Author: UllalaVani

Kannada News From Coastal Karnataka

ಉಳ್ಳಾಲ, ಜ. ೦೫: ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಸಂಘದ ಮುಂದಿನ ಐದು ವರ್ಷದ ಅವಧಿಗೆ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರು ಗುತ್ತು ನೇತೃತ್ವದ ತಂಡ ಬಹುಮತಗಳಿಂದ ಎಲ್ಲಾ ೧೨ ಸ್ಥಾನಗಳಲ್ಲಿ ಜಯ ಗಳಿಸಿದೆ.ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದಲ್ಲಿ ಕೃಷ್ಣಪ್ಪ ಬೆಳ್ಮ ಮತ್ತು ಬಾಬು ನಾಯ್ಕ ಬೋಳಿಯಾರು, ಹಿಂದುಳಿದ ವರ್ಗ ಎ., ಹಿಂದುಳಿದ ವರ್ಗ ಬಿ.ಯಲ್ಲಿ ಅರುಣ್ ಯು. ಉಳ್ಳಾಲ್ ಮತ್ತು ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರು ಗುತ್ತು, ಮಹಿಳಾ ಮೀಸಲು ಸುನಿತಾ ಲೋಬೋ ಪಾವೂರು, ಸುರೇಖಾ ಚಂದ್ರಹಾಸ್ ತಲಪಾಡಿ , ಸಾಮಾನ್ಯ ಕ್ಷೇತ್ರದಲ್ಲಿ ಅಬ್ಬುಸಾಲಿ ಕೆ.ಬಿ. ಕಿನ್ಯ, ಕೃಷ್ಣಪ್ಪ ಸಾಲಿಯಾನ್ ಕುತ್ತಾರ್, ಗಂಗಾಧರ ಯು. ಪೆರ್ಮನ್ನೂರು, ರಾಘವ ಉಚ್ಚಿಲ್, ರಾಘವ ಆರ್. ಉಚ್ಚಿಲ್ ಸಾಲಗಾರ ರಹಿತ ಕ್ಷೇತ್ರದಲ್ಲಿ ಉದಯ ಕುಮಾರ್ ಶೆಟ್ಟಿ ಕೊಂಡಾಣ ಗುತ್ತು ಆಯ್ಕೆಯಾಗಿದ್ದಾರೆ. ಕೋಟೆಕಾರು ಸ್ಟೆಲ್ಲಾ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದ್ದು, ಚುನಾವಣಾ ಅಧಿಕಾರಿಯಾದ ಸಹಕಾರ ಸಂಘಗಳ ಸಹಾಯಕ ನಿಬಂಧಕರ…

