ಮುಡಿಪು: ಉಳ್ಳಾಲ ತಾಲೂಕು ಕುರ್ನಾಡು ಶ್ರೀ ದತ್ತಾತ್ರೇಯ ಭಜನಾ ಮತ್ತು ಯಕ್ಷಗಾನ ಮಂಡಳಿ ಹಾಗೂ ಮಾತೃ ಮಂಡಳಿ ವತಿಯಿಂದ ಸೆ.29ರ ಭಾನುವಾರ ಅಪರಾಹ್ನ ಕುರ್ನಾಡಿನಲ್ಲಿ, ಸಂಘದ ಅಗಲಿದ ಕಲಾವಿದರಿಗೆ ನುಡಿ ನಮನ ಹಾಗೂ ತಾಳಮದ್ದಳೆ ಕಾರ್ಯಕ್ರಮ ನಡೆಯಿತು.ಸಂಘದ ಅಧ್ಯಕ್ಷ ನಾಗರಾಜ್ ಭಟ್ ಹಾಗೂ ಉಪಾಧ್ಯಕ್ಷ ಮೋಹನ್ ಅಂಗಣೆಮಾರ್ ಸಂಸ್ಮರಣೆ ನೆರವೇರಿಸಿದರು.ಸಂಘದ ಸದಸ್ಯರಾಗಿದ್ದ ದಿ.ಶಿವಣ್ಣ ಆಚಾರ್ಯ ಕುರ್ನಾಡು ಬೆಟ್ಟು, ದಿ.ಸೀತಾರಾಮ ಆಚಾರ್ಯ ಕುರ್ನಾಡುಬೆಟ್ಟು, ದಿ.ಕರಿಯಪ್ಪ ಮಾಸ್ತರ್ ದೆದ್ದು, ಬೋಳ್ಯಾರ್, ದಿ.ಸೀತಾರಾಮ ಶೆಟ್ಟಿ ಕುರ್ನಾಡು ಹಾಗೂ ದಿ.ಜಯಂತ ಟೈಲರ್ ಕಟ್ಟೆಮಾರ್ ಅವರಿಗೆ ನುಡಿ ನಮನ ಸಲ್ಲಿಸಲಾಯಿತು.ಹಿರಿಯ ಸದಸ್ಯರಾದ ಬಾಲಕೃಷ್ಣ ಹನ್ನೆರಡುಮುಡಿ, ಭಾಸ್ಕರ ಆಚಾರ್ಯ ಮಿತ್ತಕೋಡಿ, ಚಂದ್ರಹಾಸ ಬೀಜಮಾರು, ನವೀನ್ ಚಂದ್ರ ಗಟ್ಟಿ, ವಿಠಲ ಆಚಾರ್ಯ ಮಿತ್ತಕೋಡಿ, ಸುಂದರ ದೇವಾಡಿಗ, ಮಂಜುನಾಥ ಕುಲಾಲ್, ಮೋನಪ್ಪ ಕುಲಾಲ್ ಹಾಗೂ ಸಂಘದ ಇತರ ಸದಸ್ಯರು ಹಾಜರಿದ್ದರು. ಸಂಘದ ಕಾರ್ಯದರ್ಶಿ ಪ್ರವೀಣ್ ಕುಮಾರ್ ವಂದಿಸಿದರು.ಸಮಾರಂಭದ ಸಂಯೋಜಕ, ಮದ್ದಳೆಗಾರ ಭಾಸ್ಕರ ಕೋಳ್ಯೂರು ಅವರನ್ನು ಗೌರವಿಸಲಾಯಿತು.ತಾಳಮದ್ದಳೆ:ಸಮಾರಂಭದ ಪ್ರಯುಕ್ತ ‘ಸುಧನ್ವ ಮೋಕ್ಷ’ ತಾಳಮದ್ದಳೆ ನಡೆಯಿತು.…
Author: UllalaVani
ಮಂಗಳೂರು :ಕರ್ನಾಟಕ ಸರ್ಕಾರದ ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ ಕೆ.ಆರ್. ವೃತ್ತ ಬೆಂಗಳೂರು ಆಯೋಜಿಸಿದ ವರ್ಷದ ಅತ್ಯುತ್ತಮ ಕಂದಾಯ ಅಧಿಕಾರಿ -2024 ಪ್ರಶಸ್ತಿಯನ್ನು ಮಂಗಳೂರು ತಾಲೂಕಿನಲ್ಲಿ ಕಳೆದ 22 ವರ್ಷಗಳಿಂದ ಅತ್ಯುತ್ತಮ ಸೇವೆ ನಡೆಸಿದ ಪರವಾನಿಗೆ ಭೂಮಾಪಕರಾಗಿರುವ ಪುಟ್ಟೇಗೌಡ ಕೆ.ಎಂ ಇವರು ಪಡೆದುಕೊಂಡಿದ್ದಾರೆ.ಸೆ.27 ರಂದು ಬೆಂಗಳೂರಿನ ವಿಕಾಸ ಸೌಧದಲ್ಲಿ ನಡೆದ ಸಮಾರಂಭದಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಪ್ರಶಸ್ತಿ ಪ್ರಧಾನ ಮಾಡಿದರು. ಈ ಸಂದರ್ಭ ಕಂದಾಯ ಇಲಾಖೆ ಪ್ರಧಾನ ಕಾರ‍್ಯದರ್ಶಿಗಳಾದ ರಾಜೇಂದ್ರ ಕುಮಾರ್ ಕಟಾರಿಯ ( ಐಎಎಸ್), ಭುಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಆಯುಕ್ತ ಜೆ. ಮಂಜುನಾಥ್ ಐಎಎಸ್ ಉಪಸ್ಥಿತರಿದ್ದರು.