ಬೆಳ್ತಂಗಡಿ: ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಫೆಬ್ರವರಿ 21 ಮತ್ತು 22 ರಂದು ವಿವಿಯ ಮಂಗಳ ಸಭಾಂಗಣದಲ್ಲಿ ನಡೆಯಲಿರುವ 27 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕಸಾಪ ಜಿಲ್ಲಾ ಅಧ್ಯಕ್ಷರು ಹಾಗೂ ಉಳ್ಳಾಲ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನಿಯೋಗ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಇವರನ್ನು ಭೇಟಿ ಮಾಡಿದರು.ಈ ಸಂದರ್ಭ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ| ಎಂ.ಪಿ ಶ್ರೀನಾಥ್ , ಜಿಲ್ಲಾ ಸಂಘಟನಾ ಕಾರ‍್ಯದರ್ಶಿ ಲ| ಚಂದ್ರಹಾಸ್ ಶೆಟ್ಟಿ, ಉಳ್ಳಾಲ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ| ಧನಂಜಯ ಕುಂಬ್ಳೆ, ಗೌರವ ಕಾರ‍್ಯದರ್ಶಿ ಉಳ್ಳಾಲ ತಾಲೂಕು ಸಾಹಿತ್ಯ ಪರಿಷತ್ ಕೆ. ರವೀಂದ್ರ ರೈ, ಸದಸ್ಯರಾದ ಸುಧೀಂದ್ರ ರೈ ಉಪಸ್ಥಿತರಿದ್ದರು.
Author: UllalaVani
ಉಳ್ಳಾಲ: ವಿದ್ಯಾರ್ಥಿಗಳ ಜೀವನಶೈಲಿ ಸುಧಾರಣೆಗಾಗಿ ಸಂಸ್ಥೆಗಳು ನೀಡಿರುವ ಸಮಯ ಅಮೂಲ್ಯವಾದುದು. ಉತ್ತಮ ವಿಚಾರಗಳನ್ನು ಮೈಗೂಡಿಸಿಕೊಂಡು ಜೀವನದಲ್ಲಿ ಅಳವಡಿಸುವ ಮುಖೇನ ಉತ್ತಮ ನಾಗರಿಕರಾಗಿರಿ ಎಂದು ಮಂಜನಾಡಿ ಮೌಲಾನಾ ಆಜಾದ್ ಮಾದರಿ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯಿನಿ ಕವಿತಾ ನಾಯ್ಕ ಅಭಿಪ್ರಾಯಪಟ್ಟರುಅವರು ಉಳ್ಳಾಲವಾಣಿ ಕನ್ನಡಪತ್ರಿಕೆ, ಲೈಫ್ ನೆಸ್ಟ್ ಟ್ರಸ್ಟ್ ಹಾಗೂ ಕೆ.ಎಸ್ ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ಸಹಯೋಗದೊಂದಿಗೆ ಜರಗಿದ ಹದಿಹರೆಯದ ಹೆಣ್ಣು ಮಕ್ಕಳಿಗೆ ಸಂಬಂಧಿಸಿದ ವಿಷಯಗಳು, ಶಬ್ದ ಮಾಲಿನ್ಯ ಹಾಗೂ ಮಾನಸಿಕ ವಿಷಯಗಳ ಕುರಿತು ಆರೋಗ್ಯ ಮಾಹಿತಿ ಶಿಬಿರವನ್ನು ಉದ್ಘಾಟಿಸಿದರು.ಕ್ಷೇಮ ಆಸ್ಪತ್ರೆಯ ಇಎನ್ ಟಿ ತಜ್ಞೆ ಡಾ.