Author: UllalaVani

Kannada News From Coastal Karnataka

ಮಂಗಳೂರು: ಪುಟ್ ಬಾಲ್ ಆಟದ ವಿಚಾರದಲ್ಲಿ ಅಪಹರಿಸಿ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ. ಅರೋಪಿಗಳಾದ ದಿಯಾನ್ ಹಾಗೂ ಸಲ್ಮಾನ್ ಬಂಧಿಸಿದ ಪೊಲೀಸರು‌. ಅಗಸ್ಟ್ 14ರಂದು ನಡೆದ ಫುಟ್ ಬಾಲ್ ಆಟದ ವಿಚಾರದಲ್ಲಿ ಗಲಾಟೆ ಆಗಿದ್ದು ಅಗಸ್ಟ್ 19ರ ರಾತ್ರಿ ಈ ಅಪಹರಣ ಹಾಗೂ ಹಲ್ಲೆ ನಡೆದಿದೆ. ಮಂಗಳೂರಿನ ಅಲೋಶಿಯಸ್ ಕಾಲೇಜು ಹಾಗೂ ಯೆನೇಪೋಯಾ ನಡುವಿನ ಪಂದ್ಯದಲ್ಲಿ ಯೆನೇಪೋಯಾ ಕಾಲೇಜು ಗೆದ್ದಿತ್ತು. ಇದರ ದ್ವೇಷದಿಂದ ಯೆನೇಪೋಯಾ ಕಾಲೇಜು ಅಪ್ರಾಪ್ತ ವಿದ್ಯಾರ್ಥಿ ಹಾಗೂ ಮಂಗಳೂರಿನ ಮಾತಾ ಕಾಲೇಜು ವಿದ್ಯಾರ್ಥಿಗಳ ಅಪಹರಣ ಮಾಸಿ ಮಹಾಕಾಳಿ ಪಡ್ಪು, ಜೆಪ್ಪು ಮಸೀದಿ ಬಳಿ ಹಾಗೂ ಪಡೀಲ್ ನಲ್ಲಿ ನಡೆಸಲಾಗಿದೆ. ಬಿಎನ್ ಎಸ್ 115(2), 118(1), 127(2), 137(2), 189(2), 190, 191(1), 191(3), 351(2), 352 ಅಡಿ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.‌ಅರೋಪಿಗಳಾದ ದಿಯಾನ್ ಹಾಗೂ ಸಲ್ಮಾನ್ ಬಂಧನ ಮಾಡಲಾಗಿದ್ದು ಉಳಿದ…