ಕಳೆದ ಒಂದು ವರ್ಷದ ಅವಧಿಯಲ್ಲಿ ಇಲಾಖೆಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸಿ, ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಿರುವುದನ್ನು ಗುರುತಿಸಿ, ಜಿಲ್ಲೆಯಲ್ಲಿ ಒಬ್ಬರಿಗೆ ಪ್ರಶಸ್ತಿಯನ್ನು ಇಲಾಖೆ ನೀಡುತ್ತಿದೆ . ಕಳೆದ 22 ವರ್ಷಗಳಿಂದ ಪುಟ್ಟೇಗೌಡರು ಮಂಗಳೂರು ತಾಲೂಕಿನಲ್ಲಿ ಭುಮಾಪಕರಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ. ಮೂಲತ: ಮಂಡ್ಯ ಜಿಲ್ಲೆಯ , ಪಾಂಡವಪುರ…
ದುಬೈ: ಬಿಲ್ಲವಸ್ ಫ್ಯಾಮಿಲಿ ದುಬೈ ಇವರ ವತಿಯಿಂದ ಬ್ರಹ್ಮ ಶ್ರೀ ನಾರಾಯಣ ಗುರುವರ್ಯರ 170 ನೇ ಗುರು ಜಯಂತಿಯು ದುಬೈ ನ ಗ್ಲೆಂಡಲೆ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಭಾನುವಾರದಂದು ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮದಲ್ಲಿ ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿಯ ವತಿಯಿಂದ ಭಜನೆ ನಡೆಯಿತು. ಬಿಲ್ಲವ ಸಮಾಜದ ಪುಟಾಣಿ ಮಕ್ಕಳು, ಮಹಿಳೆಯರ ಹಾಗೂ ಪುರುಷರ ತಂಡಗಳ ನೃತ್ಯ ಭಜನೆಯಲ್ಲಿ ಪಾಲ್ಗೊಂಡರು. ಕಾರ್ಯಕ್ರಮದಲ್ಲಿ ಅಧಿಕ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಮಹಾಪೂಜೆಯ ನಂತರ ಮಹಾಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆಯೂ ನಡೆಯಿತು. ಮಹರ್ಷಿ ದರ್ಶನ ಖ್ಯಾತಿಯ ಶ್ರೀ ಆನಂದ ಗುರುಜಿಯವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗುರುಗಳ ಪ್ರಸಾದವನ್ನು ಸ್ವೀಕರಿಸಿದರು. ಸಂಘಟನೆಯ ಅಧ್ಯಕ್ಷರಾದ ದೀಪಕ್ ಎಸ್ ಪಿ ಹಾಗೂ ಎಲ್ಲಾ ಪದಾಧಿಕಾಸರಿ ಪೂಜೆಯ ಸಿದ್ಧತೆ, ಪ್ರಸಾದ ಹಾಗೂ ಅನ್ನಸಂತರ್ಪಣೆಯ ಎಲ್ಲಾ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.
