ಬಂಟ್ವಾಳ: ದ.ಕ ಜಿಲ್ಲೆಯ ಬಂಟ್ವಾಳ ಪುರಸಭೆಯ ಅಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಎಸ್ ಡಿ ಪಿಐ ಜೊತೆ ಮೈತ್ರಿ ಮಾಡಿಕೊಳ್ಳುವ ಮೂಲಕ ಅಧಿಕಾರದ ಗದ್ದುಗೇಯೆರಿದೆ.ಕಾಂಗ್ರೆಸ್ ನ ವಾಸು ಪೂಜಾರಿ ಪುರಸಭೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಎಸ್ಡಿಪಿಐ ಸದಸ್ಯ ಮೋನಿಶ್ ಆಲಿಗೆ ಉಪಾಧ್ಯಕ್ಷ ಸ್ಥಾನ ಲಭಿಸಿದೆ.ಒಟ್ಟು 27 ಸದಸ್ಯ ಬಲದ ಪುರಸಭೆಯಲ್ಲಿ ಬಹುಮತಕ್ಕೆ 14 ಮತಗಳ ಅಗತ್ಯವಿದ್ದಿತು. ಕಾಂಗ್ರೆಸ್ 12 ಸ್ಥಾನ ಹೊಂದಿತ್ತಾದರೂ ಕಾಂಗ್ರೆಸ್ ಸದಸ್ಯರೊಬ್ಬರ ರಾಜೀನಾಮೆಯಿಂದ ಕಾಂಗ್ರೆಸ್ ಬಲ 11ಕ್ಕೆ ಕುಸಿದಿತ್ತು. ಬಿಜೆಪಿ 11 ಹಾಗೂ ಎಸ್‌ಡಿಪಿಐ 4 ಸದಸ್ಯರ ಬಲ ಹೊಂದಿತ್ತು 11 ಸ್ಥಾನ ಹೊಂದಿರುವ ಬಿಜೆಪಿಗೆ ಸ್ಥಳೀಯ ಶಾಸಕರು ಮತ್ತು ಸಂಸದರ ಮತ ಸೇರಿ 13 ಮತಗಳಿದ್ದವು. ಆದರೆ ಕಾಂಗ್ರೆಸ್ ಮತ್ತು ಎಸ್‌ಡಿಪಿಐ ಮೈತ್ರಿ ಸಾಧಿಸಿ 15 ಮತಗಳ ಬಹುಮತದ ಮೂಲಕ ಅಧಿಕಾರಕ್ಕೆ ಕಾಂಗ್ರೆಸ್ ನ ವಾಸು ಪೂಜಾರಿ ಪುರಸಭೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಎಸ್ಡಿಪಿಐ ಸದಸ್ಯ ಮೋನಿಶ್ ಆಲಿಗೆ ಉಪಾಧ್ಯಕ್ಷ ಸ್ಥಾನ ಪಡೆದುಕೊಂಡಿದ್ದಾರೆ.
Author: UllalaVani
ಮಂಗಳೂರು: ಕಲ್ಲು ಹೊಡೆಯೋದಾದರೆ ಅದು ಐವನ್ ಮನೆಗೆ ಅಲ್ಲ, ತಲೆಗೆ ಹೊಡೆಯುತ್ತಿದ್ದೇವು.ನಮ್ಮಲ್ಲಿ ಕಲ್ಲು ಹೊಡೆಯೋ ಸಾಮರ್ಥ್ಯ ಇದ್ದರೂ ಈ ನೆಲದ ಕಾನೂನಿಗೆ ಗೌರವ ಕೊಡುತ್ತೇವೆ. ಅವನೇ ತನ್ನ ಮನೆಗೆ ಕಲ್ಲು ಹೊಡೆದು ನಾಟಕ ಮಾಡುತ್ತಿದ್ದಾನೆ ಎಂದು ಶಾಸಕವೇದವ್ಯಾಸ ಕಾಮತ್ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಮೂಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿ ಹಾಗೂ ರಾಜ್ಯಪಾಲರ ವಿರುದ್ಧ ಅಸಂಬದ್ಧ ಹೇಳಿಕೆ ನೀಡುತ್ತಿರುವ ಕಾಂಗ್ರೆಸಿಗರ ವಿರುದ್ಧ ಮಿನಿ ವಿಧಾನಸೌಧದ ಎದುರು ಗುರುವಾರ ದ.