Read More

ಮಂಗಳೂರು: ಬಸ್ಸಿಗೆ ಕಲ್ಲು ತೂರಾಟ ನಡೆಸುವ ಮೂಲಕ ಕಾಂಗ್ರೆಸ್  ತನ್ನ ಗೂಂಡಾ ಸಂಸ್ಕೃತಿಯ ರಾಜಕಾರಣವನ್ನು ಮತ್ತೊಮ್ಮೆ ಪರಿಚಯಿಸಿದ್ದು ಬಾಂಗ್ಲಾ ದೇಶದಲ್ಲಿ ಆದಂತೆ ಇಲ್ಲೂ ಆಗುತ್ತದೆ ಎಂಬ ಐವನ್ ಡಿಸೋಜ  ರಾಷ್ಟ್ರ ದ್ರೋಹದ ಹೇಳಿಕೆಯ  ವಿರುದ್ಧ ಗುರುವಾರ  ಬಿಜೆಪಿ ಪ್ರತಿಭಟನೆ ನಡೆಸಲಿದೆ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ವೈ.ಭರತ್ ಶೆಟ್ಟಿ ತಿಳಿಸಿದ್ದಾರೆ. ಮಂಗಳೂರಿನಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತ ಜಿಲ್ಲೆಯಲ್ಲಿ ಕಾಂಗ್ರೆಸ್ ಗೂಂಡಾ ಸಂಸ್ಕೃತಿ ರಾಜಕಾರಣ ಹೊಸದೇನೂ ಅಲ್ಲ. ಅದರ ಮುಂದುವರಿದ ಭಾಗವಾಗಿ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಮಹಾನಗರ ಪಾಲಿಕೆ ಮುಂಭಾಗದಲ್ಲಿ ಬಸ್ಸಿಗೆ ಕಲ್ಲು ತೂರಾಟ ಮಾಡುವುದು, ಟೈರ್ ಗೆ ಬೆಂಕಿ ಹಚ್ಚುವುದು ಮಾಡಿದ್ದಾರೆ. ಇದು ರಾಜ್ಯದಲ್ಲಿ ಪಶ್ಚಿಮ ಬಂಗಾಲ ಮಾದರಿಯಲ್ಲಿ ಹಿಂಸಾಕೃತ್ಯ ನಡೆಸುವುದರ ಪೂರ್ವಸೂಚನೆಯಾಗಿದೆ ಎಂದರು. ಸಾರ್ವಜನಿಕರು ಸಂಚರಿಸುವ ಬಸ್ಸಿಗೆ ಕಲ್ಲು ತೂರಾಟ ನಡೆಸಿ ಪ್ರಯಾಣಿಕರಿಗೆ ಗಾಯವಾಗಿರುವುದು ಅಕ್ಷಮ್ಯ ಅಪರಾಧವಾಗಿದೆ. ಘಟನೆಯಲ್ಲಿ ಒಬ್ಬ ನಾಮ ನಿರ್ದೇಶಿತ ಮನಪಾ ಕಾರ್ಪೋರೇಟರ್ ಮತ್ತೊಬ್ಬ ಗ್ರಾಮ ಪಂಚಾಯತ್ ಸದಸ್ಯ ಸೇರಿದ್ದಾರೆ. ಅವರು…

Read More

ಮಂಗಳೂರು: ಸಾಂವಿಧಾನಿಕ ಹುದ್ದೆಯಲ್ಲಿರೋ ರಾಜ್ಯಪಾಲರು ಬಿಜೆಪಿ ಅಧ್ಯಕ್ಷರಂತೆ ಕೆಲಸ ಮಾಡುತ್ತಿದ್ದು ಈ ಮೂಲಕ ರಾಜ ಭವನವನ್ನು ದುರುಪಯೋಗ ಮಾಡುತ್ತಿದ್ದಾರೆ ಎಂದು ಎಂಎಲ್ ಸಿ ಬಿ.ಕೆ.ಹರಿಪ್ರಸಾದ್ ಹೇಳಿಕೆ ನೀಡಿದ್ದಾರೆ.ಮಂಗಳೂರಿನಲ್ಲಿ ಮಂಗಳವಾರ ಮಾತಾಡಿದ ಅವರುಬಿಜೆಪಿಯವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದು. ರಾಜ್ಯಪಾಲರು ಸಂವಿಧಾನದ ಚೌಕಟ್ಟು ಬಿಟ್ಟು ಬಿಜೆಪಿ ನಿರ್ದೇಶನದಂತೆ ಕೆಲಸ ಮಾಡಲು ಆಗುವುದಿಲ್ಲ. ಈ ಹಿಂದೆ ಬಿಜೆಪಿ ಆಪರೇಷನ್ ಕಮಲ ಮೂಲಕ ಸರ್ಕಾರ ಕೆಡವುತ್ತಿತ್ತುಆದರೆ ಈಗ ಬೇರೆ ವಾಮಾಮಾರ್ಗದ ಮೂಲಕ ಸರ್ಕಾರ ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆ. ಸದ್ಯ ಹೈಕೋರ್ಟ್ ರಿಲೀಫ್ ಕೊಟ್ಟಿದೆ, ನ್ಯಾಯಾಂಗ ಹೋರಾಟ ಆಗುತ್ತಿದೆ ಎಂದರು. ಯಡಿಯೂರಪ್ಪ ಪ್ರಕರಣದಲ್ಲಿ 20 ಕೋಟಿ ಚೆಕ್ ಮೂಲಕ ಲಂಚ ಪಡೆದಿರೋದು. ಗಡೀಪಾರಾಗಿದ್ದ ಅಮಿತ್ ಶಾ ಕೂಡ ಮಂತ್ರಿಯಾಗಿಲ್ವಾ? ಎಂದು ಪ್ರಶ್ನಿಸಿದ ಅವರು ಬಿಜೆಪಿ ನಾಯಕರ ಮೇಲೆ ಗಂಭೀರ ಆರೋಪಗಳಿತ್ತು, ಈ ಆರೋಪ ಕಪೋಲಕಲ್ಪಿತ. ರಾಜ್ಯಪಾಲರು ಈ ಹಿಂದೆ ದಲಿತ ರಾಜಕಾರಣಿ ಆಗಿದ್ದವರು, ಗೆಹ್ಲೋಟ್ ಅವರನ್ನು ನಾನು ಹತ್ತಿರದಿಂದ ಬಲ್ಲೆ. ಬಿಜೆಪಿಯವರಿಗೆ ದಲಿತರ ಮೇಲೆ ಪ್ರೀತಿ ಇದ್ದರೆ…