ಉಳ್ಳಾಲ: ಶಿರೂರು ದುರಂತದಲ್ಲಿ ಸಾವನ್ನಪ್ಪಿದ ಕೇರಳ ಕಲ್ಲಿಕೋಟೆ ಮೂಲದ ಅರ್ಜುನ್ (೩೫) ಮೃತದೇಹ ೭೩ ದಿನಗಳ ನಂತರ ಪತ್ತೆಯಾಗಿ ಡಿಎನ್ ಎ ವರದಿ ಸಾಬೀತಾಗಿ ಇಂದು ಕೇರಳದ ಮನೆಗೆ ಕೊಂಡೊಯ್ಯುವ ಸಂದರ್ಭ ಗಡಿಭಾಗ ತಲಪಾಡಿಯಲ್ಲಿ ಜನಪ್ರತಿನಿಧಿಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಜಮಾಯಿಸಿ ಅಂತಿಮ ದರ್ಶನ ಪಡೆದುಕೊಂಡರು.ಸAಜೆ ವೇಳೆ ಅಂಕೋಲಾದಿAದ ಫ್ರೀಝರ್ ಆಂಬ್ಯುಲೆನ್ಸ್ ಮೂಲಕ ಲಾರಿ ಚಾಲಕರಾಗಿದ್ದ ಅರ್ಜುನ್ ಅಂತಿಮ ಯಾತ್ರೆಯನ್ನು ಕೈಗೊಳ್ಳಲಾಗಿತ್ತು. ಕರ್ನಾಟಕ-ಕೇರಳ ಗಡಿಭಾಗ ತಲುಪುವಾಗ ತಡರಾತ್ರಿ ೨.೦೦ ಗಂಟೆಯಾಗಿತ್ತು. ಈ ವೇಳೆ ಮಂಜೇಶ್ವರ ಮತ್ತು ಕಾಸರಗೋಡು ವಿಧಾನಸಭಾ ಕ್ಷೇತ್ರದ ಜಿಲ್ಲಾ ಪಂಚಾಯತ್, ಗ್ರಾಮ ಪಂಚಾಯತ್ ಸದಸ್ಯರನ್ನು ಒಳಗೊಂಡAತೆ ಹೆಚ್ಚಿನ ಸಂಖ್ಯೆಯಲ್ಲಿ ಕೇರಳ ನಿವಾಸಿಗಳು ಜಮಾಯಿಸಿದ್ದರು. ಆಂಬ್ಯುಲೆನ್ಸ್ ಟೋಲ್ ಬೂತ್ ದಾಟಿ ನಂತರ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಯಿತು. ಹೂಗುಚ್ಛಗಳನ್ನು ಮೃತದೇಹದ ಮೇಲೆ ಇಡುವ ಮೂಲಕ ಅಂತಿಮ ದರ್ಶನ ಪಡೆದುಕೊಂಡು ಗೌರವ ಸಲ್ಲಿಸಿದರು. ಇದೇ ವೇಳೆ ಆಂಬ್ಯುಲೆನ್ಸ್ ನಲ್ಲಿದ್ದ ಸಮಾಜಸೇವಕ, ಅರ್ಜುನನಿಗಾಗಿ ಜೀವದ ಹಂಗು ತೊರೆದು ನೆರೆ ನೀರಿನ ನಡುವೆ ನದಿಯಾಳಕ್ಕೆ…
ಮಂಗಳೂರು: ವಿದೇಶಗಳಲ್ಲಿ ತುಳುನಾಡಿನ ಗಂಡುಮೆಟ್ಟಿನ ಕಲೆಯಾಗಿರುವ ಯಕ್ಷಗಾನ ಪ್ರದರ್ಶನ ಮತ್ತು ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದು ಹೆಮ್ಮೆ ಅನಿಸುತ್ತಿದೆ. ಅಲ್ಲಿನ ಜನರು ಕೂಡ ಯಕ್ಷಗಾನ ನಾಟ್ಯ ಮತ್ತು ಭಾಗವತಿಕೆಗೆ ಮನಸೋತು ಕಲಿಯಲು ಆಸಕ್ತಿ ತೋರಿಸಿರುವುದು ಖುಷಿಯ ವಿಚಾರ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕ ಪಟ್ಲಗುತ್ತು ಸತೀಶ್ ಶೆಟ್ಟಿ ತಿಳಿಸಿದ್ದಾರೆ. ಅಮೇರಿಕ ಪ್ರವಾಸ ಕೈಗೊಂಡು ತಮ್ಮ ತಂಡದ ಜೊತೆ ಮಂಗಳವಾರ ರಾತ್ರಿ ತಾಯ್ನಾಡಿಗೆ ಮರಳಿದ್ದು ಬಜ್ಪೆ ವಿಮಾನ ನಿಲ್ದಾಣದಲ್ಲಿ ಟ್ರಸ್ಟ್ ನ ಪದಾಧಿಕಾರಿಗಳು ಸ್ವಾಗತ ಕೋರುವ ಸಂದರ್ಭ ಅವರು ಮಾತನಾಡಿದರು. ಅಮೇರಿಕಾದ ಎರಡು ನಗರಗಳಲ್ಲಿ ಪಟ್ಲ ಫೌಂಡೇಶನ್ ದಿನವನ್ನಾಗಿ ಅಲ್ಲಿನ ಮೇಯರ್ ಘೋಷಣೆ ಮಾಡಿದ್ದಾರೆ. ಇದು ಅವಿಸ್ಮರಣೀಯ ಅನುಭವ. ನಮ್ಮ ಕಲೆಗೆ ಇಂದು ವಿಶ್ವವ್ಯಾಪಿ ಮನ್ನಣೆ ಸಿಗುತ್ತಿದೆ. ಪಟ್ಲ ಫೌಂಡೇಷನ್ ಟ್ರಸ್ಟ್ ಅಮೇರಿಕಾ ಘಟಕದ ಅಧ್ಯಕ್ಷ ಡಾ.ಅರವಿಂದ ಉಪಾಧ್ಯಾಯ, ಡಾ. ಶ್ರೀಧರ ಆಳ್ವ, ಮಹಾಬಲ ಶೆಟ್ಟಿ, ಉಳಿ ಯೋಗೇಂದ್ರ ಭಟ್ ಮತ್ತಿತರ ಪ್ರಮುಖರು ಅಮೆರಿಕದ 20 ರಾಜ್ಯಗಳಲ್ಲಿ ಯಕ್ಷಗಾನ ಪ್ರದರ್ಶನ ಆಯೋಜಿಸಿದ್ದರು ಅವರಿಗೆ ಧನ್ಯವಾದಗಳು”…
ತೊಕ್ಕೊಟ್ಟು: ಇಲ್ಲಿನ ಕಾಪಿಕಾಡು ಉಮಾಪುರಿಯ ಶ್ರೀ ಉಮಾಮಹೇಶ್ವರಿ ದೇವಸ್ಥಾನದಲ್ಲಿ ಅ. 3 ಗುರುವಾರದಿಂದ ಅ. 11ರ ವರೆಗೆ ನವರಾತ್ರಿ ಮಹೋತ್ಸವ ವಿಜೃಂಭಣೆಯಿಂದ ಜರಗಲಿದೆ ಎಂದು ಕ್ಷೇತ್ರದ ಆಡಳಿತ ಮೊಕ್ತೇಸರ ಎ.ಜೆ.ಶೇಖರ್‌ಹೇಳಿದ್ದಾರೆ.ಬ್ರಹ್ಮಶ್ರೀ ಕುಂಟಾರು ರವೀಶ್‌ತಂತ್ರಿಗಳ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರದಲ್ಲಿ ನವರಾತ್ರಿ ಉತ್ಸವ ಜರಗಲಿದೆ.ಅ. 3 ಬೆಳಿಗ್ಗೆ 9 ಗಂಟೆಗೆ ಹೆಚ್‌ಎಫ್‌ಡಿಸಿ ಬ್ಯಾಂಕ್‌ಪ್ರಬಂಧಕರು ಕಾಪಿಕಾಡಿನ ಅಶ್ವಿನ್‌ರಾವ್‌ಮತ್ತು ಸೋಮೇಶ್ವರ ಪರಿಜ್ಞಾನ ವಿದ್ಯಾಲಯದ ಶಿಕ್ಷಕಿ ರಾಧಿಕಾ ಅಶ್ವಿನ್‌ರಾವ್‌ದಂಪತಿ ಉತ್ಸವದ ನಂದಾದೀಪ ಪ್ರಜ್ವಲಿಸಲಿದ್ದಾರೆ.