ಉಳ್ಳಾಲ: ಪ್ರತಿಷ್ಠಿತ ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಹಾಗೂ ಭಾರತ್ ಸೌಟ್ಸ್ ಮತ್ತು ಗೈಡ್ಸ್ ನೀಡುವ ಸಿಲ್ವರ್ ಎಲಿಫೆಂಟ್ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಗೆ ಪಾತ್ರರಾಗಿರುವ ಸ್ಪೀಕರ್ ಡಾ. ಯು.ಟಿ. ಖಾದರ್ ಅವರಿಗೆ ದ.ಕ. ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿಯ ವತಿಯಿಂದ ಸಂಸ್ಥೆಯ ಅಧ್ಯಕ್ಷರು ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರಾದ ಅಲ್ ಹಾಜ್ ಕೆ ಎಸ್ ಮೊಹಮ್ಮದ್ ಮಸೂದ್ ರವರು ಅವರ ನಿವಾಸದಲ್ಲಿ ಸನ್ಮಾನಿಸಿದರು.


ಈ ಸಂದರ್ಭದಲ್ಲಿ ಉಪಾಧ್ಯಕ್ಷರುಗಳಾದ ಮಾಜಿ ಮೇಯರ್ ಕೆ ಅಶ್ರಫ್, ಹಾಜಿ ಎಸ್. ಎಂ. ರಶೀದ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್, ಕಾರ್ಯದರ್ಶಿಗಳಾದ ಹಾಜಿ ಅಹಮದ್ ಬಾವ ಪಡೀಲ್, ಹಾಜಿ ಬಿ ಅಬೂಬಕ್ಕರ್, ಡಿ.ಎಂ. ಅಸ್ಲಂ, ಡಾ. ಮೊಹಮ್ಮದ್ ಆರಿಫ್ ಮಸೂದ್, ಹಾಜಿ ರಿಯಾಝುದ್ದೀನ್, ಹಾಜಿ ಐ. ಮೊಯಿದಿನಬ್ಬ ಸಿ.ಎಂ. ಹನೀಫ್, ನ್ಯಾಯವಾದಿ ನೂರುದ್ದೀನ್ ಸಾಲ್ಮರ, ಅಬ್ಬಾಸ್ ಉಚ್ಚಿಲ್, ಮಾಜಿ ಕಾರ್ಪೊರೇಟ್ ಗಳಾದ ಅಬ್ದುಲ್ ಲತೀಫ್ ಕಂದಕ್, ಹಾಜಿ ಶಂಸುದ್ದೀನ್ ಹೆಚ್.ಬಿ.ಟಿ, ಶಂಸುದ್ದೀನ್ ಬಂದರ್, ಮುಹಮ್ಮದ್ ಸಲೀಂ ಮನ್ನತ್, ಮೊದಲಾದವರು ಉಪಸ್ಥಿತರಿದ್ದರು




