Author: UllalaVani

Kannada News From Coastal Karnataka

ಉಳ್ಳಾಲ,ನ.11: ಶ್ರೀ ದುರ್ಗಾ ಫ್ರೆಂಡ್ಸ್ (ರಿ) ಉಳ್ಳಾಲ ಇದರ ಸ್ಥಾಪಕ ಸದಸ್ಯರಾದ ಹರೀಶ್ ನಿಧನ ಹೊಂದಿದ್ದಾರೆ. ಸದಾ ಎಲ್ಲರೊಡನೆ ಪ್ರೀತಿ ವಿಶ್ವಾಸದಿಂದ ಬೆರೆಯುತ್ತಿದ್ದ ಹರೀಶ್ ಇನ್ನಿಲ್ಲ ಎಂಬ ಸುದ್ದಿ ಅವರ ಆತ್ಮೀಯರಿಗೆ ಅಘಾತವುಂಟು ಮಾಡಿದೆ. ಹರೀಶ್ ಅವರು ಬಜಾಜ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದರು. ಮೃತರು ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಹಾಗೂ ಅನೇಕ ಬಂಧು ಮಿತ್ರರನ್ನು ಅಗಲಿದ್ದಾರೆ.

Read More

ಕುತ್ತಾರು,ನ.11: ಪ್ರಕೃತಿ ಸಂರಕ್ಷಣೆಯ ಜಾಗೃತಿ ಮೂಡಿಸುವ ಉದ್ದೇಶದಿಂದ ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ವತಿಯಿಂದ ಕುತ್ತಾರು ಬಾಲಸಂರಕ್ಷಣಾ ಕೇಂದ್ರದಲ್ಲಿ ವೃಕ್ಷಾಂಕುರ ರಕ್ಷಾ ಕಾರ್ಯಕ್ರಮ ನಡೆಯಿತು. ಕಳೆದ 8 ವರುಷಗಳಿಂದ ವೃಕ್ಷಾಂಕುರ ರಕ್ಷಾ ಕಾರ್ಯಕ್ರಮ ದಡಿಯಲ್ಲಿ ಸದಸ್ಯರ ಮನೆಯಲ್ಲಿ ಗಿಡ, ಮನೆಗೊಂದು ಗಿಡ, ವೃಕ್ಷತೋರಣ, ಗಿಡವೊಂದು ಧಾರ್ಮಿಕತೆಗೆ ಈ ರೀತಿಯ ವಿವಿಧ ಕಾರ್ಯಕ್ರಮಗಳನ್ನು ಭಗತ್ ಸಿಂಗ್ ಸೇವಾ ಪ್ರತಿಷ್ಠಾನ ನಡೆಸಿಕೊಂಡು ಬರುತ್ತಿದೆ. ಈ ಬಗ್ಗೆ ಪ್ರತಿಷ್ಠಾನದ ಅಧ್ಯಕ್ಷರಾದ ಜೀವನ್ ಕುಮಾರ್ ತೊಕ್ಕೊಟು ಮಾತನಾಡಿ, ಕುತ್ತಾರಿನ ಬಾಲಸಂರಕ್ಷಣಾ ಕೇಂದ್ರದಲ್ಲಿ ಮಕ್ಕಳ ಜತೆಯಲ್ಲಿ ನೂರು ಮನಸ್ಸು ಗಿಡವೊಂದು ಕಾರ್ಯಕ್ರಮ ನಡೆಸಲು ಸಂತೋಷ ಪಡುತ್ತಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು. ಪ್ರತಿಷ್ಠಾನದ ಉಪಾಧ್ಯಕ್ಷರು, ಪರಿಸರ ಪ್ರೇಮಿ ಮಾಧವ ಉಳ್ಳಾಲ ರವರ ಮಾರ್ಗದರ್ಶನದಲ್ಲಿ, ವೃಕ್ಷಾಂಕುರ ರಕ್ಷಾ ಸಂಚಾಲಕರು ಪ್ರಸಾದ್ ಕೊಂಡಾಣ ರವರ ಮುತುವರ್ಜಿಯಲ್ಲಿ ಕಾರ್ಯಕ್ರಮ ನಡೆಯಿತು. ಈ ಸಂದÀರ್ಭದಲ್ಲಿ ಪ್ರತಿಷ್ಠಾನದ ಗೌರವಧ್ಯಕ್ಷರಾದ ರಾಕೇಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಗಣೇಶ್ ಕಾಪಿಕಾಡ್, ಪ್ರಮುಖರಾದ ಮೋಹನ್ ಸಾಲ್ಯಾನ್, ರಾಜೇಂದ್ರ ಸೇವಂತಿಗುಡ್ಡೆ, ದಾಮೋದರ ನಡಾರ್,…

