
ಉಳ್ಳಾಲ: ನಿನ್ನೆಯಷ್ಟೇ ಮುಂಬೈನಿಂದ ಬಂಧಿಸಲಾದ ಕೋಟೆಕಾರು ದರೋಡೆ ತಂಡದ ಮೂವರು ಆರೋಪಿಗಳಲ್ಲಿ ಓರ್ವನಿಗೆ ಪೊಲೀಸರಿಂದ ಫೈರ್ ಮಾಡಲಾಗಿದೆ. ತಲಪಾಡಿಯ ಅಲಂಕಾರುಗುಡ್ಡೆ ಸಮೀಪ ಘಟನೆ ನಡೆದಿದ್ದು, ಮೇಲ್ನೋಟಕ್ಕೆ ಆರೋಪಿ ತಲೆಮರೆಸಿಕೊಳ್ಳುವ ಸಂದರ್ಭ ಪೊಲೀಸರು ಫೈರ್ ನಡೆಸಿರುವುದಾಗಿ ತಿಳಿದುಬಂದಿದೆ.
ದರೋಡೆ ಪ್ರಕರಣದ ಸೂತ್ರಧಾರ, ಪ್ರಮುಖ ನಟೋರಿಯಸ್ ಮನಿವನ್ನನ್ ಎಂಬಾತನ ಮೇಲೆ ಫೈರ್ ಮಾಡಲಾಗಿದೆಯೆಂದು ತಿಳಿದುಬಂದಿದ್ದು, ಗಾಯಾಳು ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೇರಳ-ಕರ್ನಾಟಕ ಗಡಿಭಾಗ ತಲಪಾಡಿ ಆಲಂಕಾರುಗುಡ್ಡೆ ಸಮೀಪ ಪೊಲೀಸರಿಂದ ಫೈರಿಂಗ್ ನಡೆಸಲಾಗಿದೆ. ಘಟನಾ ಸ್ಥಳದಲ್ಲಿ ಪೊಲೀಸರು ಬೀಡುಬಿಟ್ಟಿದ್ದಾರೆ.

