ಉಳ್ಳಾಲ : ಪ್ರಾಕೃತಿಕ ವಿಕೋಪದಿಂದ ಪಿಲಾರು ಬಳಿ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿ ಮೃತಪಟ್ಟ ಸೋಮೇಶ್ವರ ಪುರಸಭೆ ವ್ಯಾಪ್ತಿಯ ಕುಂಪಲ ಆಶ್ರಯ ಕಾಲನಿ ನಿವಾಸಿ ಕೇಶವ ಶೆಟ್ಟಿ ಅವರ ಮನೆಗೆ ಭೇಟಿ ನೀಡಿ ಐದು ಲಕ್ಷ ರೂ ಪರಿಹಾರ ಧನ ಚೆಕ್ ಅನ್ನು ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ವಿತರಿಸಿದರು. ಬಳಿಕ ಮಾತನಾಡಿದ ಅವರು ಈ ಬಾರಿಯ ಮಳೆಯಲ್ಲಿ ಉಳ್ಳಾಲ ತಾಲೂಕಿನಾದ್ಯಂತ ಕೃತಕ ನೆರೆಯಿಂದ ಅನೇಕ ಮನೆಗಳಿಗೆ ನೀರು ನುಗ್ಗಿ ಅಪಾರ ಹಾನಿಯಾಗಿದ್ದು, ಹಾನಿಗೆ ನೀಡುವ ಪರಿಹಾರ ಮೊತ್ತವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರಕಾರಕ್ಕೆ ಪತ್ರ ಬರೆದಿದ್ದೇನೆ . ಮನೆಗೆ ನೀರು ನುಗ್ಗಿದರೆ ಕಂದಾಯ ಇಲಾಖೆ ಆರು ಸಾವಿರ ಪರಿಹಾರ ನೀಡುತ್ತದೆ. ಆದರೆ ಮನೆಯೊಳಗಿನ ಗೃಹೋಪಯೋಗಿ ವಸ್ತುಗಳ ನಷ್ಟ ಅಂದಾಜಿಸಿದರೆ ಈ ಪರಿಹಾರ ಸಾಕಾಗುವುದಿಲ್ಲ. ಈ ನಿಟ್ಟಿನಲ್ಲಿ ಕೃತಕ ನೆರೆಯಿಂದ ಜಲಾವೃತಗೊಂಡ ಮನೆಗಳಿಗೆ ನೀಡುವ ಪರಿಹಾರ ಹೆಚ್ಚಿಸುವ ನಿಟ್ಟಿನಲ್ಲಿ ಸರಕಾರಕ್ಕೆ ಮತ್ತು ಸಂಬಂಧಪಟ್ಟ ಇಲಾಖೆಗೆ ಹೆಚ್ಚಿಸುವಂತೆ ಪತ್ರ ಬರೆದಿದ್ದೇನೆ. ಪ್ರಾಕೃತಿಕ ವಿಕೋಪದಿಂದ ಜಿವಹಾನಿಗೆ ರಾಜ್ಯ ಸರಕಾರ…
Author: UllalaVani
ಕಿನ್ಯ: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಕೆ.ಸಿ. ರೋಡ್ ಶಾಖೆಯ ದ್ವಿತೀಯ ವಾರ್ಷಿಕೋತ್ಸವದ ಪ್ರಯುಕ್ತ ಗ್ರಾಹಕರ ಸಭೆಯು ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಅಧ್ಯಕ್ಷತೆಯಲ್ಲಿ ಸಂಘದ ಕೆ.ಸಿ. ರೋಡ್ ಶಾಖೆಯಲ್ಲಿ ಜರುಗಿತು.ಕಾರ್ಯಕ್ರಮವನ್ನು ಸಂಘದ ಗ್ರಾಹಕರಾದ ಸಿಸ್ಟರ್ ಐಲಿನ್ ಮಥಾಯಿಸ್, ಕೆ. ಶಿವಪ್ರಸಾದ್ ಆಚಾರ್ಯ ಹಾಗೂ ಅಬ್ಬಾಸ್ ಉಚ್ಚಿಲ ರವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದರು.ಸಂಘದ ಗ್ರಾಹಕರಾದ ಸಿಸ್ಟರ್ ಐಲಿನ್ ಮಥಾಯೀಸ್ ರವರು ಮಾತನಾಡಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ತನ್ನ ಗ್ರಾಹಕ ಸ್ನೇಹಿ ಸೇವೆಯೊಂದಿಗೆ ಉತ್ತಮ ಬೆಳವಣಿಗೆಯನ್ನು ಸಾಧಿಸಿದೆ. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜನೆ ಮಾಡುತ್ತಿರುವುದು ಶ್ಲಾಘನೀಯ. ಈ ಭಾಗದಲ್ಲಿ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜನೆ ಮಾಡಿದ್ದಲ್ಲಿ ಸ್ಥಳಾವಕಾಶವನ್ನು ಮಾಡಿಕೊಡುವುದಾಗಿ ತಿಳಿಸಿದರು.ಕೆ. ಶಿವಪ್ರಸಾದ್ ಆಚಾರ್ಯ ರವರು ಮಾತನಾಡಿ ಕೆ.ಸಿ. ರೋಡ್ ಶಾಖೆಯಲ್ಲಿ ಸಿಬ್ಬಂದಿಗಳ ಗ್ರಾಹಕ ಸ್ನೇಹಿ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಅಬ್ಬಾಸ್ ಉಚ್ಚಿಲ ರವರು…
ಮಂಗಳೂರು: ಆಟಿ ತಿಂಗಳಲ್ಲಿ ತುಳು ಜನರು ಆಚರಣೆ ಮಾಡುವ ಆಟಿಡೊಂಜಿ ದಿನವನ್ನು “ಆಟಿದ ಪೊಲಬು” ಎಂಬ ಹೆಸರಿನಿಂದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘ ಮಂಗಳೂರು ಇದರ ಪ್ರಧಾನ ಕಛೇರಿ “ಆತ್ಮಶಕ್ತಿ ಸೌಧ” ಪಡೀಲ್‌ನಲ್ಲಿ ಆಚರಿಸಲಾಯಿತು.ದೈವರಾಧಕರಾದ ಪೂವಪ್ಪ ಪೂಜಾರಿಯವರು ಹಿಂಗಾರವನ್ನು ಅರಳಿಸುವ ಮೂಲಕ ಸಾಂಪ್ರದಾಯಿಕ ಶೈಲಿಯಲ್ಲಿ ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ದೈವರಾಧಕರಾದ ಪೂವಪ್ಪ ಪೂಜಾರಿ, ನಾಟಿ ವೈದ್ಯರಾದ ತಿಲಕ್‌ರಾಜ್ ಹಾಗೂ ಕಾಸರಗೋಡಿನ ಪೆರಿಯದ ಕೇರಳ ಕೇಂದ್ರ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಚೇತನ್ ಮುಂಡಾಜೆ ಯವರನ್ನು ಸಂಘದ ವತಿಯಿಂದ ಸನ್ಮಾನಿಸುವ ಮೂಲಕ ಗೌರವಿಸಲಾಯಿತು.ಕಾಸರಗೋಡಿನ ಪೆರಿಯದ ಕೇರಳ ಕೇಂದ್ರ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಚೇತನ್ ಮುಂಡಾಜೆ ಯವರು ಮಾತನಾಡಿ “ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘವು ಇವತ್ತಿನ “ಆಟಿದ ಪೊಲಬು” ಕಾರ್ಯಕ್ರಮದಲ್ಲಿ ದೈವರಾಧಕರು ಹಾಗೂ ನಾಟಿ ವೈದ್ಯರನ್ನು ಸನ್ಮಾನಿಸುವ ಮೂಲಕ ತುಳುನಾಡಿನ ಸಂಸ್ಕöತಿ ಹಾಗೂ ಭಾಷೆಯನ್ನು ಬೆಳೆಸುವ ಕೆಲಸಗಳನ್ನು ಮಾಡುತ್ತಿದೆ. ಇವರುಗಳ ಜೊತೆಯಲ್ಲಿ ನನ್ನನ್ನು ಗುರುತಿಸಿ ಸನ್ಮಾನಿಸಿರುವುದು ತುಂಬಾ ಸಂತೋಷವಾಗುತ್ತಿದೆ. ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್…
ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯವು ಜೂನ್ ಜುಲೈ 2025 ರಲ್ಲಿ ಎಲ್ಲಾ ಪದವಿ ಕಾರ್ಯಕ್ರಮಗಳ ದ್ವಿತೀಯ ಚತುರ್ಥ ಮತ್ತು ಆರನೇ ಸೆಮಿಸ್ಟರ್ ನ ಪರೀಕ್ಷೆಗಳು ಇತ್ತೀಚೆಗೆ ಮುಗಿದಿದ್ದು, ಈ ಪರೀಕ್ಷೆಗಳ ವಿವಿದ ವಿಷಯಗಳ ಮೌಲ್ಯಮಾಪನ ಕಾರ್ಯವು ಜು.2 ರಂದು ಆರಂಭಗೊಂಡು ನಾಲ್ಕು ಮೌಲ್ಯಮಾಪನ ಕೇಂದ್ರಗಳಲ್ಲಿ ಮೌಲ್ಯ ಮಾಪನ ಕಾರ್ಯವು ನಡೆಯುತ್ತಿದೆ. ಪದವಿಯ ಆರನೇ ಸೆಮಿಸ್ಟರ್ ನ ಮೌಲ್ಯಮಾಪನ ಕಾರ್ಯವು ಜು.19 ರಂದು ಪೂರ್ಣಗೊಂಡಿದ್ದು ವಿದ್ಯಾರ್ಥಿಗಳಿಗೆ ಮುಂದಿನ ಉನ್ನತ ವ್ಯಾಸಾಂಗಕ್ಕಾಗಿ ಹಾಗೂ ಉದ್ಯೋಗದ ಹಿತದೃಷ್ಟಿಯಿಂದ ಮೌಲ್ಯಮಾಪನ ನಡೆದ ಮೂರೇ ದಿನಗಳಲ್ಲಿ 15, 534 ವಿದ್ಯಾರ್ಥಿಗಳ ಫಲಿತಾಂಶವನ್ನು ಜು.22 ರಂದು ಗುರುವಾರ ಮಂಗಳೂರು ವಿವಿಯ UUCMS (ಯುಯುಸಿಎಮ್ ಎಸ್ ) ನ ಅಧಿಕೃತ ವೆಬ್ಸೈಟ್ www.uucms.karnataka.gov.in ನಲ್ಲಿ ಪ್ರಕಟಿಸಿದೆ.ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್ .ಧರ್ಮ ಅವರು ಮಂಗಳೂರು ವಿವಿ ಸಿಂಡಿಕೇಟ್ ಸಭಾಂಗಣದಲ್ಲಿ ಫಲಿತಾಂಶದ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದರು.ಈ ಸಂದರ್ಭದಲ್ಲಿ ಮಂಗಳೂರು ವಿವಿ ಕುಲಸಚಿವ ಕೆ.ರಾಜು ಮೊಗವೀರ, ಪರೀಕ್ಷಾಂಗ ಕುಲಸಚಿವ ಪ್ರೊ.ದೇವೇಂದ್ರಪ್ಪ ಹೆಚ್, ಹಣಕಾಸು ಅಧಿಕಾರಿ ಪ್ರೊ.ವೈ.ಸಂಗಪ್ಪ…
ಬೆಂಗಳೂರು : ಬೆಂಗಳೂರು ತಾಯಿಬೇರು ಸಾಮಾಜಿಕ ಮತ್ತು ಸಾಂಸ್ಕೃತಿಕ ಯುವ ವೇದಿಕೆಯು ಕೊಡಮಾಡುವ ಪ್ರತಿಷ್ಠಿತ “ಗಡಿನಾಡ ಸಾಹಿತ್ಯ ಭೂಷಣ ಪ್ರಶಸ್ತಿ”ಗೆ ಕಾಸರಗೋಡಿನ ಪತ್ರಕರ್ತ, ಜಯಕಿರಣ, ಕೆಸಿಎನ್ ಛಾನೆಲ್ ವರದಿಗಾರ, ನಿರೂಪಕ, ಲೇಖಕ, ಸಂಘಟಕ ರವಿ ನಾಯ್ಕಾಪು ಅವರನ್ನು ಆಯ್ಕೆ ಮಾಡಲಾಗಿದೆ.ತಾಯಿಬೇರು ಸಾಮಾಜಿಕ ಮತ್ತು ಸಾಂಸ್ಕೃತಿಕ ಯುವ ವೇದಿಕೆ ಹಾಗೂ ಅಖಿಲ ಕರ್ನಾಟಕ ಸಾಹಿತಿ ಕಲಾವಿದರ ಒಕ್ಕೂಟಗಳ ನೇತೃತ್ವದಲ್ಲಿ ಈ ತಿಂಗಳ 27 ರಂದು ಬೆಂಗಳೂರಿನ ಗೆಜ್ಜೆನಾದ ಸ್ಟುಡಿಯೋ ಸಭಾಂಗಣದಲ್ಲಿ ನಡೆಯಲಿರುವ ಕನ್ನಡ ಸಂಸ್ಕೃತಿ ಸಮಾರಂಭದಲ್ಲಿ ಪ್ರಶಸ್ತಿ ವಿತರಣೆ ನಡೆಯಲಿದೆಯೆಂದು ವೇದಿಕೆಯು ಪತ್ರಿಕಾ ಹೇಳಿಕೆಯಲ್ಲಿ ಘೋಷಿಸಿದೆ. ಪ್ರಶಸ್ತಿಯು 10 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿದೆ.ಕಳೆದ 25 ವರ್ಷಗಳಿಂದ ಕಾಸರಗೋಡಿನಲ್ಲಿ ಪತ್ರಿಕಾ ರಂಗದಲ್ಲಿ ಸಕ್ರಿಯರಾಗಿರುವ ರವಿ ನಾಯ್ಕಾಪು ಅವರ ಸಾಹಿತ್ಯ ವಲಯದ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ದಾನಗಂಗೆ, ಸ್ನೇಹಗಂಗೆ, ಗಾನಗಂಗೆ, ಸಾವಿರದ ಸಾಧಕ, ಸಮಾಜ ಸಂಪದ ಎಂಬೀ ಕೃತಿಗಳನ್ನು ರಚಿಸಿರುವ ರವಿ ಅವರ “ಸ್ನೇಹಗಂಗೆ” ಕೃತಿಯ ಸಂಕ್ಷಿಪ್ತ…
ಬೆಂಗಳೂರು, ಜುಲೈ 22: ಭಾರತ ಸರ್ಕಾರದ ಭೂವಿಜ್ಞಾನ ಮಂತ್ರಾಲಯದ ಅಧೀನದ ಭಾರತೀಯ ಹವಾಮಾನ ಇಲಾಖೆ ಇಂದು ಮಧ್ಯಾಹ್ನ 1 ಗಂಟೆಗೆ ನೀಡಿರುವ ತುರ್ತು ಮುನ್ಸೂಚನೆಯ ಪ್ರಕಾರ, ಮುಂದಿನ 3 ಗಂಟೆಗಳ ಅವಧಿಯಲ್ಲಿ ಕರ್ನಾಟಕದ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡದ ಕೆಲವು ಭಾಗಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಮಳೆಯ ಜತೆಗೆ ಗಂಟೆಗೆ 40 ರಿಂದ 50 ಕಿಮೀ ವೇಗದ ಬಿರುಗಾಳಿಯೂ ಬೀಸಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈ ಹವಾಮಾನ ಪರಿಸ್ಥಿತಿಯಿಂದಾಗಿ ಕೆಲವು ಪ್ರದೇಶಗಳಲ್ಲಿ ತಾತ್ಕಾಲಿಕವಾಗಿ ವಿದ್ಯುತ್ ವ್ಯತ್ಯಯ ಸಂಭವಿಸುವ ಸಾಧ್ಯತೆ ಇದೆ. ಉರುಳುವ ಅಥವಾ ಕೊಚ್ಚಿಹೋಗುವ ಅಪಾಯದಲ್ಲಿರುವ ಮರಗಳ ಕೊಂಬೆಗಳು ಬೀಳಬಹುದಾದ ಕಾರಣ ಸಂಚಾರ ದಟ್ಟಣೆ ಎದುರಾಗಬಹುದೆಂದು ಎಚ್ಚರಿಕೆ ನೀಡಲಾಗಿದೆ. ಸಾರ್ವಜನಿಕರು ಭದ್ರತೆಯ ದೃಷ್ಟಿಯಿಂದ ಮನೆ ಒಳಗೆ ಉಳಿಯಬೇಕು, ಕಿಟಕಿಗಳು ಮತ್ತು ಬಾಗಿಲುಗಳನ್ನು ಮುಚ್ಚಿಕೊಳ್ಳಬೇಕು ಹಾಗೂ ತುರ್ತು ಅವಶ್ಯಕತೆ ಇಲ್ಲದ ಹೊರತು ಹೊರಗಡೆ ಪ್ರಯಾಣಿಸುವುದನ್ನು ತಪ್ಪಿಸಿಕೊಳ್ಳಬೇಕು.ಮರಗಳ ಕೆಳಗೆ ನಿಲ್ಲುವುದು ಅಪಾಯಕಾರಿಯಾದ್ದರಿಂದ ಸಾರ್ವಜನಿಕರು ಅದನ್ನು…