Read More

ಉಳ್ಳಾಲ: ಊರಿನ ಹೆಮ್ಮೆ ಎನಿಸಿರುವ, ಪ್ರಧಾನ ಮಂತ್ರಿ ಪುರಸ್ಕಾರವನ್ನು ಪಡೆದ ಮೊಗವೀರ ಸಮಾಜದ ಬಾಲಕಿಯನ್ನು ಗೌರವಿಸುತ್ತಿರುವುದು ಎಲ್ಲರಿಗೂ ಸಂತೋಷದ ವಿಷಯ. ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ನಮ್ಮೆಲ್ಲರ ಹೊಣೆ” ಎಂದು ಉಳ್ಳಾಲ ಠಾಣಾಧಿಕಾರಿ ಬಾಲಕೃಷ್ಣ ಹೆಚ್. ಎನ್ ಅಭಿಪ್ರಾಯಪಟ್ಟರು.ಅವರು ವೈಜ್ಞಾನಿಕ ಕ್ಷೇತ್ರದಲ್ಲಿ ಸಾಧಿಸಿ ಆವಿಷ್ಕಾರ ನಡೆಸಿ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪುರಸ್ಕೃತ  ಸಿಂಧೂರ ರಾಜಳಿಗೆ ಹುಟ್ಟೂರಿನ ಗೌರವ ಅಭಿನಂದನೆ ಹಾಗೂ ಉಳ್ಳಾಲದ ಅಬ್ಬಕ್ಕ ವೃತ್ತದಿಂದ ಮೊಗವೀರಪಟ್ಣದವರೆಗೆ ಜರಗಿದ ಮೆರವಣಿಗೆ ಮತ್ತು ಮೊಗವೀರಪಟ್ನ ಶಾಲೆಯಲ್ಲಿ ಜರಗಿದ ಸಮಸ್ತ ಉಳ್ಳಾಲದ ನಾಗರಿಕರ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.  ಸಾಧನೆಯ ಹಿಂದೆ ಬಾಳಿನ ಬಗ್ಗೆ ಆಸಕ್ತಿ, ಕಠಿಣ ಪರಿಶ್ರಮ, ಆತ್ಮವಿಶ್ವಾಸ, ಮತ್ತು ಇದಕ್ಕೆ ಪ್ರೋತ್ಸಾಹ ನೀಡಿದ ಪೋಷಕರ ಶ್ರಮವೂ ಇದೆ. ಸಿಂಧೂರಳ ಸಾಧನೆಯಲ್ಲಿ ಹೆಮ್ಮೆ ಪಡುವುದರ ಜೊತೆಗೆ, ಇಂತಹ ಪ್ರತಿಭೆಗಳನ್ನು ಇನ್ನಷ್ಟು ಬೆಳೆಸಬೇಕಾದ ಅಗತ್ಯವಿದೆ ಎಂದರು. ಮಾಜಿ ಶಾಸಕ ಜಯರಾಮ ಶೆಟ್ಟಿ ಮಾತನಾಡಿ, ಬಾಲಕಿಯ ಸಾಧನೆ ಬೇರೆಯವರಿಗೂ ಪ್ರೇರಣೆಯಾಗಬೇಕು. ಇವರು ಮಾಡಿರುವ ಸಾಧನೆ, ಇನ್ನೂ ಹೆಚ್ಚಿನ…

Read More

ಮುಡಿಪು: 2024-25 ಸಾಲಿನ ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಂಬಲಲಿತ ಅಭ್ಯರ್ಥಿಗಳು ಆರಕ್ಕೆ 6 ಸ್ಥಾನದಲ್ಲಿ ಗೆಲ್ಲುವ ಮೂಲಕ ಸತತ 11ನೇ ಬಾರಿಗೆ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ವಿದ್ಯಾರ್ಥಿಸಂಘದ ಅಧ್ಯಕ್ಷರಾಗಿ ಮದನ್, ಉಪಾಧ್ಯಕ್ಷರಾಗಿ ಪಾವನ, ಕಾರ್ಯದರ್ಶಿಯಾಗಿ ಕಾರ್ತಿಕ್, ಸಹಕಾರ್ಯದರ್ಶಿಯಾಗಿ ಮಹೇಶ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ರಾಮ್ ಪ್ರಸಾದ್ ಹಾಗೂ ಸಹ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮೀರಾಜ್ ಚುನಾಯಿತರಾಗಿದ್ದಾರೆ.

Read More

ಉಳ್ಳಾಲ: ಲಾರಿ ಅಪಘಾತದಲ್ಲಿ ಸ್ಕೂಟರ್ ಸವಾರ, ಸ್ವಿಗ್ಗಿ ಡೆಲಿವರಿ ಬಾಯ್ ದಾರುಣವಾಗಿ ಸಾವನ್ನಪ್ಪಿರುವ ಘಟನೆ ರಾ.ಹೆ.೬೬ ರ ಸಂಕೊಳಿಗೆ ಸಮೀಪ ಸಂಭವಿಸಿದೆ.ದೇರಳಕಟ್ಟೆ ಪಾನೀರು ನಿವಾಸಿ ಉಮ್ಮರ್ ಫಾರುಕ್ ಯಾನೆ ಅಝರ್ (೩೧) ಸಾವನ್ನಪ್ಪಿದವರು. ಅವಿವಾಹಿತರಾಗಿರುವ ಇವರು ಸ್ವಿಗ್ಗಿ ಡೆಲಿವರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಡಿ.೩೧ರ ತಡರಾತ್ರಿ ತಲಪಾಡಿಯಿಂದ ಡೆಲಿವರಿ ತಲುಪಿಸಿ ತೊಕ್ಕೊಟ್ಟು ಕಡೆಗೆ ವಾಪಸ್ಸಾಗುವ ಸಂದರ್ಭ ಅದೇ ದಾರಿಯಲ್ಲಿ ಬರುತ್ತಿದ್ದ ಲಾರಿ ಢಿಕ್ಕಿ ಹೊಡೆದು ರಸ್ತೆಗೆ ಎಸೆಯಲ್ಪಟ್ಟಿದ್ದರು. ಬಳಿಕ ಅದೇ ಲಾರಿಯ ಹಿಂಬದಿ ಚಕ್ರಗಳು ಅವರ ಮೇಲೆ ಚಲಿಸಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ

Read More

ಉಳ್ಳಾಲ: ಕೋಟೆಕಾರ್ ವ್ಯವಸಾಯ ಸೇವಾ ಸಹಕಾರಿ ಸಂಘ ಕೋಟೆಕಾರ್ ಇಲ್ಲಿನ ಆಡಳಿತ ಸಮಿತಿಗೆ ಜ .5 ರಂದು ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಚುನಾವಣಾ ಕಣಕ್ಕೆ ನಿಲ್ಲಿಸಲಾಗಿದೆ, ಸಂಘದ ಸಂಘವನ್ನು ಯಶಸ್ವಿಯಾಗಿ ಮತ್ತು ಜನಸ್ನೇಹಿ ಯಾಗಿ ಮುನ್ನಡೆಸಲು ಸದಸ್ಯರೆಲ್ಲರ ಬೆಂಬಲವನ್ನು ಯಾಚಿಸುತ್ತಿದ್ದೇವೆ ಎಂದು ಬಿಜೆಪಿ ಮಂಗಳೂರು ಮಂಡಲ ಅಧ್ಯಕ್ಷ ಜಗದೀಶ್‌ ಆಳ್ವ ಕುವೆತ್ತಬೈಲ್‌ ಹೇಳಿದ್ದಾರೆ.ತೊಕ್ಕೊಟ್ಟು ಸೇವಾ ಸೌಧದಲ್ಲಿರುವ ಉಳ್ಳಾಲ ಪ್ರೆಸ್‌ ಕ್ಲಬ್‌ ನಲ್ಲಿ ಆಯೋಜಿಸಿದ ಸುದ್ಧಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಆದ್ಯತೆಯ ಮತ್ತು ಬದ್ಧತೆಯ ಕಾರ್ಯ ಯೋಜನೆಗಳನ್ನು ಸಂಘದ ಸದಸ್ಯರ ಮುಂದಿಟ್ಟು ಚುನಾವಣೆಯಲ್ಲಿ ಹೆಜ್ಜೆ ಇಡಲಾಗುತ್ತಿದೆ. ಸರ್ಕಾರವು ಘೋಷಣೆ ಮಾಡಿರುವಂತೆ ಶೂನ್ಯ ಬಡ್ಡಿದರದಲ್ಲಿ ಗರಿಷ್ಠ 5 ಲಕ್ಷ ದವರೆಗೆ ಬೆಳೆ ಸಾಲ. ಸರ್ಕಾರವು ಘೋಷಣೆ ಮಾಡಿರುವಂತೆ 3% ಬಡ್ಡಿದರದಲ್ಲಿ ಗರಿಷ್ಠ 10 ಲಕ್ಷ ದವರೆಗೆ ಮಧ್ಯಮ ಅವಧಿ ಕೃಷಿ ಅಭಿವೃದ್ಧಿಗೆ ಸಾಲ. ಸಂಘದ ವ್ಯಾಪ್ತಿಯಲ್ಲಿ ಇರುವ ಎಲ್ಲಾ ಗ್ರಾಮಗಳಲ್ಲಿ ಶಾಖೆಗಳನ್ನು ಸ್ಥಾಪಿಸಿ ಸದಸ್ಯರಿಗೆ ಅಗತ್ಯವಿರುವ ಸೇವೆಗಳನ್ನು ನೀಡಲು ಪ್ರಯತ್ನ. ಪ್ರತಿ…

