Author: UllalaVani

Kannada News From Coastal Karnataka

ನವದೆಹಲಿ, ಜು. 20 : ಕಾಕ್ರೋಚ್ ಜನತಾ ಪಾರ್ಟಿ ನಡೆಸುತ್ತಿರುವ ಸಂಸತ್‌ ಚಲೋ ಪ್ರತಿಭಟನಾ ರ‍್ಯಾಲಿ ವೇಳೆ ಭಾರೀ ಉದ್ವಿಗ್ನತೆ ಉಂಟಾಗಿದ್ದು, ಪಕ್ಷದ ಸಂಸ್ಥಾಪಕ ಅಭಿಜಿತ್‌ ದೀಪ್ಕೆಯವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಂಸತ್ ಮುತ್ತಿಗೆಗೆ ಯತ್ನಿಸಿದ ಕಾಕ್ರೋಚ್ ಜನತಾ ಪಾರ್ಟಿ ಸದಸ್ಯರ ಮೇಲೆ ಪೊಲೀಸರು ಲಾಠಿಚಾರ್ಜ್‌ ಮಾಡಿದ್ದಾರೆ. ಅಲ್ಲದೇ ಪ್ರತಿಭಟನಾಕಾರರನ್ನು ಚದುರಿಸಲು ಅಶ್ರುವಾಯು ಸಿಡಿಸಿದ್ದಾರೆ. ಇದರಿಂದ ದೆಹಲಿಯಲ್ಲಿ ಭಾರೀ ಉದ್ವಿಗ್ನತೆ ಉಂಟಾಗಿದೆ. ಲಾಠಿಚಾರ್ಜ್‌ ಬೆನ್ನಲ್ಲೇ ದೆಹಲಿಯ ಕೆಲವು ಭಾಗಗಳಲ್ಲಿ ಮೊಬೈಲ್ ಇಂಟರ್ನೆಟ್ ಸ್ಥಗಿತಗೊಂಡಿದೆ.ಸಂಸತ್ತಿನ ಮಳೆಗಾಲದ ಅಧಿವೇಶನದ ಸಮಯದಲ್ಲಿ ಭಾರೀ ಭದ್ರತೆಯ ನಡುವೆಯೂ ಪ್ರತಿಭಟನಾಕಾರರು ʻಸಂಸತ್‌ ಚಲೋʼ ರ‍್ಯಾಲಿ ನಡೆಸಿದ್ದರು. ಬ್ಯಾರಿಕೇಡ್‌ಗಳನ್ನು ದಾಟಿ ಸಂಸತ್ತಿನ ಕಡೆಗೆ ನುಗ್ಗಲು ಪ್ರತಿಭಟನಾಕಾರರು ಯತ್ನಿಸಿದ್ದರು. ಈ ವೇಳೆ ಪೊಲೀಸರು ಹಲವಾರು ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ.ಸಂಸತ್ತಿನ ಅಧಿವೇಶನ ಆರಂಭವಾಗುತ್ತಿರುವುದರಿಂದ ದೆಹಲಿ ನಗರದಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ’ಯ (BNSS) ಸೆಕ್ಷನ್ 163 (ಹಳೆಯ 144ನೇ ವಿಧಿ) ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಈ ಮೆರವಣಿಗೆಗೆ ಯಾವುದೇ ಅಧಿಕೃತ ಅನುಮತಿ ನೀಡಿರಲಿಲ್ಲ ಮತ್ತು ಕಾನೂನು…

