Author: UllalaVani

Kannada News From Coastal Karnataka

ಉಳ್ಳಾಲ: ಮನೆಯಲ್ಲೇ ನೇಣುಬಿಗಿದು ದೇರಳಕಟ್ಟೆ ಟಯರ್ ಅಂಗಡಿ ಸಿಬ್ಬಂದಿ ಆತ್ಮಹತ್ಯೆ ನಡೆಸಿಕೊಂಡಿರುವ ಘಟನೆ ಕಲ್ಕಟ್ಟ ಸಮೀಪದ ಬಟ್ಯಾಡಿ ಎಂಬಲ್ಲಿ ಸಂಭವಿಸಿದೆ.ಕಲ್ಕಟ್ಟ ನಿವಾಸಿ ಪ್ರಕಾಶ್ ಅಂದ್ರಾದೆ (45) ಸಾವನ್ನಪ್ಪಿದವರು. ಹಲವು ವರ್ಷಗಳಿಂದ ದೇರಳಕಟ್ಟೆ ಟಯರ್ ಅಂಗಡಿಯಲ್ಲಿ ಕೆಲಸಕ್ಕಿದ್ದರು. ಮನೆಯಲ್ಲಿ ಯಾರೂ ಇಲ್ಲದಿರುವ ಸಂದರ್ಭ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ವಿವಾಹಿತರಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಅಂತಿಮ ಸಂಸ್ಕಾರ ನಾಳೆ ಪಾನೀರು ಚರ್ಚಿನಲ್ಲಿ ಜರಗಲಿದೆ.

Read More

ಕೆ.ಸಿ ರೋಡು: ಕೋಟೆಕಾರು ಬ್ಯಾಂಕ್ ಕೆ.ಸಿರೋಡು ಶಾಖೆಯಿಂದ ಆಗತುಂಕರ ತಂಡವೊಂದು ಬಂದೂಕು ತೋರಿಸಿ ಭಾರೀ ದರೋಡೆ ನಡೆಸಿದ ಘಟನೆ ಶುಕ್ರವಾರದಂದು ನಡೆದಿದೆ. ಹಾಡಹಗಲೇ ಐದು ಮಂದಿ ಆಗಂತುಕರ ತಂಡದಿಂದ ಕೃತ್ಯ ನಡೆದಿದ್ದು ಚಿನ್ನ ಒಡವೆ, ನಗದುಗಳೆಲ್ಲವೂ ಕಳವು ಮಾಡಲಾಗಿದೆ. ಫಿಯೇಟ್ ಕಾರಿನಲ್ಲಿ ಬಂದ ತಂಡದಿಂದ ಈ ಕೃತ್ಯ ನಡೆದಿದೆ ಎನ್ನಲಾಗಿದೆ. ದರೋಡೆ ಬಳಿಕ ಮಂಗಳೂರು ಕಡೆಗೆ ತಂಡ ಪರಾರಿಯಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರ ತಂಡ ದೌಡಾಯಿಸಿ ತನಿಖೆ ನಡೆಸುತ್ತಿದ್ದಾರೆ.

