ಉಳ್ಳಾಲ: ರಾಜ್ಯವನ್ನೇ ಬೆಚ್ಚಿಬೀಳಿಸಿದ ಬಹುದೊಡ್ಡ ಕೋಟೆಕಾರು ಕೆ.ಸಿ.ರೋಡ್ ಶಾಖೆ ದರೋಡೆ ಪ್ರಕರಣವನ್ನು ವಾರದೊಳಗೆ ಬೇಧಿಸಲು ಸಹಕಾರಿಯಾದ ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಹಾಗೂ ಮಂಗಳೂರು ಪೊಲೀಸ್ ಕಮೀಷನರ್ ಅನುಪಮ್ ಅಗರವಾಲ್ ನೇತೃತ್ವದ ಪೊಲೀಸ್ ತಂಡವನ್ನು ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಆಡಳಿತ ಸಮಿತಿ ವತಿಯಿಂದ ಅಭಿನಂದಿಸಲಾಯಿತು.ದರೋಡೆ ಪ್ರಕರಣ ನಡೆದ ದಿನದಂದೇ ವಿಧಾನಸಭಾ ಅಧ್ಯಕ್ಷರು ಘಟನಾ ಸ್ಥಳಕ್ಕೆ ಭೇಟಿ ನೀಡಿ ತಕ್ಷಣವೇ ದರೋಡೆಕೋರರನ್ನು ಬಂಧಿಸುವಂತೆ ಪೊಲೀಸರಿಗೆ ಸೂಚಿಸಿದ್ದರು. ಅಲ್ಲದೆ ಜಿಲ್ಲಾ ಭೇಟಿಯಲ್ಲಿದ್ದ ಮುಖ್ಯಮಂತ್ರಿ ಅವರ ಗಮನಕ್ಕೂ ತಂದು ಗೃಹಸಚಿವಾಲಯದಿಂದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆಯೂ ಇಲಾಖೆಗೆ ಸೂಚನೆ ನೀಡುವಂತೆ ಮಾಡಿದ್ದರು. ತಕ್ಷಣಕ್ಕೆ ಪೊಲೀಸ್ ಕಮೀಷನರ್ ಕಮೀಷನರೇಟ್ ವ್ಯಾಪ್ತಿಯ ಐದು ಪೊಲೀಸ್ ತಂಡಗಳನ್ನು ರಚಿಸಿ ಆರೋಪಿಗಳಿಗಾಗಿ ವಿವಿಧ ರಾಜ್ಯಗಳಲ್ಲಿ ಶೋಧ ಕಾರ್ಯವನ್ನು ಆರಂಭಿಸಿದ್ದರು. ಅದರ ಫಲವಾಗಿ ಜ.23 ರ ವರೆಗೆ ನಾಲ್ಕು ಮಂದಿ ಆರೋಪಿಗಳ ಬಂಧನವಾಗಿದ್ದು, ಅಲ್ಲದೆ ಬ್ಯಾಂಕಿನಿಂದ ಕಳವು ನಡೆಸಿದ 18,250 ಕೆ.ಜಿ ಚಿನ್ನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿ ಬ್ಯಾಂಕ್…
Author: UllalaVani
ಉಳ್ಳಾಲ : ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಬ್ರೋಕರ್ ಓರ್ವ ಕಡತ ತಿದ್ದಿದ ಪ್ರಕರಣ ತಿಂಗಳು ಕಳೆಯಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ದೀಪಾ ಚೋಳನ್ ಐ ಎಎಸ್ , ಮುಡಾ ಕಮೀಷನರ್ ನೂರ್ ಜೊಹಾರಾ ಖಾನುಮ್ ಮತ್ತು ಉರ್ವ ಇನ್ಸ್ ಪೆಕ್ಟರ್ ಭಾರತಿ ಪ್ರಜಾಪ್ರಭುತ್ವದ ವಿರುದ್ಧವಾಗಿರುವ ನಡೆಯ ವಿರುದ್ಧ ಕಾನೂನಿನಡಿ ಕ್ರಮಕೈಗೊಳ್ಳುವರೋ? ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಒತ್ತಾಯಿಸಿ ಉಳ್ಳಾಲವಾಣಿ ಅಭಿಯಾನ ನಡೆಸುತ್ತಿದ್ದು ಮೂವರು ಸಾರ್ವಜನಿಕ ಅಧಿಕಾರಿಗಳ ಮೊಬೈಲ್ ಸಂಖ್ಯೆಗೆ ತಪ್ಪಿತಸ್ಥರ ಕ್ರಮಕ್ಕೆ ಆಗ್ರಹಿಸಿ ಸಾರ್ವಜನಿಕರು ಒತ್ತಾಯಿಸಬಹುದಾಗಿದೆ. ಬ್ರೋಕರ್ ವಿರುದ್ಧ ಪೊಲೀಸ್ ಠಾಣೆಗೆ ಮುಡಾ ಸಿಬ್ಬಂದಿಯನ್ನು ಕಳುಹಿಸಲಾಯಿತಾದರೂ, ಸಿಸಿಟಿವಿ ಇಡಲು ದಾಖಲೆಗಳನ್ನು ಪೊಲೀಸ್ ಠಾಣೆಯಲ್ಲಿ ಕೇಳುತ್ತಿರುವುದು ಪ್ರಜಾಪ್ರಭುತ್ವದ ಆಶಯಗಳಿಗೆ ಕೊಡಲಿಯೇಟು ಹಾಕಿದಂತಾಗಿದೆ. ಪ್ರಕರಣವನ್ನು ಸರಕಾರದ ಕಾರ್ಯದರ್ಶಿಗಳು ಗಮನಹರಿಸುತ್ತಾರಾ ಅನ್ನುವ ಪ್ರಶ್ನೆಗೆ ಈವರೆಗೆ ಪ್ರತಿಕ್ರಿಯೆಯೂ ಸಿಕ್ಕಿಲ್ಲ. ಫಲಿತಾಂಶವೂ ಲಭ್ಯವಾಗಿಲ್ಲ. ಘಟನೆಯನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸುವಂತೆ ಒತ್ತಾಯಿಸಿ ಪ್ರಜಾಪ್ರಭುತ್ವ ಉಳಿಸಿ ಸಮಿತಿ ಸಾರ್ವಜನಿಕ ಹಿತಾಸಕ್ತಿ ಮೇರೆಗೆ ದೂರು ದಾಖಲಿಸುವ…
ಉಳ್ಳಾಲ: ಮೆದುಳು ನಿಷ್ಕ್ರಿಯೆಗೊಂಡ ವ್ಯಕ್ತಿಯ ಅಂಗಾಂಗ ದಾನಗೈದ ಕುಟುಂಬಕ್ಕೆ ಹಾಗೂ ಅಗಲಿದ ವ್ಯಕ್ತಿಗೆ ದೇರಳಕಟ್ಟೆ ಯೆನೆಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯದಿಂದ ಗೌರವಪೂರ್ಣ ವಿದಾಯವನ್ನು ಸಲ್ಲಿಸಲಾಯಿತು.