Read More

ಬೈಂದೂರು, ಜು. 20 : ಪ್ರಬಲ ಅಲೆಗಳ ಹೊಡೆತಕ್ಕೆ ಸಿಲುಕಿ ಮೀನುಗಾರಿಕಾ ದೋಣಿಯೊಂದು ಮಗುಚಿ ಬಿದ್ದಿದ್ದು, ಅದರಲ್ಲಿದ್ದ ಐವರು ಮೀನುಗಾರರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಘಟನೆ ಶಿರೂರು ಸಮೀಪದ ಸಮುದ್ರ ತೀರದಲ್ಲಿ ನಡೆದಿದೆ. ರಕ್ಷಿಸಲ್ಪಟ್ಟ ಮೀನುಗಾರರನ್ನು ಪಡುವರಿ ಗ್ರಾಮದ ತರಪತಿ ಅಳ್ವೆಕೋಡಿಯ ನಿವಾಸಿಗಳಾದ ನಾಗರಾಜ ಖಾರ್ವಿ, ಯೋಗೀಶ್ ಖಾರ್ವಿ, ರಾಜು ಖಾರ್ವಿ, ಮಂಜುನಾಥ್ ಖಾರ್ವಿ ಹಾಗೂ ನಾಗರಾಜ ಖಾರ್ವಿ ಎಂದು ಗುರುತಿಸಲಾಗಿದೆ.ಮಾಹಿತಿಯ ಪ್ರಕಾರ, ಮಲ್ಪೆಯಲ್ಲಿ ಮೀನುಗಾರಿಕೆ ಮುಗಿಸಿ ಭಟ್ಕಳದತ್ತ ಹಿಂದಿರುಗುತ್ತಿದ್ದ ವೇಳೆ ಶಿರೂರು ಸಮುದ್ರ ತೀರದ ಕೋಕ್ಲೇರಕಲ್ಲು ಪ್ರದೇಶದ ಬಳಿ ಬಿರುಗಾಳಿ ಹಾಗೂ ಮಳೆಯ ಪರಿಣಾಮ ಉಂಟಾದ ಬೃಹತ್ ಅಲೆಯೊಂದು ದೋಣಿಗೆ ಅಪ್ಪಳಿಸಿತು. ಪರಿಣಾಮ ದೋಣಿ ಮಗುಚಿಬಿದ್ದಿದೆ.ದೋಣಿಯಲ್ಲಿದ್ದ ಐವರು ಮೀನುಗಾರರು ಜೀವ ರಕ್ಷಕ ಜಾಕೆಟ್ ಧರಿಸಿದ್ದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಇದೇ ವೇಳೆ ಸಮೀಪದಲ್ಲೇ ಮೀನುಗಾರಿಕೆಯಲ್ಲಿ ತೊಡಗಿದ್ದ ಶೇಖರ್ ಖಾರ್ವಿ ಘಟನೆ ಗಮನಿಸಿ ತಕ್ಷಣ ಸ್ಥಳಕ್ಕೆ ಧಾವಿಸಿ, ಸಮುದ್ರದಲ್ಲಿ ಸಿಲುಕಿದ್ದ ಐವರನ್ನೂ ಸುರಕ್ಷಿತವಾಗಿ ರಕ್ಷಿಸಿದ್ದಾರೆ.ಅಪಘಾತದಲ್ಲಿ ಮೀನುಗಾರಿಕಾ ದೋಣಿ ಸಂಪೂರ್ಣ ಹಾನಿಗೊಳಗಾಗಿದೆ. ದೋಣಿಯ ಎಂಜಿನ್, ಜಿಪಿಎಸ್…

