ಕೊಲ್ಯ; ತೊಕ್ಕೊಟ್ಟುವಿನ ಸ್ವಗೃಹದಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದ ಬಿಜೆಪಿ ಮುಖಂಡೆ, ಸಾಮಾಜಿಕ ಕಾರ್ಯಕರ್ತೆ ಎಂದೇ ಖ್ಯಾತಿ ಗಳಿಸಿದ್ದ ಲಲಿತಾ ಡಿ ಸುಂದರ್ ಅವರಿಗೆ ಗೌರವ ನುಡಿ-ನಮನವನ್ನು ಸಲ್ಲಿಸುವ ಸಲುವಾಗಿ ಬಿಜೆಪಿ ವಿಧಾನಸಭಾ ಕ್ಷೇತ್ರ ಮಂಗಳೂರು ವತಿಯಿಂದ ಕೊಲ್ಯದ ಶ್ರೀ ಶಾರದ ಸಭಾ ಭವನದಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು.


ಈ ವೇಳೆ ಸಭೆಗೆ ಆಗಮಿಸಿದ್ದ ಎಲ್ಲರೂ ಲಲಿತಾ ಡಿ ಸುಂದರ್ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದ್ದಾರೆ.

ಬಳಿಕ ಉಳ್ಳಾಲ ವಿಧಾನ ಸಭಾದ ಮಾಜಿ ಶಾಸಕರಾದ ಜಯರಾಮ್ ಶೆಟ್ಟಿ ನುಡಿನಮನ ಸಲ್ಲಿಸಿ, “ಯಥಾಸ್ಯಂ ಮರಣಂ ಧ್ರುವಂ” ಎಂದರೆ “ಹುಟ್ಟಿದ ಪ್ರತಿ ಜೀವಕ್ಕೂ ಮರಣವು ನಿಶ್ಚಿತ”. ಇದು ಜೀವನದ ಅನಿವಾರ್ಯ ಸತ್ಯವನ್ನು ಹೇಳುತ್ತದೆ, ಹುಟ್ಟಿದ ಎಲ್ಲರೂ ಅಂತಿಮವಾಗಿ ಮರಣಹೊಂದುತ್ತಾರೆ. ಆದರೆ ಲಲಿತಾ ಅವರದ್ದು, ಸಾಯುವ ವಯಸ್ಸಲ್ಲ. ಬಿಜೆಪಿ ಪಕ್ಷ ಬಲಿಷ್ಠಗೊಳಿಸಲು ದಿ.ಲಲಿತಾ ಡಿ ಸುಂದರ್ ಅವರ ಕೊಡುಗೆ ಮಹತ್ವದ್ದಾಗಿದೆ ಎನ್ನುತ್ತಾ ಅವರ ಕಾರ್ಯವೈಖರಿಯನ್ನು ನೆನಪಿಸಿಕೊಂಡರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ರವೀಂದ್ರ ಶೆಟ್ಟಿ ಉಳಿದೊಟ್ಟು ಮಾತನಾಡಿ, ದಿ|ಲಲಿತಾ ಅವರು ಎಲ್ಲರಿಗೂ ಮಾದರಿಯಾಗುವಂತಹ ದಿಟ್ಟ ಮಹಿಳೆ. ನಾನು ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಲಲಿತಾ ಅವರ ಅಂಗಡಿಗೆ ಹೋಗುತ್ತಿದ್ದೆ ಎಂದು ತಮ್ಮ ಹಳೆನೆನಪನ್ನು ಮತ್ತೊಮ್ಮೆ ನೆನಪಿಸಿಕೊಂಡಿದ್ದಾರೆ. ಅವರ ಇಡೀ ಕುಟುಂಬವೇ ಬಿಜೆಪಿ ಪಕ್ಷಕ್ಕಾಗಿ ದುಡಿದಿದೆ. ಕೆಲ ವ್ಯಕ್ತಿಗಳ ನೆನಪು ಯಾವತ್ತೂ ಮನದಿಂದ ದೂರವಾಗುವುದಿಲ್ಲ. ಅವರ ಗುಣ, ಕಾರ್ಯ, ಕೊಡುಗೆ ಎಲ್ಲವೂ ಮನದಲ್ಲಿ ಅಚ್ಚಳಿಯಂತೆ ಉಳಿಯುತ್ತದೆ ಎಂದು ಅಭಿಪ್ರಾಯಪಟ್ಟರು.