ವೈಷ್ಣವಿ ಶಬ್ದ ಮಾಲಿನ್ಯದ ಕುರಿತು ಎಚ್ಚರಿಕೆ ಹಾಗೂ ಜಾಗೃತಿಯ ವಿವರವನ್ನು ವಿದ್ಯಾರ್ಥಿಗಳಿಗೆ ನೀಡಿದರು.ಈ ಸಂದರ್ಭ ದ.ಕ.ಜಿ.ಪಂ. ಹಿ.ಪ್ರಾ.ಶಾಲೆ ಮಂಜನಾಡಿ ಮುಖ್ಯೋಪಾಧ್ಯಾಯಿನಿ ಸುರೇಖಾ, ಇಎನ್ ಟಿ ತಜ್ಞೆ ಡಾ.ವೈಷ್ಣವಿ, ಮನೋತಜ್ಞರಾದ ಸುಲೋಚನಾ, ಸ್ತ್ರೀರೋಗ ತಜ್ಞೆ ಡಾ.ದ್ರವ್ಯ ಹೆಗ್ಡೆ, ಇಎನ್ ಟಿ ವಿಭಾಗದ ಡಾ. ಸಂಚಿತ, ಮಾರುಕಟ್ಟೆ ವಿಭಾಗದ ಅಕ್ಷಯ್ ಮತ್ತು ಅನಿಲ್ ಹಾಗೂ ಲೈಫ್ ನೆಸ್ಟ್ ಟ್ರಸ್ಟ್ ನ ಅಚಲ್…
ಉಳ್ಳಾಲ: ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಸಂಘದ ಮುಂದಿನ ಐದು ವರ್ಷದ ಅವಧಿಗೆ ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರುಗುತ್ತು ಅಧ್ಯಕ್ಷರಾಗಿ ಅವಿರೋಧವಾಗಿ ಪುನರಾಯ್ಕೆಗೊಂಡಿದ್ದು, ಅಬ್ಬುಸಾಲಿ ಕೆ.ಬಿ ಕಿನ್ಯಾ ಉಪಾಧ್ಯಕ್ಷರಾಗಿ ಆಯ್ಕೆಯಾದರು.ಈ ವೇಳೆ ಮಾತನಾಡಿದ ಕೃಷ್ಣ ಶೆಟ್ಟಿ ಕೋಟೆಕಾರುಗುತ್ತು, ಕಳೆದ ಐದು ವರ್ಷ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಲ್ಲಿ ಅಧ್ಯಕ್ಷನಾಗಿ ನಿರ್ದೇಶಕ ಮಿತ್ರರ ಪಾರದರ್ಶಕ ಆಡಳಿತ ನೀಡಿರುತ್ತೇನೆ. ಐದು ವರ್ಷದಲ್ಲಿ ಅಭೂತಪೂರ್ವ ಪ್ರಗತಿಯನ್ನು ಸಾಧಿಸಲಾಗಿದೆ,. ಹಲವು ರೈತಪರ ಯೋಜನೆಗಳು, ಸಮಾಜಮುಖಿ ಕೆಲಸಗಳನ್ನು ಮಾಡಲಾಗಿದೆ. ಭತ್ತ ಬೆಳೆಸುವ ಕೃಷಿಕರಿಗೆ ಪ್ರೋತ್ಸಾಹ ಧನ, ಮೈಲುಸುತ್ತಿನಲ್ಲಿ ಸಬ್ಸಿಡಿ, ಎಸ್ ಎಸ್ ಎಲ್ ಸಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಮತ್ತು ಗೌರವ, ಸರಕಾರಿ ಶಾಲೆಯನ್ನು ಗುರುತಿಸಿ ಮಕ್ಕಳಿಗೆ ಪುಸ್ತಕ ಹಾಗೂ ಬ್ಯಾಗ್, ಕೊಡೆ ಸಾಮಗ್ರಿಗಳನ್ನು ವಿತರಿಲಾಗಿದೆ. ಕೋಟೆಕಾರು ಬೀರಿಯಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಿ ಶಾಶ್ವತ ಲಾಭ ಬರುವ ಯೋಜನೆಯನ್ನು ಕಲ್ಪಿಸಲಾಗಿದೆ. ಐದು ವರ್ಷಗಳ ಸಾಧನೆಯನ್ನು ಗಮನಿಸಿ ಅಪೆಕ್ಸ್ ಸಾಧಕ ಪ್ರಶಸ್ತಿಯೂ ಬ್ಯಾಂಕಿಗೆ…