Read More

ಅರ್ಹ ವಿದ್ಯಾರ್ಥಿಗಳ ಸಂಪೂರ್ಣ ಶಿಕ್ಷಣ ವೆಚ್ಚ ಭರಿಸಲಿರುವ ಡಾ. ಅಬ್ದುಲ್ ಶಕೀಲ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು, ಜು.20: ಬ್ಯಾರಿ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ಇಸ್ಲಾಮಿಕ್ ಶಿಕ್ಷಣ ಪಡೆಯಲು ಅಪರೂಪದ ಅವಕಾಶ ದೊರಕಿದ್ದು, ಈಜಿಪ್ಟ್‌ನ ಕೈರೋದಲ್ಲಿರುವ ವಿಶ್ವವಿಖ್ಯಾತ ಅಲ್-ಅಝ್ಹರ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ (ಮಾಸ್ಟರ್ಸ್) ವ್ಯಾಸಂಗ ಮಾಡಲು ಇಚ್ಛಿಸುವ ಅರ್ಹ ವಿದ್ಯಾರ್ಥಿಗಳಿಗೆ ಡಾ. ಅಬ್ದುಲ್ ಶಕೀಲ್ ಚಾರಿಟೇಬಲ್ ಟ್ರಸ್ಟ್ (ರಿ.) ಸಂಪೂರ್ಣ ಪ್ರಾಯೋಜಕತ್ವ ಘೋಷಿಸಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಡಾ. ಅಬ್ದುಲ್ ಶಕೀಲ್, ಅಲ್-ಅಝ್ಹರ್ ವಿಶ್ವವಿದ್ಯಾಲಯವು ಇಸ್ಲಾಮಿಕ್ ಜ್ಞಾನ, ಸಂಶೋಧನೆ ಹಾಗೂ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ವಿಶ್ವದ ಅತ್ಯಂತ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾಗಿದೆ. ಈ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆಯುವುದರಿಂದ ವಿದ್ಯಾರ್ಥಿಗಳಿಗೆ ಅಂತರರಾಷ್ಟ್ರೀಯ ಮಟ್ಟದ ಶೈಕ್ಷಣಿಕ ಅನುಭವ, ಸಂಶೋಧನಾ ಅವಕಾಶಗಳು ಹಾಗೂ ಜಾಗತಿಕ ದೃಷ್ಟಿಕೋನ ಲಭಿಸಲಿದ್ದು, ಬ್ಯಾರಿ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಪ್ರವೇಶ ಪರೀಕ್ಷೆಯಲ್ಲಿ ಆಯ್ಕೆಯಾಗುವ ಅರ್ಹ ವಿದ್ಯಾರ್ಥಿಗಳ…

Read More

ಕುತ್ತಾರು : ಕುತ್ತಾರು ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನ ಕುತ್ತಾರು ಇದರ 40 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಯನ್ನು ದೇವಸ್ಥಾನದ ಅಧ್ಯಕ್ಷ ಪವಿತ್ರ ಕುಮಾರ್‌ ಗಟ್ಟಿ ನೆರವೇರಿಸಿದರು. ಸೆ.13 ರಿಂದ ಸೆ.15 ರವರೆಗೆ ಜರಗಲಿರುವ ಉತ್ಸವದಲ್ಲಿ ಸಮಸ್ತ ಭಕ್ತಾಭಿಮಾನಿಗಳು ಭಾಗವಹಿಸಿ ಉತ್ಸವವನ್ನು ಯಶಸ್ವಿಗೊಳಿಸುವಂತೆ ಕೋರಿದರು. ಈ ಸಂದರ್ಭ ಪ್ರಧಾನ ಕಾರ್ಯದರ್ಶಿ ಪುಷ್ಪರಾಜ್‌ ಸನಿಲ್‌, ಕೋಶಾಧಿಕಾರಿ ಜಗನ್ನಾಥ್‌ ಸಾಲ್ಯಾನ್‌,ಗೌರವಾಧ್ಯಕ್ಷ ಚಂದ್ರಹಾಸ್‌ ಕೊಟ್ಟಾರಿ, ಪದ್ಮನಾಭ ಮರ್ಕೆದು, ರವಿ ಕುಕ್ಕುದಕಟ್ಟೆ, ಧನುಷ್‌ ಗಟ್ಟಿ, ಉದಯ ಬಾಕಿಮಾರ್‌, ವೇದ ಗಟ್ಟಿ ಮುಂತಾದವರು ಉಪಸ್ಥಿತರಿದ್ದರು.

Read More

ಸಂಪತ್ ಬಂಗೇರ ಅವರಿಗೆ ಪ್ರಶಂಸನಾ ಪತ್ರ ಹಾಗೂ ನಗದು ಬಹುಮಾನ ನೀಡಿ ಗೌರವ ಮಂಗಳೂರು, ಜು.20: ಅಪಘಾತವೆಸಗಿ ಪರಾರಿಯಾಗಿದ್ದ ವಾಹನ ಹಾಗೂ ಆರೋಪಿಯನ್ನು ಪತ್ತೆಹಚ್ಚುವಲ್ಲಿ ಅಸಾಧಾರಣ ಕಾರ್ಯದಕ್ಷತೆ ಮತ್ತು ಕರ್ತವ್ಯನಿಷ್ಠೆ ಪ್ರದರ್ಶಿಸಿದ ಮಂಗಳೂರು ನಗರ ಸಂಚಾರ ದಕ್ಷಿಣ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿ ಸಂಪತ್ ಬಂಗೇರ (ಕೆ.ಎಚ್. 427) ಅವರಿಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಐಪಿಎಸ್ ಅವರು ಪ್ರಶಂಸನಾ ಪತ್ರ ಹಾಗೂ ನಗದು ಬಹುಮಾನ ನೀಡಿ ಗೌರವಿಸಿದರು. ಸಂಚಾರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮೊ.ನಂ. 79/2026 ಪ್ರಕರಣದಲ್ಲಿ, ಬಿಎನ್‌ಎಸ್ ಕಾಯ್ದೆಯ ಕಲಂ 281, 106(1) ಹಾಗೂ ಐಎಂವಿ ಕಾಯ್ದೆಯ ಕಲಂ 134(ಎ) ಮತ್ತು 134(ಬಿ) ಅಡಿಯಲ್ಲಿ ದಾಖಲಾಗಿದ್ದ ಹಿಟ್ ಅಂಡ್ ರನ್ ಪ್ರಕರಣವನ್ನು ಭೇದಿಸುವಲ್ಲಿ ಸಂಪತ್ ಬಂಗೇರ ಅವರು ಮಹತ್ವದ ಪಾತ್ರ ವಹಿಸಿದ್ದರು. ಅಪಘಾತದ ಬಳಿಕ ಪರಾರಿಯಾಗಿದ್ದ ವಾಹನ ಮತ್ತು ಆರೋಪಿಯ ಕುರಿತು ಖಚಿತ ಮಾಹಿತಿ ಸಂಗ್ರಹಿಸಿ, ತ್ವರಿತವಾಗಿ ಅವರನ್ನು ಪತ್ತೆಹಚ್ಚುವಲ್ಲಿ ಅವರು ತೋರಿದ…

Read More

ಮಂಗಳೂರು: ಇಂದಿನ ಸ್ಪರ್ಧಾತ್ಮಕ ಕೃಷಿ ಕ್ಷೇತ್ರದಲ್ಲಿ ರೈತರು ಕೇವಲ ಸಾಂಪ್ರದಾಯಿಕ ಕೃಷಿಗೆ ಸೀಮಿತವಾಗದೆ, ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಕೃಷಿ ಚಟುವಟಿಕೆಗಳನ್ನು ಕೈಗೊಂಡರೆ ಮಾತ್ರ ಹೆಚ್ಚಿನ ಉತ್ಪಾದನೆ ಹಾಗೂ ಉತ್ತಮ ಆದಾಯ ಗಳಿಸಲು ಸಾಧ್ಯ ಎಂದು ಕರ್ನಾಟಕ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಡಿ.ಎಸ್. ಗಟ್ಟಿ ಹೇಳಿದರು. ಐಎಟಿ, ಐಸಿಎಆರ್‌, ಕರ್ನಾಟಕ ಪ್ರದೇಶ ಕೃಷಿ ಸಮಾಜ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲಾ ಕೃಷಿ ಸಮಾಜ, ಫುಡ್‌ ಚೈನ್‌ ಕ್ಯಾಂಪೇನ್‌ ಸಹಕಾರದೊಂದಿಗೆ ಕೃಷಿ ತಂತ್ರಜ್ಞಾನ ಸಂಸ್ಥೆ ದ.ಕ. – ಉಡುಪಿ ಜಿಲ್ಲಾ ಘಟಕವನ್ನು ನಗರದ ಎಕ್ಕೂರು ಮೀನುಗಾರಿಕಾ ವಿವಿ ಕಾಲೇಜಿನ ಸೆಮಿನಾರ್‌ ಹಾಲ್‌ನಲ್ಲಿ ಶನಿವಾರ ಉದ್ಘಾಟಿಸಿ ಮಾತನಾಡಿದರು. ಕರಾವಳಿ ಕೃಷಿಯ ದೊಡ್ಡ ಹೆಜ್ಜೆಯಾಗಲಿದೆ. ಗೇರು ಕೃಷಿ ಜಿಲ್ಲೆಯ ಪ್ರಮುಖ ಬೆಳೆ. ಇದಕ್ಕೆ ಇನ್ನೂ ಹೆಚ್ಚಿನ ವೈಜ್ಞಾನಿಕ, ತಂತ್ರಜ್ಞಾನ, ಮಾರುಕಟ್ಟೆಯ ಬೆಂಬಲ ಸಿಗಬೇಕಿದೆ. ಇದನ್ನು ಐಎಟಿ ಸಂಸ್ಥೆ ಮಾಡಲಿದೆ. ಗೇರು ಆದಾಯ ತರುವ ಬೆಳೆ. ಗೇರು ಸಹಿತ ಕೃಷಿಯಲ್ಲಿ ಹೊಸ ತಂತ್ರಜ್ಞಾನ ಆಧಾರಿತ, ಹನಿನೀರಾವರಿ…