Read More

ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಹೊಣೆಗಾರಿಕೆ ಉಳ್ಳವನೇ ನಿಜವಾದ ಗುರು ಎಂಬುದಾಗಿ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ ಅಭಿಪ್ರಾಯಪಟ್ಟರು. ಉಳ್ಳಾಲದ ಮಂತ್ರ ನಾಟ್ಯಕಲಾ ಗುರುಕುಲದ 12ನೇ ವರ್ಷದ ಗುರುಕುಲ ಉತ್ಸವದಲ್ಲಿ “ಯಕ್ಷ ಮಂತ್ರ್ಯಕ” ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.ಭರತನಾಟ್ಯ, ಯಕ್ಷಗಾನದಂತಹ ಕಲೆಗಳು ಗುರು ಪರಂಪರೆಯಿಂದ ಬಂದಂತವು, ಸ್ವಾಸ್ಥ್ಯ ಸಮಾಜದ ನಿರ್ಮಾಣ ಗುರುವಿನಿಂದಲೇ ಸಾಧ್ಯ ಎಂದರು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಗಣೇಶ್ ಶೆಣೈ ನೆರವೇರಿಸಿ ಮಾತನಾಡಿ ಮಂತ್ರ ನಾಟ್ಯಕಲಾ ಗುರುಕುಲವು ಮಕ್ಕಳಲ್ಲಿ ಸಂಸ್ಕಾರವನ್ನು ಮೂಡಿಸುವ ಕೆಲಸವನ್ನು ಮಾಡುತ್ತಿದೆ ಎಂದರು.ಸಭಾಧ್ಯಕ್ಷತೆಯನ್ನು ಶ್ರೀ ರಾಜೇಶ್ ಅತ್ತಾವರ ವಹಿಸಿದ್ದರು, ಶ್ರೀ ಪವಿತ್ರ ಕುಮಾರ್ ಗಟ್ಟಿ, ತ್ಯಾಗಮ್ ಹರೇಕಳ, ಅಮಿತ್ ರಾಜ್ ಬೇಕಲ, ನರೇಶ್ ಪಂಡಿತ್ ಹೌಸ್, ಗುರುಕುಲದ ಗೌರವಾಧ್ಯಕ್ಷೆ ಶ್ರೀಮತಿ ಶಕೀಲಾ ಜನಾರ್ಧನ, ಟ್ರಸ್ಟಿಗಳು ಶ್ರೀಮತಿ ಶೈನಾ ಶ್ರಾವಣ್, ಬಬಿತಾ ಕಿರಣ್ ಉಪಸ್ಥಿತರಿದ್ದರು. ಈ ಸಂದರ್ಭ ವಿದ್ಯಾರ್ಥಿಗಳ ವತಿಯಿಂದ ಗುರುವಂದನಾ ಕಾರ್ಯಕ್ರಮ ನೆರವೇರಿತು. ಅಗಲಿದ ಶಿಷ್ಯೆ ಶೃತಿಯ ನೆನಪಿನಲ್ಲಿ “ಶೃತಿ ಸ್ಮೃತಿ” ಎಂಬ ಕಾರ್ಯಕ್ರಮ ನಡೆಯಿತು. ಕನ್ನಡ ಮತ್ತು…