ಮಂಗಳ ಗಂಗೋತ್ರಿ: ನಾ. ಡಿಸೋಜರು ಅಭಿವೃದ್ಧಿ ಮತ್ತು ಪರಿಸರ ನಡುವೆ ಸಮತೋಲನ ಕಾಯ್ದುಕೊಳ್ಳಬೇಕಾದ ಅಗತ್ಯವನ್ನು ಪ್ರತಿಪಾದಿಸಿದ ಕನ್ನಡದ ಲೇಖಕ. ಅವರ ಕಾದಂಬರಿಗಳಲ್ಲಿ ಪ್ರಕೃತಿ ವಿನಾಶದ ದುಷ್ಪರಿಣಾಮಗಳ ಕುರಿತು, ಅಭಿವೃದ್ಧಿಯ ಅಮಾನವೀಯ ಮುಖ ಅನಾವರಣಗೊಂಡಿದೆ ಎಂದು ಮಂಗಳೂರು ವಿವಿಯ ಕುಲಸಚಿವ ರಾಜು ಮೊಗವೀರ ಹೇಳಿದರು. ಅವರು ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಮಂಗಳೂರು ವಿವಿ ವತಿಯಿಂದ ವಿವಿಯ ಆಡಳಿತ ಸೌಧದ ರಾಣಿ ಅಬ್ಬಕ್ಕ ಸಭಾಂಗಣದಲ್ಲಿ ನಡೆದ ನಾ. ಡಿಸೋಜ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಭಿವೃದ್ಧಿಯ ಮಾದರಿಗಳು ಭಿನ್ನ ಇರಬಹುದು. ಶರಾವತಿಯಲ್ಲಿ ಮುಳುಗಡೆಯಿಂದ, ಇನ್ನೊಂದೆಡೆ ರಸ್ತೆ ಅಗಲೀಕರಣದಿಂದ, ಮಗದೊಂದೆಡೆ ವಿಮಾನ ನಿಲ್ದಾಣದಿಂದ ಹೀಗೆ ಬೇರೆ ಬೇರೆ ಕಾರಣಗಳಿಂದ ಮನೆ, ಜಾಗ ಕಳೆದುಕೊಂಡು ವಲಸೆ ಹೋಗಬೇಕಾದವರ ಭಾವನೆಗಳು, ಸಂಕಟಗಳು ಸಮಾನ. ಬರಹಗಾರರು ಇಂತಹ ನೋವಿಗೆ ಮಿಡಿಯುತ್ತಾರೆ. ನಾ ಡಿಸೋಜರ ಬರಹದಲ್ಲಿ ನಾವದನ್ನು ಕಾಣಬಹುದಾಗಿದೆ ಎಂದರು. ದ.ಕ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಂ.ಪಿ ಶ್ರೀನಾಥ್ ಮಾತನಾಡಿ ನಾ ಡಿಸೋಜರು ಯಾವುದೇ ಒಂದು ಇಸಂಗೆ ಒಳಗಾಗದೇ…
ತೊಕ್ಕೊಟ್ಟು: ಉಳ್ಳಾಲದ ಮಂತ್ರ ನಾಟ್ಯಕಲಾ ಗುರುಕುಲ ಇದರ ಗುರುಕುಲ ಉತ್ಸವ-2025 ಕುತ್ತಾರು ಶ್ರೀ ರಾಜರಾಜೇಶ್ವರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಜ.14 ರಂದು ಮಧ್ಯಾಹ್ನ 3.00 ಕ್ಕೆ ನಡೆಯಲಿದ್ದು, ಶಾಂತಲಾ ನಾಟ್ಯ ಪ್ರಶಸ್ತಿ ಪುರಸ್ಖೃತ ನಾಟ್ಯಾಚಾರ್ಯ ಉಳ್ಳಾಲ ಮೋಹನ್ ಕುಮಾರ್ ದೇವತಾ ಜ್ಯೋತಿ ಪ್ರಜ್ವಲಿಸಲಿದ್ದಾರೆ. ಯಕ್ಷಗಾನ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ ಇವರಿಗೆ ಯಕ್ಷ ಮಂತ್ರ್ಯಕ ಪ್ರಶಸ್ತಿ ಪ್ರಧಾನ ನಡೆಯಲಿದೆ ಎಂದು ಮಂತ್ರ ನಾಟ್ಯಕಲಾ ಗುರುಕುಲ ಇದರ ಕಾರ‍್ಯದರ್ಶಿ ಕಿರಣ್ ಉಳ್ಳಾಲ್ ಹೇಳಿದರು.