Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
UllalavaniUllalavani
suddi

ನೋವು ತಿಂದು ಸಾಕಾಯಿತು; ದಯಾಮರಣಕ್ಕೆ ಕೋರಿಕೆ

UllalaVaniBy UllalaVaniNovember 25, 2025No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ದಕ್ಷಿಣ ಆಸ್ಟ್ರೇಲಿಯಾದ ಅಡಿಲೇಡ್‌ನ ಅನ್ನಾಲೀಸ್ ಹಾಲೆಂಡ್ ಎಂಬ 25 ವರ್ಷದ ಯುವತಿ ಹಲವು ವರ್ಷಗಳಿಂದ ಅಪರೂಪದ ಹಾಗೂ ಗುಣಪಡಿಸಲಾಗದ ನರವೈಜ್ಞಾನಿಕ ರೋಗದಿಂದ ಬಳಲುತ್ತಿದ್ದಾರೆ. ಇದೀಗ ಈ ರೋಗದಿಂದ ಬೇಸತ್ತು ದಯಾಮರಣಕ್ಕೆ ಮುಂದಾಗಿದ್ದಾರೆ. ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಅವರಿಗೆ 18ನೇ ವಯಸ್ಸಿನಲ್ಲಿ ಆಟೋಇಮ್ಯೂನ್ ಆಟೋನೊಮಿಕ್ ಗ್ಯಾಂಗ್ಲಿಯೊಪತಿ (AAG) ಇರುವುದು ಪತ್ತೆಯಾಯಿತು. ಈ ಕಾಯಿಲೆ ಇರುವ ಜನರಲ್ಲಿ ರೋಗನಿರೋಧಕ ವ್ಯವಸ್ಥೆಯು ಸರಿಯಾಗಿ ಕೆಲಸ ಮಾಡುವುದಿಲ್ಲ. ಇದು ನರಕೋಶಗಳ ಮೇಲೆ ದಾಳಿಯನ್ನು ಮಾಡಿ. ಹೃದಯ ಬಡಿತ, ರಕ್ತದೊತ್ತಡ ಮತ್ತು ಜೀರ್ಣಕ್ರಿಯೆ ಮೇಲೆ ಪರಿಣಾಮ ಉಂಟು ಮಾಡುತ್ತದೆ. ಕೊನೆಗೆ ಇದು ನರವೈಜ್ಞಾನಿಕ ರೋಗಕ್ಕೆ ಕಾರಣವಾಗುತ್ತದೆ. ಅಡಿಲೇಡ್‌ನ ಅನ್ನಾಲೀಸ್ ಹಾಲೆಂಡ್ ತಮ್ಮ ಬಾಲ್ಯದ ಬಹುಪಾಲು ಆಸ್ಪತ್ರೆಗಳಲ್ಲಿ ಕಳೆದಿದ್ದಾರೆ. ವೈದ್ಯರು ಅವರಿಗೆ ಇರುವ ರೋಗದ ಬಗ್ಗೆ ಪತ್ತೆ ಮಾಡಲು ಸಾಧ್ಯವಾಗಿಲ್ಲ.

ಈ ಅಪರೂಪದ ರೋಗದಿಂದ ಸ್ಥಿತಿ ಹದಗೆಟ್ಟಿತು, ಅಡಿಲೇಡ್‌ ಅವರು ನಿರಂತರ ನೋವು, ವಾಕರಿಕೆ, ದಿನನಿತ್ಯ ವಾಂತಿ ಮಾಡುತ್ತಿದ್ದರು. ಕಳೆದ ಒಂದು ದಶಕದಿಂದ, ಅವರು ಸಂಪೂರ್ಣವಾಗಿ ಪ್ಯಾರೆನ್ಟೆರಲ್ ಪೌಷ್ಟಿಕಾಂಶವನ್ನು (TPN) ಅವಲಂಬಿಸಿದ್ದು, ಅಭಿದಮನಿ ಮೂಲಕ ಎಲ್ಲಾ ಪೋಷಣೆಯನ್ನು ಪಡೆಯುತ್ತಿದ್ದಾರೆ. ಇದರಿಂದ ಬಹು ಅಂಗಾಂಗ ವೈಫಲ್ಯ, ಬೆನ್ನುಮೂಳೆ ಮುರಿತ, ಸೀಳು ಎದೆಮೂಳೆ ಮತ್ತು ಇತರ ತೀವ್ರ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಇದರ ಜತೆಗೆ ಅವರಿಗೆ ಆಹಾರವನ್ನು IV ಮೂಲಕ ನೀಡಲಾಗುತ್ತಿದೆ. ಒಂದು ವೇಳೆ ಮುಂದಿನ ದಿನಗಳಲ್ಲಿ IV ಗಳ ಮೂಲಕ ಆಹಾರವನ್ನು ನೀಡಲು ಸಾಧ್ಯವಾಗದಿದ್ದಾಗ, ಸಾವು ಖಂಡಿತ ಎಂಬ ಆಂತಕದಲ್ಲಿದ್ದಾರೆ. ಹೀಗಾಗಿ ಪ್ರತಿದಿನ ಈ ನೋವು ತಿಂದು ಸಾಕಾಗಿದೆ ಎಂದು ದಯಾಮರಣಕ್ಕೆ ಮುಂದಾಗಿದ್ದಾರೆ.

