ಮಂಗಳೂರು: ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ಈರಾಕೋಡಿಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾದ ಬಂಟ್ವಾಳ ಕೊಳತ್ತಮಜಲು ನಿವಾಸಿ ಅಬ್ದುಲ್ ರಹ್ಮಾನ್ ಅವರ ನಿವಾಸಕ್ಕೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಸ್ವಾಭಿಮಾನಿ ಪ್ರೊ.ಬಿ.ಕೃಷ್ಣಪ್ಪ ಬಣ, ದ.ಕ. ಜಿಲ್ಲಾ ಸಮಿತಿಯ ನಿಯೋಗವು ಇಂದು ಭೇಟಿ ನೀಡಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿತು. ಈ ವೇಳೆ ಹತ್ಯೆ ನಡೆದ ಬಗ್ಗೆ ಹಾಗೂ ನಂತರದ ಪರಿಸ್ಥಿತಿಗಳ ಬಗ್ಗೆ ಮನೆಯವರೊಂದಿಗೆ ಸಮಾಲೋಚನೆ ನಡೆಸಿ. ತಮ್ಮ ನೋವಿನಲ್ಲಿ ಭಾಗಿಯಾಗುವುದರ ಜೊತೆಗೆ ಅಮಾಯಕ ಅಬ್ದುಲ್ ರಹ್ಮಾನ್ ಕೊಲೆ ಆರೋಪದಲ್ಲಿ ನೇರವಾಗಿ ಭಾಗಿಯಾದ ಹಾಗೂ ಸೂತ್ರಧಾರರನ್ನು ಪತ್ತೆ ಹಚ್ಚಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ಅಬ್ದುಲ್ ರಹ್ಮಾನ್ ಮನೆಯವರಿಗೆ ಗರಿಷ್ಠ ಪ್ರಮಾಣದಲ್ಲಿ ಆರ್ಥಿಕ ಪರಿಹಾರ ನೀಡುವಂತೆ ಸರಕಾರ ಹಾಗೂ ಪೊಲೀಸು ಇಲಾಖೆಗೆ ಒತ್ತಾಯಿಸುವುದಾಗಿ ತಿಳಿಸಲಾಯಿತು. ಅಲ್ಲದೆ ಮುಂದಿನ ಎಲ್ಲಾ ಕಾನೂನು ಹೋರಾಟಗಳಲ್ಲೂ ಸಂಘಟನೆಯು ತಮ್ಮ ಜೊತೆ ನಿಲ್ಲುವ ಭರವಸೆಯನ್ನು ನೀಡಿ, ಮನೆಯವರಿಗೆ ಧೈರ್ಯ ತುಂಬಿ ಸಾಂತ್ವನ ಹೇಳಲಾಯಿತು. ನಿಯೋಗದಲ್ಲಿ ಜಿಲ್ಲಾ ಸಂಚಾಲಕರಾದ ಸದಾಶಿವ…
Author: UllalaVani
ಇತ್ತೀಚಿನ ಒಂದೆರಡು ದಿನಗಳಲ್ಲಿ ಓದಿ ಮುಗಿಸಿದ ಎರಡು ಪುಸ್ತಕಗಳಂತೂ ಅತ್ಯಂತ ಪ್ರಭಾವಶಾಲಿಯಾಗಿದೆ. ಅದರಲ್ಲಿ ಒಂದು ನಾಡಿನ ಸಾಕ್ಷಿಪ್ರಜ್ಞೆ, ಯುವ ಪತ್ರಕರ್ತರಾದ ನವೀನ್ ಸೂರಿಂಜೆಯವರು ಬರೆದಿರುವ ಸತ್ಯೊಲು ಹಾಗೂ ಪ್ರಗತಿಪರ ಚಿಂತಕರಾದ ಡಾ.ಕ್ರಷ್ಣಪ್ಪ ಕೊಂಚಾಡಿಯವರು ಬರೆದಿರುವ ಸಮಾಜವಾದಿ ಚರಿತ್ರೆ…. ತುಳುನಾಡಿನಲ್ಲಿ ಜನತೆ ಆರಾಧಿಸುತ್ತಾ ಬಂದಿರುವ ಬೂತಾರಾಧನೆ/ದೈವಾರಾಧನೆಯ ಬಗ್ಗೆ ಬೆಳಕು ಚೆಲ್ಲಿರುವ ಈ ಕಿರುಹೊತ್ತಿಗೆ ಅದೆಷ್ಟೋ ದೈವಗಳ ಬಗ್ಗೆ ನಿಜಾಂಶಗಳನ್ನು ವಿವರಿಸುತ್ತಾ, ಅಂದಿನ ಕಾಲದ ತಳ ಜನಸಮುದಾಯಗಳ ನಾಯಕರೆನೆಸಿಕೊಂಡವರನ್ನು ಪುರೋಹಿತಶಾಹಿ ವರ್ಗ ಮಾಯ(ಕೊಲೆ) ಆಗುವಲ್ಲಿ ವಹಿಸಿದ ಪಾತ್ರವನ್ನು ಎಳೆಎಳೆಯಾಗಿ ಬಿಡಿಸಿಟ್ಟ ನವೀನ್ ರವರ ವರ್ಣನೆ ನಿಜಕ್ಕೂ ಅತ್ಯದ್ಭುತ. ಇಂದಿನ ತುಳುನಾಡಿನ ಜನತೆಗೆ ಬೆರಳೆಣಿಕೆಯಷ್ಟು ದೈವ/ಭೂತಗಳ ಪರಿಚಯವಿದ್ದರೆ, ನವೀನ್ ರವರಂತೂ ಈ ಪುಸ್ತಕದಲ್ಲಿ ಅದೆಷ್ಟೋ ದೈವಗಳ ಬಗ್ಗೆ ಸವಿವರವಾಗಿ ಹೇಳಿದ್ದಾರೆ ಮಾತ್ರವಲ್ಲ ಶ್ರಮಿಕರ ಜನಪದದ ಸೊಬಗನ್ನೂ ಹಾಗೂ ಜಾತಿ ಧರ್ಮದ ಎಲ್ಲೆ ಮೀರಿ ಸೌಹಾರ್ದತೆಯನ್ನು ಸಾರುವ ಚಿತ್ರಣವನ್ನು ಹ್ರದಯಕ್ಕೆ ನಾಟುವಂತೆ ವರ್ಣಿಸಿದ್ದಾರೆ. ಇದು ಇಂದಿನ ಕಾಲಮಾನಕ್ಕೆ ತುರ್ತು ಅಗತ್ಯ ಔಷಧಿಯಾಗಿ ಮೂಡಿ ಬಂದಿದೆ ಈ ಪುಸ್ತಿಕೆ…….…
2025ರ ಜುಲೈ 03ರಂದು ಸೈಂಟ್ ಅಲೋಶಿಯಸ್ (ಮಾನ್ಯ ವಿಶ್ವವಿದ್ಯಾನಿಲಯ), AIMIT ಕೇಂದ್ರ ಮತ್ತು IBM ನಡುವಿನ ಒಡಂಬಡಿಕೆಯನ್ನು ಅಧಿಕೃತವಾಗಿ ಸಹಿ ಹಾಕಲಾಯಿತು. ಈ ಸಹಿ ಸಮಾರಂಭದಲ್ಲಿ AIMIT ಕೇಂದ್ರದ ನಿರ್ದೇಶಕರಾದ ಡಾ. ಫಾ. ಕಿರಣ್ ಕೋಟ, IBM ನ ಸಾಫ್ಟ್‌ವೇರ್ ಸೇವೆಗಳ ರಾಷ್ಟ್ರೀಯ ನಿರ್ವಾಹಕರು ಶ್ರೀ ಜಗದೀಶ್ ಭಟ್, IBMನ ಪ್ರಾದೇಶಿಕ ನಿರ್ವಾಹಕರು ಶ್ರೀ ಮಧುಸೂಧನ್, ಟೆಕ್‌ಪಾಥ್‌ನ ಪ್ರಾದೇಶಿಕ ನಿರ್ವಾಹಕ ಶ್ರೀ ಜಿತೇಶ್ ಹಾಗೂ AIMITನ ಡೀನ್‌ಗಳಾದ ಡಾ. ರಜನಿ ಸುರೇಶ್ ಮತ್ತು ಡಾ. ಹೆಮಲತಾ ಎನ್. ಉಪಸ್ಥಿತರಿದ್ದರು. ಈ ಒಡಂಬಡಿಕೆಯು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ವಿವಿಧ ಆಯಾಮಗಳಲ್ಲಿ ಶೈಕ್ಷಣಿಕ ವಲಯದಲ್ಲಿ ಸ್ಪರ್ಧಾತ್ಮಕ ಸಂಸ್ಥೆಗಳಾಗಿ ಗುರುತಿಸಿಕೊಳ್ಳುವ ಮಹತ್ವದ ಅವಕಾಶವನ್ನು ನೀಡುತ್ತದೆ. ತಂತ್ರಜ್ಞಾನ ಮತ್ತು ಸಾಫ್ಟ್‌ವೇರ್‌ಗಳ ಶಿಕ್ಷಣ ಹಾಗೂ ತರಬೇತಿಗಾಗಿ ಉದ್ಯಮ ಮತ್ತು ಶೈಕ್ಷಣಿಕ ವಲಯಗಳಲ್ಲಿ ಆದ್ಯತೆಯ ಸಂಸ್ಥೆಯಾಗಿ ಗುರುತಿಸಿಕೊಳ್ಳುವ ಅವಕಾಶವಿದೆ. ಈ ಮೂಲಕ ವಿದ್ಯಾರ್ಥಿಗಳು ಹಾಗೂ ಬೋಧಕರು IBMನ ಶ್ರೇಷ್ಠ ಸಾಫ್ಟ್‌ವೇರ್‌ಗಳ ಬಳಕೆಯ ಮೂಲಕ ತಮ್ಮ ಜ್ಞಾನ ಮತ್ತು ಕೌಶಲ್ಯವನ್ನು ವೃದ್ಧಿಸಿಕೊಳ್ಳಬಹುದು.…
ಮಾನಸಿಕ ರೋಗಿಗಳ ಸಾಮಾಜಿಕ ಪುನರ್‌ವಸತಿಗಾಗಿ ಸ್ಥಾಪಿಸಲ್ಪಟ್ಟು ಅಮೋಘ ಸೇವೆಯಲ್ಲಿ ನಿರತವಾಗಿರುವ ಸ್ನೇಹಾಲಯ ಸಂಸ್ಥೆಯು ತಮ್ಮ ವ್ಯಸನ ನಿವಾರಣಾ ಕೇಂದ್ರದಲ್ಲಿ ಹೊಸದಾಗಿ ನಿರ್ಮಿಸಲಾದ ಟೆರೇಸ್ ರೂಫಿಂಗ್ ಮತ್ತು ನೆಲಹಾಸಿನ ಉದ್ಘಾಟನೆ ಜೂ.5 ರಂದು ನಡೆಯಿತು. ಈ ಸೌಲಭ್ಯವನ್ನು ಮಂಗಳೂರಿನ MRPLಸಂಸ್ಥೆಯ ಸಾಂಸ್ಥಿಕ ಸಮಾಜಿಕ ಯೋಜನೆಯಡಿ(CSR ಉಪಕ್ರಮದ ಅಡಿಯಲ್ಲಿ) ಪ್ರೋತ್ಸಾಹಿಸಲ್ಪಟ್ಟು ಸದರಿ ಸೌಲಭ್ಯವನ್ನು ವ್ಯಸನ ಮುಕ್ತ ಸಮಾಜಕ್ಕಾಗಿ ರೊಗಿಗಳ ಚೇತರಿಕೆಯ ಹಾದಿಯಲ್ಲಿ ಸಬಲೀಕರಣಗೊಳ್ಳುವ ಅಭಿವ್ಯಕ್ತಿಶೀಲ ಕಲಾ ಚಿಕಿತ್ಸೆ ಮತ್ತು ವಿವಿಧ ಗುಣಪಡಿಸುವ ಶಾರೀರಿಕ ಹಾಗೂ ಮಾನಸಿಕ ಚಟುವಟಿಕೆಗಳಿಗೆ ಮೀಸಲಿಡಲಾಗುವುದಾಗಿದೆ. . ಉದ್ಘಾಟನಾ ಸಮಾರಂಭವು ಬಹಳ ಅರ್ಥಪೂರ್ಣವಾಗಿ ಮತ್ತು ಹೃದಯಸ್ಪರ್ಶಿಯಾಗಿ ನಡೆಯಿತು, MRPL ನ CSR ವಿಭಾಗದ ಹಿರಿಯ ವ್ಯವಸ್ಥಾಪಕ ಕೆ. ನಾಗರಾಜ್ ರಾವ್ ಅವರು ಮುಖ್ಯ ಅತಿಥಿಯಾಗಿ ಹಾಜರಿದ್ದು MRPL-ONGC