ಉಳ್ಳಾಲ; ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ಮಾರುತಿ ಜನಸೇವಾ ಸಂಘ(ರಿ.), ಮಾರುತಿ ಯುವಕ ಮಂಡಲ (ರಿ.) ಉಳ್ಳಾಲ ಇವರ 40ನೇ ವರ್ಷಾಚರಣೆಯ ಪ್ರಯುಕ್ತ ವೃದ್ಧಾಶ್ರಮಕ್ಕೆ ನೆರವು ನೀಡಿದ್ದಾರೆ. ಉಳ್ಳಾಲದ ಪಶ್ಚಿಮ್ ಚಾರಿಟೆಬಲ್ ಟ್ರಸ್ಟ್ ಇವರ ವೃದ್ಧಾಶ್ರಮದಲ್ಲಿರುವ ಹಿರಿಜೀವಗಳಿಗೆ ಒಂದಿಷ್ಟು ನೆರವಾಗುವ ಹಿನ್ನಲೆ ಈ ಮಹತ್ವದ ಕಾರ್ಯವನ್ನು ಮಾಡಿದೆ.


ಕಾರ್ಯಕ್ರಮದಲ್ಲಿ ಭಾಗಿಯಾದ ಪಶ್ಚಿಮ್ ಚಾರಿಟೇಬಲ್ ಟ್ರಸ್ಟ್ ಇದರ ಸ್ಥಾಪಕರಾದ ರೋಹಿತ್.ಸ್ಯಾಂಕ್ಟಸ್ ಮಾತನಾಡಿ, ಪಶ್ವಿಮ್ ಚಾರಿಟೇಬಲ್ ಸ್ಥಾಪಿಸಲು ಕಾರಣ ಅಸೌಖ್ಯದಲ್ಲಿದ್ದಂತಹ ತಂದೆ-ತಾಯಿ. ಅನಾರೋಗ್ಯದ ಸಂದರ್ಭದಲ್ಲಿ ನನ್ನ ತಂದೆ-ತಾಯಿ ಕಷ್ಟಪಡುತ್ತಿರುವುದನ್ನು ನೋಡುತ್ತಿದ್ದೆ. ಕೆಲಸದಿಂದ ವಾಪಸ್ಸಾಗುವ ವೇಳೆ ಪುಟ್ಟ ಮಕ್ಕಳಂತೆ ಕಾಯುತ್ತಿದ್ದರು. ಮಾತು ನಿಂತೂ ಹೋಗಿದ್ದರೂ ಅವರ ಮೊಗದಲ್ಲಿ ಪ್ರೀತಿ, ಕಾಳಜಿ ಕಾಣಿಸುತ್ತಿತ್ತು. ಅವರನ್ನು 24 ಗಂಟೆಯು ಒಟ್ಟಿಗೆ ಇರಿಸಿಕೊಳ್ಳುವ ಎಂಬ ಅಲೋಚನೆಯಲ್ಲಿ ಪಶ್ಚಿಮ್ ಚಾರಿಟೇಬಲ್ ಟ್ರಸ್ಟ್ನ್ನು ಸ್ಥಾಪಿಸಿದೆ. ತಂದೆ-ತಾಯಿ ಇಂದು ಜೊತೆಗೆ ಇಲ್ಲದಿದ್ದರೂ ಆಶ್ರಮದಲ್ಲಿರುವ ಹಿರಿಜೀವಗಳಲ್ಲಿ ಅವರನ್ನು ಕಾಣುತ್ತಿದ್ದೇನೆ. ಇಂದು ಮಾರುತಿ ಸಂಘಟನೆ ತಾನು ಸಂಪಾದಿಸಿದ ಹಣವನ್ನು ತಮಗೆ ಉಪಯೋಗಿಸಿಕೊಳ್ಳದೇ ಸಮಾಜದ ಹಿತಕ್ಕಾಗಿ ಉಪಯೋಗಿಸಿಕೊಳ್ಲುತ್ತಿರುವುದು ನಿಜವಾದ ಅರ್ಥಪೂರ್ಣವಾದ ಕಾಯಕ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಾರುತಿ ಜನಸೇವಾ ಸಂಘದ ಗೌರವಾಧ್ಯಕ್ಷರಾದ ವರದರಾಜ್ ಬಂಗೇರ ಮಾತನಾಡಿ, ಮಾರುತಿ ಜನಸೇವಾ ಸಂಸ್ಥೆ 30ರಿಂದ 35 ಸದಸ್ಯರನ್ನು ಒಳಗೊಂಡ ಒಂದು ಸಂಘ. ಶೈಕ್ಷಣಿಕವಾಗಿ ಸಬಲರಾದರು ಮೂಲ ವೃತ್ತಿಯನ್ನು ಬಿಡದೇ 2;30 ಗಂಟೆಗೆ ಮೀನುಗಾರಿಕೆ ನಡೆಸಿ ಬಂದ ಹಣದಲ್ಲಿ ಒಂದಿಷ್ಟು ಪಾಲನ್ನು ಸಮಾಜಕ್ಕಾಗಿ ಮೀಸಲಿಟ್ಟಿದ್ದೇವೆ. ಸಂಘದ 40ರ ಸಂಭ್ರಮದ ಸಮಾರೋಪ ಸಮಾರಂಭ ಡಿ.25ರಂದು ಮಂಗಳೂರಿನ ಪುರಭವನದಲ್ಲಿ ಆಯೋಜಿಸಲಾಗಿದೆ. ಈಗಾಗಲೇ 40 ಪೈಕಿ 35 ಕಾರ್ಯಕ್ರಮಗಳು ಸಂಪನ್ನಗೊAಡಿದೆ. ತಂದೆ-ತಾಯಿಯನ್ನು ಕಾಳಜಿಯಿಂದ ನೋಡದೇ ಹಣ ಮಾಡಿ ಏನು ಫಲ..? ಪಶ್ಚಿಮ್ ಚಾರಿಟೇಬಲ್ ಟ್ರಸ್ಟ್ ಗೆ ಮಾರುತಿ ಸಂಘಟನೆ ಬೆಂಬಲ ಸದಾ ಇರುತ್ತದೆ ಎಂದು ಭರವಸೆಯ ನುಡಿಗಳನ್ನಾಡಿದರು.