Read More

ತೊಕ್ಕೊಟ್ಟು: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕ, ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನ (ರಿ.) ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಮಂಗಳೂರು ದಕ್ಷಿಣ ವಲಯಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲೆ ಪಾವೂರು ಹರೇಕಳ ಸಂಯುಕ್ತ ಆಶ್ರಯದಲ್ಲಿ ಉಳ್ಳಾಲ ತಾಲೂಕು ಪ್ರಥಮ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನವನ್ನು ಜನವರಿ 3 ರಂದು ಹರೇಕಳ ಶ್ರೀರಾಮಕೃಷ್ಣ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಸಮ್ಮೇಳನ ಅಧ್ಯಕ್ಷರಾಗಿ ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲೆ ಹರೇಕಳ ಕುಮಾರಿ ಫಾತಿಮತ್ ರಫೀದ ಇವರನ್ನು ಆರಿಸಲಾಗಿದೆ ಎಂದು ಉಳ್ಳಾಲ ಕಸಾಪ ಅಧ್ಯಕ್ಷ ಡಾ.ಧನಂಜಯ ಕುಂಬ್ಳೆ ಹೇಳಿದ್ದಾರೆ.ತೊಕ್ಕೊಟ್ಟು ಸೇವಾಸೌಧದಲ್ಲಿರುವ ಉಳ್ಳಾಲ ಪ್ರೆಸ್‌ ಕ್ಲಬ್‌ ನಲ್ಲಿ ಆಯೋಜಿಸಿದ ಸುದ್ಧಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡುತ್ತಾಬೆಳಗ್ಗೆ 9-30 ಹರೇಕಳ ಗ್ರಾಮ ಪಂಚಾಯತ್ ಆವರಣದಿಂದ ಜಾನಪದ ದಿಬ್ಬಣ ನಡೆಯಲಿದ್ದು ಇದರ ಉದ್ಘಾಟನೆ ಗುಲಾಬಿ ಅಧ್ಯಕ್ಷರು ಹರೇಕಳ ಗ್ರಾಮ ಪಂಚಾಯತ್ ಇವರು ನೆರವೇರಿಸಲಿದ್ದಾರೆಅಕ್ಷರ ಸಂತ ಹರೇಕಳ ಹಾಜಬ್ಬ ಪದ್ಮ ಶ್ರೀ ಪುರಸ್ಕೃತರು ಭಾಗವಹಿಸಲಿದ್ದಾರೆ.ಸಮ್ಮೇಳನದ ಉದ್ಘಾಟಕರಾಗಿ ವಿಧಾನಸಭಾಧ್ಯಕ್ಷರು ಯು ಟಿ ಖಾದರ್,…

