Author: UllalaVani

Kannada News From Coastal Karnataka

ಉಳ್ಳಾಲ: ಕೋಟಾ ಶ್ರೀನಿವಾಸ ಪೂಜಾರಿ ಸಂಸದರಾಗಿ ಆಯ್ಕೆಯಾದ ಹಿನ್ನೆಲೆ ತೆರವಾದ ದ.ಕ-ಉಡುಪಿ ಒಳಗೊಂಡ ವಿಧಾನ ಪರಿಷತ್‌ ಸ್ಥಳೀಯ ಸಂಸ್ಥೆಗಳ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ರಾಜ್ಯ ಬಿಜೆಪಿ ಅಂತಿಮ ನಿರ್ಧಾರಕ್ಕೆ ಬಂದಿದ್ದು, ದ.ಕ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೆಸರು ಹೈಕಮಾಂಡ್ ಅಂಗಳ ತಲುಪಿದ್ದು, ಬಿಲ್ಲವ ಕೋಟಾದಡಿ ಬಹುತೇಕ ಅಂತಿಮಗೊಳ್ಳುವ ಸಾಧ್ಯತೆ ಇದೆ. ಪರಿಷತ್ ಸ್ಥಾನಕ್ಕಾಗಿ ಉಭಯ ಜಿಲ್ಲೆಗಳಲ್ಲಿ ಭಾರೀ ಪೈಪೋಟಿಯಿದ್ದು, ಆಕಾಂಕ್ಷೆಗಳ ಪಟ್ಟಿಯೂ ದೊಡ್ಡದಾಗಿದೆ. ಹೀಗಾಗಿ ಕಳೆದ ಬಾರಿ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿಯೇ ಮಂಗಳೂರಿಗೆ ಅಗಮಿಸಿ ಅಭಿಪ್ರಾಯ ಸಂಗ್ರಹಿಸಿದ್ದರು. ಉಭಯ ಜಿಲ್ಲೆಯ ಶಾಸಕರು, ಸಂಸದರು ಹಾಗೂ ನಾಯಕರು ಸೇರಿ 62 ಮಂದಿ ತಮ್ಮ ಅಭಿಪ್ರಾಯ ಸಲ್ಲಿಕೆ ಮಾಡಿದ್ದರು. ಇದರಲ್ಲಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಉಡುಪಿಯ ಪ್ರಮೋದ್ ಮಧ್ವರಾಜ್ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೆಸರು ಭಾರೀ ಚರ್ಚೆಯಾಗಿತ್ತು. ಅದರಂತೆ ಉಭಯ ಜಿಲ್ಲೆಯ ನಾಯಕರ ಅಭಿಪ್ರಾಯದಂತೆ ಈ ಮೂರು ಹೆಸರುಗಳನ್ನು ಬೊಮ್ಮಾಯಿ ರಾಜ್ಯ ಬಿಜೆಪಿ…