Read More

ಉಳ್ಳಾಲ,ನ.11: ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆಯ ಜೀರ್ಣೋದ್ಧಾರದ ಪ್ರಮುಖ ಹಂತವಾದ ಬಾಲಾಲಯ ಪ್ರತಿಷ್ಠಾ ಕಾರ್ಯಕ್ರಮ ಜರುಗಿತು. ಉಳಿಯ ಉಳ್ಳಾಲ್ತಿ ಧರ್ಮಅರಸರ ಕ್ಷೇತ್ರದ ಧರ್ಮದರ್ಶಿಯಾದ ದೇವು ಮೂಲ್ಯಣ್ಣ ಇವರ ಮಾರ್ಗದರ್ಶನದಲ್ಲಿ ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆಯ ಜೀರ್ಣೋದ್ಧಾರದ ತಂತ್ರಿವರ್ಯಾರಾದ ಪ್ರಸಾದ್ ನಲ್ಲುರಾಯ ಇವರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮಗಳು ನಡೆದಿದೆ. ಈ ಸಂದರ್ಭದಲ್ಲಿ ಶ್ರೀ ಚೀರುಂಭ ಭಗವತೀ ಕ್ಷೇತ್ರ ಉಳ್ಳಾಲದ ಅರ್ಚಕರಾದ ಮಂಜಪ್ಪ ಕಾರ್ನವರ್ ( ಬಾಲು ಉಳ್ಳಾಲ ಬೈಲ್), ಅಪ್ಪು ಆತಾರ್ (ಕಮಾಲಾಕ್ಷ ಉಳ್ಳಾಲ್), ಶ್ರೀ ಉಳಿಯ ಉಳ್ಳಾಲ್ತಿ ಧರ್ಮಅರಸರ ಕ್ಷೇತ್ರದ ಗುರಿಕರಾದ ಅಂತ ಗುರಿಕಾರ (ರಾಜೇಶ್ ನಾಯ್ಕ್) ಉಪಸ್ಥಿತರಿದ್ದರು. ಶ್ರೀ ವೀರಾಂಜನೇಯ ಸೇವಾ ಟ್ರಸ್ಟ್ (ರಿ) ಇದರ ಮ್ಯಾನೇಜಿಂಗ್ ಟ್ರಸ್ಟಿ ರಾಜೇಶ್ ಅಡ್ಕ, ಹಾಗೂ ಸದಸ್ಯರಾದ ಶರತ್ ಪೂಜಾರಿ, ಪಿ. ಬಾಲಕೃಷ್ಣ, ಧರ್ಮೇಂದ್ರ ಉಳ್ಳಾಲ, ರಿತಿನ್ ಮೊರ್ಲ ಮತ್ತು ಶಾಲೆಯ ಗುರುಗಳಾದ ವಿಜಯ್ ಅಮಿನ್ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾದ ನವನೀತ್ ಉಳ್ಳಾಲ ಕಾರ್ಯಕ್ರಮದ ಜವಾಬ್ದಾರಿ ನಿರ್ವಹಿಸಿದರು. ಈ ಸಂದರ್ಭದಲ್ಲಿ ನವನೀತ ಶೆಟ್ಟಿ…