ದಕ್ಷಿಣ ಕನ್ನಡ ಜಿಲ್ಲಾ ಸಂಸದರಾದ ಬ್ರಿಜೇಶ್ ಚೌಟ ಮಾತನಾಡಿ, ಕಳೆದ ಬಾರಿ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಆಭ್ಯರ್ಥಿಯಾಗಿದ್ದಾಗ ಸ್ವತಃ ಲಲಿತಾ ಸುಂದರ್ ಅವರು ಕರೆ ಮಾಡಿ ವಿಚಾರಿಸಿದ್ದರು. ತಾಯಿಯಂತೆ ಮಮತೆಯನ್ನು ತೋರುತ್ತಿದ್ದ ಲಲಿತಾ ಸುಂದರ್ ಅವರು ಒಬ್ಬ ರಾಜಕೀಯದ ದಿಟ್ಟ ಮಹಿಳೆ. ಅವರ ಮಾತೃ ಹೃದಯಕ್ಕೆ ಸೋಲದವರಿಲ್ಲ. ಉಳ್ಳಾಲ ಕ್ಷೇತ್ರಕ್ಕೆ ಲಲಿತಾ ಸುಂದರ್ ಅವರು ವಿಶೇಷವಾದ ಕೊಡುಗೆ ನೀಡಿದ್ದಾರೆ ಎಂದರು.

ಹಿರಿಯ ನಾಯಕರಾದ ಸೀತಾರಾವi ಬಂಗೇರ ಅವರು ಮಾತನಾಡಿ, ಬಿಜೆಪಿಗಾಗಿ ನಿಷ್ಠೆಯಿಂದ ದುಡಿದ ಹಣ್ಣುಮಗಳು ಲಲಿತಾ ಅವರು. ಬಿಜೆಪಿ ಕಚೇರಿಯನ್ನು ಉಚಿತವಾಗಿ ದಿ.ಲಲಿತಾ ಡಿ ಸುಂದರ್ ಅವರು ನೀಡಿದ್ದಾರೆ. ಅವರ ಕೊಡುಗೆಯನ್ನು ಎಂದಿಗೂ ಮರೆಯಬಾರದು. ಪಾರ್ಟಿಗಾಗಿ ದುಡಿದ ವ್ಯಕ್ತಿಗಳನ್ನು ಸದಾ ನೆನಪಿನಲ್ಲಿರಿಸುವಂತಹ ಪ್ರಯತ್ನವಾಗಲಿದೆ ಎಂದರು.

ಬಿಜೆಪಿ ನಾಯಕರಾದ ಚಂದ್ರಶೇಕರ್ ಉಚ್ಚಿಲ್ ಮಾತನಾಡಿ, 1983 ಉಳ್ಳಾಲ ಸಭಾಕ್ಷೇತ್ರದ ಬಿಜೆಪಿ ಕಚೇರಿಯಾಗುವ ಸಂದರ್ಭದಲ್ಲಿ ಲಲಿತಾ ಸುಂದರ್ ಅವರ ಜೊತೆಗೆ ಸೀತಾರಾಮ ಬಂಗೇರ ಅವರ ಕೊಡುಗೆ ಅಪಾರ. ಆ ಸಂದರ್ಭದಲ್ಲಿ ಮಹಿಳೆಯರ ಸಂಖ್ಯೆ ಕಡಿಮೆ. ಹಾಗಿರುವಾಗ ಅಧ್ಯಕ್ಷತೆಯ ಜವಾಬ್ದಾರಿಯನ್ನು ಲಲಿತಾ ಅವರು ವಹಿಸಿಕೊಂಡು, ಕಾರ್ಯಕರ್ತರ ವಿಶ್ವಾಸವನ್ನು ಗಳಿಸಿಕೊಂಡಿದ್ದರು ಎಂದರು.

