Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
UllalavaniUllalavani
suddi

ನ. 25ರಿಂದ 27ರವರೆಗೆ ಮಂಗಳಗoಗೋತ್ರಿಯಲ್ಲಿ “ವೇವ್ಸ್ 2025 -ಅಂತರ ಕಾಲೇಜು ಸಾಂಸ್ಕೃತಿಕ ಉತ್ಸವ”

UllalaVaniBy UllalaVaniNovember 24, 2025No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಉಳ್ಳಾಲ : ಮಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ಮೂಲಕ ಆಯೋಜಿಸಲಾದ “ವೇವ್ಸ್ 2025 – ಅಂತರ ಕಾಲೇಜು ಸಾಂಸ್ಕೃತಿಕ ಉತ್ಸವ” ನವೆಂಬರ್ 25ರಿಂದ 27ರ ವರೆಗೆ ಮಂಗಳಗಂಗೋತ್ರಿಯಲ್ಲಿ ಜರುಗಲಿದೆ ಎಂದು ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶಕರಾದ ಪ್ರೊ. ಪ್ರಶಾಂತ್ ನಾಯ್ಕ್ ತಿಳಿಸಿದರು.


ಅವರು ಉಳ್ಳಾಲ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಈ ವರ್ಷದ ಉತ್ಸವದ ವಿಷಯ “ಸಾಂಸ್ಕೃತಿಕ ಸಂಯೋಜನೆ 2025: ವಿಕಸಿತ ಭಾರತದತ್ತ” ಆಗಿದ್ದು, ಭಾರತೀಯ ವಿಶ್ವವಿದ್ಯಾಲಯಗಳ ಸಂಘಟನೆಯ (ಎ ಐ ಯು ) ನವದೆಹಲಿ ಆಶ್ರಯದಲ್ಲಿ ನಡೆಯುವ ಎ ಐ ಯು39ನೇ ಅಂತರ-ವಿಶ್ವವಿದ್ಯಾಲಯ ಯುವೋತ್ಸವ (ಯುನಿಫೆಸ್ಟ್) 2025–26ಕ್ಕೆ ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಯ್ಕೆಮಾಡುವುದು ಇದರ ಪ್ರಮುಖ ಉದ್ದೇಶವೆಂದರು.
ನವೆಂಬರ್ 25ರಂದು ಬೆಳಿಗ್ಗೆ 9:30ಕ್ಕೆ ಮಂಗಳಾ ಸಭಾಂಗಣದಲ್ಲಿ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ ಅಧ್ಯಕ್ಷತೆ ವಹಿಸಲಿದ್ದು, ವಿಶ್ವವಿದ್ಯಾನಿಲಯ ಕಾಲೇಜಿನ ನಿವೃತ್ತ ರಾಜಕೀಯ ವಿಜ್ಞಾನ ಪ್ರಾಧ್ಯಾಪಕಿ ಡಾ. ಶಾನಿ ಕೆ.ಆರ್. ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಮೂರು ದಿನ ನಡೆಯುವ ಈ ಉತ್ಸವದಲ್ಲಿ ಸಂಗೀತ, ನೃತ್ಯ, ಸಾಹಿತ್ಯ, ರಂಗಭೂಮಿ ಹಾಗೂ ಲಲಿತಕಲೆ ವಿಭಾಗಗಳಲ್ಲಿ ವಿವಿಧ ಸ್ಪರ್ಧೆಗಳು ಇರಲಿವೆ. ಶಾಸ್ತ್ರೀಯ ಮತ್ತು ಪಾಶ್ಚಾತ್ಯ ವಾದ್ಯ/ಸ್ವರ, ಜನಪದ ನೃತ್ಯ, ಸೃಜನಾತ್ಮಕ ನೃತ್ಯ ನಿರ್ದೇಶನ, ಚರ್ಚೆ, ಭಾಷಣ, ರಸಪ್ರಶ್ನೆ, ಏಕಾಂಕ ಮತ್ತು ಕಿರು ನಾಟಕ, ಮೂಕಾಭಿನಯ, ಹಾಸ್ಯಾನುಕರಣ, ಚಿತ್ರಕಲೆ, ಕೊಲಾಜ್, ಪೋಸ್ಟರ್ ನಿರ್ಮಾಣ, ಮಣ್ಣಿನ ಶಿಲ್ಪ, ವ್ಯಂಗ್ಯಚಿತ್ರ, ರಂಗೋಲಿ ಸೇರಿದಂತೆ ಅನೇಕ ಸ್ಪರ್ಧೆಗಳು ಆಯೋಜಿಸಲ್ಪಡಲಿವೆ.
ಈ ಉತ್ಸವವು ವಿದ್ಯಾರ್ಥಿಗಳ ಕಲಾತ್ಮಕ ಪ್ರತಿಭೆಯನ್ನು ಪೋಷಿಸುವುದರ ಜೊತೆಗೆ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ವೇದಿಕೆಗಳಿಗೆ ಮುನ್ನಡೆಸುವ ಮಹತ್ವದ ಅವಕಾಶ ಒದಗಿಸುತ್ತದೆ ಎಂದು ಅವರು ತಿಳಿಸಿದರು.
ವಿಶ್ವವಿದ್ಯಾಲಯ ಆರಂಭದಿಂದಲೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಉತ್ತೇಜಿಸುವ ಪರಂಪರೆಯನ್ನು ಮುಂದುವರಿಸಿರುವುದಾಗಿ ಹೇಳಿದರು. ವೇವ್ಸ್ 2025ರಲ್ಲಿ ಪ್ರಥಮ ಸ್ಥಾನ ಗಳಿಸುವ ತಂಡಕ್ಕೆ, 2026ರ ಫೆಬ್ರವರಿ 9ರಿಂದ 13ರ ವರೆಗೆ ಮೈಸೂರಿನ ಜಿಎಸ್‌ಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್‌ನಲ್ಲಿ ನಡೆಯುವ ಎ ಐ ಯುದಕ್ಷಿಣ-ಪೂರ್ವ ವಲಯ ಅಂತರ-ವಿಶ್ವವಿದ್ಯಾಲಯ ಯುವೋತ್ಸವದಲ್ಲಿ ಭಾಗವಹಿಸುವ ಅವಕಾಶ ದೊರಕಲಿದೆ. ವಲಯ ಮಟ್ಟದಲ್ಲಿ ಆಯ್ಕೆಯಾದ ಸ್ಪರ್ಧಿಗಳಿಗೆ 2026ರ ಮಾರ್ಚ್ 10ರಿಂದ 14ರ ವರೆಗೆ ಚೆನ್ನೈಯ ಸಥ್ಯಭಾಮಾ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿಯಲ್ಲಿ ನಡೆಯುವ ಎ ಐ ಯು ರಾಷ್ಟ್ರೀಯ ಯುನಿಫೆಸ್ಟ್ನಲ್ಲಿ ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸುವ ಅವಕಾಶ ಸಿಗಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಾಧ್ಯಾಪಕರಾದ ಡಾ. ಧನಂಜಯ ಕುಂಬ್ಳೆ, ಡಾ. ವಿಶ್ವನಾಥ್, ಮತ್ತು ಪ್ರಚಾರ ಸಮಿತಿಯ ಸದಸ್ಯ, ಪತ್ರಕರ್ತ ಡಾ. ಸತೀಶ್ ಕೊಣಾಜೆ ಉಪಸ್ಥಿತರಿದ್ದರು.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