Read More

ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯದ ನೂತನ ಕುಲಸಚಿವರಾಗಿ ಹಿರಿಯ ಶ್ರೇಣಿಯ ಕೆಎಎಸ್ ಅಧಿಕಾರಿ ಸಂತೋಷ್ ಬಿ ಜಗಲಸಾರ ಅವರು ಸೋಮವಾರ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್ ಧರ್ಮ, ಪ್ರಭಾರ ಕುಲಸಚಿವರಾಗಿದ್ದ ಪ್ರೊ.ಗಣೇಶ್ ಸಂಜೀವ್ ಮೊದಲಾದವರು ಉಪಸ್ಥಿತರಿದ್ದರುಬಾಗಲಕೊಟೆಯಲ್ಲಿ ಸಹಾಯಕ ಕಮೀಷನರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅವರನ್ನು ರಾಜ್ಯ ಸರ್ಕಾರವು ಮಂಗಳೂರು ವಿವಿಯ ಕುಲಸಚಿವರಾಗಿ ನಿಯುಕ್ತಿಗೊಳಿಸಿದೆ ಈ ಹಿಂದೆ ಹಿರಿಯ ಪ್ರಾಧ್ಯಾಪಕರಾದ ಪ್ರೊ.ಗಣೇಶ್ ಸಂಜೀವ್ ಅವರು ಪ್ರಭಾರ ಕುಲಸಚಿವರಾಗಿ ಕಾರ್ಯನಿರ್ವಹಿಸಿದ್ದರು.