Read More

ತಲಪಾಡಿ:  ಶಾರದಾ ಯೋಗ ಮತ್ತು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ,ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಎನ್ಎಸ್ಎಸ್ ಘಟಕ ಮತ್ತು ಸರ್ಕಾರಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಪ್ರಾದೇಶಿಕ ರಕ್ತದಾನ ಕೇಂದ್ರದ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ಇತ್ತೀಚೆಗೆ ನಡೆಸಲಾಯಿತು. ಈ ಶಿಬಿರದಲ್ಲಿ 97 ಜನರು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಲು ನಿರ್ಧರಿಸಿದರು. ಶಾರದಾ ವೈದ್ಯಕೀಯ ಕಾಲೇಜಿನ ಅಧ್ಯಕ್ಷ ಡಾ. ಎಂ ಬಿ ಪುರಾಣಿಕ್ ಅವರು ಈ ಯಶಸ್ಸಿಗೆ ಸರ್ಕಾರಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ವೈದ್ಯರ ತಂಡವು ಮುಖ್ಯ ಕಾರಣ ಎಂದು ಹೇಳಿದರು. ಶಿಬಿರದಲ್ಲಿ ಶಾರದಾ ಕಾಲೇಜಿನ ಸಂಸ್ಥೆಯ ನಿರ್ದೇಶಕ ಸಮೀರ್ ಪುರಾಣಿಕ್, ಪ್ರೀತಿ ಪುರಾಣಿಕ್ , ಪ್ರವೇಶಾಧಿಕಾರಿ ವಿವೇಕ್ ತಂತ್ರಿಯವರು ರಕ್ತದಾನ ನೀಡಿ ಇತರರಿಗೆ ಮಾದರಿಯಾದರು.. ಕಾಲೇಜಿನ ಪ್ರಾಂಶುಪಾಲ ಡಾ. ನಂದೀಶ್ ಎನ್ ಎಸ್, ಉಪ ಪ್ರಾಂಶುಪಾಲ ಡಾ. ಲತಾಮಣಿ, ಮತ್ತು ವೆನ್ಲಾಕ್ ಆಸ್ಪತ್ರೆಯ ಅಂತೋನಿ ಮತ್ತು ಅವರ ತಂಡ ಈ ಶಿಬಿರವನ್ನು ಯಶಸ್ವಿಯಾಗಿ ನಡೆಸಿದರು. ಈ ಶಿಬಿರವು ಕೇವಲ ರಕ್ತ ಸಂಗ್ರಹಿಸುವುದನ್ನು…

Read More

ಕೊಣಾಜೆ: ಬ್ಯಾರಿಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನೋಲಾಜಿ ಇದರ ಮೊದಲ ವರ್ಷದ ವಿದ್ಯಾರ್ಥಿಗಳಿಗಾಗಿ ನಾಳೆಯ ನಾಯಕರನ್ನು ಬೆಳೆಸುವುದು” ಎಂಬ ವಿಷಯದ ಬಗ್ಗೆ ಏಕೀಕರಣ ಮತ್ತು ಪರಿಚಯ ಕಾರ್ಯಕ್ರಮವು ಸೋಮವಾರದಂದು ನಡೆಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಬ್ಯಾರಿಸ್ ನ ಸದಸ್ಯ  ಮಹಮ್ಮದ್ ಅಲಿ ರೂಮಿ ಅವರು ಬಿಟ್‌ ತನ್ನ ಯಶಸ್ಸು ಮನಸ್ಸಿನ ಸ್ಪಷ್ಟತೆ ಮತ್ತು ಹೃದಯದ ಶುದ್ಧತೆ ಎಂಬ ತತ್ವಗಳ ಮೇಲೆ ಆಧಾರಿತವಾಗಿರುತ್ತದೆ. ವಿದ್ಯಾರ್ಥಿಗಳ ವ್ಯಕ್ತಿತ್ವ ಅಭಿವೃದ್ಧಿಯತ್ತ ಸಂಸ್ಥೆಯ ಬದ್ಧತೆಯನ್ನು ಹಂಚಿಕೊಂಡು, ಮುಂದಿನ ನಾಲ್ಕು ವರ್ಷಗಳಲ್ಲಿ ತಮ್ಮ ಜೀವನದ ಉದ್ದೇಶವನ್ನು ನಿರ್ಧರಿಸಲು ನಿಷ್ಕರ್ಷಾತ್ಮಕ ಆಲೋಚನೆಯಲ್ಲಿ ತೊಡಗಿಸಿಕೊಳ್ಳಲು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು. ನಿಯಮಿತ ಹಾಜರಾತಿ, ಸಮಗ್ರ ಅಭಿವೃದ್ಧಿ ಮತ್ತು ಪರಿಣಾಮಕಾರಿ ಸಂವಹನ ಕೌಶಲ್ಯದ ಮಹತ್ವವನ್ನು ತಿಳಿಸಿದರು. ಹೊಸ ವಿದ್ಯಾರ್ಥಿಗಳಿಗೆ ತಮ್ಮ ಸಂಗಾತಿಗಳ ಗೌರವ ಮತ್ತು ಮಾನ್ಯತೆಯನ್ನು ಕಾಯ್ದುಕೊಳ್ಳುವ ಬಗ್ಗೆ ಹಾಗೂ ಸುರಕ್ಷಿತ ಮತ್ತು ಸಮಾವೇಶಾತ್ಮಕ ಶಿಬಿರದ ಸಂಸ್ಕೃತಿಯನ್ನು ಉತ್ತೇಜಿಸಲು ತಿಳಿಸಿದರು. ಶೈಕ್ಷಣಿಕ ಮತ್ತು ಕೈಗಾರಿಕಾ ಬಹುಮುಖ ಪಾಲುದಾರರೊಂದಿಗೆ ಪರಸ್ಪರ ಚರ್ಚೆಗಳನ್ನು ಒಳಗೊಂಡಿತ್ತು, ಇದರಿಂದ ವಿದ್ಯಾರ್ಥಿಗಳು ಅವರ…