ನೋವು ತಿಂದು ಸಾಕಾಯಿತು:

ಈ ಬಗ್ಗೆ ಅಡಿಲೇಡ್‌ನ ಅನ್ನಾಲೀಸ್ ಹಾಲೆಂಡ್ ಇನ್ಸ್ಟಾಗ್ರಾಮ್​​ನಲ್ಲಿ ಕೆಲವೊಂದು ಪೋಸ್ಟ್​​ಗಳನ್ನು ಹಂಚಿಕೊಂಡಿದ್ದಾರೆ. “ನನಗೆ ಇಷ್ಟು ಚಿಕ್ಕ ವಯಸ್ಸಿಗೆ ಇಂಥಹ ಕಾಯಿಲೆ ಬರುತ್ತದೆ ಎಂದು ಕಲ್ಪನೆ ಕೂಡ ಇರಲಿಲ್ಲ. ಸಾಕಾಗಿದೆ ಈ ನೋವು ತಿಂದು, ನನ್ನ ಕರುಳು ಮುಚ್ಚಿ ಹೋಗಿದೆ. ನರಗಳು ಕೆಲಸ ಮಾಡುತ್ತಿಲ್ಲ. ನನ್ನ ಮಲವು ತುಂಬಾ ಹಿಂದಕ್ಕೆ ಬರುತ್ತದೆ. ಇದರ ಜತೆಗೆ ದೊಡ್ಡ ಹಿಂಸೆ ಎಂದರೆ ನನ್ನ ದೇಹದಲ್ಲಿ ಫೀಡಿಂಗ್ ಟ್ಯೂಬ್‌ಗಳನ್ನು ಇರಿಸಲಾಗಿತ್ತು. ಪ್ರತಿದಿನ ವಾಂತಿ ಮಾಡಿ.. ಮಾಡಿ ಸಾಕಾಗಿದೆ. ನನ್ನ ವಯಸ್ಸಿನ ಸ್ನೇಹಿತರು ಒಳ್ಳೆಯ ಜೀವನ ನಡೆಸುತ್ತಿದ್ದಾರೆ. ಅವರಲ್ಲಿ ಕೆಲವರಿಗೆ ಮಕ್ಕಳಾಗಿದೆ. ಇನ್ನು ಕೆಲವರು ಮದುವೆಯಾಗುತ್ತಿದ್ದಾರೆ. ಆದರೆ ನಾನು ಈ ರೋಗದ ಜತೆಗೆ ಜೀವನ ನಡೆಸುತ್ತಿದ್ದೇನೆ. ನಾನು ಪ್ರತಿದಿನ ಬದುಕುಳಿಯುತ್ತಿದ್ದೇನೆ. ಈ ಒದ್ದಾಟ ಸಾಕಾಗಿದೆ” ಎಂದು ಹೇಳಿದ್ದಾರೆ.

ಆಸ್ಟ್ರೇಲಿಯಾದಲ್ಲಿ ದಯಾಮರಣ ಹೇಗೆ?