ಕ ಜಿಲ್ಲಾ ಬಿಜೆಪಿ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದರು. ಐವನ್ ಒಬ್ಬ ವಕೀಲ, ವಕೀಲರೆಲ್ಲರೂ ಇದೇ ರೀತಿ ಇರುತ್ತಿದ್ದರೆ ದೇಶದ ಪರಿಸ್ಥಿತಿ ಏನಾಗುತ್ತಿತ್ತು. ಈಗ ಅವನ ವಕೀಲನ ಬುದ್ದಿ ಉಪಯೋಗಿಸಿ ಅವನ ಮನೆಗೆ ಕಲ್ಲು ಹೊಡೆಸಿದ್ದಾನೆ ಯಾವುದೋ ಕಾಂಗ್ರೆಸ್ ಪುಂಡ ಪೋಕರಿಗಳಿಂದ ಮನೆಗೆ ಕಲ್ಲು ಹೊಡೆಸಿದ್ದಾನೆ. ಇದನ್ನು ಬಿಜೆಪಿ ಕಾರ್ಯಕರ್ತರು ಹೊಡೆದಿದ್ದು ಅಂತ ಹೇಳುತ್ತಿದ್ದಾನೆ. ನಾವು ಕಲ್ಲು ಹೊಡೆಯೋದಾಗಿದ್ದರೆ ಮೊನ್ನೆಯೇ ಹೊಡೀತಾ ಇದ್ದೆವು. ಹೊಡೆಯೋದಾದರೆ ನಿಮ್ಮ ಮನೆಗೆ ಅಲ್ಲ, ನಿಮ್ಮ ತಲೆಗೆ ಹೊಡೀಯುತ್ತಿದ್ವಿ, ನಮ್ಮಲ್ಲಿ…
ಪಜೀರು: ಶ್ರೀ ಕೃಷ್ಣ ಭಜನಾ ಮಂದಿರ ಸುದರ್ಶನ ನಗರ ಪಜೀರುಇದರ ವತಿಯಿಂದ ಆ 26 ಹಾಗೂ ಹಾಗೂ ಆ.27ರಂದು ನಡೆಯಲಿರುವ ಶ್ರೀ ಕೃಷ್ಣ ಜನ್ಮಾಷ್ಟಮಿ ಮೊಸರು ಕುಡಿಕೆ ಉತ್ಸವ ದ ಅಂಗವಾಗಿ ವಿವಿಧ ಸ್ಪರ್ಧೆಗಳು ಭಾನುವಾರದಂದು ದಿ.ಗಂಗಾಧರ ಶೆಟ್ಟಿ ಕೆಳಗಿನ ಮನೆ ವೇದಿಕೆ ಯಲ್ಲಿ ನಡೆಯಿತು. ಗೌರವ ಸಲಹೆಗಾರ ಸೇಸಪ್ಪ ಪೂಜಾರಿ, ಉಮೇಶ್ ಪಿ , ಮಾಜಿ ಅಧ್ಯಕ್ಷ ವಸಂತ್ ಜಿ,ಮಾಜಿ ಕಾರ್ಯದರ್ಶಿ ಶಿವ ಪ್ರಸಾದ್ ಚೌಟ , ಉಪಾಧ್ಯಕ್ಷ ಜಯಾನಂದ ಶೆಟ್ಟಿ ,ಕೋಶಾಧಿಕಾರಿ ಯಶೋಧರ ಜೋಗಿ ಬೆಟ್ಟು , ಶ್ರೀ ತುಳಸಿ ಮಾತೃ ಮಂಡಳಿ ಯ ಅಧ್ಯಕ್ಷ ಶರ್ಮಿಳಾ ದಿಲೀಪ್ ಕುಮಾರ್, ಸರ್ವೋದಯ ಯುವಕ ಮಂಡಲ ದ ಅಧ್ಯಕ್ಷ ಮನೋಜ್ ಪಜೀರು, ವಿದ್ಯಾ ವಿ ಶೆಟ್ಟಿ, ಉಪಸ್ಥಿತರಿದ್ದರು . ಭಜನಾ ಮಂದಿರದ ಅಧ್ಯಕ್ಷ ವಿಜೇತ್ ಪಜೀರ್ ಸ್ವಾಗತಿಸಿದರು.ಸಾಂಸ್ಕೃತಿಕ ಕಾರ್ಯದರ್ಶಿ ನಿರ್ಮಲ್ ಭಟ್ ವೈ ರವರು ಕಾರ್ಯಕ್ರಮ ನಿರೂಪಿಸಿದರು. ಸುಮತಿ ಪಜೀರು ಹಾಗು ಪ್ರಮೀಳಾ ಮಹಾಬಲ ಗಟ್ಟಿ ಯವರು ಸಹಕರಿಸಿದರು.ಪ್ರಧಾನ ಕಾರ್ಯದರ್ಶಿ…
