Author: UllalaVani

Kannada News From Coastal Karnataka

ಕೊಚ್ಚಿ, ನ. 10 :  ಸೋಮವಾರದಿಂದ ಕರ್ನಾಟಕ ಮತ್ತು ತಮಿಳುನಾಡಿಗೆ ತೆರಳುವ ಎಲ್ಲಾ ಅಂತರರಾಜ್ಯ ಸೇವೆಗಳನ್ನು ಸ್ಥಗಿತಗೊಳಿಸುವುದಾಗಿ ಕೇರಳ ಐಷಾರಾಮಿ ಬಸ್ ಮಾಲೀಕರ ಸಂಘ ಪ್ರಕಟಿಸಿದೆ. ಸೋಮವಾರ ಸಂಜೆ 6 ಗಂಟೆಯಿಂದ ಟೂರಿಸ್ಟ್ ಬಸ್ ಸೇವೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಐಷಾರಾಮಿ ಬಸ್ ಮಾಲೀಕರ ಸಂಘ, ಕೇರಳ ರಾಜ್ಯ ಸಮಿತಿ ತಿಳಿಸಿದೆ.ಎರಡೂ ರಾಜ್ಯಗಳು ಕಾನೂನುಬಾಹಿರ ರಾಜ್ಯದ ತೆರಿಗೆಗಳನ್ನು (Tax) ವಿಧಿಸುತ್ತಿದೆ. ಕೇರಳ ನಿರ್ವಾಹಕರಿಗೆ ಸೇರಿದ ಅಖಿಲ ಭಾರತ ಪ್ರವಾಸಿ ಪರವಾನಗಿ (AITP) ಬಸ್‌ಗಳನ್ನು ವಶಪಡಿಸಿಕೊಳ್ಳಲು ಪ್ರಾರಂಭಿಸಿದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಸಂಘದ ರಾಜ್ಯ ಅಧ್ಯಕ್ಷ ಎಜೆ ರಿಜಾಸ್ ಮಾಹಿತಿ ನೀಡಿದ್ದಾರೆ.ಕೇಂದ್ರ ಸರ್ಕಾರದ ಮೋಟಾರು ವಾಹನ ಕಾಯ್ದೆಯಡಿ ನೀಡಲಾದ ಮಾನ್ಯ AITP ಗಳನ್ನು ಹೊಂದಿದ್ದರೂ, ಕೇರಳದ ಪ್ರವಾಸಿ ವಾಹನಗಳನ್ನು ತಮಿಳುನಾಡು ಮತ್ತು ಕರ್ನಾಟಕದಲ್ಲಿ ನಿಲ್ಲಿಸಿ ದಂಡ ವಿಧಿಸಲಾಗುತ್ತಿದೆ ಮತ್ತು ವಶಕ್ಕೆ ಪಡೆಯಲಾಗುತ್ತಿದೆ ಎಂದು ಸಂಘ ಹೇಳಿದೆ.ಒಂದು ವರ್ಷಕ್ಕೂ ಹೆಚ್ಚು ಕಾಲ, ತಮಿಳುನಾಡು ಅಧಿಕಾರಿಗಳು ಕೇರಳ-ನೋಂದಾಯಿತ ವಾಹನಗಳಿಂದ ಅಕ್ರಮವಾಗಿ ತೆರಿಗೆ ಸಂಗ್ರಹಿಸುತ್ತಿದ್ದಾರೆ. ಇದರಿಂದ…

Read More

ವಿಟ್ಲ, ನ. 10; ಚರಂಡಿಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾದ ಘಟನೆ ವಿಟ್ಲ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಕಾಲೇಜಿಗೆ ಹೋಗುವ ಅಡ್ಡರಸ್ತೆಯಲ್ಲಿ ನಡೆದಿದೆ. ವಿಟ್ಲ ಕಸಬಾ ಗ್ರಾಮದ ಕಾಶಿಮಠ ನಿವಾಸಿ ಮಂಜುನಾಥ ಮೃತಪಟ್ಟ ವ್ಯಕ್ತಿ.ಇನ್ನು ಘಟನಾ ಸ್ಥಳಕ್ಕೆ ವಿಟ್ಲ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

