UN NEWS NETWORKSಉಳ್ಳಾಲ: ಉಳ್ಳಾಲ್ ಕ್ರಿಕೆಟ್ ಬೋರ್ಡ್ ವತಿಯಿಂದ ಎಂಟನೇ ಅವಧಿಯ ಟೆನಿಸ್ ಬಾಲ್ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಉಳ್ಳಾಲ್ ಪ್ರೀಮಿಯರ್ ಲೀಗ್ ಫೆ.20 ರಿಂದ ಫೆ.25 ರವರೆಗೆ ಐದು ದಿನಗಳ ಕಾಲ ವಿವಿಧ ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳ ಜೊತೆಗೆ ಉಳ್ಳಾಲದ ಸೀಗ್ರೌಂಡ್ ನಲ್ಲಿ ನಡೆಯಲಿದೆ ಎಂದು ಉಳ್ಳಾಲ್ ಕ್ರಿಕೆಟ್ ಬೋರ್ಡ್ ಇದರ ಅಧ್ಯಕ್ಷ ಯು.ಬಿ ಸಲೀಂ ಹೇಳಿದರು.ಅವರು ತೊಕ್ಕೊಟ್ಟುವಿನ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಬುಧವಾರ ಆಯೋಜಿಸಿದ ಸುದ್ಧಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಜಾತಿ ಮತ ಬೇಧಭಾವವಿಲ್ಲದೆ ಯುಸಿಬಿ ಎಂಟನೆ ಅವಧಿಯಲ್ಲಿ3 ಬಾರಿ ಪೆಡ್ಲೈಟ್ ಕ್ರಿಕೆಟ್ ಪಂದ್ಯಾಟವನ್ನು ಉಳ್ಳಾಲದಲ್ಲಿ ಆಯೋಜಿಸುತ್ತಾ ಬಂದಿದೆ. ಗೌರವಾಧ್ಯಕ್ಷ ಶಾಸಕ ಯು.ಟಿ ಖಾದರ್ ಅವರ ನೇತೃತ್ವದಲ್ಲಿ ಉಳ್ಳಾಲದ ಎಲ್ಲರನ್ನೂ ಸೇರಿಸಿಕೊಂಡು ಪಂದ್ಯಾಟ ಆಯೋಜನೆ ಮಾಡಲಾಗಿದೆ. ಫೆ. 24 ರಂದು 40 ವರ್ಷ ಮೇಲ್ಪಟ್ಟವರ ಮಾಸ್ಟರ್ಸ್ ಕ್ರಿಕೆಟ್ ಬೆಳಗ್ಗಿನಿಂದ ಸಂಜೆಯವರೆಗೆ ನಡೆಯಲಿದೆ. ಫೆ.25 ರಂದು ಸಂಜೆ 4ಕ್ಕೆ ಡ್ರಗ್ ಸೇವನೆ ವಿರುದ್ಧ ಜಾಗೃತಿ ಕಾರ್ಯಕ್ರಮ ಬೈಕ್ ಜಾಥಾ…
Author: UllalaVani
ContentArten Von Willkommensboni Within Erreichbar Spielhallen Via EchtgeldEchtgeldmodus Vs DemoversionVorsicht! Aufführen Eltern Book Of Ra VerantwortungsbewusstDiese Zwei Sets An Bügeln Sorgen Für jedes Im überfluss Action Inside Book Of Ra 10 Deluxe Bei NovolineBook Of Ra Bloß Eintragung Aufführen Kein Partie ist sekundär nur