ullalavani news ಉಳ್ಳಾಲ: ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇದೀಗ ೨೪ ಗಂಟೆಯೊಳಗೆ ಬೆಂಗಳೂರು ಆಸ್ಪತ್ರೆಗೆ ತುರ್ತಾಗಿ ಲಿವರ್ ಟ್ರಾನ್ಸ್ ಪ್ಲಾಂಟ್ ನಡೆಸಲು ಬೆಂಗಳೂರು ದಾಖಲು ಆಗಬೇಕಿರುವ ಕೊಡಗಿನ 19ರ ಯುವತಿಯ ಜೀವ ರಕ್ಷಣೆಗೆ ಉಚಿತ ಆಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸಲು ಮನೆಮಂದಿ ಸಹಾಯ ಯಾಚಿಸಿದ್ದಾರೆ. ಆಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸುವ ಸಂಸ್ಥೆಯ ಜಾಹೀರಾತನ್ನು ಉಳ್ಳಾಲವಾಣಿ ಸಂಸ್ಥೆ ಉಚಿತವಾಗಿ ಪತ್ರಿಕೆ ಮತ್ತು ವೆಜಬ್ ಸೈಟಿನಲ್ಲಿ ಪ್ರಕಟಿಸಲಿದೆ.ಕೊಡಗು ಪೊನ್ನಪ್ಪ ಸಂತೆ ಗ್ರಾಮದ 19 ವರ್ಷದ ಪ್ರತಿಭಾ ಳ ಜೀವ ಉಳಿಸಲು ಆಂಬ್ಯುಲೆನ್ಸ್ ಸೇವೆಯವರು ಮುಂದಾಗಬೇಕಿದೆ. ಲಿವರ್ ಬಡ್ ಛಿಯರಿ ಸಿಂಡ್ರೋಮ್ ನಿಂದ ಬಳಲುತ್ತಿರುವ ಪ್ರತಿಭಾಳನ್ನು ಕರ್ನಾಟಕ ಸರಕಾರದ ಇನ್ಟಿ÷್ಟಟ್ಯೂಟ್ ಆಫ್ ಗ್ಯಾಸ್ಟ್ರೋಡಾಂಟಾಲಜಿ ಸೈನ್ಸಸ್ ಆಂಡ್ ಆರ್ಗನ್ ಟ್ರಾನ್ಸ್ ಪ್ಲಾö್ಯಂಟ್ (ಐಗಾಟ್ ಆಸ್ಪತ್ರೆ) ವಿಕ್ಟೋರಿಯ ಆಸ್ಪತ್ರೆ ಕ್ಯಾಂಪಸ್ ಬೆಂಗಳೂರಿಗೆ ತಕ್ಷಣ ಕೊಂಡೊಯ್ಯಬೇಕಿದೆ.ಆಗಿದ್ದೇನು : ಪದವಿ ವಿದ್ಯಾರ್ಥಿನಿ ಪ್ರತಿಭಾ (19) ಳಿಗೆ ಮೂರು ತಿಂಗಳ ಹಿಂದೆ ಡೆಂಗ್ಯೂ ಬಾಧಿಸಿತ್ತು. ಚಿಕಿತ್ಸೆ ನಂತರ ಡೆಂಗ್ಯೂ ನಿಂದ ಗುಣಮುಖಳಾಗಿದ್ದಳು.…
Author: UllalaVani
ತೊಕ್ಕೊಟ್ಟು: ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಕಾಪಾಡುವಲ್ಲಿ ಯೋಗ ಬಹಳಷ್ಟು ಸಹಕಾರಿಯಾಗಿದ್ದು ದಿನವಿಡೀ ಅನ್ನ- ಆಹಾರವಿಲ್ಲದೇ ನಿರಂತರವಾಗಿ ಯೋಗಶಿಕ್ಷಣ ಹಾಗೂ ತರಬೇತಿಯನ್ನು ನೀಡುವ ಮೂಲಕ ಯೋಗದಿಂದ ಸಾಧಿಸಬಹುದು ಎಂಬುದನ್ನು ಎಲ್ಲರಿಗೂ ತೋರಿಸಿಕೊಡುವ ಮೂಲಕ ಗೊಲ್ಡನ್ ಬುಕ್ ಆಪ್ ರೆಕಾರ್ಡ್ ನಲ್ಲಿ ದಾಖಲೆಯನ್ನು ಮಾಡಿರುವುದೇ ಇದಕ್ಕೆ ಸಾಕ್ಷಿ ಎಂದು ಯೋಗಗುರು ಕುಶಾಲಪ್ಪ ಗೌಡ ತಿಳಿಸಿದರು.