ಬಿಜೆಪಿ ಮುಖಂಡರಾದ ಸಂತೋಷ್ ಕುಮಾರ್ ಬೋಳಿಯಾರ್ ಮಾತನಾಡಿ, ಲಲಿತಾ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ಭೇಟಿ ನೀಡಿ ಅವರ ಜೊತೆ ಒಂದಿಷ್ಟು ಹಾಸ್ಯವನ್ನು ಮಾಡಿದ್ದೆ. ಇಂದು ಅವರು ದೈವಧೀನರಾಗಿದ್ದಾರೆ. ಲಲಿತಾ ಅವರು ಕೊನೆಗಾದಲ್ಲೂ ತನ್ನ ಸೊಸೆಯನ್ನು ಹೊಗಳುತ್ತಿದ್ದರು. ಅವರ ಅಂತಿವiಯಾತ್ರೆಯಲ್ಲಿ ಸೇರಿದ ಜನದಿಂದಲೇ ಅವರ ಸಾಮಾಜಿಕ ಕೊಡುಗೆ ಎಂತದ್ದು ಎಂಬುವುದು ತಿಳಿಯುತ್ತದೆ ಎಂದರು.

ಬಿಜೆಪಿ ಜಿಲ್ಲಾ ಕಾರ್ಯದರ್ಶಿಯಾದ ದಿನೇಶ್ ಅಮ್ಟೂರು ಮಾತನಾಡಿ, ಉಳ್ಳಾಲದ ಹೆಸರನ್ನು ರಾಜ್ಯದಲ್ಲಿ ಪಸರಿಸಿದಂತಹ ಉಕ್ಕಿನ ಮಹಿಳೆ ಲಲಿತಾ ಡಿ ಸುಂದರ್ ಎಂದರೆ ತಪ್ಪಗಲಾರದು. ಇಂದು ಅವರ ನೆನಪಿಗಾಗಿ ಶ್ರದ್ಧಾಂಜಲಿ ಸಭೆಯನ್ನು ನಡೆಸಲಾಗಿದೆ ಎಂದಿದ್ದಾರೆ.

ಉಳ್ಳಾಲ ಮೊಗವೀರ ಸಮಾಜದ ಅಧ್ಯಕ್ಷರಾದ ಯಶವಂತ್ ಅಮೀನ್ ಮಾತನಾಡಿ, ಒಂದು ಹೂವಿನ ಗಿಡದಲ್ಲಿ ಸಾಮಾನ್ಯವಾಗಿ ಹೂ ಅರಳುತ್ತದೆ ಬಳಿಕ ಬಾಡಿಹೋಗುತ್ತದೆ. ಆದರೆ ಲಲಿತಾ ಸುಂದರ್ ಅವರು ಈ ಮಾತಿಗೆ ವ್ಯತಿರಿಕ್ತರಾಗಿದ್ದಾರೆ. ಅವರು ತಮ್ಮ ಜೀವನವನ್ನು ರಾಷ್ಟçಕ್ಕಾಗಿ, ಬಿಜೆಪಿ ಪಕ್ಷಕ್ಕಾಗಿ ಅರ್ಪಿಸಿದವರು. ಅವರು ಪುನರ್‌ಜನ್ಮ ಪಡೆದು ಸಂಘ ಸಂಸ್ಥೆಗಳಲ್ಲಿ ಕೆಲಸ ಮಾಡುವಂತಾಗಲಿ ಎಂದು ಆಶಿಸಿದರು.

