ಉಳ್ಳಾಲ: ಇತ್ತೀಚೆಗೆ ಆಕಸ್ಮಿಕವಾಗಿ ಸಾವನ್ನಪ್ಪಿದ ಕುತ್ತಾರಿನ ಶ್ರೀ. ಜೈ ಹನುಮಾನ್ ಕ್ರೀಡಾ ಮಂಡಳಿಯ ಕ್ರೀಡಾ ಕಾರ್ಯದರ್ಶಿ , ಡಿವೈಎಫ್‌ಐ ಮುನ್ನೂರು ಘಟಕ ಸಮಿತಿ ಸದಸ್ಯ , ವಿನಾಯ ಫ್ರೆಂಡ್ಸ್ ನ ಸದಸ್ಯರಾಗಿದ್ದ ಯೋಗೀಶ್ ಕುತ್ತಾರ್ ಇವರಿಗೆ ಶ್ರದ್ಧಾಂಜಲಿ ಸಭೆ ತೇವುಲ ಕಾರ್ದಿ ಕಂಡದಲ್ಲಿ ನಡೆಯಿತು.ಕುತ್ತಾರು ಮುನ್ನೂರು ಪ್ರದೇಶದ ಯುವಜನ ವಲಯದಲ್ಲಿ ಬಾರೀ ಜನಾನುರಾಗಿಯಾಗಿ ಮತ್ತು ಸಾಮಾಜಿಕ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದರು. ಈ ಶ್ರದ್ಧಾಂಜಲಿ ಸಭೆಯಲ್ಲಿ ಯುವ ಜನ ಮುಖಂಡರುಗಳಾದ ಡಾ. ಜೀವನ್ ರಾಜ್ ಕಂಪ, ವಕೀಲ ನಿತಿನ್ ಕುತ್ತಾರ್. ಸಿಪಿಎಂ ಮುಖಂಡ ಕೃಷ್ಣಪ್ಪ ಸಾಲಿಯಾನ್. ವಿಶ್ವನಾಥ್ ತೇವುಲ ಶೇಖರ್ ಬಟ್ಟೆದಡಿ. ಸುನಿಲ್ ತೇವುಲ. ಕರುಣಾಕರ ಕಂಪ. ಮುನ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮಹಾಬಲ ಬಟ್ಟೆದಡಿ. ಪಂಚಾಯತ್ ಸದಸ್ಯರುಗಳಾದ ರಾಜೇಶ್ವರಿ. ಗಣೇಶ್ ಅಡ್ಯಂತಾಯ.ದಿವ್ಯಾರಾಜ್ ತೇವುಲ ಉಪಸ್ಥಿತರಿದ್ದರು.
Author: UllalaVani
ಉಳ್ಳಾಲ : ಶಿಕ್ಷಣವನ್ನು ತಮ್ಮ ಜೀವದಾಧಾರವಾಗಿ ಪರಿಗಣಿಸಿ. ಪರಿಸರಕ್ಕೆ ನಿಮ್ಮ ಹೃದಯ ಮತ್ತು ಪ್ರಯತ್ನವನ್ನು ಅರ್ಪಿಸಿ. ನಿಶಾರಾ ಶಾಲಾ ಬಳಗ ನಿಮ್ಮ ಅನುಭವದ ಶಕ್ತಿಯಾಗಿರಲಿ ಎಂದು ಹೈದ್ರೋಸ್ ಹಾಜಿ ಮೆಮೋರಿಯಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಹಾಗೂ ನಿಶಾರ ಸಮೂಹ ಸಂಸ್ಥೆಯ ಅಧ್ಯಕ್ಷರಾದ ಹಾಜಿ ಅಬ್ದುಲ್ ರಝಾಕ್ ಅಭಿಪ್ರಾಯಪಟ್ಟರು.ಅವರು ಹರೇಕಳ ಇಲ್ಲಿನ ನಿಶಾರ ಪಬ್ಲಿಕ್ ಸ್ಕೂಲ್ ನಲ್ಲಿ ಜರಗಿದ ಶಾಲಾ ಪ್ರಾರಂಭೋತ್ಸವವನ್ನು ಉದ್ಘಾಟಿಸಿ ಪರಿಸರ ದಿನಾಚರಣೆಯ ಅಂಗವಾಗಿ ಗಿಡವನ್ನು ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.