ಮೆದುಳಿನ ಆಂತರಿಕ ರಕ್ತಸ್ರಾವದಿಂದ ಕುಸಿದುಬಿದ್ದ 55ರ ಹರೆಯದ ವ್ಯಕ್ತಿಯನ್ನು 2025ರ, ಜ.19 ರಂದು ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರ ತಂಡ ಪರಿಣಾಮಕಾರಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಮೆದುಳು ನಿಷ್ಕ್ರಿಯೆಗೊಂಡಿದೆ. ಈ ಕುರಿತು ವೈದ್ಯರ ತಂಡ ಘೋಷಿಸಿದ ನಂತರ ಚಿಕಿತ್ಸಾ ತಂಡ ಅಂಗಾಂಗ ದಾನ ನಡೆಸುವ ಸಾಧ್ಯತೆಗಳ ಕುರಿತು ಕುಟುಂಬಕ್ಕೆ ಸಲಹೆಯನ್ನು ನೀಡಿತ್ತು. ಮೃತರು ಅಂಗಾಂಗಳನ್ನು ದಾನ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿರುವ ಕುರಿತು ಕುಟುಂಬ ವರ್ಗ ಅವರ ಆಶಯಗಳನ್ನು ಗೌರವಿಸಲು ನಿರ್ಧಾರ ಪಡೆದುಕೊಂಡು ವೈದ್ಯರಲ್ಲಿ ತಿಳಿಸಿತ್ತು. ಈ ಕುರಿತು ಕಾನೂನು ವ್ಯಾಪ್ತಿಯ ಶಿಷ್ಟಾಚಾರಗಳನ್ನು ನಡೆಸಿದ ಯೆನೆಪೋಯ ವೈದ್ಯರ ತಂಡ ಜ.22 ರಂದು ಅಂಗಾಂಗ ದಾನದ ಪ್ರಕ್ರಿಯೆಯನ್ನು ಕೈಗೊಂಡಿತು. ಎರಡು ಮೂತ್ರಪಿಂಡ ಮತ್ತು ಕಾರ್ನಿಯಾಗಳನ್ನು ದೇಹದಿಂದ ಬೇರ್ಪಡಿಸಿ ಕಿಡ್ನಿ ಮತ್ತು ಎರಡು ಕಾರ್ನಿಯಾಗಳನ್ನು ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ…
ಉಳ್ಳಾಲ: ನಿನ್ನೆಯಷ್ಟೇ ಮುಂಬೈನಿಂದ ಬಂಧಿಸಲಾದ ಕೋಟೆಕಾರು ದರೋಡೆ ತಂಡದ ಮೂವರು ಆರೋಪಿಗಳಲ್ಲಿ ಓರ್ವನಿಗೆ ಪೊಲೀಸರಿಂದ ಫೈರ್ ಮಾಡಲಾಗಿದೆ. ತಲಪಾಡಿಯ ಅಲಂಕಾರುಗುಡ್ಡೆ ಸಮೀಪ ಘಟನೆ ನಡೆದಿದ್ದು, ಮೇಲ್ನೋಟಕ್ಕೆ ಆರೋಪಿ ತಲೆಮರೆಸಿಕೊಳ್ಳುವ ಸಂದರ್ಭ ಪೊಲೀಸರು ಫೈರ್ ನಡೆಸಿರುವುದಾಗಿ ತಿಳಿದುಬಂದಿದೆ.ದರೋಡೆ ಪ್ರಕರಣದ ಸೂತ್ರಧಾರ, ಪ್ರಮುಖ ನಟೋರಿಯಸ್ ಮನಿವನ್ನನ್ ಎಂಬಾತನ ಮೇಲೆ ಫೈರ್ ಮಾಡಲಾಗಿದೆಯೆಂದು ತಿಳಿದುಬಂದಿದ್ದು, ಗಾಯಾಳು ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೇರಳ-ಕರ್ನಾಟಕ ಗಡಿಭಾಗ ತಲಪಾಡಿ ಆಲಂಕಾರುಗುಡ್ಡೆ ಸಮೀಪ ಪೊಲೀಸರಿಂದ ಫೈರಿಂಗ್ ನಡೆಸಲಾಗಿದೆ. ಘಟನಾ ಸ್ಥಳದಲ್ಲಿ ಪೊಲೀಸರು ಬೀಡುಬಿಟ್ಟಿದ್ದಾರೆ.