Read More

ಮಂಗಳೂರು, ನ.9;ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 2025-28 ಸಾಲಿನ ಅಧ್ಯಕ್ಷರಾಗಿ ಪುಷ್ಪರಾಜ್ ಬಿ.ಎನ್ ಆಯ್ಕೆ ಯಾಗಿದ್ದಾರೆ ಹಾಗೂ ಪ್ರಧಾನ ಕಾರ್ಯದರ್ಶಿ ರಾಜೇಶ್ ಪೂಜಾರಿ ಮತ್ತು ಕೋಶಾಧಿಕಾರಿಯಾಗಿ ವಿಜಯ ಕೋಟ್ಯಾನ್ ಪಡು ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ. ನಗರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಚೇರಿ ಸಭಾಂಗ ಣದಲ್ಲಿ ಭಾನುವಾರ ನಡೆದ ಚುನಾವ ಣೆಯಲ್ಲಿ ಒಟ್ಟು 352 ,ಮಂದಿ ಮತದಾರರಲ್ಲಿ 331 ಮಂದಿ ಮತಚಲಾಯಿಸಿದ್ದರು.ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಪ್ರತಿಸ್ಪರ್ಧಿ ಶ್ರವಣ ಕುಮಾರ್ ಪರಾಭವ ಗೊಂಡಿದ್ದಾರೆ. ಉಪಾಧ್ಯಕ್ಷ ರಾಗಿ ಮುಹಮ್ಮದ್ ಆರಿಫ್ ಪಡುಬಿದ್ರೆ, ವಿಲ್ಫೆಡ್ ಡಿ’ಸೋಜ,ರಾಜೇಶ್ ಶೆಟ್ಟಿ ಚುನಾವಣೆಯಲ್ಲಿ ಆಯ್ಕೆಯಾ ಗಿದ್ದಾರೆ.ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಐ.ಬಿ.ಸಂದೀಪ್ ಕುಮಾರ್, ಗಂಗಾಧರ ಕಲ್ಲಪಳ್ಳಿ ಪರಾಭವಗೊಂಡಿದ್ದಾರೆ. ಕಾರ್ಯದರ್ಶಿ ಯಾಗಿ ಸಿದ್ದಿಕ್ ನೀರಾಜೆ, ಸುರೇಶ್ ಡಿ ಪಳ್ಳಿ,ಸತೀಶ್ ಇರಾ ಆಯ್ಕೆ ಯಾಗಿದ್ದಾರೆ.ರಾಜೇಶ್ ದಡ್ಡಂಗಡಿ ಪರಾಭವ ಗೊಂಡಿದ್ದಾರೆ.ಕಾರ್ಯಕಾರಿ ಸಮಿತಿ ಸದಸ್ಯರಿಗಾಗಿ ನಡೆದ ಚುನಾವಣೆಯಲ್ಲಿ ಅಶೋಕ್ ಶೆಟ್ಟಿ ಬಿ.ಎನ್,ಸಂದೇಶ್ ಜಾರ,ಸಂದೀಪ್ ಕುಮಾರ್, ಲಕ್ಷ್ಮೀ ನಾರಾಯಣ, ಹರೀಶ್ ಮೋಟುಕಾನ,ದಿವಾಕರ ಪದ್ಮುಂಜ,ಕಿರಣ್ ಸಿರ್ಸಿಕರ,ಅಭಿಷೇಕ್…