ಮಂಗಳೂರು: ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಮನೆ ಮೇಲೆ ದುಷ್ಕರ್ಮಿಗಳಿಂದ ಕಲ್ಲು ತೂರಾಟ ನಡೆದ ಘಟನೆ ಬುಧವಾರ ತಡರಾತ್ರಿ ನಡೆದಿದೆ. ರಾಜ್ಯಪಾಲರ ವಿರುದ್ಧ ವಿವಾದಾತ್ಮಕ ಹೇಳಿಕೆ ಹಿನ್ನಲೆ ಈ ಕೃತ್ಯ ನಡೆದಿದೆ ಎನ್ನಲಾಗಿದ್ದು ಬೈಕ್ ನಲ್ಲಿ ಬಂದ ದುಷ್ಕರ್ಮಿಗಳಿಂದ ಐವನ್ ಮನೆಗೆ ಕಲ್ಲು ತೂರಾಟ ನಡೆಸಿದ್ದಾರೆ. ಮಂಗಳೂರಿನ ವೆಲೆನ್ಸಿಯದಲ್ಲಿರುವ ಐವನ್ ಡಿಸೋಜ ಮನೆಗೆ ಕಲ್ಲು ತೂರಾಟ ನಡೆದಿದ್ದು ಘಟನೆಯಲ್ಲಿ ಯಾವುದೇ ಹಾನಿಯಾಗಿಲ್ಲ ಐವನ್ ಮನೆಯ ಕಿಟಕಿಯ ಫ್ರೇಮ್ ಗೆ ಕಲ್ಲು ಬಿದ್ದಿದೆ. ಸ್ಥಳಕ್ಕೆ ಪಾಂಡೇಶ್ವರ ಠಾಣಾ ಪೊಲೀಸರ ಭೇಟಿ ನೀಡಿ ,ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸುತ್ತಿದ್ದಾರೆ.
ಕೊಣಾಜೆ: ಕೈರಂಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದನರಿಂಗಾನ ಗ್ರಾಮದ ರೈತ ಸದಸ್ಯರಿಗೆ ಸಂಘದತೌಡುಗೋಳಿ ಶಾಖಾ ವಠಾರ ದಲ್ಲಿ ಬೆಳೆ ಸಮೀಕ್ಷೆ ಹಾಗೂ ಸುಧಾರಿತ ಕೃಷಿಯ ಬಗ್ಗೆಮಾಹಿತಿ ಕಾರ್ಯಗಾರ ಮಂಗಳವಾರ ನಡೆಯಿತು. ಬಂಟ್ವಾಳ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಪ್ರದೀಪ್ ಡಿಸೋಜ ಹಾಗೂಪಾಣೆಮಂಗಳೂರುಕೃಷಿ ಇಲಾಖೆಯ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಹನುಮಂತ ಕಾಳಗಿ ಮಾಹಿತಿ ನೀಡಿದರು.ಕೈರಂಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಹೇಶ್ ಚೌಟ ಅಧ್ಯಕ್ಷತೆ ವಹಿಸಿದ್ದರು.ಹಿರಿಯ ನಿರ್ದೇಶಕರುಗಳಾದ ಡಿ. ಶಂಕರ್ ಭಟ್ ದೋಸೆಮನೆ, ಉಗ್ಗಪ್ಪ ಮಾಣಾಯಿ ಬೀರೂರು, ಪೂವಪ್ಪ ಕಡಂಬಾರ್, ಉದಯ ಶಂಕರ್ ಶೆಟ್ಟಿ ಬಲೆತ್ತೋಡು,ಕೈರಂಗಳ, ಬಾಳೆಪುಣಿ, ನರಿಂಗಾನ ಗ್ರಾಮದ ರೈತ ಮುಖಂಡರುಗಳಾದ ಚಂದ್ರಹಾಸ್ ಶೆಟ್ಟಿ ಮೋರ್ಲ, ನಾರಾಯಣ ಶೆಟ್ಟಿ ಬಲೆತ್ತೋಡು, ಐತಪ್ಪ ಶೆಟ್ಟಿ ಆಳ್ವರಬೆಟ್ಟು, ಪ್ರಭಾಕರ್ ಶೆಟ್ಟಿ ಮರಿಕ್ಕಳ, ರಾಮಣ್ಣ ಶೆಟ್ಟಿ ಆಳ್ವರಬೆಟ್ಟು, ಶ್ರೀನಾಥ್ ರೈ ಗರೋಡಿ, ಕೆ. ಜೆ. ಗಟ್ಟಿ, ನರಿಂಗಾನ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರುಗಳಾದಜೋಸೆಫ್ ಕುಟ್ಟಿನ್ಹ ಬೋಳ, ಅಬ್ದುಲ್ಲ ಕೊಡಂಚಿಲ್, ಸದಸ್ಯಶೇಖಬ್ಬ…