ತೊಕ್ಕೊಟ್ಟುವಿನ ಸೇವಾಸೌಧದಲ್ಲಿರುವ ಉಳ್ಳಾಲ ಪ್ರೆಸ್ ಕ್ಲಬ್ ವತಿಯಿಂದ ಮಂಗಳವಾರ ಆಯೋಜಿಸಲಾದ ತಿಂಗಳ ಬೆಳಕು-ಗೌರವ ಅತಿಥಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಮ್ಮ ವೃತ್ತಿಯನ್ನು ಪ್ರೀತಿಸಿ ಅದರಲ್ಲಿ ಶ್ರಮಹಾಕಿದರೆ ಮಾತ್ರ ಏಳಿಗೆಯನ್ನು ಸಾಧಿಸಬಹುದು. ಅದಕ್ಕೆ ಉದಾಹರಣೆ ಎಂಬಂತೆ ಸತತ 25ಗಂಟೆಗಳ ಕಾಲ ಅನ್ನ-ಆಹಾರವಿಲ್ಲದೇ ಸುಮಾರು 3658ಮಂದಿಗೆ ಯೋಗ ಶಿಕ್ಷಣವನ್ನು ನೀಡಲು ಸಾಧ್ಯವಾಯಿತಲ್ಲದೆ ಅದು ಗೊಲ್ಡನ್ ಬುಕ್ ಆಪ್ ರೆಕಾರ್ಡ್ ನಲ್ಲಿ ದಾಖಲಾಗಿದ್ದು ಅದು ಜೀವನದ ಸಾರ್ಥಕ ಕ್ಷಣಗಳು ಎಂದರು.ಖಾಸಗಿ ವೈದ್ಯಕೀಯ ಶಿಕ್ಷಣ ಸಂಸ್ಥೆಯೊಂದು ಸರಕಾರಿ ಶಾಲೆಯೊಂದರ ಉಳಿವಿಗಾಗಿ ಯೋಗ ತರಬೇತಿಯನ್ನು ವೈದ್ಯರು ಹಾಗೂ ವೃತ್ತಿಪರರು ಯೋಗ ಅಭ್ಯಾಸವನ್ನು ಮಾಡಿದ್ದಾರೆ.…
ತೊಕ್ಕೊಟ್ಟು: ಮುದ್ದು ಕೃಷ್ಣ ಸಾಂಸ್ಕೃತಿಕ ಟ್ರಸ್ಟ್ ತೊಕ್ಕೊಟ್ಟು ಇದರ 27ನೇ ವರ್ಷದ ಮುದ್ದು ಕೃಷ್ಣ 2024 ಕಾರ್ಯಕ್ರಮವು ಆ. 18ರಂದು ಹಾಗೂ ಆ. 25ರಂದು ನಡೆಯಲಿದ್ದು ಇದರ ಪ್ರಯುಕ್ತ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿದೆ ಎಂದು ಮುದ್ದು ಕೃಷ್ಣ ಸಾಂಸ್ಕೃತಿಕ ಟ್ರಸ್ಟ್ ತೊಕ್ಕೊಟ್ಟು ಇದರ ಅಧ್ಯಕ್ಷ ಚಂದ್ರಕಾಂತ್ ತಿಳಿಸಿದ್ಧಾರೆಅವರು ತೊಕ್ಕೊಟ್ಟು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಆಗಸ್ಟ್ 18 ರಂದು ಶ್ರೀ ಚೀರುಂಭ ಭಗವತೀ ಕ್ಷೇತ್ರ ಉಳ್ಳಾಲದಲ್ಲಿ ಬೆಳಗ್ಗೆ 8 ಗಂಟೆಗೆ ವಿವಿಧ ರೀತಿಯ ಸ್ಪರ್ಧೆಗಳು ನಡೆಯಲಿದೆ 4-5ನೇ ತರಗತಿ ವಿಧ್ಯಾರ್ಥಿಗಳಿಗೆ ಗೋಕುಲದಲ್ಲಿ ಶ್ರೀ ಕೃಷ್ಣ ಎಂಬ ವಿಷಯದ ಬಗ್ಗೆ ಭಾಷಣ, ಶ್ರೀ ಕೃಷ್ಣನ ಕುರಿತಾಗಿ ಭಕ್ತಿಗೀತೆ, 12 ನೇ ಅಧ್ಯಾಯ ಭಕ್ತಿಯೋಗ (5 ಶ್ಲೋಕ) ಭಗವದ್ಗೀತಾ ಕಂಠಪಾಠ, ಮುದ್ದುಕೃಷ್ಣ (ಪೆನ್ಸಿಲ್) ಚಿತ್ರ ರಚನೆ 6-7 ನೇ ತರಗತಿ ವಿಧ್ಯಾರ್ಥಿಗಳಿಗೆ ಜಗದ್ಧೋದಾರಕ ಶ್ರೀ ಕೃಷ್ಣ ಭಾಷಣ, ಶ್ರೀ ಕೃಷ್ಣನ ಕುರಿತಾಗಿ ಭಕ್ತಿಗೀತೆ, 2ನೇ ಅಧ್ಯಾಯ…
ಕುಂಪಲ: ಕುಂಪಲ ಶ್ರೀ ಬಾಲಕೃಷ್ಣ ಮಂದಿರ ಇದರ 27ನೇ ವರ್ಷದ ಕುಂಪಲಾಷ್ಟಮಿಯ ಪ್ರಯುಕ್ತ ವಿವಿಧ ರೀತಿಯ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಗಸ್ಟ್ 18ರಂದು ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಬಾಲಕೃಷ್ಣ ಮಂದಿರ ಅಧ್ಯಕ್ಷರಾದ ಸತೀಶ್ ಕುಂಪಲ ತಿಳಿಸಿದರು.ಅವರು ತೊಕ್ಕೊಟ್ಟು ನ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನೆ, 5 ರಿಂದ 7ನೇ ವಿದ್ಯಾರ್ಥಿಗಳಿಗೆ ಶ್ರೀ ಕೃಷ್ಣನ ಚಿತ್ರ ಬಿಡಿಸುವುದು (ಪೆನ್ಸಿಲಿನಲ್ಲಿ) ಹಾಗೂ 8 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಶ್ರೀ ಕೃಷ್ಣನ ಚಿತ್ರ ಬಿಡಿಸುವುದು(ಕಲರ್) 10ನೇ ತರಗತಿ ವಿದ್ಯಾರ್ಥಿಗಳಿಗೆ ಐಚ್ಛಿಕ ಮೊಸರುಕುಡಿಕೆ ಉತ್ಸವದ ಬಗ್ಗೆ. ಸಂಗೀತ ಸ್ಪರ್ಧೆ (ಭಕ್ತಿಗೀತೆ), ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ (ವಿಭಾಗ 1 ರಿಂದ 4, 5 ರಿಂದ 7, 8 ರಿಂದ 10ನೇ ತರಗತಿವರೆಗೆ), ಮಧ್ಯಾಹ್ನ 2 ರಿಂದ ಪುಟಾಣಿ ಕೃಷ್ಣ, ಮುದ್ದು ಕೃಷ್ಣ ಮತ್ತುಯಶೋಧ ಕೃಷ್ಣ ವೇಷ ಸ್ಪರ್ಧೆಗಳು ಶ್ರೀ ಬಾಲಕೃಷ್ಣ ಸಾಂಸ್ಕೃತಿಕ ಭವನದಲ್ಲಿ ನಡೆಯಲಿದ್ದು, 0-1.5ವರ್ಷ ಪುಟಾಣಿ ಕೃಷ್ಣ,…