ತೊಕ್ಕೊಟ್ಟು ಸೇವಾ ಸೌಧದಲ್ಲಿರುವ ಉಳ್ಳಾಲ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಶ್ರೀ ಪೂರ್ಣಾನಂದ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಗಣೇಶ್ ಶೆಣೈ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ., ಸೋಮೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಪವಿತ್ರ ಕುಮಾರ್ ಗಟ್ಟಿ, ಶ್ರೀ ಚೀರುಂಭ ಭಗವತಿ ಕ್ಷೇತ್ರ ಉಳ್ಳಾಲದ ಆಡಳಿತ ಮೊಕ್ತೇಸರ ಸುರೇಶ್ ಭಟ್ನಗರ, ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ …
ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಟೋಲ್ ಬೂತ್ ಗಳು ಕರ‍್ಯಾಚರಿಸಲಿದೆ. ಈ ಭಾಗದ ಜನರ ಆದಾಯದ ಬಹುಪಾಲು ಟೋಲ್ ಕಟ್ಟಲೆಂದೇ ವಿನಿಯೋಗವಾಗಲಿದೆ. ಈ ಕೂಡಲೇ ಹೋರಾಟಕ್ಕೆ ಸಜ್ಜಾಗುವ ಅನಿವಾರ್ಯತೆ ಇದೆ. ತಲಪಾಡಿ ಟೋಲ್ ಬೂತ್ ವಿರುದ್ಧ ಮಂಜೇಶ್ವರ ನಿವಾಸಿಗಳು ಮಾತ್ರವಲ್ಲ ತಲಪಾಡಿ ನಿವಾಸಿಗಳಿಗೂ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಸಿಪಿಐಎಂ ಜಿಲ್ಲಾ ಕರ‍್ಯದರ್ಶಿ ಮುನೀರ್ ಕಾಟಿಪಳ್ಳ ಹೇಳಿದ್ದಾರೆ.ಮಂಜೇಶ್ವರ ಗ್ರಾಮ ಪಂಚಾಯತ್ ಆಕ್ಷನ್ ಕಮಿಟಿ ಆಶ್ರಯದಲ್ಲಿ ತಲಪಾಡಿ ಟೋಲ್ ಬೂತ್ ಎದುರುಗಡೆ ಮಂಜೇಶ್ವರದ ಆಸುಪಾಸಿನ ಎಲ್ಲಾ ನಿವಾಸಿಗಳು ಜತೆ ಸೇರಿ ಹಮ್ಮಿಕೊಂಡ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.ದ.ಕ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹಲವಾರು ಹೆದ್ದಾರಿಗಳು ಮೇಲ್ದರ್ಜೆಗೆ ಏರುವ ಪ್ರಕ್ರಿಯೆಯಲ್ಲಿದೆ. ಬಿ.ಸಿ.ರೋಡಿನಿಂದ ಗುಂಡ್ಯಕ್ಕೆ ಹೋಗುವ ಹೆದ್ದಾರಿ ಮಧ್ಯೆ ಎರಡು ಟೋಲ್ ಗೇಟ್ ಗಳು, ಬೆಳ್ತಂಗಡಿ ಚಾರ್ಮಾಡಿ ಭಾಗದಲ್ಲಿಯೂ ಒಂದು ಟೋಲ್, ಗಂಜಿಮಠ ಸೂರಲ್ಪಾಡಿ ಟೋಲ್, ಟೋಲ್ ಬೂತ್ ಸ್ಟ್ರಕ್ಚರ್ ಆರಂಭವಾಗಿದೆ. ಸುರತ್ಕಲ್, ಬ್ರಹ್ಮರಕೂಟ್ಲು, ಹೆಜಮಾಡಿ, ಸಾಸ್ತಾನ, ಕುಂದಾಪುರ ಈಗಾಗಲೇ ಇದೆ. ತುಳುನಾಡಿನ ಉದ್ದಕ್ಕೂ ಟೋಲ್ ಗಳೇ ಇರುವುದರಿಂದ ಜನರ…