ಉಳ್ಳಾಲ: ದಕ್ಷ ಯುವ ಬಳಗ ಗ್ರಾಮಚಾವಡಿ ಇದರ 16ನೇ ವಾರ್ಷಿಕೋತ್ಸವವು ಕೊಣಾಜೆ ಕೋಟಿಪದವು ಶ್ರೀರಾಮ ಭಜನಾ ಮಂದಿರದಲ್ಲಿ ಜರಗಿತು. 2024-25 ನೇ ಸಾಲಿನ ಗ್ರಾಮ ಗೌರವ ಪುರಸ್ಕಾರವನ್ನು ಕೊಣಾಜೆ ಗ್ರಾ.ಪಂ ಮಾಜಿ ಸದಸ್ಯ, ಸಾಮಾಜಿಕ ಹಾಗೂ ಧಾರ್ಮಿಕ ಮುಂದಾಳು ನರ್ಸು ಗೌಡ ಅಣ್ಣೆರೆಪಾಲು ಇವರಿಗೆ ಪ್ರಧಾನ ಮಾಡಲಾಯಿತು.ಕಾರ್ಯಕ್ರಮವನ್ನು ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ತೊಕ್ಕೊಟ್ಟು ಇದರ ಪ್ರಧಾನಾಚಾರ್ಯರು ವಿದ್ಯಾ ಕಾಮತ್ ಜಿ ಉದ್ಘಾಟಿಸಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜೇಶ್ ವಿ ನಾಯ್ಕ್ ನಾರ್ಯಗುತ್ತು ಮುಡಿಪು ಇವರು ವಹಿಸಿದ್ದರು. ದ.ಕ ಜಿಲ್ಲಾ ಸಂಸದ ಬೃಜೇಶ್ ಚೌಟ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಉದ್ಯಮಿ ಪ್ರಾಣಾಸ್ತ್ರ ಟ್ರಸ್ಟ್ ಸ್ಥಾಪಕ ಲಾಂಚುಲಾಲ್ ಗೌರವ ಅತಿಥಿಗಳಾಗಿದ್ದರು.ಮುಖ್ಯ ಅತಿಥಿಗಳಾಗಿ ರವಿ ರೈ ಪಜೀರು, ಮುಡಿಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸತೀಶ್ ಗಟ್ಟಿ ,ಮೋಹನದಾಸ್ ಕುಂಟಲಚ್ಚಿಲು, ಕೊಣಾಜೆ ಗ್ರಾ.ಪಂ ಸದಸ್ಯ ಶೇಖರ ಕೊಪ್ಪಳ , ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷರಾದ ಸುಂದರ ಕೋಟ್ಯಾನ್ ತಾಕಟ್ಟೆ, ಮೈಥಿಲಿ ಮಾತೃ ಮಂಡಳಿ ಅಧ್ಯಕ್ಷರಾದ…
ಉಳ್ಳಾಲ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉಳ್ಳಾಲ ಮೊಗವೀರಪಟ್ನದ ಮಾರುತಿ ಜನಸೇವಾ ಸಂಘ, ಮಾರುತಿ ಯುವಕ ಮಂಡಲ 40 ವರ್ಷಗಳಿಗೆ ಪಾದಾರ್ಪಣೆ ನಡೆಸುತ್ತಿರುವ ಸುಸಂದರ್ಭದಲ್ಲಿ 40 ಸಮಾಜಸೇವಾ ಕಾರ್ಯಗಳನ್ನು ಜನವರಿ 2025ರಿಂದ ಡಿಸೆಂಬರ್ 2025ರ ವರೆಗೆ ಹಮ್ಮಿಕೊಂಡಿದ್ದು, ಆ ಪ್ರಯುಕ್ತ ಒಂದು ವರ್ಷಗಳ ಕಾಲ ಆಚರಿಸಲು ನಿರ್ಧರಿಸಿರುವ ಮಾರುತಿ ಮಾಣಿಕ್ಯೋತ್ಸವ-2025ರ ವಿಜ್ಞಾಪನಾ ಪತ್ರವನ್ನು ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಬೆಂಗಳೂರು ಅರಮನೆ ಮೈದಾನದಲ್ಲಿ ಬಿಡುಗಡೆಗೊಳಿಸಿದರು. ಈ ಸಂದರ್ಭ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ನ ಅಧ್ಯಕ್ಷ ಜಿ.ಶಂಕರ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಕೋಟಾ ಗೀತಾನಂದ ಫೌಂಡೇಶನ್ನಿನ ಆನಂದ್ ಸಿ ಕುಂದರ್, ಕಾಂಚನ ಹುಂಡೈನ ಆಡಳಿತ ನಿರ್ದೇಶಕ ಪ್ರಸಾದ್ ಕಾಂಚನ್, ಮತ್ಸ್ಯೋದ್ಯಮಿ ಮೋಹನ್ ಬೆಂಗ್ರೆ, ಮಾರುತಿ ಜನಸೇವಾ ಸಂಘ ಮೊಗವೀರಪಟ್ನ ಉಳ್ಳಾಲದ ಅಧ್ಯಕ್ಷ ಸಂದೀಪ್ ಪುತ್ರನ್, ಗೌರವಾಧ್ಯಕ್ಷರಾದ ವರದರಾಜ್ ಬಂಗೇರ, ಸಂಚಾಲಕರಾದ ಸುಧೀರ್ ವಿ. ಅಮೀನ್, ಟ್ರಾಲ್ ಬೋಟ್ ಯೂನಿಯನ್ ನ ಅಧ್ಯಕ್ಷ ಚೇತನ್ ಬೆಂಗ್ರೆ ಉಪಸ್ಥಿತರಿದ್ದರು.
ಕೋಟೆಕಾರು: ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳ ಬಂಧನವಾಗಿದೆ. ತಿರುವನ್ವೇಲಿಯಲ್ಲಿ ಮುಂಬೈ ಗ್ಯಾಂಗ್ ಎನ್ನಲಾದ ಮೂವರು ತಮಿಳುನಾಡು ನಿವಾಸಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.ತಮಿಳುನಾಡು ನಿವಾಸಿ ಮುರುಗಂಡಿ ದೇವರ್ . ಪ್ರಕಾಶ್ ಯಾನೆ ಜೋಶ್ವಾ, ಮನಿವೆನ್ನನ್ ಬಂಧಿತರು. ಬಂಧಿತರಿಂದ ಫಿಯೇಟ್ ಕಾರು ಸಹಿತ ಎರಡು ಗೋಣಿ ಚೀಲದಲ್ಲಿದ್ದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಪೊಲೀಸ್ ಕಮೀಷನರ್ ಅನುಪಮ್ ಅಗರವಾಲ್ ಬಜಪೆ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ.ಮೂರು ದಿನದಲ್ಲಿ 763.2 ಕಿ.ಮೀ ಪ್ರಯಾಣ !ಕೆ.ಸಿ.ರೋಡ್ ಕಣ್ಣೂರು , ಕೋಝಿಕ್ಕೋಡ್, ಒಟ್ಟುಪಾಳಂ, ವಾಡಿಪಟ್ಟಿ, ತಿರುಮಂಗಲಂ ಮೂಲಕ ತಿರುವನ್ವೇಲಿ ತೆರಳಿರುವ ದರೋಡೆಕೋರರ ತಂಡ ಒಟ್ಟು ಮೂರು ದಿನದಲ್ಲಿ 763.2 ಕಿ.