Read More

ಬಾಲಿವುಡ್ ಹಿರಿಯ ನಟ ಧರ್ಮೇಂದ್ರ (89) ಅವರು ಚೇತರಿಸಿಕೊಳ್ಳುತ್ತಿದ್ದು, ವೈದ್ಯಕೀಯ ನಿಗಾದಲ್ಲಿದ್ದಾರೆ ಎಂದು ಅವರ ಪುತ್ರಿ ಇಶಾ ಡಿಯೋಲ್ ಮಂಗಳವಾರ ದೃಢಪಡಿಸಿದ್ದಾರೆ. ಈ ಮೂಲಕ ನಟನ ನಿಧನದ ಕುರಿತು ಹಬ್ಬಿದ್ದ ಸುಳ್ಳು ವದಂತಿಗಳಿಗೆ ತೆರೆ ಎಳೆದಿದ್ದಾರೆ. ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಪುತ್ರಿ ಇಶಾ ಪೋಸ್ಟ್ ಹಂಚಿಕೊ0ಡಿದ್ದು, “ಮಾಧ್ಯಮಗಳು ಅತಿಯಾಗಿ ವರ್ತಿಸುತ್ತಿದ್ದು, ಸುಳ್ಳು ಸುದ್ದಿಗಳನ್ನು ಹರಡುತ್ತಿವೆ. ನಮ್ಮ ತಂದೆಯವರ ಆರೋಗ್ಯ ಸ್ಥಿರವಾಗಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ. ನಮ್ಮ ಕುಟುಂಬಕ್ಕೆ ಖಾಸಗಿ ಸಮಯ ನೀಡಬೇಕೆಂದು ಎಲ್ಲರಲ್ಲಿ ವಿನಂತಿಸುತ್ತೇವೆ. ಪಪ್ಪಾ ಬೇಗ ಗುಣಮುಖರಾಗಲೆಂದು ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದಗಳು” ಎಂದಿದ್ದಾರೆ.ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಧರ್ಮೇಂದ್ರ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಬಳಿಕ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೆಂಟಿಲೇಟರ್ ಮೂಲಕ ಉಸಿರಾಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಧರ್ಮೇಂದ್ರ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಬಾಲಿವುಡ್‌ನ ಹೀ ಮ್ಯಾನ್, ಎವರ್‌ಗ್ರೀನ್ ಸ್ಟಾರ್, ಆಕ್ಷನ್ ಕಿಂಗ್ ಎಂದು ಜನಪ್ರಿಯರಾಗಿರುವ ಹಿರಿಯ ನಟ ಧರ್ಮೇಂದ್ರ ಅವರು, 1960ರಲ್ಲಿ ‘ದಿಲ್ ಭೀ ತೇರಾ…

Read More

ಬೆಂಗಳೂರು: ದೇವನಹಳ್ಳಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮುಸ್ಲಿಂ ಸಮುದಾಯದಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದು, ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಕೆಂಪೇಗೌಡ ವಿಮಾನದ ಟರ್ಮಿನಲ್ 2 ರಲ್ಲಿ ಸಾರ್ವಜನಿಕವಾಗಿ ಮುಸ್ಲಿಮರು ನಮಾಜ್ ಮಾಡಿದ್ದು, ಏರ್ಪೋಟ್ ಸಿಬ್ಬಂದಿ ಭದ್ರತಾ ಪಡೆ ಅಧಿಕಾರಿಗಳು ನೋಡಿಯೂ ಸುಮ್ಮನೆ ನಿಂತಿದ್ದಾರೆ ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಏರ್ಪೋರ್ಟ್ ಗೆ ಮೆಕ್ಕಾಗೆ ತೆರಳುತ್ತಿದ್ದವರನ್ನು ಬಿಳ್ಕೊಡಲು ಸುಮಾರು ಹತ್ತಕ್ಕೂ ಹೆಚ್ಚು ಮಂದಿ ಆಗಮಿಸಿದ್ದರು. ಅವರನ್ನು ಕಳುಹಿಸಿ ವಾಪಸ್ ಬರುವ ವೇಳೆ ಟರ್ಮಿನಲ್ 2 ರಲ್ಲಿ ಸಾರ್ವಜನಿಕವಾಗಿ ನಮಾಜ್ ಮಾಡಿದ್ದಾರೆ. ಏರ್ಪೋಟ್ ಒಳ ಭಾಗದಲ್ಲಿ ಪ್ರಯಾಣಿಕರಿಗೆ ಪ್ರಾರ್ಥನಾ ಕೊಠಡಿಯಿದ್ದರೂ ಕೂಡ ಸಾರ್ವಜನಿಕ ಸ್ಥಳದಲ್ಲಿ ನಮಾಜ್ ಮಾಡಿರುವುದು ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದ್ದು, ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಇನ್ನು ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ರಾಜ್ಯ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಆರ್ ಎಸ್ ಎಸ್ ಮೆರವಣಿಗೆ ಅನುಮತಿ ನಿರಾಕರಿಸುತ್ತಿದ್ದ ಕಾಂಗ್ರೆಸ್ ಸರ್ಕಾರ.. ಈ ಬಗ್ಗೆ…