ಉಳ್ಳಾಲ: ಉಳ್ಳಾಲ ನಗರಸಭೆ ವ್ಯಾಪ್ತಿಯಲ್ಲಿ ರೂ.341 ಕೋಟಿ ರೂ ಅನುದಾನಗಳ ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದ್ದು, ಚುನಾವಣಾ ಪೂರ್ವ ಹೇಳಿದಂತೆ ಕ್ಷೇತ್ರದುದ್ದಕ್ಕೂ ಶಾಸಕ, ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರು ನುಡಿದಂತೆ ನಡೆದುಕೊಂಡಿದ್ದಾರೆ ಎಂದು ಉಳ್ಳಾಲ ನಗರಸಭೆ ಮಾಜಿ ಉಪಾಧ್ಯಕ್ಷ , ಹಾಲಿ ಕೌನ್ಸಿಲರ್ ಅಯೂಬ್ ಮಂಚಿಲ ಹೇಳಿದ್ದಾರೆ.ತೊಕ್ಕೊಟ್ಟು ಸೇವಾಸೌಧದಲ್ಲಿರುವ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಕನಸಿನ ಕೂಸು ಬಹುಕೋಟಿ ಯೋಜನೆಯಾದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ. ನೀರನ್ನು ಸಮರ್ಪಕವಾಗಿ ಮನೆಗಳಿಗೆ ತಲುಪಲು ಪೈಪ್ ಲೈನ್ ಕಾಮಗಾರಿಗೆ ರೂ. 74.00 ಕೋಟಿ ಮಂಜೂರಾಗಿ ಕಾಮಗಾರಿ ನಡೆಯುತ್ತಿದೆ. ಮಂಚಿಲ-14ನೇ ವಾರ್ಡಿನ ತೊಕ್ಕೊಟ್ಟು ಒಳಪೇಟೆ, ಮಂಚಿಲ, ಸಹಾರ ರಸ್ತೆ, ಮಾರ್ಗತಲೆ, ಕಟ್ಟತಲೆ, ಪರಪು, ಹೊಯಿಗೆ, ಹಿತ್ಲು ಕಡೆಗಳಲ್ಲಿಯೂ ಕಾಮಗಾರಿ ಆರಂಭಗೊಂಡಿದೆ. ಹೊಯಿಗೆಹಿತ್ಲು ಹಿನ್ನೀರಿನ ಪ್ರದೇಶದಲ್ಲಿ ರೂ.30 ಲಕ್ಷ ವೆಚ್ಛದಲ್ಲಿ ತಡೆಗೋಡೆ ಕಾಮಗಾರಿ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಹಳೇಕೋಟೆ ಸಾರ್ವಜನಿಕ ರಸ್ತೆ ಜರಿದು ತಡೆಗೋಡೆ ನಿರ್ಮಾಣಕ್ಕೆ ರೂ.1 ಕೋಟಿ ರೂ…
