Author: UllalaVani

Kannada News From Coastal Karnataka

ನವದೆಹಲಿ, ನ. 13 ; ದೆಹಲಿಯ ಕೆಂಪು ಕೋಟೆ ಬಳಿ ನ.10ರಂದು ಕಾರ್ ಬಾಂಬ್ ಸ್ಫೋಟ ಮಾಡಿದ್ದು ಡಾ. ಉಮರ್ ಎನ್ನುವುದು ಅಧಿಕೃತವಾಗಿ ದೃಢಡಪಟ್ಟಿದೆ. ಐ20 ಕಾರನ್ನು ಚಲಾಯಿಸಿದ ವ್ಯಕ್ತಿ ಉಮರ್ ಎಂದು ತನಿಖಾಧಿಕಾರಿಗಳು ಮೊದಲೇ ಶಂಕಿಸಿದ್ದರು. ಹೀಗಿದ್ದರೂ ಮುಂದೆ ಚಾರ್ಜ್ಶೀಟ್ ಸಲ್ಲಿಕೆ ಮಾಡುವಾಗ ಮೃತ ವ್ಯಕ್ತಿ ಉಮರ್ ಎನ್ನುವುದಕ್ಕೆ ವೈಜ್ಞಾನಿಕ ದಾಖಲೆಯ ಅಗತ್ಯ ಇತ್ತು. ಹೀಗಾಗಿ ಪುಲ್ವಾಮಾದಲ್ಲಿರುವ ಉಮರ್ ತಾಯಿಯ ಡಿಎನ್‌ಎ ಮಾದರಿಯನ್ನೂ ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿತ್ತು.ಸ್ಫೋಟದ ಬಳಿಕ ಉಮರ್ ಕಾಲು ಸ್ಟೀರಿಂಗ್ ವೀಲ್ ಮತ್ತು ಆಕ್ಸಿಲರೇಟರ್ ನಡುವೆ ಸಿಲುಕಿಕೊಂಡಿತ್ತು. ಡಿಎನ್‌ಎ ಮಾದರಿ ಉಮರ್ ತಾಯಿಯ ಮಾದರಿಯೊಂದಿಗೆ ಹೊಂದಿಕೆಯಾಗಿದೆ ಎಂದು ದೆಹಲಿ ಪೊಲೀಸರ ಮೂಲಗಳಿಂದ ತಿಳಿದುಬಂದಿದೆ.ಇನ್ನು ಸ್ಫೋಟಕ್ಕೆ ಸಂಬಂಧಿಸಿದಂತೆ ಎನ್‌ಐಎ ತನಿಖೆ ಚುರುಕುಗೊಳಿಸಿದ್ದು, ಬುಧವಾರ ಅಧಿಕಾರಿಗಳು ಸ್ಫೋಟಗೊಂಡಿದ್ದ ಕಾರು ಹೊರತಾಗಿ ದೆಹಲಿಗೆ ಎಂಟ್ರಿಯಾಗಿದ್ದ ಇನ್ನೊಂದು ಕಾರನ್ನು ವಶಪಡಿಸಿಕೊಂಡಿದ್ದಾರೆ. ಸ್ಫೋಟಕ್ಕೂ ಮುನ್ನ ದೆಹಲಿಗೆ ಉಗ್ರರ ಎರಡು ಕಾರುಗಳು ಎಂಟ್ರಿಯಾಗಿದ್ದವು ಎಂದು ತನಿಖೆಯಿಂದ ತಿಳಿದುಬಂದಿದೆ.ಈ ಎರಡು ಕಾರುಗಳ ಪೈಕಿ ಕೆಂಪುಕೋಟೆ ಬಳಿ ಒಂದು ಕಾರು…