Read More

ಕೆ.ಸಿ.ರೋಡ್ : ಭತ್ತವನ್ನು ಬೆಳೆದು ಕೃಷಿ ಮಾಡುತ್ತಿದ್ದ ದ.ಕ ಜಿಲ್ಲೆಯಲ್ಲಿ ಇಂದು ಭತ್ತದ ಗದ್ದೆಗಳೇ ಮರೆಯಾಗುತ್ತಿದ್ದು  ವಾಣಿಜ್ಯ ಬೆಳೆಗಳ ತೋಟಗಳಾಗಿ ಪರಿವರ್ತನೆಗೊಂಡಿದೆ, ಕೆಲವೊಂದು ಗದ್ದೆಗಳು ಅಡಿಲು ಬಿದ್ದಿದೆ,  ಇದರಿಂದಾಗಿ ಜಿಲ್ಲೆಯ ಹೊಸತಲೆಮಾರಿಗೆ ಭತ್ತದ ಕೃಷಿಯ ಬಗ್ಗೆ ಅರಿವೆ ಇಲ್ಲದ ಸ್ಥಿತಿ ನಿರ್ಮಾಣಗೊಂಡಿದೆ ಭತ್ತದ ಕೃಷಿಯಲ್ಲಿ ತೊಡಗಿಕೊಳ್ಳುವವರ  ಸಂಖ್ಯೆ ಕಡಿಮೆಯಾಗುತ್ತಿದ್ದು ಭತ್ತದ ಕೃಷಿಯ ಬಗ್ಗೆ ಅನಿವಾರ್ಯತೆಯನ್ನು ತೋರಿಸುವ ಪ್ರಯತ್ನ ಮಾಡಬೇಕಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಮಂಗಳೂರು ಇದರ  ಕೃಷಿ ಅಧಿಕಾರಿ ಮೋಹನ್ ಕುಮಾರ್ ತಿಳಿಸಿದರು. ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಮಂಗಳೂರು ಮತ್ತು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಹಾಗೂ ಭಾರತ್ ಗ್ಯಾಸ್ ಸಂಯುಕ್ತ ಆಶ್ರಯದಲ್ಲಿ ವೈಜ್ಞಾನಿಕತೆಯಲ್ಲಿ ಭತ್ತದ ಬೇಸಾಯ ಮತ್ತು ಸಸ್ಯ ಪೋಷಕಾಂಶಗಳ ನಿರ್ವಹಣೆ ಎಂಬ ವಿಷಯದ ಕುರಿತು ಕೆ.ಸಿ. ರೋಡು ಸೋವೂರು ಗದ್ದೆಯಲ್ಲಿ ಸೋಮವಾರ ನಡೆಯಿತು ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು. ಹಿರಿಯ ಕೃಷಿಕರಾದ ಸೋವೂರು ಚಂದು…