ಬಳಿಕ ಗಣಪತಿ ಹವನ, ನಾಗತಂಬಿಲ, ಪರಿವಾರ ದೈವಗಳಿಗೆ ತಂಬಿಲ ಧಾನ್ಯಲಕ್ಷ್ಮೀ ಪೂಜೆ, ಭಕ್ತಾಧಿಗಳಿಗೆ ತೆನೆ ವಿತರಣೆ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಅ. 7, ಬೆಳಿಗ್ಗೆ 10 ರಿಂದ ಶ್ರೀ ನಾಗದೇವರ ಸನ್ನಿಧಿಯಲ್ಲಿ ಸಾಮೂಹಿಕ ಆಶ್ಲೇಷ ಪೂಜೆ, ಅ. 9 ಬುಧವಾರ ಬೆಳಿಗ್ಗೆ 8 ಗಂಟೆಯಿಂದ ಬ್ರಹ್ಮಶ್ರೀ ಕುಂಟಾರು ರವೀಶ್‌ತಂತ್ರಿಗಳ ನೇತೃಥ್ವದಲ್ಲಿ ಚಂಡಿಕಾ ಹವನ ಜರಗಲಿದೆ. ಮಧ್ಯಾಹ್ನ ಪೂರ್ಣಿಮಾ ಮತ್ತು ಎ.ಜೆ.ಶೇಖರ್‌ಹಾಗೂ ಮನೆಯವರ ಸೇವಾ ರೂಪದಲ್ಲಿ ಅನ್ನಸಂತರ್ಪಣೆ ಜರಗಲಿದೆ.ಅ. 12 ರಂದು ಆಯುಧ ಪೂಜೆ ಹಿನ್ನೆಲೆಯಲ್ಲಿ ಬೆಳಿಗ್ಗೆ…
ಕೊಲ್ಯ: ಇಲ್ಲಿನ ಶ್ರೀ ಮೂಕಾಂಬಿಕಾ ದೇವಸ್ಥಾನದ ಸಭಾಂಗಣದಲ್ಲಿ ಕ್ಷೇತ್ರದ ಮಾತೃಮಂಡಳಿ, ವಿಶ್ವ ಹಿಂದೂ ಪರಿಷತ್ ಮತ್ತು ಅಂಚೆ ಇಲಾಖೆ ಸಹಯೋಗದೊಂದಿಗೆ ಸಾರ್ವಜನಿಕರಿಗೆ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಶಿಬಿರ ಇತ್ತೀಚೆಗೆ ನಡೆಯಿತು.ಶ್ರೀ ಕ್ಷೇತ್ರ ಮತ್ತು ಮಠದ ಅಧ್ಯಕ್ಷರಾಗಿರುವ ಮಧುಸೂದನ್ ಅಯ್ಯರ್ ಅವರ ಅಧ್ಯಕ್ಷತೆಯಲ್ಲಿ ಇವರ ಅಧ್ಯಕ್ಷತೆಯಲ್ಲಿ ಶಿಬಿರ ನಡೆಯಿತು. ಪುರೋಹಿತರಾದ ಶ್ಯಾಮ್ ಭಟ್ ಕಾರ್ಯಕ್ರಮ ಉದ್ಘಾಟಿಸಿದರು.ಸಮೂಹ ಅಪಘಾತ ವಿಮೆ, ಪಿ.ಎಂ ಜನ ಸುರಕ್ಷಾ ಯೋಜನೆಗಳು, ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ, ಸುಕನ್ಯಾ ಸುಕುಮಾರ ಯೋಜನೆಗಳ ಕುರಿತು ಮಾಹಿತಿಗಳನ್ನು ನೀಡಲಾಯಿತು.ದೇವಸ್ಥಾನದ ಕಾರ್ಯದರ್ಶಿ ನಾರಾಯಣ ಕುಂಪಲ, ಮಂಗಳೂರು ಉಪ ಅಂಚೆ ಅಧೀಕ್ಷಕರಾದ ದಿನೇಶ, ಸೋಮೇಶ್ವರ ಪುರಸಭೆಯ ಉಪಾಧ್ಯಕ್ಷರಾದ ರವಿಶಂಕರ್, ಮಾತೃ ಮಂಡಳಿಯ ಸಹ ಕಾರ್ಯದರ್ಶಿ ಮಾಲತಿ, ಕೇಶವ ಕಜೆ ಮುಂತಾದವರು ಉಪಸ್ಥಿತರಿದ್ದರು.