Read More

ಉಳ್ಳಾಲ: ಕೃಷಿ ಉತ್ಸವ – ಆಹಾರ ಮೇಳ ರೈತರಿಗೆ ಶಕ್ತಿ ತುಂಬುವ ವೇದಿಕೆಯಾಗಿದೆ. “ಕೃಷಿ ಉತ್ಸವ ಮತ್ತು ಆಹಾರ ಮೇಳವು ಅತ್ಯುತ್ತಮ ಸಂದರ್ಭ. ಇಂತಹ ಕಾರ್ಯಕ್ರಮಗಳು ರೈತರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ. ಈ ಬಾರಿ ಉಳ್ಳಾಲದ ಕೃಷಿ ಮೇಳಕ್ಕೆ ಜನಸಾಗರವೇ ಹರಿದುಬರಲಿದೆ ಎಂದು ವಿಧಾನಪರಿಷತ್‌ ಸದಸ್ಯ ಕಿಶೋರ್‌ ಕುಮಾರ್‌ ಬೊಟ್ಯಾಡಿ ಅಭಿಪ್ರಾಯಪಟ್ಟರು. ಅವರು ರೈತಕುಡ್ಲ ಪ್ರತಿಷ್ಠಾನ ನೇತೃತ್ವದಲ್ಲಿ ಕರ್ನಾಟಕ ಗೇರು ಅಭಿವೃದ್ದಿ ನಿಗಮ ಮಂಗಳೂರು, ಕೃಷಿ ಇಲಾಖೆ ಮಂಗಳೂರು, ಪೊಲದವರ ಯಾನೆ ಗಟ್ಟಿಯವರ ಸಮಾಜ ಸೇವಾ ಸಂಘ ಹಾಗೂ ಉಳ್ಳಾಲ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದೊಂದಿಗೆ ಆಯೋಜನೆಗೊಂಡ ಉಳ್ಳಾಲ ಕೃಷಿ ಉತ್ಸವ-ಆಹಾರ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು. ಕೃಷಿ ಪ್ರಧಾನ ದೇಶವಾಗಿರುವ ಭಾರತದಲ್ಲಿ, ಪರಿಸರ ಮಾಲಿನ್ಯ ಮತ್ತು ಅತಿಯಾದ ಫರ್ಟಿಲೈಜರ್‌ ಬಳಕೆಯಿಂದ ಭೂಮಿ ಬಂಜರುಗೊಳ್ಳುವ ಪರಿಸ್ಥಿತಿ ಬಂದಿದೆ. ಮನುಷ್ಯನ ಸಹಜ ಸ್ವಾರ್ಥವೇ ಇದಕ್ಕೆ ಕಾರಣ. ಆದರೆ ಸ್ವದೇಶಿ ದನಗಳ ಸಾಕಾಣಿಕೆಯನ್ನು ಉತ್ತೇಜಿಸುವ ಮೂಲಕ ಈ ಪರಿಸ್ಥಿತಿಯನ್ನು ಸುಧಾರಿಸಬಹುದು. “ಭಾರತೀಯ ದೇಸಿ ದನದ 60…