Read More

ಅಂಬ್ಲಮೊಗರು :ಬಂಟರ ಸಂಘ ಅಂಬ್ಲಮೊಗರು ಗ್ರಾಮ ಸಮಿತಿ ವತಿಯಿಂದ ಬಂಟೆರೆ ಕೂಡುಕಟ್ಟ್ ಕಾರ್ಯಕ್ರಮ ಅಂಬ್ಲಮೊಗರು ಬಸ್ತಿಕಟ್ಟೆ ಆಶಿಯಾನ ಸಭಾ ಭವನದಲ್ಲಿ ಭಾನುವಾರ ನಡೆಯಿತು. ಉಳ್ಳಾಲ ವಲಯ ಬಂಟರ ಸಂಘದ ಅಧ್ಯಕ್ಷ ಸುರೇಶ್ ರೈ ಕಕ್ಕೆಮಜಲು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಬಂಟರು ಹಿಂದಿನಿಂದಲೂ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಇಂದು ನಮ್ಮ ಸಮಾಜದ ಹಿರಿಯ ಕೃಷಿಕರಿಗೆ ಸನ್ಮಾನ ಕಾರ್ಯಕ್ರಮ ನೆರವೇರಿಸಿದ್ದು ಉತ್ತಮ ಕಾರ್ಯವಾಗಿದೆ, ಬಂಟರ ಸಂಘದಲ್ಲಿ ಇನ್ನೂ ಹಲವು ಕಾರ್ಯಕ್ರಮ ಆಗಲಿದ್ದು, ನಿಮ್ಮೆಲ್ಲರ ಸಹಕಾರ ಅಗತ್ಯ ಎಂದರು. ಉಳ್ಳಾಲ ವಲಯ ಬಂಟರ ಸಂಘದ ಮಾಜಿ ಅಧ್ಯಕ್ಷ ಜಿತೇಂದ್ರ ಶೆಟ್ಟಿ ತಲಪಾಡಿಗುತ್ತು ಮಾತನಾಡಿ ನಾವು ಕಣ್ಣಿಗೆ ಮುಟ್ಟುವಂತಹ ಕಾರ್ಯಕ್ರಮ ಮಾಡಿದರೆ ಇನ್ನೊಂದು ಗ್ರಾಮ ಸಮಿತಿಯವರು ನಮ್ಮ ಕಾರ್ಯಕ್ರಮವನ್ನು ಮಾದರಿಯಾಗಿ ತೆಗೆದು ಕೊಳ್ಳುತ್ತಾರೆ, ಒಂದು ವ್ಯವಸ್ಥೆಯನ್ನು ಸರಿಯಾಗಿ ಕೊಂಡು ಹೊಗಲು ನಿಶ್ವಾರ್ಥ ಸೇವೆ ಅಗತ್ಯ, ಪ್ರತೀ ವರ್ಷವೂ ಇಂತಹ ಕಾರ್ಯಕ್ರಮ ನೀಡಲು ದೇವರು ಶಕ್ತಿ ನೀಡಲಿ ಎಂದು ಹೇಳಿದರು. ಬಂಟರ ಸಂಘ…