ಮಂಗಳೂರಿನ ಗ್ರೂಪ್ ಜನರಲ್ ಮ್ಯಾನೇಜರ್ ಕೃಷ್ಣ ಹೆಗ್ಡೆ ಮಿಯಾರ್ ಅವರ ಪರವಾಗಿ ರಿಬ್ಬನ್ ಕತ್ತರಿಸುವ ಮೂಲಕ ಹೊಸ ಸೌಲಭ್ಯವನ್ನು ಉದ್ಘಾಟಿಸಿದರು. ನೆರೆದ ಅತಿಥಿಗಳು ದೀಪ ಬೆಳಗಿಸಿ ಹಾಗೂ ವನಮಹೋತ್ಸವ ಸಾಂಕೇತಿಸಲು ಗಿಡನೆಟ್ಟು ಕಾರ್ಯಕ್ರಮಕ್ಕೆ…
ಕೊಲ್ಲೂರು/ಮಂಗಳೂರು : ವಿಶ್ವ ಪರಿಸರ ದಿನದ ಅಂಗವಾಗಿ ನಿಟ್ಟೆ ಪರಿಗಣಿಸಲ್ಪಟ್ಟ ವಿ.ವಿ ಅಧೀನದನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ ಕಾಲೇಜು ನೇತೃತ್ವದಲ್ಲಿ ಕೊಲ್ಲೂರು ಮೂಕಾಂಬಿಕ ದೇವಳದ ಆವರಣದಲ್ಲಿ ಸ್ವಚ್ಛತಾ ಅಭಿಯಾನದ ಅಂಗವಾಗಿ ‘ಕ್ಲೀನ್ ಸೌಪರ್ಣಿಕ ಗ್ರೀನ್ ಕೊಲ್ಲೂರು’ ಅಭಿಯಾನ ಗುರುವಾರ ನಡೆಯಿತು. ಕಾರ್ಯಕ್ರಮವನ್ನು ಕೊಲ್ಲೂರು ದೇವಸ್ಥಾನದ ಮುಂಭಾಗ ಮುಖ್ಯ ಅತಿಥಿಯಾಗಿ ಆಗಮಿಸಿದ್ದಕೊಲ್ಲೂರು ಶ್ರೀ ಮೂಕಾಂಬಿಕ ದೇಗುಲ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ ಧ್ವಜ ಹಾರಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಮಕ್ಕಳಿಂದ ನಡೆಯುವ ಒಂದು ದಿನದ ಅಭಿಯಾನದಿಂದ ದೇಗುಲದ ಆವರಣ ಅಥವಾ ಸೌಪರ್ಣಿಕ ಸ್ವಚ್ಛವಾಗಿ ಉಳಿಯುವುದಿಲ್ಲ. ಆದರೆ ಮಕ್ಕಳ ಈ ಅಭಿಯಾನದಿಂದಾಗಿ ಜನರಿಗೆ ಜಾಗೃತಿ ಮೂಡುತ್ತದೆ. ಇಂತಹಾ ಜಾಗೃತಿಗೆ ಈ ರೀತಿಯ ಕಾರ್ಯಕ್ರಮಗಳು ನಡೆಯುತ್ತಿರಬೇಕು. ಕ್ಷೇತ್ರದ ಆವರಣವನ್ನು ಸ್ವಚ್ಛವಾಗಿಡುವ ಮೂಲಕ ದೇವರಿಗೆ ಇನ್ನಷ್ಟು ಹತ್ತಿರವಾಗೋಣ ಎಂದರು.ಕೊಲ್ಲೂರು ಶ್ರೀ ಮೂಕಾಂಬಿಕ ದೇಗುಲದ ಕಾರ್ಯನಿರ್ವಾಹಣಾ ಅಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ ಪೋಸ್ಟರ್ ಬಿಡುಗಡೆ ಮಾಡಿದರು.ಪ್ರಧಾನ ಅರ್ಚಕ ಸುಬ್ರಮಣ್ಯ ಅಡಿಗ ಮತನಾಡಿ, ತಾಯಿ ಮೂಕಾಂಬಿಕ…