Read More

ಅಲ್ ಮದೀನ ಯತೀಮ್ ಖಾನದಲ್ಲಿ ನಡೆಯುತ್ತಿರುವ ಶರ್ಫೆ ಬುರ್ದಾ ಮಜಲಿಸ್ ಸಮಿತಿಯನ್ನು ರಚಿಸಲಾಯಿತುಸಲಹ ಸಮಿತಿ ಜನಾಬ್ ಅಬ್ದುಲ್ ಖಾದರ್ ಸಖಾಫಿ, ಬಹು ಅಬ್ದುಲ್ಲ ಅಹಸನಿ ಪುಂಜಾಲ ಕಟ್ಟೆ, ಜನಾಬ್ ಅಬ್ದುಲ್ ಅಹಸನಿ ಮುಕ್ಕಮ್. ಅಧ್ಯಕ್ಷರು ಜನಾಬ್ ಅಬ್ದುಲ್ ರೆಹಮಾನ್ಆಹಸನಿ, ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಮಾಸ್ಟರ್ ಕಲ್ಕಟ, ಕೋಶಾ ಧಿಕಾರಿ ರಫೀಕ್ ಮೊರ್ಲ, ವರ್ಕಿಂಗ್ ಕಾರ್ಯದರ್ಶಿ ಅಮಾನ್ ಮರ್ಜೂಕಿ ಆಹಸನಿ ವಾಲಾಲ್ಉಪಾಧ್ಯಕ್ಷರುಗಳು ಅಸಯ್ಯದ್ಉವೈಸ್ ಅಸ್ಸಗಾಫಿ ತಂಗಲ್, ಮುನೀರ್ ಅಹಮದ್ ಖಾಮಿಲ್ ಸಕಾಪಿ, ಮೊಹಮ್ಮದ್ ಅಂಜದಿ , ಕೆಎಂ ಕೆ ಮಂಜನಾಡಿ,ಕಾರ್ಯದರ್ಶಿಗಳಾಗಿ ಅಬುಸಾಲಿ ಅಲ್ಹರಿ, ಕುನ್ನಿ ಭಾವ ಹಾಜಿ ಕಲ್ಕಟ್ಟ, ಶೌಕತ್ ಹಾಜಿ ದೇರಳಕಟ್ಟೆ, ಮುತ್ತು ಮೋರ್ಲಾ, ಹನೀಫ್ ಮೀನಂಗೋಡಿ, ನವಾಜ್ ಮಂಜನಾಡಿ, ಕೋ ಅಡಿನೇಟರ್ ಅಬ್ದುಲ್ ರಶೀದ್ ಉಸ್ತಾದ್ ವೈನಾಡು, ಮೀಡಿಯಾ ಸಮಿತಿಗೆ ನೌಶಾದ್ ಅಲಿ ಮರ್ಜುಕಿ, ಅಬ್ದುಲ್ ರಜಾಕ್ ಮಾಸ್ಟರ್, ಪ್ರಚಾರ ಸಮಿತಿಗೆ ಅಭಿ ಸಖಾಫಿ ಪೇರುವಾಯ, ಅಬ್ದುಲ್ ಖಾದರ್ ಜುಹರಿ,, ಎನ್ಸಿ ಬಾವು ನಕ್ಕರೆ, ಇಂತಿಯಾಜ್ ಕೋಟಕಾರ್, ಬಾವುಚ್ಚ ಅನ್ಸಾರ್…

Read More

ತಂತ್ರಜ್ಞಾನದ ಬಳಕೆಯಿಂದ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಸಂವಹನ ಸುಲಭವಾಗಿದ್ದರೂ,ಯಾವುದೇ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದೇ ನಾನಾ ರೀತಿಯ ಒತ್ತಡಗಳಿಗೆ ಒಳಗಾಗಿ ದುಶ್ಚಟಗಳಿಗೆ ದಾಸರಾಗುವುದು ಖೇದಕರ. ಈ ನಿಟ್ಟಿನಲ್ಲಿ ಮಕ್ಕಳು ಯಾವುದಾದರೊಂದು ಕ್ರೀಡೆಯಲ್ಲಿ ಪ್ರತೀ ದಿನ ತನ್ನನ್ನು ತೊಡಗಿಸಿ ಕೊಳ್ಳುವುದರಿಂದ ಒತ್ತಡಗಳಿಂದ ದೂರವಿರಲು ಸಾಧ್ಯ ಎಂದು ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ತ್ಯಾಗಂ ಹರೇಕಳ ಅಭಿಪ್ರಾಯ ಪಟ್ಟರು ಇವರು ಮುಡಿಪು ಶ್ರೀ ಭಾರತೀ ಆಂಗ್ಲ ಮಾಧ್ಯಮ ಶಾಲೆ ಮತ್ತು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಕ್ರೀಡಾಕೂಟಭಾರತೀ ಕ್ರೀಡೋತ್ಸವ 2024ನ್ನು ಉದ್ಘಾಟಿಸಿ ಮಾತನಾಡಿದರು ಕ್ರೀಡಾಜ್ಯೋತಿಯನ್ನು ಹಸ್ತಾಂತರ ಮಾಡಿ ಮಾತನಾಡಿದ ಮಂಚಿ, ಕುಕ್ಕಾಜೆ ಸರಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ವಿನೋದ ಕುಮಾರಿ ಬಿ ಇವರು ಕ್ರೀಡೆಯಿಂದ ಸರ್ವತೋಮುಖ ಬೆಳವಣಿಗೆ ಆಗುತ್ತದೆ. ಉತ್ತಮ ಕ್ರೀಡಾ0ಗಣ ಇರುವ ಈ ಸಂಸ್ಥೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಹೆಚ್ಚಿನ ಕ್ರೀಡೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಉತ್ತಮ ಕ್ರೀಡಾಪಟುವಾಗಿ ಮೂಡಿಬರಬೇಕು ಎಂದರು.ಸಭಾ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ…