Read More

ತೊಕ್ಕೊಟ್ಟು: ಕಲಿಯುಗದ ಬದುಕಿನ ಚಿತ್ರಣವನ್ನು ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ಮೊದಲೇ ವಿವರಿಸಿದ್ದು ಅದನ್ನು ಅರಿತರೆ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ಧಾರ್ಮಿಕ ಸಾಮಾಜಿಕ ಮುಂದಾಳು ರಾಮಚಂದ್ರಪುರ ಮಠ ಹಾಗೂ ಹಾಗೂ ನಿತ್ಯಾನಂದ ಯೋಗಾಶ್ರಮದ ಮಾಧ್ಯಮ ಹಾಗೂ ಮುದ್ರಣ ವಿಭಾಗದ ಸದಾಶಿವ ಮೋಂತಿಮಾರ್ ಹೇಳಿದರು.ಮುದ್ದುಕೃಷ್ಣ ಸಾಂಸ್ಕೃತಿಕ ಟ್ರಸ್ಟ್ ತೊಕ್ಕೋಟು ಇದರ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಉಳ್ಳಾಲ ಶ್ರೀ ಚೀರುಂಭ ಭಗವತಿ ಕ್ಷೇತ್ರದಲ್ಲಿ ಭಾನುವಾರ ಆಯೋಜಿಸಲಾದ 27ನೇ ವರ್ಷದ ಸಾಂಸ್ಕøತಿಕ ಸ್ಪರ್ಧೆಗಳಾದ ಭಾಷಣ ಸ್ಪರ್ಧೆ, ಭಕ್ತಿಗೀತೆ, ಭಗವದ್ಗೀತಾ ಕಂಠಪಾಠ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ಮಾತನಾಡಿದರು. ಪುಟಾಣಿಗಳಾದ ಎಂ.ಆಯುಷ್ ಪೈ, ನವನೀತ್ ಶ್ಯಾಮ್, ಶಾನ್ವಿ ಎಂ, ಕೆ. ಮನಸ್ವಿ, ನಿಶ್ಮ್ಮಿತಾ ಚಾಲನೆ ನೀಡಿದರು.ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಚೀರುಂಭ ಭಗವತೀಯ ಆಚಾರಪಟ್ಟವರು ಮಂಜಪ್ಪ ಕಾರ್ಣವರು, ಜಾಹಿರ ಬೆಳ್ಚಾಡ, ಕಂಡಪ್ಪ ಕಾರ್ಣವ, ಭಾಸ್ಕರ್ ಉಳ್ಳಾಲ್, ಸಮಿತಿ ಚಂದ್ರಕಾಂತ್, ಕಾರ್ಯಕ್ರಮ ಸಂಯೋಜಕ ಅಶೋಕ್ ಗುರಿಕಾರ, ಸಮಿತಿಯ ಪ್ರಧಾನ ಕಾರ್ಯದರ್ಶಿ ಭವಿತ್ ಬಂಗೇರ, ಉಪಾಧ್ಯಕ್ಷ ಸತೀಶ್ ಸೋಮೇಶ್ವರ, ಕೋಶಾ„ಕಾರಿ…

Read More

ತಲಪಾಡಿ:ಗೋಮಾತೆ,ಭೂಮಾತೆ,ಜನ್ಮದಾತೆಯರ ಗೌರವಕ್ಕೆ ಚ್ಯುತಿ ಬಾರದಂತೆ ಈ ದೇಶದ ಪರಂಪರೆಯನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆ ನಮ್ಮ ಸಮಾಜದ ಮಾತೃ ಶಕ್ತಿಗಿದೆ. ಮುಂದಿನ ದಿನಗಳಲ್ಲಿ ಮಾತೃ ಶಕ್ತಿಯು ಒಂದಾಗಿ ಒಟ್ಟಾಗಿ ಸಂಸ್ಕಾರಯುತ ಜೀವನ ನಡೆಸಬೇಕಾದ ಅನಿವಾರ್ಯತೆ ಇದೆ ಎಂದು ಕರ್ನಾಟಕ ದಕ್ಷಿಣ ಪ್ರಾಂತ ರಾಷ್ಟ್ರೀಯ ಸೇವಾ ಭಾರತೀಯ ಕಾರ್ಯದರ್ಶಿಯಾದ ಚನ್ನಯ ಸ್ವಾಮಿ ಹೇಳಿದರು.ತಲಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ದಲ್ಲಿ ಕೇಶವ ಶಿಶು ಮಂದಿರ ಕಿನ್ಯ ಇದರ ಮಾತೃ ಮಂಡಳಿ ವತಿಯಿಂದ ನಡೆದ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆಯಲ್ಲಿ ಅವರು ಧಾರ್ಮಿಕ ಉಪನ್ಯಾಸ ನೀಡಿದರು.ನಮ್ಮ ದೇಶದಲ್ಲಿ 51 ಶಕ್ತಿ ಪೀಠಗಳಿದ್ದು ಅದು ನಮಗೆ ಪೂಜನೀಯವಾಗಿದ್ದು, ಗೋದಾನ, ಸಾಮೂಹಿಕ ವಿವಾಹ,ಬಾಲಗೋಕುಲ,ಕಿಶೋರಿ ಕಾರ್ಯಕ್ರಮ ಇನ್ನಿತರ ಸೇವಾ ಚಟುವಟಿಕೆಗಳನ್ನು ಮಾಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ.ಶ್ರೀದೇವಿಯು ದುಷ್ಟರನ್ನು ನಿಗ್ರಹಿಸಿ ಸಜ್ಜನರನ್ನು ರಕ್ಷಿಸಿದ ಹಾಗೆ ದೇಶಕ್ಕೆ ಬಂದ ಎಲ್ಲಾ ಕಷ್ಟಗಳಿಂದ ಪಾರಾಗಬೇಕಾದರೆ ಮಾತೃಶಕ್ತಿ ಒಂದಾಗಿ ಒಟ್ಟಾಗಿ ಸಂಘಟನಾತ್ಮಕವಾಗಿ ಕಾರ್ಯನಿರ್ವಹಿಸುವುದು ಇಂದಿನ ಕಾಲದಲ್ಲಿ ಅನಿವಾರ್ಯವಾಗಿದೆ.ಶಾರದಾ ಮಾತೆ,ಅಹಲ್ಯಾಬಾಯಿ ಹೋಲ್ಕರ್,ಭಗಿನಿ ನಿವೇದಿತಾ, ಈ ಮೂರು ಮಾತೆಯರು ತಮಗೆ ಎದುರಾದಂತಹ ಕಠಿಣ…