Read More

ಬಗಂಬಿಲ : ಧರ್ಮ, ಜಾತಿ, ರಾಜಕೀಯ ಅಥವಾ ಅಧಿಕಾರದ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಎಲ್ಲರೂ ಒಂದಾಗಿ ಸಾಗಿದಾಗ ಮಾತ್ರ ಊರಿನ ಅಭಿವೃದ್ಧಿ ಸಾಧ್ಯ. ನಮ್ಮ ಉತ್ಸವ ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಪ್ರತಿಯೊಬ್ಬರೂ ಪ್ರೋತ್ಸಾಹ ನೀಡಿ ಕೈಜೋಡಿಸಿದರೆ, ಬಗಂಬಿಲ ಇನ್ನಷ್ಟು ಸದೃಢವಾಗಿ ಬೆಳೆಯುತ್ತದೆ ಎಂದು ಚಿತ್ರನಟ ಕುಸಲ್ದರಸೆ ನವೀನ್‌ ಡಿ ಪಡೀಲ್‌ ಅಭಿಪ್ರಾಯಪಟ್ಟರು.ಅವರು ಭಾನುವಾರ ಸಂಜೆ ಬಗಂಬಿಲದ ಶ್ರೀ ಸತ್ಯನಾರಾಯಣ ಸಭಾಭವನದಲ್ಲಿ ಬಗಂಬಿಲದ ಶ್ರೀ ಸತ್ಯನಾರಾಯಣ ಮಂದಿರ (ರಿ) ಹಾಗೂ ಸಾರ್ವಜನಿಕ ಶ್ರೀ ಗೌರಿ ಗಣೇಶ ಉತ್ಸವ ಸಮಿತಿಯ ವತಿಯಿಂದ 19ನೇ ವರ್ಷದ ಶ್ರೀ ಗೌರಿ ಗಣೇಶ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಯನ್ನು ನೆರವೇರಿಸಿ ಮಾತನಾಡಿದರು.ಬಗಂಬಿಲ ಸಂಸ್ಕೃತಿಯ ಊರು. ನಮ್ಮನ್ನು ಪ್ರೀತಿಸುವವರನ್ನು ನಾವು ಪ್ರೀತಿಸೋಣ. ಸಂಕಷ್ಟದಲ್ಲಿ ನೆರವಾದವರನ್ನು ಎಂದಿಗೂ ಮರೆಯಬಾರದು. ಪ್ರತಿಯೊಬ್ಬರೂ ತಮ್ಮ ಕುಟುಂಬದ ಜವಾಬ್ದಾರಿಯ ಜೊತೆಗೆ ಸಮಾಜದ ಜವಾಬ್ದಾರಿಯನ್ನೂ ಅರಿತು ಕೆಲಸ ಮಾಡಿದಾಗ ಉತ್ತಮ ಸಮಾಜ ನಿರ್ಮಾಣವಾಗುತ್ತದೆ.ಒಂದು ಕಾಲದಲ್ಲಿ ಕುಗ್ರಾಮವೆಂದು ಗುರುತಿಸಿಕೊಂಡಿದ್ದ ಈ ಊರು, ಇಂದು ದೈವ-ದೇವರ ಆಶೀರ್ವಾದದಿಂದ ಜಿಲ್ಲೆಯಲ್ಲೇ ಉತ್ತಮ…

Read More

 ಕುತ್ತಾರು : ಸನಾತನ  ಹಿಂದು ಸೇವಾ ಪ್ರತಿಷ್ಠಾನ ವತಿಯಿಂದ ಕುತ್ತಾರು ಬಾಲ ಸಂರಕ್ಷಣಾ ಕೇಂದ್ರ, ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ವನಮಹೋತ್ಸವ ನಡೆಯಿತು.  ಕಾರ್ಯಕ್ರಮ ಉದ್ಘಾಟಿಸಿದ ಪ್ರತಿಷ್ಠಾನದ ಅಧ್ಯಕ್ಷ ಸುರೇಶ್ ಚೌಟ ಕಕ್ಕೆಮಜಲು ಅವರು ಕೇಂದ್ರದ ಉದ್ಯಾನದಲ್ಲಿ ಗಿಡನೆಟ್ಟು ಮಾತನಾಡಿ ಪರಿಸರ ಸಂರಕ್ಷಣೆ ನಮ್ಮ ಕರ್ತವ್ಯವಾಗಿದ್ದು ಪರಿಸರ ರಕ್ಷಿಸಿ ಮುಂದಿನ ಪೀಳಿಗೆಗೆ ಉತ್ತಮ ಸುಂದರ ವಾತಾವರಣ ನಿರ್ಮಿಸಿಕೊಡೋಣ ಎಂದರು.  ಕೋಶಾಧಿಕಾರಿ ಸುನಿಲ್ ಮಾತನಾಡಿ ನೂತನ ಪ್ರತಿಷ್ಠಾನದ ಮೂಲಕ ಬಹಳಷ್ಟು ಸೇವೆಗಳನ್ನು ಮಾಡಲಾಗಿದ್ದು ಮುಂದಿನ ದಿನಗಳಲ್ಲಿ ಅನೇಕ ಸೇವಾ ಚಟುವಟಿಕೆ ನಡೆಸಲಿದ್ದೇವೆ. ಬಡವರಿಗೆ ಸಹಕಾರ, ತೊಂದರೆ ಇದ್ದವರಿಗೆ ಸಹಕಾರ, ನೊಂದAತಹ ಜೀವಗಳಿಗೆ ಸಾಂತ್ವನ, ತಲಾ ೧೦ಕೆ.ಜಿ. ಯಂತೆ ೨೦೦ಕುಟುಂಬಕ್ಕೆ ಎರಡು ಸಾವಿರ ಕೆ.ಜಿ. ಅಕ್ಕಿ ಅರ್ಹ ಫಲಾನುಭವಿಗಳಿಗೆ ಶ್ರೀಕ್ಷೇತ್ರ ಕುತ್ತಾರಿನಲ್ಲಿ ವಿತರಿಸಲಿದ್ದೇವೆ ಎಂದರು.  ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ದಿನೇಶ್ ಗಟ್ಟಿ, ಕೋಶಾಧಿಕಾರಿ ಸುನಿಲ್, ಉಪಾಧ್ಯಕ್ಷ ಜಗದೀಶ್ ಸಾಲಿಯಾನ್, ಕಾರ್ಯದರ್ಶಿ ದಿನೇಶ್, ಜೊತೆ ಕಾರ್ಯದರ್ಶಿ ರಾಮಚಂದ್ರ ಶೆಟ್ಟಿ, ಲತೀಶ್ ರೈ, ಜೆ.ಪಿ. ರೈ, ರಾಮಣ್ಣ ಶೆಟ್ಟಿ…