ಕುತ್ತಾರ್ : ತಾಲೂಕು ಪಂಚಾಯತ್ ಮಾಜಿ ಸದಸ್ಯೆ ದಯಾವತಿ ಎಂಬವರ ಪುತ್ರ ಕುತ್ತಾರು ನಿವಾಸಿ ಸಚಿನ್ ಕುತ್ತಾರ್ (39) ಅನಾರೋಗ್ಯದಿಂದಾಗಿ ಇತ್ತೀಚೆಗೆ ಮನೆಯಲ್ಲಿ ನಿಧನ ಹೊಂದಿದರು. ಬಜಾಜ್ ಅಲಾಯನ್ಸ್ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಚಿನ್ ವಿವಾಹಿತರಾಗಿದ್ದರು. ಕುತ್ತಾರು ಭಾಗದ ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದವರು ಒಂದು ತಿಂಗಳಿನಿಂದ ಅನಾರೋಗ್ಯಕ್ಕೀಡಾಗಿ ನಿಧನ ಹೊಂದಿದ್ದಾರೆ.ನಾರಾಯಣ ಸಪಲ್ಯ- ದಯಾವತಿ ದಂಪತಿ ಪುತ್ರರಾಗಿರುವ ಸಚಿನ್ ಪತ್ನಿ, ಮಗಳು, ತಂದೆ, ತಾಯಿ ಹಾಗೂ ಇಬ್ಬರು ಸಹೋದರರನ್ನು ಅಗಲಿದ್ದಾರೆ. ತಾಯಿ ದಯಾವತಿ ಅವರು ತಾಲೂಕು ಪಂಚಾಯತ್ ಮಾಜಿ ಸದಸ್ಯೆಯಾಗಿದ್ದರು.
ಕುಂಪಲ : ಕುಂಪಲ ಶಿವಪುರದ ಶ್ರೀ ದುರ್ಗಾಪರಮೇಶ್ವರ ಕ್ಷೇತ್ರದ ಶ್ರೀ ದುರ್ಗಾಪರಮೇಶ್ವರ ಮಹಿಳಾ ಸೇವಾ ಸಮಿತಿಯ ಆಶ್ರಯದಲ್ಲಿ ನಡೆಯುವ ಶ್ರೀ ವರ ಮಹಾಲಕ್ಷ್ಮಿ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಇಂದು ಕ್ಷೇತ್ರದಲ್ಲಿ ನಡೆಯಿತು. ಕ್ಷೇತ್ರದಲ್ಲಿ ಜರಗಿದ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದ ಬಳಿಕ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಸೇವಾ ಸಮಿತಿ, ಮಹಿಳಾ ಸೇವಾ ಸಮಿತಿಯ ಸದಸ್ಯೆಯರು ಹಾಗೂ ನೂರಾರು ಭಕ್ತರು ಉಪಸ್ಥಿತರಿದ್ದರು.
ತೊಕ್ಕೊಟ್ಟು : ತುಳುನಾಡಿನ ವಿಶೇಷ ಪದ್ಧತಿ,ಆಚರಣೆ, ಸಂಸ್ಕೃತಿ ಗಳನ್ನು ಯುವ ಪೀಳಿಗೆಗೆ ಪರಿಚಯಿಸುವ ಕಾರ್ಯ ಆಟಿ ತಿಂಗಳಲ್ಲಿ ಪ್ರಸ್ತುತ ಮಾಡುತ್ತಿರುವ ಕಾರ್ಯಕ್ರಮ ಗಳ ಮುಖೇನ ಆಗುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೇಳಿದರು. ಅವರು ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ವತಿಯಿಂದ ಕುತ್ತಾರಿನ ಎಮ್.ವೈ.ಎಮ್. ಸಭಾಂಗಣದಲ್ಲಿ ನಡೆದ ಆಟಿಡೊಂಜಿ ಕೂಡಾಟಿಕೆ – 2025 ಕಾರ್ಯಕ್ರಮವನ್ನು, ವೇದಿಕೆಯಲ್ಲಿ ಸಿದ್ಧ ಪಡಿಸಿರುವ ಒಣಮೀನಿನ ಪದಾರ್ಥದ ಉಪ್ಪು,ಖಾರ ರುಚಿ ನೋಡಿ ವಿಶಿಷ್ಠವಾಗಿ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಅಧ್ಯಕ್ಷರಾದ ಜೀವನ್ ಕುಮಾರ್ ತೊಕ್ಕೊಟ್ಟು ವಹಿಸಿದ್ದರು.