Read More

ಉಳ್ಳಾಲ: ಆಧ್ಯಾತ್ಮಿಕ ಚಿಂತನೆ ಗಟ್ಟಿಗೊಳಿಸಿ ,ದುಶ್ಚಟಗಳಿಂದ ವಿಮುಖರಾಗಲು ಭಜನಾ ಮಂದಿರಗಳ ಪಾತ್ರ ಮಹತ್ವದ್ದಾಗಿದೆ ಎಂದು ಕರ್ನಾಟಕ ವಿದಾನಸಭೆಯ ಸಭಾಧ್ಯಕ್ಷರಾದ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.ತೊಕ್ಕೊಟ್ಟು ಗಾಂಧಿನಗರದ ಶ್ರೀ ಸ್ವಾಮಿ ಈಶ್ವರಾನಂದ ಭಜನಾ ಮಂಡಳಿ ಹಾಗೂ ಶ್ರೀ ಸತ್ಯನಾರಾಯಣ ಮಂದಿರದ ಸುವರ್ಣ ಸಂಭ್ರಮ ಪ್ರಯುಕ್ತ ಶುಕ್ರವಾರದಂದು ನಡೆದ ಸಮಾರೋಪ ಸುವರ್ಣ ಧರ್ಮಸಭೆಯನ್ನುದ್ದೇಶಿ ಅವರು ಮಾತನಾಡಿದರು.ಪ್ರಸ್ತುತ ಕಾಲ ಘಟ್ಟದಲ್ಲಿ ಪಾಶ್ಚಾತ್ಯ ಸಂಸ್ಕೃತಿಗಳು ಮೇಲೈಸುತ್ತಿದ್ದರೂ ನಮ್ಮ ದೇಶದ ಮೂಲ ಸಂಸ್ಕೃತಿಯನ್ನು ಯಾರೂ ಮೆಟ್ಟಲು ಸಾಧ್ಯವಿಲ್ಲ.ಇತಿಹಾಸ ತಿಳಿದವರೇ ಇತಿಹಾಸ ನಿರ್ಮಿಸಲು ಸಾಧ್ಯ.ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು,ಯುವಜನಾಂಗಕ್ಕೆ ಇತಿಹಾಸ ಮತ್ತು ನಮ್ಮ ಸಂಸ್ಕೃತಿಗಳನ್ನ ತಿಳಿಸೋ ಕಾರ್ಯಕ್ರಮಗಳನ್ನ ಹೆಚ್ಚು,ಹೆಚ್ಚಾಗಿ ಆಯೋಜಿಸಬೇಕೆಂದು ಕರೆ ನೀಡಿದರು.ಮುಖ್ಯ ಅತಿಥಿಗಳಾಗಿದ್ದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವಕ್ತಾರ ನಿಕೇತ್ ರಾಜ್ ಮೌರ್ಯ ಮಾತನಾಡಿ ಕುದ್ಮುಲ್ ರಂಗರಾವ್ ಅವರು ಸಾರಸ್ವತ ಸಮಾಜದಲ್ಲಿ ಹುಟ್ಟಿದರೂ ಹಿಂದುಳಿದ ,ದಲಿತ ವರ್ಗದ ಏಳಿಗೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ಮಹಾನ್ ವ್ಯಕ್ತಿ.ಮೇಲ್ವರ್ಗದವರಿಗೆ ಇಂದಿಗೂ ಶೋಷಿತರ ಜತೆ ಗುರುತಿಸಿ ಕೊಳ್ಳೋಕೆ ಹಿಂಜರಿಕೆ ಮನೋಭಾವ ಮುಂದುವರಿದಿದೆ.ಶ್ರೇಣೀಕೃತ ಸಮಾಜದಲ್ಲಿ ಇಂದಿಗೂ ಜಾತಿ ವ್ಯವಸ್ಥೆ…

Read More

ತೊಕ್ಕೊಟ್ಟು: ತಾನು ಹುಟ್ಟಿದ ಸಮಾಜದ ಏಳಿಗೆ,ನ್ಯೂನತೆ,ಅಸಮಾನತೆಗಳ ವಿರುದ್ಧ ಹೋರಾಡುವುದು ಸಹಜ.ಆದರೆ ಶತಮಾನದ ಹಿಂದೆಯೇ ಸಾರಸ್ವತ ಸಮಾಜದಲ್ಲಿ ಹುಟ್ಟಿದರೂ ಹಿಂದುಳಿದ ಸಮಾಜದ ಏಳಿಗೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ಕುದ್ಮುಲ್ ರಂಗ ರಾವ್ ಅವರು ಪ್ರತೀ ಮನೆಯಲ್ಲೂ ಪೂಜೆಗೆ ಅರ್ಹರು ಎಂದು ಜನಪದ ವಿಧ್ವಾಂಸರಾದ ಉಳ್ಳಾಲಗುತ್ತು ಸುಕೇಶ್ ಚೌಟ ಅಭಿಪ್ರಾಯಪಟ್ಟರು.ತೊಕ್ಕೊಟ್ಟು ಗಾಂಧಿನಗರದ ಶ್ರೀ ಸ್ವಾಮಿ ಈಶ್ವರಾನಂದ ಭಜನಾ ಮಂಡಳಿ ಹಾಗೂ ಶ್ರೀ ಸತ್ಯನಾರಾಯಣ ಮಂದಿರದ ಸುವರ್ಣ ಸಂಭ್ರಮ ಪ್ರಯುಕ್ತ ಗುರುವಾರದಂದು ನಡೆದ ಸುವರ್ಣ ಧರ್ಮಸಭೆಯನ್ನುದ್ದೇಶಿ ಅವರು ಮಾತನಾಡಿದರು.ಕುದ್ಮುಲ್ ರಂಗರಾವ್ ಅವರ ಸನ್ಯಾಸತ್ವ ಜೀವನದ ಈಶ್ವರಾನಂದ ಹೆಸರಿನಲ್ಲಿ ಭಜನಾಮಂದಿರಗಳಲ್ಲಿ ಆರಾಧನೆಗಳು ಇಂದಿಗೂ ನಡೆಯುತ್ತಿರುವುದು ಶ್ಲಾಘನೀಯ.ಅವಿಭಜಿತ ಉಡುಪಿ,ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಪ್ಪತ್ತು ಶಾಲೆಗಳನ್ನ ಕಟ್ಟಿದ್ದ ಕುದ್ಮುಲ್ ರಂಗರಾವ್ ಅವರು ಶತಮಾನದ ಹಿಂದೆಯೇ ಶಿಕ್ಷಣ ಕ್ರಾಂತಿ ಮಾಡಿದ್ದರು.ನೂರಾರು ಕೋಟಿ ಬೆಲೆಬಾಳುವ ಜಾಗವನ್ನ ಹಿಂದುಳಿದ ಸಮಾಜಕ್ಕೆ ಸಮರ್ಪಿಸಿದ ಮಹಾನ್ ವ್ಯಕ್ತಿ ಅವರಾಗಿದ್ದರು.ವಕೀಲರಾಗಿದ್ದ ಅವರು ಸಾಮಾಜಿಕ ನ್ಯಾಯಕ್ಕಾಗಿ ಬಡವರ ಪರ ಯಾವುದೇ ಫಲಾಪೇಕ್ಷೆ ಇಲ್ಲದೆ ವಕಾಲತ್ತು ನಡೆಸಿದವರಾಗಿದ್ದಾರೆ.ಸಮಾಜ ಅವರ ಅಸಮಾನ್ಯ ಸೇವೆಯನ್ನ ಎಂದಿಗೂ…