Read More

ದೇರಳಕಟ್ಟೆ: ಯೆನೆಪೊಯ ಇನ್ಸ್ಟಿಟ್ಯೂಟ್ ಆಫ್ ಆಟ್ರ್ಸ್ ಸೆಯನ್ಸ್ ಕಾಮರ್ಸ್ ಆ್ಯಂಡ್ ಮ್ಯಾನೇಜ್ಮೆಂಟ್‌ನ ಆಶಯದಲ್ಲಿ  “ನವ್ಯಾರಂಭ” ಪಿಜಿ ಇಂಡಕ್ಷನ್ ಕಾರ್ಯಕ್ರಮವು ವೈ.ಎಂ.ಕೆ ಆಡಿಟೋರಿಯಮ್‌ನಲ್ಲಿ ಇತ್ತೀಚೆಗೆ ನಡೆಯಿತು.   ಕಾರ್ಯಮ್ರಮವನ್ನು ಉದ್ಘಾಟಿಸಿ ಮಾತ‌ನಾಡಿದ ಶ್ರೀ ಸತ್ಯಸಾಯಿ ಉನ್ನತ ಶಿಕ್ಷಣ ಸಂಸ್ಥೆಯ ಮಾಜಿ ಉಪಕುಲಪತಿ ಡಾ. ಬಿ. ಸಾಯಿ ಗಿರಿಧರ್ ಅವರು ಸ್ವಯಂ ಪ್ರಯತ್ನ ಮತ್ತು ಕೌಶಲ್ಯ ವೃದ್ಧಿಯ ಮಹತ್ವವನ್ನು ವಿವರಿಸಿದರು ಮತ್ತು ವಿದ್ಯಾರ್ಥಿಗಳಿಗೆ ಉನ್ನತ ನೈತಿಕ ಪ್ರಮಾಣಗಳನ್ನು ಎತ್ತಿಹಿಡಿಯುವ ಸಲಹೆ ನೀಡಿದರು. ಯೆನೆಪೋಯ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ. ಗುರುರಾಜ ಹೆಚ್ ಅವರು ಪರಿಶ್ರಮ ಮತ್ತು ಸಮಯಪಾಲನೆಯ ಕುರಿತಂತೆ ಮಾತನಾಡಿದರು. ಯೆನೆಪೊಯ ಇನ್ಸ್ಟಿಟ್ಯೂಟ್‌ನ ಪ್ರಾಂಶುಪಾಲ ಡಾ. ಅರುಣ್ ಎ. ಭಾಗವತ್ ಅವರು “ಡಿಜಿಟಲ್ ಇಮ್ಮಾರ್ಟಾಲಿಟಿ” ಮತ್ತು “ಯು ಟು ಇಂಟರ್ಫೇಸ್” ಕುರಿತಾದ ಮಹತ್ವವನ್ನು ತಿಳಿಸಿದರು. ಡಾ. ಶರೀನಾ ಪಿ., ಡಾ. ಜೀವನ್ ರಾಜ್, ಮತ್ತು ನಾರಾಯಣ್ ಸುಕುಮಾರ್ , ಪ್ರಾಧ್ಯಾಪಕಿ ಡಾ. ನಮ್ರತಾ ಎಸ್. ಉಪಸ್ಥಿತರಿದ್ದರು. ಹಾಸ್ಪಿಟಾಲಿಟಿ ಸೈನ್ಸ್‌ನ ಮುಖ್ಯಸ್ಥ ಮೆರ್ವಿನ್ ಜೈಸನ್ ವಾಜ್…

