಾಹಿತಿ ದೊರೆತಿದ್ದು, ಸ್ಥಳಕ್ಕಾಗಮಿಸಿ ಹಸುವನ್ನು ಕಟ್ಟಿಹಾಕುವಲ್ಲಿ ಅವರು ಕೈಜೋಡಿಸಿದರು. ಈ ಬಗ್ಗೆ ಮಾಹಿತಿ ಪಡೆದ ಸ್ಪೀಕರ್ ಯು.ಟಿ.ಖಾದರ್ ಅವರು ಪಶುವೈದ್ಯಾಧಿಕಾರಿಗಳ ತಂಡವನ್ನು ಸ್ಥಳಕ್ಕೆ ಕಳುಹಿಸಿದ್ದಾರೆ. ಅವರು ತಪಾಸಣೆ ನಡೆಸಿ ಹಸುವಿನ ವರ್ತನೆಯನ್ನು ಗಮನಿಸಿ ರೇಬಿಸ್ ಎಂದು ಶಂಕೆ ವ್ಯಕ್ತಪಡಿಸಿದರು. ನಂತರ ಅರಿವಳಿಕೆ ನೀಡಿದ ಸ್ವಲ್ಪ ಹೊತ್ತಿನಲ್ಲಿ ಹಸು ಮೃತಪಟ್ಟಿದೆ.ಗಾಯಕ್ಕೆ ಜೊಲ್ಲು ತಗಲಬಾರದು : ಡ| ಗಜೇಂದ್ರ ಎಚ್ಚರಿಕೆಕೋಟೆಕಾರು ಸರಕಾರಿ ಪಶು ಆಸ್ಪತ್ರೆಯ ಪಶು ವೈಧ್ಯಾಧಿಕಾರಿ…
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷರಾಗಿ ಯುವನ್ಯಾಯವಾದಿ ಮಹಮ್ಮದ್ ಅಸ್ಗರ್ ಮುಡಿಪು ಆಯ್ಕೆಯಾಗಿದ್ದಾರೆ.ಬಿಜೆಪಿ ಬೂತ್ ಅಧ್ಯಕ್ಷನಾಗಿ, ಪಜೀರು ಗ್ರಾಮದ ಪ್ರಧಾನ ಕರ‍್ಯದರ್ಶಿಯಾಗಿ, ಮಂಗಳೂರಯು ವಿಧಾನಸಭಾ ಕ್ಷೇತ್ರ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಪ್ರಧಾನ ಕರ‍್ಯದರ್ಶಿಗಳಾಗಿ ಕಾರ್ಯನಿರ್ವಹಿಸಿರುತ್ತಾರೆ.
ಮಂಗಳೂರು: ತುಳು ತಿಗಳಾರಿ ಲಿಪಿಗೆ ಯುನಿಕೋಡ್ ಅನುಮೋದನೆ ನೀಡಿರುವ ವಿಚಾರಕ್ಕೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅಭಿನಂದನೆ ವ್ಯಕ್ತಪಡಿಸಿದ್ದಾರೆ.ತುಳು ತಿಗಳಾರಿ ಲಿಪಿಗೆ ಯುನಿಕೋಡ್ ಅನುಮೋದನೆ ನೀಡಿರುವ ವಿಚಾರ ಈಗಾಗಲೇ ಮಾಧ್ಯಮಗಳಲ್ಲಿ ಪ್ರಕಟಗೊಂಡಿದೆ. ಸಂಶೋಧಕಿ ವೈಷ್ಣವಿ ಮೂರ್ತಿ ಹಾಗೂ ವಿನೋದ್ ರಾಜನ್ ಅವರು ದಾಖಲೆ ಸಮೇತ ಸಲ್ಲಿಸಿದ ಪ್ರಸ್ತಾವನೆಗೆ ಈ ಅನುಮೋದನೆ ನೀಡಲಾಗಿದೆ ಎಂಬುದನ್ನು ಯುನಿಕೋಡ್ ತನ್ನ ಅಂತರ್ಜಾಲ ಮಾಹಿತಿಯಲ್ಲಿ ಉಲ್ಲೇಖಿಸಿದೆ. ವೈಷ್ಣವಿ ಮೂರ್ತಿ ಹಾಗೂ ವಿನೋದ್ ರಾಜನ್ ಅವರ ಪ್ರಯತ್ನವನ್ನು ಮನಪೂರ್ವಕವಾಗಿ ಅಭಿನಂದಿಸುತ್ತೇನೆ.