Read More

ಉಳ್ಳಾಲ: ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ಆಶ್ರಯದಲ್ಲಿ ಆ. 26 ರಂದು ನಡೆಯಲಿರುವ ಕುಂಪಲಾಷ್ಟಮಿ ಉತ್ಸವದ ಅಂಗವಾಗಿ ಚಿತ್ರಕಲೆ, ಸಂಗೀತ, ಮದ್ದುಕೃಷ್ಣ, ಪುಟಾಣಿ ಕೃಷ್ಣ, ಬಾಲಕೃಷ್ಣ, ಯಶೋಧೆ ಕೃಷ್ಣ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ಭಾನುವಾರದಂದು ನಡೆಯಿತು.ಕಾರ್ಯಕ್ರಮವನ್ನು ವಿಧ್ಯಾರತ್ನ ವಿದ್ಯಾಸಂಸ್ಥೆ ಗಳ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಉದ್ಘಾಟಿಸಿ ಸ್ಪರ್ಧೆಗೆ ಚಾಲನೆ ನೀಡಿದರು. ಬಿಜೆಪಿ ಜಿಲ್ಲಾಧ್ಯಕ್ಷ, ಮಂದಿರದ ಅಧ್ಯಕ್ಷ ಸತೀಶ್ ಕುಂಪಲ ಅಧ್ಯಕ್ಷತೆಯನ್ನು ವಹಿಸಿದ್ದರು. ಪಿಲಾರು ಮೇಗಿನ ಮನೆಯ ಮೀನಾಕ್ಷಿ ಸೀತರಾಮ ಶೆಟ್ಟಿ, ಬಿಜೆಪಿ ಮಂಗಳೂರು ಮಂಡಲ ಕಾರ್ಯದರ್ಶಿ ದಯಾನಂದ ತೊಕ್ಕೊಟ್ಟು, ಉತ್ಸವ ಸಮಿತಿ ಅಧ್ಯಕ್ಷ ರವೀಂದ್ರ ಕುಂಪಲ, ಮಹಿಳಾ ಸಮಿತಿ ಅಧ್ಯಕ್ಷೆ ಪ್ರವೀಳ ಪ್ರವೀಣ್ ಕುಂಪಲ, ಸಾಂಸ್ಕೃತಿಕ ಸಂಚಾಲಕ ಜಗದೀಶ್ ಆಚಾರ್ಯ, ಉತ್ಸವ ಸಮಿತಿ ಕಾರ್ಯದರ್ಶಿ ದೀಕ್ಷಿತ್ ನಿಸರ್ಗ, ಮಂದಿರದ ಕಾರ್ಯದರ್ಶಿ ಗಣೇಶ್ ಅಂಚನ್, ಕೋಶಾಧಿಕಾರಿ ವೆಂಕಟೇಶ್ ಕುಂಪಲ, ಚಿತ್ರಕಲಾವಿದ ಗಂಗಾದರ ಕುಂಪಲ ಉಪಸ್ಥಿತರಿದ್ದರು. ತೀರ್ಪುಗಾರರಾಗಿ ಮಲ್ಲಿಕಾ ಭಾನುಪ್ರಕಾಶ್ ಪಡೀಲ್, ಶ್ರೀವಿಧ್ಯ ಮಂಗಳೂರು, ವಿಘ್ನೇಶ್ ಬೋಳೂರು, ಅಕ್ಷತಾ ಆಚಾರ್ಯ, ದೀಕ್ಷಿತ್ ಬಜಾಲ್,…