ಶಾಲಾ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ ಕುರಿತ ಕಿರು ನಾಟಕ ಪ್ರದರ್ಶಿಸಿದರು. ರಾಹಿಯ ರುಕಯ್ಯಾ ಸನ್ಮಾನಿತರ ವಿವರ ನೀಡಿದರು. ನಿಶಾರ ಸಮೂಹ ಸಂಸ್ಥೆಯ ಆಡಳಿತ ಅಧಿಕಾರಿ ಜೀವನ್ ಪಿಂಟೋ, ಶಾಲಾ ಪ್ರಾಂಶುಪಾಲೆ ಶಾಂತಿ ಡಿಸೋಜ, ಪದವಿಪೂರ್ವ ಕಾಲೇಜು ಪ್ರಾಂಶುಪಾಲೆ ದೀಕ್ಷಿತಾ ರೈ ಉಪಸ್ಥಿತರಿದ್ದರು.ವಿದ್ಯಾರ್ಥಿನಿ ಝಕಿಯಾ ಪರಿಸರದ ಮಹತ್ವ ತಿಳಿಸಿದರು. ವಿದ್ಯಾರ್ಥಿನಿ ರಾಯಿಷಾ ಸ್ವಾಗತಿಸಿದರು. ತಸ್ಫಿಯಾ ನಿರೂಪಿಸಿದರು. ಶಾಹೀಮ್ ವಂದಿಸಿದರು.
ಮಂಗಳೂರು: ಮಳೆಗಾಲದಲ್ಲಿ ಸಂಭವಿಸುವ ಅವಘಡಗಳಿಗೆ ತಕ್ಷಣ ಸ್ಪಂದಿಸಬೇಕು. ಪರಿಹಾರ ಧನ ವಿತರಣೆಯಲ್ಲಿ ಯಾವ ಕಾರಣಕ್ಕೂ ವಿಳಂಬವಾಗಬಾರದು. ಹಾನಿ, ಅನಾಹುತಗಳಿಗೆ ಸ್ಪಂದಿಸದೆ ನಿರ್ಲಕ್ಷ್ಯ ತಾಳಿದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ನಗರದ ಪಡೀಲ್‌ನಲ್ಲಿರುವ ದ.ಕ.ಜಿಲ್ಲಾಧಿಕಾರಿ ಕಚೇರಿ ಪ್ರಜಾ ಸೌಧದ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಳೆದ ಬಾರಿ ಎಲ್ಲೆಲ್ಲಿ ಭೂಕುಸಿತ, ಗುಡ್ಡ ಜರಿತದಂತಹ ಅನಾಹುತ ಸಂಭವಿಸಿದೆಯೋ ಅಲ್ಲೆಲ್ಲಾ ಮುಂಜಾಗ್ರತೆ ವಹಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿತ್ತು. ಅನಾಹುತ ಸಂಭವಿಸಿದ ಬಳಿಕ ಎಚ್ಚೆತ್ತುಕೊಳ್ಳುವ ಬದಲು ಅದಕ್ಕಿಂತ ಮುಂಚೆಯೇ ಸೂಕ್ತ ಕ್ರಮ ಜರುಗಿಸಬೇಕು. ಮಳೆಗಾಲದಲ್ಲಿ ಸಂಭವಿಸುವ ಯಾವುದೇ ಹಾನಿ, ಅನಾಹುತಗಳ ಬಗ್ಗೆ ನಿರ್ಲಕ್ಷ್ಯ ತಾಳಬಾರದು. ಪರಿಹಾರ ಧನ ವಿತರಣೆಗೆ ನೆಪ ಹೇಳಬಾರದು. ಅಪಾಯದ ಅಂಚಿನಲ್ಲಿರುವ ಹಳೆಯ ಸೇತುವೆಗಳಲ್ಲಿ ವಾಹನ ಸಂಚಾರ ಯೋಗ್ಯವೇ ಎಂಬುದರ ಬಗ್ಗೆ ತಜ್ಞರ ವರದಿ ತಯಾರಿಸಬೇಕು. ಜಿಲ್ಲಾ ಮತ್ತು ತಾಲೂಕು ನಿಯಂತ್ರಣ ಕೊಠಡಿಗಳು ದಿನದ…
ಮಂಗಳೂರು : ದ.ಕ.ಜಿಲ್ಲೆಯಲ್ಲಿ ಮಾದಕ ವಸ್ತುಗಳ ಬಳಕೆ ಮತ್ತು ಮಾರಾಟ ತಡೆಯುವ ಉದ್ದೇಶದಿಂದ ಮಾದಕ ವಸ್ತುಗಳ ಪರೀಕ್ಷೆಗೆ ಬೆಂಗಳೂರಿಗೆ ಕಳುಹಿಸುವ ಬದಲು ಜಿಲ್ಲಾಸ್ಪತ್ರೆಗಳಲ್ಲೇ ಪರೀಕ್ಷೆ ನಡೆಸಲು ಚಿಂತನೆ ನಡೆಸಲಾಗುತ್ತಿದೆ ಎಂದು ರಾಜ್ಯ ಆರೋಗ್ಯ ಮತ್ತು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ನಗರದ ಪಡೀಲ್‌ನಲ್ಲಿರುವ ದ.