ಬೆಳ್ತಂಗಡಿ: ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ನಿವೃತ್ತ ಶಿಕ್ಷಕರೊಬ್ಬರನ್ನು ಬರ್ಬರವಾಗಿ ಹತ್ಯೆ ನಡೆಸಿದ ಘಟನೆ ದ.ಕ ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದಲ್ಲಿ ನಡೆದಿದೆ. ಬೆಳ್ತಂಗಡಿಯ ನಿವೃತ್ತ ಶಿಕ್ಷಕ ಬಾಲಕೃಷ್ಣ ಭಟ್ ಕೊಲೆಯಾದ ವ್ಯಕ್ತಿಯಾಗಿದ್ದು ತನ್ನ ಮನೆಯ ಅಂಗಳದಲ್ಲೇ ಕೊಲೆ ನಡೆಸಲಾಗಿದೆ. ಏಕಾಏಕಿಮಾರಾಕಾಸ್ತ್ರಗಳಿಂದ ದಾಳಿ ಮಾಡಿದ ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆಕೊಲೆಗೆ ಕಾರಣ ನಿಗೂಢವಾಗಿದ್ದು ಸ್ಥಳಕ್ಕೆ ಧರ್ಮಸ್ಥಳ ಠಾಣಾ ಪೊಲೀಸರು ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.
ಪುತ್ತೂರು: ಅಪ್ರಾಪ್ತ ಮುಸ್ಲಿಂ ವಿದ್ಯಾರ್ಥಿನಿ ಮೇಲೆ ಅಪ್ರಾಪ್ತ ಬಾಲಕನಿಂದ ಚೂರಿ ಇರಿದ ಘಟನೆಯೊಂದು ದ.ಕ ಜಿಲ್ಲೆಯ ಪುತ್ತೂರು ತಾಲೂಕಿನ ಕೊಂಬೆಟ್ಟು ಕಾಲೇಜಿನಲ್ಲಿ ಮಂಗಳವಾರ ನಡೆದಿದೆ. ಮುಸ್ಲಿಂ ವಿದ್ಯಾರ್ಥಿನಿಗೆ ಹಿಂದೂ ವಿದ್ಯಾರ್ಥಿಯಿಂದ ಇರಿತದ ಆರೋಪ ಕೇಳಿಬಂದಿದೆ. ಚೂರಿಯಿಂದ ಕೈಗೆ ಇರಿದ ವಿದ್ಯಾರ್ಥಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿ ಶಾಲಾ ಆಡಳಿತದ ವಿರುಧ್ಧ ಆರೋಪ ಕೇಳಿಬಂದಿದ್ದುಆಸ್ಪತ್ರೆಯಲ್ಲಿ ಹೆಸರು ಬದಲಾಯಿಸಿ ಹೇಳುವಂತೆ ಶಿಕ್ಷಕಿ ಒತ್ತಡ ಹೇರಿದ್ದು ಕೈಗೆ ಗಾಜು ತಾಗಿದ್ದಕ್ಕೆ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುವುದಾಗಿ ಕಾಲೇಜು ಪ್ರಾಂಶುಪಾಲರಿಂದ ಒತ್ತಡದ ಬಗ್ಗೆ ವಿದ್ಯಾರ್ಥಿನಿ ಆರೋಪಿಸಿದ್ದಾರೆ ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಸೇರಿದ್ದು ಸದ್ಯ ವಿದ್ಯಾರ್ಥಿನಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಆಸ್ಪತ್ರೆಯ ಮುಂದೆ ಜನ ಸೇರಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.ಸದ್ಯ ಸೇರಿದ ಜನರನ್ನು ಆಸ್ಪತ್ರೆಯಿಂದ ಹೊರಗೆ ಪೊಲೀಸರು ಕಳುಹಿಸಿದ್ದಾರೆ. ಪುತ್ತೂರು ನಗರ ಠಾಣೆ ಪೊಲೀಸರಿಂದ ತನಿಖೆ ನಡೆಸಲಾಗಿದೆ