Read More

ತಲಪಾಡಿ: ಕೆನರಾ ಇಂಜಿನಿಯರಿಂಗ್ ಕಾಲೇಜು ಬೆಂಜನಪದವು ಬಂಟ್ವಾಳ ಇಲ್ಲಿಯ ದ್ವಿತೀಯ ಸಿಎಸ್‌ಇ ವಿಭಾಗದ ವಿದ್ಯಾರ್ಥಿನಿ ಶ್ರಾವ್ಯ ವಿ ಶೆಟ್ಟಿ ಇವರು ಆಳ್ವಾಸ್ ಕಾಲೇಜು ಮೂಡಬಿದ್ರೆ ಇಲ್ಲಿ ನಡೆದ ರಾಜ್ಯಮಟ್ಟದ ವೈಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದುಕೊಂಡಿದ್ದಾರೆ.ಆಂದ್ರಪ್ರದೇಶದ ಗುಂಟೂರು ಇಲ್ಲಿನ ಆಚಾರ್ಯ ನಾಗಾರ್ಜುನ ಯುನಿವರ್ಸಿಟಿಯಲ್ಲಿ ನಡೆದ ಸೌತ್ ವೆಸ್ಟ್ ಝೋನ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿರುತ್ತಾರೆ. ಇವರು ಸೈಂಟ್ ಜೋಸೆಫ್ ಜೋಯ್ ಲ್ಯಾಂಡ್ ಶಾಲೆ ಕೊಲ್ಯ ಸೋಮೇಶ್ವರ ಇಲ್ಲಿನ ದೈಹಿಕ ಶಿಕ್ಷಣ ಶಿಕ್ಷಕರಾದ ಸಂದೀಪ್ ರಾಜ್ ಮಾಡೂರು ಇವರಿಂದ ಲೇಟ್ ಲಿಫ್ಟಿಂಗ್ ತರಬೇತಿಯನ್ನು ಪಡೆದುಕೊಂಡಿರುತ್ತಾರೆ. ತಲಪಾಡಿ ನಾರ್ಲ ಪಡೀಲ್ ವಿಠ್ಠಲ ಶೆಟ್ಟಿ ಮತ್ತು ಸುಶೀಲ ವಿ ಶೆಟ್ಟಿ ಇವರ ಪುತ್ರಿಯಾಗಿದ್ದಾರೆ.