ನರಿಂಗಾನ: ಮಾನಸಿಕ ಅಸಮತೋಲನ ಸ್ನೇಹಿತರೊಂದಿಗೆ, ಕುಟುಂಬದೊಂದಿಗೆ ಸಮಾನವಾದ ನಡವಳಿಕೆಗೆ ಅಡಚಣೆಯಾಗಬಹುದು. ಪ್ರತಿದಿನ ಕೇವಲ 20 ನಿಮಿಷ ವ್ಯಾಯಾಮ ಮಾಡಿದರೂ, ದೇಹದ ಜೊತೆಗೆ ಮನಸ್ಸಿಗೂ ಶ್ರೇಷ್ಠವಾದ ಶಾಂತಿ ದೊರೆಯುತ್ತದೆ. ಯೋಗ ಮತ್ತು ಧ್ಯಾನ ಮನಸ್ಸಿಗೆ ವಿಶ್ರಾಂತಿ ನೀಡುತ್ತದೆ, ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಯ ಮಾನಸಿಕ ವಿಭಾಗಗಳ ಸಾಮಾಜಿಕ ಕಾರ‍್ಯಕರ್ತೆ ದೀಪ್ತಿ ಅಭಿಪ್ರಾಯಪಟ್ಟರು.ಅವರು ನರಿಂಗಾನ ಗ್ರಾಮದ ಕಲ್ಲರಕೋಡಿ ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೇರಳಕಟ್ಟೆ ಕೆ.ಎಸ್ ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ, ಲೈಫ್ ನೆಸ್ಟ್ ಟ್ರಸ್ಟ್ , ಉಳ್ಳಾಲವಾಣಿ ಪತ್ರಿಕೆ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡ ವಿದ್ಯಾರ್ಥಿನಿಯರಿಗಾಗಿ ಆರೋಗ್ಯ ಜಾಗೃತಿ ಕಾರ್ಯಕ್ರಮ ಮತ್ತು ಹೆಲ್ದೀ ಹ್ಯಾಬಿಟ್ಸ್ ಆಂಡ್ ನಿಶಬ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಬಳಿಕ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.ಏಕಾಂತ ಬಯಸುವುದು, ನಿದ್ರೆ ಸಮಸ್ಯೆ, ಏಕಾಗ್ರತೆಯ ಕೊರತೆ, ಆಸಕ್ತಿಯ ಕೊರತೆಯು ಒತ್ತಡಗಳಿಂದ ಹೆಚ್ಚಾಗಬಹುದು. ಓದು ಮತ್ತು ಆಟಕ್ಕೆ ಸಮಾನ ಪ್ರಮಾಣದಲ್ಲಿ ಸಮಯ ಕಾದಿರಿಸಿ. ವಿಶ್ರಾಂತಿ ಕೂಡ ಮುಖ್ಯವೆಂದು ಪರಿಗಣಿಸಿಕೊಂಡು ಕಲಿಕೆ…
ಉಳ್ಳಾಲ : ಬಾವಿ ನೀರಿನಲ್ಲಿ ಪೆಟ್ರೋಲ್ ಅಂಶ ಪತ್ತರ ಪ್ರಕರಣಕ್ಕೆ ಸಂಬಂಧಿಸಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಯಿಂದ ಪಜೀರು ಗ್ರಾಮ ಪಂಚಾಯಿತಿ ಮೂಲಕ ಇಂಡಿಯನ್ ಆಯಿಲ್ ಸಂಸ್ಥೆಯ ಮುಖ್ಯ ಪ್ರಬಂಧಕರಿಗೆ ನೋಟೀಸು ನೀಡಿ ವಿವರಣೆ ಕೇಳಿದರೂ ಈವರೆಗೆ ನೀಡದೇ ಇರುವುದರಿಂದ, ಗ್ರಾಮಸ್ಥರಿಗೆ ಬಾವಿಯಲ್ಲಿನ ನೀರು ಕುಡಿಯದೇ, ಪೈಪ್ ಲೈನ್ ಇಲ್ಲದ ಮನೆಮಂದಿ ನೀರಿನ ಬವಣೆಯಿಂದ ಬಳಲುತ್ತಿದ್ದಾರೆ. ಅತಿಶೀಘ್ರ ಪರಿಹಾರ ಸಿಗದೇ ಇದ್ದಲ್ಲಿ ಗ್ರಾಮಸ್ಥರು ಪ್ರತಿಭಟನೆಗೆ ಇಳಿಯುವ ಎಚ್ಚರಿಕೆಯನ್ನು ನೀಡಿದ್ದಾರೆ.