ಕೊಣಾಜೆ : ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಗ್ರಾಮಚಾವಡಿ ಕೊಣಾಜೆ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ, ಉಚಿತ ಕನ್ನಡಕ ವಿತರಣೆ ಮತ್ತು ಭಾರತೀಯ ಅಂಚೆ ಇಲಾಖೆಯ ನೂತನ ಅಪಘಾತ ವಿಮಾ ನೋಂದಾವಣೆ, ಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರ ಆ. 18 ರಂದು ಭಾನುವಾರ ಬೆಳಗ್ಗೆ 9.00ರಿಂದ ಬ್ರಹ್ಮಶ್ರೀ ನಾರಾಯಣಗುರು ಸಮುದಾಯ ಗ್ರಾಮಚಾವಡಿಯಲ್ಲಿ ನಡೆಯಲಿದೆ. ತೊಕ್ಕೊಟ್ಟು ಸೇವಾ ಸೌಧದಲ್ಲಿರುವ ಉಳ್ಳಾಲ ಪ್ರೆಸ್ ಕ್ಲಬ್‍ನಲ್ಲಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಗ್ರಾಮಚಾವಡಿ ಕೊಣಾಜೆ ಇದರ ಅಧ್ಯಕ್ಷ ರವೀಂದ್ರ ಬಂಗೇರ ಮಾಹಿತಿ ನೀಡಿ ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆ, ಎ. ಬಿ. ಶೆಟ್ಟಿ ಮೆಮೋರಿಯಲ್‍ದಂತ ಮಹಾವಿದ್ಯಾಲಯದ ವೈದ್ಯಕೀಯ ವಿಭಾಗ, ಎಲುಬು ಮತ್ತು ಕೀಲು ಚಿಕಿತ್ಸೆ, ನೇತ್ರ ವಿಭಾಗ, ಕಿವಿ,ಮೂಗು ಮತ್ತು ಗಂಟಲು ವಿಭಾಗ, ದಂತ ವಿಭಾಗ, ಮಕ್ಕಳ ವಿಭಾಗ, ಹೆರಿಗೆ ಮತ್ತು ಸ್ತ್ರೀರೋಗ ವಿಭಾಗಗಳಲ್ಲಿ ತಜ್ಞ ವೈದ್ಯರುಗಳಿಂದ ಆರೋಗ್ಯ ತಪಾಸಣೆ,…
ಕುತ್ತಾರು: ಮುದ್ದುಕೃಷ್ಣ ಉತ್ಸವ ಸಮಿತಿ ಮತ್ತು ಶೃತಿಲಯ ಕಲಾಕೇಂದ್ರ ಕುತ್ತಾರು, ಇದರ ಆಶ್ರಯದಲ್ಲಿ ಕುತ್ತಾರು ಮುದ್ದುಕೃಷ್ಣ -2024 ಕಾರ್ಯಕ್ರಮ ಆ. 18ರಂದು ಭಾನುವಾರ ಬೆಳಗ್ಗೆ 8.00ರಿಂದ ಕುತ್ತಾರು ಶ್ರೀ ರಾಜರಾಜೇಶ್ವರಿ ಸಿದ್ದಿವಿನಾಯಕ ದೇವಸ್ಥಾನ ಕುತ್ತಾರು ಇಲ್ಲಿ ನಡೆಯಲಿದೆತೊಕ್ಕೊಟ್ಟು ಸೇವಾ ಸೌಧದ ಉಳ್ಳಾಲ ಪ್ರೆಸ್‍ಕ್ಲಬ್‍ನಲ್ಲಿ ಮುದ್ದುಕೃಷ್ಣ ಸಮಿತಿ ಕುತ್ತಾರು ಇದರ ಅಧ್ಯಕ್ಷ ಮೋಹನ್ ಶಿರ್ಲಾಲ್ ಮಾಹಿತಿ ನೀಡಿ ಯಶೋಧ ಕೃಷ್ಣ ಸ್ಪರ್ಧೆ ಒಂದು ವರ್ಷದೊಳಗಿನ ಮಗುವಿಗೆ ತಾಯಿಯೊಂದಿಗೆ ಭಾಗವಹಿಸಲು