ಉಳ್ಳಾಲ : ಮಂಜನಾಡಿ ಉರುಮಣೆ ಕೋಡಿ ಮನೆ ಮೇಲೆ ಗುಡ್ಡ ಕುಸಿದು ಅಜ್ಜಿ ಹಾಗೂ ಮೊಮ್ಮಕ್ಕಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿ ಅಜ್ಜಿಯ ಪುತ್ರ, ಮಕ್ಕಳ ತಂದೆ ಸೀತಾರಾಮ ಪೂಜಾರಿ ಅವರು ಅವೈಜ್ಞಾನಿಕ ರಸ್ತೆ ಕಾಮಗಾರಿ ಮತ್ತು ಸ್ಥಳೀಯಾಡಳಿತದ ನಿರ್ಲಕ್ಷ್ಯದಿಂದ ನಡೆಸಿರುವ ಕಾಮಗಾರಿಯಿಂದ ದುರಂತ ಸಂಭವಿಸಿರುವುದಾಗಿಯೂ ಕೊಣಾಜೆ ಪೊಲೀಸ್ ಠಾಣೆ ಹಾಗೂ ಸರಕಾರದ ಮುಖ್ಯ ಕಾರ‍್ಯದರ್ಶಿಗೆ ದೂರು ಸಲ್ಲಿಕೆಗೆ ಸ್ಪಂಧಿಸಿರುವ ರಾಜ್ಯ ಮುಖ್ಯ ಕಾರ‍್ಯದರ್ಶಿ ಶಾಲಿನಿ ರಜನೀಶ್ ಅವರು ದ.ಕ. ಜಿಲ್ಲಾಡಳಿತ ಹಾಗೂ ಜಿ.ಪಂ ಮುಖ್ಯ ಕಾರ‍್ಯನಿರ್ವಹಣಾಧಿಕಾರಿಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಆದೇಶಿಸಿದ್ದಾರೆ.ಮೇ.30 ರಂದು ರಾತ್ರಿ ವೇಳೆ ಸುರಿದ ಮಹಾಮಳೆಯ ಸಂದರ್ಭ ಮನೆ ಮೇಲೆ 30 ಅಡಿ ಎತ್ತರದ ಗುಡ್ಡ ಕುಸಿದು ಸೀತಾರಾಮ ಪೂಜಾರಿ ಅವರ ಕುಟುಂಬ ದುರಂತಕ್ಕೊಳಗಾಗಿತ್ತು. ತಾಯಿ ಪ್ರೇಮ ಪೂಜಾರಿ(60), ಇಬ್ಬರು ಮಕ್ಕಳಾದ ಆರ್ಯನ್ (3), ಆರುಷ್ (1.5 ವರ್ಷ) ಮೃತಪಟ್ಟಿದ್ದರು. ಇದರ ಜೊತೆಗೆ ಸೀತಾರಾಮ ಅವರ ಪತ್ನಿ ಅಶ್ವಿನಿಯವರ ಎರಡೂ ಕಾಲುಗಳು ಮತ್ತು ತಂದೆ ಕಾಂತಪ್ಪ ಪೂಜಾರಿಯವರ…
ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕಳೆದ ಹಲವಾರು ವರ್ಷಗಳಿಂದ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಮಂಗಳೂರು ವಿಶ್ವವಿದ್ಯಾನಿಲಯದ ಶಿಕ್ಷಕೇತರ ಸಿಬ್ಬಂದಿಗಳಾದ ಶಿವಾನಂದ ಪೂಜಾರಿ ಹಾಗೂ ಸೀತಾ ಅವರನ್ನು ಮಂಗಳೂರು ವಿವಿ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.