Read More

ಕೋಟೆಕಾರು: ಕೋಟೆಕಾರು ಪಟ್ಟಣ ಪಂಚಾಯತಿಯಲ್ಲಿ ಪೌರಕಾರ್ಮಿಕರ ದಿನಾಚರಣೆಯನ್ನು ಸೋಮಾವಾರದಂದು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯಾಧಿಕಾರಿ ಮಾಲಿನಿ ವಹಿಸಿದ್ದರು. ಪೌರಕಾರ್ಮಿಕರಾದ , ಸದಾಶಿವ, ಪರಮೇಶಿ, ಹರೀಶ ನಾಯ್ಕ, ಕೃಷ್ಣಪ್ಪ, ಬಂಗಾರಿ ನಾಯ್ಕ, ಲಲಿತ ಬಾಯಿ, ವಿನೋದ, ‌‌ಸಂದೇಶ, ಕಿರಣ್, ಆದಿತ್ಯ, ಪರಮೇಶಿ, ನರೇಶ್ , ನಿತೇಶ್ ,ಅಂತೋನಿ ಹಮೀದ್ ಸನ್ಮಾನಿಸಲಾಯಿತು,ವಿವಿಧ ಆಟೋಟ ಸ್ಪರ್ಧೆಯಲ್ಲಿ ಏರ್ಪಡಿಸಿದ್ದು ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ಪ್ರಥಮ ದರ್ಜೆ ಸಹಾಯಕಿ ಮಮತಾ , ಆನಂದ ಬಾಬು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಆರೋಗ್ಯ ನಿರೀಕ್ಷಕರಾದ ವಿಕ್ರಮ ಕಾರ್ಯಕ್ರಮ ನಿರೂಪಿಸಿದರು., ಶೋಭ ಚಂದ್ರಶೇಖರ ವಂದಿಸಿದರು. ಚೈತ್ರಾ, ಪೂರ್ಣಿಮಾ, ದಿವ್ಯ , ಭೂಮಿಕಾ, ಕುಮಾರಿ ನಿಶ್ಮಿತಾ, ಅರುಣ್, ಮಂಜುನಾಥ ಕ್ರೀಡಾ ಸ್ಪರ್ಧೆಗಳಲ್ಲಿ ತೀರ್ಪುಗಾರರಾಗಿ ಭಾಗವಹಿಸಿದ್ದರು.