gehandicapt unter einsatz von einem Gewinn des Book of Ra Slots as part of Online Casinos gleichzusetzen. Ein Produzent bezeichnet diesseitigen Bezeichner selber wie gleichfalls diesseitigen meistgespielten Slot das Welt. Das Werden sollen jenes Erfolgs liegt within den 1980er Jahren, as part of denen Book of Ra irgendetwas wanneer analoger Spielautomat die inside den landbasierten Casinos…
UN NEWS NETWORKS ಧರ್ಮಸ್ಥಳ : ಉಳ್ಳಾಲದ ಪ್ರೆಸ್ ಕ್ಲಬ್ ಪತ್ರಕರ್ತರ ಸಮಸ್ಯೆಗಳಿಗೆ ಸ್ಪಂಧಿಸುವ ಸಂಸ್ಥೆಯಾಗಲಿ, ಕಾರ್ಯಕ್ರಮಗಳಲ್ಲಿ ಭಾಗಿಯಾದ ಬಳಿಕ ಅವರಿಗೆ ಎದುರಾಗುವ ಸಮಸ್ಯೆಗಳಿಗೆ ರಕ್ಷಣೆ, ಮಾರ್ಗದರ್ಶನ ಹಾಗೂ ಪ್ರೋತ್ಸಾಹ ಕೊಡುವಂತಾಗಲಿ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮವಿಭೂಷಣ ಡಾ| ಡಿ. ವೀರೇಂದ್ರ ಹೆಗ್ಗಡೆ ತಿಳಿಸಿದರು. ಅವರು ತೊಕ್ಕೊಟ್ಟುವಿನ ಸೇವಾ ಸೌಧ ಕಚೇರಿಯ ಎರಡನೇ ಮಹಡಿಯಲ್ಲಿ ಮಾ.1 ರಂದು ಉದ್ಘಾಟನೆಗೊಳ್ಳಲಿರುವ ಉಳ್ಳಾಲ ಪ್ರೆಸ್ ಕ್ಲಬ್ ಇದರ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.ಪತ್ರಕರ್ತರು ಜನರ ಜೀವನಾಡಿಯಾಗಿದ್ದಾರೆ. ಪ್ರಸ್ತುತ ಕಾರ್ಯಕ್ರಮಗಳಲ್ಲಿ ಜನರು ಹೆಚ್ಚಾಗಿ ಸಮಯ ಕಳೆಯುವುದಿಲ್ಲ. ಬದಲಾಗಿ ಮರುದಿನ ಬರುವ ಪತ್ರಿಕೆಯಲ್ಲಿ ಸುದ್ಧಿಯನ್ನು ಓದುವ ಮೂಲಕ ಬೇಕಾದಷ್ಟೇ ಮಾಹಿತಿಯನ್ನು ಪಡೆದುಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಪತ್ರಕರ್ತರ ಜವಾಬ್ದಾರಿ ಮಹತ್ತರವಾದದ್ದು ಎಂದು ಹೆಗ್ಗಡೆ ತಿಳಿಸಿದರು.ಈ ಸಂದರ್ಭ ಉಳ್ಳಾಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಪತ್ರಕರ್ತ ಉದಯವಾಣಿಯ ವಸಂತ್ ಎನ್. ಕೊಣಾಜೆ ಇವರನ್ನು ಹೆಗ್ಗಡೆಯವರು ಶಾಲು ಹೊದಿಸಿ ಸನ್ಮಾನಿಸಿದರು.ಈ ಸಂದರ್ಭ ಉಳ್ಳಾಲ ತಾಲೂಕು ಪತ್ರಕರ್ತರ…