ಸುದೀರ್ಘ ಅವಧಿಯಲ್ಲಿ ಸಾಕಷ್ಟು ದಾಖಲೆಗಳನ್ನು ಲಗತ್ತಿಸಿ ಅವರು ಸಲ್ಲಿಸಿದ ಪ್ರಸ್ತಾವನೆಯ ಹಿಂದೆ ದೊಡ್ಡ ಪರಿಶ್ರಮ ಇದೆ. ಇದೇ ಸಂದರ್ಭದಲ್ಲಿ ಯುನಿಕೋಡ್ ನಲ್ಲಿ ತುಳುವನ್ನು ಮಾತ್ರ ಉಲ್ಲೇಖಿಸಿ ಪ್ರತ್ಯೇಕವಾಗಿ ತುಳು ಎಂದಷ್ಟೇ ಉಲ್ಲೇಖಿಸಿ ಅನುಮೋದನೆ ನೀಡಬೇಕೆಂಬ ಪ್ರಸ್ತಾವನೆ, ಬೇಡಿಕೆಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಹಕಾರ ಇದೆ ಎಂಬುದನ್ನು ತಿಳಿಸಲು ಇಚ್ಚಿಸುತ್ತೇನೆ.ತುಳು-ತಿಗಾಳಾರಿ ನಡುವಿನ ಸಾಮ್ಯತೆ, ವ್ಯತ್ಯಾಸದ ಬಗ್ಗೆ ಭಾಷಾ ಪಂಡಿತರು, ಲಿಪಿ ತಜ್ಞರು ಈಗಾಗಲೇ…
ಮಂಗಳೂರು: ಜೀವಂತ ಶ್ವಾನವನ್ನು ಪಾಲಿಕೆಯ ತ್ಯಾಜ್ಯ ಕೊಂಡೊಯ್ಯವ ವಾಹನಕ್ಕೆ ಕೊಟ್ಟು ಅಮಾನವೀಯ ವರ್ತನೆ ತೋರಿದ ವಿಡಿಯೋ ತುಣುಕ್ಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಂಗಳೂರು ನಗರದ ಡೊಂಗರಕೇರಿಯಲ್ಲಿ ಈ ಘಟನೆ ನಡೆದಿದ್ದು ಡೊಂಗರಕೇರಿಯ ಕುಟುಂಬವೊಂದರ ಸದಸ್ಯರು ಬೇರೆ ದೇಶದಲ್ಲಿ ವಾಸಿಸುತ್ತಿದ್ದರು. ವೃದ್ಧ ಮಹಿಳೆ ಮಾತ್ರ ಈ ಮನೆಯಲ್ಲಿ ವಾಸವಾಗಿದ್ದಾರೆ ಎನ್ನಲಾಗಿದೆ. ಮನೆಯ ಶ್ವಾನ ಇತ್ತೀಚೆಗೆ ಕೆಲವು ಕಡೆ ಉಪಟಳ ಮಾಡಿರೋ ಆರೋಪ.ಇದೇ ಕಾರಣಕ್ಕೆ ತ್ಯಾಜ್ಯ ವಿಲೇವಾರಿ ವಾಹನಕ್ಕೆ ಜೀವಂತ ನಾಯಿಯನ್ನು ಕೊಟ್ಟು ವಿಚಿತ್ರ ವರ್ತನೆ ತೋರಿದ್ದಾರೆ. ತ್ಯಾಜ್ಯ ವಿಲೇವಾರಿ ಮಾಡುವ ಕಾರ್ಮಿಕರು ಕೂಡ ತ್ಯಾಜ್ಯದೊಡನೆ ನಾಯಿಯನ್ನೂ ಪಚ್ಚನಾಡಿಗೆ ಸಾಗಿಸಿದ್ದಾರೆ..