Read More

ಉಳ್ಳಾಲ: ಅಬ್ಬಕ್ಕ ಮೊಗವೀರರನ್ನೇ ಸಹಬಲ ಮಾಡಿದಳೆಂಬುದಕ್ಕೆ ಮಾರುತಿ ಇದೀಗ ನಡೆಸುತ್ತಿರುವ ಸ್ವಾಭಿಮಾನದ ಕೆಚ್ಚೆದೆಯ ಕೆಲಸಗಳೇ ಸಾಕ್ಷಿಯಾಗಿದೆ. ಮಾರುತಿದ್ವಯ ಸಂಸ್ಥೆಗಳು ಸಮಗ್ರ ತುಳುನಾಡಿನ ಸಾಂಸ್ಕøತಿಕ ಅಸ್ಮಿತೆಯಾಗಿರುವ ದೈವಾರಾಧನೆಗೆ ಭದ್ರತೆಯ ಬುನಾದಿಯನ್ನು ಕೊಡುವ ಕೆಲಸ ಮಾಡಿದೆ. ಅಬ್ಬಕ್ಕಳ ಹಾಗೆಯೇ ಉಳ್ಳಾಲದ ನಾಡಿಗಾಗಿ ಅವಿರತ ಶ್ರಮವಹಿಸಿದ ಚೆನ್ನಮರಕಾಲ ಹೆಸರಿನಲ್ಲಿ ರಸ್ತೆ, ದ್ವಾರಗಳ ನಿರ್ಮಾಣವಾಗಬೇಕಿದೆ. ಚೆನ್ನಮರಕಾಲನಿಗೆ ಸೂಚಿಸಬೇಕಾದ ಗೌರವ, ಶಾಶ್ವತವಾಗಿ ಉಳಿಯಬೇಕಾದ ಕುರುಹುಗಳ ಕುರಿತು ಮಾರುತಿ ಯುವಕ ಮಂಡಲ ಯೋಜನೆಗಳನ್ನು ರೂಪಿಸಬೇಕಿದೆ. ಪ್ರತಿಭಾ ಪುರಸ್ಕಾರ ಪಡೆದ ಸಾಮಾಜಿಕ ಋಣ ಅನ್ನುವ ಉದ್ದೇಶದೊಂದಿಗೆ ಸಮಾಜಕ್ಕೆ ವಾಪಸ್ಸು ನೀಡುವವರಾಗಿರಿ ಎಂದು ಸಂತ ಆಗ್ನೇಸ್ ಕಾಲೇಜು ಮಂಗಳೂರಿನ ಉಪನ್ಯಾಸಕ ಡಾ. ಅರುಣ್ ಉಳ್ಳಾಲ್ ಹೇಳಿದರು.ಉಳ್ಳಾಲ ಮೊಗವೀರ ಹಿರಿಯ ಪ್ರಾಥಮಿಕ ಶಾಲೆಯ ಮಾರುತಿ ವೇದಿಕೆಯಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಮೊಗವೀರಪಟ್ನದ ಮಾರುತಿ ಜನ ಸೇವಾ ಸಂಘ, ಮಾರುತಿ ಯುವಕ ಮಂಡಲ ಇದರ 2023-24ನೇ ಸಾಲಿನ ಪ್ರತಿಭಾ ಪುರಸ್ಕಾರ, ಸನ್ಮಾನ ಹಾಗೂ ಗೌರವ ಧನ ಪ್ರಧಾನ ಸಮಾರಂಭದಲ್ಲಿ ವಿಶೇಷ ಉಪನ್ಯಾಸಗೈದು ಮಾತನಾಡಿದರು.ಮಾರುತಿ…