UN NEWS NETWORKS ಉಳ್ಳಾಲ: ತಲಪಾಡಿ ಗ್ರಾಮ ಪಂಚಾಯತ್‍ನ 2022-23ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆ ಫೆ. 22ರಂದು ಬೆಳಗ್ಗೆ 10.30ಕ್ಕೆ ತಲಪಾಡಿ ಗ್ರಾಮ ಪಂಚಾಯತ್ ವಠಾರದ ಎ.ಪಿ.ಜೆ. ಅಬ್ದುಲ್ ಕಲಾಂ ಸಭಾ ಭವನದಲ್ಲಿ ನಡೆಯಲಿದೆ.ಗ್ರಾಮ ಸಭೆಗೆ ಪೂರ್ವಭಾವಿಯಾಗಿ ಫೆ. 13ರಂದು 1ನೇ ವಾರ್ಡ್ ಸಭೆ ಬೆಳಗ್ಗೆ 11 ಗಂಟೆಗೆ ತಲಪಾಡಿ ಗ್ರಾಮಸೌಧ ಕಟ್ಟಡದಲ್ಲಿ, 2ನೇ ವಾರ್ಡ್ ಸಭೆ ಮಧ್ಯಾಹ್ನ 2.30ಕ್ಕೆ ಫಲಾಹ್‍ಶಾಲಾ ಬಳಿಯ ಅಂಗನವಾಡಿ ಕೇಂದ್ರದಲ್ಲಿ , 3ನೇ ವಾರ್ಡ್ ಸಭೆ ಸಂಜೆ 4.00 ಗಂಟೆಗೆ ಪೂಮಣ್ಣು 1ನೇ ಕ್ರಾಸ್ ಬಳಿ ನಡೆಯಲಿದೆ. ಫೆ. 14ರಂದು 4ನೇ ವಾರ್ಡ್ ಸಭೆ ಸಂಜೆ 4.00ಕ್ಕೆ ಪೂಮಣ್ಣು ಮಸೀದಿ ಬಳಿ, ಬೆಳಗ್ಗೆ 11ಕ್ಕೆ 5ನೇ ವಾರ್ಡ್ ಸಭೆ ಜನತಾ ಕ್ವಾರ್ಟಸ್ ಶ್ರೀರಾಮ ಭಜನಾ ಮಂದಿರದ ಬಳಿಯ ಅಂಗನವಾಡಿ ಕೇಂದ್ರದಲ್ಲಿ , 9ನೇ ವಾರ್ಡ್ ಸಭೆ 2.00ಗಂಟೆಗೆ ದೇವಿಪುರ ಅಂಗನವಾಡಿ ಕೇಂದ್ರದಲ್ಲಿ ನಡೆಯಲಿದೆ. ಫೆ. 15ರಂದು ಬೆಳಗ್ಗೆ 10ಕ್ಕೆ 6ನ ವಾರ್ಡ್ ಸಭೆ…
UN NEWS NETWORKSಉಳ್ಳಾಲ: ಫಿಸಿಯೋಥೆರಪಿ ಕ್ಷೇತ್ರದಲ್ಲಿ ಆರಂಭಿಕ ಸಜ್ಜುಗೊಳಿಸುವಿಕೆ ಬಹುಮುಖ್ಯ ವಿಚಾರವಾಗಿದೆ. ಕ್ಷೇತ್ರದಲ್ಲಿ ಸೋಮಾರಿಯಾಗದೆ ಮನಸ್ಸು ಕೌಶಲ್ಯವನ್ನು ವೃದ್ಧಿಸುವಂತ ಕಾರ್ಯಗಾರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಿರಿ ಎಂದು ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಲಹಾ ಸಮಿತಿ ಅಧ್ಯಕ್ಷ ಡಾ| ಮೊಹಮ್ಮದ್ ಇಸ್ಮಾಯಿಲ್ ಹೆಜಮಾಡಿ ಅಭಿಪ್ರಾಯಪಟ್ಟರು. ಅವರು ಯು.ಟಿ ಫರೀದ್ ಫೌಂಡೇಷನ್ ಹಾಗೂ ಕಣಚೂರು ಫಿಸಿಯೋಥೆರಪಿ ಸಂಯುಕ್ತ ಆಶ್ರಯದಲ್ಲಿ ದಿ.