ಪಿಲಾರು: ಪ್ರತಿಭಾ ಕಾರಂಜಿಯ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳನ್ನು ಭಾಗವಹಿಸುವಂತೆ ಮಾಡಿ ಪ್ರೋತ್ಸಾಹಿಸಬೇಕು. ಈ ಮೂಲಕ ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸಲು ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಈಶ್ವರ್ ಹೆಚ್. ಆರ್ ಹೇಳಿದರು. ದ.ಕ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮಂಗಳೂರು ದಕ್ಷಿಣ ವಲಯ ಸಮೂಹ ಸಂಪನ್ಮೂಲ ಕೇಂದ್ರ ಪಿಲಾರು ಮತ್ತು ಪಿಲಾರು ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲಾ ಇವರ ಸಹಯೋಗದೊಂದಿಗೆ ಜರಗಿದ ಪಿಲಾರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ 2024-25 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. 10 ವರ್ಷಗಳಿಂದ ನಿರಂತರವಾಗಿ ಕರ್ನಾಟಕ ಸರಕಾರ ಪ್ರತಿಭಾ ಕಾರಂಜಿಗಳನ್ನು ನಡೆಸುತ್ತಾ ಬಂದಿದೆ. ವಿದ್ಯಾರ್ಥಿಗಳು ಕಲಿಕೆಯಲ್ಲಿ ಮಾತ್ರ ಸಾಧನೆಯಲ್ಲ, ಇತರೆ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮಾಡಬೇಕಿದೆ. ಮಕ್ಕಳಲ್ಲಿನ ಸೃಜನಾತ್ಮಕತೆ, ಅವರದೆ ಆದ ಕೌಶಲ್ಯ ಅಭಿವೃದ್ಧಿಪಡಿಸಲು ಪ್ರತಿಭಾ ಕಾರಂಜಿ ಕಾರ್ಯಕ್ರಮ ಪೂರಕ ಎಂದ ಅವರು ಶಿಕ್ಷಣ ಇಲಾಖೆ ಪ್ರತಿಭೆಯಿರುವ ವಿದ್ಯಾರ್ಥಿಗಳ ಬೆನ್ನುತಟ್ಟಿ ಪ್ರೋತ್ಸಾಹಿಸುವ ಕಾರ್ಯಗಳನ್ನು ನಿರಂತರವಾಗಿ ಮಾಡುತ್ತ ಬಂದಿದೆ.. ಗ್ರಾಮೀಣ ಭಾಗದ ಮಕ್ಕಳಿಗೆ ಬಹಳಷ್ಟು…