Read More

ವೈಜ್ಞಾನಿಕ ಸಂಶೋಧನೆಗಾಗಿ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದು, ದೇಶದಲ್ಲಿ ಮಕ್ಕಳಿಗೆ ನೀಡುವ ಉನ್ನತ ಪ್ರಶಸ್ತಿಯಾದ ಪ್ರಧಾನ ಮಂತ್ರಿ ಬಾಲ ಪುರಷ್ಕಾರವನ್ನು ರಾಷ್ಟ್ರಪತಿಗಳಿಂದ ಸ್ವೀಕರಿಸಿ, ದೇಶದ ಪ್ರಧಾನಿ ನರೇಂದ್ರ ಮೋದಿಯವರ ಮೆಚ್ಚುಗೆಗೆ ಪಾತ್ರಳಾಗಿರುವ ಸಿಂಧೂರ ನಮ್ಮ ಊರಿನ ಕೀರ್ತಿಯನ್ನು ಹೆಚ್ಚಿಸುವ ಸಾಧನೆಗೈದಿದ್ದಾರೆ. ಉಳ್ಳಾಲ ಬಿ.ಜೆ.ಪಿ. ಯ ಹಿರಿಯ ನಾಯಕರಾದ ಬಾಬು ಬಂಗೇರ ರವರ ಮೊಮ್ಮಗಳು ಆಗಿರುವ ಸಿಂಧೂರಳ ಸಾಧನೆಗೆ ಪಕ್ಷವು ಹರ್ಷ ವ್ಯಕ್ತಪಡಿಸುತ್ತದೆ. ನರೇಂದ್ರ ಮೋದಿಯವರು ದೇಶದ ಪ್ರಧಾನ ಮಂತ್ರಿ ಆದ ಬಳಿಕ ನೈಜ ಪ್ರತಿಭೆಗಳನ್ನು, ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯ ಪ್ರಾಮಾಣಿಕವಾಗಿ ನಡೆಯುತ್ತಿದೆ ಎಂದು ಬಿ.ಜೆ.ಪಿ. ಮಂಗಳೂರು ಮಂಡಲದ ಅಧ್ಯಕ್ಷರಾದ ಜಗದೀಶ್ ಆಳ್ವ ಕುವತ್ತಬೈಲ್ ರವರು ಅಭಿನಂದನೆ ಮಾಡಿ ಮಾತನಾಡಿದರು.ಈ ಸಂಧರ್ಭದಲ್ಲಿ ಬಿ.ಜೆ.ಪಿ. ಜಿಲ್ಲಾ ಉಪಾಧ್ಯಕ್ಷರಾದ ರವೀಂದ್ರ ಶೆಟ್ಟಿ ಉಳಿದೊಟ್ಟು, ಮಂಡಲದ ಪ್ರಧಾನ ಕಾರ್ಯದರ್ಶಿ ದಯಾನಂದ ತೊಕ್ಕೊಟ್ಟು, ಕಾರ್ಯದರ್ಶಿ ಜೀವನ್ ಕುಮಾರ್ ತೊಕ್ಕೊಟ್ಟು, ಜಿಲ್ಲಾ ಪಂಚಾಯತ್ ನ ಮಾಜಿ ಸದಸ್ಯೆ ಶ್ರೀಮತಿ ಧನಲಕ್ಷ್ಮೀ ಗಟ್ಟಿ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ…