ಕ.ಜಿಲ್ಲಾಧಿಕಾರಿಗಳ ಕಚೇರಿ ಪ್ರಜಾಸೌಧದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ದಿನನಿತ್ಯ ಹೊಸ ಹೊಸ ರೀತಿಯ ಮಾದಕ ವಸ್ತುಗಳು ಬರುತ್ತಿದೆ. ಅದನ್ನು ಬೆಂಗಳೂರಿಗೆ ಹೋಗಿ ಪರೀಕ್ಷೆ ಮಾಡಿಸಿಕೊಂಡು ಬರಬೇಕಾದ ಅನಿವಾರ್ಯತೆ ಇದೆ. ಇದು ವರದಿಯ ವಿಳಂಬಕ್ಕೆ ಕಾರಣವಾಗುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲಾಸ್ಪತ್ರೆಯಲ್ಲೇ ಆಹಾರ ಮತ್ತು ಮಾದಕ ವಸ್ತುಗಳ ಪರೀಕ್ಷೆಗೆ ಚಿಂತನೆ ಮಾಡುತ್ತಿದ್ದೇವೆ ಎಂದು ಹೇಳಿದರು. ಕಾನೂನುಗಳನ್ನು ಮತ್ತಷ್ಟು ಬಿಗಿ ಮಾಡುವುದರೊಂದಿಗೆ ಆರೋಗ್ಯ ಮತ್ತು ಪೊಲೀಸ್ ಇಲಾಖೆ ಹಾಗೂ ವೈದ್ಯಕೀಯ ಕಾಲೇಜು, ಶಿಕ್ಷಣ ಸಂಸ್ಥೆಗಳ ಜೊತೆ ಕಾರ್ಯಕ್ರಮ ರೂಪಿಸಲಾಗುತ್ತದೆ. ಯುವಜನತೆ ಮಾದಕ ವ್ಯಸನದ ದಾಸರಾಗುತ್ತಿರುವುದು ಕಳವಳಕಾರಿ ವಿಚಾರವಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆ ಗಳಲ್ಲಿ ಕೌನ್ಸೆಲಿಂಗ್…
ಉಳ್ಳಾಲ: ಉಳ್ಳಾಲ ಪೊಲೀಸ್ ಠಾಣೆಯಿಂದ ಮಂಗಳೂರಿನ ವಿವಿಧ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡ ಆರು ಮಂದಿ ಸಿಬ್ಬಂದಿಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಬೀಳ್ಕೊಡುಗೆ ನಡೆಯಿತು.ಉಳ್ಳಾಲ ಠಾಣೆಯಲ್ಲಿದ್ದ ಉಪನಿರೀಕ್ಷಕರಾಗಿರುವ ಧನರಾಜ್ (ಪಾಂಡೇಶ್ವರ ಠಾಣೆ), ಸಹಾಯಕ ಉಪನಿರೀಕ್ಷಕರಾದ ಮೊಹಮ್ಮದ್(ಬರ್ಕೆ) , ಸುನಿಲ್ (ಬಂದರು), ಹೆಡ್‌ಕಾನ್‌ಸ್ಟೇಬಲ್‌ಗಳಾದ ರಂಜಿತ್( ಸಿಎಸ್‌ಬಿ ವಿಭಾಗ), ಮಹೇಶ್ (ಬಂದರು) ಹಾಗೂ ಮಹಿಳಾ ಹೆಡ್‌ಕಾನ್‌ಸ್ಟೇಬಲ್ ಪೂರ್ಣಿಮಾ(ಕೊಣಾಜೆ) ಇವರಿಗೆ ಬೀಳ್ಕೊಡುಗೆ ಉಳ್ಳಾಲ ಠಾಣೆಯಲ್ಲಿ ನಡೆಯಿತು.ಈ ಸಂದರ್ಭ ಠಾಣಾಧಿಕಾರಿ ವಿರೂಪಾಕ್ಷ ಸ್ವಾಮಿ, ಉಪನಿರೀಕ್ಷಕರುಗಳಾದ ಶೀತಲ್, ಸಿದ್ದಪ್ಪ, ಸಂತೋಷ್, ಕೃಷ್ಣ, ಸಹಾಯಕ ಉಪನಿರೀಕ್ಷಕರಾದ ಶೇಖರ್ ಗಟ್ಟಿ, ಮನ್ಸೂರ್, ಹೆಡ್ ಕಾನ್ ಸ್ಟೇಬಲ್ ಗಳಾದ ಶ್ರೀಲತಾ, ಪೇದೆ ರಿಯಾಝ್ ಉಪಸ್ಥಿತರಿದ್ದರು.
ಉಳ್ಳಾಲ: ಹರೇಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡೆಂಜ ಕಡವಿನಬಳಿಯ ನಿವಾಸಿಗಳಿಗೆ ಮನೆಬಿಟ್ಟು ದೂರದ ಸಂಬAಧಿಕರ ಅಥವಾ ಕಾಳಜಿ ಕೇಂದ್ರಕ್ಕೆ ತೆರಳುವಂತೆ ಒತ್ತಾಯಪೂರ್ವಕವಾಗಿ ನೀಡಿರುವ ನೋಟೀಸ್ ನ್ನು ಒಪ್ಪುವುದಿಲ್ಲ.ಶಾಶ್ವತ ಪರಿಹಾರವಾಗಿ ವಾಸಸ್ಥಳ ಒದಗಿಸಿದಲ್ಲಿ ಮನೆ ಬಿಟ್ಟು ಹೋಗುತ್ತೇವೆ ಹೊರತು 80 ವರ್ಷಗಳಿಂದ ವಾಸಿಸುತ್ತಿರುವ ಮನೆಯನ್ನು ತೊರೆದು ಮೂಲಭೂತ ಸೌಕರ್ಯಗಳೇ ಇಲ್ಲದ ಕಾಳಜಿ ಕೇಂದ್ರಗಳಲ್ಲಿ ನೆಲೆಸಲು ಸಿದ್ಧರಿಲ್ಲ ಎಂದು ಹರೇಕಳ ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಸರ್ವ ಸದಸ್ಯರು ಹಾಗೂ ಅಭಿವೃದ್ಧಿ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.ಹರೇಕಳ ಗ್ರಾಮದ ಕಡವಿನಬಳಿ ಪ್ರದೇಶ ನೇತ್ರಾವತಿ ನದಿ ತೀರದಲ್ಲಿದೆ. ಅಲ್ಲಿ ವಾಸ್ತವ್ಯವಿರುವ ಮನೆಗಳು ತುಂಬಾ ಅಪಾಯಕಾರಿ ಸ್ಥಿತಿಯಲ್ಲಿದೆ. ಕೂಡಲೇ ವಾಸದ ಮನೆಯನ್ನು ತೊರೆದು ಸಂಬAಧಿಕರ ಮನೆ ಅಥವಾ ಗ್ರಾ.ಪಂ ವ್ಯಾಪ್ತಿಯಲ್ಲಿರುವ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಗೊಳ್ಳುವAತೆ ನೋಟೀಸಿನಲ್ಲಿ ತಿಳಿಸಿದ್ದಾರೆ. ಆದರೆ ಕಡೆಂಜ ನಿವಾಸಿಗಳ ಪ್ರಕಾರ 80 ವರ್ಷಗಳಿಂದ ಸ್ಥಳದಲ್ಲಿ ವಾಸಿಸುತ್ತಿದ್ದೇವೆ. ಗಾಳಿ, ಮಳೆ, ಬಿರುಗಾಳಿ ಸಂದರ್ಭದಲ್ಲೂ ವಾಸದ ಮನೆ ಬಿಟ್ಟು ಹೋದವರಲ್ಲ. ಆದರೆ ಗುಡ್ಡ ಕುಸಿತದ ಭೀತಿಯನ್ನು ಮುಂದಿಟ್ಟು ದೂರದ ಸಂಬAಧಿಕರ…