Read More

ಕುತ್ತಾರು,ನ.11: ಕುತ್ತಾರು ಪದವಿನಲ್ಲಿ ಸುಪ್ರೀಂ ಬಜಾಜ್‌ನ ವಿನೂತನ ಮಾರಾಟ ಕೇಂದ್ರವನ್ನು ಕರ್ನಾಟಕ ಸರಕಾರದ ಹೆಲ್ತ್ ಕೇರ್ ಕೌನ್ಸಿಲ್‌ನ ಚೇರ್ ಮೇನ್ ಯು ಟಿ ಇಪ್ತಿಕಾರ್ ಫರೀದ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಇವರು, ಎಲ್ಲಾ ಗ್ರಾಹಕರ ಸಹಕಾರದಿಂದಾಗಿ ಕೇಂದ್ರವು ಯಶಸ್ವಿಯಾಗಿ ಮುನ್ನಡೆಯಲಿ ಎನ್ನುತ್ತಾ ಶುಭಹಾರೈಸಿದರು. ಸುಪ್ರೀಂ ಬಜಾಜ್‌ನ ಸೇವಾ ಕೇಂದ್ರದ ಉದ್ಘಾಟನೆಯನ್ನು ಕಟ್ಟಡ ಮಾಲಕರಾದ ಮೊಹಮ್ಮದ್ ಇಸ್ಮಾಯಿಲ್ ಸಿದ್ಧಿ ಅಹ್ಮದ್‌ರವರು ಲೋಕಾರ್ಪಣೆಗೊಳಿಸಿದರು. ಇದೇ ವೇಳೆ ಬಿಜೆಪಿ ಮಂಗಳೂರು ಮಂಡಲದ ಅಧ್ಯಕ್ಷರಾದ ಜಗದೀಶ್ ಆಳ್ವ ಕುವೆತ್ತ ಬೈಲ್ ಮಾತನಾಡಿ, ಗ್ರಾಹಕರಿಗೆ ಉತ್ತಮ ಗುಣಮಟ್ಟದಲ್ಲಿ ನಗು ಮೊಗದ ಸೇವೆಯ ಜೊತೆಗೆ ಯೋಗ್ಯ ದರದಲ್ಲಿ ವಾಹನಗಳನ್ನು ಗ್ರಾಹಕರಿಗೆ ಈ ಸಂಸ್ಥೆ ನೀಡಲಿ. ಆ ಮುಖೇನ ಜನರಿಗೆ ಸ್ನೇಹಪರ ಸೇವೆಗಳನ್ನು ನೀಡಿ ಈ ಭಾಗದಲ್ಲಿ ಉತ್ತಮ ಸಂಸ್ಥೆಯಾಗಿ ಬೆಳೆಯಲಿ ಎಂದು ಅಭಿಪ್ರಾಯಪಟ್ಟರು. ಸಂಸ್ಥೆಯ ಚೇರ್ಮನ್ ಆರೂರು ಕಿಶೋರ್ ರಾವ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, 1967 ರಲ್ಲಿ ನನ್ನ ತಂದೆಯವರಾದ ದಿ.ಆರೂರು ಶ್ರೀಪತಿ ರಾವ್ ಅವರು ಕರ್ನಾಟಕದಲ್ಲಿ ಪ್ರಪಥಮವಾಗಿ ಮಂಗಳೂರಿನಲ್ಲಿ…