Read More

ಉಳ್ಳಾಲ: ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡ ಅವರ ಪತ್ನಿ ಶ್ರೀಮತಿ ದಾಟಿ ಸದಾನಂದ ಗೌಡ ಅವರು ತೊಕ್ಕೊಟ್ಟು ರೈಲ್ವೇ ಓವರ್ ಬ್ರಿಡ್ಜ್ ಬಳಿಯ ಸಾರ್ವಜನಿಕ ಕೊರಗಜ್ಜನ ಕ್ಷೇತ್ರಕ್ಕೆ ಶನಿವಾರ ಭೇಟಿ ನೀಡಿ ಹರಕೆಯ ಅಗೆಲು ಸೇವೆಯನ್ನು ಸಲ್ಲಿಸಿದರು. ಬೇಡಿದ ಇಷ್ಟಾರ್ಥ ನೆರವೇರಿದಕ್ಕಾಗಿ ದಾಟಿ ಸದಾನಂದ ಅವರು ತೊಕ್ಕೊಟ್ಟು ಓವರ್ ಬ್ರಿಡ್ಜ್ ನ ಕೊರಗಜ್ಜನ ಕ್ಷೇತ್ರಕ್ಕೆ ಆಗಮಿಸಿ ಹರಕೆಯ ಸಾಮೂಹಿಕ ಅಗೆಲು ಸೇವೆ ಸಲ್ಲಿಸಿದ್ದಾರೆ.ಓವರ್ ಬ್ರಿಡ್ಜ್ ಕೊರಗಜ್ಜ ಸೇವಾ ಸಮಿತಿ ವತಿಯಿಂದ ಶ್ರೀಮತಿ ದಾಟಿ ಸದಾನಂದ ಅವರನ್ನು ಶಾಲು ಹೊದಿಸಿ ಗೌರವಿಸಲಾಯಿತು.ಸದಾನಂದ ಗೌಡ ಕುಟುಂಬದ ಅಂಗರಕ್ಷಕರಾದ ಚೇತನ್ ,ಪತ್ನಿ ಲತಾ ಜತೆಗಿದ್ದರು.ತೊಕ್ಕೊಟ್ಟು ಓವರ್ ಬ್ರಿಡ್ಜ್ ಕೊರಗಜ್ಜ ಸೇವಾ ಸಮಿತಿಯ ಅಧ್ಯಕ್ಷರಾದ ರಾಜೇಶ್ ಕಾಪಿಕಾಡು,ಉಪಾಧ್ಯಕ್ಷರಾದ ನಾರಾಯಣ ರೈ, ಗೌರವ ಸಲಹೆಗಾರರಾದ ರಾಜು ಗುರಿಕಾರ,ಪ್ರದಾನ ಸಂಚಾಲಕರಾದ ಮುರಳೀ ಸಾಲ್ಯಾನ್ ,ಸದಸ್ಯರಾದ ಪುರಂದರ ಟೈಲರ್,ಪ್ರದಾನ ಅರ್ಚಕರಾದ ಪದ್ಮನಾಭ ತೊಕ್ಕೊಟ್ಟು, ಕುಂಪಲ ಕೇಸರಿ ಮಿತ್ರ ವೃಂದದ ಟ್ರಸ್ಟಿ ಶೇಖರ್ ಕುಂಪಲ,ಉಳ್ಳಾಲ ಪುರಸಭಾ ಮಾಜಿ ಸದಸ್ಯ ಭಗವಾನ್ ದಾಸ್…