ಮೀ ಪ್ರಯಾಣಿಸಿದೆ. ತನಿಖೆ ಸಂದರ್ಭ ಫಿಯೇಟ್ ಕಾರಿನ ಅಸಲಿ ನೋಂದಣಿ ಸಂಖ್ಯೆಯಿಂದ ಕಾರಿನ ಮಾಲೀಕ ತಮಿಳುನಾಡು ಮೂಲದವನೆಂಬುದನ್ನು ಪತ್ತೆಹಚ್ಚಲಾಗಿತ್ತು. ಅದರಂತೆ ತಂಡ ತಮಿಳುನಾಡಿಗೆ ಪ್ರಯಾಣ ಬೆಳೆಸಿತ್ತು. ರಾಜ್ಯ ಹಾಗೂ ಕೇಂದ್ರ ಗುಪ್ತಚರ ಇಲಾಖೆಯೂ ಪರಿಣಾಮಕಾರಿಯಾಗಿ ಕರ‍್ಯಾಚರಿಸಿದ ಫಲವಾಗಿ ಆರೋಪಿಗಳನ್ನು ಕಾರು ಸಮೇತ ತಿರುವನ್ವೇಲಿಯಲ್ಲಿ ಪತ್ತೆಹಚ್ಚಲು ಸಾಧ್ಯವಾಗಿದೆ.ಸ್ಥಳೀಯರು…
ಮಂಗಳೂರು : ಕೋಟೆಕಾರ್ ಉಳ್ಳಾಲದ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿದ ಮುಖ್ಯಮಂತ್ರಿಗಳು ಶೀಘ್ರ ಆರೋಪಿಗಳ ಪತ್ತೆಗೆ ಖಡಕ್ ಸೂಚನೆ ನೀಡಿದರು. ವೈದ್ಯಕೀಯ ಶಿಕ್ಷಣ ಇಲಾಖೆಯ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಪಶ್ಚಿಮ ರೇಂಜ್ ನ ಐಜಿ ಅಮಿತ್, ಪೊಲೀಸ್ ಆಯುಕ್ತ ಸಿಂಗ್, ಅನುಪಮ್ ಅಗರವಾಲ್, ಎಸ್.ಪಿ ಯತೀಶ್ , ಡಿವೈಎಸ್ ಪಿ ಸೇರಿ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಘಟನೆಯ ಕುರಿತಂತೆ ಸಮಗ್ರ ಮಾಹಿತಿ ಪಡೆದ ಮುಖ್ಯಮಂತ್ರಿಗಳು, ನೀವೆಲ್ಲಾ ಇದ್ದು ಯಾಕೆ ಹೀಗಾಯ್ತು? ಆರೋಪಿಗಳು ಸಲೀಸಾಗಿ ತಪ್ಪಿಸಿಕೊಂಡು ಹೋಗಿದ್ದು ಹೇಗೆ ? ಎಷ್ಟು ಟೋಲ್ ಗಳನ್ನು ದಾಟಿ ಹೋಗಿದ್ದಾರೆ. ನೀವು ಟೋಲ್ ಗಳನ್ನು ಏಕೆ ಟೈಟ್ ಮಾಡಲಿಲ್ಲ ಎಂದು ಗರಂ ಆಗಿ ಪ್ರಶ್ನಿಸಿದರು. ಸಹಕಾರಿ ಬ್ಯಾಂಕ್ ನಲ್ಲಿ ಭದ್ರತಾ ಸಿಬ್ಬಂದಿ ಇರಲಿಲ್ಲ. ಐದಾರು ಮಂದಿ ಮಾತ್ರ ಬ್ಯಾಂಕ್ ಸಿಬ್ಬಂದಿ ಇದ್ದರು. ಆರೋಪಿಗಳು ಕನ್ನಡ ಮತ್ತು ಹಿಂದಿಯಲ್ಲಿ ಮಾತಾಡಿರುವುದು ದಾಖಲಾಗಿದೆ ಎಂದು…