ಮಲೇಷಿಯಾ ಪ್ರವಾಸದಲ್ಲಿರುವ ಕರ್ನಾಟಕ ಸ್ಪೀಕರ್ ಯು.ಟಿ.ಖಾದರ್ ರವರು ಮಲೇಷ್ಯಾ ಜನ ಪ್ರತಿನಿಧಿಗಳ ಸಭೆಯ ಸ್ಪೀಕರ್ (Speaker Of Dewan Rakyat) ವೈಬಿ ತಾನ್ ಶ್ರೀ ದಾತೋ (ಡಾ.) ಜೋಹರಿ ಬಿನ್ ಅಬ್ದುಲ್ ರವರನ್ನು ಮಲೇಷಿಯಾ ಪಾರ್ಲಿಮೆಂಟ್ ಹೌಸ್ ನಲ್ಲಿ ಭೇಟಿಯಾಗಿ ಪ್ರಜಾ ಪ್ರಭುತ್ವದ ಪ್ರಸಕ್ತ ರಾಜಕೀಯ ಸನ್ನಿವೇಶಗಳ ಕುರಿತು ಚರ್ಚೆ ನಡೆಸಿದರು. ಮುಂದಿನ ದಿನಗಳಲ್ಲಿ ಮಲೇಷಿಯಾ ಜನ ಪ್ರತಿನಿಧಿಗಳು ಹಾಗೂ ಕರ್ನಾಟಕ ಶಾಸಕರ ಮದ್ಯೆ ಎರಡು ದೇಶದ ಪ್ರಜಾ ಪ್ರಭುತ್ವ ಸಂಸದೀಯ ವ್ಯವಹಾರಗಳ ಕುರಿತು ವಿಚಾರ ವಿನಿಮಯ ಮಾಡಿಕೊಳ್ಳಲು ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆ ಚರ್ಚೆ ನಡೆಸಲಾಯಿತು.
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ ಮುಲೈ ಮುಗಿಲನ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ. ಬೆಂಗಳೂರು ವಾಣಿಜ್ಯ ತೆರಿಗೆಗಳ ಹೆಚ್ಚುವರಿ ಆಯುಕ್ತ ದರ್ಶನ್ ಎಚ್ ವಿ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ನೇಮಿಸಲಾಗಿದೆ. ಮುಲೈ ಮುಗಿಲನ್ ಅವರನ್ನು ಇನ್ಸ್‌ಪೆಕ್ಟರ್ ಜನರಲ್ ಆಫ್ ರಿಜಿಸ್ಟ್ರೇಷನ್ ಆಂಡ್ ಸ್ಟ್ಯಾಂಪ್ಸ್ ಆಯುಕ್ತರಾಗಿ ವರ್ಗಾವಣೆ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿರುವ ದರ್ಶನ್ ಎಚ್‌ವಿ ವಾಣಿಜ್ಯ ತೆರಿಗೆಗಳ ಹೆಚ್ಚುವರಿ ಆಯುಕ್ತರಾಗಿದ್ದರು.