ಸಭೆಯನ್ನು ಅಧ್ಯಕ್ಷತೆಯನ್ನು ವಹಿಸಿ, ಮಾತನಾಡಿದ ಉಳ್ಳಾಲ ಬಿಜೆಪಿ ಮಂಡಲದ ಅಧ್ಯಕ್ಷರಾದ ಜಗದೀಶ್ ಆಳ್ವ ಕುವೆತ್ತಬೈಲು ಅವರು, ಕಾಂಗ್ರೆಸ್, ಕಮ್ಯೂನಿಸ್ಟ್ ಅಬ್ಬರದ ಸಂದರ್ಭದಲ್ಲಿ ಬಿಜೆಪಿ ಪಕ್ಷವನ್ನು ಸದೃಢವಾಗಿ ಮುನ್ನಡೆಸಿಕೊಂಡು ಬಂದ ನಾಯಕರ ಪೈಕಿ ಲಲಿತಾ ಡಿ ಸುಂದರ್ ಅವರು ಕೂಡ ಒಬ್ಬರು. ಕಾರ್ಯಕರ್ತರನ್ನು ಮಕ್ಕಳಂತೆ ನೋಡಿಕೊಳ್ಳುತ್ತಿದ್ದ ಮಾತೃ ಹೃದಯಿ ಲಲಿತಾ ಡಿ ಸುಂದರ್ ಎನ್ನುತ್ತಾ ಭಾವನಾತ್ಮಕ ಕ್ಷಣಗಳನ್ನು ಸ್ಮರಿಸಿಕೊಂಡÀರು.

ದುರ್ಗಾವಾಹಿನಿ ಮಹಿಳಾ ಮಂಡಲದ ಮಾಜಿ ಅಧ್ಯಕ್ಷೆ, ಬಿಜೆಪಿ ಮುಖಂಡೆ ಧನಲಕ್ಷಿö್ಮÃ ಗಟ್ಟಿ ಮಾತನಾಡಿ, ಲಲಿತಾ ಡಿ ಸುಂದರ್ ಅವರು ನನ್ನ ರಾಜಕೀಯಕ್ಕೆ ವೈಯಕ್ತಿಕವಾಗಿ ಪ್ರೇರಣೆಯಾದವರು. ಕರ್ನಾಟಕದಲ್ಲಿ ಮಹಿಳಾ ಮೋರ್ಛಾ ಸ್ಥಾಪನೆಯಾಗಬೇಕು ಎಂಬ ಸಂದರ್ಭದಲ್ಲಿ ಮಹಿಳಾ ಮೋರ್ಛಾದ ಮೊದಲ ಅಧ್ಯಕ್ಷರಾಗಿ ಪಕ್ಷವನ್ನು ಬಲಿಷ್ಠಗೊಳಿಸಿದರುವ ಲಲಿತಾ ಡಿ ಸುಂದರ್ ಎಂದರು.

ಶ್ರದ್ಧಾಂಜಲಿ ಸಭೆಯಲ್ಲಿ ದಿ| ಲಲಿತಾ ಸುಂದರ್ ಅವರ ಸೊಸೆಯಾದ ಮೀರಾ, ವಕೀಲರಾದ ಮೋಹನ್ ರಾಜ್ ಕೆ ಆರ್ ಉಳ್ಳಾಲ, ದಾಸ್ ಚಾರಿಟೇಬಲ್ ಟ್ರಸ್ಟ್ ಸ್ಥಾಪಾಧ್ಯಕ್ಷರಾದ ಅನಿಲ್ ದಾಸ್, ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ, ಮಂಡಲದ ಪ್ರಧಾನ ಕಾರ್ಯದರ್ಶಿಗಳು, ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಜೀವನ್ ಕುಮಾರ್ ತೊಕ್ಕೊಟು ಪದಾಧಿಕಾರಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.