ಮನಶ್ಶಾಸ್ತ್ರಜ್ಞರೊಂದಿಗೆ ಸಮಾಲೋಚಿಸಿ ಅಗತ್ಯ ಮೌಲ್ಯಮಾಪನಗಳನ್ನು ಪೂರ್ಣಗೊಳಿಸಿದ ಮೂರು ವಾರಗಳ ನಂತರ, ಅನ್ನಾಲೀಸ್‌ಗೆ ಸ್ವಯಂಪ್ರೇರಿತ ದಯಾಮರಣಕ್ಕೆ ಅನುಮೋದನೆ ನೀಡಲಾಗಿದೆ. ಯಾವ ಕಾರಣಕ್ಕೆ ಅವರು ದಯಾಮರಣದ ಬೇಡಿಕೆ ಇಟ್ಟಿದ್ದಾರೆ ಎಂಬ ಬಗ್ಗೆ ಪರಿಶೀಲನೆ ನಡೆಸಿದ ನಂತರ ಇದಕ್ಕೆ ಒಪ್ಪಿಗೆ ನೀಡಲಾಗುತ್ತದೆ. ಆಸ್ಟ್ರೇಲಿಯಾದಲ್ಲಿ ದಯಾಮರಣವನ್ನು ಮೆಡಿಕಲ್ ಏಡ್ ಇನ್ ಡೈಯಿಂಗ್ (MAID) ಎಂದೂ ಕರೆಯುತ್ತಾರೆ, ಇದು ಆಸ್ಟ್ರೇಲಿಯಾದ ಎಲ್ಲಾ ರಾಜ್ಯಗಳಲ್ಲಿ ಮಾರಕ ಕಾಯಿಲೆಯಿಂದ ಬಳಲುತ್ತಿರುವ, ಮಾನಸಿಕವಾಗಿ ಕುಗ್ಗಿರುವ ವಯಸ್ಕರಿಗೆ ಕಾನೂನುಬದ್ಧವಾಗಿದೆ.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಅಂಬ್ಲಮೊಗರು ಗ್ರಾ.ಪಂ. ಆಡಳಿತಾವಧಿಯ ಕೊನೆಯ ಗ್ರಾಮಸಭೆ

February 10, 2026

ರಾಮ ಮಂದಿರ ಮೇಲೆ ದಾಳಿಗೆ ಸಂಚು ರೂಪಿಸಿದ್ದ ಆರೋಪಿ; ಜೈಲಿನಲ್ಲೇ ಕೊಲೆ

February 10, 2026

ಕಾಸರಗೋಡು: ಜನಪ್ರಿಯ ಸೋಷಿಯಲ್ ಮೀಡಿಯ ಇನ್ಫ್ಲ್ಯುಯೆನ್ಸರ್ ಆದೂರು ಚಿನ್ನು ಪಾಪು ಆತ್ಮಹತ್ಯೆ

February 10, 2026

Comments are closed.

Advertise
ಸಂಪರ್ಕಿಸಿ

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025

ನೂತನ ಅತ್ಯಾಧುನಿಕ ಫಿಸಿಯೋಥೆರಪಿ ಚಿಕಿತ್ಸಾ ಕ್ಲಿನಿಕ್ ಉದ್ಘಾಟನೆ

November 12, 2025
ಬೆಳ್ತಂಗಡಿ

ವಿದ್ಯಾರ್ಥಿನಿ ಅಪಹರಣ ಯತ್ನ ಕೇಸ್​​ಗೆ ಬಿಗ್​​ ಟ್ವಿಸ್ಟ್​​..!

By UllalaVaniFebruary 10, 20260

ಬೆಳ್ತಂಗಡಿ,ಫೆ. 10 :  ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ವಿದ್ಯಾರ್ಥಿನಿ ಅಪಹರಣ ಯತ್ನ ಕೇಸ್​​ಗೆ ಬಿಗ್​​ ಟ್ವಿಸ್ಟ್​​ ಸಿಕ್ಕಿದೆ. …

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

ಚಲಿಸುತ್ತಿದ್ದ ಕಾರಿನಲ್ಲಿ ಕಾಣಿಸಿಕೊಂಡ ದಿಢೀರ್ ಬೆಂಕಿ- ಪ್ರಯಾಣಿಕರು ಅಪಾಯದಿಂದ ಪಾರು..!!