ಕಾರ್ಯಕ್ರಮ ಸಂಯೋಜಕರಾದ ಪ್ರಶಾಂತ್.ಬಿ.ಉಳ್ಳಾಲ್ ಮಾತನಾಡಿ, ಮಾÁರುತಿ ಜನಸೇವಾ ಸಂಘ, ಮಾರುತಿ ಯುವಕ ಮಂಡಲ ವತಿಯಿಂದ ವರ್ಷದಲ್ಲಿ 40 ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವು. ಹಲವಾರು ಕಾರ್ಯಕ್ರಮಗಳು ನಡೆದಿದ್ದು, ಇದೀಗ ಪಶ್ಚಿಮ್ ಚಾರಿಟೇಬಲ್ ಟ್ರಸ್ಟ್ನಲ್ಲಿ ಆಸರೆ ಪಡೆದ ಹಿರಿಜೀವಗಳಿಗೆ ನೆರವನ್ನು ನೀಡಿದ್ದೇವೆ. ಟ್ರಸ್ಟ್ನ್ನು ದಂಪತಿಗಳು ನಡೆಸಿಕೊಂಡು ಹೋಗುತ್ತಿರುವುದು ನಿಜವಾಗಲೂ ಶ್ಲಾಘನೀಯ ಸಂಗತಿ ಎಂದರು.