Read More

ಮಂಗಳೂರು, ನ.7; ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಕಾಲೇಜುಗಳಲ್ಲಿ ಅವೈಜ್ಞಾನಿಕವಾಗಿ ಹೊರಡಿಸಿರುವ ಮತ್ತು ಹೊರಡಿಸುತ್ತಿರುವ ಆದೇಶಗಳನ್ನು ಹಿಂಪಡೆಯುವAತೆ ಜಿಲ್ಲಾಧಿಕಾರಿ ಮೂಲಕ ಶಿಕ್ಷಣ ಇಲಾಖೆಗೆ ದ.ಕ.ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ ಹಾಗೂ ಉಪನ್ಯಾಸಕರ ಸಂಘ ಮನವಿ ಮಾಡಿಕೊಂಡಿದೆ. ಕರ್ನಾಟಕ ರಾಜ್ಯ ಶಾಲಾಶಿಕ್ಷಣ (ಪದವಿಪೂರ್ವ) ಕಾಲೇಜುಗಳ ಪ್ರಾಂಶುಪಾಲರ ಸಂಘ (ರಿ.) ಮತ್ತು ಕರ್ನಾಟಕ ರಾಜ್ಯ ಶಾಲಾಶಿಕ್ಷಣ (ಪದವಿಪೂರ್ವ) ಕಾಲೇಜುಗಳ ಉಪನ್ಯಾಸಕರ ಸಂಘ ಮನವಿ ಮಾಡಿರುವ ಪತ್ರದಲ್ಲಿ ಕೆಲ ವಿಚಾರಗಳನ್ನು ಉಲ್ಲೇಖಿಸಿದ್ದಾರೆ. ಇತ್ತೀಚೆಗೆ ಶಾಲಾಶಿಕ್ಷಣ ಇಲಾಖೆ (ಪದವಿ ಪೂರ್ವ) ಕಾಲೇಜುಗಳಿಗೆ ಪೂರಕವಲ್ಲದ ಆದೇಶಗಳು ಬರುತ್ತಿರುವುದು ದೈನಂದಿನ ಚಟುವಟಿಕೆಗಳ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು ಮತ್ತು ಉಪನ್ಯಾಸಕರುಗಳು ಆತ್ಮಸ್ಥೆöÊರ್ಯವನ್ನು ಕುಗ್ಗಿಸುತ್ತಿದೆ. ಇದರ ಪರಿಣಾಮವಾಗಿ ಪದವಿ ಪೂರ್ವ ಕಾಲೇಜುಗಳ ಭವಿಷ್ಯ ಡೋಲಾಯನ ಸ್ಥಿತಿಗೆ ತಲುಪುತ್ತಿದೆ. ಪರೀಕ್ಷಾ ಮಂಡಳಿಯನ್ನು ಪದವಿಪೂರ್ವ ಇಲಾಖೆಯಿಂದ ಪ್ರತ್ಯೇಕಿಸಿದ ನಂತರ ದೇಶದಲ್ಲಿ ಮಾದರಿಯಾಗಿದ್ದ ಪದವಿ ಪೂರ್ವ ಶಿಕ್ಷಣ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಇತ್ತೀಚೆಗೆ ಪದವಿಪೂರ್ವ ಶಿಕ್ಷಣಕ್ಕೆ ಸಂಬAಧವೇ…

Read More

ರಾಯಚೂರು/ ಕೊಪ್ಪಳ, ನ.7; 9ನೇ ತರಗತಿ ವಿದ್ಯಾರ್ಥಿನಿ ಗರ್ಭಿಣಿಯಾಗಿರುವ ಆಘಾತಕಾರಿ ಘಟನೆ ರಾಯಚೂರು ಜಿಲ್ಲೆಯ ಮಸ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಶಾಲೆಗೆ ಹೋಗಿ ಉತ್ತಮ ವಿದ್ಯಾಭ್ಯಾಸ ಪಡೆದು ಜೀವನಕಟ್ಟಿಕೊಳ್ಳಬೇಕಾದ 9ನೇ ತರಗತಿ ವಿದ್ಯಾರ್ಥಿನಿ ಪ್ರೇಮದ ಬಲೆಗೆ ಬಿದ್ದು, ಜೀವನವನ್ನೇ ಹಾಳುಮಾಡಿಕೊಂಡಿದ್ದಾಳೆ. ಹೌದು, ಸಂತ್ರಸ್ತ ವಿದ್ಯಾರ್ಥಿನಿಯ ತಂದೆ ಚಿಕನ್ ಶಾಪ್ ಹೊಂದಿದ್ದು, ಇಲ್ಲಿ ಮಾಂಸ ಖರೀದಿಗೆ ಬಂದಿದ್ದ ಆರೋಪಿ ಶಿವಮೂರ್ತಿ ಫೋನ್ ಪೇ ಮೂಲಕ ಹಣ ಪಾವತಿಸಿದ್ದ. ಬಳಿಕ ಫೋನ್ ಪೇ ಮಾಡಿರುವ ಮೊಬೈಲ್ ಸಂಖ್ಯೆಯನ್ನ ಆತ ಸಂಪರ್ಕಿಸಿದ್ದು, ಸಂತ್ರಸ್ತೆಯ ಪರಿಚಯವಾಗಿದೆ. ಬಳಿಕ ಇಬ್ಬರ ನಡುವೆ ಪ್ರೀತಿ ಆರಂಭವಾಗಿದ್ದು, ದೈಹಿಕ ಸಂಪರ್ಕದವರೆಗೂ ಹೋಗಿದೆ. ಈ ನಡುವೆ ಅಕ್ಟೋಬರ್ 30ರ ರಾತ್ರಿ ಸಂತ್ರಸ್ತೆ ನಾಪತ್ತೆಯಾಗಿದ್ದು, ಮನೆಯವರೆಲ್ಲ ಸೇರಿ ಹುಡುಕಿದರೂ ಆಕೆಯ ಸುಳಿವು ಸಿಕ್ಕಿರುವುದಿಲ್ಲ. ಈ ಹಿನ್ನಲೆ ಪೋಷಕರು ಮಗಳು ನಾಪತ್ತೆಯಾಗಿದ್ದಾಳೆ ಎಂದು ದೂರು ದಾಖಲಿಸಿದ್ದರು. ಪೊಲೀಸರು ಕೇಸ್ ಬೆನ್ನುಹತ್ತಿದಾಗ ನಾಪತ್ತೆಯಾಗಿರೋ ಬಾಲಕಿ ಗರ್ಭಿಣಿ ಎಂಬ ವಿಷಯ ಬೆಳಕಿಗೆ ಬಂದಿದೆ. ಆರೋಪಿ ಶಿವಮೂರ್ತಿ(25) ಎಂಬಾತನನ್ನು…