Read More

ಮಂಗಳೂರು ಕ್ಷೇತ್ರದಲ್ಲಿ ಮುಖಂಡರಾದವರೆಲ್ಲರೂ ವೈಯಕ್ತಿಕ ಭಾವನೆಗಳು ಏನೇ ಇದ್ದರೂ ಮತದಾರರಿಗೋಸ್ಕರ , ಕಾರ‍್ಯಕರ್ತರಿಗೋಸ್ಕರ , ಎಲ್ಲರೂ ಒಬ್ಬರಿಗೊಬ್ಬರು ಒಟ್ಟಾಗಿ ದೀಪವನ್ನು ಹಚ್ಚುವ ಕೆಲಸ ಮಾಡೋಣ ಎಂದು ಸಂಸದ ಕ್ಯಾ| ಬೃಜೇಶ್ ಚೌಟ ಹೇಳಿದ್ದಾರೆ.ಅಸೈಗೋಳಿಯ ಬಂಟರ ಭವನದಲ್ಲಿ ನಡೆದ ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರದ ಸಂಘಟನಾ ಪರ್ವ ಸಭೆಯಲ್ಲಿ ಮಂಗಳೂರು ಮಂಡಲದ ಅಧ್ಯಕ್ಷರಾಗಿ ಮರು ಆಯ್ಕೆಗೊಂಡ ಜಗದೀಶ್ ಆಳ್ವ ಕುವೆತ್ತಬೈಲ್ ಅವರ ಅಧಿಕಾರ ಹಸ್ತಾಂತರ ನೆರವೇರಿಸಿ ಮಾತನಾಡಿದರು. ಮಂಗಳೂರು ಕ್ಷೇತ್ರವೆಂದಲ್ಲಿ ಸ್ವಾಭಿಮಾನವನ್ನು ಉಳಿಸುವ ಕ್ಷೇತ್ರ. ಮಂಗಳೂರು ಕ್ಷೇತ್ರದ ಕಾರ‍್ಯಕರ್ತರಿಗೆ ಸವಾಲಿನ ಕ್ಷೇತ್ರ. ಕಾಂಗ್ರೆಸ್ ವರ್ಸಸ್ ಬಿಜೆಪಿಯ ಕ್ಷೇತ್ರವಲ್ಲ . ರಾಷ್ಟ್ರೀಯತೆಯ ಪರವಾಗಿ ಮತ್ತು ರಾಷ್ಟ್ರೀಯತೆಯ ವಿರುದ್ಧವಾಗಿ ಇರುವಂತಹ ವ್ಯಕ್ತಿಗಳ ಮಧ್ಯದ ಹೋರಾಟದ ಕ್ಷೇತ್ರವಾಗಿದೆ. ಹಿಂದುತ್ವದ ಪರ ಹಾಗೂ ಹಿಂದುತ್ವದ ವಿರುದ್ಧವಾಗಿರುವಂತಹ ಜನರ ನಡುವಿನ ಕ್ಷೇತ್ರವಾಗಿದೆ. ಹಾಗಾಗಿ ವೈಯಕ್ತಿಕ ಭಾವನೆಗಳು ಏನೇ ಇದ್ದರೂ, ಒಗ್ಗಟ್ಟಾಗಿ ಹೋಗುವ ಕೆಲಸವಾಗಬೇಕಿದೆ. ಜನ ದೊಡ್ಡ ಸಂಖ್ಯೆಯಲ್ಲಿ ಮತ ನೀಡಿದ್ದಾರೆ. ಒಂದಾಗಿ ಒಟ್ಟಾಗಿ ಯೋಚನೆ ಮಾಡುವಂತಹ ಕೆಲಸವನ್ನು ಮಾಡಬೇಕು.ಚುನಾವಣೆಯಲ್ಲಿ ಸ್ಪರ್ಧೆ…

Read More

ದೇರಳಕಟ್ಟೆ: ಸಾಹಿತ್ಯಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮತ್ತು ಓದುವ ಅಭಿರುಚಿ ಹುಟ್ಟಿಸುವ ಸಲುವಾಗಿ ರಾಜ್ಯ ವಿಧಾನ ಸೌಧದ ಆವರಣದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಪುಸ್ತಕ ಮತ್ತು ಸಾಹಿತ್ಯ ಹಬ್ಬ ಆಯೋಜಿಸುವ ಉದ್ದೇಶವಿದೆ ಎಂದು ರಾಜ್ಯ ವಿಧಾನ ಸಭೆಯ ಸ್ಪೀಕರ್ ಯು.ಟಿ. ಖಾದರ್ ಹೇಳಿದ್ದಾರೆ.ದೇರಳಕಟ್ಟೆಯ ವಿದ್ಯಾರತ್ನ ಸ್ಕೂಲ್‌ನಲ್ಲಿ ಮಂಗಳವಾರ ನಡೆದ ಬ್ಯಾರಿ ಎಲ್ತ್‌ಕಾರ್-ಕಲಾವಿದಮಾರೊ ಕೂಟ (ಮೇಲ್ತೆನೆ) ಪ್ರಕಟಿಸಿದ, ಕವಿ ಆಲಿಕುಂಞಿ ಪಾರೆ ರಚಿಸಿದ ‘ಬಾಪ ನಟ್ಟೊ ಮರ’ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಸೈಯದ್ ಮುಕ್ತಾರ್ ತಂಙಳ್ ಕುಂಬೋಳ್ ಪುಸ್ತಕ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು ಸಾಹಿತ್ಯವು ಮಾನವ ಬದುಕಿನ ಅವಿಭಾಜ್ಯ ಅಂಗವಾಗಿದೆ. ಒಳ್ಳೆಯ ಸಾಹಿತ್ಯಕ್ಕೆ ಓದುಗರ ಕೊರತೆಯಿರುವುದಿಲ್ಲ. ಆಲಿಕುಂಞಿ ಪಾರೆ ಸಾಹಿತ್ಯದಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದರು. ಮೇಲ್ತೆನೆಯ ಅಧ್ಯಕ್ಷ ವಿ. ಇಬ್ರಾಹೀಂ ನಡುಪದವು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಿ.ಎ. ಮುಹಮ್ಮದಲಿ ಕಮ್ಮರಡಿ ಪುಸ್ತಕ ಪರಿಚಯಿಸಿದರು. ಬ್ಯಾರಿ ಅಧ್ಯಯನ ಪೀಠದ ಸಂಚಾಲಕ ಡಾ. ಅಬೂಬಕರ್ ಸಿದ್ದೀಕ್, ಅಬುಧಾಬಿಯ ಬಿಡಬ್ಲುಎಫ್ ಅಧ್ಯಕ್ಷ ಮುಹಮ್ಮದಲಿ ಉಚ್ಚಿಲ್, ವಿದ್ಯಾರತ್ನ…