ನಫೀಸಾ ಫರೀದ್ ಸ್ಮಾರಕ ಎರಡು ದಿನಗಳ ದತ್ತಿ ಉಪನ್ಯಾಸ ಕ್ಕೆ ನಾಟೆಕಲ್ ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಮೂರನೇ ಮಹಡಿ ಸಭಾಂಗಣದಲ್ಲಿ ಚಾಲನೆ ನೀಡಿ ಮಾತನಾಡಿದರು.ದೈಹಿಕ, ಮಾನಸಿಕ, ಸಾಮಾಜಿಕ ಅಂಶಗಳ ಪುನರ್ ಸ್ಥಾಪನೆಯಲ್ಲಿ ಫಿಸಿಯೋಥೆರಪಿ ಪ್ರಮುಖ ಭಾಗವಾಗಿದೆ. ರೋಗಿಗಳನ್ನು ಐಸಿಯುವರೆಗೆ ಕೊಂಡೊಯ್ಯದಂತೆ ನೋಡುವುದೇ ಆರಂಭಿಕ ಸಜ್ಜುಗೊಳಿಸುವಿಕೆ ಚಿಕಿತ್ಸಾ ವಿಧಾನ. ಈ ನಿಟ್ಟಿನಲ್ಲಿ ಫಿಸಿಯೋಥೆರಪಿ ಕ್ಷೇತ್ರ ಅಗಾಧವಾಗಿದ್ದು, ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿ ಎಂದು ಸಲಹೆ ನೀಡಿದರು.ಕಣಚೂರು ಇಸ್ಲಾಮಿಕ್ ಎಜ್ಯುಕೇಶನ್ ಟ್ರಸ್ಟ್‍ನ ಅಧ್ಯಕ್ಷ ಯು.ಕೆ. ಮೋನು ಮಾತನಾಡಿ, ಫಿಸಿಯೋಥೆರಪಿ ಎಂಬುದು ಔಷಧವಿಲ್ಲದ ಆರೋಗ್ಯ ಸೇವೆ. ಪ್ರಪಂಚದಾದ್ಯಂತ ಫಿಸಿಯೋಥೆರಪಿಗಳಿಗೆ…
UN NEWSNETWORKS ಉಳ್ಳಾಲ: ನೇತ್ರಾವತಿ ನದಿಯಲ್ಲಿ ಪಂಜರ ಕೃಷಿ ಪದ್ಧತಿ ಮೂಲಕ ಸಾಕುತ್ತಿದ್ದ ಮೀನುಗಳ ಮಾರಣಹೋಮ ನಡೆದಿರುವ ಘಟನೆ ಉಳ್ಳಾಲದಲ್ಲಿ ನಡೆದಿದೆ. ಕಾರ್ಖಾನೆಗಳಿಂದ ಬಿಡುವ ವಿಷಯುಕ್ತ ತ್ಯಾಜ್ಯ ನದಿನೀರಿನಲ್ಲಿ ಮಲಿನಗೊಂಡ ಹಿನ್ನೆಲೆಯಲ್ಲಿ ಘಟನೆ ಸಂಭವಿಸಿರುವ ಶಂಕೆಯನ್ನು ಮಾಲೀಕರು ವ್ಯಕ್ತಪಡಿಸಿದ್ದಾರೆ. ಉಳ್ಳಾಲದ ಬ್ಲೇರಾ ಡಿಸೋಜ ಎಂಬವರಿಗೆ ಸೇರಿದ ಸಾಕು ಮೀನುಗಳು ಸಾವನ್ನಪ್ಪಿವೆ. ರೂ.3.5 ಲಕ್ಷ ಬೆಲೆಬಾಳುವ ಮೀನುಗಳು ಸಾವನ್ನಪ್ಪಿ ನಷ್ಟ ಸಂಭವಿಸಿದೆ. ಮುದ್ರ ಬ್ಯಾಂಕ್ ಸಾಲ ಮಾಡಿ ಬ್ಲೇರಾ ಅವರು ಮೀನಿನ ಕೃಷಿ ಆರಂಭಿಸಿದ್ದರು. ಎರಡು ವರ್ಷಗಳ ಹಿಂದೆ ವೃತ್ತಿಯನ್ನು ಆರಂಭಿಸಿದ ಬ್ಲೇರಾ ಅವರಿಗೆ ಇದೀಗ ಎರಡನೇ ಬಾರಿಯ ಮೀನಿನ ಕೃಷಿ ಸಂಪೂರ್ಣ ನಷ್ಟವನ್ನು ಉಂಟು ಮಾಡಿದೆ. 2022 ರ ನವೆಂಬರ್ ತಿಂಗಳಲ್ಲಿ ಈ ಬಾರಿಯ ಪಂಜರ ಕೃಷಿಯ ಮರಿಗಳನ್ನು ಹಾಕಲಾಗಿತ್ತು. ಪ್ಯಾಂಪೆನೋ ತಳಿಯ 4,500 ಮರಿಗಳು ಬೃಹತ್ ಗಾತ್ರದಲ್ಲಿ ಬೆಳೆದಿತ್ತು. ಒಂದೂವರೆ ವರ್ಷದಿಂದ ಮೀನು ಯಾವುದೇ ತೊಂದರೆಯಿಲ್ಲದೆ ಇತ್ತು. ಫೆ.11 ರಂದು ಬೆಳಿಗ್ಗೆ ಬ್ಲೇರಾ ಅವರು ನದಿಬದಿಗೆ ತೆರಳಿದಾಗ 22 ಮೀನುಗಳು…