ಉಳ್ಳಾಲ ತಾಲೂಕು ಪಜೀರು ಗ್ರಾಮದ ಸಾಂಬಾರತೋಟ ಪರಿಸರದ ಜನರು ಎದುರಿಸುತ್ತಿರುವ ನೀರಿನ ಸಮಸ್ಯೆ ಒಂದು ಕಡೆಯಾದರೆ, ಸುಮಾರು ಏಳೆಂಟು ತಿಂಗಳುಗಳಿಂದ ಇಲ್ಲಿರುವ ನೀರಿನಲ್ಲಿ ತೈಲ ಅಂಶ ಮಿಶ್ರಣವಿರುವುದು ಇನ್ನೊಂದು ಸಮಸ್ಯೆಯಾಗಿದೆ. ಈ ಪರಿಸರದಲ್ಲಿ ನೂರಾರು ಮನೆಗಳಿದ್ದು ಏಳು ತಿಂಗಳುಗಳಿಂದ ಹತ್ತು ಕೊಳವೆ ಬಾವಿ ಹಾಗೂ 5 ಬಾವಿಗಳ ನೀರಿನಲ್ಲಿ ಕಳೆದ ಮೂರು ತಿಂಗಳುಗಳಿಂದ ಇಂಧನದ ದುರ್ವಾಸನೆ ಬರುತ್ತಿದೆ. ಇದರಿಂದ ಸ್ಥಳೀಯ ನಾಗರಿಕರು ಗ್ರಾಮ ಪಂಚಾಯಿತಿಗೆ ದೂರು ನೀಡಿದ್ದು, ಕ್ಷೇತ್ರದ ಶಾಸಕರಿಗೂ…
ಉಳ್ಳಾಲ: ಯುವಕರಲ್ಲಿ ಸಾಂವಿಧಾನಿಕ ಮೌಲ್ಯಗಳನ್ನು ಹೆಚ್ಚು ಮಾಡುವುದರ ಜೊತೆಗೆ ಅಂಗಾಂಗಳ ಸುರಕ್ಷತೆ, ಕೌಶಲ್ಯ ವೃದ್ಧಿ, ಪ್ರಗತಿಪರ ಜ್ಞಾನ ಹಾಗೂ ಮೌಲ್ಯಗಳನ್ನು ಕಟ್ಟುವ ಕೆಲಸವಾಗಬೇಕಿದೆ. ಈ ಮೂಲಕ ವ್ಯಕ್ತಿತ್ವ ವಿಕಸನ ಸಾಧ್ಯವಿದ್ದು, ವ್ಯಾಯಾಮ ಶಾಲೆಯೂ ಅದೇ ಮಾದರಿಯಲ್ಲಿ ಕಾರ್ಯಾಚರಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ಜನಪದ ವಿದ್ವಾಂಸ ರಾಜ್ಯ ನಿಕಟಪೂರ್ವ ಎನ್ ಎಸ್ ಎಸ್ ಅಧಿಕಾರಿ, ಬೆಂಗಳೂರು ಸರಕಾರದ ಜಂಟಿ ಕಾರ್ಯದರ್ಶಿ ಡಾ| ಗಣನಾಥ ಎಕ್ಕಾರು, ಅಭಿಪ್ರಾಯಪಟ್ಟರು.ಅವರು ಮುನ್ನೂರು ಕುತ್ತಾರಿನ ವಿಷ್ಣುಮೂರ್ತಿ ದೈವಸ್ಥಾನದ ಬಳಿ ಜರಗಿದ ಶ್ರೀ ಜೈ ವೀರಾಂಜನೇಯ ವ್ಯಾಯಾಮ ಶಾಲೆ ಇದರ 39ನೇ ವಾರ್ಷಿಕೋತ್ಸವ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು. ಶ್ರೀ ಜೈ ವೀರಾಂಜನೇಯ ವ್ಯಾಯಾಮ ಶಾಲೆ ಸೌಹಾರ್ದಯುತ ಚಟುವಟಿಕೆಗಳನ್ನೇ ಹಮ್ಮಿಕೊಳ್ಳುವ ಮೂಲಕ ಭಾರತದ ಸಂವಿಧಾನದ ಆಶಯಕ್ಕೆ ತಕ್ಕಂತೆ ಯುವಕರು ಕಾರ್ಯನಿರ್ವಹಿಸುತ್ತಿರುವುದು ಅಭಿಮಾನದ ವಿಚಾರ. ಪ್ರಸ್ತುತ ಸಮಾಜದಲ್ಲಿ ಹೊಸ ರೀತಿಯ ಯೋಚನಾ ಕ್ರಮ, ಚಿಂತನೆಗಳು, ಚಟುವಟಿಕೆಗಳು ಮುಖ್ಯವಾಗಿರುತ್ತದೆ ಯುವಕರ ವ್ಯಕ್ತಿತ್ವ ವಿಕಸನ ಬಹುಮುಖ್ಯ ವಿಚಾರವಾಗಿದೆ. ಯುವಕರ ಶಕ್ತಿಯ ಅರಿವನ್ನು ಉಂಟು…