Read More

 ರಾಷ್ಟ್ರರಾಜಧಾನಿಯ ಹೃದಯಭಾಗ ಕೆಂಪು ಕೋಟೆ ಬಳಿ ಕಾರು ಸ್ಫೋಟವಾಗಿದೆ. ಈ ಘಟನೆಯಿಂದ ಹತ್ತಿರದ ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಮಾಹಿತಿ ಪ್ರಕಾರ ದುರಂತದಲ್ಲಿ ಕನಿಷ್ಠ ಎಂಟು ಜನರು ಸಾವನ್ನಪ್ಪಿದ್ದಾರೆ ಮತ್ತು 11 ಜನರು ಗಾಯಗೊಂಡಿದ್ದಾರೆ. ಸ್ಫೋಟದ ರಭಸಕ್ಕೆ ಮೃತದೇಹಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ಆರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಹಿರಿಯ ಅಧಿಕಾರಿಗಳು ಸಹ ಸ್ಥಳಕ್ಕೆ ದೌಡಾಯಿಸಿದ್ದು, ಘಟನೆ ಕಾರಣ ಏನೆಂದು  ತನಿಖೆ ನಡೆಯುತ್ತಿದೆ. ಸ್ಫೋಟದ ಪರಿಣಾಮವಾಗಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಕನಿಷ್ಠ ಆರು ವಾಹನಗಳು ಮತ್ತು ಹತ್ತಿರದಲ್ಲಿ ನಿಲ್ಲಿಸಿದ್ದ ಮೂರು ಆಟೋರಿಕ್ಷಾಗಳು ಸುಟ್ಟುಹೋಗಿವೆ. ದೆಹಲಿಯಲ್ಲಿ ಸ್ಫೋಟ ಸಂಭವಿಸಿದ ಬೆನ್ನಲ್ಲೇ ವಾಣಿಜ್ಯ ನಗರಿ ಮುಂಬೈ, ಉತ್ತರ ಪ್ರದೇಶ ಹಾಗೂ ಕರ್ನಾಟಕದ ಬೆಂಗಳೂರಿನಲ್ಲೂ ಹೈಅಲರ್ಟ್‌ ಘೋಷಣೆ ಮಾಡಲಾಗಿದೆ. ಅಧಿಕಾರಿಗಳು ರಾಜಧಾನಿಯಾದ್ಯಂತ ಭದ್ರತೆಯನ್ನು ಬಿಗಿಗೊಳಿಸಿದ್ದಾರೆ, ತನಿಖೆ ಮುಂದುವರಿದಂತೆ ಎಲ್ಲಾ ಮೆಟ್ರೋ ನಿಲ್ದಾಣಗಳು ಮತ್ತು ಪ್ರಮುಖ ಸಾರ್ವಜನಿಕ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.  ಕೂಡಲೇ ಠಾಣಾ ವ್ಯಾಪ್ತಿಯಲ್ಲಿ ಗಸ್ತು ತಿರುಗುವಂತೆ…