UN NEWS NETWORKSಉಳ್ಳಾಲ: ಆರೋಗ್ಯ ವಂತ ಸಮಾಜ ನಿರ್ಮಾಣ ಕ್ರೀಡೆಯಿಂದ ಸಾಧ್ಯ ಇದೆ.ಸೋಲು ಗೆಲುವು ವಿನ ಮೂಲ.ಗೆಲುವು ಮುಖ್ಯ ಅಲ್ಲ, ಭಾಗವಹಿಸುವುದು ಮುಖ್ಯ ಎಂದು ಅಖಿಲ ಭಾರತ ಬ್ಯಾರಿ ಪರಿಷತ್ ಅಧ್ಯಕ್ಷ ಖಾಲಿದ್ ಉಜಿರೆ ಹೇಳಿದರು. ಅವರು ಯೂತ್ ಫ್ರೆಂಡ್ಸ್ ಕಿನ್ಯಾ ಇದರ ಆಶ್ರಯದಲ್ಲಿ ಭಾನುವಾರ ಕಿನ್ಯ ಬೆಳರಿಂಗೆಯಲ್ಲಿ ನಡೆದ ಸೌಹಾರ್ದ ಟ್ರೋಫಿ ಹೊನಲು ಬೆಳಕಿನ ೬೫ ಕೆಜಿ ವಿಭಾಗದ ಮ್ಯಾಟ್ ಕಬಡ್ಡಿ ಪಂದ್ಯಾಟದ ಉದ್ಘಾಟನಾ ಸಮಾರಂಭ ದಲ್ಲಿ ಮಾತನಾಡಿದರು. ಶಾಸಕ ಯು ಟಿ ಖಾದರ್ ಟ್ರೋಫಿ ಅನಾವರಣ ಮಾಡಿದರು.ಈ ಸಂದರ್ಭದಲ್ಲಿ ನಿರ್ಗತಿಕರಿಗೆ ಆಹಾರ ಧಾನ್ಯ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ, ಮೂವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.ಖ್ಯಾತ ವೈದ್ಯ ಡಾ. ರಾಹುಲ್ ರಾಮಾನುಜಂ ನಾಟೆಕಲ್ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರುಈ ಕಾರ್ಯಕ್ರಮ ದಲ್ಲಿ ಯೂತ್ ಕಾಂಗ್ರೆಸ್ ಮುಖಂಡ ನಾಸೀರ್ ಸಾಮಣಿಗೆ, ಸಲೀಂ ಮೇಗಾ, ಕಿನ್ಯ ಗ್ರಾ.ಪಂ. ಸದಸ್ಯ ಫಾರೂಕ್ ಕಿನ್ಯ, ನಝೀರ್ ,ಇಜಾಝ್,ಸೆಯ್ಯದ್ ತ್ವಾಹ, ರಹಿಮಾನ್ ಎಕೆ, ಕಿನ್ಯ ಗ್ರಾಮ ಕಾಂಗ್ರೆಸ್…
UN NEWS NETWORKSಉಳ್ಳಾಲ: ದೇಶವನ್ನು ಉದಾತ್ತ ಮೌಲ್ಯಗಳ ಮೂಲಕ ಮೊದಲ ಸ್ಥಾನದಲ್ಲಿರಿಸುವ ಚಿಂತನೆಗಳು ನಿಟ್ಟೆ ವಿಶ್ವವಿದ್ಯಾನಿಲಯದಲ್ಲಿ ಹಮ್ಮಿಕೊಂಡ ರಾಷ್ಟ್ರ ಧ್ವಜಾರೋಹಣದಂತಹ ಪವಿತ್ರವಾದ ಕಾರ್ಯಗಳ ಮೂಲಕ ಆಗುವುದು ಎಂದು ಪಶ್ಚಿಮ ವಲಯ ಐಜಿಪಿ ಡಾ| ಚಂದ್ರಗುಪ್ತ ಹೇಳಿದ್ದಾರೆ. ಅವರು ದೇರಳಕಟ್ಟೆಯ ಜಸ್ಟೀಸ್ ಕೆ.