ಅವಕಾಶವಿದ್ದು,ಒಂದರಿಂ ದಮೂರು ವರ್ಷದೊಳಗಿನ ಮಕ್ಕಳಿಗೆ ಮುದ್ದುಕೃಷ್ಣ ಸ್ಪರ್ಧೆ, ಮುರು ವರ್ಷದಿಂದ ಆರು ವರ್ಷದ ಮಕ್ಕಳಿಗೆ ಪುಟಾಣಿಕೃಷ್ಣ,ಆರು ವರ್ಷದಿಂದ ಎಂಟಉ ವರ್ಷದೊಳಗಿನ ಮಕ್ಕಳಿಗೆ ಬಾಲಕೃಷ್ಣ ಸ್ಪರ್ಧೆ ನಡೆಯಲಿದ್ದು, ರಾಧಾಕೃಷ್ಣ ಸ್ಪರ್ಧೆ ಮುಕ್ತ ವಿಭಾಗದಲ್ಲಿ ನಡೆಯಲಿದೆ ಎಂದರು. ಕಾರ್ಯಕ್ರಮಕ್ಕೆ ಶ್ರೀ ರಾಜರಾಜೇಶ್ವರಿ ಸಿದ್ದಿವಿನಾಯಕ ದೇವಸ್ಥಾನ ಕುತ್ತಾರು ಇದರ ಅಧ್ಯಕ್ಷ ರಾಜೇಶ್ ಅತ್ತಾವರ ಚಾಲನೆ ನೀಡಲಿದ್ದು, ರೋಟರಿ ಕ್ಲಬ್ ದೇರಳಕಟ್ಟೆ ಇದರ ಅಧ್ಯಕ್ಷೆ ಸೌಮ್ಯ ಆರ್ ಶೆಟ್ಟಿ, ಮಂಗಳೂರು ವಿವಿ ರಾಣಿ ಅಬ್ಬಕ್ಕ ಅಧ್ಯಯನ ಪೀಠ ಇದರ…
ಬಂಟ್ವಾಳ: ಬಂಟ್ವಾಳ ತಾಲೂಕಿನ ಮಜಿ ಶ್ರೀ ಮಹಮ್ಮಾಯಿ ದೇವಸ್ಥಾನ ದಲ್ಲಿ ಶ್ರೀ ವರ ಮಹಾಲಕ್ಷ್ಮಿ ಪೂಜೆ ಶ್ರದ್ದಾ ಭಕ್ತಿಯಿಂದ ನಡೆಯಿತು.ನೂರಾರು ಸಂಖ್ಯೆ ಯ ಭಕ್ತಾದಿಗಳು ಪೂಜಾದಿ ವಿಧಿಗಳಲ್ಲಿ ಪಾಲ್ಗೊಂಡರು. ಧಾರ್ಮಿಕ ಮುಂದಾಳು ಸಂತೋಷ್ ಕುಮಾರ್ ರೈ ಬೋಳ್ಯಾರ್ ಮತ್ತು ಬಳಗದ ನೇತೃತ್ವದಲ್ಲಿ ಕಾರ್ಯಕ್ರಮ ಸಂಪನ್ನ ಕಂಡಿತು.
ಕೊಣಾಜೆ: ಪಜೀರು ಬೇಂಗೋಡಿಪದವು ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಹಾಗೂ 25ನೇ ವರ್ಷದ ಮೊಸರು ಕುಡಿಕೆಯು ಆ.26 ಮತ್ತು 27 ಎರಡು ದಿನಗಳ ಕಾಲ ಮುದ್ದುಕೃಷ್ಣ ಸ್ಪರ್ಧೆ, ಕ್ರೀಡಾಕೂಟ, ಭಕ್ತಿಗೀತೆ ಸ್ಪರ್ಧೆ, ಜಾರುಕಂಭ ಸ್ಪರ್ಧೆ ಹಾಗೂ ಶೋಭಾಯಾತ್ರೆಯೊಂದಿಗೆ ವಿಜೃಂಭಣೆಯಿಂದ ಜರಗಲಿದೆ ಎಂದು ಪಜೀರು ಶ್ರೀ ಕೃಷ್ಣ ಭಜನಾ ಮಂದಿರ ಅಧ್ಯಕ್ಷ ವಿಜೇತ್ ಪಜೀರು ಹೇಳಿದರು. ತೊಕ್ಕೊಟ್ಟು ಸೇವಾಸೌಧದಲ್ಲಿರುವ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು.ಆ. 18 ರಂದು ಕೃಷ್ಣ ವೇಷ ಸ್ಪರ್ಧೆ 3 ರಿಂದ 12 ವರ್ಷದ ಒಳಗಿನವರಿಗೆ ನಡೆಯಲಿದೆ. ಭಾಗವಹಿಸುವ ಮಕ್ಕಳಿಗೆ ಆಧಾರ್ ಕಾರ್ಡ್ ಕಡ್ಡಾಯವಿದ್ದು, ಪ್ರಥಮ ಹಾಗೂ ದ್ವಿತೀಯ ವಿಜೇತರಿಗೆ ನಗದು, ಸ್ಮರಣಿಕೆ ಭಾಗವಹಿಸಿದ ಮಕ್ಕಳಿಗೆ ಪ್ರಮಾಣ ಪತ್ರ ನೀಡಲಾಗುವುದು. ಆ.18 ರಂದು ಶ್ರೀ ಕೃಷ್ಣ ದೇವರ ಚಿತ್ರ ಬಿಡಿಸುವ ಸ್ಪರ್ಧೆ, ಸಾಂಪ್ರದಾಯಿಕ ರಂಗೋಲಿ ಹುಡಿ ಸ್ಪರ್ಧೆ, ಮೆಹೆಂದಿ ಸ್ಪರ್ಧೆ, ಹೂಹಾರ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಸ್ಪರ್ಧಾಳುಗಳು 7892484996 ಮೊಬೈಲ್ ಸಂಖ್ಯೆಗೆ…
78 ನೇ ಸ್ವಾತಂತ್ರ್ಯ ದಿನಾಚರಣೆ ವೇಳೆ ತೊಕ್ಕೊಟ್ಟಿನಲ್ಲಿ ಉಳ್ಳಾಲ ತಾಲೂಕಿನ ಪ್ರಪ್ರಥಮ ಪತ್ರಿಕೆ ‘ಉಳ್ಳಾಲವಾಣಿ’ ಲೋಕಾರ್ಪಣೆ ಉಳ್ಳಾಲ: ಜನರಲ್ಲಿ ಮಾನವೀಯತೆಯ ಕೊಂಡಿಯಾಗಿ ಉಳ್ಳಾಲವಾಣಿ ಪತ್ರಿಕೆ ಕರ‍್ಯಾಚರಿಸಲಿ. ಪತ್ರಿಕೆ ಮುನ್ನಡೆಸುವ ಜವಾಬ್ದಾರಿ ತಾಲೂಕಿನ ಎಲ್ಲಾ ಜನತೆಗಿದ್ದು, ಎಲ್ಲರ ಆಶೋತ್ತರಗಳಿಗೆ ಪತ್ರಿಕೆ ಸ್ಪಂದಿಸುವಂತಾಗಲಿ ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಹೇಳಿದರು. ತಾಲೂಕಿನ ಪ್ರಥಮ ಪತ್ರಿಕೆ ಉಳ್ಳಾಲವಾಣಿಯನ್ನು ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿ 110 ಮೀಟರ್ ಎತ್ತರದ ಧ್ವಜ ಸ್ತಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಬಳಿಕ ಚಾಲನೆ ನೀಡಿ ಮಾತನಾಡಿದರು. ತಾಲೂಕಿನ ಜನರಲ್ಲಿ ಸಮನ್ವಯತೆಯನ್ನು ಕಾಪಾಡಿಕೊಳ್ಳಲು, ಪ್ರತಿ ಆಚಾರ ವಿಚಾರಗಳು, ಪ್ರವಾಸೋದ್ಯಮ, ಸರಕಾರಿ ಯೋಜನೆಗಳು, ಸಾಧಕರನ್ನು ಹೊರಜಗತ್ತಿಗೆ ಅನಾವರಣಗೊಳಿಸುವ ಜವಾಬ್ದಾರಿ ಪತ್ರಿಕೆಯದ್ದಾಗಿದೆ. ಕ್ಷೇತ್ರದುದ್ದಕ್ಕೂ ಮಾನವೀಯತೆಯ ಜೊತೆಗೆ ಶಾಂತಿ ನೆಲೆಸುವಲ್ಲಿ ಪತ್ರಿಕೆ ಕರ‍್ಯಾಚರಿಸಲಿ ಎಂದು ಶುಭ ಹಾರೈಸಿದರು. ಉಳ್ಳಾಲ ವಲಯ ಪ್ರಾಥಮಿಕ , ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನ ಸುಮಾರು 16 ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಭಾಗವಹಿಸಿದರು. ಸ್ಕೌಟ್ಸ್, ಗೈಡ್ಸ್, ಕಬ್, ಬುಲ್‌ಬುಲ್, 7…
ಉಳ್ಳಾಲವಾಣಿ ಉಳ್ಳಾಲದಲ್ಲಿ ಹೊಸ ಪತ್ರಿಕೆಯ ಪ್ರಾರಂಭ:ಉಳ್ಳಾಲ: ಉಳ್ಳಾಲ ತಾಲೂಕಿನ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಹೊಸ ಅಧ್ಯಾಯವನ್ನು ರಚಿಸಬಹುದು ಎಂಬ ಧ್ಯೇಯ ಹಾಗೂ ಸಂತೋಷದೊಂದಿಗೆ, 18 ವರ್ಷಗಳ ಪತ್ರಿಕೋದ್ಯಮದ ಅನುಭವವನ್ನು ಧಾರೆ ಎರೆದ ಪತ್ರಕರ್ತರು ಹೊಸ ಪತ್ರಿಕೆ “ಉಳ್ಳಾಲವಾಣಿ”ಯನ್ನು ಪ್ರಾರಂಭಿಸಿದ್ದಾರೆ. ಇದು ಸ್ಥಳೀಯ, ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಘಟನೆಗಳನ್ನು ಪ್ರಸ್ತುತಪಡಿಸಲು ಮತ್ತು ಪ್ರಜಾಪ್ರಭುತ್ವದ ಉತ್ತಮತೆಯನ್ನು ಪ್ರೋತ್ಸಾಹಿಸುವ ವಿಶ್ವಾಸವನ್ನು ನೀಡುತ್ತಿದೆ. ಪತ್ರಿಕೆಯ ಉದ್ದೇಶ ಮತ್ತು ಸಂಕಲ್ಪ:”ಉಳ್ಳಾಲವಾಣಿ” ಪತ್ರಿಕೆ ಪ್ರಮುಖವಾಗಿ ತಾಲೂಕಿನ ಆಂತರಿಕ ಮತ್ತು ಬಾಹ್ಯ ಸೇರಿ ಎಲ್ಲಾ ಪ್ರಸ್ತುತ ವಿದ್ಯಾಮಾನಗಳನ್ನು ಸಮರ್ಥವಾಗಿ, ಸೂಕ್ತವಾಗಿ ಮತ್ತು ನಿಖರವಾಗಿ ವರದಿ ಮಾಡಲು ಉದ್ದೇಶಿಸಿದೆ. ಈ ಪತ್ರಿಕೆ ಸ್ಥಳೀಯ ಸುದ್ದಿಗಳನ್ನು ಮಾತ್ರವಲ್ಲದೆ ಗ್ರಾಮೀಣ ಅಭಿವೃದ್ಧಿ, ಶ್ರೇಣೀಬದ್ಧ ಕಾರ್ಯಕ್ರಮಗಳು ಮತ್ತು ತಾಲೂಕಿನ ಎಲ್ಲಾ ವಿಷಯಗಳ ಮೇಲೆ ಆಳವಾದ ಗಮನ ನೀಡುತ್ತದೆ. ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು, ಗ್ರಾಮೀಣ ಶ್ರೇಣೀಕೃತ ಯತ್ನಗಳು, ಸಾಂಸ್ಕೃತಿಕ ಹಬ್ಬಗಳು ಮತ್ತು ಸ್ಥಳೀಯ ಹಿರಿಮೆಗಳ ಕುರಿತು ವಿಶೇಷ ವರದಿಗಳನ್ನು ನೀಡಲಿದೆ. ರಾಜಕೀಯ ವಿಶ್ಲೇಷಣೆ:ಉಳ್ಳಾಲ ತಾಲೂಕಿನ ಪ್ರಸ್ತುತ ರಾಜಕೀಯ…