Read More

ಹಣಬಲದ ಮೇಲೆ ಔಪಚಾರಿಕ ಶಿಕ್ಷಣ ದೊರತರೆ, ಗುರು ತತ್ವದ ಮೂಲಕ ಅನೌಪಚಾರಿಕ ಶಿಕ್ಷಣ ಶೈಕ್ಷಣಿಕ ವ್ಯವಸ್ಥೆಯಿಂದ ಹೊರಗೆ ಸಿಗುತ್ತದೆ. ಉದಾಹರಣೆಗೆ ನೋಡುವುದಾದರೆ ತಾಯಿ, ತಂದೆ, ಗುರು ಹಿರಿಯರು, ಬಂಧುಗಳು, ಅಧ್ಯಾತ್ಮಿಕ ಕೇಂದ್ರಗಳು, ಸಭ್ಯ ನೆರೆಹೊರೆಯವರು, ಪರಿಸರ, ಶ್ರೇಷ್ಠ ವ್ಯಕ್ತಿಗಳ ಸಂಪರ್ಕದಿಂದ ಸ್ವಯಂ ಶಿಕ್ಷಣ ಪಡೆಯಬಹುದು.ಎಂದು ಡಾ .ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಇದರ ಪ್ರಾಧ್ಯಾಪಕರಾದ ಡಾ . ನವೀನ್ ಕೊಣಾಜೆ ಅವರು ಅಭಿಪ್ರಾಯ ಪಟ್ಟರು. ಅವರು ಶ್ರೀ ರಾಮಕೃಷ್ಣ ಪದವಿ ಕಾಲೇಜು ಬಂಟ್ಸ್ ಹಾಸ್ಟೇಲ್, ಮಂಗಳೂರು, ಮಂಗಳೂರು ವಿಶ್ವ ವಿದ್ಯಾನಿಲಯ ಇವುಗಳ ಆಶ್ರಯದಲ್ಲಿ ಏಳು ದಿನಗಳ ಕಾಲ ಹರೇಕಳ ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲೆಯಲ್ಲಿ ನಡೆಯಲಿರುವ ರಾಷ್ಟೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆಯ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು. ಉದ್ಘಾಟನೆಯನ್ನು ಅಕ್ಷರ ಸಂತ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ನೆರವೇರಿಸಿ,ವಿದ್ಯಾರ್ಥಿ ಜೀವನದಲ್ಲಿ ಸಿಕ್ಕುವ ಅವಕಾಶವನ್ನು ಸರಿಯಾಗಿ ಸದುಪಯೋಗ ಪಡೆಸಿಕೊಳ್ಳಬೇಕು. ಇದರಿಂದ ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳಲು…

Read More