Read More

ಮುಡಿಪು;ಕುರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಗ್ರಸಾಲೆ ಕೊರಗಲೋಟ್ಟು ರಸ್ತೆ, ಸೀಗೆದಡಿ ಮಧ್ಯನಡ್ಕ ರಸ್ತೆ, ಮಾಲೆಮಾರ್ ಹೂವಿನಕೊಪ್ಪಲ ಕುರ್ನಾಡು ಮುಖ್ಯರಸ್ತೆಗೆ ಶಿಲನ್ಯಾಸವನ್ನು ಸ್ಪೀಕರ್ ಯು.ಟಿ.ಖಾದರ್ ನೆರವೇರಿಸಿದ್ರು. ಕುರ್ನಾಡು ದತ್ತಾತ್ರೇಯ ಅನುದಾನಿತ ಪ್ರಾಥಮಿಕ ಶಾಲೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ, ಕುರ್ನಾಡು ಗ್ರಾಮಾಭಿವೃದ್ಧಿಗಾಗಿ 1.90 ಕೋಟಿ ಅನುದಾನ ಮಂಜೂರಾಗಿದೆ. ಶಾಸಕರಾಗಿ ಮಾತ್ರವಲ್ಲ, ಸಭಾಧ್ಯಕ್ಷನಾಗಿ ನನ್ನ ಶಕ್ತಿಮೀರಿದ ಪ್ರಯತ್ನದ ಫಲವಾಗಿ ಈ ಎಲ್ಲ ಕೆಲಸಗಳು ಶಾಶ್ವತವಾಗಿ ನಡೆಯುತ್ತಿವೆ. ಎಲ್ಲ ವರ್ಗದವರನ್ನೂ ಒಳಗೊಂಡ ಅಭಿವೃದ್ದಿಯೇ ನಮ್ಮ ಉದ್ದೇಶ. ಪ್ರತಿಯೊಂದು ಪ್ರದೇಶವನ್ನೂ ಗುರುತಿಸಿ ಅಭಿವೃದ್ಧಿಪಡಿಸುವ ಕಾರ್ಯ ನಡೆಯುತ್ತಿದೆ. ಮಿತ್ತಕೋಡಿಯಿಂದ ಬೋಳಿಯಾರ್‌ವರೆಗೆ ಸಂಪರ್ಕ ರಸ್ತೆಯು ಮೊದಲು ಕಷ್ಟಕರವಾಗಿತ್ತು, ಕ್ರಶರ್ ಜಲ್ಲಿ ಇರುವುದರಿಂದ ಸಂಚಾರ ಅಸಾಧ್ಯವಾಗಿತ್ತು. ಆದರೆ ಈಗ ಆರ್ಕಾನ-ಮಿತ್ತಕೋಡಿಬೋಳಿಯಾರ್ ಮಾರ್ಗಕ್ಕೆ 6 ಕೋಟಿ ಅನುದಾನ ಬಿಡುಗಡೆಗೊಂಡಿದ್ದು, ಟೆಂಡರ್ ಹಂತದಲ್ಲಿದೆ.ಕೆದುಂಬಾಡಿ–ಮೂರುಗೋಳಿ–ತೌಡುಗೋಳಿ ರಸ್ತೆ ನಿರ್ಮಾಣಕ್ಕೂ ₹30 ಲಕ್ಷ ಬಿಡುಗಡೆಗೊಂಡಿದೆ. ಅತ್ಯುತ್ತಮ ಮಾದರಿ ಗ್ರಾಮದ ರೂಪದಲ್ಲಿ ಕುರ್ನಾಡು ಅಭಿವೃದ್ಧಿಯಾಗುತ್ತಿದೆ. ಕುಡಿಯುವ ನೀರಿಗಾಗಿ ಜೆಜೆಎಂ (Jal Jeevan Mission) ಅಡಿ ಟ್ಯಾಂಕ್‌ಗಳು…

Read More

ಜನರು ಎಷ್ಟೇ ಉಗಿದು ಉಪ್ಪಿನಕಾಯಿ ಹಾಕಿದ್ರೂ ರಸ್ತೆಯಲ್ಲಿ ಗುಂಡಿ ನಿರ್ಮಿಸುವುದನ್ನ ಮಾತ್ರ ಇವರು ಬಿಡುವ ತರ ಕಾಣುತ್ತಿಲ್ಲ. ಇದೀಗ ದೇರಳಕಟ್ಟೆಯಲ್ಲಿ ಒಂದು ವಾರದ ಹಿಂದೆ ಅಷ್ಟೇ ಹಾಕಿದ್ದ ಇಂಟರ್ ಲಾಕ್‌ನ್ನು ತೆರವುಗೊಳಿಸಲಾಗಿದೆ. ಹೌದು, ಬೆಳ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯ ದೇರಳಕಟ್ಟೆ ಸಿಟಿ ವಾರ್ಡಿನ ದೇರಳಕಟ್ಟೆ ಜಂಕ್ಷನ್ ಮುಖ್ಯ ರಸ್ತೆಯ ಬದಿಯಲ್ಲಿ ಇತ್ತೀಚೆಗೆ ಇಂಟರ್ಲಾಕ್ ಹಾಕಿ ಸುಂದರಗೊಳಿಸಲಾಗಿತ್ತು. ಇದೀಗ ಪುನಃ ಕುಡಿಯುವ ನೀರಿನ ಪೈಪ್ ಲೈನ್ ಗಾಗಿ ಈಗಾಗಲೇ ಹಾಕಿದ್ದ ಇಂಟರ್ಲಾಕ್ ಅನ್ನು ಅಗೆದು ಹೊಂಡಗಳು ನಿರ್ಮಾಣಗೊಂಡಿದೆ. ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಸಿದ ಬಳಿಕ ಇಂಟರ್ಲಾಕ್ ಹಾಕುವುದನ್ನು ಬಿಟ್ಟು ತರಾತುರಿಯಲ್ಲಿ ಇಂಟರ್ಲಾಕ್ ಹಾಕುವ ಪ್ರಮೇಯವೇನಿತ್ತು? ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಇದರ ಜೊತೆಗೆ ತೆರಿಗೆ ಹಣವನ್ನು ಪೋಲು ಮಾಡಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.