Read More

ಸುರತ್ಕಲ್: ರಂಗಚಾವಡಿ ಮಂಗಳೂರು ಸಾಂಸ್ಕೃತಿಕ ಸಾಂಸ್ಕೃತಿಕ ಸಂಘಟನೆ ಮತ್ತು ಸುಭಾಷಿತನಗರ ರೆಸಿಡೆಂಟ್ಸ್ ವೆಲ್ ಫೇರ್ ಅಸೋಸಿಯೇಶನ್ (ರಿ) ಸುರತ್ಕಲ್ ಇದರ ಆಶ್ರಯದಲ್ಲಿ ನಡೆದ ರಂಗಚಾವಡಿ ರಜತ ಸಂಭ್ರಮ ಮತ್ತು ರಂಗುರಂಗಿನ ರಂಗೋತ್ಸವ ಕಾರ್ಯಕ್ರಮ ಸುರತ್ಕಲ್ ಬಂಟರ ಭವನದಲ್ಲಿ ಜರಗಿತು. ಕಾರ್ಯಕ್ರಮವನ್ನು ಮಂಬೈ ವಿ ಕೆ ಸಮೂಹ ಸಂಸ್ಥೆಯ ಚೆಯರ್ ಮ್ಮಾನ್ ಮಧ್ಯಗುತ್ತು ಕರುಣಾಕರ ಎಂ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಕೆ ಅಜಿತ್ ಕುಮಾರ್ ರೈ ಮಾಲಾಡಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಉದ್ಘಾಟಿಸಿದರು. ಅಜಿತ್ ಕುಮಾರ್ ರೈ ಮಾಲಾಡಿ ಮಾತನಾಡಿ ರಂಗಚಾವಡಿ ಸಂಸ್ಥೆ ಕಲಾವಿದರನ್ನು ಪ್ರೋತ್ಸಾಹಿಸುತ್ತಾ ಬಂದಿರುವ ಸಂಸ್ಥೆ. ಅನೇಕ ಕಲಾವಿದರನ್ನು ಗುರುತಿಸಿ ನಾಡಿಗೆ ಪರಿಚಯಿಸಿದ ಕೀರ್ತಿ ರಂಗಚಾವಡಿ ಸಂಸ್ಥೆಗೆ ಸಲ್ಲುತ್ತದೆ. ಮುಂದಿನ ದಿನಗಳಲ್ಲಿ ರಂಗಚಾವಡಿ ಅಕಾಡೆಮಿಯನ್ನಾಗಿ ರಚಿಸಿ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡುವಂತಾಗಲಿ ಎಂದು ಶುಭ ಹಾರೈಸಿದರು. ಮಧ್ಯಗುತ್ತು ಕರುಣಾಕರ ಎಂ ಶೆಟ್ಟಿ ಮಾತನಾಡಿ ರಂಗಚಾವಡಿ ಸಂಸ್ಥೆ ರಜತ ಸಂಭ್ರಮವನ್ನು…

Read More

ದೇರಳಕಟ್ಟೆ : ಡ್ರಗ್ ಪೆಡ್ಲಿಂಗ್ ನಲ್ಲಿ ತೊಡಗಿದ್ದ ವೈದ್ಯಕೀಯ ವಿದ್ಯಾರ್ಥಿ ಸೇರಿದಂತೆ ಮೂವರನ್ನು ಉಳ್ಳಾಲ ಪೊಲೀಸರು ಕೋಟೆಕಾರು ಗ್ರಾಮದ ಬಗಂಬಿಲ ಗ್ರೌಂಡ್ ಮತ್ತು ಪೆರ್ಮನ್ನೂರು ಗ್ರಾಮದ ಗಂಡಿ ಎಂಬಲ್ಲಿ0ದ ಬಂಧಿಸಿದ್ದಾರೆ. ಆರೋಪಿಗಳಿಂದ ಒಟ್ಟು ರೂ.59,300 ಬೆಲೆಬಾಳುವ ನಿಷೇಧಿತ 1 ಕೆ.ಜಿ 511 ಗ್ರಾಂ ತೂಕದ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ 2 ತೂಕ ಮಾಪನ, 2 ಮೊಬೈಲ್, 1 ಸ್ಕೂಟರ್ ಹಾಗೂ ಇತರೆ ವಸ್ತುಗಳನ್ನು ಪಡೆದುಕೊಂಡಿದ್ದಾರೆ.ಖಾಸಗಿ ಆಯುರ್ವೇದ ಕಾಲೇಜಿನಲ್ಲಿ ಬಿಎಎಂಎಸ್ ವಿದ್ಯಾರ್ಥಿ ಆಗಿರುವ ಮಹಾರಾಷ್ಟç ದುಲೆ ನಿವಾಸಿ ಮೊಹಮ್ಮದ್ ನಿಗಾರೀಸ್(22) ವಿಲಾಸಿ ಜೀವನಕ್ಕಾಗಿ ತನ್ನ ಊರಿನಿಂದ ಗಾಂಜಾ ತಂದು ಹಣಕ್ಕಾಗಿ ಗಿರಾಕಿಗಳಿಗೆ ಮಾರಾಟ ಮಾಡುತ್ತಿದ್ದನು. ನ.9 ರಂದು ಪೊಲೀಸರು ದಾಳಿ ನಡೆಸಿ ಬಗಂಬಿಲ ಗ್ರೌಂಡಿನಿAದ ಬಂಧಿಸಿದ್ದಾರೆ. ಈತನ ವಿರುದ್ಧ ಕಲಂ 8(ಸಿ), 20(ಬ) ಎನ್ ಡಿಪಿಎಸ್ ಆಕ್ಟ್ 1985 ರೀತಿಯಡಿ ಪ್ರಕರಣ ದಾಖಲಿಸಲಾಗಿದೆ. ಇನ್ನೊಂದು ಪ್ರಕರಣದಲ್ಲಿ ನಾಟೆಕಲ್ ಉರುಮಣೆ ನಿವಾಸಿ ಅಬ್ದುಲ್ ಶಕೀಬ್ ಯಾನೆ ಶಾಕಿ (22) ಮತ್ತು ಪೆರ್ಮನ್ನೂರು ಗಂಡಿ…