Read More

ಮಂಗಳೂರು : ಖ್ಯಾತ ಉದ್ಯಮಿ ತಿರುವೈಲು ಗುತ್ತು ನವೀನ್ ಚಂದ್ರ ಆಳ್ವ ಪುತ್ರ ಯುವ ಉದ್ಯಮಿ ಅಭಿಷೇಕ್ ಆಳ್ವ ಶಾಂಭವಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೃತ ಉದ್ಯಮಿ ಅಭಿಷೇಕ್ ಎಂದು ತಿಳಿದುಬಂದಿದೆ. ನವೆಂಬರ್ 5ರ ರಾತ್ರಿ ನಾಪತ್ತೆಯಾಗಿದ್ದ ಅಭಿಷೇಕ್ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು, ಆತನ ಕಾರು,ಮೊಬೈಲ್ ಹಾಗೂ ವಾಚ್ ಸ್ಥಳದಲ್ಲಿ ಪತ್ತೆಯಾಗಿತ್ತು. ಇದೀಗ ಬಪ್ಪನಾಡು ಸಮೀಪದ ಶಾಂಭವಿ ನದಿ ತೀರದಲ್ಲಿ ಅಭಿಷೇಕ್ ಅವರ ಮೃತದೇಹ ಪತ್ತೆಯಾಗಿದೆ. ನದಿಯಲ್ಲಿ ತೇಲುತ್ತಿದ್ದ ಮೃತದೇಹವನ್ನು ಸ್ಥಳೀಯರು ಗುರುತಿಸಿ ಪೊಲೀಸ್‌ಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ವಶಕ್ಕೆ ಪಡೆದಿದ್ದಾರೆ. ಮುಲ್ಕಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧಿಸಿ ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆಯ ಶಂಕೆಯ ಮೇಲೆ ತನಿಖೆ ಆರಂಭವಾಗಿದೆ.