ಅತಿಥಿಗಳಾಗಿ ಕೊಲ್ಯ ಬಿಲ್ಲವ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಹರೀಶ್ ಮುಂಡೋಳಿ ಭಾಗವಹಿಸಿದ್ದರು. ವೇದಿಕೆಯಲ್ಲಿ ಗೌರವ ಸಲಹೆಗಾರರಾದ ಆನಂದ ಕೆ.ಅಸೈಗೋಳಿ, ಗೌರವಧ್ಯಕ್ಷರಾದ ರಾಕೇಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಗಣೇಶ್ ಕಾಪಿಕಾಡ್, ಕೋಶಾಧಿಕಾರಿ ಹರೀಶ್ ಅಂಬ್ಲಮೊಗರು, ಕಾರ್ಯಕ್ರಮದ ಸಹ ಸಂಚಾಲಕರಾದ ಪ್ರಸಾದ್ ಕೊಂಡಾಣ, ಸುಧಾಕರ ಬಜಾಲ್ ಉಪಸ್ಥಿತರಿದ್ದರು.ಪ್ರತಿಷ್ಠಾನದ ಪ್ರಮುಖರಾದ ದೀಕ್ಷಿತ್ ನಿಸರ್ಗ ಸ್ವಾಗತಿಸಿದರು. ಸಂಚಾಲಕರಾದ ದಾಮೋದರ ನಡಾರ್ ವಂದಿಸಿದರು. ಉಪಾಧ್ಯಕ್ಷ ರಾದ…
ಸಂಕೊಳಿಗೆ : ಇಲ್ಲಿನ ಭಗವತೀ ಶಾಲೆಯಲ್ಲಿ ರಕ್ಷಕ ಶಿಕ್ಷಕ ಸಮಿತಿ ವತಿಯಿಂದ ಆಟಿದ ಕೂಡಾಟಿಕೆಡ್ ಒಂಜಿ ದಿನ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಭಗವತೀ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷರಾದ ದಿನಕರ್ ಉಳ್ಳಾಲ್ ಮತ್ತು ಟ್ರಸ್ಟಿ ಸದಾಶಿವ ಉಳ್ಳಾಲ್ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ 2024-25 ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಾದ ಮೇಧ.ಜೆ.ಬಿ, ವರ್ಷಿಣಿ ರೈ, ತೇಜಸ್ವಿನಿ.ವಿ.ವೈ, ಹಿರಾಲ್.ಎಸ್.ಬಂಗೇರ ಇವರನ್ನು ಅಭಿನಂದಿಸಲಾಯಿತು.ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ರಾಘವ ಉಚ್ಚಿಲ್, ಕೋಶಾಧಿಕಾರಿ ಮಾಧವ ತಲಪಾಡಿ ಟ್ರಸ್ಟಿ ಶ್ರೀಮತಿ ಗಜಲಕ್ಷ್ಮಿ, ಭಗವತೀ ಶಾಲೆಯ ಮುಖ್ಯ ಶಿಕ್ಷಕಿಯರಾದ ಪ್ರಮೀಳಾ ಶಾಂತರಾಮ್, ಭಗವತೀ ಶಾಲೆಯ ಪೌಢಶಾಲೆ ಮತ್ತು ಪ್ರಾಥಮಿಕ ಶಾಲೆಯ ರಕ್ಷಕ ಶಿಕ್ಷಕ ಸಮಿತಿಯ ಅಧ್ಯಕ್ಷರಾದ ಸುನೀತ ಮತ್ತು ಅಮೃತ ಶೆಟ್ಟಿ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಸದಸ್ಯರ ಮನೆಯವರು ಸಿದ್ಧ ಪಡಿಸಿರುವ ಆಟಿ ತಿಂಗಳ ಸುಮಾರು 35 ಬಗೆಯ ವಿವಿಧ ಆಹಾರ ಪದಾರ್ಥಗಳನ್ನು ಎಲ್ಲರೂ ಸವಿದರು. ಕಾರ್ಯಕ್ರಮದಲ್ಲಿ ಸದಸ್ಯರಾದ ಸುಮ, ಕವಿತ ಸುರೇಶ್, ಕವಿತ ಶೆಟ್ಟಿ, ಪ್ರಫುಲ್ಲಾ, ಲಕ್ಷ್ಮಿಹರೀಶ್, ವನಿತ,…

