ಉಳ್ಳಾಲ: ಅಲ್ ಮುಬಾರಕ್ ಜುಮಾ ಮಸ್ಜಿದ್ ಕೆ ಸಿ ರೋಡ್ ಕೋಟೆಕಾರ್, ಇಲ್ಲಿ ಮಾಸಿಕ ನಡೆಯುವ ಧ್ಸಿಕ್ರ್ ಹಲ್ಕಾ ಮಜ್ಲಿಸ್, ಇದರ 35 ನೇ ವಾರ್ಷಿಕೋತ್ಸವ ಹಾಗೂ 7 ದಿನಗಳ ಧಾರ್ಮಿಕ ಕಾರ್ಯಕ್ರಮ ಡಿ 8 ರಿಂದ 14 ರ ವರೆಗೆ ಅಲ್ ಮುಬಾರಕ್ ಜುಮಾ ಮಸ್ಜಿದ್ ವಠಾರದಲ್ಲಿ ಮಸೀದಿ ಅಧ್ಯಕ್ಷ ಎ ಎಂ ಅಬ್ಬಾಸ್ ಹಾಜಿ ಕೊಮರಂಗಳ ಅವರ ಅಧ್ಯಕ್ಷತೆಯಲ್ಲಿ ಜರಗಲಿರುವುದು.


ಡಿ, 8 ರಂದು ರಾತ್ರಿ 7 -45 ಕ್ಕೆ ಝೈನುಲ್ ಉಲಮಾ ಖಾಝಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಕಾರ್ಯಕ್ರಮದ ಉದ್ಘಾಟನೆ ಹಾಗೂ ದುವಾ ಮಾಡುವರು, ಶೌಖತ್ ಅಲಿ ಮುಸ್ಲಿಯಾರ್ ವೆಳ್ಳಮುಂಡಾ ಮುಖ್ಯ ಬಾಷಣ ಮಾಡುರು, ಡಿ 9 ರಂದು ಬಹು ಮುನೀರ್ ಸಖಾಫಿ ಸಾಲೆತ್ತೂರು ಮುಖ್ಯ ಬಾಷಣ ಮಾಡುವರು,ಡಿ 10 ರಂದು ಬಹು ಹಂಝ ಮಿಸ್ಬಾಹಿ ಓಟಪದವು ಮುಖ್ಯ ಬಾಷಣ ಮಾಡುವರು, ಡಿ 11 ರಂದು ಬಹು ಅಶ್ಪಾಕ್ ಫೈಝಿ ನಂದಾವರ ಮುಖ್ಯ ಬಾಷಣ ಮಾಡುವರು, ಡಿ 12 ರಂದು ಬಹು ಜಬ್ಬಾರ್ ಸಖಾಫಿ ಪಾತೂರ್ ಮುಖ್ಯ ಬಾಷಣ ಮಾಡುವರು ಡಿ 13 ರಂದು ಬಹು ಅನಸ್ ಸಿದ್ದೀಕಿ ಶಿರಿಯ ಮುಖ್ಯ ಬಾಷಣ ಮಾಡುವರು, ಡಿ 14 ರಂದು ರಾತ್ರಿ 6.30ಕ್ಕೆ ಸಮಾರೋಪ ಸಮಾರಂಭ, ಅಸೈಯದ್ ಅಬ್ದುರ್ರಹ್ಮಾಣ್ ಮಸೂದ್ ತಂಜಲ್ ಅಲ್ ಬುಖಾರಿ ಕೂರತ್ ಧ್ಸಿಕ್ರ್ ನೇತೃತ್ವ ವಹಿಸುವರು ಬಹು ಮುನೀರ್ ಸಖಾಫಿ ಕೆ ಸಿ ರೋಡ್ ಸ್ವಾಗತ ಮಾಢುವರು ಬಹು ಇಬ್ರಾಹಿಮ್ ಫೈಝಿ ಉಚ್ಚಿಲ ಉದ್ಘಾಟನೆ ಮಾಡುವರು ಅಬ್ದುರ್ರಶಿದ್ ಝೈನಿ ಸಖಾಫಿ ಅಲ್ ಖಾಮಿಲ್ ತಲಪಾಡಿ ಶುಭ ನುಡಿಯುವರು ಬಹು ಕೆ ಪಿ ಹುಸೈನ್ ಸಅದಿ, ಸಹಾಯಕ ಖಾಝಿ ಕೆ ಸಿ ರೋಡ್ ಮುಖ್ಯ ಪ್ರವಚಣ ಮಾಡುವರು, ಮುಖ್ಯ ಅಥಿತಿಗಳಾಗಿ ಕರ್ನಾಟಕ ವಿಧಾನ ಸಭಾಧ್ಯಕ್ಷರಾದ ಡಾ; ಯು ಟಿ ಖಾದರ್ ಫರೀದ್, ಹಾಗೂ ಇನ್ನಿತರ ಉಲಮಾ ಉಮರಾ ಸುನ್ನೀ ಸಂಘಟನೆಯ ನೇತಾರರು ಭಾಗವಹಿಸುವರು ಎಂದು ಅಲ್ ಮುಬಾರಕ್ ಜುಮಾ ಮಸೀದಿ ಕಮೀಟಿಯವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.