ಎಸ್ ಹೆಗ್ಡೆ ಆಸ್ಪತ್ರೆ ಆವರಣದಲ್ಲಿ ನಿರ್ಮಿಸಿದ ಕರಾವಳಿಯ ಅತಿ ಎತ್ತರದ 164 ಫೀಟ್ ಉದ್ದದ ರಾಷ್ಟ್ರಧ್ವಜ ಸ್ತಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.ತ್ಯಾಗ, ಬಲಿದಾನ, ಶೌರ್ಯ, ಆತ್ಮಸ್ಥೈರ್ಯ, ಶಾಂತಿ, ಸೌಹಾರ್ದತೆ, ಸಮನ್ವಯತೆ, ಬಹುಸಂಸ್ಕøತಿಯ ಆಶಯಗಳು ರಾಷ್ಟ್ರಧ್ವಜದ ಮೂಲಕ ಎಲ್ಲರಲ್ಲೂ ಬೇರೂರುವುದು. ರಾಷ್ಟ್ರಧ್ವಜವನ್ನು ಕಂಡ ಕ್ಷಣ ಚಿಂತನೆಗಳು ನೆನಪಿಗೆ ಬರುವುದು. ಈ ನಿಟ್ಟಿನಲ್ಲಿ ದೇಶದ ಬೆಳವಣಿಗೆಗಳು ಇಂತಹ ಕಾರ್ಯಕ್ರಮಗಳಿಂದ ನೆರವೇರುವುದು ಎಂದರು.ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಾಧಿಪತಿ ಎನ್. ವಿನಯ್ ಹೆಗ್ಡೆ ಮಾತನಾಡಿ, ಸಂಸ್ಥೆ ಪರಿಸರದಲ್ಲಿ 24 ವರ್ಷಗಳಿಂದ ಆಸ್ಪತ್ರೆಯನ್ನು ನಡೆಸಿಕೊಂಡು ಬರುತ್ತಿದೆ. ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ಸಂಸ್ಥೆಯಲ್ಲಿ ಬೃಹತ್ ರಾಷ್ಟ್ರಧ್ವಜದ ಅನಾವರಣ ಆಗಿರುವುದು ಗೌರವ ತಂದಿದೆ. ಪ್ರತಿ ವಿದ್ಯಾರ್ಥಿಗಳು ಸಂಸ್ಥೆ ಒಳಬರುವಾಗ ರಾಷ್ಟ್ರಧ್ವಜಕ್ಕೆ ಸೆಲ್ಯೂಟ್…
UN NEWS NETWORKSಮುಡಿಪು: ಕನಕದಾಸರ ಸಾಹಿತ್ಯದ ಶಕ್ಯಿ, ಕಾವ್ಯದ ಶಕ್ತಿ ಅತ್ಯದ್ಭುತವಾದುದು. ಅಂದಿನ ಕಾಲದಲ್ಲೇ ಅವರು ಸಮಾಜದಲ್ಲಿ ಹೇಗೆ ಬದುಕಬೇಕು ಎಂಬುವುದನ್ನು ತೋರಿಸುವುದರ ಜೊತೆಗೆ ಮನಸ್ಸು ಮನಸ್ಸು ಗಳನ್ನು ಬೆಸೆಯುವ , ಜಾತಿ,ಮತ ಕಂದಕಗಳನ್ನು ದೂರಗೊಳಿಸುವ ಪ್ರಯತ್ನವನ್ನು ಮಾಡಿದವರು ಕನಕದಾಸರು ಎಂದು ಹರಿದಾಸ ಸಂಗೀತ ರತ್ನ ಪುತ್ತೂರು ನರಸಿಂಹ ನಾಯಕ್ ಹೇಳಿದರು. ಅವರು ಮಂಗಳವಾರ ಮಂಗಳೂರು ವಿಶ್ವವಿದ್ಯಾಲಯದ ಕನಕದಾಸ ಅಧ್ಯಯನ ಪೀಠ ಹಾಗೂ ಕನಕದಾಸ ಸಂಶೋಧನಾ ಕೇಂದ್ರ ಆಶ್ರಯದಲ್ಲಿ ಕನಕ ಕೀರ್ತನ ಗಂಗೋತ್ರಿ’ ಶೈಕ್ಷಣಿಕ ಸಂಸ್ಥೆಗಳ ಹಾಗೂ ಸಾರ್ವಜನಿಕರ ಸಾಮುದಾಯಿಕ ಪಾಲ್ಗೊಳ್ಳುವಿಕೆಯ ಕನಕದಾಸರ ಕೀರ್ತನೆಗಳ ಗಾಯನ ಮತ್ತು ಸಮೂಹ ನೃತ್ಯ ಭಜನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಕನಕದಾಸರ ಪ್ರತಿಯೊಂದು ಕಾವ್ಯದಲ್ಲೂ ಅವರ ಪ್ರಗತಿಪರ ಚಿಂತನೆ ಎದ್ದು ಕಾಣುತ್ತದೆ. ಪ್ರಗತಿಪರ ಚಿಂತನೆಯೊಂಂದಿಗೆ ಸಾಮರಸ್ಯವನ್ನು ತರುವಲ್ಲಿ ಕನಕರು ಕೊಂಡಿಯಾಗುವುದನ್ನು ಗಮನಿಸಲು ಸಾಧ್ಯವಾಗುತ್ತದೆ.ಕನಕದಾಸರ ಹಲವಾರು ಹಾಡುಗಳಲ್ಲಿ ಕಾವ್ಯದ ಅಂಶಗಳ ಜೊತೆಗೆ ಆಧ್ಯಾತ್ಮಕ ಪರಿಕಲ್ಪನೆಗಳಿವೆ. ಅವರ ಹರಿಭಕ್ತಸಾರ ಆಧ್ಯಾತ್ಮ ಲೋಕಕ್ಕೆ ಅಧ್ಬುತವಾದ ಕೊಡುಗೆಯಾಗಿದೆ. ವೈರಾಗ್ಯದ ಹಾಡನ್ನು ಕನಕದಾಸರಷ್ಟು ಯಾರೂ…
UN NEWS NETWORKSಉಳ್ಳಾಲ: ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕೈರಂಗಳದ ಪುಣ್ಯಕೋಟಿನಗರದಲ್ಲಿರುವ ಅಮೃತಧಾರಾ ಗೋಶಾಲೆಯಲ್ಲಿ ಕಳೆದ ಜ.14 ರಿಂದ ಆರಂಭಗೊಂಡ ಒಂದು ತಿಂಗಳ ಗೋಸೇವಾ ಮಾಸಾಚರಣೆಯು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಮಾಜಮುಖಿ ಕಾರ್ಯಕ್ರಮಗಳೊಂದಿಗೆ ವೈಭವ ಹಾಗೂ ವಿಭಿನ್ನತೆಯ ಮೂಲಕ ನಡೆದು ಜ.13 ರಂದು ಸೋಮವಾರ ದೀಪೋತ್ಸವದ ಮೂಲಕ ಸಂಪನ್ನಗೊಂಡಿತು. ಗೋಸೇವಾ ಮಾಸಾಚರಣೆ ಉದ್ಘಾಟನೆಯನ್ನು ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಅವರ ಉಪಸ್ಥಿತಿಯೊಂದಿಗೆ, ಮುಂಬೈ ಉದ್ಯಮಿ ಸದಾಶಿವ ಶೆಟ್ಟಿ ಕೂಳೂರು, ಕನ್ಯಾನ ಉದ್ಘಾಟಿಸಿ ಚಾಲನೆ ನೀಡಿದ್ದರು.ಗೋಸೇವಾ ಕಾರ್ಯಕ್ರಮದಲ್ಲಿ ಮುಡಿಪು ಭಾಗದ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಗೋಸೇವೆಯು ನಿತ್ಯ ನಿರಂತರವಾಗಿ ನಡೆಯಿತು ಹಾಗೂ ಪ್ರತಿನಿತ್ಯ ಸಂಜೆ ವಿವಿಧ ಭಜನಾ ಮಂಡಳಿಗಳ ಆಶ್ರಯದಲ್ಲಿ ನಿರಂತರ ಭಜನಾ ಸಂದ್ಯಾ ಭಜನೆಯು ನಿರಂತರವಾಗಿ ನಡೆಯಿತು.ಗೋಸೇವಾ ಮಾಸಾಚರಣೆಯ ಕೊನೆಯ ದಿನವಾದ ಸೋಮವಾರ ಭಜನಾ ಮಂಗಳೋತ್ಸವ ಹಾಗೂ ದೀಪೋತ್ಸವ ಮೂಲಕ ಗೋಸೇವಾ ಮಾಸಾಚರಣೆ ಸಂಪನ್ನಗೊಂಡಿತು.ಈ ಸಂದರ್ಭದಲ್ಲಿ ಸಂಚಾಲಕ ಟಿ.ಜಿ ರಾಜಾರಾಮ್ ಭಟ್ ಅವರು…