ಈ ಸಂದರ್ಭದಲ್ಲಿ ಮಂಗಳೂರು ವಿವಿ ಕುಲಪತಿಗಳಾದ ಪ್ರೊ.ಪಿ.ಎಲ್.ಧರ್ಮ, ಹಣಕಾಸು ಅಧಿಕಾರಿ ಪ್ರೊ.ವೈ.ಸಂಗಪ್ಪ, ಪರೀಕ್ಷಾಂಗ ಕುಲಸಚಿವರಾದ ಪ್ರೊ.ದೇವೇಂದ್ರಪ್ಪ ಹಾಗೂ ವಿವಿಧ ವಿಭಾಗಗಳ ಅಧಿಕಾರಿಗಳು, ಸಿಬ್ಬಂದಿಗಳು, ಶಿಕ್ಷಕೇತರರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಉಳ್ಳಾಲ : ಅಜ್ಜಿನಡ್ಕ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅರ್ಹ ರೋಗಿಗಳಿಗೆ ಮೆಡಿಕಲ್ ಬೆಡ್, ಗಾಲಿ ಕುರ್ಚಿ ಹಾಗೂ ಇನ್ನಿತರ ಸಾಮಾಗ್ರಿಗಳನ್ನು ಹಸ್ತಾಂತರ ಕಾರ್ಯಕರ್ಮ ಅಜ್ಜಿನಡ್ಕ ಜಂಕ್ಷನ್ ನಲ್ಲಿ ನಡೆಯಿತು.ಕಾರ್ಯ ಕರ್ಮದ ಅಧ್ಯಕ್ಷತೆಯನ್ನು ಟಿ.ಕೆ. ಅಬ್ದುಲ್ ಖಾದರ್ ವಹಿಸಿದ್ದರು,ಚಾರಿಟಿಯ ಸಂಚಾಲಕ ಅಬ್ದು ರಹ್ಮಾನ್ ಮದನಿ ಉದ್ಘಾಟಿಸಿದರು, ಸಿ ಎಚ್ ಇಸ್ಮಾಯಿಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಹ್ಮದ್ ಅಜ್ಜಿನಡ್ಕ , ಅಹ್ಮದ್ ಎಸ್. ಎಂ ಮಾತನಾಡಿದರು,ಕಾರ್ಯಕ್ರಮದಲ್ಲಿ ಸಾಹುಲ್ ಸಾಮನಿಗೆ, ರಹೀಮ್ ಸಿ ಎಚ್, ನೌಶಾದ್ ಯು ಎನ್, ಸುಲ್ತಾನ್ ಬಿ ಎಸ್ ಟಿ, ಅಮೀರ್ ಫೈಜಲ್ ಉಪಸ್ಥಿತರಿದ್ದರು.ಅಶ್ರಫ್ ಕೋಟೆಕಾರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು
ಕೊಣಾಜೆ: ನಾವು ಕರಾವಳಿಯಲ್ಲಿ ದ್ವೇಷ ಬಿತ್ತುವುದು ಬೇಡ. ಬೆಂಕಿ ಹಚ್ಚೋದೂ ಬೇಡ. ಮನುಷ್ಯ ಪ್ರೀತಿಯ ದೀಪ ಹಚ್ಚೋಣ. ಬಹುತ್ವದ ಈ ಮಣ್ಣಿನಲ್ಲಿ ನಾಡಿಗೆ ಹೊಸ ಸಂವೇದನೆಯನ್ನು ದಾಟಿಸಬಲ್ಲ ಶಕ್ತಿಯಿದೆ. ಪರಸ್ಪರ ಗೌರವ ಪ್ರೀತಿಗೆ ಬದ್ಧವಾದ ಸಮಾಜವನ್ನು ಕಟ್ಟೋಣ ಎಂದು ಪಂಪ ಪ್ರಶಸ್ತಿ ಪುರಸ್ಕೃತ ವಿದ್ವಾಂಸ ಪ್ರೊ. ಬಿ.