Read More

ಮಂಜೇಶ್ವರ, ಜು. 18 : ಉದ್ಯಾವರ ಮಾಡ ಶ್ರೀ ಅರಸು ಕೃಪಾ ವೀರ ಮಾರುತಿ ವ್ಯಾಯಾಮ ಶಾಲೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳ ರು ಕಾಣಿಕೆ ಡಬ್ಬಿಯಲ್ಲಿದ್ದ ನಗದು ಹಣವನ್ನು ದೋಚಿ ಪರಾರಿಯಾಗಿರುವ ಘಟನೆ ಶನಿವಾರ ಮುಂಜಾನೆ ಬೆಳಕಿಗೆ ಬಂದಿದೆ. ವ್ಯಾಯಾಮ ಶಾಲೆಯಲ್ಲಿ ನಡೆಯಲಿರುವ ಪೂಜೆಯ ಸಿದ್ಧತೆಗಳಿಗಾಗಿ ಪದಾಧಿಕಾರಿಯೊಬ್ಬರು ಮುಂಜಾನೆ 5 ಗಂಟೆಗೆ ಆಗಮಿಸಿದಾಗ ಕಳವು ನಡೆದಿರುವುದು ಪತ್ತೆಯಾಗಿದೆ. ಕಳ್ಳರು ಕಬ್ಬಿಣದ ರಾಡ್ ಬಳಸಿ ಮುಖ್ಯ ಬಾಗಿಲಿನ ಬೀಗವನ್ನು ಮುರಿದು ಒಳಗೆ ಪ್ರವೇಶಿಸಿ ದೇವರ ಮುಂಭಾಗದಲ್ಲಿದ್ದ ಕಾಣಿಕೆ ಡಬ್ಬಿಯನ್ನು ಒಡೆದು ಅದರಲ್ಲಿದ್ದ ನಗದನ್ನು ದೋಚಿದ ಬಳಿಕ, ಖಾಲಿ ಡಬ್ಬಿಯನ್ನು ವ್ಯಾಯಾಮ ಶಾಲೆಯ ಮುಂಭಾಗದ ಪೊದೆಯಲ್ಲಿ ಎಸೆದು ಪರಾರಿಯಾಗಿದ್ದಾರೆ.ಘಟನೆಗೆ ಸಂಬಂಧಿಸಿದಂತೆ ವ್ಯಾಯಾಮ ಶಾಲೆಯ ಅಧ್ಯಕ್ಷ ಸದಾನಂದ ಮಂಜೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Read More