Read More

ಬಜ್ಪೆ ;  ನ. 07 ; ಬಜ್ಪೆ ಸಮೀಪದ ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಸೌಹಾರ್ದ ನಗರದಲ್ಲಿ ಗುರುವಾರ 6 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳು ದಾಳಿ ಮಾಡಿದ್ದು, ಬಾಲಕ ಗಾಯಗೊಂಡಿದ್ದಾನೆ. ಗಾಯಗೊಂಡ ಬಾಲಕನನ್ನು ಸೌಹಾರ್ದ ನಗರದ ನಿವಾಸಿ ಮುಹಮ್ಮದ್ ಅಝರ್ ಅವರ ಪುತ್ರ ಅಹಿಲ್ ಎಂದು ಗುರುತಿಸಲಾಗಿದೆ.ಅಹಿಲ್ ಮದರಸದಿಂದ ಮನೆಗೆ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಬೀದಿ ನಾಯಿಗಳ ಗುಂಪೊಂದು ದಿಢೀರನೇ ಬಾಲಕನನ್ನು ಸುತ್ತುವರಿದು ದಾಳಿ ಮಾಡಿದೆ. ನಾಯಿಗಳು ಬಾಲಕನ ಕೆನ್ನೆ ಮತ್ತು ಕೈಗೆ ಕಚ್ಚಿ ಗಂಭೀರ ಗಾಯಗೊಳಿಸಿದೆ.ಬಾಲಕನ ಬೊಬ್ಬೆ ಕೇಳಿದ ತಾಯಿ ತಕ್ಷಣ ಮನೆಯಿಂದ ಹೊರಗೆ ಓಡಿ ಬಂದು ಮಗನನ್ನು ರಕ್ಷಿಸಿದ್ದಾರೆ. ತಕ್ಷಣವೇ ಬಾಲಕನನ್ನು ಬಜ್ಪೆ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ಕಟೀಲಿನ ದುರ್ಗ ಸಂಜೀವಿನಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯ ಬಗ್ಗೆ ಮಾತನಾಡಿದ ಬಾಲಕನ ಚಿಕ್ಕಪ್ಪ, ಮುಹಮ್ಮದ್ ಮುಝಮ್ಮಿಲ್ ಅವರು, ಪ್ರದೇಶದಲ್ಲಿ ಪದೇ ಪದೇ ನಡೆಯುತ್ತಿರುವ ಬೀದಿ ನಾಯಿಗಳ ಹಾವಳಿಯಿಂದ ಬೇಸರ ವ್ಯಕ್ತಪಡಿಸಿದರು.…

Read More

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಸುರತ್ಕಲ್ ಶಾಖೆಯ 13ನೇ ವಾರ್ಷಿಕೋತ್ಸವದ ಪ್ರಯುಕ್ತ ಗ್ರಾಹಕರ ಸಭೆಯು ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ರವರ ಅಧ್ಯಕ್ಷತೆಯಲ್ಲಿ ಸುರತ್ಕಲ್ ಶಾಖೆಯಲ್ಲಿ ಜರುಗಿತು. ಕಾರ್ಯಕ್ರಮವನ್ನು ಸಂಘದ ಸದಸ್ಯರುಗಳಾದ ಸತೀಶ್‌ಚಂದ್ರ, ಜಗದೀಶ ಕೋಟ್ಯಾನ್ , ಶ್ರೀ ಮಾಧವ ಎಮ್ ಅಂಚನ್,ಲಕ್ಷ÷್ಮಣ್ ಸಾಲ್ಯಾನ್, ಚಂದ್ರಶೇಖರ್ ನಲಿಲು ರೈ , ಸೀತಾಲಕ್ಷಿ÷್ಮ ಕುಳಾಯಿ ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದರು. ಸಂಘದ ಸದಸ್ಯರಾದ ಮಾಧವ ಎಮ್ ಅಂಚನ್ ರವರು ಮಾತನಾಡಿ “ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ರವರ ನೇತ್ರತ್ವದಲ್ಲಿ ಉತ್ತಮ ರೀತಿಯಲ್ಲಿ ವ್ಯವಹಾರ ನಡೆಸುತ್ತಿದ್ದು, ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಿದೆ. ಸಂಘವು ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದು ಶುಭ ಹಾರೈಸಿದರು. ಸದಸ್ಯರಾದ ಚಂದ್ರಶೇಖರ್ ನಲಿಲು ರೈ ರವರು ಮಾತನಾಡಿ “ಸುರತ್ಕಲ್ ಶಾಖೆಯು ಇತ್ತೀಚಿಗೆ ನವೀಕೃತ ಹಾಗೂ ಸುಸಜ್ಜಿತ ಹವಾನಿಯಂತ್ರಣ ಕೊಠಡಿಗೆ ಸ್ಥಳಾಂತರ ಗೊಂಡಿರುವುದಕ್ಕೆ ಸಂತೋಷ ವ್ಯಕ್ತಪಡಿಸಿ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು…