Read More

ಉಳ್ಳಾಲ, ನ; 12: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾಗಿರುವ ಉಳ್ಳಾಲದ ಮಾರುತಿ ಜನಸೇವಾ ಸಂಘ (ರಿ.),ಮಾರುತಿ ಯುವಕ ಮಂಡಲ (ರಿ) ವತಿಯಿಂದ ಮಾರುತಿ ಮಾಣಿಕ್ಯ ಮಹೋತ್ಸವ -2025ರ ಅಂಗವಾಗಿ ಉಳ್ಳಾಲದ ಭಾರತ್ ಪ್ರೌಢ ಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಯಿತು. ಅತಿಥಿ ಗಣ್ಯರು, ಸಂಘದ ಪದಾಧಿಕಾರಿಗಳು ಸೇರಿದಂತೆ ಸದಸ್ಯರು ವಿವಿಧ ರೀತಿ ಗಿಡಗಳನ್ನು ನೆಟ್ಟು ಸಂಭ್ರಮಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು ಮಾತನಾಡಿ, ಇಂತಹ ಕಾರ್ಯಕ್ರಮಗಳ ಅವಶ್ಯಕತೆ ಮಕ್ಕಳಿಗೆ ಇದೆ. ವನಮಹೋತ್ಸವದ ಅರಿವು ವಿದ್ಯಾರ್ಥಿಗಳಲ್ಲಿ ಮೂಡಿಸಲು ಈ ಕಾರ್ಯಕ್ರಮ ಉಪಯುಕ್ತವಾಗಿದೆ ಎಂದು ಅಭಿಪ್ರಾಯಪಟ್ಟರು. ಪ್ರಶಸ್ತಿ ಪುರಸ್ಕೃತ ಪರಿಸರ ಪ್ರೇಮಿ ಮಾಧವ ಉಳ್ಳಾಲ್ ಮಾತನಾಡಿ, ಒಂದು ಸಂಸ್ಥೆಯ ಬೆಳವಣಿಗೆ ಇಡೀ ವಿಶ್ವಕ್ಕೆ ತಿಳಿಯುವುದು ಪ್ರಕೃತಿಯ ಜೋಡಣೆಯಿಂದ ಮಾತ್ರ. ಮುಂದಿನ ದಿನಗಳಲ್ಲಿ ನಾವು ನೆಟ್ಟ ಗಿಡಗಳು ಫಲವನ್ನು ಕೊಡಲು ಆರಂಭಿಸುತ್ತದೆ. ಇಂದು ಇಡೀ ವಿಶ್ವಕ್ಕೆ ಬೇಕಾಗಿರುವುದು ಪ್ರಕೃತಿ. ಹಾಗಾಗಿ ಮಾರುತಿ ಮಾಣಿಕ್ಯ ತಂಡದ ಕಾರ್ಯ ಶ್ಲಾಘನೀಯ ಎಂದರು. ಈ ಸಂದರ್ಭ ಫುಟ್‌ಬಾಲ್ ತರಬೇತಿದಾರ ಸಮಾಜ ಸೇವಕ…