ಎ. ವಿವೇಕ ರೈ ಹೇಳಿದರು. ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ, ವಿಭಾಗದ ಅಧ್ಯಕ್ಷರಾಗಿ ಬಳಿಕ ಹಂಪಿ ಕನ್ನಡ ವಿಶ್ವವಿದ್ಯಾಲಯ ಹಾಗೂ ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯಗಳ ಕುಲಪತಿಗಳಾಗಿ ಸೇವೆ ಸಲ್ಲಿಸಿದ ವಿದ್ವಾಂಸ ಪ್ರೊ. ಬಿ.ಎ ವಿವೇಕ ರೈ ಅವರಿಗೆ ಕರ್ನಾಟಕ ಸರಕಾರ ನೀಡುವ ಪ್ರತಿಷ್ಠಿತ ಪಂಪ ಪ್ರಶಸ್ತಿ ದೊರಕಿದ ಪ್ರಯುಕ್ತ ಬುಧವಾರ ಮಂಗಳೂರು ವಿವಿಯಲ್ಲಿ ನಡೆದ ಅಭಿವಂದನ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು. ವಿಶ್ವವಿದ್ಯಾನಿಲಯಗಳನ್ನು ಕಟ್ಟಡ, ಹಣದಿಂದ ಕಟ್ಟಲು ಸಾಧ್ಯವಿಲ್ಲ. ಶೈಕ್ಷಣಿಕ ಕಾಳಜಿ, ಜ್ಞಾನದ ಬಗೆಗಿನ ಹಸಿವು ಮತ್ತು ಮಾನವೀಯ ಸಂಬಂಧಗಳ ಸಂಘಟಿತ ಪ್ರಯತ್ನದ ಮೂಲಕ ಕಟ್ಟಬೇಕು ಎಂದು ಹೇಳಿದರು.ಕುವೆಂಪು ಮತ್ತು…
ಉಳ್ಳಾಲ : ಯು.ಟಿ.ಎಂ ಚಾರಿಟೇಬಲ್ ಟ್ರಸ್ಟ್ ಉಳ್ಳಾಲ ಇದರ ವತಿಯಿಂದ ಯತೀಮ್, ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಪುಸ್ತಕ ವಿತರಣಾ ಸಮಾರಂಭ ಇತ್ತೀಚೆಗೆ ಉಳ್ಳಾಲದ ಟ್ರಸ್ಟ್ ನ ಕಛೇರಿಯಲ್ಲಿ ನಡೆಯಿತು. ಟ್ರಸ್ಟಿನ ಅಧ್ಯಕ್ಷ ಹಾಜಿ ಫಾರೂಕ್ ಅಬ್ಬಾಸ್ ಉಳ್ಳಾಲ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್ ಸದಸ್ಯರಾದ ಅಬ್ದುಲ್ ಖಾದರ್ ಸಾದಾತ್ ಉಳ್ಳಾಲ ಉದ್ಘಾಟಿಸಿದರು. ಹಾಜಿ ಫಾರೂಕ್ ಅಬ್ಬಾಸ್ ಮಾತನಾಡಿ ಶುಭ ಹಾರೈಸಿದರು.ಈ ಕಾರ್ಯಕ್ರಮದಲ್ಲಿ ಕೋಶಾಧಿಕಾರಿ ಬಶೀರ್ ಉಳ್ಳಾಲ, ಸದಸ್ಯರಾದ ಆರಿಫ್ ಡಿ.ಎಂ, ಉಪಸ್ಥಿತರಿದ್ದರು. ಕಾರ್ಯದರ್ಶಿ ಮೊಯ್ದಿನ್ ಹಾಜಿ ಮೊಂಟೆಪದವು ಸ್ವಾಗತಿಸಿದರು. ಶರೀಫ್ ಕೋಟಪುರ ವಂದಿಸಿದರು