ಮಾರುತಿ ಜನಸೇವಾ ಸಂಘದ ಅಧ್ಯಕ್ಷರಾದ ಸಂದೀಪ್ ಪುತ್ರನ್ ಮಾತನಾಡಿ, ಪ್ರಥಮ ಬಾರಿಗೆ ವೃದ್ಧಾಶ್ರಮಕ್ಕೆ ನೆರವನ್ನು ನೀಡುತ್ತಿದ್ದೇವೆ. ಮುಂದಿನ 3 ಕಾರ್ಯಕ್ರಮಗಳು ಉಳಿದುಕೊಂಡಿದ್ದು, ಅವುಗಳು ಮಂಗಳೂರಿನ ಪುರಭವನದಲ್ಲಿ ಡಿ.25ರಂದು ನಡೆಯಲಿದೆ ಎಂದರು.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಮಾರುತಿ ಜನಸೇವಾ ಸಂಘ, ಮಾರುತಿ ಯುವಕ ಮಂಡಲ ಉಳ್ಳಾಲ, ಮಾರುತಿ ಮಾಣಿಕ್ಯ ಮಹೋತ್ಸವ ಎಂಬ ಹೆಸರಿನಲ್ಲಿ 40 ಕ್ಕೂ ಅಧಿಕ ಸಮಾಜಮುಖಿಯಾಗಿ ಕೆಲಸ ಮಾಡುತ್ತಾ ಬಂದಿದ್ದು, ಶಿವಮೊಗ್ಗ, ಉಡುಪಿ, ಕುಂದಾಪುರದಲ್ಲಿ ಬೃಹತ್ ರಕ್ತದಾನ ಶಿಬಿರ, ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಅದಲ್ಲದೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 20ಕ್ಕೂ ಹೆಚ್ಚಿನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಉಳ್ಳಾಲದ ಪ್ರಾಥಮಿಕ ಆಸ್ಪತ್ರೆಗೆ ಅಗತ್ಯ ವಸ್ತುಗಳನ್ನು ನೀಡಿದೆ. ಇದೀಗ ಹಿರಿಜೀವಗಳ ಬಾಂಧವ್ಯದ ತಾಣವಾಗಿರುವ ವೃದ್ಧಾಶ್ರಮಕ್ಕೆ ನೆರವನ್ನು ನೀಡಿ, ಆ ಜೀವಗಳ ಮೊಗದಲ್ಲಿ ಸಂತಸ ಮೂಡಿಸಿದೆ.

ಕಾರ್ಯಕ್ರಮದ ಅಂಗವಾಗಿ ಸುಮಧುರ ಹಾಡುಗಳನ್ನು ಗಾಯಕರು ಹಾಡಿ, ಹಿರಿ ಜೀವಗಳನ್ನು ಸಂತಸದ ಕಡಲಲ್ಲಿ ತೇಲಿಸಿದರು. ವೃದ್ಧಾಶ್ರಮದ ಆಶ್ರಮವಾಸಿಗಳು ಕೂಡ ಹಾಡಿ, ಕುಣಿದು ಸಂಭ್ರಮಿಸಿದ್ದಾರೆ. ಒಟ್ಟಿನಲ್ಲಿ ಇದೊಂದು ಅರ್ಥಪೂರ್ಣ ಕಾರ್ಯಕ್ರಮವಾಗಿ ಮೂಡಿಬಂದಿದೆ.

ಇನ್ನು ಈ ಕಾರ್ಯಕ್ರಮದಲ್ಲಿ ಮಾರುತಿ ಜನಸೇವಾ ಸಂಘದ ಪ್ರಧಾನ ಸಂಚಾಲಕರಾದ ಸುಧೀರ್ ವಿ.ಅಮೀನ್,
ಪ್ರಧಾನ ಕಾರ್ಯದರ್ಶಿ ಕಪಿಲ್ ಬಂಗೇರ,ಕೋಶಾಧಿಕಾರಿ ಅನಿಲ್ ಚರಣ್,ಕ್ರೀಡಾ ಕಾರ್ಯದರ್ಶಿ ಮಹೇಶ್ ಸಾಲ್ಯಾನ್, ಲೋಕನಾಥ್ ಕೋಟ್ಯಾನ್,ಮನೋಹರ್ ಉಳ್ಳಾಲ್, ಪುನೀತ್ ಬಗೇರ, ಅಶ್ವಿನ್ ಕೋಟ್ಯಾನ್, ಸಂಘದ ಸದಸ್ಯರುಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.