Read More

ದೇರಳಕಟ್ಟೆ : ಕೊಡಗು ಪೊನ್ನಪ್ಪ ಸಂತೆ ಗ್ರಾಮದ ೧೯ ವರ್ಷದ ಪ್ರತಿಭಾ ಳ ಜೀವ ಉಳಿಸಲು ಮೂಡಬಿದ್ರೆಯ ಕೇರ್ ಚ್ಯಾರಿಟೇಬಲ್ ಟ್ರಸ್ಟ್ ನ ಐರಾವತ ಅನಿಲ್ ಮೆಂಡೋನ್ಸಾ ಅವರು ಮುಂದೆ ಬಂದಿದ್ದು, ಇದೀಗ ಸಂಜೆ ವೇಳೆಗೆ ಬೆಂಗಳೂರಿಗೆ ಕರೆದೊಯ್ಯಲಿದ್ದಾರೆ. ಕೆಪಿಸಿಸಿ ವಕ್ತಾರರಾಗಿರುವ ಎಂ.ಜಿ.ಹೆಗ್ಡೆಯವರು ತಮ್ಮ ಫೇಸ್ ಬುಕ್‌ವಾಲ್‌ನಲ್ಲಿ ಉಳ್ಳಾಲವಾಣಿ ವರದಿಯನ್ನು ಪೋಸ್ಟ್ ಮಾಡುತ್ತಿದ್ದಂತೆ ಮಹಿಳೆಯೊಬ್ಬರು ಸ್ಪಂಧಿಸಿ ಅನಿಲ್ ಮೆಂಡೋನ್ಸಾ ಅವರ ಸಂಪರ್ಕ ನೀಡಿ ಮಾನವೀಯತೆ ಮೆರೆದಿದ್ದಾರೆ.ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಯಿಂದ ಬೆಂಗಳೂರಿಗೆ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಪ್ರತಿಭಾಳನ್ನು ಕೊಂಡೊಯ್ಯುವ ಕುರಿತು ಉಳ್ಳಾಲವಾಣಿ ವರದಿಯನ್ನು ಪ್ರಕಟಿಸಿತ್ತು. ಇದು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದ್ದಂತೆ ಸಾಮಾಜಿಕ ಕರ‍್ಯಕರ್ತ, ಕೆಪಿಸಿಸಿ ವಕ್ತಾರ ಎಂ.ಜಿ.ಹೆಗ್ಡೆಯವರು ತಮ್ಮ ಫೇಸ್ ಬುಕ್ ವಾಲ್ ನಲ್ಲಿ ಸುದ್ಧಿಯನ್ನು ಹಂಚಿಕೊAಡಿದ್ದಾರೆ. ಹಾಕಿದ ಕೆಲವೇ ಕ್ಷಣಗಳಲ್ಲಿ ಮರೀಟಾ ಡಿಸೋಜ ಎಂಬವರು ಸ್ಪಂಧಿಸಿ, ಐರಾವತ ಆಂಬ್ಯುಲೆನ್ಸ್ ಅನಿಲ್ ಅವರ ಸಂಪರ್ಕವನ್ನು ಒದಗಿಸಿಕೊಟ್ಟಿದ್ದಾರೆ. ತಕ್ಷಣವೇ ಎಂ.ಜಿ.ಹೆಗ್ಡೆ ಅವರನ್ನು ಸಂಪರ್ಕಿಸಿದಾಗ ಯುವತಿಯನ್ನು ಬೆಂಗಳೂರಿಗೆ ಕೊಂಡೊಯ್ಯುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಈ ನಡುವೆ…

Read More