ಬಂಟ್ವಾಳ: ಹಿಂದೂ ಹಬ್ಬ ಹರಿದಿನಗಳು, ಬ್ರಹ್ಮಕಲಶೋತ್ಸವ ಪ್ರಯುಕ್ತ ನಡೆಯುವ ಮೆರವಣಿಗೆಯ ಸಂದರ್ಭ ಮುಸ್ಲಿಂ ಬಾಂಧವರು ಸೌಹಾರ್ದತೆಯ ದೃಷ್ಟಿ ಯಿಂದ ಹಿಂದೂಗಳಿಗೆ ಪಾನೀಯ ಅಥವಾ ಸಿಹಿತಿಂಡಿಗಳನ್ನು ಅಲ್ಲಲ್ಲಿ ಹಂಚುವ ಸಾಂಪ್ರದಾಯ ಒಂದು ಕಡೆ ನಡೆದರೆ ಬಂಟ್ವಾಳದಲ್ಲಿ ಗಣೇಶೋತ್ಸವ ಮೆರವಣಿಗೆಯಲ್ಲಿ ಇಂತಹ ಸೌಹಾರ್ಧತೆಗೆ ಬ್ರೇಕ್ ಹಾಕುವ ಮೂಲಕ ಚರ್ಚೆಗೆ ಗ್ರಾಸವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬೋಳಂತೂರು ಗಣೇಶೋತ್ಸವ ಮೆರವಣಿಗೆಯಲ್ಲಿ ಪಾನೀಯ ತಿಂಡಿ-ತಿನಸು ಹಂಚದಂತೆ ಮಸೀದಿಯೊಂದಕ್ಕೆ ಗಣೇಶೋತ್ಸಸಮಿತಿ ಆಯೋಜಕರು ಪತ್ರದ ಮೂಲಕ ಮನವಿಯೊಂದನ್ನು ನೀಡಿದ್ದಾರೆ.
ಗಣೇಶೋತ್ಸವ ಮೆರವಣಿಗೆಯಲ್ಲಿ ಸಿಹಿ ತಿಂಡಿ, ತಂಪು ಪಾನೀಯ ಹಂಚಬೇಡಿ .ಕಳೆದ ವರ್ಷ ಮುಸಲ್ಮಾನ್ ಸಮಾಜ ಭಾಂದವರು ಹಂಚಿದ ಸಿಹಿ ತಿಂಡಿ ತಿಂದು ನಮ್ಮ ಕೆಲವು ಮಕ್ಕಳು ಅಸ್ವಸ್ಥರಾಗಿದ್ದಾರೆ ಎಂದು ಶ್ರೀ ಸಿದ್ಧಿವಿನಾಯಕ ವಿಶ್ವಸ್ಥ ಮಂಡಳಿಯಿಂದ ಬೋಳಂತೂರು ಮಸೀದಿಗೆ ಪತ್ರ ಬರೆಯಲಾಗಿದೆ.ಕಳೆದ ವರ್ಷ ಗಣೇಶೋತ್ಸವ ಮೆರವಣಿಗೆ ವೇಳೆ ತಂಪು -ಪಾನೀಯ ಸಿಹಿ ತಿಂಡಿ ಹಂಚಿದ್ದ ಮುಸ್ಲಿಂ ಯುವಕರು
ಆದರೆ ತಂಪು ಪಾನೀಯ ಸಿಹಿ ತಿಂಡಿ ಸೇವಿಸಿದ ಹಿಂದೂ ಮಕ್ಕಳು ಅಸ್ವಸ್ಥ ಆರೋಪ ಮಾಡಿದ್ದು ಸದ್ಯ
ಎರಡು ಸಮಾಜಗಳ ನಡುವಿನ ಸಾಮರಸ್ಯ ಕೆಡುವ ಆತಂಕ ಎದುರಾಗಿದ್ದು ಈ ಹಿನ್ನಲೆ ಈ ಬಾರಿಯ ಮೆರವಣಿಗೆಯಲ್ಲಿ ಸಿಹಿ ತಿಂಡಿ ಹಂಚದಂತೆ ಸೂಚನೆ
ಪತ್ರದ ಮೂಲಕ ಗಣೇಶೋತ್ಸವ ಸಮಿತಿಯಿಂದ ಬೋಳಂತೂರು ಮಸೀದಿಗೆ ಮನವಿ ನೀಡಲಾಗಿದೆ.
ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಪರವಿರೋಧದ ಚರ್ಚೆಗೆ ಕಾರಣವಾಗಿದ್ದುಹಲವು ವರ್ಷಗಳಿಂದ ಸೌಹಾರ್ದತೆಯ ಸಂಕೇತವಾಗಿ ಸಿಹಿತಿಂಡಿ ಹಂಚಿಕೆ
ಸದ್ಯ ಗಣೇಶೋತ್ಸವ ಮುಗಿದ ಬೆನ್ನಲ್ಲೇ ಆಡಳಿತ ಮಂಡಳಿ ಪತ್ರ ವೈರಲ್ ಆಗಿದೆ.