Read More

ಮಂಗಳೂರು: ಕೋಸ್ಟಲ್ ವುಡ್ ಕಲಾವಿದರ ಮತ್ತು ತಂತ್ರಜ್ಞರ ಸಹಕಾರಿ ಒಕ್ಕೂಟ (ರಿ) ಇದರ ನೂತನ ಅಧ್ಯಕ್ಷರಾಗಿ ಯುವ ನಿರ್ಮಾಪಕ ನಟ ಲಂಚುಲಾಲ್ ಕೆ‌.ಎಸ್ ರವರು ಆಯ್ಕೆ ಆಗಿದ್ದಾರೆ.ಉರ್ವಸ್ಟೋರ್ ಅಶೋಕನಗರದಲ್ಲಿರುವ ದೇವಾಂಗ ಭವನದಲ್ಲಿ ನಡೆದ ಕೋಸ್ಟಲ್ ವುಡ್ ಕಲಾವಿದರ ಮತ್ತು ತಂತ್ರಜ್ಞರ ಸಹಕಾರಿ ಒಕ್ಕೂಟದ ವಾರ್ಷಿಕ ಮಹಾಸಭೆಯಲ್ಲಿ ಲಂಚುಲಾಲ್ ಕೆ.ಎಸ್ ಅಧ್ಯಕ್ಷರಾಗಿ, ಸಂದೀಪ್ ಶೆಟ್ಟಿ ಸುರತ್ಕಲ್ ಹಾಗೂ ನಾಯಕ ನಟ ಅನೂಪ್ ಸಾಗರ್ ಉಪಾಧ್ಯಕ್ಷರಾಗಿ ಆಯ್ಕೆಯಾದರು.ಸುಧಾಕರ್ ಶೆಟ್ಟಿ ಬೆದ್ರ ಪ್ರಧಾನ ಕಾರ್ಯದರ್ಶಿಯಾಗಿ, ಅನಿಲ್ ಕರ್ಕೇರ ಖಜಾಂಜಿಯಾಗಿ, ವಿನಾಯಕ್ ಜಪ್ಪು ಜತೆ ಕಾರ್ಯದರ್ಶಿ ಯಾಗಿ ಆಯ್ಕೆಯಾದರೆ, ಯತೀಶ್ ಪೂಜಾರಿ ತಾರನಾಥ್ ಉರ್ವ ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಆಯ್ಕೆಯಾದರು.ಮಹಮ್ಮದ್ ಅಸ್ಗರ್, ಅಜೀತ್ ಶೆಟ್ಟಿ ಕಾವೂರ್ ಸಂಘಟನಾ ಕಾರ್ಯದರ್ಶಿಗಳಾಗಿ ಆಯ್ಕೆಯಾದರೆ, ಚರಣ್ ರಾಜ್, ರಂಜನ್ ಬೋಳೂರು, ವಿಜಯ್ ಪಂಜಿಮೊಗೆರ್, ಸುಕೇಶ್ ಶೆಟ್ಟಿ ಪಡುಪದವು, ಸಚ್ಚಿಂದ್ರ ಶೆಟ್ಟಿ ಉಡುಪಿ, ಮಂಜುನಾಥ್ ಚೆರ್ಕಾಡಿ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾದರು.ಕೋಸ್ಟಲ್ ವುಡ್ ನ ಪ್ರತಿಷ್ಠಿತ CPL ನ ಕಮಿಟಿ BCCC ಚಯರ್ ಮ್ಯಾನ್…