ಕೊಲ್ಯ: ನಾರಾಯಣ ಗುರುವರ್ಯರ ತತ್ವ ನಿಷ್ಠೆಯಿಂದ ಸಮಾಜ ಮುಂದುವರಿದು,ಯುವಸಮುದಾಯ ಅಭಿವೃದ್ಧಿ ಯ ಪಥದಲ್ಲಿದೆ. ಆದರೆ ಸದ್ಯ ಸಮಾಜದ ಸಂಘಟನೆಗಳು ಒಡೆದುಹೋಗಿವೆ, ಕೆಲವೇ ಗ್ರಾಮಗಳಿಗೆ ಸೀಮಿತವಾಗಿರುವುದು ಸರಿಯಲ್ಲ ಎಂದು ನಮ್ಮ ಕುಡ್ಲ ವಾಹಿನಿ ನಿರ್ದೇಶಕರಾದ ಲೀಲಾಕ್ಷ ಕರ್ಕೇರ ಹೇಳಿದರು. ಬ್ರಹ್ಮಶ್ರೀ ನಾರಾಯಣ ಗುರು ಧ್ಯಾನ ಮಂದಿರ ಕೊಲ್ಯ ಸೋಮೇಶ್ವರ ಇದರ ವತಿಯಿಂದ ಕೊಲ್ಯ ಬ್ರಹ್ಮಶ್ರೀ ನಾರಾಯಣ ಗುರು ಸಭಾಂಗಣದಲ್ಲಿ ಜರಗಿದ ಬ್ರಹ್ಮ ಶ್ರೀ ನಾರಾಯಣ ಗುರುವರ್ಯರ 170 ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದರು. ಜನ್ಮ ದಿನಾಚರಣೆಯಲ್ಲಿ ಇಡೀ ಗ್ರಾಮವೇ ಪಾಲ್ಗೊಳ್ಳಬೇಕಿದೆ. ವರ್ಷದ ಒಂದು ದಿನವನ್ನಾದರೂ ಯುವಸಮುದಾಯ ಗುರುವರ್ಯರುಗೆ ಮೀಸಲಿಡಬೇಕಿದೆ. ಕುಟುಂಬದ ಪ್ರತಿಯೊಬ್ಬ ಸದಸ್ಯನೂ ಪಾಲಿಸುವ ಅನಿವಾರ್ಯತೆ ಇದೆ ಎಂದರು. ನಾರಾಯಣ ಗುರು ಅಧ್ಯಯನ ಪೀಠದ ಮಂಗಳೂರು ವಿ.ವಿ.ಯ ಸ್ಥಾಪಕ ನಿರ್ದೇಶಕ ಮುದ್ದು ಮೂಡುಬೆಳ್ಳೆ, ಮಾತನಾಡಿ ಜ್ಞಾನ ಸಂಪಾದನೆ ಪದವಿಯಿಂದ ಬರುವಂತದ್ದಲ್ಲ,ಬದುಕಿನ ಅನುಭವಗಳಿಂದ ಬರುತ್ತದೆ. ಮಾನವೀಯತೆ ಸಹೋದರತ್ವ ಮೈಗೂಡಿಸಿಕೊಂಡು ಶಾಂತಿಯುತವಾಗಿ ಬಾಳಬೇಕಿದೆ. ಆತ್ಮಸ್ಥೈರ್ಯದಿಂದ ಬದುಕಬೇಕಾದರೆ ಇನ್ನೊಬ್ಬರಿಗೆ ಅನ್ಯಾಯವಾಗದಂತೆ ಬಾಳುವುದೇ ಸೂಕ್ತ. ಅಭಿವೃದ್ಧಿ ಶೀಲ…
ಕೋಟೆಪುರ: ಬದ್ರಿಯಾ ಜುಮಾ ಮಸೀದಿ ಕೋಡಿ ಉಳ್ಳಾಲ ವತಿಯಿಂದ ಖುರ್ರತುಸ್ಸಾದಾತ್ ಫಝಲ್ ಕೋಯಮ್ಮ ತಂಙಳ್ ಕೂರತ್ ಅವರ 40ನೇ ದಿನದ ದುಆ ಮಜ್ಲಿಸ್ ಕೋಡಿ ಬದ್ರಿಯಾ ಮಸೀದಿಯಲ್ಲಿ ನಡೆಯಿತು. ಕೋಟೆಪುರ ಜುಮಾ ಮಸೀದಿ ಖತೀಬರಾದ ಇರ್ಷಾದ್ ಸಖಾಫಿ, ಮಸೀದಿಯ ಅಧ್ಯಕ್ಷ ಯು.ಕೆ ಮೊಹಮ್ಮದ್, ಕಾರ್ಯದರ್ಶಿ ಇಸ್ಮಾಯಿಲ್, ಕಮಿಟಿ ಸದಸ್ಯ ಹಮೀದ್ ಎ.ಆರ್, ಅಶ್ರಫ್ ಸೋಲಾರ್, ರಶೀದ್ ಕೋಡಿ, ನಗರ ಸಭೆ ಸದಸ್ಯ ರಮೀಝ್, ಸೊಇಶಿಯಲ್ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಶಿಹಾಬ್ ಕೋಡಿ ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.