ಶಿವಮೊಗ್ಗ : ಕಾಂತಾರ ಸಿನಿಮಾದ ಶೂಟಿಂಗ್ ವೇಳೆ ಮತ್ತೊಂದು ಅವಘಡ ಸಂಭವಿಸಿದೆ. ವರಾಹಿ ಹಿನ್ನಿರಿನ ಪ್ರದೇಶದಲ್ಲಿ ನಡೆಯುತ್ತಿದ್ದ ಶೂಟಿಂಗ್ ವೇಳೆ ದೋಣಿ ಮಗುಚಿದ ಘಟನೆ ನಡೆದಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಯಡೂರು ಸಮೀಪದ ಮಾಣಿ ಜಲಾಶಯದ ವರಾಹಿ ಹಿನ್ನೀರು ಪ್ರದೇಶದಲ್ಲಿ ನಿನ್ನೆ ಶೂಟಿಂಗ್ ನಡೆಯುತ್ತಿತ್ತು. ಮೇಲಿನ ಕೊಪ್ಪ ಎಂಬ ಮುಳುಗಡೆ ಗ್ರಾಮದ ಬಳಿ ಕಾಂತರಾ ಚಾಪ್ಟರ್ ಅಂಡ್ ಶೂಟಿಂಗ್ ನಡೆಯುತ್ತಿದ್ದ ಸಂದರ್ಭ ನಾಯಕ ನಟ ರಿಷಬ್ ಶೆಟ್ಟಿ ಇತರರು ಇದ್ದ ದೋಣಿ ನೀರಿಗೆ ಮಗುಚಿಬಿದ್ದಿದೆ. ಈ ಸಂದರ್ಭ ಕ್ಯಾಮರಕ್ಕೆ ಹಾನಿಯುಂಟಾಗಿದೆ. ಆದರೆ ನಟ ರಿಷಬ್ ಶೆಟ್ಟಿ ಹಾಗೂ ಇತರರು ಈಜಿ ದಡ ಸೇರಿದ್ದಾರೆ.ಮುಳುಗಡೆ ಗ್ರಾಮ ವಾದ ಹಿನ್ನೆಲೆಯಲ್ಲಿ ಹೆಚ್ಚಿನ ನೀರು ಇರಲಿಲ್ಲ . ಯಾವುದೇ ಪ್ರಾಣಪಯವಿಲ್ಲದೆ ಎಲ್ಲರೂ ಪಾರಾಗಿದ್ದಾರೆ. ಘಟನೆಯ ನಂತರ ಚಿತ್ರೀಕರಣ ಮುಗಿಸಿ ಯಡೂರು ಸಮೀಪದ ರೆಸಾರ್ಟ್ ಒಂದರಲ್ಲಿ ಚಿತ್ರತಂಡ ತಂಗಿದೆ.
ಮಂಗಳೂರು: ಬಳ್ಳಾರಿಯಿಂದ 10 ಕಿ.ಮೀ ದೂರದಲ್ಲಿ ರೇಡಿಯೇಟರ್ ಸಮಸ್ಯೆಯಿಂದಾಗಿ ಕೆಟ್ಟುನಿಂತಿದೆ. ದುರಸ್ತಿ ನಡೆಸಿ ಬಸ್ ಈಗ ಹೊರಟಿದೆ ಎಂದು ಉಳ್ಳಾಲವಾಣಿಗೆ ಕೆಎಸ್ ಆರ್ ಟಿಸಿ ದ.ಕ ಜಿಲ್ಲಾ ಡಿ.ಸಿ ರಾಜೇಶ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.ಬಸ್ ದುರಸ್ತಿಗೆ ಯಾರೂ ಸ್ಪಂಧಿಸದ ಹಿನ್ನೆಲೆಯಲ್ಲಿ ಪ್ರಯಾಣಿಕರು ಕಂಗಾಲಾಗಿದ್ದರು. ಈ ಕುರಿತು ಉಳ್ಳಾಲವಾಣಿ ವರದಿ ನಡೆಸಿತ್ತು. ತಕ್ಷಣಕ್ಕೆ ಸ್ಪಂಧಿಸಿದ ದ.ಕ ಜಿಲ್ಲಾ ಕೆಎಸ್ ಆರ್ ಟಿಸಿ ಡಿ.ಸಿಯವರು ಡಿಪೋ ಸಂಪರ್ಕಿಸಿ, ನಿರ್ವಾಹಕ, ಚಾಲಕರಲ್ಲಿ ವರದಿ ಕೇಳಿದ್ದಾರೆ. ಅಲ್ಲದೆ ರೇಡಿಯೇಟರ್ ಸಮಸ್ಯೆಯನ್ನು ದುರಸ್ತಿ ನಡೆಸಿ ಮಂಗಳೂರಿನತ್ತ ತೆರಳುವಂತೆ ಸೂಚಿಸಿದ್ದಾರೆ. ತಕ್ಷಣಕ್ಕೆ ಪ್ರಯಾಣಿಕರ ಸಮಸ್ಯೆಗೆ ಪ್ರತಿಕ್ರಿಯಿಸಿದ ಕೆಎಸ್ ಆರ್ ಟಿಸಿ ಡಿ.ಸಿಯವರಿಗೆ ಪ್ರಯಾಣಿಕರು ಅಭಿನಂದಿಸಿದ್ದಾರೆ.