Read More

ನವದೆಹಲಿಯ ಹರಿನಗರದಲ್ಲಿರುವ ಮಹಾಶಯ ಚುನಿ ಲಾಲ್ ಸರಸ್ವತಿ ಬಾಲ್ ಮಂದಿರಲ್ಲಿ ಬ್ಯಾಡ್ಮಿಂಟನ್ ಟೂರ್ನಮೆಂಟ್ ನಡೆಯುತ್ತಿದ್ದು, ಅಂಬಿಕಾ ಪದವಿ ಪೂರ್ವ ವಿದ್ಯಾಲಯದ 5 ವಿದ್ಯಾರ್ಥಿಗಳು ಸ್ಪರ್ಧಿಸಲು ಹೊರಟಿದ್ದಾರೆ. ಹೌದು, ಅಕ್ಷಜ್ ರೈ, ಆರ್ಯನ್ ಆರ್, ಎಸ್.ಅಖಿಲ್, ಸೂರ್ಯ ಪಿ ನಡಿಗೆ, ಬಿ.ಆರ್. ಸೂರ್ಯ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಸ್ಪರ್ಧಿಸಲಿದ್ದಾರೆ. ಇನ್ನು ಮಹಿಳೆಯರ ವಿಭಾಗದಲ್ಲಿ ವಿವೇಕಾನಂದ ಪಿ.ಯು. ಕಾಲೇಜಿನ ಹಾಗೂ ಮಂಗಳೂರಿನ ಶಾರದಾ ವಿದ್ಯಾಲಯದ ವಿದ್ಯಾರ್ಥಿನಿಯರು ಭಾಗವಹಿಸಲಿದ್ದಾರೆ. 14-19 ವಿಭಾಗದ ಬ್ಯಾಡ್ಮಿಂಟನ್ ಸ್ಪರ್ದೆಯಲ್ಲಿ ಆರಾಧ್ಯ, ಸಿರಿ, ಶಾನ್ವಿ, ಅನ್ವಿಕಾ ರಾಜ್, ನೇಹಾಶ್ರೀ, ಸಮನ್ವಿತ, ಭೂಮಿಕಾ, ಪುಲಕಿತ ಭಾಗಿಯಾಗಲಿದ್ದಾರೆ. ಈಗಾಗಲೇ ಈ ಎಲ್ಲಾ ವಿದ್ಯಾರ್ಥಿಗಳು ನವದೆಹಲಿಯತ್ತ ಪಯಣ ಬೆಳೆಸಿದ್ದು, ಟೂರ್ನಮೆಂಟ್‌ನಲ್ಲಿ ಭಾಗಿಯಾಗಿ ಬಳಿಕ ನ. 14 ರಂದು ವಾಪಾಸ್ಸಾಗಲಿದ್ದಾರೆ. ಉತ್ತಮ ಕ್ರೀಡಾಪಟುಗಳಾದ ವಿದ್ಯಾರ್ಥಿಗಳು ವಿಜೇತರಾಗಿ ಪದಕಗಳನ್ನು ಗಳಿಸಿ, ತಾವು ವಿದ್ಯಾರ್ಜನೆ ಪಡೆಯುತ್ತಿರುವ ಸಂಸ್ಥೆಗೆ ಹೆಸರನ್ನು ತಂದು ಕೊಡಲಿ ಎಂಬುವುದು ಎಲ್ಲರ ಆಶಯ.

Read More

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಪಂಜಿಮೊಗರು ಶಾಖೆಯ ಒಂಬತ್ತನೇ ವಾರ್ಷಿಕೋತ್ಸವದ ಪ್ರಯುಕ್ತ ಗ್ರಾಹಕರ ಸಭೆಯು ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಅಧ್ಯಕ್ಷತೆಯಲ್ಲಿ ಪಂಜಿಮೊಗರು ಶಾಖೆಯಲ್ಲಿ ಜರುಗಿತು. ಕಾರ್ಯಕ್ರಮವನ್ನು ಸಂಘದ ಸದಸ್ಯರುಗಳಾದ, ಜಗದೀಶ್ ಸನಿಲ್, ಶ್ರೀಧರ್ ಪೂಜಾರಿ,ದಯಾನಂದ ಕುಮಾರ್, ಗಣೇಶ್ ಸನಿಲ್ ಹಾಗೂ ಮೋಲಿ ಫೇರ್ನಾಂಡಿಸ್ ರವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದರು. ಸಂಘದ ಸದಸ್ಯರಾದ ಕನಕದಾಸ್ ರವರು ಮಾತನಾಡಿ “ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಬ್ಯಾಂಕಿAಗ್ ಸೇವೆಯ ಜೊತೆಯಲ್ಲಿ ಶೀಘ್ರಗತಿಯಲ್ಲಿ ಇ-ಸ್ಟಾಂಪಿOಗ್ ಸೇವೆಯನ್ನು ನೀಡುತ್ತಿರುವುದು ಶ್ಲಾಘನೀಯ. ಹಾಗೂ ಸಂಘದ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು”. ಸದಸ್ಯರಾದ ಫಾತಿಮತುಲ್ ಜೋಹರ ರವರು ಮಾತನಾಡಿ “ಸಂಘದ ಸಿಬ್ಬಂದಿಗಳ ನಗುಮೊಗದ ಗ್ರಾಹಕ ಸ್ನೇಹಿ ಸೇವೆಯಿಂದಾಗಿ ಸಂಘವು ಅಭಿವೃದ್ದಿ ಹೊಂದುತ್ತಿದೆ ಎಂದು ಸಂತೋಷ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ರವರು ಮಾತನಾಡಿ, “ಸಂಘದ ಪಂಜಿಮೊಗರು ಶಾಖೆಯು 9ನೇ ವರ್ಷದ ಸಂಭ್ರಮದೊAದಿಗೆ ಮುನ್ನಡೆಯುತ್ತಿದೆ. ಠೇವಣಿ ಸಂಗ್ರಹಣೆಯೊOದಿಗೆ ಸಾಲ…

Read More

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಮುಲ್ಕಿ ಶಾಖೆಯ 13ನೇ ವಾರ್ಷಿಕೋತ್ಸವದ ಪ್ರಯುಕ್ತ ಗ್ರಾಹಕರ ಸಭೆಯು ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ರವರ ಅಧ್ಯಕ್ಷತೆಯಲ್ಲಿ ಮುಲ್ಕಿ ಶಾಖೆಯಲ್ಲಿ ಜರುಗಿತು. ಕಾರ್ಯಕ್ರಮವನ್ನು ಸಂಘದ ಸದಸ್ಯರುಗಳಾದ ಶೀನ ಪೂಜಾರಿ, ಎಚ್. ವಾಸು ಪೂಜಾರಿ, ಸರೋಜಿನಿ, ಕುಶಾಲ ಎಸ್. ಕುಕ್ಯಾನ್ ಹಾಗೂ ಪ್ರಕಾಶ್ ಸುವರ್ಣ ರವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದರು. ಸದಸ್ಯರಾದ ಶೀನ ಪೂಜಾರಿಯವರು ಮಾತನಾಡಿ “ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಅವರ ಮುಂದಾಳತ್ವದಲ್ಲಿ ನಿರಂತರವಾಗಿ ಲಾಭ ಗಳಿಸುತ್ತಾ ಬರುತ್ತಿದೆ. ಸತತವಾಗಿ ಸದಸ್ಯರಿಗೆ ಡಿವಿಡೆಂಟ್ ನೀಡುತ್ತಿದ್ದು, ಕಳೆದ ಆರ್ಥಿಕ ಸಾಲಿನಲ್ಲಿ ಗ್ರಾಹಕರಿಗೆ ಶೇ.15 ಡಿವಿಡೆಂಡ್ ನೀಡಿರುವುದು ಸಂಘದ ಆರ್ಥಿಕ ಪ್ರಗತಿಯ ಸಂಕೇತವಾಗಿದೆ. ಸಂಘವೂ ಇನ್ನೂ ಹೆಚ್ಚಿನ ಅಭಿವೃದ್ದಿಯನ್ನು ಹೊಂದಲಿ” ಎಂದು ಶುಭ ಹಾರೈಸಿದರು ಸದಸ್ಯರಾದ ಹರಿಶ್ಚಂದ್ರ ಪಿ ಸಾಲ್ಯಾನ್ ಮಾತನಾಡಿ, “ಸಂಘವು ಪ್ರಾರಂಭಗೊ0ಡ ಅತೀ ಕಡಿಮೆ ಅವಧಿಯಲ್ಲಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್…