ಉಳ್ಳಾಲ: ಕಾರೊಂದರಲ್ಲಿ ಬಂದ ಆರು ಮಂದಿ ಆಗಂತುಕರ ತಂಡ ಉಳ್ಳಾಲ ತಾಲೂಕು ಕೆ.ಸಿ.ರೋಡ್ ಎಂಬಲ್ಲಿರುವ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನಿಂದ 15 ಕೋಟಿ ರೂ.ಗೂ ಮಿಕ್ಕಿದ ಚಿನ್ನ ಹಾಗೂ ಐದು ಲಕ್ಷದಷ್ಟು ನಗದನ್ನು ಬ್ಯಾಂಕ್ ಸಿಬ್ಬಂದಿಗೆ ಬಂದೂಕು ಹಾಗೂ ತಲವಾರು ತೋರಿಸಿ ಬೆದರಿಸಿ ದರೋಡೆ ನಡೆಸಿ ಪರಾರಿಯಾದ ಘಟನೆ ಹಾಡಹಗಲೇ ನಡೆದಿದೆ.ಸ್ಥಳಕ್ಕೆ ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ಭೇಟಿ ನೀಡಿ ಶೀಘ್ರವೇ ದರೋಡೆಕೋರರನ್ನು ಬಂಧಿಸುವಂತೆ ಪೊಲೀಸರಿಗೆ ನಿರ್ದೇಶಿಸಿದ್ದಾರೆ. ಬ್ಯಾಂಕಿನಲ್ಲಿದ್ದ ಮೂವರು ಮಹಿಳಾ ಸಿಬ್ಬಂದಿ ಹಾಗೂ ಓರ್ವ ಪುರುಷ ಸಿಬ್ಬಂದಿ ಮತ್ತೋರ್ವ ಸಿಸಿಟಿವಿ ಟೆಕ್ನೀಷಿಯನ್ ಅವರಿಗೆ ಬಂದೂಕು ಹಾಗೂ ತಲವಾರು ತೋರಿಸಿದ ಮಾಸ್ಕ್ ಧರಿಸಿದ್ದ ಐವರ ತಂಡ ಸುಮ್ಮನಿರುವಂತೆ ಬೆದರಿಸಿ, ಇಲ್ಲವಾದಲ್ಲಿ ಕೊಲ್ಲುವ ಬೆದರಿಕೆಯನ್ನು ಒಡ್ಡಿ ಲಾಕರ್ ನಲ್ಲಿದ್ದ 15 ಕೋಟಿ ರೂ. ಚಿನ್ನ ಹಾಗೂ 5 ಲಕ್ಷ ರೂ ನಷ್ಟು ನಗದು ದೋಚಿ ಗ್ರೇ ಬಣ್ಣದ ಫಿಯೇಟ್ ಕಾರಿನಲ್ಲಿ ಪರಾರಿಯಾಗಿದ್ದಾರೆ. ಸದಾ ಜನಜಂಗುಳಿಯಿಂದ ಕೂಡಿರುವ ಕೆ.ಸಿ ರೋಡ್ ಜಂಕ್ಷನ್ ಶುಕ್ರವಾರವಾದ ಹಿನ್ನೆಲೆಯಲ್ಲಿ…
ಕುತ್ತಾರು: ಕುತ್ತಾರು, ದೆಕ್ಕಾಡು ಶ್ರೀ ಕೊರಗಜ್ಜನ ಆದಿಸ್ಥಳಕ್ಕೆ ರಾಜ್ಯದ ಮಾಜಿ ಶಿಕ್ಷಣ ಸಚಿವರು, ರಾಜಾಜಿನಗರದ ಶಾಸಕರಾದ ಸುರೇಶ್ ಕುಮಾರ್ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.ಈ ಸಂದರ್ಭ ಕ್ಷೇತ್ರದ ಆಡಳಿತ ಸಮಿತಿಯವರು ಮತ್ತು ಬಿ.ಜೆ.ಪಿ. ಮಂಗಳೂರು ಮಂಡಲದ ಪ್ರಧಾನ ಕಾರ್ಯದರ್ಶಿ ದಯಾನಂದ ತೊಕ್ಕೊಟ್ಟು, ಕಾರ್ಯದರ್ಶಿ ಜೀವನ್ ಕುಮಾರ್ ತೊಕ್ಕೊಟ್ಟು, ಜಿಲ್ಲಾ ಕಾರ್ಯಾಕಾರಿಣಿ ಸದಸ್ಯರಾದ ಹರಿಯಪ್ಪ ಸಾಲ್ಯಾನ್, ಶಕ್ತಿ ಕೇಂದ್ರ ಪ್ರಮುಖರಾದ ನವೀನ್ ಅಂಬ್ಲಮೊಗರು, ಪ್ರಮುಖರಾದ ಪ್ರದೀಪ್ ಶೆಟ್ಟಿ, ದೀಕ್ಷಿತ್ ನಿಸರ್ಗ ಸ್ವಾಗತಿಸಿದರು.