19 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ..!

February 5, 2026

ಕೆನರಾ ಬ್ಯಾಂಕ್ ದೇರಳಕಟ್ಟೆ ಶಾಖೆಯ ಶಿವರಾಮ ಕಾಸರಗೋಡು ಅವರಿಗೆ ಬೀಳ್ಕೊಡುಗೆ

February 4, 2026

ಫೆ, 8.ಹಿದಾಯತ್ ನಗರ ಹುಸೈನಿಯಾ ದರ್ಸ್ ವಾರ್ಷಿಕ ಮಹ್ಳರತುಲ್ ಬದ್ರಿಯಾ

February 4, 2026

Comments are closed.

Advertise
ಸಂಪರ್ಕಿಸಿ

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025

ನೂತನ ಅತ್ಯಾಧುನಿಕ ಫಿಸಿಯೋಥೆರಪಿ ಚಿಕಿತ್ಸಾ ಕ್ಲಿನಿಕ್ ಉದ್ಘಾಟನೆ

November 12, 2025

ಕ್ಯಾನ್ಸರ್ ಹಾಗೂ ಸ್ತ್ರೀ ರೋಗ ಜಾಗ್ರತಿ ಅರಿವು

November 11, 2025
suddi

19 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ..!

By UllalaVaniFebruary 5, 20260

ಉಳ್ಳಾಲ: 19 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್‌ ಹೊಂದಿದ್ದ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಕೈಕೋ ರೋಡ್‌ ಸುಭಾಷನಗರ ನಿವಾಸಿ ಅನ್ವರ್…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

ಕೆನರಾ ಬ್ಯಾಂಕ್ ದೇರಳಕಟ್ಟೆ ಶಾಖೆಯ ಶಿವರಾಮ ಕಾಸರಗೋಡು ಅವರಿಗೆ ಬೀಳ್ಕೊಡುಗೆ

February 4, 2026

ಫೆ, 8.ಹಿದಾಯತ್ ನಗರ ಹುಸೈನಿಯಾ ದರ್ಸ್ ವಾರ್ಷಿಕ ಮಹ್ಳರತುಲ್ ಬದ್ರಿಯಾ

February 4, 2026

ಪಟ್ಲ ಫೌಂಡೇಶನ್ ಟ್ರಸ್ಟ್: ಕೇಂದ್ರೀಯ ಮಹಿಳಾ ಘಟಕದ ವಾರ್ಷಿಕೋತ್ಸವ

February 4, 2026
1 2 3 … 1,793 Next
Automatic YouTube Gallery

|| UDUPI NATURAL KALPARASA|| ಇನ್ನು ಮುಂದೆ `ಉಡುಪಿ ನ್ಯಾಚುರಲ್' ಕಲ್ಪರಸ ಉಳ್ಳಾಲದಲ್ಲಿ ಲಭ್ಯ

ಉಳ್ಳಾಲಕ್ಕೆ ಲಗ್ಗೆ ಇಟ್ಟಿದೆ `ಉಡುಪಿ ನ್ಯಾಚುರಲ್'; ನೂತನ ಶಾಪ್‌ಗೆ ದೀಪ ಬೆಳಗಿಸಿ ಚಾಲನೆ

ಆರೋಗ್ಯಭರಿತ `ಕಲ್ಪರಸ' ಇಲ್ಲಿನ ಫೇಮಸ್ ಡ್ರಿಂಕ್
#ullalavani #news #ullala #kalparasa #udupinatural
|| UDUPI NATURAL KALPARASA|| ಇನ್ನು ಮುಂದೆ `ಉಡುಪಿ ನ್ಯಾಚುರಲ್' ಕಲ್ಪರಸ ಉಳ್ಳಾಲದಲ್ಲಿ ಲಭ್ಯ
Now Playing
|| UDUPI NATURAL KALPARASA|| ಇನ್ನು ಮುಂದೆ `ಉಡುಪಿ ನ್ಯಾಚುರಲ್' ಕಲ್ಪರಸ ಉಳ್ಳಾಲದಲ್ಲಿ ಲಭ್ಯ
ಉಳ್ಳಾಲಕ್ಕೆ ಲಗ್ಗೆ ಇಟ್ಟಿದೆ `ಉಡುಪಿ ನ್ಯಾಚುರಲ್'; ನೂತನ ಶಾಪ್‌ಗೆ ದೀಪ ಬೆಳಗಿಸಿ ...
ಉಳ್ಳಾಲಕ್ಕೆ ಲಗ್ಗೆ ಇಟ್ಟಿದೆ `ಉಡುಪಿ ನ್ಯಾಚುರಲ್'; ನೂತನ ಶಾಪ್‌ಗೆ ದೀಪ ಬೆಳಗಿಸಿ ಚಾಲನೆ

ಆರೋಗ್ಯಭರಿತ `ಕಲ್ಪರಸ' ಇಲ್ಲಿನ ಫೇಮಸ್ ಡ್ರಿಂಕ್
#ullalavani #news #ullala #kalparasa #udupinatural
ಉಮಾಮಹೇಶ್ವರಿ ಕ್ಷೇತ್ರದಲ್ಲಿ ನಡೆದ ಸಭಾ ಕಾರ್ಯಕ್ರಮ
Now Playing
ಉಮಾಮಹೇಶ್ವರಿ ಕ್ಷೇತ್ರದಲ್ಲಿ ನಡೆದ ಸಭಾ ಕಾರ್ಯಕ್ರಮ
ಕಾಪಿಕಾಡ್ ಉಮಾಮಹೇಶ್ವರಿ ಕ್ಷೇತ್ರದಲ್ಲಿ ಬ್ರಹ್ಮಲಕಶೋತ್ಸವ;ಮೂರನೇ ದಿನದ ಸಭಾ ...
ಕಾಪಿಕಾಡ್ ಉಮಾಮಹೇಶ್ವರಿ ಕ್ಷೇತ್ರದಲ್ಲಿ ಬ್ರಹ್ಮಲಕಶೋತ್ಸವ;ಮೂರನೇ ದಿನದ ಸಭಾ ಕಾರ್ಯಕ್ರಮಕ್ಕೆ ಚಾಲನೆ

ಕಟೀಲು ಕ್ಷೇತ್ರದ ಅರ್ಚಕರಾದ ಹರಿನಾರಾಯಣದಾಸ ಅಸ್ರಣ್ಣರಿಂದ ಆಶೀವರ್ಚನ
Follow us on Facebook
Recent Editions
JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version
%d