February 10, 2026

ಅಂಬ್ಲಮೊಗರು ಗ್ರಾ.ಪಂ. ಆಡಳಿತಾವಧಿಯ ಕೊನೆಯ ಗ್ರಾಮಸಭೆ

February 10, 2026

ರಾಮ ಮಂದಿರ ಮೇಲೆ ದಾಳಿಗೆ ಸಂಚು ರೂಪಿಸಿದ್ದ ಆರೋಪಿ; ಜೈಲಿನಲ್ಲೇ ಕೊಲೆ

February 10, 2026
1 2 3 … 1,799 Next
Automatic YouTube Gallery

ರಸ್ತೆಗಾಗಿ ಕುರ್ನಾಡು ಗ್ರಾಮ ಪಂಚಾಯತ್‌ ಮುಂಭಾಗ ಪ್ರತಿಭಟನೆ; ಕಣ್ಣೀರಿಟ್ಟ ಮಹಿಳೆ

ರಸ್ತೆಗಾಗಿ ಕುರ್ನಾಡು ಗ್ರಾಮ ಪಂಚಾಯತ್‌ ಮುಂಭಾಗ ಪ್ರತಿಭಟನೆ; ಕಣ್ಣೀರಿಟ್ಟ ಮಹಿಳೆ

#ullalavani #Kurnadu #Road #GramaPanchayath
ರಸ್ತೆಗಾಗಿ ಕುರ್ನಾಡು ಗ್ರಾಮ ಪಂಚಾಯತ್‌ ಮುಂಭಾಗ ಪ್ರತಿಭಟನೆ; ಕಣ್ಣೀರಿಟ್ಟ ಮಹಿಳೆ
Now Playing
ರಸ್ತೆಗಾಗಿ ಕುರ್ನಾಡು ಗ್ರಾಮ ಪಂಚಾಯತ್‌ ಮುಂಭಾಗ ಪ್ರತಿಭಟನೆ; ಕಣ್ಣೀರಿಟ್ಟ ಮಹಿಳೆ
ರಸ್ತೆಗಾಗಿ ಕುರ್ನಾಡು ಗ್ರಾಮ ಪಂಚಾಯತ್‌ ಮುಂಭಾಗ ಪ್ರತಿಭಟನೆ; ಕಣ್ಣೀರಿಟ್ಟ ಮಹಿಳೆ ...
ರಸ್ತೆಗಾಗಿ ಕುರ್ನಾಡು ಗ್ರಾಮ ಪಂಚಾಯತ್‌ ಮುಂಭಾಗ ಪ್ರತಿಭಟನೆ; ಕಣ್ಣೀರಿಟ್ಟ ಮಹಿಳೆ

#ullalavani #Kurnadu #Road #GramaPanchayath
ಗ್ರಾಮಸೌಧ ಕೇವಲ ಕಟ್ಟಡವಲ್ಲ, ಗ್ರಾಮದ ಹೃದಯ ಎಂದ ಸ್ಪೀಕರ್ ಯು.ಟಿ.ಖಾದರ್
Now Playing
ಗ್ರಾಮಸೌಧ ಕೇವಲ ಕಟ್ಟಡವಲ್ಲ, ಗ್ರಾಮದ ಹೃದಯ ಎಂದ ಸ್ಪೀಕರ್ ಯು.ಟಿ.ಖಾದರ್
ಪಾವೂರು ಗ್ರಾ.ಪಂ.ನವೀಕೃತ ಕಟ್ಟಡ 'ಗ್ರಾಮ ಸೌಧ' ಲೋಕಾರ್ಪಣೆ;ಉದ್ಘಾಟನೆಗೊಳಿಸಿದ ...
ಪಾವೂರು ಗ್ರಾ.ಪಂ.ನವೀಕೃತ ಕಟ್ಟಡ 'ಗ್ರಾಮ ಸೌಧ' ಲೋಕಾರ್ಪಣೆ;ಉದ್ಘಾಟನೆಗೊಳಿಸಿದ ಸ್ಪೀಕರ್ ಯು.ಟಿ.ಖಾದರ್

ಒಗ್ಗಟ್ಟಿನಿಂದ ಗ್ರಾಮದ ಗೌರವ ವೃದ್ಧಿ; ಸ್ಪೀಕರ್

#Ullalavani #News #package #Pavooru #Speaker #UtKhader #Gramapanchayat
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version
%d