ನಾಟೆಕಲ್ : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘ ರಾಜ್ಯಾದ್ಯಂತ ಕರೆ ನೀಡಿರುವ ಮುಷ್ಕರದ ಅಂಗವಾಗಿ ಉಳ್ಳಾಲ ತಾಲೂಕು ಗ್ರಾಮ ಲೆಕ್ಕಾಧಿಕಾರಿಗಳು ನಾಟೆಕಲ್ ತಾಲೂಕು ಕಚೇರಿಯಲ್ಲಿ ಪ್ರತಿಭಟನೆ ನಡೆಸಿದರು.ಎಲ್ಲಾ ಬಗೆಯ ಮೊಬೈಲ್ ಆ್ಯಪ್ ಹಾಗೂ ವೆಬ್ ಅಪ್ಲಿಕೇಷನ್ ಗಳನ್ನು , ಲೇಖನಿ ಸ್ಥಗಿತಗೊಳಿಸಿ ರಾಜ್ಯವ್ಯಾಪಿ ಇಂದಿನಿಂದ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಭಾಗಿಯಾದರು.ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಯನ್ನು ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿ ನಿಗದಿಪಡಿಸಿ ಆದೇಶ ನೀಡುವ ಬಗ್ಗೆ, ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು, ಸೇವಾ ವಿಷಯಗಳಿಗೆ ಸಂಬಂಧಿಸಿ ಸೌಲಭ್ಯಗಳನ್ನು ಕಲ್ಪಿಸಬೇಕು ಎಂಬ ವಿಷಯಗಳು ಸೇರಿದಂತೆ ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಪ್ರತಿಭಟನೆಯಲ್ಲಿ ಭಾಗಿಯಾದರು.ತಾಲೂಕು ತಹಶೀಲ್ದಾರ್ ಎ.ಪುಟ್ಟರಾಜು ಇವರಿಗೆ ಬೇಡಿಕೆಗಳ ಮನವಿಯನ್ನು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಗ್ರಾಮಲೆಕ್ಕಾಧಿಕಾರಿಗಳು ಸಲ್ಲಿಸಿದರು.ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಗ್ರಾಮಲೆಕ್ಕಾಧಿಕಾರಿಗಳು ಸಲ್ಲಿಸಿದರು.ಈ ಸಂದರ್ಭ ಉಳ್ಳಾಲ ತಾಲೂಕು ಗ್ರಾಮ ಆಡಳಿತ ಸಂಘದ ಅಧ್ಯಕ್ಷ ತೌಫೀಕ್, ಉಪಾಧ್ಯಕ್ಷೆ ಅಕ್ಷತಾ, ಪ್ರ.ಕಾ ನವ್ಯ ಎಸ್.ಎನ್.ರಾವ್, ಕಾವ್ಯ, ಲಾವಣ್ಯ ಕೆ. ,…
ತೊಕ್ಕೊಟ್ಟು: ಜನಚೈತನ್ಯ ಸೌಹಾರ್ದ ಸಹಕಾರಿ ಸಂಘ ಭಟ್ನಗರ ತೊಕ್ಕೊಟ್ಟು ಇದರ 2023-24 ನೇ ಸಾಲಿನ ತೃತೀಯ ವಾರ್ಷಿಕ ಸಾಮಾನ್ಯ ಸಭೆಯು ಶನಿವಾರದಂದು ತೊಕ್ಕೊಟ್ಟು ಕ್ಲಿಕ್ ಸಭಾಂಗಣದಲ್ಲಿ ಸಹಕಾರಿ ಸಂಘದ ಅಧ್ಯಕ್ಷ ಯು. ರವೀಂದ್ರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಹಕಾರಿಯು 2023-24 ನೇ ಸಾಲಿನ ಅಂತ್ಯದಲ್ಲಿ ಸದಸ್ಯರಿಂದ 14,54,000 ಶೇರು ಬಂಡವಾಳವನ್ನು 2 ಕೋಟಿ 74 ಲಕ್ಷ ಠೇವಣಿಗಳು ಸಂಗ್ರಹ ಮಾಡಿದೆ ಮತ್ತು ಸುಮಾರು 200 ಸದಸ್ಯರಿಗೆ 9800,000 ದ ವರೆಗೆ ವಿವಿದ ಸಾಲಗಳನ್ನು ಮಂಜೂರು ಮಾಡಲಾಗಿದೆ. ಹೆಚ್ಚಿನವರು ಸಮಯಕ್ಕೆ ಸರಿಯಾಗಿ ಸಾಲ ಸಂದಾಯ ಮಾಡಿರುತ್ತಾರೆ.