ಈ ಘಟನೆಯನ್ನು ಸ್ಥಳೀಯರು ಮೊಬೈಲ್‌ನಲ್ಲಿ ವೀಡಿಯೊ ಮಾಡಿದ್ದು, ವಿಡಿಯೋ ವೈರಲ್ ಆಗಿದೆ. ಎರಡು ದಿನಗಳ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಕುರಿತು ವಿವರ ನೀಡುವಂತೆ ಪಶುಪಾಲನೆ ಇಲಾಖೆಯಿಂದ ಪಾಲಿಕೆಗೆ ನೋಟಿಸ್ ನೀಡಿದ್ದಾರೆ. ಸದ್ಯ ಪಚ್ಚನಾಡಿ ಡಂಪಿಂಗ್ ಯಾರ್ಡ್ ಬಳಿ ಶ್ವಾನದ ಹುಡುಕಾಟ, ಆದರೆ ಪತ್ತೆಯಾಗಿಲ್ಲ…
ಮಂಗಳೂರು: ಭಾರತೀಯ ಎರಡು ನೌಕಾಪಡೆಯ ಸಬ್ ಮೆರೀನ್ ಗಳಿಗೆ ಮಂಗಳೂರಿನ ಮುಲ್ಕಿ ಹಾಗೂ ಉಡುಪಿಯ ಮಲ್ಪೆ ಹೆಸರನ್ನು ಇಡುವ ಮೂಲಕ ಕೇರಳದ ಕೊಚ್ಚಿಯ ಭಾರತೀಯ ನೌಕಾ ಪಡೆ ಶಿಪ್ ಯಾರ್ಡ್ ನಲ್ಲಿ ಅಧಿಕೃತ ಲೋಕಾರ್ಪಣೆಯನ್ನು ಮಾಡಲಾಗಿದೆ. ಆಳವಿಲ್ಲದ ನೀರಿನಲ್ಲಿ ಚಲಿಸಬಲ್ಲ ಎರಡು ಜಲಾಂತರ್ಗಾಮಿ ನಿಗ್ರಹ ಹಡಗುಗಳು ಇದಾಗಿದ್ದು ಐಎನ್ ಎಸ್ ಮುಲ್ಕಿ ಹಾಗೂ ಐಎನ್ ಎಸ್ ಮಲ್ಪೆ ಹೆಸರಿನ ನಾಮಕರಣಗೊಂಡಿದೆ. ಈ ಹಿಂದೆ ಇದೇ ಹೆಸರಿನ ನೌಕೆಗಳು ಭಾರತೀಯ ನೌಕಾ ಪಡೆಯಲ್ಲಿ ಇದ್ದವು 1984ರಿಂದ 2003ರವರೆಗೆ ಮುಲ್ಕಿ ಮತ್ತು ಮಲ್ಪೆ ಹೆಸರಿನ ಸ್ಪೋಟಕ ಪತ್ತೆ ನೌಕೆಗಳಿತ್ತು ಆದರೆ 2003ರಲ್ಲಿ ಇವರೆಡೂ ಸೇವೆಯಿಂದ ನಿವೃತ್ತಿಯಾಗಿತ್ತು ಮಂಗಳೂರಿನ ಮುಲ್ಕಿ ಈ ಹಿಂದೆ ರಾಜ್ಯದ ಬಂದರುಗಳಲ್ಲೊಂದಾಗಿತ್ತು. ದೇಶ-ವಿದೇಶದ ಸಣ್ಣ ಹಡಗುಗಳು ಮುಲ್ಕಿ ಬಂದರಿಗೆ ಬರುತ್ತಿದ್ದವು.ಬ್ರಿಟಿಷರ ಕಾಲದ ನಕ್ಷೆಯಲ್ಲೂ ಮುಲ್ಕಿ ಹಾಗೂ ಮಲ್ಪೆ ಹೆಸರುಗಳಿತ್ತು ಇದೀಗ ಮತ್ತೆ ಕರ್ನಾಟಕದ ಎರಡು ಪ್ರದೇಶಗಳ ಹೆಸರಿಗೆ ಭಾರತೀಯ ನೌಕಾಪಡೆ ಗೌರವ ನೀಡಿದೆ