Read More

‘ಅಮೃತವರ್ಷಿಣಿ’ ಧಾರಾವಾಹಿಯ ರಜಿನಿ ಕಿರುತೆರೆ ವೀಕ್ಷಕರಿಗೆ ಚಿರಪರಿಚಿತರು. ಅವರು ಈಗ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಅರುಣ್ ಅವರ ಜೊತೆ ವಿವಾಹ ಆಗಿದ್ದಾರೆ. ಆಪ್ತರು ಬಂದು ಅವರಿಗೆ ಹಾರೈಸಿದ್ದಾರೆ. ಅರುಣ್ ಹಾಗೂ ರಜಿನಿ ಮಧ್ಯೆ ತುಂಬಾನೇ ಹಳೆಯ ಪರಿಚಯ ಇದೆ. ಇವರು ಕಳೆದ ಎರಡು ವರ್ಷಗಳಿಂದ ಒಟ್ಟಾಗಿ ರೀಲ್ಸ್ ಮಾಡುತ್ತಿದ್ದರು. ಅವರ ರೀಲ್ಸ್​ಗಳು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದ್ದವು. ಈ ಮೊದಲು ‘ನಿಮ್ಮಿಬ್ಬರ ಮಧ್ಯೆ ಪ್ರೀತಿ ಇದೆಯೇ’ ಎಂದು ಕೇಳಿದಾಗ ರಜಿನಿ ಅವರು ಅಡ್ಡಗೋಡೆಯ ಮೇಲೆ ದೀಪ ಇಟ್ಟಿದ್ದರು. ‘ನಾವಿಬ್ಬರೂ ಫ್ರೆಂಡ್ಸ್ ಅಷ್ಟೇ. ಗೆಳೆಯರನ್ನೇ ಮದುವೆ ಆದರೂ ಬೆಸ್ಟ್. ಅವರಿಗೆ ನಮ್ಮ ಕಷ್ಟ ಸುಖ ಗೊತ್ತಿರುತ್ತದೆ’ ಎಂದು ರಜಿನಿ ಹೇಳಿದ್ದರು.ಇಂದು ನಡೆದ ಮದುವೆಯಲ್ಲಿ ಆಪ್ತರು, ಗೆಳೆಯರು, ಕುಟುಂಬದವರು ಹಾಜರಿ ಹಾಕಿದ್ದರು. ಅರುಣ್ ಹಾಗೂ ರಜಿನಿ ವಿವಾಹದ ಫೋಟೋಗಳನ್ನು ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಈ ಫೋಟೋಗಳು ಗಮನ ಸೆಳೆಯುವ ರೀತಿಯಲ್ಲಿ ಇದೆ.ರಜಿನಿ ಹಾಗೂ ಅರುಣ್ ಅವರದ್ದು ಪ್ರೇಮ ವಿವಾಹ. ಮನೆಯವರ ಒಪ್ಪಿಗೆ ಪಡೆದ…

Read More