Read More

ತೊಕ್ಕೊಟ್ಟು: ಮಂಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ ಶತಾಯಗತವಾಗಿ ಬಿ.ಜೆ.ಪಿ. ಶಾಸಕರು ಆಯ್ಕೆಯಾಗಬೇಕಿದೆ. ಇಡೀ ಜಿಲ್ಲೆಯಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಉತ್ಸಾಹಿ ಮತ್ತು ಚುರುಕಿನ ಕಾರ್ಯಕರ್ತರು ಇರುವ ಈ ಕ್ಷೇತ್ರದಲ್ಲಿ ಇದನ್ನು ಸಾಧಿಸಿ ತೋರಿಸಲು ಅಸಾಧ್ಯವಲ್ಲ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದರು.ಅವರು ಬಿ.ಜೆ.ಪಿ. ಮಂಗಳೂರು ಮಂಡಲದ ವತಿಯಿಂದ ತೊಕ್ಕೊಟ್ಟುವಿನಲ್ಲಿ ಜರಗಿದ ಬಿಜೆಪಿ ಪ್ರಾಥಮಿಕ ಸದಸ್ಯತನ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದರು.ಸದಸ್ಯತನ ಅಭಿಯಾನ ಪಕ್ಷದ ಕಾರ್ಯಕರ್ತರ ಆದ್ಯತಾ ಕಾರ್ಯವಾಗಬೇಕು. ಈ ಪ್ರಕ್ರಿಯೆಯಲ್ಲಿ ಯಾವುದೇ ರಾಜಿಯಿಲ್ಲದೆ ಕಾರ್ಯಕರ್ತರು ತೊಡಗಿಸಿಕೊಳ್ಳಬೇಕು, ಎಂದರು.ದಕ್ಷಿಣ ಕನ್ನಡ ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷರಾದ ಸತೀಶ್ ಕುಂಪಲ ಮಾತನಾಡುತ್ತಾ ಭಾರತೀಯ ಜನತಾ ಪಾರ್ಟಿಯ ಪ್ರಾಥಮಿಕ ಸದಸ್ಯತನ ಅಭಿಯಾನ ಪ್ರಕ್ರಿಯೆ ಈಗಾಗಲೇ ಆರಂಭಗೊAಡಿದೆ. ಮಂಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ ಸುಮಾರು ೯೦೦೦ ಕ್ಕೂ ಮಿಕ್ಕಿ ಸದಸ್ಯತನ ನೋಂದಾಯಿಸಿದ್ದು ಜಿಲ್ಲೆಯಲ್ಲಿ ಸುಮಾರು ೭೫,೦೦೦ ಸಾವಿರಕ್ಕೂ ಅಧಿಕ ಜನರು ಸದಸ್ಯತನ ಪಡೆದಿದ್ದಾರೆ. ಮುಂದಿನ ಐದು ದಿನಗಳಲ್ಲಿ ಈ ಪ್ರಕ್ರಿಯೆ ವೇಗಗೊಳ್ಳ ಬೇಕಿದೆ. ಪ್ರತಿಯೊಬ್ಬ ಕಾರ್ಯಕರ್ತರು ನೂರಕ್ಕೆ ಕಡಿಮೆ…

Read More

ತಲಪಾಡಿ: ಭಾರತೀಯ ಜನತಾ ಪಾರ್ಟಿ ಮಂಗಳೂರು ವಿಧಾನಸಭಾ ಕ್ಷೇತ್ರದ ಮಂಜನಾಡಿ ಮಹಾ ಶಕ್ತಿಕೇಂದ್ರದ ವತಿಯಿಂದ ಪ್ರಧಾನಿ ಮೋದಿಯವರ ೭೪ ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ತಲಪಾಡಿ ದೇವಿಪುರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸಧೃಡ ಆರೋಗ್ಯ, ದೀರ್ಘ ಆಯುಷ್ಯಕ್ಕಾಗಿ ಹಾಗೂ ದೇಶ ಸುಭಿಕ್ಷೆಯಲ್ಲಿರುವಂತೆ ಪ್ರಾರ್ಥಿಸಲಾಯಿತು.ಈ ಸಂಧರ್ಭದಲ್ಲಿ ಸಹಕಾರಿ ಪ್ರಕೋಷ್ಠ ರಾಜ್ಯ ಕಾರ್ಯಕಾರಿಣಿ ಸದಸ್ಯರು ಮತ್ತು ತಲಪಾಡಿ ಪಂಚಾಯತ್ ಮಾಜಿ ಅಧ್ಯಕ್ಷರಾದ ಸುರೇಶ್ ಆಳ್ವ, ಮಂಡಲ ಪ್ರಧಾನ ಕಾರ್ಯದರ್ಶಿ ದಯಾನಂದ ತೊಕ್ಕೊಟ್ಟು, ಮಂಜನಾಡಿ ಮಹಾ ಶಕ್ತಿಕೇಂದ್ರ ಅಧ್ಯಕ್ಷರಾದ ರಾಜೇಶ್ ಗುಡ್ಡಮನೆ, ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಭಂಡಾರಿ, ಎಸ್ಸಿ ಮೋರ್ಚಾ ಮಂಡಲ ಅಧ್ಯಕ್ಷರಾದ ವರುಣ್ ರಾಜ್ ತಲಪಾಡಿ, ತಲಪಾಡಿ ಶಕ್ತಿಕೇಂದ್ರ ಪ್ರಮುಖ್ ಸತ್ಯರಾಜ್ ತಲಪಾಡಿ, ಮಂಡಲ ರೈತ ಮೋರ್ಚಾ ಸದಸ್ಯರಾದ ಕೇಶವ ಮಂಡೆಕಟ್ಟ, ಪಂಚಾಯತ್ ಸದಸ್ಯರಾದ ನವೀನ್ ಆಳ್ವ ದೇವಿನಗರ, ಮಾಜಿ ಪಂಚಾಯತ್ ಸದಸ್ಯರಾದ ಗೋಪಾಲಕೃಷ್ಣ ಮೇಲಾಂಟ ಹಾಗೂ ಬೂತ್ ಅಧ್ಯಕ್ಷರಾದ ಪುನೀತ್ ದೇವೀನಗರ ಉಪಸ್ಥಿತರಿದ್ದರು.