Read More

ಪ್ರಧಾನಿ ನರೇಂದ್ರ ಮೋದಿಜಿಯ “ಡಿಜಿಟಲ್ ಇಂಡಿಯಾ” ಯೋಜನೆ ದೇಶವನ್ನು ತಂತ್ರಜ್ಞಾನದಲ್ಲಿ ಪ್ರಗತಿಯ ಪಥದತ್ತ ಮುನ್ನಡೆಸಬೇಕಾದರೆ, ಅದೇ ಯೋಜನೆ ಇಂದು ಸೈಬರ್ ಅಪರಾಧಿಗಳ ಆಟದ ಮೈದಾನವಾಗಿ ಪರಿಣಮಿಸಿದೆ. “ಡಿಜಿಟಲ್ ಅರೆಸ್ಟ್” ಹೆಸರಿನಲ್ಲಿ ನಡೆದ ₹3 ಸಾವಿರ ಕೋಟಿ ರೂ. ವಂಚನೆ ಪ್ರಕರಣ ಸುಪ್ರೀಂ ಕೋರ್ಟ್‌ನಿಗೂ ಆಘಾತ ತಂದಿದ್ದರೂ, ಕಠಿಣ ಕಾನೂನು ರೂಪಿಸಬೇಕಾದ ಸಂಸದರು ಇನ್ನೂ ಕುಂಭಕರ್ಣನ ನಿದ್ರೆಯಲ್ಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆನ್‌ಲೈನ್ ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಬಡ ಜನರು ತಮ್ಮ ಕಷ್ಟಪಟ್ಟು ಗಳಿಸಿದ ಹಣ ಕಳೆದುಕೊಳ್ಳುತ್ತಿದ್ದಾರೆ. ಜನರ ಧ್ವನಿಯಾಗಿ ನಿಲ್ಲಬೇಕಾದ ಸಂಸದರು ಮತ್ತು ಶಾಸಕರು ಮೌನಿ ಬಾಬಗಳಾಗಿ ಪರಿಣಮಿಸಿದ್ದಾರೆ. ಒಂದು ಕಾಲದಲ್ಲಿ “ಬುದ್ಧಿವಂತರ ಜಿಲ್ಲೆ” ಎಂದು ಹೆಮ್ಮೆಪಟ್ಟ ದ.ಕ ಜಿಲ್ಲೆ, ಇಂದು ಸೈಬರ್ ಮೋಸದ ಕೇಂದ್ರವಾಗಿ ಹೆಸರು ಮಾಡುತ್ತಿದೆ — ಇದು ನೋವಿನ ಸಂಗತಿ. ರಾಜಕೀಯದ ಶಕ್ತಿ ಜನರ ಸಮಸ್ಯೆ ಪರಿಹಾರದಲ್ಲಿ ಕಾಣಿಸಬೇಕಾದರೆ, ಅದು ಇಂದಿನ ನಾಯಕರಲ್ಲಿ ಕಾಣಿಸುತ್ತಿಲ್ಲ. ಬುದ್ಧಿವಂತಿಕೆ ಈಗ ಕೋಮು ರಾಜಕೀಯಕ್ಕೆ ಮಾತ್ರ ಉಪಯೋಗವಾಗುತ್ತಿದೆ. ಸಮಾಜ…

Read More