ನಾವು ಮುಂದಿನ ವರ್ಷ ಶೇರು ಬಂಡವಾಳ 30,00,000/- ಹಾಗೂ ನೀರಖು ಠೇವಣಿಗಳನ್ನು 3 ಕೋಟಿ ಹೆಚ್ಚು ಸಂಗ್ರಹಿಸಲು ಯೋಜನೆಗಳನ್ನು ಮಾಡಿದ್ದೇವೆ. ನಮ್ಮ ಸಹಕಾರಿಯನ್ನು ಉತ್ತಮ ಸ್ಥಿತಿಗೆ ತರಲು ಸದಸ್ಯರು ಹೆಚ್ಚು ಹೆಚ್ಚು ಶೇರುಗಳನ್ನು ಮತ್ತು ಠೇವಣಿಗಳನ್ನು ಕೊಟ್ಟು ಸಹಕರಿಸಬೇಕು ಮತ್ತು ಪಡೆದು ಕೊಂಡ ಸಾಲವನ್ನು ಸಲಯಾದ ಸಮಯಕ್ಕೆ ಮರುಪಾವತಿ ಮಾಡಬೇಕೆಂದು ಎಂದರು. ಸಹಕಾರಿಯ…
ಉಳ್ಳಾಲ: ಇಲ್ಲಿನ ನಿವಾಸಿ ಅಬ್ದುಲ್ ರಹೀಂ ಎಂಬವರ ಪುತ್ರ ಮೊಹಮ್ಮದ್ ಮಾಝೀನ್ (32) ಎಂಬವರ ಸಾವು ವೈದ್ಯರ ನಿರ್ಲಕ್ಷ್ಯದಿಂದ ಸಂಭವಿಸಿರುವುದಾಗಿ ಆರೋಪಿಸಲಾಗಿದ್ದು, ಈ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಆರೋಗ್ಯ ಅಧಿಕಾರಿಗಳು ಸೂಕ್ತ ತನಿಖೆ ನಡೆಸಬೇಕು ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್ ಹೇಳಿದ್ದಾರೆ.ಉಳ್ಳಾಲ ನಿವಾಸಿ ಮೊಹಮ್ಮದ್ ಮಾಝೀನ್ (32) ಎದೆಯಭಾಗದಲ್ಲಿರುವ ಸಣ್ಣ ಗುಳ್ಳೆಯನ್ನು ತೆಗೆಯಲೆಂದು ಕಂಕನಾಡಿಯ ಫೋಂಟ್ ಕಾಸ್ಮೆಟಿಕ್ ಸರ್ಜರಿ ಎಂಬ ಖಾಸಗಿ ಕ್ಲಿನಿಕ್ ನಲ್ಲಿ ತೆರಳಿದ್ದರು. ಅಲ್ಲಿ ಪರೀಕ್ಷಿಸುವ ಸಂದರ್ಭದಲ್ಲಿ ವೈದ್ಯರು ಪ್ರಜ್ಞೆ ತಪ್ಪಿಸಲು ನೀಡಿರುವ ಅನೆಸ್ತೇಷಿಯಾದಿಂದಾಗಿ ಅಕಾಲಿಕ ಮರಣ ಹೊಂದಿದ್ದಾರೆ. ಇದು ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಗಂಭೀರ ಆರೋಪವನ್ನು ಮನೆಮಂದಿ ಮಾಡಿದ್ದಾರೆ. ಅಲ್ಲದೆ ಮೃತ ಯುವಕನ ತಂದೆ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಪುತ್ರ ಕೂಡಾ ತೀರಿಕೊಂಡಿರುವುದರಿಂದ ದಿಕ್ಕು ತೋಚದಂತಾಗಿದ್ದಾರೆ. ಪ್ರಕರಣ ಕುರಿತು ಜಿಲ್ಲಾಧಿಕಾರಿಗಳು, ಜಿಲ್ಲಾ ಆರೋಗ್ಯ ಅಧಿಕಾರಿಗಳು ಸಮಗ್ರ ತನಿಖೆ ನಡೆಸಿ ಮೃತ ಮಾಝೀನ್ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂದು ಬೋಳಿಯಾರ್…