Read More

ಉಳ್ಳಾಲ: ನಮ್ಮ ತುಳುನಾಡ್ ಟ್ರಸ್ಟ್ ಇವರ ಕೊಪ್ಪರಿಗೆ ಯೋಜನೆಗೆ ಕರ್ಣಾಟಕ ಬ್ಯಾಂಕ್ ದೇಣಿಗೆಯಾಗಿ ನೀಡಿದ ಇಕೋ ಕಾರನ್ನು ತೊಕ್ಕೊಟ್ಟು ಕಾಪಿಕಾಡಿನ ಭಾರತ್ ಅಟೊಮೊಬೈಲ್ಸ್ ಷೋರೂಮಿನಲ್ಲಿ ಹಸ್ತಾಂತರಿಸಲಾಯಿತು. ವಾಹನದ ಕೀಲಿಕೈ ಪಡೆದುಕೊಂಡ ನಮ್ಮ ತುಳುನಾಡು ಟ್ರಸ್ಟ್ ಮಂಗಳೂರು ಇದರ ಗೌರವ ಅಧ್ಯಕ್ಷ ಹರಿಕೃಷ್ಣ ಪುನರೂರು ಮಾತನಾಡಿ,ಪಂಚದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ ತುಳು ಭಾಷೆ ,ಭಾಷಾವಾರು ಪ್ರಾಂತ್ಯ ಆಗುವ ಸಂದರ್ಭ ಮಾನ್ಯತೆ ಸಿಗದಂತಾಯಿತು. ತಾಯಿ ಭಾಷೆಯನ್ನು ಉಳಿಸುವುದು ಎಲ್ಲರ ಕರ್ತವ್ಯವಾಗಿರುತ್ತದೆ. ಇದೇ ಉದ್ದೇಶದಿಂದ ಭಾಷೆಯನ್ನು ಉಳಿಸುವ ಸಲುವಾಗಿ ಆರಂಭಗೊAಡಿರುವ ಸಂಘಟನೆಯ ಕಾರ್ಯಚಟುವಟಿಕೆಗಳಿಗೆ ಮೇಯರ್ ಸುಧೀರ್ ಶೆಟ್ಟಿ ಕಂಪ್ಯೂಟರ್ ನೀಡಿದ್ದರೆ, ಕರ್ನಾಟಕ ಬ್ಯಾಂಕ್ ಕಾರನ್ನು ಕೊಡುಗೆಯಾಗಿ ನೀಡಿದೆ. ತುಳುವಿಗೆ ಲಿಪಿ ಇದೆ ಅನ್ನುವುದು ಹಲವರಿಗೆ ಗೊತ್ತಿಲ್ಲ. ಮಲಯಾಳಂ, ತಮಿಳು ಎಲ್ಲಾ ಲಿಪಿಗಳು ತುಳು ಲಿಪಿ ನಂತರವೇ ರಚನೆಯಾಗಿರುವುದು ದಾಖಲೆಗಳು ಹೇಳುತ್ತವೆ. ಉಡುಪಿ ಮಠದ ಸ್ವಾಮಿಗಳು ತುಳು ಲಿಪಿಯಲ್ಲೇ ಸಹಿಗಳನ್ನು ಹಾಕುತ್ತಿದ್ದರು. ಇತ್ತೀಚೆಗೆ ತುಳು ಭಾಷೆ ಮಾತನಾಡುವುದೇ ಕಡಿಮೆಯಾಗುತ್ತಿದೆ. ಮಕ್ಕಳಿಗೆ ತುಳು ಭಾಷೆ ಹಾಗೂ…