Read More

ಫರಿದಾಬಾದ್ ಸ್ಫೋಟಕ ಪ್ರಕರಣಕ್ಕೆ ಸಂಬAಧಿಸಿದoತೆ ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಮೌಲ್ವಿ ದಂಪತಿಯನ್ನು ಜಂಟಿ ಭದ್ರತಾ ಪಡೆಗಳು ಬಂಧಿಸಿವೆ. ಶ್ರೀನಗರ ಪೊಲೀಸ್ & ಕೌಂಟರ್ ಇಂಟಲಿಜೆನ್ಸ್ ಕಾಶ್ಮೀರ ಜಂಟಿ ಕಾರ್ಯಾಚರಣೆ ನಡೆಸಿ, ಮೌಲ್ವಿ ಇಮಾಮ್ ಇರ್ಫಾನ್ ಅಹ್ಮದ್ ವಾಗೆಯನ್ನು ಬಂಧಿಸಿವೆ. ಆರೋಪಿ ಮನೆಯಿಂದ ಐದು ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆತನ ಪತ್ನಿಯನ್ನು ಶಂಕಿತ ಮೂಲಭೂತವಾದ ಸಂಪರ್ಕದ ಮೇಲೆ ಬಂಧಿಸಲಾಗಿದೆ. ಮೌಲ್ವಿಯ ವಿಚಾರಣೆ ನಡೆಸಿದಾಗ ಮುಜಮ್ಮಿಲ್ ನಂಟು ಪತ್ತೆಯಾಗಿದೆ. ಇರ್ಫಾನ್ ಅಹ್ಮದ್ ವಾಗೆ, ‘ವೈಟ್-ಕಾಲರ್’ ಭಯೋತ್ಪಾದಕ ಮಾಡ್ಯೂಲ್‌ನ ಹಿಂದಿನ ಮಾಸ್ಟರ್ ಮೈಂಡ್ ಎಂದು ಶಂಕಿಸಲಾಗಿದೆ. ಆರೋಪಿಯು ವೈದ್ಯಕೀಯ ವೃತ್ತಿಪರರು ಮತ್ತು ವಿದ್ಯಾರ್ಥಿಗಳನ್ನು ಮೂಲಭೂತವಾದಿಗಳನ್ನಾಗಿ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪುಗಳಾದ ಜೈಶ್-ಎ-ಮೊಹಮ್ಮದ್ (ಜೆಇಎಂ) ಮತ್ತು ಅನ್ಸರ್ ಘಜ್ವತ್-ಉಲ್-ಹಿಂದ್ (ಎಜಿಯುಎಚ್) ಜೊತೆ ಸಂಪರ್ಕ ಹೊಂದಿದೆ ಎಂದು ಹೇಳಲಾಗಿದೆ.

Read More

ಕಡಬ; ಕಡಬ ನೂಜಿಬಾಳ್ತಿಲ ಗ್ರಾಮದ ಯುವಕನೋರ್ವ ಬೆಂಗಳೂರಿನ ಬಾಡಿಗೆ ರೂಂ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.ಮೃತನನ್ನು ಕಲ್ಲುಗುಡ್ಡೆ ನಿವಾಸಿ ಹಾಗೂ ಪ್ರಸ್ತುತ ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದ ಜುಬಿನ್ (25) ಎಂದು ಗುರುತಿಸಲಾಗಿದೆ. ಅವರು ವಿದೇಶಕ್ಕೆ ಹೋಗುವ ಸಿದ್ಧತೆ ನಡೆಸುತ್ತಿದ್ದರೆಂದು ತಿಳಿದುಬಂದಿದ್ದು, ಈ ನಡುವೆ ಆತ್ಮಹತ್ಯೆಗೆ ಶರಣಾಗಿದ್ದಾನೆ.ಆತ್ಮಹತ್ಯೆಯ ನಿಖರ ಕಾರಣ ತಿಳಿದುಬಂದಿಲ್ಲ, ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

Read More

ಪುತ್ತೂರು : ಶಾಸಕ ಅಶೋಕ್ ಕುಮಾರ್ ರೈ ಯವರ ಶಿಫಾರಸ್ಸಿನ ಮೇರೆಗೆ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಸೌಮ್ಯ ರೆಡ್ಡಿ ಅವರ ಆದೇಶದಂತೆ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧಕ್ಷೆ ಉಷಾ ಅಂಚನ್ ರವರು ಪುತ್ತೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ನ ಮಾಜಿ ಅಧ್ಯಕ್ಷರಾದ ಶಾರದಾ ಅರಸು ಇವರನ್ನು ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಳಿಸಿದ್ದಾರೆ.

Read More