ಮಂಗಳೂರು: ಕಲ್ಲು ಹೊಡೆಯೋದಾದರೆ ಅದು ಐವನ್ ಮನೆಗೆ ಅಲ್ಲ, ತಲೆಗೆ ಹೊಡೆಯುತ್ತಿದ್ದೇವು.ನಮ್ಮಲ್ಲಿ ಕಲ್ಲು ಹೊಡೆಯೋ ಸಾಮರ್ಥ್ಯ ಇದ್ದರೂ ಈ ನೆಲದ ಕಾನೂನಿಗೆ ಗೌರವ ಕೊಡುತ್ತೇವೆ. ಅವನೇ ತನ್ನ ಮನೆಗೆ ಕಲ್ಲು ಹೊಡೆದು ನಾಟಕ ಮಾಡುತ್ತಿದ್ದಾನೆ ಎಂದು ಶಾಸಕವೇದವ್ಯಾಸ ಕಾಮತ್ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಮೂಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿ ಹಾಗೂ ರಾಜ್ಯಪಾಲರ ವಿರುದ್ಧ ಅಸಂಬದ್ಧ ಹೇಳಿಕೆ ನೀಡುತ್ತಿರುವ ಕಾಂಗ್ರೆಸಿಗರ ವಿರುದ್ಧ ಮಿನಿ ವಿಧಾನಸೌಧದ ಎದುರು ಗುರುವಾರ ದ.ಕ ಜಿಲ್ಲಾ ಬಿಜೆಪಿ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದರು.
ಐವನ್ ಒಬ್ಬ ವಕೀಲ, ವಕೀಲರೆಲ್ಲರೂ ಇದೇ ರೀತಿ ಇರುತ್ತಿದ್ದರೆ ದೇಶದ ಪರಿಸ್ಥಿತಿ ಏನಾಗುತ್ತಿತ್ತು. ಈಗ ಅವನ ವಕೀಲನ ಬುದ್ದಿ ಉಪಯೋಗಿಸಿ ಅವನ ಮನೆಗೆ ಕಲ್ಲು ಹೊಡೆಸಿದ್ದಾನೆ ಯಾವುದೋ ಕಾಂಗ್ರೆಸ್ ಪುಂಡ ಪೋಕರಿಗಳಿಂದ ಮನೆಗೆ ಕಲ್ಲು ಹೊಡೆಸಿದ್ದಾನೆ. ಇದನ್ನು ಬಿಜೆಪಿ ಕಾರ್ಯಕರ್ತರು ಹೊಡೆದಿದ್ದು ಅಂತ ಹೇಳುತ್ತಿದ್ದಾನೆ. ನಾವು ಕಲ್ಲು ಹೊಡೆಯೋದಾಗಿದ್ದರೆ ಮೊನ್ನೆಯೇ ಹೊಡೀತಾ ಇದ್ದೆವು. ಹೊಡೆಯೋದಾದರೆ ನಿಮ್ಮ ಮನೆಗೆ ಅಲ್ಲ, ನಿಮ್ಮ ತಲೆಗೆ ಹೊಡೀಯುತ್ತಿದ್ವಿ, ನಮ್ಮಲ್ಲಿ ಕಲ್ಲು ಹೊಡೆಯೋ ಸಾಮರ್ಥ್ಯ ಇದ್ದರೂ ಈ ನೆಲದ ಕಾನೂನಿಗೆ ಗೌರವ ಕೊಡುತ್ತೇವೆ. ಅವನೇ ತನ್ನ ಮನೆಗೆ ಕಲ್ಲು ಹೊಡೆದು ನಾಟಕ ಮಾಡುತ್ತಿದ್ದಾನೆ. ಈಗ ಐವನ್ಗೆ ರಸ್ತೆಗೆ ಬರಲು ಆಗುತ್ತಿಲ್ಲ, ಕಾರ್ಯಕ್ರಮಗಳಿಗೂ ಬರಲು ಆಗುತ್ತಿಲ್ಲ.
ಐವನ್ ಡಿಸೋಜಾ ಬಂಧಿಸದೇ ಇದ್ದರೆ ಉಗ್ರ ಹೋರಾಟ ಮಾಡುತ್ತೇವೆ.ಒಬ್ಬ ದಲಿತ ರಾಜ್ಯಪಾಲರಿಗೆ ಕಾಂಗ್ರೆಸ್ ಅವಮಾನ ಮಾಡುತ್ತಿದೆ ಇದೆ
ಬಾಂಗ್ಲಾ ಮಾದರಿಯಲ್ಲಿ ಓಡಿಸ್ತೇವೆ ಅಂತ ರಾಜ್ಯಪಾಲರಿಗೆ ಬೆದರಿಕೆ ಹಾಕುತ್ತಿದ್ದಾರೆ. ಕಾಂಗ್ರೆಸ್ ನ ಒಬ್ಬ ಸಚಿವ ರಾಜ್ಯಪಾಲರ ಬಗ್ಗೆ ಏಕವಚನದಲ್ಲಿ ಮಾತನಾಡುತ್ತಾನೆ. ಐವನ್ ಡಿಸೋಜಾ ವಿರುದ್ದ ಮಂಗಳೂರು ಕಮಿಷನರ್ ಇನ್ನೂ ಕ್ರಮ ಕೈಗೊಂಡಿಲ್ಲ. ಪೊಲೀಸ್ ಇಲಾಖೆಗೆ ಧಮ್ಮಿಲ್ಲ, ಎಫ್ ಐಆರ್ ದಾಖಲಾಗಿಲ್ಲ. ನಮಗೆ ಬಹಳ ನಾಚಿಕೆ ಆಗುತ್ತಿದೆ, ಇಲ್ಲಿನ ಪೊಲೀಸರ ನಡೆಯ ಬಗ್ಗೆ ಬಸ್ಸಿಗೆ ಕಲ್ಲು ಹೊಡೆದ ನಾಮನಿರ್ದೇಶಿತ ಕಾರ್ಪೋರೆಟರನ್ನು ಮೇಯರ್ ಅವರು ಒದ್ದು ಹೊರಗೆ ಹಾಕಬೇಕು
ಲೋಕಸಭಾ ಅಭ್ಯರ್ಥಿಯಾಗಿದ್ದ ಪದ್ಮರಾಜ್ ಅವರು ಕೂಡ ಕಲ್ಲು ಹೊಡೆದಾಗ ಸ್ಥಳದಲ್ಲೇ ಇದ್ದರು
ಮುಸಲ್ಮಾನರ ಬಸ್ಸಿಗೆ ಕಲ್ಲು ಹೊಡೆಸಿ ಬಿಜೆಪಿ ಕಾರ್ಯಕರ್ತರ ಮೇಲೆ ಹಾಕುವ ಷಡ್ಯಂತ್ರ
ಈ ಮೂಲಕ ಕೋಮು ಗಲಭೆ ನಡೆಸುವ ಷಡ್ಯಂತ್ರ ಮಾಡಿದ್ದರು. ಯುವಮೋರ್ಛಾ ಹುಡುಗರು ಪೊಲೀಸರ ಬಳಿ ಹೋಗಿ ಮನವಿ ಮಾಡಿದ್ದರೂ ಕೂಡ ಕ್ರಮ ಆಗಿಲ್ಲ ಎಂದರು.


