ಕುತ್ತಾರು,ನ.11: ಕುತ್ತಾರು ಪದವಿನಲ್ಲಿ ಸುಪ್ರೀಂ ಬಜಾಜ್‌ನ ವಿನೂತನ ಮಾರಾಟ ಕೇಂದ್ರವನ್ನು ಕರ್ನಾಟಕ ಸರಕಾರದ ಹೆಲ್ತ್ ಕೇರ್ ಕೌನ್ಸಿಲ್‌ನ ಚೇರ್ ಮೇನ್ ಯು ಟಿ ಇಪ್ತಿಕಾರ್ ಫರೀದ್ ಉದ್ಘಾಟಿಸಿದರು.


ಬಳಿಕ ಮಾತನಾಡಿದ ಇವರು, ಎಲ್ಲಾ ಗ್ರಾಹಕರ ಸಹಕಾರದಿಂದಾಗಿ ಕೇಂದ್ರವು ಯಶಸ್ವಿಯಾಗಿ ಮುನ್ನಡೆಯಲಿ ಎನ್ನುತ್ತಾ ಶುಭಹಾರೈಸಿದರು.

ಸುಪ್ರೀಂ ಬಜಾಜ್‌ನ ಸೇವಾ ಕೇಂದ್ರದ ಉದ್ಘಾಟನೆಯನ್ನು ಕಟ್ಟಡ ಮಾಲಕರಾದ ಮೊಹಮ್ಮದ್ ಇಸ್ಮಾಯಿಲ್ ಸಿದ್ಧಿ ಅಹ್ಮದ್‌ರವರು ಲೋಕಾರ್ಪಣೆಗೊಳಿಸಿದರು. ಇದೇ ವೇಳೆ ಬಿಜೆಪಿ ಮಂಗಳೂರು ಮಂಡಲದ ಅಧ್ಯಕ್ಷರಾದ ಜಗದೀಶ್ ಆಳ್ವ ಕುವೆತ್ತ ಬೈಲ್ ಮಾತನಾಡಿ, ಗ್ರಾಹಕರಿಗೆ ಉತ್ತಮ ಗುಣಮಟ್ಟದಲ್ಲಿ ನಗು ಮೊಗದ ಸೇವೆಯ ಜೊತೆಗೆ ಯೋಗ್ಯ ದರದಲ್ಲಿ ವಾಹನಗಳನ್ನು ಗ್ರಾಹಕರಿಗೆ ಈ ಸಂಸ್ಥೆ ನೀಡಲಿ. ಆ ಮುಖೇನ ಜನರಿಗೆ ಸ್ನೇಹಪರ ಸೇವೆಗಳನ್ನು ನೀಡಿ ಈ ಭಾಗದಲ್ಲಿ ಉತ್ತಮ ಸಂಸ್ಥೆಯಾಗಿ ಬೆಳೆಯಲಿ ಎಂದು ಅಭಿಪ್ರಾಯಪಟ್ಟರು.
ಸಂಸ್ಥೆಯ ಚೇರ್ಮನ್ ಆರೂರು ಕಿಶೋರ್ ರಾವ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, 1967 ರಲ್ಲಿ ನನ್ನ ತಂದೆಯವರಾದ ದಿ.ಆರೂರು ಶ್ರೀಪತಿ ರಾವ್ ಅವರು ಕರ್ನಾಟಕದಲ್ಲಿ ಪ್ರಪಥಮವಾಗಿ ಮಂಗಳೂರಿನಲ್ಲಿ ಸುಪ್ರೀಂ ಬಜಾಜ್‌ನ ಸಂಸ್ಥೆಯನ್ನು ಸ್ಥಾಪಿಸಿದರು. ಶಿವಮೊಗ್ಗದಲ್ಲಿ ಡೀಲರ್ ಶಿಪ್ ಆರಂಭಿಸಿ ಬಳಿಕ ಚಿಕ್ಕಮಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಸಂಸ್ಥೆಗಳನ್ನು ವಿಸ್ತರಿಸಿದರು. ಕುತ್ತಾರುಪದವಿನಲ್ಲಿ ಇಂದು ಸುಪ್ರೀಂ ಬಜಾಜ್‌ನ 38ನೇ ಶೋರೂಂ ಆರಂಭಗೊAಡಿದೆ. ಬಜಾಜ್ ಆಟೋ ಹಾಗೂ ಸುಪ್ರೀಮ್ ಆಟೋ ಡೀರ‍್ಸ್ ನಡುವಿನ ಸಂಬAಧ ಸುಮಾರು 58 ವರ್ಷಗಳದ್ದು. ಈ ನಿಟ್ಟಿನಲ್ಲಿ ಬಜಾಜ್ ನಮಗೆ ಸಾಕಷ್ಟು ಸಲಹೆಗಳನ್ನು ನೀಡುವ ಮೂಲಕ ನಮಗೆ ಸಹಕರಿಸಿದ್ದಾರೆ. ಇದರ ಜೊತೆಗೆ ಗ್ರಾಹಕರ ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ ಎಂದರು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಡೈರೆಕ್ಟರ್ ಆರೂರು ಅರ್ಜುನ್ ರಾವ್, ಬಜಾಜ್ ಸಂಸ್ಥೆ ಯ ಸೇಲ್ಸ್ ಏರಿಯಾ ಮ್ಯಾನೇಜರ್ ಲೆಹರ್, ಮುನ್ನೂರು ಗ್ರಾಮ ಪಂಚಾಯತ್‌ನ ಅಧ್ಯಕ್ಷೆ ರಿಹನ ಬಾನು, ಡಿ ಜಿ ಎಂ ಶ್ರೀ ಗುರುಪ್ರಸಾದ್ ರಾವ್, ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ, ಅಭಿವೃದ್ಧಿ ಅಧಿಕಾರಿ ಶ್ರೀಕಾಂತ್, ಏಜಿಎಂ ದಿನೇಶ್, ಸೀನಿಯರ್ ವರ್ಕ್ಸ್ ಮ್ಯಾನೇಜರ್ ವಿಜೇತ್ ಪಜೀರ್, ಸೀನಿಯರ್ ಸೇಲ್ಸ್ ಮ್ಯಾನೇಜರ್ ಅನಿಲ್ , ಸುಜಯ್, ಯೋಗೀಶ್, ವಜ್ರೇಶ್ ಕುಲಾಲ್, ಹರೀಶ್ ಕುಮಾರ್,ಸೀನಿಯರ್ ಬಿಸಿನೆಸ್ ಹೆಡ್ & ಜಿ ಎಂ ಪ್ರಭಾಕರ್ ರಾವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಂಸ್ಥೆಯ ಚೇರ್ಮನ್ ಆರೂರು ಕಿಶೋರ್ ರಾವ್ ರವರು ಸ್ವಾಗತಿಸಿದರು. ವಜ್ರೇಶ್ ಕುಲಾಲ್‌ರವರು ಪ್ರಾರ್ಥನೆಗೈದರು. ಹರೀಶ್ ಕುಮಾರ್‌ರವರು ಕಾರ್ಯಕ್ರಮ ನಿರೂಪಿಸಿದರು.ಸೀನಿಯರ್ ಬಿಸಿನೆಸ್ ಹೆಡ್ & ಜಿ ಎಂ ಶ್ರೀ ಪ್ರಭಾಕರ್ ರಾವ್ ರವರು ವಂದಿಸಿದರು.