Read More

ಮುಡಿಪು: ಕೆ.ಎ 19-20 ಯುನೈಟಡ್ ಆಫ್ ರೋಡರ್ಸ್ ಆಯೋಜಿಸಿರುವ ಕುಡ್ಲ ಛಾಲೆಂಜ್ ಸೀಸನ್ -4 ಆಫ್ ರೋಡಿಂಗ್ ಸ್ಪರ್ಧೆ ಮುಡಿಪು ನವೋದಯ ಶಾಲೆಯ ನಾರ್ಯಗುತ್ತು ಕ್ರೀಡಾಂಗಣದಲ್ಲಿ ಸೆ.21 ಮತ್ತು22 ರಂದು ಎರಡು ದಿನಗಳ ಕಾಲ ನಡೆಯಲಿದೆ ಎಂದು ಅವಿನಾಶ್ ಅಡಪ ತಿಳಿಸಿದರು. ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯ ಬಿಡುಗಡೆಯನ್ನು ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ನಡೆಸಲಾಯಿತು. ತೊಕ್ಕೊಟ್ಟುವಿನ ಸೇವಾ ಸೌಧದಲ್ಲಿರುವ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಮಂಗಳೂರು ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕೆ.ಎ 19-20 ಯುನೈಟಡ್ ಆಫ್ ರೋಡರ್ಸ್ ಐದು ವರ್ಷಗಳ ಹಿಂದೆ ಸ್ಥಾಪನೆಯಾಗಿದ್ದು, ಈಗಾಗಲೇ ಮೂರು ಈವೆಂಟ್ ಗಳನ್ನು ಆಯೋಜಿಸಿದೆ. ಈಗಾಗಲೇ 105 ವಾಹನಗಳು ಎಂಟ್ರಿಯನ್ನು ಪಡೆದಿದ್ದು, ದೇಶದಲ್ಲೇ ಮೊದಲ ಬಾರಿಗೆ ಇಂತಹ ದೊಡ್ಡಮಟ್ಟಿನ ಆಫ್ ರೋಡಿಂಗ್ ಆಯೋಜನೆ ಮಾಡಲಾಗಿದೆ. ಪೆಟ್ರೋಲ್ ಸ್ಟಾಕ್, ಡಿಸೀಲ್ ಸ್ಟಾಕ್, ಸೇರಿದಂತೆ ಐದು ವಿಧಗಳಲ್ಲಿ ಸ್ಪರ್ಧೆ ನಡೆಯಲಿದೆ. ಕ್ಲಬ್ ಈಗಾಗಲೇ ಸಾಮಾಜಿಕ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡು ಎನ್ ಡಿಆರ್ ಎಫ್ ಜೊತೆಗೆ…

Read More