Read More

ಮಂಗಳೂರು: ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಅಭಿನಯ ಮತ್ತು ನಿರ್ದೇಶನದ ಜೈ ತುಳು ಸಿನಿಮಾದ ಎರಡನೇ ಹಂತದ ಚಿತ್ರೀಕರಣ ಮುಕ್ತಾಯಗೊಂಡದೆ.ಇನ್ನು ಮೂರನೇ ಹಂತದ ಚಿತ್ರೀಕರಣ ಜನವರಿಯಲ್ಲಿ ನಡೆಯಲಿದೆ. “ಜೈ” ಸಿನಿಮಾ ತುಳುವಿನಲ್ಲಿ ಬಿಗ್ ಬಜೆಟ್ ನ ಸಿನಿಮಾ ಆಗಿದ್ದು, ಸಿನಿಮಾಕ್ಕೆ ಮಂಗಳೂರನ್ನು ಕೇಂದ್ರೀಕರಿಸಿ ವಿವಿಧ ಪ್ರದೇಶಗಳಲ್ಲಿ ಚಿತ್ರೀಕರಣ ನಡೆದಿದೆ. ಮುಖ್ಯವಾಗಿ ಕುತ್ತಾರ್, ದಂಬೇಲ್, ಮರಕಡ, ಶೂಲಿನ್ ಪ್ಯಾಲೇಸ್ ಮರವೂರು, ಬೊಂದೇಲ್ ಪಣಂಬೂರು, ಬೈಕಂಪಾಡಿಯಲ್ಲಿ ಚಿತ್ರೀಕರಣ ನಡೆದಿದೆ. ಜಿಲ್ಲೆಯ ಖ್ಯಾತನಾಮ ಕಲಾವಿದರು ಸಿನಿಮಾದಲ್ಲಿದ್ದಾರೆ. ಗಿರಿಗಿಟ್, ಗಮ್ಜಾಲ್, ಸರ್ಕಸ್ ಚಿತ್ರಗಳ ಯಶಸ್ಸಿನ ಬಳಿಕ ರೂಪೇಶ್ ಶೆಟ್ಟಿ ಅವರು ಮತ್ತೊಂದು ಬಿಗ್ ಬಜೆಟ್ ನ ಸಿನಿಮಾಕ್ಕೆ ಕೈ ಹಾಕಿದ್ದಾರೆ. ಜೈ ಸಿನಿಮಾ ಆರ್ ಎಸ್ ಸಿನಿಮಾಸ್, ಶೂಲಿನ್ ಫಿಲಂಸ್, ಮುಗ್ರೋಡಿ ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣವಾಗುತ್ತಿದೆ.ರೂಪೇಶ್ ಶೆಟ್ಟಿ ಸಿನಿಮಾದ ನಿರ್ದೇಶಕರಾಗಿದ್ದು, ಕತೆ ಹಾಗೂ ಸಂಭಾಷಣೆಯನ್ನು ಪ್ರಸನ್ನ ಶೆಟ್ಟಿ ಬೈಲೂರು ಬರೆದಿದ್ದಾರೆ. ಕ್ಯಾಮರಾ ವಿನುತ್ ಕೆ, ಸಂಗೀತ ಲೊಯ್ ವೆಲೆಂಟಿನ್ ಸಲ್ದಾನ, ಸಂಕಲನ ರಾಹುಲ್ ವಸಿಷ್ಠ, ನಿರ್ಮಾಪಕರು ಅನಿಲ್…

Read More